ಮಂಗಳವಾರ, ಜುಲೈ 9, 2019

1109. ಜಗದಗಲ, ಮನದಗಲ

ಜಗದಗಲ, ಮನದಗಲ

ಕೋಲಾಹಲ ಜಗದಲ್ಲಿ ತುಂಬಿರಲು ಹಾಲಾಹಲ,
ಹಲವಾರು ಮನಗಳಲಿ ಬೆಸೆದಿಹುದು ಜನಬಲ!

ಮನೆಯೇ ಮಂತ್ರಾಲಯವಿರಲು
ಮನವೇ ದೇವಾಲಯ,
ಊರ ಚೆನ್ನಾಗಿಡ ಬಯಸುವೆಯಾ,
ಮನದ ಕೊಳೆ ತೊಳೆಯುವೆಯಾ..

ಸ್ವರ್ಗವೂ ನರಕವೂ ಎಂದೂ
ಭೂಮಿಯಲೇ ಇದೆಯೆನುವರು,
ಮನೆಮನವು ಸುಂದರದಿಂದಿರೆ
ಜಗವೆಲ್ಲ ಹಸಿರು..
ತಾನೇ ಎಲ್ಲ ಪರರಿಲ್ಲ ಎನ್ನುವುದರ ಬದಲು
ತನ್ನದೇನಿಲ್ಲ, ದೇವನದು ಎನ್ನುತ ಮೆರೆ ಹಗಲಿರುಳು!

ಜಲ ವಾಯು ನೆಲವೆಲ್ಲ ಪರರಿಗೆ ಉಪಕಾರಿ,
ಆದರವು ತನ್ನ ಹೆಸರ ಹೇಳವು ಹಲ ಸಾರಿ!
ಹೆಸರಿಗಾಗಿ ಮಾಡುವುದು ಎಷ್ಟಕ್ಕೆ ಸರಿ,
ಮನಸಾರೆ ಮಾಡಿದರೆ ಕೆಲಸಕ್ಕೆ ಗರಿ!

ಜಗದಗಲ ನೋಡಲಾರೆ, ಮನದಗಲ ನೋಡು,
ಹೃದಯವ ಶುಚಿಯಾಗಿಡುತ ಜತೆಯಾಗಿ ಹಾಡು!
ಪರೋಪಕಾರ, ಪರಹಿತವ ಮಾಡುತಲಿ ನೀನು
ಬಾಳನ್ನು ಮಾಡಿಕೋ ಸಿಹಿಯ ಸವಿಜೇನು!!
@ಪ್ರೇಮ್@
03.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ