ಕಲಿಯಬೇಕು
ರೆಕ್ಕೆ ಪುಕ್ಕವಿರುವ ಹಕ್ಕಿ
ಓಡಿಬಂದು ಪಕ್ಕ ನಿಂತು,
ಕಾಳುಗಳನು ಹೆಕ್ಕಿ ಹೆಕ್ಕಿ
ತಿನ್ನುತಿತ್ತು ಕುಕ್ಕಿ ಕುಕ್ಕಿ..
ಹಕ್ಕಿಯಂದ ಕಂಡು ಬೆಚ್ಚಿ
ನನ್ನ ನಾನೆ ಮರೆತುಕೊಂಡು,
ಪಕ್ಕದಲ್ಲೆ ನಿಂತುಕೊಂಡು
ಕಲಿತೆ ಬುದ್ಧಿ ನೋಡುತ!
ನಿನ್ನೆ ಇಂದು ನಾಳೆಯೆನುವ
ಯೋಚನೆಯೇ ಇಲ್ಲದೆಯೇ
ಪುಟ್ಟ ಹಕ್ಕಿ ಬಂದು ತಿಂದು
ಹಾರಿ ಓಡಿ ಹೋಯಿತು,
ತನ್ನ ಗೂಡು ಸೇರಿತು..
ಮನುಜ ನಾನು ನಾಳೆ ಎನುವ
ಕೊರಗಿನಲ್ಲಿ ತಾ ಬದುಕುವ,
ಪಕ್ಷಿಯನ್ನು ತಾನು ನೋಡಿ
ಬಾಳ ಹಾದಿ ಕಲಿಯಬೇಕು..
@ಪ್ರೇಮ್@
12.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ