ಬಾಡದಿರಲಿ ಬದುಕು
ಭಾವರಹಿತವಾಗಿ ಬಾಗಿ ಬಾಡದಿರಲಿ ಬದುಕು
ಬವಣೆ ಬಹಳವಾಗಿ ಬಸವಳಿದು ಬಾಡದಿರಲಿ ಬದುಕು!//
ಬೆಸೆಯೆ ಬಾಳ ಬಾಂದಳಿದಿ ಬಂಗಾರದಂಥ ಭಟರು,
ಭಯದ ನೆರಳಿನಲ್ಲಿ ನಲುಗಿ ನೆನೆಯದಿರಲಿ ಬದುಕು//
ಭೋಗ ಭಾಗ್ಯದಲ್ಲಿ ಭವವ ಬೆಳೆಯಲೆಂದು ಬಿಡುತ,
ಭವ್ಯ ಭವಿತ ಬಾನಿನಂತೆ ಬೋರಲಾಗದಿರಲಿ//
ಭಯವ ಸರಿಸಿ, ಬೇಧ-ಭಾವ ಮರೆತು ಬಾಳಬೇಕು,
ಭಯ-ಭಕ್ತಿಯೆಂಬ ಭಾಗ್ಯ ಕೊಡುವ ಗುಣವು ನಮಗೆ ಸಾಕು!//
ಬೇಸರವು ಬಾರದಿರಲಿ ಬಹಳ ನೋವು ಕಾಡದಿರಲಿ,
ಬರಡಾದ ಬೆಂಗಾಡಿನಂತ ಬಿರುಕು ಬಾವಿ ಕಾಣದಿರಲಿ//
ಬಿರುಸಿನಲಿ ಬೀಸುತಿರುವ ತಂಗಾಳಿಯಂತೆ ಮನ ಕುಣಿಯಲಿ,
ಭೋರ್ಗರೆವ ಶರಧಿಯ ಬಿಳಿಯಲೆಯಂತೆ ಸುಖ ಬರಲಿ..//
ಬುದ್ಧನಂತೆ ಜ್ಞಾನಿಯಾಗಿ ಕಾರ್ಯಕೆಲ್ಲ ಬದ್ಧನಾಗಿ,
ಬದುಕ ನೌಕೆ ಭಜನೆಯಂತೆ ಭಗವಂತನ ಬಯಸಲಿ..//
ಭೋಜನದಲಿ ಹಿತಮಿತವು, ಬಾಳಿನಲಿ ಸಿಹಿತನವು,
ಬಯಸಿದಂಥ ಸಿರಿತನವು ತನುಮನಕೆ ಬಂದು ಬಿಡಲಿ!//
ಬಾರಿ ಬಾರಿ ಭಾಗ್ಯಲಕ್ಷ್ಮಿ ಬಾಗಿಲಿಂದ ಬರುತಿರಲಿ,
ಬಾರಿಸುತಲಿ ಪ್ರೇಮ ಗಂಟೆ ಬದುಕು ಬಿಂಬವಾಗಿರಲಿ..//
@ಪ್ರೇಮ್@
30.06.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ