ಗಝಲ್-87
ಒಂಟಿಯಾದ ಬಾಳಲಿ ಜಂಟಿಯಾಗಿ ನೀ ಸುಳಿದೆಯಾ ಕಾಂತಾ?
ಕಂಠೀರವನಂತೆ ಜತೆಯಲಿ ನೆಂಟನಾದೆಯಾ ಕಾಂತಾ!
ಬಂಟಿಯಂತೆ ಕಂಠದಲ್ಲಿ ಶುಂಠಿಯಿಟ್ಟು ಕುಳಿತೆ!
ಪಂಟನಂತೆ ಪೆಪ್ಪರ್ಮೆಂಟು ತಿಂದು ಬಂದೆಯಾ ಕಾಂತಾ?
ನಂಟೆ ಇಲ್ಲದೇನೆ ಸೆಂಟಿಮೆಂಟಲ್ಲಾಗಿ ಬಂದೆ!
ರೆಂಟಿಗಿರುವ ರೂಮಿನಲ್ಲು ಅಂಟಿಕೊಂಡೆಯಾ ಕಾಂತಾ!?
ಪಾರ್ಲಿಮೆಂಟಿಗಿಂತಲೂ ಸೀರಿಯಸ್ಸು ಲೈಫು!
ಹರಟೆ ಹೊಡೆಯೊ ಕಾರಣದಿಂದ ನುಗ್ಗಿದೆಯಾ ಕಾಂತಾ!?
ನೆಂಟಿನಿಂದ ಪಡೆಯದಂಥ ಒಂಟೆಯಂತೆ ನೀನಾದೆ!
ಟ್ವೆಂಟಿಯಾದ್ರೂ ಯೋಚ್ನೆ ಮಾಡ್ದೆ ಇದ್ದಾಗ ನೀನಡಿಯಿಟ್ಟೆಯಾ ಕಾಂತಾ?
ತಂಟೆ ಮಾಡದಂತೆ ಬದುಕೊ, ನೈಂಟಿ ಥರ್ಟಿ ಬೇಡ!
ಪ್ಯಾಂಟಿಗೆಲ್ಲ ಜಾಸ್ತಿ ಖರ್ಚು ಮಾಡುವೆಯಾ ಕಾಂತಾ?
ಅಂಟಿಕೊಂಡೆ ಬಾಳಬೇಡ ನನಗೆ ನೀನು ನಿನಗೆ ನಾನು!
ಪ್ರೇಮದಿಂದ ಒಂಟಿಯಾಗ ಬಿಡದೆ ಜತೆಯಾಗೇ ಇರಲಾರೆಯಾ ಕಾಂತಾ?
@ಪ್ರೇಮ್@
09.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ