ಗಝಲ್-82
ಹೃದಯ ಮನೆ ಮನಸ ಆಲೋಚನಾ ಲಹರಿ ಸಂಪತ್ತು,
ಹಿತವರ ಪ್ರೀತಿಯ ವೈಭೋಗದ ನುಡಿಸಿರಿ ಸಂಪತ್ತು!
ಬಲ್ಲವರ ಮಾತಿನಲಿಹ ಬೆಲ್ಲದಂತಹ ಅನುಭವ,
ಕಲ್ಲೆದೆಯ ಹಾಗೆ ಕಷ್ಟ ಪಟ್ಟು ನೋವ ಸಹಿಸಿದವರ ಮಾತ ಝರಿ ಸಂಪತ್ತು..
ಕರಿಮೋಡದಂಥ ದುಃಖದ ಜೀವನವ ಮೆಟ್ಟಿ ಬೆಳೆದವರಿಹರು,
ಪರರ ಮುಂದೆ ತಕೈ ಚಾಚದೆ ಕೆಚ್ಚೆದೆಯಿಂದ ಬಾಳಿದ ಗುರಿ ಸಂಪತ್ತು!
ಮನೆಮಠ ಗದ್ದೆ ತೋಟದ ಬೆಳೆ ಸುಟ್ಟು ಹೊದವು,
ಯಾರಿಗೂ ಯಾವುದಕೂ ಹೆದರದೆ ತನ್ನ ಮೇಲಿನ ನಂಬಿಕೆಯಿಂದಲೇ ಬಾಳಿದ ಹಿರಿ ಸಂಪತ್ತು!
ಹಲವು ಮಕ್ಕಳು ಮರಿಗಳ ಸಾಕಿ ಸಲಹಿ ದಾರಿಗೆ ತರುವುದು,
ಬೆಳೆಸಿ ಹಿರಿಯ ತಲೆಗಳು ಬೆಳವಣಿಗೆಗೆ ಸಂತಸ ಪಡುವ ಗರಿ ಸಂಪತ್ತು!
ನಗ ನಾಣ್ಯಗಳ ಅಲ್ಲಲ್ಪವಾಗಿ ಕೂಡಿಟ್ಟು ಜೀವನ ನಡೆಸುವುದು,
ಮಕ್ಕಳ ಜೀವನಕಾಗಿ, ದುಡಿದು ದಾರಿಗೆ ತಂದಿಹ ಪರಿ ಸಂಪತ್ತು!
ತನಗಾದ ಮೋಸ, ದ್ವೇಷ ನೋವನು ಪೂರ್ತಿ ಮರೆತು ಬಿಡುವುದು,
ತಾನು ಇತರರಿಗೆ, ಪರರಿಗೆ ಪ್ರೇಮದ ವರ್ಷಧಾರೆ ಸುರಿಸುವವ ಸಿರಿ ಸಂಪತ್ತು!
@ಪ್ರೇಮ್@
03.07.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ