ಮಂಗಳವಾರ, ಜುಲೈ 9, 2019

1111. ಮೂರು ಚುಟುಕುಗಳು

ನೀನೆ

ನೀ ಬಂದೆಯೆನ್ನ ಬಳಿಗೆ
ಬೀರಿ ಸುಗಂಧ ಛಾಯೆ!
ಬದುಕು ಬೆಳೆದು ನಿಂತು ನಕ್ಕಿತು
ಬೀರಿ ನಸು ನಗೆಯ ಮಾಯೆ!!
ನೀನೆ ಇಂದು ನನ್ನ ಪ್ರಿಯೆ!
ನೀನೆ ಮುಂದೆ ನನ್ನ ಭಾರ್ಯೆ!!

2. ಭಾರ

ವಸಂತನಾಗಮನಕೆ ಚಿಗುರ ಧಾರೆ!
ಚಿಗುರ ಬುಡದಿ ಮೊಗ್ಗಮಾಲೆ,
ಬಿರಿಯಲದುವೆ ಸುಗಂಧ ಹಾರ!
ಇನಿಯನನ್ನೊಪ್ಪದ ನಲ್ಲೆ ಕತ್ತಿಗೆ
ಆಗುತಿಹುದು ಹೂವ ಹಾರ ಭಾರ!!

3. ಬದುಕು
ಮನವು ಹೇಳಿದಂತೆ ಕುಣಿದ,
ಮುಂದೆ ಒಂಟಿತನವ ಪಡೆದ,
ನಾನು ನನ್ನದೆಂದು ಮೆರೆದ,
ಕೊನೆಗೆ ಎಲ್ಲ ಬಿಟ್ಟು ನಡೆದ!!
@ಪ್ರೇಮ್@
30.06.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ