ಬಾರಣ್ಣಾ ಕಾರ್ಯಕೆ..
ಮೂಡಣ ಕಡಲು ರಂಗೇರಿತೋ ನೋಡಾ
ಸಮುದ್ರದಿ ಎದ್ದ ರವಿಯಂದವ ನೋಡಾ...//
ಲೇಲೇಲೇಲೇಸೋ ಲೇಲೇಲೇಗಾ ಹೈೂ..
ಬಣ್ಣದ ವಿಧವಿಧ ಬಲೆಯಾ ತಾರಣ್ಣಾ..
ಮುಂಜಾವು ನಮಗಾಗಿ ಕಾದಿದೆ ನೋಡಣ್ಣಾ..
ಒಟ್ಟಾಗಿ ಸಾಗೋಣ ಒಗ್ಗಟ್ಟೇ ಬಲವಣ್ಣಾ..
ನನಗೂ ನಿನಗೂ ಸಾಗರ ಮಾತೆಯೇ ತಾಯಣ್ಣಾ..
ಲೇಲೇಲೇಲೇಸೋ ಲೇಲೇಲೇಗಾ ಹೈೂ..
ಮೋಡವು ಕರಗಿದೆ, ಮಳೆಹನಿ ಇಲ್ಲಣ್ಣಾ..
ಮಂಜದು ಬರದು, ರವಿ ನಮ್ಮೊಡನಿಹನಣ್ಣಾ..
ಬೇಗನೆ ಎದ್ದು ಕೆಲಸವ ಮಾಡಲು ಆರೋಗ್ಯಕೆ ಒಳಿತಣ್ಣಾ..
ಕಡಲೊಳಗಿಂದ ತಿನ್ನುವ ಮುತ್ತನು ಪಡೆಯಲು ಬಾರಣ್ಣಾ..
ಲೇಲೇಲೇಲೇಸೋ ಲೇಲೇಲೇಗಾ ಹೈೂ..
ಸಮುದ್ರವು ನಮ್ಮಯ ದೇವರು ಅಣ್ಣಾ..
ಬನ್ನಿ ಅವಳನು ಭಕ್ತಿಯಿಂದ ಪೂಜಿಸೋಣಾ..
ಮೀನ ಸಂಪತ್ತು ಕೊಡೆಂದು ಬೇಡೋಣಾ..
ಶರಧಿಯ ಕಲುಷಿತಗೊಳಿಸದೆ ಇರೋಣ..
ಲೇಲೇಲೇಲೇಸೋ ಲೇಲೇಲೇಗಾ ಹೈೂ..
@ಪ್ರೇಮ್@
15.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ