1. ಬದುಕು
ಕತ್ತಲು ಮನದಲಿ ಕವಿಯಲು ಬಾರದು
ಸುತ್ತಲ ಜಗದ ಪರಿವಿರಬೇಕು/
ನಿತ್ಯವು ಕಲಿಯುತ ಸಾಗುವ ಬಾಳು
ಸತ್ಯವು ಹೊಮ್ಮುತ ಬರಬೇಕು//
ನಲಿವಿನ ನೋವಿನ ದಿನಗಳ ಕಳೆಯಲು
ಸೆಳವಿನ ತಾಳ್ಮೆಯು ಇರಬೇಕು/
ಪಯಣದ ಹಾದಿಯ ಸಾಂಗದಿ ಸಾಗಲು
ಲಯ ತಾಳದ ಪರಿಚಯ ತಿಳಿಬೇಕು//
ಮೇಟಿಯ ವಿದ್ಯೆಯು ಕೋಟಿಗೂ ಮೇಲು
ಎನ್ನುವ ಜ್ಞಾನವ ಪಡೀಬೇಕು/
ತಾಯ್ನೆಲ ತಾಯ್ನುಡಿ ಮಾತೆಯೇ ದೇವರು
ಅವರನೆ ಪೂಜಿಸಿ ಬಾಳಬೇಕು//
ಹಿರಿಯರ ನುಡಿಗಳು ಅನುಭವ ರತ್ನವು
ನೆಮ್ಮದಿ ಗಳಿಸಲು ನಂಬಬೇಕು/
ಕಷ್ಟದ ದಿನಕೆ ಹಿತವನು ತರುವುವು,
ಮನೆ ಮನ ಪ್ರೀತೀಲಿ ಬೆಳೀಬೇಕು//
@ಪ್ರೇಮ್@
06.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ