ಮಂಗಳವಾರ, ಜುಲೈ 9, 2019

1104. ಬಾಳಾ ದಿನವಿಲ್ಲ ಬಾಳು

ಬಾಳಾ ದಿನವಿಲ್ಲ ಬಾಳು..

ಏತಕೆಂದು ಬಂದೆ ನೀನೀ ಭವದ ಬಾಳಿಗೆ?
ಮೇದಿನಿಯೊಳಗೆ ಬಂದಿರುವೆ ನೀ ನಭದ ಗೂಡಿಗೆ!!
ವರುಷ ವರುಷ) ಬೆಳೆಯುತಿಹುದು ಜೀವಿ ಜೀವಿಯೂ..
ಬದಲಾಗಲು ಸಹಜ ಆಸೆ ಸರ್ವ ಬಾಳ ಮನಸಿಗೂ...

ಮನವು ಬೇಕು ಬದಲು ಬರಲು!
ತಿರೆಯಲೆಮಗೆ ಶಾಂತಿ ಸಿಗಲು!
ಒಲವ ಕರೆಯ ಬೇಕು ನಿರೀಕ್ಷೆ!
ಮಳೆಗೆ ರೈತ ಕಾಯೋ ಪರೀಕ್ಷೆ!

ಅನ್ನದಿಂದ ನಿತ್ಯ ಬದುಕೊ ಕಾಯ!
ಪ್ರೀತಿ ಸಿಗಲು ತಲ್ಲಣವು ಮಾಯ,
ನಾನೇ ನೀನು ನೀನೇ ನಾನು ಎನುವ
ಜೀವ  ಇರಲು ಬದುಕು ನಾಕವೆನುವ..

ಗಾಳಿ ನೀರು ಅನ್ನ ಊಟ ಕೊಟ್ಟು ಪೊರೆವ,
ಮಾತೆ ಭಾರತಿಗೆ ಮನವ ಬಿಟ್ಟು ಬಿಡುವ!
ನಾನು ನನ್ನದೆನುವ ಮೋಹ ತೊರೆದು,
ಸಾಗಬೇಕು ಬಂದ ಕಡೆಗೆ ಸರ್ವ ಒಗೆದು!

ಅಮಲಿಗಾಗಿ ಬಾಳ ಕೆಡಿಸಿ,ತೇಲಿ ತೇಲಿ ಖುಷಿಯಗಳಿಸಿ
ಸಾಯಲುಂಟು ಒಂದು ಕ್ಷಣದಿ!
ಅಲ್ಲಿವರೆಗೆ ಅಮಲಲಿ ತೇಲುತ
ಬಾಳಲು ನಿನಗೆ ನೀನೆ ಶತ್ರು ನೆನೆಯೊ ಮುರುಕು ಮಾನವ..!!
@ಪ್ರೇಮ್@
28.06.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ