ಶುಕ್ರವಾರ, ಜುಲೈ 12, 2019

1116. ನಾನು ಏನಲ್ಲ

ನಾನು ಏನಲ್ಲ..

ಭೂಮಿಯೊಡಲ ಆಳದಲಿ
ಹುಟ್ಟಿ ಬಂದ ಜೀವಿಗಳಲಿ
ನಾನೇನೂ ಏನೂ ಅಲ್ಲ,
ನಾನಿರದಿದ್ದರೂ ಏನೂ ಆಗಲ್ಲ!

ಬಂದಿಹೆ ಧರೆಗೆ ಹೆಣ್ಣಾಗಿ,
ಕೈಲಾದ ಸಹಾಯ ಮಾಡುವಳಾಗಿ
ಬಾಳಲಾರೆ ಇತರರಿಗೆ ಹೊರೆಯಾಗಿ,
ಬದುಕುವೆ ಶಾಂತಿಯ ಕುರುಹಾಗಿ!

ಅನುಬಂಧಗಳ ಬೆಸೆವೆ ಒಂದಾಗಿ,
ಅನುರಾಗವು ಪತಿಯ ಜೊತೆಯಾಗಿ,
ಮೂರುದಿನದ ಬಾಳಿನ ನೆಮ್ಮದಿಗಾಗಿ,
ಬದುಕು ಸುಖ ದು:ಖಗಳ ಜೊತೆಯಾಗಿ..

ಮನೆ ಮನ ಇರಲಿ ಒಂದಾಗಿ
ಸ್ವಚ್ಛತೆ ಇರಲಿ ಜೊತೆಯಾಗಿ
ಬಾಳುವ ಬುವಿಯಲಿ ಹಾಯಾಗಿ
ಶಾಂತಿಯ ಸಾರುವ ಒಂದಾಗಿ..
@ಪ್ರೇಮ್@
12.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ