ಗುರುವಾರ, ನವೆಂಬರ್ 21, 2019

1286. ಹಾಸ್ಯಕವನ-ತಲೆನೋವು

ಇವೆಲ್ಲಾ ತಲೆನೋವೇ..

ಮನೆಗೆ ನೆಂಟರು ಬರುವರೆಂದರೆ ತಲೆನೋವೇ..
ಹತ್ತಿರದ ಬಂಧುಗಳ ಮದುವೆಯೆಂದರೂ ತಲೆನೋನವೇ..

ತಲೆಗೆ ಸಂಸಾರದ ಭಾರ ಬೀಳಲು ತಲೆನೋವು
ಮಕ್ಕಳು ಓದಲು ಹಿಂದೆ ಬೀಳಲು ತಲೆನೋವು
ಮಡದಿಯು ತವರು ಮನೆಗೆ ಓಡಲು ತಲೆನೋವು
ಗುಡಿ ಮಂದಿರದಲಿ ಮಹಾನ್ ಪೂಜೆಯು ತಲೆನೋವು!

ಆಫೀಸಲ್ಲಿ ಕೆಲಸ ಅತಿ ಹೆಚ್ಚಾಗಲು ತಲೆನೋವು
ಮನೆಯಲಿ ಹೆಂಡತಿಗೆ ಕೋಪ ಬರಲು ತಲೆನೋವು
ಮಾವ ಆಸ್ತಿ ಕೊಡದಿರೆ ಮತ್ತಷ್ಟು ತಲೆನೋವು
ಅತ್ತೆ ಮಗಳ ನೋಡಲು ಬಂದರೆ ಅಳಿಯಗೆ ತಲೆನೋವು

ಹೆಣ್ಣು ನೋಡಲು ಹೋದರೆ ಗೆಳತಿಗೆ ತಲೆನೋವು
ಗಂಡು ನೋಡಲು ಬಂದರೆ ಪ್ರಿಯಕರನ ನೆನೆದು ತಲೆನೋವು
ತಂದೆ ಗೆಳತಿಯೊಂದಿಗಿರುವುದ ನೋಡಿದೊಡೆ ತಲೆನೋವು
ಮೊಬೈಲ್ ಸೀಕ್ರೆಟ್ ತಂಗಿ ನೋಡಲು ತಲೆನೋವು
ಪಕ್ಕದ ಮನೆಯಾಂಟಿ ಸಿನಿಮಾ ಥಿಯೇಟರಲಿ ಸಿಗಲು ತಲೆನೋವು

ಅಂಕಲ್ ಗೆ ಕಾಲೇಜೋದುವ ಮಗಳಿರಲು ತಲೆನೋವು
ಆಂಟಿಗೆ ತನ್ನ ಕೂದಲುದ್ದ ಬಂದರೆ ತಲೆನೋವು
ಮನೆಯಲಿ ಕಾರ್ಯಕ್ರಮವಿರಲು ತಲೆನೋವು

ಗದ್ದೆಯಲಿ ಹಸಿರು  ಬೆಳೆ ಬರದಿರಲು ತಲೆನೋವು
ತೋಟಕ್ಕೆ ಹುಳ ಬರಲು ಮತ್ತೆ ತಲೆನೋವು
ಜ್ವರ ಬಂದು ಸುಸ್ತಾಗೆ ಬಹುದೊಡ್ಡ ತಲೆನೋವು
ಮಾವನ ಮಗಳಿಗೆ ಕೊಟ್ಟ ಪತ್ರ ಮಾವ ನೋಡೆ ತಲೆನೋವು
ಅತ್ತೆ ಅಮ್ಮ ಹೆಂಡತಿ ಒಟ್ಟಾದರೆ ಮಹಾನ್ ತಲೆನೋವು

ತಲೆಯೇ ಇಲ್ಲದಿದ್ದರೂ ತಲೆಯೊಳಗೇನಿಲ್ಲದಿರಲು ತಲೆನೋವು
ವಿಧಿ ಮಾತ ಕೇಳದಿರಲು ಬರಬರುತ ತಲೆನೋವು
ವಯಸಾಗುವುದ ನೆನೆನೆನೆದು ಏರುತ್ತದೆ ತಲೆನೋವು
ಅಂದುಕೊಂಡ ಕೆಲಸವಾಗದಿರಲು ತಲೆನೋವು.
@ಪ್ರೇಮ್@
19.11.2019

1285. ಹಾಯ್ಕುಗಳು

ಹಾಯ್ಕುಗಳು

ಮನಗಳಲಿ 
ಮತಕ್ಕಾಗಿ ಜಗಳ
ಬಾರದಿರಲಿ..

ಮನದೊಳಗೆ 
ದೇವ ಸ್ತುತಿಗೆ ಅಲ್ಪ
ಜಾಗವಿರಲಿ..

ಮನದಂಚಲಿ
ಮದನೆಯ ಪ್ರೀತಿಗೆ
ಬೆಲೆಯಿರಲಿ.

ಮನಕೆಂದಿಗೂ
ಮನುಜ ಗುಣಗಳ
ತಿಳಿದಿರಲಿ..
@ಪ್ರೇಮ್@
20.11.2019

1284. ಭಾವಗೀತೆ-ಧರೆಗೆ

ಧರೆಗೆ..


ತಾಯೇ ಏಕೆ ಮುಚ್ಕೊಂಡಿರುವೆ
ಮಂಜಲ್ ನಿನ್ನ ಮೈನಾ..
ಜನ್ರು ನಿನ್ಗೆ ಬಿಡ್ತಾ ಇಲ್ವಾ
ಕೊಟ್ರಾ ಎಲ್ಲಾ ಕೈನಾ...

ಹೊದ್ಕೊಂಡಂಗೆ ಕುಂತ್ಕಂಡ್ ನೀನು
ಯಾರ್ನ ನೋಡ್ತಿದ್ದೀಯ?
ಚಳಿಯೋ ನನ್ಗೆ ತಡಿಯಕ್ಕಾಯ್ತಿಲ್ಲ
ಯಾಕ್ ಹಿಂಗ್ ಮಾಡ್ತಿದ್ದೀಯ?

ರವಿಯು ಬರೋಕೆ ಕಾಯ್ತವ್ನಲ್ಲ
ಬರ್ಲಿ ಕಿರಣದ್ ಬೆಳಕು.
ಕವಿಯು ಕುಂತು ಬರಿತವ್ನಲ್ಲ
ಹೋಗ್ಲಿ ಮನದ ಮುಸುಕು..

ಬೇಡದ್ದೆಲ್ಲ ಮೇಲ್ ಮೇಲೆ
ಬಿಸಾಕ್ಬೇಡ್ರಂತ ತೋರ್ಸು!
ನಿನ್ನಯ ಕಷ್ಟವ ಅರಿಯದ ಜನಕೆ
ಹಿಡ್ಕೊಂಡ್ ನಾಲ್ಕು ಬಾರ್ಸು..
@ಪ್ರೇಮ್@
22.11.2019

ಮಂಗಳವಾರ, ನವೆಂಬರ್ 12, 2019

1283. ಹನಿಗಳು-2

 ನೀ...

ನೀ ನಗುತಲಿರಲು ಮನೆಯಲಿ
ಸದಾ ದೀಪಾವಳಿ
ನೀ ಕೋಪಗೊಳಲು ಮನದಿ
ನೆನಪಾಗುವಳು  ಮಹಾಕಾಳಿ!
ನೀನು ಸುರಿಸೆ ಕಣ್ಣೀರನು
ಉಕ್ಕಿ ಹರಿದ ನದಿಯು ಕಾಳಿ!
@ಪ್ರೇಮ್@
30.10.2019


ದೇವರು

ನಮ್ಮ ಸುಖ-ದು:ಖಗಳು
ಕಷ್ಟ ನಷ್ಟ ತಾಪತ್ರಯಗಳು
ಸಂತೋಷ ಸಂಭ್ರಮಗಳು
ದೇವರು ನಮ್ಮನ್ನು ಪರೀಕ್ಷಿಸಿ
ಗುಣವನ್ನಳೆದು ದಯಪಾಲಿಸಿದ
ತೀರ್ಪಿನ ವಾಕ್ಯಗಳು!
@ಪ್ರೇಮ್@
01.10.2019

1282. 3 ವಚನಗಳು

ವಚನಗಳು

1.
ಸಿರಿ ಸಂಪತ್ತನು ಬೇಡುತ 
ಸರಿ-ತಪ್ಪುಗಳ ಮರೆತು ತಾ
ಸರಿ ದಾರಿಯಲಿ ನಡೆಯದಿರೆ
ಕರುಣಿಪನಾ ಸಿರಿಯ ನಮ್ಮ ಈಶಾ?

2.

ಮನದೊಳಗೆ ದ್ವೇಷವನೆ ತುಂಬಿ
ಮುಖದಿ ಕಿರುನಗುವ ಸೂಸುತಲಿ
ಮನಸಿಲ್ಲದ ಮನಸಿನಲಿ ಮಾತಾಡೆ
ವರಗಳ ಮಳೆಯೀವನೇ ನಮ್ಮ ಈಶಾ..

3.
ಮರದಂತೆ ತಾ ಹುಟ್ಟಿ
ಮರದಂತೆ ಬದುಕಣ್ಣ
ಸರ್ವರಿಗಲ್ಲದಿದ್ದರೂ ಸರಿ
ಹಲವು ಸರಿ ಬೀಜಗಳನುದುರಿಸಿ
ತನ್ನಂತೆ ಬೆಳೆವ ಉತ್ತಮ
ಸಸಿಗಳ ಬೆಳೆಸಬೇಕಲ್ಲವೇ ಈಶಾ...
@ಪ್ರೇಮ್@
03.11.2019

1281. ಗಝಲ್-5

ಗಝಲ್

ಸಮಾಜದೊಳಗೆ ನೋವ ಕೊಡಲನೇಕರು ಹುಟ್ಟಿರುವರು ದೋಸ್ತ್.
ಸರಿಸಮಾನನಲ್ಲವೆಂದು ಬಗೆದು ಪರಿಪರಿಯಲಿ ತೆಗಳುವರು ದೋಸ್ತ್.

ತಾಯ ಪ್ರೀತಿ, ತಂದೆಯ ಜವಾಬ್ದಾರಿಯಿರಬೇಕು ಜೀವನದಿ.
ಪ್ರೀತಿಯ ಅವಿರತ ಮಳೆಗೈಯದೆ ದ್ವೇಷ ಕಾರುವರು ದೋಸ್ತ್!

ಹೃದಯವೆಂಬ ಮಂದಿರದಿ ಸಮಯಕಿರಲಿ ಬಹಳವೇ ಮಹತ್ವ.
ಎದೆದೊಳಿರಬೇಕು ಕರುಣೆ, ಹೊಂದಾಣಿಕೆಯೆಂಬುದ ಮರೆವರು ದೋಸ್ತ್!

ತಮ್ಮ ಕಾಲಬುಡವನೆ ಮಲಿನಗೊಳಿಸುವ ಜನರಿಹರು!
ಪರರ ಕಾರ್ಯಕೆ ಸದಾ ಕೊಡಲಿ ಹಾಕುತಲಿಹರು ದೋಸ್ತ್!

ಸರಿಯಿದ್ದರೂ ಸರಿಯಿಲ್ಲ ಸಹಿಸದೆ ಸಹನೆಯಿಂದ ಜಗದೊಳಗೆ.
ಸುಳ್ಳಿದ್ದರೂ ಸತ್ಯವೆನುವಂತೆ ನಟನೆ ಮಾಡೆನುವರು ದೋಸ್ತ್!

ಮರಕಡಿದು ಮನೆಮಾಡಿ ಮಸೆಮಸೆದ ಮನದಿ ಬದುಕುತಿಹರು.
ಮುಖವಾಡವ ಧರಿಸಿ ನಗುತ ಒಳಗೊಳಗೆ ಕೆಂಡದಂತೆ ಕುದಿಯುವರು ದೋಸ್ತ್!

ಪರಸ್ಪರ ಸಹಕಾರ, ಸರಿದಾರಿಯಲಿ ಇದ್ದು ಒಂದಾಗಬೇಕು.
ಪ್ರೇಮದಿ ಪ್ರೀತಿ ಹಂಚುತಲಿ ಸರ್ವರೂ ಬಾಳಲಾರರು ದೋಸ್ತ್!
@ಪ್ರೇಮ್@
04.11.2019

1280. ಗಝಲ್-6

ಗಝಲ್

ನನ್ನ ಕೇಳದೆಯೇ ಹುಡುಗನನ್ನು ನೋಡಿ ಮದುವೆಯೆನುವಾಗ ನಾ ಮೌನ ಸಖಿ!
ಪ್ಯಾರ್ ಎಂದರೇನೆಂದು ನನಗೆ ತಿಳಿಯುವುದಿಲ್ಲವೆಂದು ಅರಿತಾಗ ನಾ ಮೌನ ಸಖಿ..

ಶಾಲೆಗೆ ಹೋಗಿ ಮನೆಗೆ ಬರುವಾಗಲೂ ಪರರಂತೆ ಸ್ವಾತಂತ್ರ್ಯ ಎನಗೆ ಇರಲಿಲ್ಲ. 
ಗೊಂಬೆಯಂತೆ ಸಾಕಿ ಬೆಳೆಸಿ, ತನ್ನಾಕಾಂಕ್ಷೆಗಳ ಹೇರುವಾಗ ನಾ ಮೌನ ಸಖಿ..

ಬೇಕಾದ, ನೋಡಿದ, ಹಲವು ಆಸೆಪಟ್ಟ ವಸ್ತುಗಳ ಖರೀದಿಸುವ ಆಸೆಯೇನೋ ನನಗಿತ್ತು.
ಏನು ಬೇಕು ನಿನಗೆನುವ ಪ್ರಶ್ನೆಗಳೇ ಬರದಾಗ ನಾ ಮೌನ ಸಖಿ..

ಹುಟ್ಟುವಾಗಲೇ ಸರ್ವರೂ ಅವಳು ಹೆಣ್ಣು ಎಂಬ ಹಣೆಪಟ್ಟಿ ತೊಡಿಸಿದರು ಎನಗೆ.
ಗಿಳಿಯಂತೆ ನನ್ನ ಪಂಜರದೊಳು ಇಟ್ಟು ಸಾಕುವಾಗ ನಾ ಮೌನ ಸಖಿ..

ಕ್ಷಣವೂ ಖುಲ್ಲಾ ಬದುಕಲು ಅವಕಾಶಗಳು ಎಂದೂ ಸಿಗಲೇ ಇಲ್ಲ  ಬಾಳಲಿ.
ಕೈಲಿರುವ ವಸ್ತುವನು ಬಾಯಿಗಿಡಲೂ ಹಿರಿಯರ ಕೇಳಬೇಕಾದಾಗ ನಾ ಮೌನ ಸಖಿ..

ಎದ್ದರೂ, ಕುಂತರೂ, ನಿಂತರೂ ಏಕೆ, ಹೇಗೆ, ಎಲ್ಲಿ ಎನುವ ಪ್ರಶ್ನೆಗಳು.
ಸಿರಿತನದ ಸುಳಿಯ ಒಳಗೆ ಸಿಕ್ಕಿ ನಲುಗುವಾಗ ನಾ ಮೌನ ಸಖಿ..

ಪ್ರೀತಿ, ಪ್ರೇಮ, ಇಶ್ಕ್ , ಮೊಹಬ್ಬತ್ ಗಳು ನನ್ನ ಪದಕೋಶದಲಿ ಬರಲೇ ಇಲ್ಲ.
ಕೈ ಹಿಡಿದ ಪುರುಷ ಪುರುಷನಲ್ಲದವನೆಂದು ತಿಳಿದಾಗ ನಾ ಮೌನ ಸಖಿ..
@ಪ್ರೇಮ್@
05.11.2019

1279. ಗಝಲ್-7

ಗಝಲ್

ನೀನು ತಾಯಿ ಮನೆಗೆ ಹೋದೆ ಖುಷಿಯಲಿ ಜಾನು!
ಈ ಒಂಟಿತನವನು ನಾ ಹೇಗೆ ಮರೆಯಲಿ ಜಾನು?

 ಹುಣಸೆ ಮರದ ಒಂಟಿ ಪಿಶಾಚಿಯಂತಾಗಿಹೆನು!
ಯಾರ ಜೊತೆ ಭಾವನೆಗಳ ಹಂಚಿಕೊಳ್ಳಲಿ ಜಾನು?

ಮನವಲ್ಲ ನಿನ್ನ ಹೃದಯದಲ್ಲೆ ನೆಲೆವೂರಿದೆಯಲ್ಲ?
ಹರುಷದಿ ಯಾರೊಡನೆ ಹೊಂದಿಕೊಳ್ಳಲಿ ಜಾನು?

ಸಂಸಾರ ಸಾಗರದಿ ಮಿಂದು ಶುಭ್ರನಾಗುತ್ತಿದ್ದೆ.
ಸಂಗಾತಿ ಇರದ ಮನೆಯಲಿ ಹೇಗಿರಲಿ ಜಾನು?

ನಿಟ್ಟುಸಿರ ಸಹಕಾರ ನಿನ್ನಿಂದ ನನಗಿದೆ ಸದಾಕಾಲ,
ನೀನಿರದೆ ಗುಡಿಯೊಳಗೆ  ಯಾರಿಗೇನೆನಲಿ ಜಾನು?

ಬರದ ಬಾಳಲಿ ಬಂಗಾರವಾಗಿ ನೀ ಬಂದಿರುವೆ.
ಬಡವನ ಬಹಳ ಪ್ರೀತಿಸಲು ಇರು ಬಳಿಯಲಿ ಜಾನು.

ನೀನಿರದ ಕ್ಷಣದಿ ಮರವ ಬಿಟ್ಟ ಬಳ್ಳಿಯಂತಾಗುವೆ,
ನೀನಿಲ್ಲದ ಖಾಲಿ ಮನೆಯಲಿ ಏನ ತಿನ್ನಲಿ ಜಾನು?

ಗಗನ ಸುಮವಾಗಿಹೆ ನೀನಿಂದು ನನ್ನ ಕರೆಗಳಿಗೆ
ಗಹನದಲಿ ಚಿಂತಿಸುತ ಹೇಗೆ ಸುಮ್ಮನಿರಲಿ ಜಾನು?

ಪ್ರೇಮ ಭಾವವ ಮೈದುಂಬಿಸಿಕೊಂಡವಳು ನನ್ನಾಕೆ
ಮುದುಡಿದ ಹೂವಂತಾಗಿಹೆ,ಹೇಗರಳಲಿ ಜಾನು?
@ಪ್ರೇಮ್@
07.11.2019

1278. ಗಝಲ್-8

ಮಾರುಗೆದ್ದರಾಗದು ಮನಗೆಲ್ಲಬೇಕಲ್ಲವೇ ಗಾಲಿಬ್..
ಮನನೊಂದರೂ ಮನೆ ಕಟ್ಟಲಿಲ್ಲವೇ ಗಾಲಿಬ್..

ಮದದಿಂದ ಮೆರೆದೆ ಮುದದಲಿ ನೀನು
ಮದವೇರಿದುದು ಕರಗಿತಲ್ಲವೇ ಗಾಲಿಬ್..?

ಮುದುಕರನೂ ಬಿಡದೆ ಕಾಡಿರುವೆಯಾ
ಮೋಜಿನ ಬದುಕು ನನ್ನದಾಗಿಲ್ಲವೇ ಗಾಲಿಬ್..

ಮದಿರೆಯ ಮಂಥನದಿ ಮನನೋಯಿಸಿದೆ
ಮೋಹಕ ನೋಟದಿ ನಾ ಬದುಕಲಿಲ್ಲವೇ ಗಾಲಿಬ್..?

ಮೋಸದಾಟದಿ ಸೋಲಿಸಿ ಮೆರೆದೆ.
ಮೋದಕ ಪ್ರಿಯ ನನಗೊಲಿಯಲಿಲ್ಲವೇ ಗಾಲಿಬ್?

ಮುಂಗುಸಿಯಂತಿದ್ದ ನನ್ನ ಮೇಲೆ ಹಾವಿನಂತೆರಗಿದೆ.
ಜನ ನಿನಗೆ ಮಸಿಮುಸಿ ನಗಲಿಲ್ಲವೇ ಗಾಲಿಬ್?

ಮುಖವಾಡವ ಹೊತ್ತು ಮೈಮರೆತೆ
ಮೋಸದಲಿ ಪ್ರೇಮ ಸೋತರೂ ಗೆಲ್ಲಲಿಲ್ಲವೇ ಗಾಲಿಬ್?
@ಪ್ರೇಮ್@
08.11.2019

1277. ಗಝಲ್-9

ಗಝಲ್

ಕಾರ್ಗತ್ತಲ ಬಾಳಲಿ ಕಿಡಿಯಾಗಿ ಬಂದೆ ಭಗವಾನ್..
ಕಾರಿರುಳ ರಾತ್ರಿಯಲಿ ಬೆಳಕಾಗಿ ನಿಂದಿರುವೆ ಭಗವಾನ್..

ಕರುವಿಗೆ ಹಸುವಿನಂತೆ ಹಾಲುಣಿಸಿ ಸಲಹುತಿರುವೆ.
ಮನದಿ ಶಾಂತಿ ಸಂತೋಷವ ತುಂಬಿರುವೆ ಭಗವಾನ್.

ನಾಯಿ ನರಿಗಳು ಬದಿಯಲಿ ಬರಿದೆ ಊಳಿಡುತಿವೆ.
ನಾಶ ಮಾಡದೆ ಸಿಹಿ ಕನಸುಗಳ ತ೦ದಿರುವೆ ಭಗವಾನ್.

ಜಗದಿ ರತ್ನಖಚಿತ ದೇಹವೆನಗೆ ಬೇಕಾಗಿಯೇ ಇಲ್ಲ.
ತಾಳ್ಮೆಯಿಂದ ಜನ್ಮವ ಸಾರ್ಥಕಗೊಳಿಸಿಸಿರುವೆ ಭಗವಾನ್.

ಬಾಳಲಿ ನೋವು ನಲಿವುಗಳ ಸಮದಿ ಹಂಚಿರುವೆ!
ಬಾಡದ ನೆನಪುಗಳ ಬೀಜ ಬಿತ್ತಿರುವೆ ಭಗವಾನ್.

ನಲಿವನು ತುಂಬಿ ಹೃದಯದಿ ಕಲಿಕೆಯಿತ್ತಿರುವೆ.
ನಾದವ ತುಂಬುತ ನಾಟ್ಯವಾಡುತಿರುವೆ ಭಗವಾನ್.

ಪ್ರೇಮವ ಮನಕೆ ಮೊಗೆಮೊಗೆದು ನೀಡುತಲಿರುವೆ.
ಭಕ್ತಿ ಬೆಳಕಿನ ಕಿರಣಗಳ ಪಸರಿಸಿರುವೆ ಭಗವಾನ್.
@ಪ್ರೇಮ್@
09.11.2019

1275. ಗಝಲ್-10

ಗಝಲ್

ಜೀವಕೆ ಜೀವವಾದೆ ನೀ ನಮ್ಮ ಕುಕೂರ್
ಮನೆಗೆ ಮಗುವಾದೆ ನೀ ನಮ್ಮ ಕುಕೂರ್..

ಇಡೀ ಕುಟುಂಬ ವರ್ಗವ ಸಂತಸದಿ ತೇಲಿಸಿದೆ
ಮಕ್ಕಳೊಡನೆ ಆಟವಾಡಿದೆ ನೀ ನಮ್ಮ ಕುಕೂರ್!

ಜನರೊಡನೆ ಸಂಯಮದಿ ಬೆರೆತು ಹೋದೆ
ಪ್ರೀತಿಗೆ ನೀತಿಯಾದೆ ನೀ ನಮ್ಮ ಕುಕೂರ್..

ಮುದ್ದು ನಾಯಿಮರಿಯಾಗಿ ಬೆಳೆದುದೇ ತಿಳಿಯದು
ನಗೆಗಡಲಲ್ಲಿ ತೇಲಿಸಿದೆ ನೀ ನಮ್ಮ ಕುಕೂರ್..

ಮನೆ ಮನವ ಹಗುರಾಗಿಸುತ ಬದುಕಿದೆ.
ಧೃತಿಗೆಡದೆ ಬಾಳಿದೆ ನೀ ನಮ್ಮ ಕುಕೂರ್..

ನೋವುಂಡರೂ ತೊಂದರೆ ಕೊಡಲಿಲ್ಲ ನೀನು
ಮದ್ದಿನಂತೆ ಬಾಳ ಸವೆಸಿದೆ ನೀ ನಮ್ಮ ಕುಕೂರ್..

ಪ್ರೀತಿಯಲಿ ಬಾಳುತ್ತ ಪ್ರೀತಿ ನಗುವ ಹಂಚಿದೆ 
 ಸ್ವಾಮಿನಿಷ್ಠೆಯ ಪಾಠ ಕಲಿಸಿದೆ ನೀ ನಮ್ಮ ಕುಕೂರ್.
@ಪ್ರೇಮ್@
12.11.2019

1274. ಗಝಲ್-11

ಗಝಲ್

ಕಾರ್ಗತ್ತಲ ಬಾಳಲಿ ಕಿಡಿಯಾಗಿ ಬಂದೆ ಭಗವಾನ್..
ಕಾರಿರುಳ ರಾತ್ರಿಯಲಿ ಬೆಳಕಾಗಿ ನಿಂದಿರುವೆ ಭಗವಾನ್..

ಕರುವಿಗೆ ಹಸುವಿನಂತೆ ಹಾಲುಣಿಸಿ ಸಲಹುತಿರುವೆ.
ಮನದಿ ಶಾಂತಿ ಸಂತೋಷವ ತುಂಬಿರುವೆ ಭಗವಾನ್.

ನಾಯಿ ನರಿಗಳು ಬದಿಯಲಿ ಬರಿದೆ ಊಳಿಡುತಿವೆ.
ನಾಶ ಮಾಡದೆ ಸಿಹಿ ಕನಸುಗಳ ತ೦ದಿರುವೆ ಭಗವಾನ್.

ಜಗದಿ ರತ್ನಖಚಿತ ದೇಹವೆನಗೆ ಬೇಕಾಗಿಯೇ ಇಲ್ಲ.
ತಾಳ್ಮೆಯಿಂದ ಜನ್ಮವ ಸಾರ್ಥಕಗೊಳಿಸಿಸಿರುವೆ ಭಗವಾನ್.

ಬಾಳಲಿ ನೋವು ನಲಿವುಗಳ ಸಮದಿ ಹಂಚಿರುವೆ!
ಬಾಡದ ನೆನಪುಗಳ ಬೀಜ ಬಿತ್ತಿರುವೆ ಭಗವಾನ್.

ನಲಿವನು ತುಂಬಿ ಹೃದಯದಿ ಕಲಿಕೆಯಿತ್ತಿರುವೆ.
ನಾದವ ತುಂಬುತ ನಾಟ್ಯವಾಡುತಿರುವೆ ಭಗವಾನ್.

ಪ್ರೇಮವ ಮನಕೆ ಮೊಗೆಮೊಗೆದು ನೀಡುತಲಿರುವೆ.
ಭಕ್ತಿ ಬೆಳಕಿನ ಕಿರಣಗಳ ಪಸರಿಸಿರುವೆ ಭಗವಾನ್.
@ಪ್ರೇಮ್@
09.11.2019

1276.ವಿಮರ್ಶೆಗಳು

[11/11, 12:55 PM] @PREM@: 1. ಶಿವ ಪ್ರಸಾದಣ್ಣನವರ ಗಝಲ್


🍬ಸ್ನೇಹಿತರ ಬಗ್ಗೆ ಸವಿವರವಾಗಿ ತಿಳಿಸಿದ ಗಝಲ್.
🍬ಸುಖ ದು:ಖಗಳ ಜೊತೆಯಾಗಿ ಹಂಚಿಕೊಂಡ ಪರಿ ನವಿರಾಗಿದೆ.
🍬ಉತ್ತಮ ಪದ ಸಂಪತ್ತು.
⁉ ಮೊದಲ ಶೇರ್ ನಲ್ಲಿ ಕೈ ಎನ್ನುವ ಪದ 2 ಸಲ ಬಂದಿದೆ. ಹೀಗೆ ಬರೆಯಬಹುದೇ...
@ಪ್ರೇಮ್@
[11/11, 12:58 PM] @PREM@: 2. ಚಂಪೂ ಗುರುಗಳ ಗಝಲ್

🍬ವಾವ್..ಓದುವ ಖುಷಿಯೇ ಬೇರೆ.
🍬ಉಪಮೆ, ರೂಪಕ, ಶಬ್ದಾಲಂಕಾರಗಳು ಮೇಳೈಸಿದ ಸಂಭ್ರಮ.
ಉತ್ತಮವಾಗಿದೆ ಸರ್..
ಈ ಗಝಲ್ ಓದಿಸಿದ ನಿಮಗೆ ಧನ್ಯೋಸ್ಮಿ..
@ಪ್ರೇಮ್@
[11/11, 3:07 PM] @PREM@: 3 .ಸಿರಾಜ್ ಸರ್ ಗಝಲ್

🍬ವಾವ್ ನಿಜ ದೋಸ್ತ್ ನ ನಿಜ ಗುಣಗಳ ಸುರಿಮಳೆ ಸರ್.

🍬ನಿಜವಾದ ಸ್ನೇಹದ ವರ್ಣನೆ, ಇಂತಹ ಒಂದು ಗೆಳೆಯ ನನಗೂ ಇರಬೇಕೆಂದು ಎಲ್ಲರೂ ಬಯಸುವ ಹಾಗಿದೆ..
🍬ರೂಪಕ ಉಪಮೆಗಳ ಬ್ಯಾಟಿಂಗ್ ಸೂಪರ್.
⁉ಒಂದು ಕಡೆ ಅಕ್ಷರವೊಂದು ಬಿಟ್ಟು ಹೋದಂತಿದೆ ಗುರುಗಳೇ..
@ಪ್ರೇಮ್@
[11/11, 3:14 PM] @PREM@: 4. ನೂರ್ ಸರ್

🍬ಉತ್ತಮ ಗಝಲ್ ಸರ್

⁉ಕೆಲವೊಂದು ಉರ್ದು ಪದಗಳಾದ ಖಫನ್..ಇವುಗಳ ಅರ್ಥ ತಿಳಿಸಿ ಸರ್.
⁉ಕೆಲವೊಂದು ಸಾಲುಗಳನ್ನು ಅರ್ಥೈಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ, ತಿಳಿದವರು ವಿಮರ್ಶಿಸಿ ಪ್ಲೀಸ್.
@ಪ್ರೇಮ್@
[11/11, 3:18 PM] @PREM@: 5. ಪ್ರಮೀಳಾ ಚುಳ್ಳಿಕ್ಕಾನ ಅವರ ಗಝಲ್.
🍬ನಿಯಮ ಪಾಲಿಸಿದ ಸುಂದರ ಗಝಲ್.
⁉ಇಂದಿನ ಥೀಮ್ ಗೆಳೆತನದ ಬಗ್ಗೆ ಬರೆಯಬೇಕಿತ್ತಲ್ಲವೇ ಮೇಡಂ..
ಗೆಳೆತನಕ್ಕೆ ನಾವು ಕೊಟ್ಟ ಸ್ಥಾನದ ಕುರಿತಾಗಿ ಬರೆಯಿರಿ..
[11/11, 3:24 PM] @PREM@: 6. ಪ್ರಮೀಳಾ ರಾಜ್ ಮೇಡಂ ಅವರ ಗಝಲ್

🍬ಗೆಳತಿಗೆ ಸಮರ್ಪಿಸಿದ ಉತ್ತಮ ಗಝಲ್.
🍬ಗೆಳೆತನದ ಸ್ಥಾನ ಗೆಳತಿಗೆ ಸಮರ್ಪಿತವಾಗಿದೆ.
ಉತ್ತಮ.
[11/11, 3:35 PM] @PREM@: 7. ಲಕ್ಷ್ಮಿಕಾಂತ್ ರವರ ಗಝಲ್

🍬ಸೂಪರಾಗಿದೆ ಸರ್.
🍬ಪದಪುಂಜಗಳು ಸೂಪರ್. ಉಪಮೆಗಳ ಸೇರಿಸಬಹುದಾಗಿತ್ತೇನೋ.
⁉ಶೇರ್ಗಳು 8 ಇವೆ. ಅವು ಬೆಸ ಸಂಖ್ಯೆಯಲ್ಲಿರಬೇಕಲ್ಲವೇ ಸರ್..
⁉ಮುತ್ತಂಥ ಎಂದಾಗಬೇಕಲ್ಲವೇ..
⁉ದೋಸ್ತಿ, ಗೆಳೆತನ ಎರಡೂ ಒಂದೇ ಅಲ್ಲವೇ..?

⁉ಸ್ನೇಹ ನಿನ್ನದು ಮೊದಲನೆ ಸಾಲುಗಳಲ್ಲಿ 2 ಕಡೆ ರಿಪೀಟ್ ಆಗಿದೆ ನೋಡಿ,ಸರಿಪಡಿಸಿ..
[11/11, 3:45 PM] @PREM@: 8. ಶ್ರೀಯವರ ಗಝಲ್
🍬ಸಹೇಲಿಗೆ ಬರೆದ ಮುದ್ದಾದ ಗಝಲ್.
⁉4 ಶೇರ್ ಗಳು ಮಾತ್ರ ಇವೆ. ಬೆಸ ಸಂಖ್ಯೆಯಾಗಿಸಲು ಪ್ರಯತ್ನಿಸಿ.
⁉ಅಕ್ಷರ ಟೈಪಿಂಗ್ ದೋಷಗಳು ತುಂಬಾ ಇವೆ, ಸರಿಪಡಿಸಿ. ಉದಾ- ಬೀಗಿದಪ್ಪಿ, ಸಹೇಲಿ..
⁉ಹೃಸ್ವದ ಬದಲು ಧೀರ್ಘಾಕ್ಷರ ಬಳಸಿದರೆ ಗಝಲ್  ಇಫೆಕ್ಟಿವ್.. ಅಲ್ಲವೇ..
⁉ಪ್ರತಿ ಪದಗಳ ನಡುವೆ ಗ್ಯಾಪಿಂಗ್ ಸರಿ ಇರಲಿ. ತೆಪ್ಪ ತಂದು, ಮುಂದೆ ಸಾಗುವಾಗ..ಹೀಗೆ
⁉ಕೊನೆಯ ಶೇರ್ ಸರಿಪಡಿಸಿ, ಮೊದಲ ಶೇರ್ನಂತೆ ಮೂಡಿಬಂದಿದೆ ಅದು.
[11/11, 4:16 PM] @PREM@: 9. ಪ್ರಶಾಂತ್ ಆರ್

⁉ಗಜಲ ಅಲ್ಲ ಅದು ಗಝಲ್.
⁉ನಿಯಮ ಅನುಸರಿಸಿಲ್ಲ ಸರ್, ಕವನವಾಗಿದೆ.
🍬ಹಲವಾರು ಗಝಲ್ ಗಳ ಓದಿ ಸರ್, ತಿಳಿದವರಿಂದ ಕೇಳಿ. ಯತೀಶಣ್ಣ ಹೇಳಿ ಕೊಡುವರು. ಗಝಲ್ ಗುರುಗಳಾದ ನೂರ್ ಸರ್, ಚಂಪೂ ಸರ್, ಸಿರಾಜ್ ಸರ್ ಬಳಿಯಲ್ಲಿ ಕಲಿಯಿರಿ. ನಾವೂ ನಿಮ್ಮ ಹಾಗೆ ತಪ್ಪಾಗೇ ಬರೆದು ಹನಿಹನಿಯಲ್ಲೆ ತಿದ್ದಿಸಿಕೊಂಡು ಕಲಿತವರು.
🍬ಉತ್ತಮ ಪ್ರಯತ್ನ ಸರ್.. ಆಲ್ ದ ಬೆಸ್ಟ್ ನಿಮಗೆ.
ಬೇಗ ಗಝಲ್ ಕವಿಯಾಗಿರೆಂಬ ಶುಭ ಹಾರೈಕೆಗಳು.
ಹನಿ ಬಳಗ ಉತ್ತಮವಾಗಿದ್ದು ಒಂದು ಶಾಲೆಯಂತಿದೆ. ನಿಮಗಿಲ್ಲಿ ಕಲಿಕೆಗೆ ವಿಫುಲ ಗುರುಗಳೂ, ಅವಕಾಶಗಳೂ ಇವೆ. ಬಳಸಿಕೊಳ್ಳಿ.
[11/11, 4:20 PM] @PREM@: 10. ಅನಿತಾ ಅವರ ಗಝಲ್
🍬ಕಾಫಿಯಾ ಉತ್ತಮ,
⁉ರದೀಫ್ ಎಲ್ಲಿ ಮೇಡಂ..
⁉ನೀವು ಇನ್ನೂ ಹಲವು ಗಝಲ್ ಗಳನ್ನು ಓದಿ ಅದರ ಬಗ್ಗೆ ತಿಳಿದವರ ಕೇಳಿ, ಕಲಿಯಬೇಕಿದೆ ಮೇಡಂ. ಬೇಗ ಕಲಿಯಿರಿ, ಆಲ್ ದ ಬೆಸ್ಟ್..💐💐
[11/11, 4:41 PM] @PREM@: 11. ಭಾಗ್ಯ ಮೇಡಂ

🍬ಪುಟ್ಟದಾದ ಅಂದವಾದ ಗಝಲ್. ತೊಟ್ಟಿಲಲ್ಲಿ ಸಣ್ಣ ಮಗು ಆಡಿದಂತಿದೆ.
🍬ಕಡಿಮೆ ಪದಗಳಲ್ಲಿ ಹಲವು ಗುಣಗಳ ತುಂಬಿಸಿ ಸಂಪದ್ಭರಿತವಾಗಿಸಿದ್ದೀರಿ.
🍬ಸೂಪರ್ ಮೇಡಂ..
[11/11, 4:47 PM] @PREM@: 12. ನಾಗಮ್ಮನವರ ಗಝಲ್
🍬ಉತ್ತಮ ಕವಿಭಾವ.
🍬ಉತ್ತಮ ಪದಸಂಪತ್ತು.
⁉ಮೂರು, ನಾಲ್ಕು, ಐದನೆ ಶೇರ್ ಗಳನ್ನು ಗಮನಿಸಿ ಅಮ್ಮಾ ಒಮ್ಮೆ.ಸರಿಯಾದ ವಾಕ್ಯಗಳಾಗಿ ವಿಭಜನೆಯಾಗದೆ ದ್ವಿಪದಿ ಸಾಲುಗಳು ಕನ್ಫ್ಯೂಝ್ ಮಾಡಿವೆ.
[11/11, 4:51 PM] @PREM@: 13. ಸುಮಾ ಮೇಡಂ
🍬ಉತ್ತಮ ಪದಸಂಪತ್ತು.
🍬ಕವಿಭಾವ ಸೂಪರ್.
⁉ಮೊದಲನೆಯ ಶೇರ್ ನಲ್ಲಿ ರದೀಫ್ ಪಾಲನೆಯಾಗಿಲ್ಲ. ಅಲ್ಲಿ ರಾ ಇದೆ, ಉಳಿದ ಶೇರ್ ಗಳಲ್ಲಿ ರು ಇದೆ. ಗಮನಿಸಿ.
⁉ಕ್ಷೀರು ಪದ ಕನ್ನಡದಲ್ಲಿ ನಾ ಕೇಳಿಲ್ಲ, ಅರ್ಥವೇನು?
[11/11, 4:54 PM] @PREM@: 14. ಸುಧಾ ಅಮ್ಮನವರ ಗಝಲ್
🍬ಪುನೀತಳಾದೆ ಓದಿ ಸವಿಮನದ ಭಾವಪೂರ್ಣ ಗಝಲ್.
🍬ಗೆಳತಿಯ ಪ್ರೀತಿ, ಭಾವವ ಅಲಂಕಾರದಿ ಕಟ್ಟಿಕೊಟ್ಟ ಗಝಲ್.
🍬ನನಗೆ ತಿಳಿದಂತೆ ನಿಯಮ ಪಾಲಿಸಿದ ಗಝಲ್ ಉತ್ತಮ.
[11/11, 4:57 PM] @PREM@: 15. ಶಕುಂತಳಾ ಅಕ್ಕನವರ ಗಝಲ್
🍬ಗೆಳತಿಯ ಪ್ರೀತಿಯ ಹೊಗಳಿದ ಸುಂದರ ಗಝಲ್.
🍬ಉತ್ತಮ ಕವಿಭಾವ. ಗಳೆತನವನುಂಡ ಉತ್ತಮ ಸಾಲುಗಳು.
⁉ಜೀವ ಜಾತಿಯೆಂದು ಕಣ್ತೆರೆಸಿದೆ.. ಈ ಸಾಲು ಅರ್ಥವಾಗಲಿಲ್ಲ ನನಗೆ...
[11/11, 5:00 PM] @PREM@: 16. ದೀಪಾ ಸದಾನಂದ ಅವರ ಗಝಲ್
🍬ಉತ್ತಮ ಭಾವದಿಂದ ಮೂಡಿಬಂದ ಕವನವಾಗಿದೆ.
⁉ಮೇಡಂ ಗಝಲ್ ನಿಯಮಗಳ ಪಾಲಿಸಿಲ್ಲ, ತುಂಬಾ ಗಝಲ್ ಗಳ ಓದಿ, ತಿಳಿದವರಿಂದ ಕೇಳಿ ಕಲಿಯಿರಿ.
🍬ಪ್ರಯತ್ನ ಉತ್ತಮ. ಬೇಗ ಕಲಿಯಿರಿ ಆಲ್ ದ ಬೆಸ್ಟ್. ನಿಮ್ಮ ಗಝಲ್ ಗಳ ಓದಿ ಸಂತಸಪಡುವ ಮನ ನಮ್ಮದಾಗಲಿ..
[11/11, 5:04 PM] @PREM@: 17. ಶ್ವೇತಪ್ರಿಯರ ಗಝಲ್

🍬ಗೆಳೆತನವಿಲ್ಲದ ಪರಿತಪಿಸುವ ಗಝಲ್ ಇದಾಗಿದೆ.
⁉ಗೆಳೆತನಕ್ಕೆ ನಾವು ಕೊಟ್ಟ ಸ್ಥಾನ ಎಂಬ ಥೀಮ್ ಇಂದಿನದು, ಸರ್ ಬಹುಶಃ ಯಾರ ಗೆಳೆತನವೂ ಜಾತಿಯನ್ನು ಆಧಾರಿಸಿ ಇಲ್ಲವೆಂಬುದನ್ನು ನಾನು ಸಾವಿರಾರು ಗೆಳೆಯರಿಂದ ಅರಿತಿರುವೆ. ಹಾಗಾಗಿ ಇಂದಿನ ಥೀಮ್ ಗೆ ಈ ಗಝಲ್ ಎಷ್ಟು ಸಮಂಜಸವೋ ಹಿರಿಯರು, ಬಲ್ಲವರು ಹೇಳಬೇಕಷ್ಟೆ.

ಶುಕ್ರವಾರ, ನವೆಂಬರ್ 8, 2019

1273. ಹಾಗೇ ಸುಮ್ಮನೆ

ಹಾಗೇ ಸುಮ್ಮನೆ..

ನೀನಿಲ್ಲದ ನಾನು
ಕರೆಂಟಿಲ್ಲದ ಫ್ಯಾನು..!

ನೀನಿಲ್ಲದ ನಾನು
ಬಲವಿಲ್ಲದ ಚೈನು..!

ನೀನಿಲ್ಲದ ನಾನು
ಇಂಕಿಲ್ಲದ ಪೆನ್ನು..!

ನೀನಿಲ್ಲದ ನಾನು
ದುಡ್ಡಿಲ್ಲದ ಫೈನು!

ನೀನಿಲ್ಲದ ನಾನು
ಬುಲೆಟ್ಟಿಲ್ಲದ ಗನ್ನು!

ನೀನಿಲ್ಲದ ನಾನು
ಸಾರವಿಲ್ಲದ ಮಣ್ಣು!

ನೀನಿಲ್ಲದ ನಾನು
ದೃಷ್ಟಿಯಿಲ್ಲದ ಕಣ್ಣು!

ನೀನಿಲ್ಲದ ನಾನು 
ಬೆಲೆಯಿಲ್ಲದ ಹೊನ್ನು!

ನೀನಿಲ್ಲದ ನಾನು
ಕೊಳೆತು ಹೋದ ಹಣ್ಣು!

ನೀನಿಲ್ಲದ ನಾನು
ಕಿಕ್ಕಿಲ್ಲದ ಜಿನ್ನು!

ನೀನಿಲ್ಲದ ನಾನು
ಖಾಲಿಯಾದ ಟಿನ್ನು!

ನೀನಿಲ್ಲದ ನಾನು
ಶಾರ್ಪಿಲ್ಲದ ಪಿನ್ನು!

ನೀನಿಲ್ಲದ ನಾನು
ಹಾಳಾದ ಬನ್ನು!

ನೀನಿಲ್ಲದ ನಾನು
ಗೆರೆಯಿಲ್ಲದ ಕಮಾನು!

ನೀನಿಲ್ಲದ ನಾನು
ನೊರೆಯಿಲ್ಲದ ಸಾಬೂನು!

ನೀನಿಲ್ಲದ ನಾನು
ಧೈರ್ಯವಿಲ್ಲದ ಡಾನು!

ನೀನಿಲ್ಲದ ನಾನು
ಶಕ್ತಿಯಿಲ್ಲದ ಪೈಲ್ವಾನು!

ನೀನಿಲ್ಲದ ನಾನು 
ನೀರಿಲ್ಲದ ರೈನು!!!

ನೀನಿಲ್ಲದ ನಾನು
ಓಡಲಾರದ ಟ್ರೈನು!!

ನೀನಿಲ್ಲದ ನಾನು
ಎತ್ತಲಾರದ ಕ್ರೇನು!

ನೀನಿಲ್ಲದ ನಾನು
ಚಲಿಸಲಾರದ ಡ್ರೋನು!

ನೀನಿಲ್ಲದ ನಾನು
ಗಟ್ಟಿಯಿಲ್ಲದ ಬೋನು!

ನೀನಿಲ್ಲದ ನಾನು
ಗಾಳಿಯಿಲ್ಲದ ಬಲೂನು!!
@ಪ್ರೇಮ್@
09.11.2019

1272.ಹೀಗಿರಬಲ್ಲೆ

ಹೀಗಿರಬಲ್ಲೆ..

ಮರವ ಚಿಗುರಿಸಲು ತಿಳಿದಿಲ್ಲ ನನಗೆ
ಆದರೆ ಮನಗಳ ಚಿಗುರಿಸಬಲ್ಲೆ..
ಮನಗಳ ಸುಳ್ಳು ಹೇಳಿ ಉಬ್ಬಿಸಲಾರೆ
ಕಟು ಸತ್ಯವನು ಸಾರಿ ತಿದ್ದಬಲ್ಲೆ...

ಮುಂದೆ ಚೆನ್ನಾಗಿ ಮಾತನಾಡಿ ಹೊಗಳಲಾರೆ
ಹಿಂದೆ ಬೇರೆಯೇ ಹೇಳಿ ತೆಗಳಲೊಲ್ಲೆ
ಎದುರು ಮರ್ಯಾದೆಯ ಕೊಟ್ಟು ಮೇಲೇರಿಸಿ
ಹಿಂದೆ ದ್ವೇಷ ಕಕ್ಕುವ ಕಾರ್ಯ ಮಾಡಲೊಲ್ಲೆ.

ಹೃದಯದಿ ಅಹಿತವ ತುಂಬಿ ನಗುತ ಬದುಕಲಾರೆ
ನೋವ ತೋಡುತ ಹಗುರಾಗಬಲ್ಲೆ.
ಮೆದುಳಲಿ ದುರಾಲೋಚನೆಗಳ ತುಂಬಿಕೊಳ್ಳಲಾರೆ
ಇತರರ ದುಷ್ಟ ಕಾರ್ಯಗಳೆಡೆ ತಲೆ ಹಾಕಲೊಲ್ಲೆ.

ಮಾಡಲಿರುವ ಕಾರ್ಯಗಳ ಬಗ್ಗೆ ಯೋಚಿಸುವೆ
ಇತರರ ಹೀಗಳೆದು ಕೆಳಗಿಳಿಸಲೊಲ್ಲೆ..
ಪರರ ಉತ್ತಮ ಕಾರ್ಯಗಳ ಅಭಿನಂದಿಸುವೆ
ದುಶ್ಚಟಗಳ ನೇರವಾಗಿ ಖಂಡಿಸಬಲ್ಲೆ..

ನನ್ನ ವಚನವ ಪಾಲಿಸಿ ನುಡಿದಂತೆ ನಡೆವೆ
ಹಿರಿಯರಾಣತಿಯ ಮರೆಯಲೊಲ್ಲೆ..
ಕಿರಿಯರಿಗೆ ಗುರುವಾಗಿ ಕೈ ಹಿಡಿದು ನಡೆಸುವೆ.
ನೋವುಣಲು ಆಲೋಚನೆಗಳ ಮಾಡಲೊಲ್ಲೆ..
@ಪ್ರೇಮ್@
08.11.2019