ಬುಧವಾರ, ಅಕ್ಟೋಬರ್ 23, 2019
1271. ಎನ್ನ ಮಲ್ಲಿಗೆ
ಸೋಮವಾರ, ಅಕ್ಟೋಬರ್ 21, 2019
1269. ಕೊರಗಜ್ಜಗ್
ಶುಕ್ರವಾರ, ಅಕ್ಟೋಬರ್ 18, 2019
1078.ಹುಲುಮಾನವ ನೀ ಕಲಿ
ಹುಲುವಿನಂಥ ಮಾನವ ಕಲಿಯೊ,
ಗಿಡಮರ ಕಡಿದು ಸಾಯುವೆಯೊ?
ನೆಡುಗಿಡ, ಬದುಕಿಗದೆ ಊಟ!
ಉದಕ ಕೆಡುವುದು ಮನುಜನ ಕೆಲಸಕೆ!
ಗಾಳಿಯು ಕೆಡುವುದು ಹೊಗೆ ಮೇಲೇರೆ
ಮೈಮನಕದು ಬೀಡಂತೆ
1270. ಕವನ-ಸಹನೆಯಿರಲಿ
1249. ಕತೆ ಅವಳು
"ಹೆಂಡತಿ ದುಡಿಯಲಿ, ಹೊರಗೆ ಹೋಗಿ ದುಡಿಯದೆ ಇರಲಿ, ಅವಳ ಕನಸು ನನ್ನ ಮನೆ, ನನ್ನ ಕುಟುಂಬ ತಾನೇ, ಗಂಡ ಅವಳಿಗೆ ಬೇಕಾದ ಪ್ರೀತಿ, ವಾತ್ಸಲ್ಯ, ಮಾತು,ಅವಳಿಗಾಗಿ ಒಂದಿಷ್ಟು ಸಮಯ ಮೀಸಲಿಟ್ಟರೆ ತಾನೇ ಬದುಕು ಸುಂದರವಾಗುವುದು?" ಯೋಚಿಸುತ್ತಾ ಕುಳಿತ ಮಾನ್ವಿತಾ ಅಖಿಲೇಶ್ ಗೆ ಕಣ್ಣೀರು ಧಾರಾಕಾರವಾಗಿ ಸುರಿದು ಹೋಗುತ್ತಲೇ ಇತ್ತು. ಕಷ್ಟಗಳನ್ನೇ ಉಂಡ ಮಾನ್ವಿತಾಳ ಕಣ್ಣೀರೇಕೋ ಬತ್ತಿರಲಿಲ್ಲ, "ಜೀವನದಲ್ಲಿಮನುಜರ,ಹಿರಿಯರ,ಬಂಧುಗಳ ಸಹಾಯ ಸಿಗದಿದ್ದರೇನಂತೆ? ಭೂಮಿಗೆ ತಂದ ಆ ದೇವನಿಲ್ಲವೇ ಸಲಹಿ ಕಾಪಾಡಲು?" ಹೀಗೊಂದು ಮೊಂಡು ವಾದವ ಹಿಡಿದು ನಗುನಗುತ್ತಲೇ ಒಂಟಿ ಜೀವನ ನಡೆಸುತ್ತಿದ್ದಳು.
ಪತಿರಾಯ ಅಖಿಲೇಶ್ ಮಿಶ್ರ. ಸಾಮಾಜಿಕ ಹೋರಾಟಗಾರ. ಸಮಾಜ ಸೇವಾ ಧುರೀಣ. ನೆರೆಹೊರೆ,ಬಂಧು ಬಳಗವೆನ್ನದೆ ರಾತ್ರಿ ಹಗಲು ಸೇವೆಗೆ ಸದಾ ಸಿದ್ಧನಾಗುವವ. ಇಂಥ ಒಳ್ಳೆಯ ಹುಡುಗನನ್ನು ಪಡೆಯಲು ಪುಣ್ಯ ಮಾಡಿರಬೇಕೆಂದು ಮದುವೆಯ ಸಂಧರ್ಭದಲ್ಲಿ ಯಾರೋ ಹೇಳಿದ ಮಾತು ಈಗಲೂ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು ಮಾನ್ವಿತಾಳಿಗೆ. ದೇಶ ಸೇವೆ ಮಾಡುವೆನೆಂದು ಹೋದ ಅಖಿಲೇಶ್ ಟ್ರೈನಿಂಗ್ ಕಷ್ಟವಾಯ್ತೆಂದು ಹೇಳದೆ ಕೇಳದೆ ಆಫೀಸರ್ ಗಳ ಕಣ್ಣು ತಪ್ಪಿಸಿ ಓಡಿಬಂದಿದ್ದ. ತನ್ನ ಮಗ ಸೋಮಾರಿಯೆಂದು ತಾಯಿಗೂ ಗೊತ್ತಿತ್ತು. ಆದರೂ ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೇ? ಮಾನ್ವಿತಾಳ ಕೊರಳಿಗದು ಉರುಳಾಗಿತ್ತು!
ತನಗೆ ಬೇಕಾದದ್ದೇನಾದರೂ ಕೊಡುವುದಿರಲಿ, ತನಗೆ ಆರೋಗ್ಯ ಸರಿ ಇರದಿದ್ದರೂ ತಿರುಗಿ ನೋಡುತ್ತಿರಲಿಲ್ಲ ಅಖಿಲೇಶ. ಮನೆಯಲ್ಲೇನೂ ಮಾಡಲು ಕೆಲಸವಿರದಿದ್ದಾಗ ತಾನು ಕಲಿತ ವಿದ್ಯೆ ನಾಲ್ಕಾರು ಮಕ್ಕಳಿಗೆ ದಾರಿದೀಪವಾಗಲಿ, ತಾನೂ ಪೈಸೆ ಪೈಸೆಗೂ ಗಂಡನನ್ನು ಬೇಡುವುದು ತಪ್ಪುತ್ತದೆಯೆಂದರಿತ ಮಾನ್ವಿತಾ ದ್ವಿತೀಯ ಪಿಯುಸಿ ಮುಗಿದ ಬಳಿಕ ನರ್ಸರಿ ಟ್ರೈನಿಂಗ್ ಮಾಡಿದ ಕಾರಣ ಸ್ಟಾಂಡರ್ಡ್ ಖಾಸಗಿ ಶಾಲೆಯೊಂದರಲ್ಲಿ ನರ್ಸರಿ ಶಿಕ್ಷಕಿಯಾಗಿ ಸೇರಿದಳು. ಮನೆಯಿಂದ ಬಹಳವೇ ದೂರವಿತ್ತು ಆ ಶಾಲೆ. ಆದರೆ ಜಿಲ್ಲೆಯಲ್ಲೇ ದೊಡ್ಡ ಹೆಸರಿದ್ದ ಶಾಲೆಯಲ್ಲಿ ಕೆಲಸ ಮಾಡುವುದರಲ್ಲಿ ತೃಪ್ತಿಯೂ ಇತ್ತು, ಉತ್ತಮ ಸಂಬಳವೂ ದೊರೆಯುತ್ತಿತ್ತು. ಪುಟ್ಟ ಪುಟ್ಟ ಮುದ್ದು ಮಕ್ಕಳ ಒಡನಾಟವಂತೂ ತನಗೆ ಮಕ್ಕಳಿಲ್ಲವೆಂಬ ನೋವನ್ನೆಲ್ಲ ಮರೆಸಿತ್ತು. ಮಕ್ಕಳ ಪೋಷಕರೂ ಸಮಾಜದ ವಿವಿಧ ಸ್ತರಗಳಲ್ಲಿ ಕೆಲಸದಲ್ಲಿದುದರಿಂದ ಹೋದ ಕಡೆಯೆಲ್ಲಾ ಗೌರವದ ಜೊತೆಗೆ ಕೆಲಸ ಕಾರ್ಯಗಳು ಹೂವೆತ್ತಿಟ್ಟಂತೆ ಬೇಗಬೇಗ ಮುಗಿಯುತ್ತಿದ್ದವು. ಇದು ಮಾನ್ವಿತಾಗೆ ಸಂತಸ ನೀಡುತ್ತಿತ್ತು. ಆದರೆ ಕೆಲಸ ಬಿಡಬೇಕೆಂಬ ಸೂಚನೆ ಆಗಾಗ ಗಂಡ ಹಾಗೂ ಅತ್ತೆಯಿಂದ ಬರುತ್ತಿತ್ತು. ಅದರಲ್ಲಿ ಮೈದುನ, ನಾದಿನಿಯರ, ಓರಗಿತ್ತಿಯರ ಕುಮ್ಮಕ್ಕೂ ಇರುತ್ತಿತ್ತು.
ಅತ್ತೆಯೋ ರಣಚಂಡಿ!ಇನ್ನು ನಾದಿನಿ ಕಿಲಾಡಿ ಮಿಟುಕಲಾಡಿ! ಮೈದುನ ಕನ್ನಡ ಮಿಡಿಯಂನಲ್ಲೆ ಮೇಡ್ ಇನ್ ಅಮೇರಿಕಾ ತರಹ ಆಡ್ತಿದ್ದ! ಓರಗಿತ್ತಿ ತಾನು ಮನೆಕೆಲಸ ಮಾಡಿಕೊಂಡಿಲ್ವಾ, ಇವಳ್ಯಾಕೆ ಹೊರಗೆ ಹೋಗೋದು,ಮನೇಲಿ ನನ್ನಂತೆ ದುಡೀಲಿ ಅನ್ನೋ ವಯ್ಯಾರ! ಎಲ್ಲರ ದೃಷ್ಟಿ ಮಾನ್ವಿತಾ ಮೇಲೆಯೇ!
"ಜೀವನವೇ ಹಾಗೆ! ಗಣಿತಕ್ಕಿಂತಲೂ ಕಠಿಣ.ಕೆಲವೊಂದು ಸಮಸ್ಯೆಗಳಿಗೆ ಪರಿಹಾರವೇ ಇಲ್ಲ!ತಾನೂ ಮಾಡಲಾಗದು, ಇತರರೂ ಕೊಡಲಾರರು. ಅವು ತಾವೇ ತಾವಾಗಿ ಸರಿ ಮಾಡುವಂಥದ್ದೂ ಅಲ್ಲ! ಕಾಲ, ದೇವರೇ ನಿರ್ಧರಿಸಬೇಕಷ್ಟೇ ಅವುಗಳನ್ನೆಲ್ಲ! ತನ್ನ ಜೀವನದ ಏಳು ಬೀಳಿನ ಹಂತಗಳೂ ಹೀಗೆಯೇ…" ಯೋಚಿಸುತ್ತಾ ಕುಳಿತವಳಿಗೆ ಪಕ್ಕದಲ್ಲೇ ಬಿದ್ದಿದ್ದ ಪತ್ರಿಕೆಯ ತುಣುಕೊಂದು ಕಂಡಿತು. ಎತ್ತಿಕೊಂಡು ಓದಿದವಳ ಬದುಕು ಬದಲಾಗುವ ವಿಷಯ ಅದರಲ್ಲಿದೆಯೆಂದು ಮಾನ್ವಿತಾ ಅಂದುಕೊಳ್ಳಲೇ ಇಲ್ಲ.
ಹೌದು, ಅದೊಂದು ಜಾಹೀರಾತು. ಸಂಗೀತ ಬಲ್ಲವರಿಗೆ ಪಾರ್ಟ್ಟೈಮ್ ಕೆಲಸ. ಓದುವಾಗಿನ ಪ್ರತಿ ಭಾನುವಾರ ಸಂಗೀತದ ವಿಶೇಷ ತರಗತಿಗಳನ್ನು ತೆಗೆದುಕೊಂಡು ಸೀನಿಯರ್ ಗ್ರೇಡ್ ಪರೀಕ್ಷೆ ತೆಗೆದುಕೊಂಡು ಉತ್ತೀರ್ಣಳಾಗಿದ್ದಳು ಮಾನ್ವಿತಾ. ಅದನ್ನು ಬಳಸಿ ತನ್ನ ಪೂರ್ಣ ವ್ಯಕ್ತಿತ್ವ ತೊರಿಸುವ ಅವಕಾಶ ಅವಳಿಗೆ ಬೇಕಿತ್ತು. ಅಂತಹ ಒಂದು ಅವಕಾಶ ಅವಳ ಕಾಲ ಬಳಿಗೇ ಪುಟ್ಟ ಪೇಪರಿನ ಮೂಲಕ ಬಂದಿತ್ತು! ಅವಕಾಶ ಬಿಡಲಿಲ್ಲ. ತಕ್ಷಣವೇ ಆ "ರಾಗರಂಜಿನಿ" ಸಂಗೀತ ಶಾಲೆಯ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಸಂಬಂಧಪಟ್ಟವರಿಗೆ ಫೋನಾಯಿಸಿದಳು. ಆ ಕಡೆಯಿಂದ ಕರೆ ರಿಸೀವ್ ಆದಾಗ ಅರಿವಿಲ್ಲದೆ ನಡುಗಿದಳು. ಆ ನಡುಕ ಜೀವನ ಬದಲಾದ ಕುರುಹೇನೋ! ಮತ್ತೆ ಒಂದೇ ವಾರದಲ್ಲಿ ಸೆಲೆಕ್ಟಾಗಿ ತನ್ನ ಪೂರ್ಣ ವ್ಯಕ್ತಿತ್ವ ಬದಲಾಗುವ ಕಾಲ ಬಂದೇ ಬಿಟ್ಟಿತು. ಮತ್ತೆಂದೂ ಮನೆ, ಸಂಬಂಧಿಕರು, ಒಂಟಿತನ, ಮಾತು ಇವುಗಳ ಕಡೆ ಗಮನ ಹರಿಸಲಿಲ್ಲ ಮಾನ್ವಿತ. ರಾಜ್ಯ , ರಾಷ್ಟ್ರ ಮಟ್ಟದ ಸಂಗೀತ ಕಲಾವಿದೆಯಾಗಿ, ಪ್ರತಿನಿಧಿಯಾಗಿ, ಉತ್ತಮ ಶಿಕ್ಷಕಿಯಾಗಿ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಬೆಳೆದಳು, ಬೆಳೆಯುತ್ತಲೇ ಹೋದಳು.
ಮಾತನಾಡುತ್ತ ಕುಳಿತ ಸಂಬಂಧಿಗಳೂ ಬೆಳೆಯುತ್ತಾ ಹೋದರು,ತಮ್ಮ ವಯಸ್ಸಿನಲ್ಲಿ ಮಾತ್ರ!
@ಪ್ರೇಮ್@
1120. ಚುಟುಕು-ಧೂಮಪಾನ
ಚಿತ್ರ ಕವನ
ಅತಿಯಾದರೆ ಧೂಮಪಾನ
ಪಡೆವೆ ಯಮನ ಜೊತೆ ಯಾನ ಅನುಭವಿಸುವೆ ಸರ್ವ ನೋವ
ಸೇರುವೆ ರವರವ ನರಕವ! @ಪ್ರೇಮ್@
1091. ಈಗಿನ ಶಿಕ್ಷಣದ ವ್ಯವಸ್ಥೆ
ಲೇಖನ
ವಿಷಯ-ಈಗಿನ ಶಿಕ್ಷಣದ ವ್ಯವಸ್ಥೆ
ಶಿಕ್ಷಣ ಎಂದಾಗ ಮೊದಲನೆಯದಾಗಿ ನೆನಪಿಗೆ ಬರುವುದು ಮನೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಆದರೆ ಕಾಲ ಬದಲಾಗಿದೆ. ಈಗ ಮೊಬೈಲೇ ಮೊದಲ ಗುರು.ಮಗುವಿಗೆ ಪ್ರಿ ಸ್ಕೂಲ್ ಮೊದಲ ಶಾಲೆ. ಈಗಿನ ಅಮ್ಮಂದಿರಿಗೆ ಸಮಯವಿಲ್ಲವಲ್ಲ! ತಾವು ದುಡಿದು ಕೆಲಸದವರಿಗೆ ಸಂಬಳ ಕೊಡಬೇಕು! ಪಾಪ ಮಕ್ಕಳ ಗತಿ! ಯಾವುದೋ ಕೆಲಸದವಳ ಜೊತೆಯೋ, ಸಂಬಂಧಿಕರ ಮನೆಯಲ್ಲೋ, ಸಂಬಂಧವೇ ಇಲ್ಲದವರ ಮನೆಯಲ್ಲೋ ಹುಟ್ಟಿದ ತಪ್ಪಿಗೆ ಬೆಳೆಯ ಬೇಕಾದ ಪರಿಸ್ಥಿತಿ ಬಂದೊದಗಿದೆ ಇಂದು!
ಅದೇನೇ ಇರಲಿ, ಮೂಲ ಹುಡುಕಲು ಹೋಗಬಾರದಂತೆ! ಮೊದಲು ಆರು ವರುಷವಿದ್ದ ಶಾಲಾ ವಯಸ್ಸೀಗ ಮೂರು ವರುಷಕ್ಕೆ ಇಳಿದಿದೆ. ಮೂರು ವರುಷ ಹತ್ತು ತಿಂಗಳಲ್ಲಿ ಶಾಲೆಗೆ ಸೇರಿಸುವ ನಿಯಮವಿದ್ದರೂ ಪೋಷಕರಿಗೆ ತಾಳ್ಮೆ ಎಂಬುದಿಲ್ಲ, ಅದಕ್ಕಿಂತ ಮೊದಲೇ ತಂದು ತುರುಕಿ ಬಿಡುತ್ತಾರೆ ಪ್ರಿ ಕೆಜಿ ತರಗತಿಗೆ!
ಹಲ ಶಾಲೆಗಳೂ ಪ್ರಿಕೆಜಿಗೇ ಲಕ್ಷಗಟ್ಟಲೆ ಪಡೆದು ತಮ್ಮ ಕಟ್ಟಡ ವೃದ್ಧಿಸುತ್ತಲೇ ಹೋಗುತ್ತಿವೆ. ಇಲ್ಲಿ ನಾವು ಮಾತನಾಡಬೇಕಾದುದು ಸರಕಾರಿ ಶಾಲೆ ಅಥವಾ ಖಾಸಗಿ ಶಾಲೆಯ ಶಿಕ್ಷಣ ವ್ಯವಸ್ಥೆಯ ಬಗ್ಗೆ.
ನಾನೊಬ್ಬ ಶಿಕ್ಷಕಿಯಾಗಿದ್ದು ಖಾಸಗಿ ಶಾಲೆಯಲ್ಲೂ, ಸರಕಾರಿ ಶಾಲೆಯಲ್ಲೂ ದುಡಿದ ಅನುಭವ ಇರುವ ಕಾರಣ ನಾನು ಹೇಳುವುದಿಷ್ಟೆ. ಸರಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಂತೆಯೇ ಇದು ಕೂಡಾ. ಸರಕಾರವೂ ಶಾಲೆಗಳಿಗೆ ಬೇಕಾದ ಎಲ್ಲಾ ಅನುದಾನಗಳನ್ನು ಕೊಡುತ್ತದೆ. ಇಲ್ಲಿ ನಾವು ಭೌತಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಎಲ್ಲಾ ಕೋನಗಳಿಂದ ಹೇಳ ಹೊರಟರೆ ನಾನು ಎರಡೂ ಶಿಕ್ಷಣ ವ್ಯವಸ್ಥೆಗಳಲ್ಲೂ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳನ್ನು ಪಟ್ಟಿ ಮಾಡಬಲ್ಲೆ.
ಶಾಲಾಡಳಿತ ಬೇರೆ ಬೇರೆಯಾಗಿದ್ದರೂ ಸರಕಾರಿಯಾದರೂ, ಖಾಸಗಿಯಾದರೂ ಶಿಕ್ಷಕರು ಒಂದೇ. ಪ್ರತಿಯೊಬ್ಬರೂ ತನ್ನ ವಿದ್ಯಾರ್ಥಿ ಮೇಲೆ ಹೋಗಬೇಕೆಂದು ಬಯಸುವವರೇ. ಆದರೆ ಖಾಸಗಿ ಶಾಲೆಗೆ ಬರುವ ಮಕ್ಕಳು ೨ನೇ, ೩ನೆ ಕೆಲವು ೪ನೇ ಜನರೇಶನ್ ಕಲಿಕಾರ್ಥಿಗಳು! ಅದೇ ಸರಕಾರಿ ಶಾಲೆಗಳಲ್ಲಿ ಓದುತ್ತಿರವ ಹೆಚ್ಚಿನ ವಿದ್ಯಾರ್ಥಿಗಳು ಮೊದಲ ತಪ್ಪಿದರೆ ಎರಡನೆ ಜನರೇಶನ್ ವಿದ್ಯಾರ್ಥಿಗಳು! ಅವರಿಂದಲೇ ಮನೆ ಬೆಳಗಬೇಕು ಅಥವಾ ಅವರು ಕಲಿತು ತಮ್ಮ ಹಿರಿಯರಿಗೆ ಹೇಳಿ ಕೊಡಬೇಕಾದವರು. ಅವನಾದರೂ ಕಲಿತು ಏನಾದರೂ ಕೆಲಸಕ್ಕೆ ಸೇರಲಿ ನಮ್ಮಂತೆ ಕಷ್ಟ ಪಡೋದು ಬೇಡ ಎಂಬ ಯೋಚನೆ ಪೋಷಕರಿಗೆ! ಆದರೇನು! ಹೆಚ್ಚಿನ ಪೋಷಕರು ಕುಡುಕರು, ಕೆಲವು ತಾಯಿ ತಂದೆ ಇಬ್ಬರೂ ಸಂಜೆಯಾದರೆ ಟೈಟು! ಪಾಪ ಮಕ್ಕಳ ಅವಸ್ಥೆ ಯಾರು ಕೇಳಬೇಕೋ! ಬುದ್ಧಿ ಹೇಳಬೇಕಾದವರಿಗೆ ಮಕ್ಕಳೇ ಬುದ್ಧಿ ಕಲಿಸುವ ಕಾರ್ಯ ಮಾಡಬೇಕು. ಇನ್ನು ಕೆಲವರ ಮನೆಯಲ್ಲಿ ಕತ್ತಲಾದ ಕೂಡಲೇ ತಂದೆ ಅನ್ನಿಸಿಕೊಂಡ ಪ್ರಾಣಿಯ ಗಲಾಟೆ, ಪೆಟ್ಟು ಪ್ರಾರಂಭವಾಗಿ ಮನೆ ರಣರಂಗವಾಗಿರುವಾಗ ಮನೆ ಯಾವ ರೀತಿಯ ಪಾಠ ಶಾಲೆಯಾಗಬಹುದು ನೀವೇ ಯೋಚಿಸಿ. ಇನ್ನು ಕಲಿಕೆ, ಸರಕಾರ ಹೇಳುವ ಶೇಕಡಾ ನೂರರ ಫಲಿತಾಂಶ ಸಾಧ್ಯವೇ ಹೇಳಿ.
ಆದರೆ ಈ ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಲ್ಲಿಸಿ ಮಗುವನ್ನು ಮುಂದೆ ತರುವ ಗುರುತರ ಜವಾಬ್ದಾರಿ ಸರಕಾರಿ ಶಾಲೆಯ ಶಿಕ್ಷಕರ ಮೇಲಿದೆ. ಕೆಲವೊಂದು ಪ್ರಾಥಮಿಕ ಶಾಲೆಯ ಮಕ್ಕಳು ಅಮ್ಮನಿಗಿಂತ ತಮ್ಮ ಶಿಕ್ಷಕಿಯ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಇನ್ನು ಕೆಲವು ಮಕ್ಕಳು ಶಾಲೆಯಲ್ಲಿ ಹೊಟ್ಟೆ ತುಂಬ ಸಿಗುವ ಊಟಕ್ಕಾಗಿ,ಹಾಲಿಗಾಗಿ ಶಾಲೆಗೆ ಈಗಲೂ ಬರುತ್ತಾರೆಂದರೆ ಅತಿಶಯೋಕ್ತಿಯಿಲ್ಲ. ಮತ್ತೆ ಕೆಲವು ವಿದ್ಯಾರ್ಥಿಗಳಿಗೆ ಶಾಲೆಗೆ ಬಂದರಷ್ಟೆ ನೆಮ್ಮದಿ. ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ಯಾಕೆ ಬರುತ್ತೇವೆಂದೇ ಗೊತ್ತಿಲ್ಲ. ಹಲವು ವಿದ್ಯಾರ್ಥಿಗಳಿಗೆ ಶಾಲೆ, ಗಣಿತ, ಇಂಗ್ಲಿಷ್, ಹಿಂದಿ ಎಂದರಾಗದು. ಬದಲಾಗಿ ಮದುವೆ ಮನೆ, ಪೂಜೆ, ಬಂಧುಗಳ ಮನೆ, ಹಬ್ಬ, ಅಜ್ಜಿಯ ಮುದ್ದು, ತೋಟ-ಗದ್ದೆಯ ಕೆಲಸ ಇಷ್ಟ. ಇಂತಹ ವಿವಿಧ ಆಯಾಮದಲ್ಲಿ ಯೋಚಿಸುವ ಕಲಿಕೆಯ ಬೆಲೆಯೇ ಅರಿತಿರದ ಮಕ್ಕಳ ಜೀವನ ರೂಪಿಸುವ ಬಹುದೊಡ್ಡ ಸವಾಲು ಸರಕಾರಿ ಶಿಕ್ಷಕರದ್ದು.
ಅದರೊಂದಿಗೆ ತಮ್ಮದೇ ಮಕ್ಕಳೆಂಬ ಭಾವನೆಯಿಂದ ಅವರನ್ನು ನೋಡಬೇಕಿದೆ. ಅವರ ಜೀವನದ ರೂವಾರಿಗಳು ಶಿಕ್ಷಕರೇ. ಮುಂದೆ ಜೀವನದಲ್ಲಿ ಅವರು ಯಾವ ಕ್ಷೇತ್ರವನ್ನು ಆರಿಸಿಕೊಳ್ಳಬೇಕು, ಅವರಲ್ಲಿ ಹುದುಗಿರುವ ಸುಪ್ತವಾದ ಗುಣ, ಕಲೆಗಳನ್ನು ಹುಡುಕಿ ತೆಗೆದು ಅವರನ್ನು ಆ ದಿಸೆಯಲ್ಲಿ ಬೆಳೆಸುವವರು ಅವರೇ. ಎಷ್ಟೋ ಜನ ಶಿಕ್ಷಕರು ಉತ್ತಮ ಕಲಿಕೆಯ ಬಡ ವಿದ್ಯಾರ್ಥಿಗೆ ತಾವೇ ಬಟ್ಟೆ ಪುಸ್ತಕ ತೆಗೆದು ಕೊಟ್ಟರೆ, ಮತ್ತೆ ಕೆಲವು ಶಿಕ್ಷಕರು ತಮ್ಮ ಮನೆಯಲ್ಲೆ ತಮ್ಮ ಮಕ್ಕಳಂತೆ ಅವರನ್ನು ಸಾಕುವವರಿದ್ದಾರೆ! ತಮ್ಮ ಪಾಠದ ಅವಧಿಯಲ್ಲಿ ಪಾಠ ಪ್ರವಚನ ಬೋಧಿಸಲು ಸಾಧ್ಯವಾಗದೆ ಇರುವ ಘಟನೆಗಳು ಅನೇಕ ಇರುತ್ತವೆ ಈಗಿನ ಸರಕಾರಿ ಶಿಕ್ಷಣ ಪದ್ಧತಿಯಲ್ಲಿ. ಉದಾಹರಣೆಗೆ ಕಂಪ್ಯೂಟರ್, ಸ್ಕೌಟ್, ಗೈಡ್, ಸೇವಾದಳ, ವಿಷಯ ತರಬೇತಿಗಳು, ಮೀಟಿಂಗ್ ಗಳು, ವಿಸಿಟ್ ಗಳು, ದಾಖಲೆಗಳ ನಿರ್ವಹಣೆ.. ಖಾಸಗಿ ಶಾಲೆಗಳಲ್ಲಿ ಆಯಾ, ಪಿಓನ್, ಕ್ಲರ್ಕ್ ಗಳಿದ್ದಂತೆ ಸರಕಾರಿ ಶಾಲೆಗಳಲ್ಲಿ ಇರುವುದಿಲ್ಲ, ಇದ್ದರೂ ಬೆರಳೆಣಿಕೆಯ ಶಾಲೆಗಳಲ್ಲಿ ಮಾತ್ರ! ಉಳಿದ ಶಾಲೆಗಳಲ್ಲೆಲ್ಲ ಮಕ್ಕಳು, ಟೀಚರ್ ಗಳೇ ಪ್ಲಂಬರ್ಗಳು, ಎಲೆಕ್ಟ್ರಿಷಿಯನ್ ಗಳು, ಪಿಓನುಗಳು,ಸಪ್ಲಾಯರ್ ಗಳು,ಆಯಾಗಳು! ಕೆಲವು ಕಡೆ ಅಡಿಗೆಯವರು ಕೂಡಾ!
ಅದರಿಂದ ಸರಕಾರಿ ಶಾಲೆಗಳಲ್ಲಿ ಕಲಿಕೆಯೊಂದಿಗೆ ಜೀವನ ಮೌಲ್ಯಗಳನ್ನೂ ಅರಿವಿಲ್ಲದೆ ಕಲಿಯುವರು. ಬಡತನ ಜೀವನದಲ್ಲಿ ಎಲ್ಲವನ್ನೂ ಕಲಿಸುವುದಂತೆ. ಅಂತೆಯೇ ಕೂಡಿ ಬಾಳುವುದು, ಪರಸ್ಪರ ಸಹಾಯ, ಒಗ್ಗಟ್ಟು ಕಲಿಯಲು ಶಾಲೆಯೇ ದೇವಾಲಯ! ಮೇಲು-ಕೀಳು, ಜಾತಿ ಪದ್ಧತಿಯ ಕೋಟೆ ಮಕ್ಕಳಲ್ಲಿಲ್ಲ, ಅದನ್ನು ಸರಕಾರದ ಸವಲತ್ತು, ಲೆಕ್ಕ, ಫೀಜುಗಳಲ್ಲಿ ತೋರಿಸಲಾಗುತ್ತದೆಯೇ ಹೊರತು ತರಗತಿಯೊಳಗೆ ಮೈಮುನ, ಜಾರ್ಜ್, ಗಣೇಶ ಎಲ್ಲರೂ ಒಂದೇ.
ಕಲಿಕೆ ಎಂದರೆ ಓದು ಬರಹ ಮಾತ್ರವಲ್ಲ. ಜೀವನ ಪಾಠ. ಮುಂದಿನ ಜೀವನಕ್ಕೆ ಅಡಿಗಲ್ಲು. ಭಾರತದ ಮುಂದಿನ ಬಲಿಷ್ಠ ರಾಷ್ಟ್ರ ಕಟ್ಟುವ ಪ್ರಜೆಯ ನಿರ್ಮಾಣ. ಆ ದಿಸೆಯಲ್ಲಿ ಕಲೋತ್ಸವ, ಆಟೋಟ ಸ್ಪರ್ಧೆಗಳು, ಪ್ರತಿಭಾ ಕಾರಂಜಿ, ದಿನಾಚರಣೆಗಳು, ಪ್ರವಾಸ, ಶಾಲಾ ಕ್ರೀಡೋತ್ಸವ, ವಾರ್ಷಿಕೋತ್ಸವ, ಬೀಳ್ಕೊಡುಗೆ ಸಮಾರಂಭಗಳು ಮಕ್ಕಳ ಮುಂದಿನ ಜೀವನ ರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರಭಾವ ಬೀರುತ್ತವೆ. ಶಾಲೆಯಲ್ಲಿ ನಡೆಯುವ ನೃತ್ಯ, ಪ್ರಬಂಧ, ಗಾಯನ, ಲೇಖನ ಸ್ಪರ್ಧೆಗಳು, ಗುಂಪು, ನಾಯಕತ್ವ, ಸಂಸತ್, ಶಾಲಾ ನಾಯಕನ ಚುನಾವಣಾ ಆಯ್ಕೆ, ಚರಚೆಗಳು, ರಸಪ್ರಶ್ನೆ, ಜಾಣತನದ ಆಟಗಳು, ಕಾರ್ಯಕ್ರಮ ನಿರ್ವಹಣೆ, ಸ್ವಯಂ ಸೇವಕರು, ಜೀವನಕ್ಕೆ ಸರಿಯಾದ ಅಡಿಗಲ್ಲನ್ನು ಹಾಕುವಲ್ಲಿ ಯಶಸ್ವಿಯಾಗಿವೆ. ಗೆದ್ದಾಗ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸುವ ಪುಟ್ಟ ಕೈಗಳೇ ಬಿದ್ದಾಗ ಹಿಡಿದೆತ್ತಲು ಬರುತ್ತವೆ. ಅವುಗಳೇ ನಿಜವಾದ ಮೌಲ್ಯಗಳು. ಇವುಗಳನ್ನೆಲ್ಲ ಶಿಕ್ಷಣ ಕಲಿಸುತ್ತದೆ.
ಇದ್ದುದರಲ್ಲಿ ಹಂಚಿ ಬದುಕುವ ಗುಣ, ಸ್ಕೌಟ್, ಗೈಡ್ಸ್ ನಲ್ಲಿ ಸಾಹಸಗಳು, ಕಾರ್ಯಕ್ರಮ, ತರಗತಿಗಳಲ್ಲಿ ತೊಡಗಿಸಿಕೊಳ್ಳುವಿಕೆ, ರಾತ್ರಿ ತರಗತಿಯಲ್ಲಿ ಪರಿಶ್ರಮದ ಮಹತ್ವ, ವಿಶೇಷ ತರಗತಿಗಳಲ್ಲಿ ಸಮಯದ ಮಹತ್ವ, ಕಾರ್ಯಕ್ರಮಗಳ ಕೊನೆಯಲ್ಲಿ ಉಳಿದ ವಸ್ತುಗಳ ಜವಾಬ್ದಾರಿ, ಪೋಲಾಗದಂತೆ ವಿಲೇವಾರಿ ಇವೆಲ್ಲ ನಿತ್ಯ ಜೀವನಕ್ಕೆ ಬೇಕಾದ ಕಲಿಕೆಗಳೇ ಅಲ್ಲವೇ?
ಕಷ್ಟ ಪಟ್ಟು ಕಲಿತ ಯಾವುದೇ ಕೆಲಸವೂ ವ್ಯರ್ಥ ಅನ್ನಿಸದು. ಅಂತೆಯೇ ಈ ಗುಣಗಳು ಕೂಡಾ. ಖಾಸಗಿ ಶಾಲೆಯಲ್ಲಿ ಈ ಎಲ್ಲಾ ಜವಾಬ್ದಾರಿಯನ್ನು ಪೋಷಕ ವೃಂದ, ಶಾಲಾಡಳಿತ ಮಂಡಳಿ, ಹಳೆ ವಿದ್ಯಾರ್ಥಿ ಹಾಗೂ ಶಿಕ್ಷಕ ಬಳಗ ಹೊತ್ತರೆ, ಸರಕಾರಿ ಶಾಲೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರೇ ಕೇಂದ್ರ ಬಿಂದುಗಳು. ವಿದ್ಯಾರ್ಥಿಗಳಿಗೆ ಅವರೇ ಮಾರ್ಗದರ್ಶಿಗಳು. ಅವರಂತಾಗಬೇಕೆಂಬುದೇ ಮೊದಲ ಗುರಿ.
ಈ ನಿಟ್ಟಿನಲ್ಲಿ ಸರಕಾರಿ ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚು ಮೌಲ್ಯಯುತವಾಗಿದೆ ಹಾಗೂ ಜವಾಬ್ದಾರಿಯುತವೂ ಆಗಿದೆ ಎಂಬುದು ನನ್ನ ಅನಿಸಿಕೆ. ನೀವೇನಂತೀರಿ?
@ಪ್ರೇಮ್@
ಬುಧವಾರ, ಅಕ್ಟೋಬರ್ 16, 2019
1268. ವಿನಂತಿ
ವಿನಂತಿ
ನನ್ನದೆನುವ ನಾನಂಬಿದ ದೇವರೇ
ನನ್ನ ಬೇಡಿಕೆಗಳ ನಿನ್ನ ಮುಂದಿರಿಸಿರುವೆ..
ತಥಾಸ್ತು ಅಂದುಬಿಡು ಸಾಕು
ನನ್ನ ಜೀವನವಿದೋ ಸಾರ್ಥಕ್ಯ...
ನನಗೇನೂ ದಯಪಾಲಿಸದಿರು ನೀನು
ಶಾಂತಿ, ಆರೋಗ್ಯ, ನೆಮ್ಮದಿಯ ಬದಲಾಗಿ!
ರಾಜಕಾರಿಣಿಗಳಿಗೆ ಕೊಡು ದುಡ್ಡು ತುಂಬಿದ ಮೂಟೆಗಳ
ಹಾಗಾದರೂ ಸಮಾಜಸೇವೆ ಮಾಡಲಿ..
ಕಣ್ಣಿಲ್ಲ, ಕೈಯಿಲ್ಲ, ಕಾಲಿಲ್ಲ, ಕಿವಿಯಲಿ ಶಕ್ತಿಯಿಲ್ಲದವರಿಹರು ಬಹಳ
ಕೊಡು ನೀನು ಜಗದಲಿ ದೇವನೇ ಅವರಿಗೆ ಸಹಾಯ ಮಾಡೊ ಮನಗಳ..
ಓದು ಬರಹ ತಿಳಿದ ಅಜ್ಞಾನಿಗಳಿಹರು ಜಗದಿ ಬಹಳ
ಬುದ್ಧಿ ನೀಡು ಸಲಹು ಅವರಿಗೆ ನಿತ್ಯ ಜೀವನದ ನಗೆಮೊಗದ ಕಾರ್ಯಗಳ..
ಮಗುವಿಗೂ ಹಿಂಸಿಸುತ, ಮಾನ ಕಳೆಯುವ ಗುಂಪಿಹುದು
ಕ್ಷಮಿಸದೆ ಸಾಯಿಸಿಬಿಡು ಅಂಥ ದುಷ್ಕರ್ಮಿಗಳನು..
ಮನೆ ಮಠ ಬಂಗಾರ ವಜ್ರ ವೈಡೂರ್ಯ ಬೇಕು
ತಲೆಮಾರಿಗೂ ಸಂಗ್ರಹಿಸಿಡುತ ಇತರರ ನೋವಿಗೆ ಕಾರಣವಾದವನ ವಧಿಸು..
ಸರ್ವರ ವದನದಲಿ ನಗುತರಿಸು,
ಸರ್ವರ ಸಂಕಷ್ಟ ಪರಿಹರಿಸು,
ದ್ವೇಷ ಮತ್ಸರವ ಓಡಿಸಿಬಿಡು
ಪ್ರೀತಿ, ಸಹಬಾಳ್ವೆಯ ಬೆಳೆಸಿಬಿಡು..
@ಪ್ರೇಮ್@
15.10.20೧9
1264. 2 ಹನಿಗಳು
[12/6/2018, 5:02 PM] ಪರ್ತಿನಾಯನ ಪನಿ
ಯಾನ್ ಲಾ ಈಲಾ ಒಂಜೆ
ಎಂಕ್ ಲಾ ನಿಕ್ ಲಾ ನಂಜೆ!!!!
ದಿಂಜಾವ ದಿನಲ ಬಂಜಿ..
ಬರಂದ್ ಬರಿಕ್ ಒಂಜಿಲಾ ಕಂಜಿ!!!
@ಪ್ರೇಮ್@
[12/7/2018, 7:50 PM]
ಕುಡುಕನ ಹನಿ
ನಾನೂ ಒಂದೆ ನೀನೂ ಒಂದೆ
ನನಗೂ ನಿನಗೂ ನಂಜೇ..
ತುಂಬಿಸುವೆವು ದಿನಾಲೂ ಹೊಟ್ಟೆ
ಬಳಿ ಸುಳಿಯದು ದನದ ಕರು ಕೂಡಾ..
1265.poems
[8/18/2018, 8:03 AM] @PREM@: Life
No positive no negative
Yet to receive both
Follow these two ever
Forget also must
Upliftment is also must
So life is positive and negative.
Addition of our friends,
Family, good, happiness
Most of the rewards
Recalling best moments
Unforgettable persons.
Godly people, their helps..
Subtraction is bad moments,
Sad failures, failed attempts
Cheaters being close friends
Loss of money, health, patience
Incedents which brought tears
Meaningless works of ours
Life is a game of football
Play it in a single ball
See, you shouldn't fall
One day the Lord will call
Let the feelings grow tall
Life should be ever memorable..
@Prem@
[8/31/2018, 11:06 PM] @PREM@: Who's what
When we watch
With witty warm
Wonder....
Wonderful or weak..
Worry or weary..
From west
or whatever ...
Which wind we
would want..
Wao work !
well will..
Why worry?
Wet weather..
who's way ..
Whole for wheat ..
When winding
Who worry..
Worth winning..
We'll wait..
Wear white wit..
Without words..
@prem@
[9/4/2018, 9:41 PM] @PREM@: ಮೊಬೈಲ್
ನನ್ನ ಮೊಬೈಲ್ ನನ್ನ ಗೆಳೆಯ
ಎಲ್ಲಿ ಹೋಗೆ ಬರುವುದು
ಚಿಕ್ಕ ಮೊಬೈಲು ದೊಡ್ಡದಾಗಿ
ಬ್ಯಾಗಿನಲ್ಲೆ ಇರುವುದು..
ವಾಟ್ಸಪ್ಪು ಫೇಸುಬುಕ್ಕು
ನೋಡದೆ ಇರಲಾರೆನು
ಮೆಸೆಂಜರ್ ಯೂ-ಟ್ಯೂಬ್
ಬಿಟ್ಟು ಬಿಡಲಾರೆನು..
ಮುಖ ನೋಡದ ಮಾತಾಡದ
ಗೆಳೆಯರನೇಕ ಇರುವರು
ಫೋಟೋ ನೋಡಿ ಕವನ ಓದಿ
ಕಮೆಂಟ್ ಅನೇಕ ಕೊಡುವರು..
ಕರೆಯು ಕಡಿಮೆ ಸಂದೇಶ ಕಡಿಮೆ
ದುಡಿದ ಹಣವು ವ್ಯರ್ಥ ನೆಟ್ಟಿಗೆ
ಸಮಯವೆಲ್ಲ ಹಾಳು ಮಾಡಿ
ರೋಗ ಬೆರಳು, ಕಣ್ಣಿಗೆ
ನಿದ್ದೆ ಬಿಟ್ಟು ರಮ್ಮಿ ಆಡೆ
ಮನವು ಕುಣಿದು ಅಳುವುದು..
ಸೊಟ್ಟ ನಿಂತು ಫೋಟೊ ತೆಗೆದು
ಮನವು ಖುಷಿಯ ಪಡುವುದು..
ನನ್ನ ಫೋನು ಅಮೂಲ್ಯ ಸಮಯವೆಲ್ಲ
ನುಂಗಿ ನೀರು ಕುಡಿವುದು
ಚಿಕ್ಕ ಫೋನು ಬೇಡ ಈಗ
ಕುಣಿವುದಿಲ್ಲ ತಕತಕ..
@ಪ್ರೇಮ್@
1266.ನಿನ್ನಂತಾಗಬಲ್ಲೆನೇ ನಾ
ನಿನ್ನಂತಾಗಬಲ್ಲೆನೇ ನಾನು
ನಿನ್ನಂತಾಗಬಲ್ಲೆನೇ ನಾನು
ಬೋಧಿಸತ್ವದ ಕೆಳಗಿನ ಬುದ್ಧನೇ...
ಸುಖ-ದುಃಖಗಳ ಸಮನಾಗಿ ಸ್ವೀಕರಿಸುತಲಿ
ಕಷ್ಟ-ಸಂತಸಗಳಲಿ ಮುಗುಳ್ನಗೆಯ ಬೀರುತಲಿ..
ನಿನ್ನೊಲುಮೆಯ ನನಗೆ ಹರಿಸು
ನಿನ್ನಾಶೀರ್ವಾದವ ನನ್ನೆಡೆ ಪಸರಿಸು
ನಿನ್ನಂತೆ ನಾನಾಗಲು ಸದಾ ಆಶೀರ್ವದಿಸು..
ಜಾತಿ-ಮತಗಳ ಹೊಡೆದೋಡಿಸೆ ಸಹಕರಿಸು..
ಮನದೊಳಗಿನ ದ್ವೇಷ ಕಸಗಳ ಗುಡಿಸೆ,
ಹೃದಯಗಳೊಳಗೆ ಪ್ರೀತಿ ಜ್ಯೋತಿಯ ಬೆಳಗಿಸೆ,
ಕರುಣೆ ಕಡಲಲಿ ಇತರರಿಗೆ ಸಹಕರಿಸೆ,
ಮನದಾಳದಿ ಪರರ ಒಳಿತಿಗೆ ಶ್ರಮಿಸೆ ...
ಪರಿಸರವ ಹಾಳುಮಾಡದೆ ಉಳಿಸಲು
ನೀರು-ನೆಲಕೆ ವಿಷವ ಸುರಿಯದಿರಲು,
ಪ್ಲಾಸ್ಟಿಕ್ ರಬ್ಬರ್ ಗಳ ಸುಡದಿರಲು
ರಾಸಾಯನಿಕಯುಕ್ತ ಆಹಾರ ತಿನ್ನದಿರಲು..
ಬುದ್ಧನೇ ನೀನೆನಗೆ ಶಕ್ತಿ ಕೊಡು,
ಮಹಾನುಭಾವನೇ ಯುಕ್ತಿ, ಭಕ್ತಿ ನೀಡು,
ಮುಂದಿನ ಭವಿಷ್ಯಕೆ ಭದ್ರ ಬುನಾದಿ ಕಟ್ಟಿ,
ನಿನ್ನಂತೆ ಅತ್ಯಾಸೆಯ ತೊರೆಸಿ ಕಾಪಾಡು..
@ಪ್ರೇಮ್@
1266.ನಿನ್ನಂತಾಗಬಲ್ಲೆನೇ ನಾ
ನಿನ್ನಂತಾಗಬಲ್ಲೆನೇ ನಾನು
ನಿನ್ನಂತಾಗಬಲ್ಲೆನೇ ನಾನು
ಬೋಧಿಸತ್ವದ ಕೆಳಗಿನ ಬುದ್ಧನೇ...
ಸುಖ-ದುಃಖಗಳ ಸಮನಾಗಿ ಸ್ವೀಕರಿಸುತಲಿ
ಕಷ್ಟ-ಸಂತಸಗಳಲಿ ಮುಗುಳ್ನಗೆಯ ಬೀರುತಲಿ..
ನಿನ್ನೊಲುಮೆಯ ನನಗೆ ಹರಿಸು
ನಿನ್ನಾಶೀರ್ವಾದವ ನನ್ನೆಡೆ ಪಸರಿಸು
ನಿನ್ನಂತೆ ನಾನಾಗಲು ಸದಾ ಆಶೀರ್ವದಿಸು..
ಜಾತಿ-ಮತಗಳ ಹೊಡೆದೋಡಿಸೆ ಸಹಕರಿಸು..
ಮನದೊಳಗಿನ ದ್ವೇಷ ಕಸಗಳ ಗುಡಿಸೆ,
ಹೃದಯಗಳೊಳಗೆ ಪ್ರೀತಿ ಜ್ಯೋತಿಯ ಬೆಳಗಿಸೆ,
ಕರುಣೆ ಕಡಲಲಿ ಇತರರಿಗೆ ಸಹಕರಿಸೆ,
ಮನದಾಳದಿ ಪರರ ಒಳಿತಿಗೆ ಶ್ರಮಿಸೆ ...
ಪರಿಸರವ ಹಾಳುಮಾಡದೆ ಉಳಿಸಲು
ನೀರು-ನೆಲಕೆ ವಿಷವ ಸುರಿಯದಿರಲು,
ಪ್ಲಾಸ್ಟಿಕ್ ರಬ್ಬರ್ ಗಳ ಸುಡದಿರಲು
ರಾಸಾಯನಿಕಯುಕ್ತ ಆಹಾರ ತಿನ್ನದಿರಲು..
ಬುದ್ಧನೇ ನೀನೆನಗೆ ಶಕ್ತಿ ಕೊಡು,
ಮಹಾನುಭಾವನೇ ಯುಕ್ತಿ, ಭಕ್ತಿ ನೀಡು,
ಮುಂದಿನ ಭವಿಷ್ಯಕೆ ಭದ್ರ ಬುನಾದಿ ಕಟ್ಟಿ,
ನಿನ್ನಂತೆ ಅತ್ಯಾಸೆಯ ತೊರೆಸಿ ಕಾಪಾಡು..
@ಪ್ರೇಮ್@
1263. ಭಾವಗೀತೆಗಳು
ನಲ್ಲೆಗೆ...
ಭಯವೇಕೆ ಓ ನಲ್ಲೆ ಇಂದು ನಿನಗೆ
ಬೇಗ ಬೇಗ ಸಾಗಿ ಬಾರೇ ನನ್ನ ಬಳಿಗೆ//
ನನ್ನ ಹೃದಯ ರಾಜ್ಯವಿದು ಎಂದೂ ನಿನಗೆ
ನನ್ನ ಜೀವ ಭಾವ ನಿಂದು ಕೊನೆಯವರೆಗೆ//
ಬಾರೆ ಬಾರೆ ಚೆಂದುಳ್ಳಿ ಚೆಲುವೆ ಬಾರೆ,
ತಾರೆ ತಾರೆ ನಿನ್ನ ಒಲವ ನನಗೆ ತಾರೆ//
ಅಂಜುವೆ ಏಕೆ ನನ್ನ ನಲ್ಲೆ ಒಲಿದು ಬಾರೆ,
ಬಿಂಕದ ಹೆಣ್ಣೆ,ಒಲವಿನ ಬೆಣ್ಣೆ ಮೊಗವ ತೋರೆ//
ಸೀರೆಯ ನೀರೆ, ಒಲವಿನ ಧಾರೆ ಬಾರೇ ಬೇಗ,
ಬಂದರೆ ನೀನು ಖುಷಿಯಲಿ ನಾನು ಹಾಕುವೆ ಲಾಗ//
ನನ್ನಯ ಜೀವ ಎಂದಿಗೂ ನೀನೆ,
ನನ್ನಯ ಜೀವನ ನಿನಗೇ ಜಾಣೆ//
@ಪ್ರೇಮ್@
[1/13/2018, 9:56 AM] @PREM@: ಪಯಣದೆಡೆಯಲಿ....
ಕಹಿಯ ಮರೆತು,ಸಿಹಿಯ ಮೆಲುಕು ಹಾಕುತ್ತಾ ಜೀವನ ಪಯಣದಲಿ
ನಾ ಸಾಗುತ್ತಿರುವೆ ಮುಂದಕ್ಕೆ//
ಬೇವು-ಬೆಲ್ಲಗಳ ಜೊತೆಯಲಿ ಸವಿಯುತ
ಹೂ -ಹಣ್ಣುಗಳ ಅದರಲಿ ಬೆರೆಸುತ
ನಾ ಸಾಗುತಿರುವೆ ಮುಂದಕ್ಕೆ//
ಅಲ್ಲಲ್ಲಿ ಕಸದ ರಾಶಿ, ಬೇಡವಾದುದ ಹಾಕಿಹರು ಏರಿಸಿ,
ಬೇಸರಿಸುವೆ, ಮಾಲಿನ್ಯ ತಡೆಯಲಾರೆನೆನಿಸಿ,
ನಾ ಸುಮ್ಮನೆ ಸಾಗುತಿರುವೆ ಮುಂದಕ್ಕೆ//
ಮರಗಳ ಕಡಿದು ಮಾರ್ಗವ ಜೋಡಿಸಿ,
ಗಿಡಗಳ ನೆಟ್ಟು,ಧೂಳನು ಹಬ್ಬಿಸಿ,ಅಸಹಾಯಕಿ ಎನಿಸಿ,
ನಾ ಸಾಗುತಿರುವೆ ಮುಂದಕ್ಕೆ//
ಪ್ಲಾಸ್ಟಿಕ್ ಸಾಮಾನು ಎಲ್ಲೆಡೆ ಎಸೆದು,
ಮೈಕಿನ ಮುಂದೆ ಸ್ವಚ್ಛತೆ ಭಾಷಣ ಬಿಗಿದು,
ಆ ಜನರ ನೋಡುತ್ತಾ ನಾ ಸಾಗುತಿರುವೆ ಮುಂದೆ....
@ಪ್ರೇಮ್@
[1/13/2018, 6:53 PM] @PREM@: ನೀನಿಲ್ಲದ ಕ್ಷಣ
ನೀನಿಲ್ಲದ ಕ್ಷಣವದು ಬೇಸರವೇ ಬರುವುದು
ಮನದ ಮೂಲೆಯಿಂದ ಎಲ್ಲ ನರಗಳಳುವುದು...
ಬೆಟ್ಟದಿಂದ ಬಾಗಿ ಬಿದ್ದ ಮರದ ಹಾಗೆ ಮನವಿದೆ,
ಪುಟ್ಟ ಕಂದ ತಾಯ ಕಳೆದು ಅಳುವಂತೆ ಅನಿಸಿದೆ...
ಸಂಜೆ ಸೂರ್ಯ ಮುಳುಗಿದಾಗ ಭುವಿಯಂತೆ ಮನ ಕತ್ತಲಾಗಿದೆ,
ಮಂಜು ಬಿದ್ದ ಗಿಡದ ಎಲೆಯು
ಕಾಣದಂತೆ ತನು ಮುಸುಕಿದೆ...
ನನ್ನ ಮನದ ದೀಪವಾರಿ ಬೆಳಕು ಮಾಯವಾಗಿದೆ
ತನ್ನತನವೆ ಮರೆತು ಹೋಗಿ ನಿನ್ನ ನೆನಪೆ ಕಾಡಿದೆ...
@ಪ್ರೇಮ್@
[1/23/2018, 11:46 PM] @PREM@: ನನ್ನ ಬದುಕ ದಾರಿಯಲಿ
ನಿನ್ನಾಗಮನದ ನಿರೀಕ್ಷೆಯಲಿ
ಕೈ ಹಿಡಿದು ನಡೆಸುವಲಿ
ಬರಲಾರೆಯ ಜೊತೆಯಲಿ//೧//
ಹೃದಯ ಗೂಡು ಕಾದಿದೆ
ಮನದ ಮಾತು ಬೇಡಿದೆ
ಆಗಮನವ ಬಯಸಿದೆ
ಬಾರೆಂದು ನಮಿಸಿದೆ//೨//
ನಿನ್ನ ಪ್ರೀತಿ ನನಗೆ ಬೇಕು
ನಿನ್ನ ನಗೆಯೆ ನನಗೆ ಸಾಕು
ನಿನ್ನ ಎದೆಯ ಜಾಗ ಸಿಕ್ಕು
ನಾನು ಅಲ್ಲೆ ನಿಲ್ಲ ಬೇಕು//೩//
ನನ್ನ ಬದುಕು ನಿನಗೆ ಮುಡಿಪು
ನೀನೆ ಬಂದು ನನ್ನ ಹುಡುಕು
ತಡವು ಏಕೆ ನನ್ನ ಚೆಲುವೆ
ನನ್ನ ಮನದಿ ನೀನೆ ಇರುವೆ//೪//
@ಪ್ರೇಮ್@
[2/5/2018, 10:05 PM] @PREM@: ಒಲವಿಗೆ ಕರೆ
ಮನಕೆ ಸಂತಸವ ನೀಡು ನನ್ನೊಲವೆ
ಬಳಿಯಲಿ ಬಂದೊದಗಿ
ಬತ್ತಿದ ದೀಪಕೆ ಹಾಕು ನೀ ಎಣ್ಣೆಯ
ಪ್ರೇಮದ ಮಳೆ ಸುರಿಸಿ...//ಪ//
ಮನದಲಿ ಇರುವ ಸುಡು ಬಿಸಿಲ
ದೂರ ನೀ ಮಾಡು
ಎದೆಯಲಿ ಪ್ರೀತಿಯ ಉತ್ಸಾಹ ತುಂಬುತ
ಹರುಷವ ನೀ ನೀಡು..//೧//
ಪ್ರೀತಿಯ ದೀಪವ ಮನದಲಿ ಬೆಳಗಿಸು
ನೀ ಇಂದೆ ಬಂದು ಬೇಗ..
ನಮ್ಮ ಎದೆಕದವ ತೆರೆಯುತ ಬೆಳೆಯುತ
ಸಾಗುವ ನಾವು ಈಗ...//೨//
ಸಂಗೀತ ನೃತ್ಯದಿ, ನರ್ತನ ರಾಗದಿ
ಬೆಳೆಸೋಣ ಪ್ರೀತಿಯನು
ನನ್ನ ಕಣ್ಣಿಗೆ ನೀನೆ ಕಾಡಿಗೆಯು
ಪ್ರೀತಿಯ ಹಂಚು ಬೇಗ...//೩//
ರಾತ್ರಿ- ರಾಣಿಯು ನೀನೆ ಆಗಿಹೆ,
ಹೆಣ್ಣೆಂಬ ಬೇಧವಿಲ್ಲ
ನೀನೆ ನಾನಾಗಿ, ನಾನೆ ನೀನಾಗಿ ಹಾಡು ಬಾ
@ಪ್ರೇಮ್@
[2/8/2018, 4:36 PM] @PREM@: 1. ಪ್ರಶ್ನೆ
ನನ್ನ ಕಣ್ಣ ಬಿಂಬದಲ್ಲಿ
ಮೂಡಿದವರು ಯಾರು?
ನನ್ನ ಮನದ ಪೊಟರೆಯಲ್ಲಿ
ನೆಲೆಸಿದವರು ಯಾರು!//
ಕನ್ನಡಿಯಲಿ ಇಣುಕುವಾಗ
ನನ್ನೊಳಗೆ ಕಂಡವರು ಯಾರು?
ನನ್ನೆದೆ ತೊಟ್ಟಿಲಲ್ಲಿ
ನಗೆ ಮೀಟಿದವರು ಯಾರು?//
ಇಷ್ಟ ಪಟ್ಟ ದೃಷ್ಠಿ ಬೊಟ್ಟ
ಕೊಡಿಸಿದವರು ಯಾರು?
ದಿಟ್ಟತನವ ಕಲಿಸಿಕೊಟ್ಟು
ಬೆಳೆಸಿದವರು ಯಾರು?//
ಕೆನ್ನೆ ತುಂಬ ಮುತ್ತು ಕೊಟ್ಟು
ತುತ್ತುಣಿಸಿದವರು ಯಾರು?
ಲಲ್ಲೆಗರೆದು, ಒಲ್ಲೆನೆನಲು
ಬಲವಿತ್ತು ಬಲಪಡಿಸಿದವರು ಯಾರು?//
ಅತ್ತು -ಕರೆದು ರಂಪವಾಡೆ
ಎತ್ತಿ ಕೊಂಡೋರ್ಯಾರು?
ಹೆತ್ತು-ಹೊತ್ತು ಸಾಕಿ-ಸಲಹಿ
ದೇವರಾದೋರ್ಯಾರು?
@ಪ್ರೇಮ್@
[8/20/2018, 6:29 PM] @PREM@: ಕವನ
ನಿಧಿಯಂತಿರುವ ಸಾಲುಗಳೇ
ಈ ಕವನದ ಪದ ಪುಂಜಗಳೇ
ಜೋಡಿಯಾಗಿ ಕುಳಿತ ಅಕ್ಷರಗಳೆ
ಗುಂಪಾಗಿ ನೆರೆದ ಸಾಲುಗಳೆ..
ಹೃದಯದಿ ಜನಿಸಿ ಬೆಳೆಯುತಲಿದ್ದು
ಮನದಲಿ ಗೂಡನು ಕಟ್ಟುತ ಬಂದು
ಬಾಯಿಗೆ ರಾಗದಿ ಹಾಡಲಿ ತಂದು
ಕಿವಿಗೆ ತಣ್ಣನೆ ತಂಪ ನೀಡಿತಿಂದು..
ಎದೆಯಾಳದ ಖುಷಿಯು ಹೊರಬಂತು
ಮನಮಲ್ಲಿಗೆಯ ಕಂಪನು ಹರಡಿತು
ಗಾಯಕನಿಂದ ಸೊಂಪಾಗಿ ಬೆಳೆಯಿತು
ಜನಮನರಲ್ಲಿ ಮೆಚ್ಚುಗೆ ಗಳಿಸಿತು..
ಮನಕಾನಂದವ ನೀಡಿದ ಗೀತೆ
ಜನಮನ ತಣಿಸಿದ ಸಂಪ್ರೀತೆ
ಮೆದುಳಲಿ ನಲಿದ ತನುಜಾತೆ
ಕೈಯನು ಹಿಡಿದು ನಡೆಸಿದ ಮಾತೆ..
@ಪ್ರೇಮ್@
1262.ಪಟಾಕಿ
ಪಟಾಕಿ
ಪಟಪಟ ಪಟಾಕಿ ಸಿಡಿಯಿತು ಭರದಿ,
ಮಕ್ಕಳ ಹಿಂಡು ಸೇರಿತು ಸಡಗರದಿ...1೧1
ರಂಗು ರಂಗಿನ ಮಾಲೆ ಮಾಲೆಯ
ತರತರ ಪಟಾಕಿ ಮಾಡಿವೆ ಧಾಳಿಯ...
ಬನ್ನಿರಿ ಹಚ್ಚುವ ಎಂದರು ಕೆಲವರು,
ಬಂದರು ಆಸೆಯ ಕಣ್ಣಿಂದ ಹಲವರು..1೨1
ತಾವೇ ಸುಟ್ಟರು ತಂದಿಹ ಪಟಾಕಿ,
ಅರ್ಥವಾಯಿತು ಸುಳ್ಳಿನ ಚಟಾಕಿ..
ಬೇಸರ ಛಾಯೆಯು ಕಂಡಿತು ಮನದಲಿ
ಮನವು ಮುದುಡಿತು ರೋಷದಲಿ1೩1
@ಪ್ರೇಮ್@
1261. ಬಾಳು
ಬಾಳು
ಬೊಗಸೆ ತುಂಬಾ ಪ್ರೀತಿ ತುಂಬಿ
ಕಾಯುತಿದ್ದೆ ನಿನ್ನ ನಾನು..
ಸೊಗಸು ಮನಕೆ ನಿನ್ನ ಇರವು
ಮನಕೆ ನೀನೆ ತಾನೇ ಏನು?
ತನುವು ಎರಡು ಮನವು ಒಂದೇ
ವಿಜಯ ಬದುಕ ದಾರಿಗೆ..
ಗುಣವು ಮುಖ್ಯ, ಇರಲು ಸತ್ಯ
ಧ್ವಜವು ಸ್ವಂತ ಬಾಳಿಗೆ..
ಮಾತೆಯನ್ನು ನೆನೆಯೆ ಸತತ
ಖಾತೆಯಿಹುದು ತುಂಬುತ..
ಭ್ರಾಂತಿ ಬಿಟ್ಟು ಹೋಗಬೇಕು
ಕ್ರಾಂತಿ ಮರೆತು ಸಾಗುತ..
ನಲಿವ ಮನಕೆ ರಾಗವಿರಲು
ಕುಣಿವ ನವಿಲಿನಂತೆಯೇ..
ಹೊಸತು ಚಿಗುರು, ಹಳೆಯ ಮರವು
ಬದುಕು ಕಲಿಕೆ ಕಂತೆಯೇ..
@ಪ್ರೇಮ್@
14.10.2019
1267. ಗಝಲ್-12
ಗಝಲ್
ಬಿಟ್ಟಿರಲಾರೆ ಮಧುಕನ್ನಿಕೆಯಂತೆ ನೆನೆವೆ ಹಗಲಿರುಳು
ಕಾಡುವೆ ಮದಿರೆಯೆ ಬೇಕೆನಿಸುವೆ ಹಗಲಿರುಳು..
ಸುರಸುಂದರ ದೇಹದ ಬಾಟಲಿ ನಿನಗಿಹುದು
ಪರಪುರದಲು ಬರಸೆಳೆದು ನೆಲೆಸಿರುವೆ ಹಗಲಿರುಳು.
ಹೀರ ಕುಳಿತೊಡೆ ಹಾಯಾಗಿ ಸಮಯವೆಂಬುದಿಲ್ಲ
ಬಾಯ ಬಳಿಯೆ ಘಮಘಮಿಸುವೆ ಹಗಲಿರುಳು..
ಪ್ರಪಂಚವನೇ ಮರೆಯುವ ಶಕ್ತಿ ನೀಡುತಲಿರುವೆ
ಸಂಸಾರ,ಮಡದಿಮಕ್ಕಳ ಹೊರದೂಡುವೆ ಹಗಲಿರುಳು
ಮಲಗಲೇನು ಹಾಸಿಗೆ ದಿಂಬೇ ಬೇಕೆನಲಾರೆ
ಚರಂಡಿಯಲೂ ತಣ್ಣಗೆ ನಿದ್ದೆಕೊಡುವೆ ಹಗಲಿರುಳು.
ನಗರವಾಗಲಿ ಹಳ್ಳಿಯಾಗಲಿ ಸರ್ವೆಡೆ ಸಮಾನವಲ್ಲವೇ?
ಕುಡುಕ ಸ್ನೇಹಿತರ ಒಂದುಗೂಡಿಸುವೆ ಹಗಲಿರುಳು.
ಅಮಲು ನಿನ್ನೊಳಿಹುದು ಕಮಲವನು ಹಿಡಿದಂತೆ
ರಕ್ಷಿಸಲು ಭಗ್ನ-ಪ್ರೇಮಿಗಳ ನೀನಿರುವೆ ಹಗಲಿರುಳು.
ಶನಿವಾರ, ಅಕ್ಟೋಬರ್ 12, 2019
1259. ಪ್ರಾರ್ಥನೆ
ಪ್ರಾರ್ಥನೆ
ಪರಿಪರಿಯ ಪದರದಲಿ
ಪರಿವರ್ತನೆಯ ಪರಿಸರದಲಿ
ಪರಮಸುಖದ ಬದುಕಿರಲಿ..
ಪರಾಕ್ರಮವ ಮೆರೆಯುತಲಿ
ಪರೋಪಕಾರಗೈಯ್ಯುತಲಿ
ಪಾರತಂತ್ರ್ಯವ ಬಿಡುತಲಿ..
ಪಂಜಿನಂಥ ಪರಸ್ಥಳದಲಿ
ಪುರದ ಪುಣ್ಯದುದಕದಲಿ
ಪರಮ ಪಾವನ ಪದಕ..
ಪೋಷಕ ಪಾವಕ ಪ್ರೀತಿ
ಪಾಣಿನಿ ಬರೆದ ರೀತಿ..
ಪುರುಷೋತ್ತಮ ಪ್ರತೀತಿ..
ಪರರ ಪಶು ಪದಾರ್ಥವ
ವಿಷದಂದದಿ ಪರಿಗಣಿಸುವ
ಪರಿಚಾರಕನ ಗುಣ ಪಾವನ..
@ಪ್ರೇಮ್@
12.10.2019