ಗುರುವಾರ, ಡಿಸೆಂಬರ್ 26, 2024

ಸಮರ್ಪಣೆ

ಸಮರ್ಪಣೆ

ಪದಗಳ ಗೂಡಲಿ ಸಮರ್ಪಣೆ ಪಕ್ಷಿಗೆ 
 ಗುಟುಕನು ನೀಡುತಿಹೆ 
ಮದವನು ಮರೆತು ಮಾನವ ಬದುಕ
ಹಾಡನು ಹಾಡುತಿಹೆ

ಶೋಷಣೆ ಮಾಡಿದ ಮನಗಳ ನಿತ್ಯ
ನೆನಪಿಸಿ ಬಾಳುತಲಿ 
ಪೋಷಣೆಗೈದು ಬೆಳೆಸಿದ ಮಾತೆಯ 
ವರವನು ಬೇಡುತಲಿ 

ಘೋಷಣೆ ಕೂಗುತ ಮತಗಳ ಬೇಡಿ
ಸಮಾಜವ ಮರೆಯುತ್ತ 
ಸಂರಕ್ಷಣೆ ಮಾಡುವ ಕಾರ್ಯವ 
ಮರೆತು
ಮೋಹದಿ ತೇಲುತ್ತ 

ಜನಗಳ ಶಾಪ ಬೇಡವೋ ಭೂಪ
ಸಹಾಯವ ನೆನೆಯೋಣ
ದೇಶದ ಒಳಿತಿಗೆ ಬಾಳನು ನೀಡಿ
ಕೃತಜ್ಞತೆ ನೀಡೋಣ//
@ಹನಿಬಿಂದು@
18.05.2024

ಅವನು



ಅವನು


ಬಳೆ ಮಾರಿ, ಗುಜಿರಿ ಹೆಕ್ಕಿ
ವಿಂಗಡಿಸಿ ರಾಶಿ ಹಾಕಿ
ಪಿನ್ನು, ಗೊಂಬೆ, ಪೇಪರ್
ಬಟ್ಟೆ -ಬರೆ , ಮೀನು-ಮಾಂಸ
ಪಾತ್ರೆ - ಪಗಡಿ ತಿಂಡಿ - ಗಿಂಡಿ
ಏನಾದರೂ ಸರಿ ಕೂಲಿ ಕಾರ್ಯ
ಆದರೂ ಆದೀತು ಬಾಳಿಗೆ!

ಮಾರಿ, ದುಡಿದು, ದಣಿದು
ಬೆವರಿಳಿಸಿ ಹಗಲು ಇರುಳು
ಕಾಯಕದಿ ದೇಹ ದಂಡಿಸಿ
ಎಲ್ಲರೂ ಮಾಡುವುದು
ಹೊಟ್ಟೆ ಬಟ್ಟೆ ಕುಟುಂಬಕ್ಕಾಗಿ

ದಂಧೆ ಕೊಲೆ ಕಳ್ಳತನ
ಪರ ನಾರಿಯ ಮಾನಭಂಗ
ನಾಯಿ ಬೆಕ್ಕಿನ ಪ್ರಾಣಭಂಗ 
ಎಲ್ಲವೂ ಯಾಕಾಗಿ ಜಗದಿ
ಕುಟುಂಬದ ಹಿತಕ್ಕಾಗಿ

ಪರರ ಹಿಂಸಿಸಿ ಭಂಜಿಸಿ
ಇತರರ ಕದ್ದು ಒದ್ದು ಬಿದ್ದು
ಪೆಟ್ಟು ತಿಂದು. ಕೊಟ್ಟು ಪಡೆದು
ಹಲವರಿಗೆ ಮನ ನೋಯಿಸಿ ಬೈದು
ತಾ ಮೂರು ಹೊತ್ತು ತಿಂದು 
ತಿನ್ನದೆಯೇ ಮನೆಗೆ ತಂದು
ಬಿಸಾಕಿ ಹೊಸಕಿ ಕೆದಕಿ
ತದುಕಿ ಹೇಗೋ ಬದುಕಿ

ಮತ್ತೇಕೆ  ಇದೆಲ್ಲಾ ಗೋಳು?
ಒಂಟಿ ಜೀವಕ್ಕೆ ಕಷ್ಟವೇ ಬಾಳು
ಎಲ್ಲವೂ ಹೊಟ್ಟೆಗಾಗಿ 
ಕುಟುಂಬದ ಜವಾಬ್ದಾರಿಗಾಗಿ
@ಹನಿಬಿಂದು@

ಪ್ರೇಮಾ ಆರ್ ಶೆಟ್ಟಿ 
ಆಂಗ್ಲ ಭಾಷಾ  ಶಿಕ್ಷಕರು 
ಸ ಪ ಪೂರ್ವ ಕಾಲೇಜು ಮೂಲ್ಕಿ 
ದಕ್ಷಿಣ ಕನ್ನಡ 574154
9901327499








ಉಪದ್ರ

ಹಾಗೆ ನೋಡಿದರೆ ದಸರಾ ಮೆರವಣಿಗೆಯಲ್ಲಿ ಪ್ರಾಣಿಗಳಿಗೂ ಉಪದ್ರವೇ.. ಆನೆ, ಕುದುರೆ...
ಪ್ರತಿದಿನ ಲೆಕ್ಕಾಚಾರ ಹಾಕಲು ಹೋದರೆ ಆಫೀಸ್ ವರೆಗೆ ಹೋಗುವುದು ಉಪದ್ರ, ಪುನಃ ಮನೆಯವರೆಗೆ ತಿರುಗಿ ಬರುವುದು ಉಪದ್ರ, ವರ್ಕ್ ಫ್ರಮ್ ಹೋಮ್ ಆದರೆ ಮನೆಯವರ ಉಪದ್ರ, ಸಂಬಳ ಬಾರದೆ ಇದ್ದರೆ ತಿಂಡಿ ತಿನಸಿಗೆ , ಮನೆ ದಿನಸಿ ತರಲು ಮನೆಯವರ ಉಪದ್ರ, ದಿನಕ್ಕೆ ಐದಾರು ಸಲ ಜೋರಾಗಿ ಕೇಳುವ ಬಾಂಗ್ ನ ಸದ್ದು ಕಿವಿಗೆ ಉಪದ್ರ, ನವರಾತ್ರಿಯಲ್ಲಿ ಬಡಿದುಕೊಂಡು ಬರುವ ವಿವಿಧ ವೇಷಗಳ ಶಬ್ಧ, ಕುಣಿತ ,ಹಣಕ್ಕಾಗಿ ಉಪದ್ರ, ದೇವಸ್ಥಾನ, ದೈವಸ್ಥಾನ ಕಟ್ಟಿ. ಪೂಜೆ. ಪುನರ್ ಪ್ರತಿಷ್ಠೆಗಾಗಿ ಹಣ ಸಂಗ್ರಹಣೆಗಾಗಿ ಬರುವವರ ಉಪದ್ರ, ಮನೆಗೆ ಬಂದರೆ ಹೆಂಡತಿ ಮಕ್ಕಳ ಉಪದ್ರ. ಆಫೀಸಿಗೆ ಹೋದರೆ ಮೇಲಧಿಕಾರಿಯ ಉಪದ್ರ, ಹೊರಗೆ ಹೋದರೆ ಟ್ರಾಫಿಕ್, ಸಾಲದವರ ಉಪದ್ರ.ಮನೆಯ ಒಳಗೆ ಸೊಳ್ಳೆಯ ಉಪದ್ರ ಬದುಕೇ ನಡೆವುದು ಈ ಉಪದ್ರದಿoದ..ಇತರರು ಹುಟ್ಟಿದ್ದೇ ಉಪದ್ರ ಕೊಡಲು..ಇದು ಸರ್ವರಿಗೂ ಅನ್ವಯ ಆಗುತ್ತದೆ ಅಲ್ಲವೇ?. ಏನು ಮಾಡೋದು? ಸಹನೆಯೇ ದೇವರು. ನೀವೇನಂತೀರಿ?
@ಹನಿಬಿಂದು@

ಅವನು



ಅವನು


ಬಳೆ ಮಾರಿ, ಗುಜಿರಿ ಹೆಕ್ಕಿ
ವಿಂಗಡಿಸಿ ರಾಶಿ ಹಾಕಿ
ಪಿನ್ನು, ಗೊಂಬೆ, ಪೇಪರ್
ಬಟ್ಟೆ -ಬರೆ , ಮೀನು-ಮಾಂಸ
ಪಾತ್ರೆ - ಪಗಡಿ ತಿಂಡಿ - ಗಿಂಡಿ
ಏನಾದರೂ ಸರಿ ಕೂಲಿ ಕಾರ್ಯ
ಆದರೂ ಆದೀತು ಬಾಳಿಗೆ!

ಮಾರಿ, ದುಡಿದು, ದಣಿದು
ಬೆವರಿಳಿಸಿ ಹಗಲು ಇರುಳು
ಕಾಯಕದಿ ದೇಹ ದಂಡಿಸಿ
ಎಲ್ಲರೂ ಮಾಡುವುದು
ಹೊಟ್ಟೆ ಬಟ್ಟೆ ಕುಟುಂಬಕ್ಕಾಗಿ

ದಂಧೆ ಕೊಲೆ ಕಳ್ಳತನ
ಪರ ನಾರಿಯ ಮಾನಭಂಗ
ನಾಯಿ ಬೆಕ್ಕಿನ ಪ್ರಾಣಭಂಗ 
ಎಲ್ಲವೂ ಯಾಕಾಗಿ ಜಗದಿ
ಕುಟುಂಬದ ಹಿತಕ್ಕಾಗಿ

ಪರರ ಹಿಂಸಿಸಿ ಭಂಜಿಸಿ
ಇತರರ ಕದ್ದು ಒದ್ದು ಬಿದ್ದು
ಪೆಟ್ಟು ತಿಂದು. ಕೊಟ್ಟು ಪಡೆದು
ಹಲವರಿಗೆ ಮನ ನೋಯಿಸಿ ಬೈದು
ತಾ ಮೂರು ಹೊತ್ತು ತಿಂದು 
ತಿನ್ನದೆಯೇ ಮನೆಗೆ ತಂದು
ಬಿಸಾಕಿ ಹೊಸಕಿ ಕೆದಕಿ
ತದುಕಿ ಹೇಗೋ ಬದುಕಿ

ಮತ್ತೇಕೆ  ಇದೆಲ್ಲಾ ಗೋಳು?
ಒಂಟಿ ಜೀವಕ್ಕೆ ಕಷ್ಟವೇ ಬಾಳು
ಎಲ್ಲವೂ ಹೊಟ್ಟೆಗಾಗಿ 
ಕುಟುಂಬದ ಜವಾಬ್ದಾರಿಗಾಗಿ
@ಹನಿಬಿಂದು@
14.10.2024

ಹನಿಗವನ

ಹನಿ 
ಅರ್ಹತೆಗೆ ತಕ್ಕಷ್ಟು
ಸ್ಥಾನಮಾನ ಸಿಕ್ಕಿದರೆ
ಅದು ಖುಷಿ!
ಅರ್ಹತೆ ಇದ್ದೂ
ಏನೂ ಸಿಗದೆ ಹೋದರೆ
ಮಂಡೆ ಬಿಸಿ!
ಅರ್ಹತೆ ಇಲ್ಲದವನಿಗೆ
ಆ ಸ್ಥಾನ ಇದ್ದರೆ
ಇತರರಿಗೆ ಮಸಿ!
@ಹನಿಬಿಂದು@
13.10.2024

ನಮಿಸೋಣ

ನಮಿಸೋಣ

ನಮಿಸೋಣ ದೇವರಂಥ ಮಾತಪಿತರ ಚರಣಗಳಿಗೆ
ಬಾಗೋಣ ತಾನುರಿದು ಬೆಳಕ ಕೊಡುವ ದೀಪಗಳಿಗೆ//

ಗೌರವವ ಕೊಟ್ಟು ಕಲಿಯಬೇಕು  ಹಿರಿಯರಿಂದ
ಸೌರಭವ ಬೀರುವ ಶಕ್ತಿ ಪಡೆದ ಗೆಲುವಿನಿಂದ
ಪೌರತ್ವ ಪಡೆದು ಬಾಳಿ ಬದುಕೋ ನಲಿವಿನಿಂದ 
ಹೌಹಾರಿ ಬೀಳದೆ, ತಾಳ್ಮೆ ಎಂಬ ಮಂತ್ರದಿಂದ//

ಕಪ್ಪು ಬಿಳುಪು ಎನ್ನದೆ, ಮೇಲು ಕೀಳು ತೊಡೆದು ಹಾಕಿ
ಸೊಪ್ಪು ಕಾಳು ತಿನ್ನುತ ಆರೋಗ್ಯದ ರಕ್ಷೆ ಮಾಡಿ
ಅಪ್ಪುಗೆಯೇ ಬದುಕಲ್ಲ, ಪ್ರೀತಿ ಸ್ನೇಹ ಮೊಳೆಯಲಿ 
ದಪ್ಪ ಸಣ್ಣ ಬಣ್ಣಕ್ಕಿಂತ ಜ್ಞಾನ ಹೆಚ್ಚು ಬೆಳೆಯಲಿ!//

ಸಂಸ್ಕೃತಿಯ ಉಳಿಸುತ ಗೆಳೆತನವ ಬೆಳೆಸುತ 
ಮಾತೃಭಾಷೆ ನಿತ್ಯವೂ  ಬಳಕೆಯನ್ನು ಮಾಡುತ
ನಾನು ನನ್ನ ನನ್ನದೇ ನನಗೆ ಎಂದು ಮೆರೆಯದೆ
ಸಹಾಯ ಮಾಡೊ ಮನುಜರ ಎಂದೂ ನಾವು ಮರೆಯದೆ//

ಬಾಗಿ ಬಳುಕಿ ಬಳ್ಳಿಯಂತೆ ಭಾವ ಬೀಜ ಬಿತ್ತುತ
ಬಾನವರೆಗೆ ಕೈಯ ಚಾಚೊ ಗುರಿಯ ಇರಿಸಿಕೊಳ್ಳುತ
ಭಾವ ಬೇಧ ಎಲ್ಲಾ ಮರೆತು, ಒಂದೇ ಎಂದು  ಸಾರುತ
ಬಾಕಿ ಉಳಿದ ದಿನಗಳನ್ನು ಭಯವ ಮರೆತು ಕಳೆಯುತ//

ದೈವೀ ಶಕ್ತಿ ಎಂಬ ಬಲದ ಪರಿಸರಕೆ ಬಾಗುತ
ಕೈಲಿ ಇರುವ ಸಮಯವನ್ನು  ಬುದ್ಧಿಯರಿತು ಬಳಸುತ 
ವೈದ್ಯ ಗುರು ಹಿರಿಯರಿಗೆ ನಮಸ್ಕಾರ ತಿಳಿಸುತ
ರೈಲಿನಂತ ಜೀವನದಿ ನೆಮ್ಮದಿಯ ಹುಡುಕುತ//
@ಹನಿಬಿಂದು@
07.10.2024












ಬುಧವಾರ, ಡಿಸೆಂಬರ್ 25, 2024

ರುಬಾಯಿ

ರುಬಾಯಿ 

ಯೋಚನೆ ಮಲ್ಪಡ ಯಾನುಲ್ಲೆ ನಿಕ್ಕ್
ಎಲ್ಲೆನೆ ಎಂಕ್‌ಲ ಈ ಒರ ತಿಕ್ಕ್
ರಡ್ಡ್ ಜನಲ ಒಟ್ಟುಗು ಸೇರ್‌ದ್
ಪಾತೆರ್ ತೂಕ ದುಂಬುದ ದಿನಕ್
@ಹನಿಬಿಂದು@
25.12.2024

ಭಾನುವಾರ, ಡಿಸೆಂಬರ್ 15, 2024

ಬರಹ

ಬರಹ

ಬರೆದೆನೆನುತ ಮೆರೆಯದಿರು 
ತಲೆಬರಹವ ನೀ ಮರೆಯದಿರು
ಹಣೆಬರಹವ ನಾ ಓದಲಾರೆ 
ಭಾವಗಳ ತೊಳಲಾಟ ನೀಗಲಾರೆ

ಬರಹ ಓದುವಂತಿರಲಿ
ನಗೆಯ ಉಕ್ಕಿಸೋ ಶಕ್ತಿ ಇರಲಿ
ಕಹಿಯ ಮರೆಸೋ ಮೌನವಿರಲಿ
ಸಿಹಿಯ ಕೊಡುವ ಪದಗಳಿರಲಿ

ಭಯದ ಗುಣವು ಓಡುತಿರಲಿ 
ಬಡವರನ್ನು ಎತ್ತುವಂತಿರಲಿ
ಬಡತನವನ್ನು ಅಳಿಸಿ ಬಿಡುವ
ಬಡಬಾಗ್ನಿಯು ತುಂಬಿರಲಿ

ಕಡು ಕೆಲಸದ ಕೆತ್ತನೆಯ
ನಡು ಬಿಸಿಲಿನ ಬೆವರ ಹನಿಯ
ಬಿಡುವಿಲ್ಲದ ಬಿದಾರದೊಳಗೆ
ಬೀಡು ಬಿಟ್ಟ ಹಸಿದ ಉದರ 
ಇದರ ಕೆಲಸ ಅನುರಣಿಸಲಿ
ಬರೆದ ಬರಹ ಮಾಸದಿರಲಿ

ತನುಮನವ ಬೆಸೆದಿರಲಿ
ಕನಸ ಗೂಡು ಮುಟ್ಟುತ್ತಿರಲಿ 
ಚಟ ಪಟ ಸಿಡಿಸೋ ಮಾತಿದು
ದುಡ್ಡಿನ ಗುಣ ತಿಳಿದಿರಲಿ

ಪರರ ಮೇಲೆ ಕರುಣೆ ಬರಲಿ
ಜಾತಿ ಮಾತವ ಕಿತ್ತೊಗೆಯಲಿ
ಮೇಲು ಕೀಳು ಹೊಡೆದೋಡಿಸಿ
ಮಾನವತೆಯ ಬೆಳೆಸಿಕೊಳಲಿ

ತರ ತರದ ಮದ್ದು ಇರಲಿ
ಪರ ಪರ ಕೆರೆಯೋನಿಗೂ ಸುಖವಿರಲಿ
ವರವನು ಕೊಡೋ  ದೇವನಿಗೆ ಕೇಳಿಸಲಿ
ಬರಹದುಸಿರು ಶಾಶ್ವತ ಇರಲಿ
@ಹನಿಬಿಂದು@
15.12. 2024

ಶುಕ್ರವಾರ, ಡಿಸೆಂಬರ್ 13, 2024

ಪಾನಿ ಕಬಿತೆ

ಪನಿ ಕಬಿತೆ 

ಬರೆಯರೆ ಪೋಯೆ
ಒಂಜಿ ಪನಿ ಕಬಿತೆ 
ಪೆನ್ನ್‌ಲಾ ಬೂಕುಲಾ
ಪತೊಂದು ಕುಲ್ಲಿಯೇ/

ಬರಿಟ್ ಇತ್ತಿನ 
ಪುಲ್ ಚಾ ಗುಚ್ಚಿಯೆ
ಅಮ್ಮನ ಬಾಯಿಡ್ದ್
ನೆರ್ಪಟ ಕೇನಿಯೆ// 
@ಹನಿಬಿಂದು@
13.12.2024

ಮಂಗಳವಾರ, ಡಿಸೆಂಬರ್ 10, 2024

ಅಂತರ್ಜಾಲ ಕ್ರಾಂತಿ

ಅಂತರ್ಜಾಲ ಕ್ರಾಂತಿ

2ಜಿ 3ಜಿ 4ಜಿ 5ಜಿ
ಇದು ಅಂತರ್ಜಾಲ ಜಗಯುಗವು
ಬೆರಳ ತುದಿಯಲಿ ವಿಶ್ವವ ಕಾಣುವ
 ವೈಜ್ಞಾನಿಕ ಕ್ರಾಂತಿಯ ಮುನ್ನುಡಿಯು

ಕ್ಷಣ ಕ್ಷಣ  ಕಲಿಕೆಯು ವೇಗದ ನಡಿಗೆಯು
ವಿಜ್ಞಾನದ ಆವಿಷ್ಕಾರ ಕೇಳಣ್ಣ
ಚಂದಿರ ಮಂಗಳ ಅಂಗಳದಲ್ಲಿ ಹುಡುಕಾಟವು ನಡೆದಿದೆ ಮಾನವನ
ಅಪ್ಡೇಟ್ ಆಗು ಇಲ್ಲದೆ ಹೋದರೆ ಔಟ್ಡೇಟ್ ಆಗುವೆ ನೋಡಣ್ಣ
@ಹನಿಬಿಂದು@
10.12.1980

ಸೋಮವಾರ, ಡಿಸೆಂಬರ್ 9, 2024

ಶಿಶು ಗೀತೆ

ಬಾರೋ ರಂಗ
ನೋಡು ಮಂಗ
ಬಂತು ಎಲ್ಲಿಂದ?

ತಾರೋ ಹಗ್ಗ
ಹಿಡಿದು ಜಗ್ಗಿ
ಆಡೋಣ ಜಗ್ಗಾಟ?

ನೋಡೋ ಇಣುಕಿ
ಬಾವಿಯ ಒಳಗೆ
ಆಳವು ಎಷ್ಟಂತ?

ಅಮ್ಮ ಬರಲು
ಕೋಲನು ತರಲು
ಓಡೋಣ ಇಬ್ರೂನೂ
ಹನಿ ಬಿಂದು
10.12.2024

ಐನೆಸಲ್

ಬದ್ಕ್

ಕಣ್ಣೀರ್ ಪಾಡಂದೆ ಬದ್ಕ್‌ದ ಕಡಲ್ ದಾಂಟೆರೆ ಬಂಙಂದ್
ಸನ್ನಿ ಮೀರ್ಯರೆ ಐಕ್ ಬೇನೆ ಏಪಲ ಪೋವಂದ್ 
ಏಪೊಗ್ಲಾ ಏರೆಡಲಾ ಸುಳ್ಳು ಪನಿಯರೆ ಆವಂದ್
ಏಸ ಕಟ್ಟೊಂದಾಂಡಲ ನಾಲ್ ಜನತ ಲೆಕ ಇಪ್ಪೊಡು
ಏರ್ಲಾ ನಂಬಯೆರ್ ಹರೀಶ್ಚಂದ್ರೆ ಮಾತ್ರ ಅಂಚಂದ್
@ಹನಿಬಿಂದು@
09.12.2024

ಭಾನುವಾರ, ಡಿಸೆಂಬರ್ 8, 2024

ಬದುಕು

ಬದುಕು

ಯಾಕೋ ಅರಿಯದು ಮನದ ತುಮುಲ
ಒಮ್ಮೆ ಗರಿಗೆದರಿ ಹಾರುವ ಹಂಬಲ
ಮತ್ತೊಮ್ಮೆ ರೆಕ್ಕೆ ಮುರಿದು ಬಿದ್ದ ಸಪ್ಪಳ
ಮಗದೊಮ್ಮೆ ಅತ್ತಿತ್ತಲಿಂದ ಸಹಾಯ, ಜನಬಲ

ಮೌನದಲ್ಲೇ ಜಗವ ಅರಿವ ಕಾತರ
ಮಾತಿನ ಚುಚ್ಚುವಿಕೆ ಹರಿತ ಆತುರ
ಇಂದಿಲ್ಲಿ ನಾಳೆ ಎಲ್ಲೋ ಅರಿತಿರುವಿರ
ಬದುಕಲಿಲ್ಲಿ ಹೋರಾಟ ನಿತ್ಯ ನಿರಂತರ

ಬಾನ ಬಯಲ ಸೀಮೆ ಮುಟ್ಟುವ ಬಯಕೆ
ದಾರಿ ಸವೆಸಲು ಕೂಡಾ ಸಾಗದ ದಿನಕೆ 
ಬೇಕು ಹಲವಾರು ಸಾವಿರ  ದಿನನಿತ್ಯ ಜನಕೆ 
ಸಹಿಸಲು , ಹೊಂದಾಣಿಕೆ ಕಷ್ಟ ಪರರ ಆಶಯಕೆ 

ನೀನೇನು ಸಣ್ಣ? ನಾನೆಲ್ಲಿ ಹಿರಿಯ?
ದುಡ್ಡಿದ್ದವ ದೊಡ್ಡಪ್ಪ  ಜೀವಿಸುವ  ನಿರ್ಭಯ!
ಬಡತನದ ಕೂಪದಿ ಬೆಂದ ಬದುಕು ಸಾಕು
ಮತ್ತಷ್ಟು ಮಗದೊಂದಿಷ್ಟು ಜನಕೆ ನಮ್ಮಿಂದಲೇ ಬೇಕು!!

ಕಿತ್ತುಕೊಂಡವನ ಬಗ್ಗೆ ದೇವರಿಗಿಲ್ಲ ಕೋಪ
ಕಳೆದುಕೊಂಡವನಿಗೂ ಇಲ್ಲ ನಿಜ ಕರುಣೆ ಅನುಕಂಪ
ಜೋರಾದರೆ ಬದುಕಿಯಾನು ಬುವಿಯಲ್ಲಿ , ಪಾಪದವನಲ್ಲ
ಹೊಡಿ ಬಡಿ ಕೊಲ್ಲು ಸಾಯಿಸು ಎಂದವಗೆ ಕಾಲವಿಲ್ಲಿ! 

 ಪುಣ್ಯ ಪಾಪಕ್ಕೆ ಹೆದರಿ ಓಡಿ ಹೋಗಿದೆ ಎಲ್ಲೋ
ನ್ಯಾಯ ಅನ್ಯಾಯದಿಂದ ತಲೆಮರೆಸಿ ಕೂತಿದೆ ಮೂಲೆಯಲಿ ಮತ್ತೆಲ್ಲೋ
ಹಣವಿದ್ಧವನ ಬೆನ್ನಲ್ಲಿ ಜೋತು ಬಿದ್ದಿದೆ ಉದ್ಧಾರ
ಬಡವನೆಂದೂ ಪರದಾಡುವ ನೇರ ದಾರಿ ಇಂದು  ಮಿಥ್ಯ

ಸಂಕಟ ನೋವು ಬೇಸರ ಬೇನೆಗಳ ಬಾಳು ವ್ಯರ್ಥ
ಸತ್ಯ ಹೇಳಿದರೆ ಸತ್ತು ಹೋಗುವ
ಅನ್ಯಾಯ ಮಾಡಿದವ ಅನ್ನ ತಿನ್ನುವ ಕಾಲವಿದು
ಕಾಲದ ಜೊತೆ ಓಡಲು ಕಲಿತರೆ ಬದುಕುವೆ
ಮೀನು ಹಾರಿತೆಂದು ಏಡಿ ಹಾರಲು ಹೋದರೆ 
ಮುರಿದೀತು ಕೈ ಕಾಲ ಬೆರಳು ತಕ್ಷಣವೇ

ಮತ್ತೆಲ್ಲಿಯ ನಾಳೆ ಮತ್ತೆಲ್ಲಿಯ ಕನಸು
ಮತ್ತೆಲ್ಲಿಯ ಅವನು ಮತ್ತೆಲ್ಲಿಯ ಸಹಾಯ
ಮತ್ಯಾರ ಅಭಯ. ಜಯ, ಕಾತರ, ನಂಬಿಕೆ?
ಮತ್ತಾರು ನಮ್ಮವರು, ಸಹಾಯಕರು, ಬೆಂಬಲಿಗರು

ನಾವೆಲ್ಲಾ ನಿತ್ಯ ಒಂಟಿಗಳಿಲ್ಲಿ ಧರೆಯಲಿ 
ಪರಮಾತ್ಮ ಆಡಿಸುವ ಆಟಗಾರ ಅಲ್ಲಿ
ಸಾವಿಗಾಗಿ ದಿನವೊಂದು ಬರಲಿದೆ ಇಲ್ಲಿ
ಅಲ್ಲಿವರೆಗೂ ಹಿಂದೆ ನೋಡದೆ ಓಡುತ್ತಾ ಗೆಲ್ಲಿ
@ಹನಿಬಿಂದು@
09.12.2024

ಶನಿವಾರ, ಡಿಸೆಂಬರ್ 7, 2024

ಕನ್ನಡ ಪದ

ಕನ್ನಡ ಪದ

ಬರಹಕೆ ಭಾಷೆಯು ಎಲ್ಲಿಹುದಣ್ಣ 
ಭಾವವೆ ಮುಖ್ಯ ಆಲ್ವೇನಣ್ಣ?
ಮನದ ಭಾವಗಳ ಹೆಕ್ಕಿ ತೆಗೆಯುತ 
ಸುಂದರ ಪದಗಳ ಮಾಲೆ ಪೋಣಿಸುತ

ಗರಗರ ತಿರುಗುವ ಬುಗರಿಯ ಅಂದದಿ 
ಶ್ರುತಿ ಲಯ ತಾಳಕೆ ಸರಿ ಹೊಂದಿಸುತ
ಕೃತಿ ರಚಿಸಿದ ಕವಿ ಗದ್ಗದಿತ
ತನ್ನೊಡಲ ಕವನದ ನಿಜ ಉದಿತ 

ಭಾವ ಬಳ್ಳಿಯ ಬೀಜ ಮೊಳೆಯಲು 
ಹಾಡಿನ ರೂಪದಿ ಹಣ್ಣಾಗಿ ಬೆಳೆಯಲು
ನಾಲ್ಕಾರು ಹೃದಯ ಓದಿ ತಣಿಯಲು
ಕವಿಯು ಸಾರ್ಥಕತೆ ಪಡೆದು ಬಾಳಲು

ಕನ್ನಡ ಭಾಷೆಯ ಸೊಗಡೆ ಮಧುರ
ಪದಗಳ ಆಟವು ಇಲ್ಲಿ ಹಗುರ
ಭಾವದ ಬಿಂಬವು ಬಹು ಸರಳ
ಸಾಹಿತ್ಯದ ಬಾಳ್ವಿಕೆ ಎಂದೂ ಅಮರ
@ಹನಿಬಿಂದು@
08.12.2024

ಶುಕ್ರವಾರ, ಡಿಸೆಂಬರ್ 6, 2024

ಪನಿ ಕಬಿತೆ

ಮರ್ಮಲ್

ಮೋಕೆದ ಮರ್ಮಲ್ 
ಕೈತಲ್ ಬತ್ತಲ್ 
ದಾದಂದ್ ಕೇನ್ನಗ
ದಾಲಿಜ್ಜಿ ಪಂಡಲ್
ಮಿಠಾಯಿ ಕಂದಿನ 
ರಡ್ಡ್  ಕೊರಿಯೆ
ಪಾರ್ ಪೋಯಲ್
ಯಾನ್ ಒರಿಯೆ 
@ಹನಿಬಿಂದು@
06.12.2024

ಸೋಮವಾರ, ಡಿಸೆಂಬರ್ 2, 2024

ಪ್ರಾರ್ಥನೆ

ಪರಶಿವ ನಿನ್ನನು ಪರಿ ಪರಿಯಲಿ ಬೇಡುವೆ
ಪರಿಶೀಲಿಸ ಬೇಡವೋ ನನ್ನ
ಪರದೆಯ ಹಿಂದೆ ಮುಂದೆಯೂ ಒಂದೇ
ಪರಪಂಚದಿ ನಾ ಒಂದೇ..

ಪರೀಕ್ಷೆಯ ಕಷ್ಟದಿ ಒಡ್ಡದಿರೂ ನೀ
ಪಾರ್ವತಿ ಪತಿಯೇ ಕೇಳು
ಪ್ರಸಾದ ನಿನ್ನದು ನಾ ಕಲಿಕಾರ್ಥಿ
ತಡೆ ನೀ ನನ್ನಯ ಬೀಳು

ಪ್ರಾರ್ಥನೆ ಮಾಡುವೆ ನಿತ್ಯವೂ ಹೀಗೆ 
ಪ್ರೀತಿಯಲಿ ನನ್ನ ಹರಸು
ಪ್ರೇರಕ ಶಕ್ತಿಯ ನೀಡಿ ಕಾಪಾಡುತ 
ಪ್ರೇರಣೆ ನೀಡುತ ಕಲಿಸು 

ಪುರದಲೂ ಸ್ವರದಲೂ ಪತ್ರಿಕೆಯಲ್ಲೂ
ಪ್ರಚಾರ ಪ್ರಿಯನು ನಾನಲ್ಲ
ಪರಿಸರ ಕಾಪಾಡೋ ಪರಿಚಯ ಮಾಡಿಸು 
ಪ್ರಕೃತಿಯೊಡನೆ ಬೆರೆಯ ಬೇಕಲ್ಲ..
@ಹನಿಬಿಂದು@
28.11.2024

ಚುಂಗುಡಿ

ಚುಂಗುಡಿ 

ನುಂಗು
ಗುಡ್ಡೆಗ್ ಪೋಯೆ ತುಚ್ಚಿಂಡ್ ಒಂಜಿ ನುಂಗು
ಅಮ್ಮ ಪಂಡೆರ್ ಗಾಯ ಬೇಗ ನುಂಗು
@ಹನಿಬಿಂದು@
03.12.2024