ಬುಧವಾರ, ಜನವರಿ 31, 2018

77. ನಾನು ಮೆಚ್ಚಿದ ಬೇಂದ್ರೆಯವರ ಕವನ

ನನ್ನ ನೆಚ್ಚಿನ ಬೇಂದ್ರೆಯವರ ಕವನ

ಬೇಂದ್ರೆಯವರ ಆಡುಭಾಷೆಯ,ಗ್ರಾಮೀಣ ಸೊಗಡಿನ,ನಾಡು-ನುಡಿಯ ಎಲ್ಲಾ ಕವನಗಳು ನನಗೆ ಅಚ್ಚುಮೆಚ್ಚೆಂದರೆ ತಪ್ಪಾಗಲಾರದು. 'ನಾರೀ ನಿನ್ನ ಮಾರೀ ಮ್ಯಾಗ ನಗೀ ನವಿಲ ಆಡತಿತ್ತ...' ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ..' ಇಲ್ಲಿನ ರೂಪಕಗಳು ಹೃನ್ಮನ ಸೆಳೆದರೆ, 'ಮೂಡಲ ಮನೆ...' ಪರಿಸರ,ನೇಸರನನ್ನು
ಸೂರ್ಯೋದಯವನ್ನು ವರ್ಣಿಸಿದ ಪರಿ ಅನುರಣನೀಯವಾಗಿದೆ.ನಾಕು ತಂತಿ ಪದಗಳ ಬಲೆಯಿಂದ ಅಂದವಾಗಿದೆ.'ನೀ ಹೀಂಗ ನೋಡಬ್ಯಾಡ ನನ್ನ...' ಕವಿ ತನ್ನ ಜೀವನದ ಸುಖ-ದುಃಖಗಳಲ್ಲೂ ಕವನವನ್ನೆ ಕಾಣುವ ಪರಿ ಉತ್ತಮವಾಗಿದೆ.
    ನನ್ನ ನೆಚ್ಚಿನ ಕವನದ ವಿಷಯ ಬಂದಾಗ ನಾನು 'ನಾನು ಬಡವಿ,ಆತ ಬಡವ ಒಲವೆ ನಮ್ಮ ಬದುಕು..
ಬಳಸಿಕೊಂಡೆವದನೆ ನಾವು
ಅದಕು,ಇದಕು ಎದಕು..' ಈ ಕವನ ಸಮಾಜದ ಸಾಮಾನ್ಯ ವರ್ಗದ ಜನರಿಗೆ ಮಹತ್ತರವಾದ ಸಂದೇಶವನ್ನು ನೀಡುವ ಪರಿ ಬಣ್ಣಿಸಲಸಾಧ್ಯ.
   ಗಂಡನೊಡನೆ ಚಿನ್ನ,ಸೀರೆಗಾಗಿ ಪೀಡಿಸಿ ಜಗಳವಾಡುವ ಮಹಿಳೆಯರಿಗಂತೂ ಹೊಂದಿಕೊಂಡು ಬದುಕುವ ಪಾಠ ಇದೆಂದರೆ ತಪ್ಪಾಗಲಾರದು.'ತೋಳುಗಳಿಗೆ ತೋಳಬಂದಿ,ಕೆನ್ನೆ ತುಂಬಾ ಮುತ್ತು!'
  ನಮ್ಮ ಮನೆ-ಮನದ ವಿಚಾರ ನಮ್ಮಲ್ಲೇ ಬಗೆಹರಿಸಿಕೊಂಡು ಕುಟುಂಬ ಒಂದಾಗಿ ಹಾಲು-ಜೇನಿನಂತೆ ಇರಬೇಕೆಂಬ ಕವಿಭಾವ ಅತ್ಯದ್ಭುತವಲ್ಲವೇ?
    ಈ ಜಗತ್ತು ಕವಿಯಿಂದ ಬಯಸುವುದು ಒಂದೊಳ್ಳೆ ಅರ್ಥಪೂರ್ಣ ಕವನ. ಅಲ್ಲಿನ ಶ್ರೀ ಸಾಮಾನ್ಯನ ಜೀವನವನ್ನು ಕವಿಯ ಕವನ ಬದಲಿಸಿ, ಒಳ್ಳೆಯ ಬದುಕಿಗೆ ಅವಕಾಶ ಕಲ್ಪಿಸಬೇಕು. ಅಷ್ಟು ಕಾರ್ಯ ಇಂಥ ಒಂದು ಕವನ ಮಾಡಿದ್ದೇ ಆದರೆ ಕವಿಗೂ ಖುಷಿ, ಓದುಗರಿಗೂ ಸಂತಸ. ಅಂತಹ ಕೆಲವೇ ಕೆಲವು ಕನ್ನಡ ಕವನಗಳಲ್ಲಿ ಬೇಂದ್ರೆಯವರ ಈ ಕವನ ಎಂದಿಗೂ ಅಜರಾಮರವಲ್ಲವೇ? ನೀವೇನಂತೀರಿ?
     @ಪ್ರೇಮ್@

95. ನಾನು ಮೆಚ್ಚಿದ ಬೇಂದ್ರೆಯವರ ಕವನ

ನನ್ನ ನೆಚ್ಚಿನ ಬೇಂದ್ರೆಯವರ ಕವನ

ಬೇಂದ್ರೆಯವರ ಆಡುಭಾಷೆಯ,ಗ್ರಾಮೀಣ ಸೊಗಡಿನ,ನಾಡು-ನುಡಿಯ ಎಲ್ಲಾ ಕವನಗಳು ನನಗೆ ಅಚ್ಚುಮೆಚ್ಚೆಂದರೆ ತಪ್ಪಾಗಲಾರದು. 'ನಾರೀ ನಿನ್ನ ಮಾರೀ ಮ್ಯಾಗ ನಗೀ ನವಿಲ ಆಡತಿತ್ತ...' ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ..' ಇಲ್ಲಿನ ರೂಪಕಗಳು ಹೃನ್ಮನ ಸೆಳೆದರೆ, 'ಮೂಡಲ ಮನೆ...' ಪರಿಸರ,ನೇಸರನನ್ನು
ಸೂರ್ಯೋದಯವನ್ನು ವರ್ಣಿಸಿದ ಪರಿ ಅನುರಣನೀಯವಾಗಿದೆ.ನಾಕು ತಂತಿ ಪದಗಳ ಬಲೆಯಿಂದ ಅಂದವಾಗಿದೆ.'ನೀ ಹೀಂಗ ನೋಡಬ್ಯಾಡ ನನ್ನ...' ಕವಿ ತನ್ನ ಜೀವನದ ಸುಖ-ದುಃಖಗಳಲ್ಲೂ ಕವನವನ್ನೆ ಕಾಣುವ ಪರಿ ಮ್ಳಿತವಾಗಿದೆ.
    ನನ್ನ ನೆಚ್ಚಿನ ಕವನದ ವಿಷಯ ಬಂದಾಗ ನಾನು 'ನಾನು ಬಡವಿ,ಆತ ಬಡವ ಒಲವೆ ನಮ್ಮ ಬದುಕು..
ಬಳಸಿಕೊಂಡೆವದನೆ ನಾವು
ಅದಕು,ಇದಕು ಎದಕು..' ಈ ಕವನ ಸಮಾಜದ ಸಾಮಾನ್ಯ ವರ್ಗದ ಜನರಿಗೆ ಮಹತ್ತರವಾದ ಸಂದೇಶವನ್ನು ನೀಡುವ ಪರಿ ಬಣ್ಣಿಸಲಸಾಧ್ಯ.
   ಗಂಡನೂಡನೆ ಚಿನ್ನ,ಸೀರೆಗಾಗಿ ಪೀಡಿಸಿ ಜಗಳವಾಡುವ ಮಹಿಳೆಯರಿಗಂತೂ ಹೊಂದಿಕೊಂಡು ಬದುಕುವ ಪಾಠ ಇದೆಂದರೆ ತಪ್ಪಾಗಲಾರದು.'ತೋಳುಗಳಿಗೆ ತೋಳಬಂದಿ,ಕೆನ್ನೆ ತುಂಬಾ ಮುತ್ತು!'
  ನಮ್ಮ ಮನೆ-ಮನದ ವಿಚಾರ ನಮ್ಮಲ್ಲೇ ಬಗೆಹರಿಸಿಕೊಂಡು ಕುಟುಂಬ ಒಂದಾಗಿ ಹಾಲು-ಜೇನಿನಂತೆ ಇರಬೇಕೆಂಬ ಕವಿಭಾವ ಅತ್ಯದ್ಭುತವಲ್ಲವೇ?
    ಈ ಜಗತ್ತು ಕವಿಯಿಂದ ಬಯಸುವುದು ಒಂದೊಳ್ಳೆ ಅರ್ಥಪೂರ್ಣ ಕವನ. ಅಲ್ಲಿನ ಶ್ರೀ ಸಾಮಾನ್ಯನ ಜೀವನವನ್ನು ಕವಿಯ ಕವನ ಬದಲಿಸಿ, ಒಳ್ಳೆಯ ಬದುಕಿಗೆ ಅವಕಾಶ ಕಲ್ಪಿಸಬೇಕು. ಅಷ್ಟು ಕಾರ್ಯ ಇಂಥ ಒಂದು ಕವನ ಮಾಡಿದ್ದೇ ಆದರೆ ಕವಿಗೂ ಖುಷಿ, ಓದುಗರಿಗೂ ಸಂತಸ. ಅಂತಹ ಕೆಲವೇ ಕೆಲವು ಕನ್ನಡ ಕವನಗಳಲ್ಲಿ ಬೇಂದ್ರೆಯವರ ಈ ಕವನ ಎಂದಿಗೂ ಅಜರಾಮರವಲ್ಲವೇ? ನೀವೇನಂತೀರಿ?
     @ಪ್ರೇಮ್@

78. ಭಾವಗೀತೆ- ಬರಲಾರೆಯಾ

ಬರಲಾರೆಯಾ

ನನ್ನ ಬದುಕ ದಾರಿಯಲಿ
ನಿನ್ನಾಗಮನದ ನಿರೀಕ್ಷೆಯಲಿ
ಕೈ ಹಿಡಿದು ನಡೆಸುವಲಿ
ಬರಲಾರೆಯ ಜೊತೆಯಲಿ//೧//

ಹೃದಯ ಗೂಡು ಕಾದಿದೆ
ಮನದ ಮಾತು ಬೇಡಿದೆ
ಆಗಮನವ ಬಯಸಿದೆ
ಬಾರೆಂದು ನಮಿಸಿದೆ//೨//

ನಿನ್ನ ಪ್ರೀತಿ ನನಗೆ ಬೇಕು
ನಿನ್ನ ನಗೆಯೆ ನನಗೆ ಸಾಕು
ನಿನ್ನ ಎದೆಯ ಜಾಗ ಸಿಕ್ಕು
ನಾನು ಅಲ್ಲೆ ನಿಲ್ಲ ಬೇಕು//೩//

ನನ್ನ ಬದುಕು ನಿನಗೆ ಮುಡಿಪು
ನೀನೆ ಬಂದು ನನ್ನ ಹುಡುಕು
ತಡವು ಏಕೆ ನನ್ನ ಚೆಲುವೆ
ನನ್ನ ಮನದಿ ನೀನೆ ಇರುವೆ//೪//
@ಪ್ರೇಮ್@

80. ಕವನ- ಜೀವನ ರಾಗ


*ಜೀವನ ರಾಗ*
ನನ್ನಮ್ಮನ ಉದರದಲಿ ನಾ ಉದಯಿಸಿದ
ಆ ಸುಮಧುರ ಸಮಯವೆ ನನ್ನೀ ಜೀವನ ಪಲ್ಲವಿ1೧1

ನನ್ನಪ್ಪ ಅಮ್ಮ ಒಟ್ಟು ಸೇರಿ ತಿನಿಸಿದ
ಆ ಮೊದಲ ಕೂಳು ನನ್ನ ಆರೋಗ್ಯ ಪಲ್ಲವಿ1೨1

ನನ್ನಕ್ಕ ಕೈ ಹಿಡಿದು ಮೊದಲ ಹೆಜ್ಜೆ ಇರಿಸಿದ ಕ್ಷಣ
ನನ್ನ ಜೀವ-ಪಯಣದ ಪಲ್ಲವಿ1೩1

ನನ್ನ ಮೊದಲ ಗುರು ನನ್ನ ಕೈ ಹಿಡಿದು
ಮೊದಲಕ್ಷರ ತೀಡಲಡಿಯಿಟ್ಟ ಗಳಿಗೆ
ನನ್ನ ಬದುಕಿನ ಕಲಿಕಾ ಪಲ್ಲವಿ1೪1

ನನ್ನಜ್ಜಿ ನನ್ನನು ಪಕ್ಕದಲಿ ಕೂರಿಸಿ,
ಚಿಕ್ಕ ಕಥೆಯೊಂದ ಹೇಳಿದ್ದು ನನ್ನ ಕವನದ ಪಲ್ಲವಿ1೫1

@ಪ್ರೇಮ್@

14. School

2. *School*

Students here and teachers there,
Pupils-teachers everywhere!
Every morning rush in busses,
Each evening run to houses! //

Shoes, ties, uniforms and books,
Papers, pens, pencils and scales!
Project reports, dictations and text books,
Exams, notes, homework and tests. //

Groups, prayer, Assembly and songs,
Yoga,  meditation, speech and debates,
Singing, dancing,  participating too,
Competitions held at other schools to go! //

Parents, Sdmc, teachers meet,
At noon Mid-day meals we eat!
Milk, books, uniforms, bicycles free,
Near our school we should plant tree! //

Come children,  you become students,
At school with your mates, picnic and trips,
Learn new things with easy practicals!
Here is the way to learn how the lives...//
@Prem @

14. ಕವನ That I am a student going to the school

Influenced by "off to outer space tomorrow morning " my poem...
Suggestions are accepted....

*That I am a student,* *going to the school*
Bag is on my back, filled with books
Surrounding my feet by neat shoes,
My body is covered by coloured uniforms,
That I am a student, going to the school. //

Note books seated in my bag which I have completed,
Read text books, but I won't feel load,
Actively participated project report completed..
That I am a student going to the school. //

My books are my wealth and treasure,
Our teachers give us much pleasure,
Learning brings us more and more power,
That I am a student, going to the school! //

Activities make us all brightest,
Sports and games bring body of healthiest,
Yoga,  kerathe, bicycle lift us to be powerful,
That I am a student, going to the school... //
@Prem @

76. ಲೇಖನ-ಜೈ ಜವಾನ್

ಜೈ ಜವಾನ್
ಸೇನೆಯಲ್ಲಿ ಕೆಲಸ ಮಾಡಿ ಕೆಲವಾರು ವರ್ಷಗಳ ಬಳಿಕ ನಿವೃತ್ತಿ ಪಡೆದು ಬಂದು ಶಿಕ್ಷಕರಾಗಿ ಕೆಲಸ ಮಾಡುತ್ತಿರುವ, ರೈತರಾಗಿರುವವರನ್ನು ಹಾಗೂ ಪೊಲೀಸ್ ಇಲಾಖೆಯಲ್ಲಿ ಇರುವ ಹಲವಾರು ಜನರನ್ನು ಸಂಧಿಸಿದ್ದೇನೆ. ಅವರ ಅನುಭವಗಳನ್ನು ಕೇಳಿ ಅಲ್ಪ ಸ್ವಲ್ಪ ತಿಳಿದುಕೊಂಡಿದ್ದೇನೆ ಅವರ ಕಷ್ಟಗಳನ್ನು! ಸೇನೆಯಲ್ಲೂ ಕೆಲಸಗಳಲ್ಲಿ ಮೇಲ್ಮಟ್ಟದ ಹಾಗೂ ಕೆಲಮಟ್ಟದ ಕೆಲಸಗಳಿವೆ, ಎಲ್ಲರೂ ಗಡಿ ಕಾಯುವವರೇ ಅಲ್ಲ, ಗನ್ಮೆನ್, ಆಪರೇಟರ್, ಆಫೀಸರ್, ಕಮಾಂಡೆಂಟ್, ಹೆಡ್,ಕುಕ್,ಡಾಕ್ಟರ್,ನರ್ಸ್, ಇಂಜಿನಿಯರ್ ಹೀಗೆ ಹಲವಾರು ಕೆಲಸಗಳ ಅವಕಾಶ ಇಲ್ಲಿರುವುದರಿಂದ ಮಹಿಳೆಯರಿಗೂ ದುಡಿಯಲು ಅವಕಾಶ ಇದೆ.
    ಸೇನೆಯಲ್ಲಿ ಗಡಿ ಕಾಯುವ ಸೇನಾನಿಗಳಿಗೆ ಸಮಯದ ಹಂಗಿಲ್ಲ,ರಾತ್ರಿ ಹಗಲೆಂಬುದಿಲ್ಲ, ನಿದ್ದೆ,ಊಟಕ್ಕೂ ಸಮಯಕ್ಕಾಗಿ ಕಾಯಲಿಕ್ಕಾಗುವುದಿಲ್ಲ! ಹಲವಾರು ಬಾರಿ ಊಟವನ್ನು ಎಲ್ಲೋ, ಯಾರಿಗೂ ತಿಳಿಯದಂತೆ ಹುದುಗಿಸಿ ಇಡಬೇಕು ಮಣ್ಣಿನ ಅಡಿಯಲ್ಲಿ!
    ಒಂದುವೇಳೆ ಅದು ಅಲ್ಲೇ ಬಾಕಿಯಾಗಿ ಮುಂದೆ ಸಾಗಿದರೆ ಆ ಹೊತ್ತಿನ ಊಟ ಇಲ್ಲ. ಬಂಕರ್ ಗಳೇನಾದರೂ ಹಾಳಾಗಿ ರಿಪೇರಿಗೆ ಬಂದರೆ ಅದನ್ನು ಸರಿಮಾಡುವವರಿಗೆ ಆಪರೇಷನ್ ಥಿಯೇಟರ್ ಒಳಗೆ ಹೊಕ್ಕಂತೆ!
     ಅರೆಕಾಲಿಕ ಪಡೆ,ಗಡಿ ಭದ್ರತಾ ಪಡೆಯವರ ಕಷ್ಟಗಳೂ ನೂರಾರು. ಸೇನಾ ನಾಯಕನ ಆಜ್ಞೆ ಪಾಲಿಸಲೇ ಬೇಕು. ಟ್ರೈನಿಂಗ್ ಕೂಡಾ ತುಂಬಾ ಕಷ್ಟ. ಎಷ್ಟೋ ಜನ ಟ್ರೈನಿಂಗ್ ಅರ್ಧದಲ್ಲೇ ಬಿಟ್ಟು ಓಡಿ ಹೋದವರಿದ್ದಾರೆ. ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಸೈನಿಕರು ಸದೃಢರಾಗಿದ್ದರೆ ಮಾತ್ರ ಸಾಧ್ಯ. 
    ಕೊರೆಯುವ ಹಿಮ,ಮಡುಗಟ್ಟುವ ಚಳಿಯಲ್ಲಿ  ಐಸ್ ನೀರ ಸ್ನಾನ! ಬೆನ್ನಲ್ಲಿ ಭಾರ, ಕೈಯಲ್ಲಿ ಕೋವಿ! ಕೊಟ್ಟ ಊಟ! ಸಂಸಾರ ಎಲ್ಲೋ. ದೇಶವೇ ಮನೆ, ನೆಲವೇ ಹಾಸಿಗೆ,ಆಕಾಶವೇ ಹೊದಿಕೆ! ಶಿಸ್ತು ಪಾಲನೆ! ಹಿರಿಯರ ಆಜ್ಞಾಧಾರಿ!
   ಒಟ್ಟಿನಲ್ಲಿ ತನ್ನ ಪೂರ್ತಿ ಜೀವನ ದೇಶದ ರಕ್ಷಣೆ,ಜನರ ರಕ್ಷಣೆಗಾಗಿ ಮೀಸಲು! ಇಂಥ ಮಹಾನ್ ಯೋಧರಿಗಾಗಿಯೇ ಇರುವ ಲಾಲ್ ಬಹಾದ್ದೂರರ ಘೋಷಣೆ "ಜೈ ಕಿಸಾನ್".
@ಪ್ರೇಮ್@

ಮಂಗಳವಾರ, ಜನವರಿ 30, 2018

82. ಇದಾಗಿತ್ತು ಸಂಗಾತಿ ಬಗೆಗೆ ನನ್ನ ಕನಸು

1.ನನ್ನ ಜೀವನ ಸಂಗಾತಿ ಬಗೆಗಿನ ಕನಸು

   "ಕನಸೆನ್ನುವುದು ನಿದ್ದೆ ಮಾಡಿದಾಗ ಬರುವಂಥದ್ದಲ್ಲ, ನಿಜವಾದ ಕನಸು ನಿದ್ದೆ ಮಾಡಲು ಬಿಡದೆ ಇರುವಂಥದ್ದು" ಇದು ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅನುಭಾವ್ಯ ನುಡಿ. ಪ್ರತಿಯೊಬ್ಬರ ಜೀವನದಲ್ಲಿ ಎರಡು ರೀತಿಯ ಕನಸುಗಳಿವೆ. ಒಂದು ರಾತ್ರಿ ಅರೆನಿದ್ರೆಯಲ್ಲಿ ಕಾಣುವ ಕನಸು, ಇನ್ನೊಂದು ಹಗಲು-ಇರುಳು ಮನಸಲ್ಲೆ ಕಾಣುವ ಕನಸು.
   ರಾತ್ರಿ ಮಲಗಿದಲ್ಲಿ ಬಾಳೆಹಣ್ಣು ಕದ್ದು ಸಿಕ್ಕಿ ಹಾಕಿಕೊಂಡು ಪೊಲೀಸ್ ಹಿಡಿದು ಕೋಳ ಹಾಕಿದ್ದೂ ಉಂಟು! ಅತ್ತು ಅತ್ತು ಕಣ್ಣು ಊದಿದ್ದು, ಮದುವೆಗೆ ಮೊದಲೆ ಮದುವೆಯೂ ಆಗಿದ್ದು, ಫಿಲಂ ನೋಡಿದ್ದು ಒಂದೆಡೆಯಾದರೆ ನಿಜ ಜೀವನದ ಬಾಳ ಸಂಗಾತಿ ಬಗೆಗಿನ ಕನಸೇ ಬೇರೆ.
    
     ನನ್ನನ್ನು ನಾನಾಗಿ ಸ್ವೀಕರಿಸಿ, ನನ್ನ ಮನಸನ್ನು ಅರ್ಥೈಸಿಕೊಂಡು, ನನ್ನ ಬದುಕನ್ನು ತನ್ನೊಡನೆ ಸಂಪೂರ್ಣವಾಗಿ ಹಂಚಿಕೊಳ್ಳುವ ಸಾಧಾರಣ, ನಿಜವಾದ ಅಕ್ಷರಸ್ಥ, ನನ್ನ ಬಾಳ ಸ್ನೇಹಿತನಾಗಿ ನನ್ನ ಭಾವನೆದಳನ್ನು ಗೌರವಿಸುವ ಸಂಗಾತಿ ಬೇಕೆಂಬುದು ನನ್ನ ಕನಸಾಗಿತ್ತು.
    ಅದರೊಂದಿಗೆ ನನ್ನ ಬಾಳ ಸಂಗಾತಿ ಉದ್ಯಮಿಯಾಗಿರಬೇಕು, ದಿನನಿತ್ಯ ಹೊರಡಿಸಿ,ಟೈ ಹಾಕಿ ಕಳುಹಿಸಿ ಕೊಡಬೇಕು, ನನ್ನ ಕವನಗಳನ್ನು ಓದಿ ಸಂತಸ ವ್ಯಕ್ತಪಡಿಸುವುದರೊಂದಿಗೆ ತಿದ್ದಿ  ಹೇಳಬೇಕು, ಆಗಾಗ ಹೊರಗೆ ಕರೆದುಕೊಂಡು ಹೋಗಿ ಸಣ್ಣ ಕೌಟುಂಬಿಕ ಪ್ರವಾಸ ಕರೆದುಕೊಂಡು ಹೋಗಬೇಕು ಮೊದಲಾದ ಸಣ್ಣಪುಟ್ಟ ಆಸೆಗಳು ನನ್ನ ಕನಸಾಗಿತ್ತು.
  @ಪ್ರೇಮ್@

81. ಭಾವಗೀತೆ-ಸೀತೆ ಕಾಣದಾದಾಗ ರಾಮನ ಭಾವ

ನನ್ನೊಲವೆ

ನನ್ನೊಲುಮೆಯ ಬಳುಕುವ ಲತೆ
ನನ್ನೊಡಲ ಪ್ರಿಯೆ ಸೀತೆ,
ನಿನ್ನ ಕಾಣದೆ ಪರಿತಪಿಸಿಹೆ ನಾ
ನಿನ್ನ ಕಾಣದೆ ಬಳಲಿ ಬೆಂಡಾದೆ ನಾ//

ನನ್ನೊಡಲ ಮರಿ ದುಂಬಿ ನೀ,
ನನ್ನುಸಿರ ಹಸಿರ ಸಿರಿ ನೀ,
ನೀನಿಲ್ಲದ ನಾನು ಒಂಟಿಯಾಗಿರುವೆ!
ನನ್ನ ಬಿಟ್ಟು ಎಲ್ಲಿ ಹೋಗಿರುವೆ?//

ಕಣ್ಣುಗಳು ಕಾದಿಹವು ನಿನ್ನ ಕಾಣಲು,
ಕರಗಳು ಬೇಡುತಿಹವು ನಿನ್ನಾಲಂಗಿಸಲು,
ನನ್ನರಸಿ ನೀ ಎಲ್ಲೆರುವೆ
ನಿನಗಾಗಿ ಮನದರಸಿ ಕಾಯುತಿರುವೆ//

ನಿನಗಾಗಿ ಮನದಿ ಹಂಬಲಿಸುತಲಿ,
ಬಚ್ಚಿಟ್ಟ ಭಾವಗಳ ಸಂತೈಸುತಲಿ,
ನಿನ್ನ ಕರೆಗಾಗಿ ಹಾತೊರೆಯುತಲಿ.
ಬಳಲಿ ಬೆಂಡಾಗಿಹೆನು ನಾನಿಲ್ಲಿ//
@ಪ್ರೇಮ್@

ಸೋಮವಾರ, ಜನವರಿ 29, 2018

85.. ದೇವರು

ದೇವರೆಂದರೆ ಕನ್ಫ್ಯೂಶನ್
   ಹಲವಾರು ದೇವರುಗಳು, ಸಾವಿರಾರು ದೇವಸ್ಥಾನಗಳು. ಯಾವ ದೇವರು ಗ್ರೇಟ್, ಯಾರನ್ನು ಹೆಚ್ಚು ಬೇಡಿಕೊಳ್ಳಬೇಕು,ಯಾವ ದಿನ ಯಾವ ದೇವರನ್ನು ಪೂಜಿಸಬೇಕು ಇತ್ಯಾದಿ ಕನ್ಫ್ಯೂಶನ್ ಗಳು.
   ಇದಲ್ಲದೇ ಗ್ರಹಗಳಲ್ಲಿ ನವಗ್ರಹ ಪೂಜೆ ಯಾವ ಗ್ರಹಕ್ಕೆ ಯಾವಾಗ ಸಲ್ಲಬೇಕು, ಯಾವ ಗ್ರಹಕ್ಕೆ ಯಾರು ಅಧಿಪತಿ, ಯಾವ ಗ್ರಹಕ್ಕೆ ಮೊದಲ ಪೂಜೆ, ಯಾವ ಗ್ರಹದ ದೋಷ ಹೆಚ್ಚು ಇದೆಲ್ಲ ಆಯೋಮಯ.
   ನಾಸ್ತಿಕತೆ ಸಾಧ್ಯವಿಲ್ಲ, ಕೆಲವೊಂದು ಪವಾಡ ನೋಡುವಾಗ ದೇವರಿದ್ದಾನೆ ಎಂದೆನಿಸುವುದು ಸಹಜ. ವಿಜ್ಞಾನಕ್ಕೆ ನಿಲುಕದ ಅದೆಷ್ಟೋ ವಿಚಾರಗಳು ದೇವತಾ ಪ್ರಾರ್ಥನೆಯಿಂದ ಸರಿಯಾದ ಘಟನೆಗಳಿವೆ. ಮಾನವನ ನಂಬಿಕೆ ತಳವೂರಿದೆ.
  ಕೆಲ ಮಹಾಕಾಳೀ ಪೂಜಾರಿಗಳು ತನ್ನ ಕೆಲಸ ಪೂರೈಸಲು ಕಾಳೀ ಮಾತೆಗೆ ಬಲಿ ಕೊಟ್ಟು ಸಮಯ ಕೊಡುತ್ತಾರೆ, ದೈವಾರಾಧಕರು ದೈವಕ್ಕೆ ಕೋಲ ಕೊಟ್ಟು, ಬಲಿ ಕೊಟ್ಟು, ಪೂಜೆ ಮಾಡಿ ತನಗೆ ಹೀಗೆ ಆಗಬೇಕೆಂದು ಬೇಡಿಕೊಳ್ಳುತ್ತಾರೆ. ನಾನಿನಗೆ ಇಂಥ ಪೂಜೆ ಕೊಡುವೆ,ನನ್ನ ಈ ಕೆಲಸ ನೆರವೇರಬೇಕೆಂದು ನಾವು ಕೇಳಿಕೊಂಡು, ಅದು ಈಡೇರಿ ಹೇಳಿದ ಮಾತು ತಪ್ಪಿದರೆ ಮತ್ತೆ ಶಿಕ್ಷೆಯೇ? ಹಾಗಾದರೆ ದೇವರು ನಮ್ಮಿಂದ ಎಕ್ಸ್ಪೆಕ್ಟ್ ಮಾಡ್ತಾರೆಯೇ? ದೇವನಿಗೆ ಧನಕನಕ ಬೇಕೇ?
  ಸಿರಿವಂತನಿಗೆ ಎದುರು ಕುಳ್ಳಿರಿಸಿ ಪೂಜೆಯೇ? ಬೇಸರವೆನಿಸುತ್ತದೆ!ದೇವರಿಗೂ ಮೇಲು-ಕೀಳಿದೆಯೇ? ದೇವರಿಗೆ ಶಕ್ತಿ ಕೊಡಲು ದೈವಗಳು ಬೇಕೆ? ಕೆಲವು ದೇವರು ಸಸ್ಯಾಹಾರಿಗಳಾದರೆ ಇನ್ನು ಕೆಲವರಿಗೆ ರಕ್ತಾಹಾರ ಬೇಕು!
ಒಟ್ಟಿನಲ್ಲಿ 1001 ದೇವರು,ದೈವಗಳು,ಹೆಸರುಗಳು .. ಕನ್ಫ್ಯೂಶನ್ನೋ ಕನ್ಫ್ಯೂಶನ್!
@ಪ್ರೇಮ್@

94. ಲೇಖನ -ದೇವರು

ದೇವರೆಂದರೆ ಕನ್ಫ್ಯೂಶನ್
   ಹಲವಾರು ದೇವರುಗಳು, ಸಾವಿರಾರು ದೇವಸ್ಥಾನಗಳು. ಯಾವ ದೇವರು ಗ್ರೇಟ್, ಯಾರನ್ನು ಹೆಚ್ಚು ಬೇಡಿಕೊಳ್ಳಬೇಕು,ಯಾವ ದಿನ ಯಾವ ದೇವರನ್ನು ಪೂಜಿಸಬೇಕು ಇತ್ಯಾದಿ ಕನ್ಫ್ಯೂಶನ್ ಗಳು.
   ಇದಲ್ಲದೇ ಗ್ರಹಗಳಲ್ಲಿ ನವಗ್ರಹ ಪೂಜೆ ಯಾವ ಗ್ರಹಕ್ಕೆ ಯಾವಾಗ ಸಲ್ಲಬೇಕು, ಯಾವ ಗ್ರಹಕ್ಕೆ ಯಾರು ಅಧಿಪತಿ, ಯಾವ ಗ್ರಹಕ್ಕೆ ಮೊದಲ ಪೂಜೆ, ಯಾವ ಗ್ರಹದ ದೋಷ ಹೆಚ್ಚು ಇದೆಲ್ಲ ಆಯೋಮಯ.
   ನಾಸ್ತಿಕತೆ ಸಾಧ್ಯವಿಲ್ಲ, ಕೆಲವೊಂದು ಪವಾಡ ನೋಡುವಾಗ ದೇವರಿದ್ದಾನೆ ಎಂದೆನಿಸುವುದು ಸಹಜ. ವಿಜ್ಞಾನಕ್ಕೆ ನಿಲುಕದ ಅದೆಷ್ಟೋ ವಿಚಾರಗಳು ದೇವತಾ ಪ್ರಾರ್ಥನೆಯಿಂದ ಸರಿಯಾದ ಘಟನೆಗಳಿವೆ. ಮಾನವನ ನಂಬಿಕೆ ತಳವೂರಿದೆ.
  ಕೆಲ ಮಹಾಕಾಳೀ ಪೂಜಾರಿಗಳು ತನ್ನ ಕೆಲಸ ಪೂರೈಸಲು ಕಾಳೀ ಮಾತೆಗೆ ಬಲಿ ಕೊಟ್ಟು ಸಮಯ ಕೊಡುತ್ತಾರೆ, ದೈವಾರಾಧಕರು ದೈವಕ್ಕೆ ಕೋಲ ಕೊಟ್ಟು, ಬಲಿ ಕೊಟ್ಟು, ಪೂಜೆ ಮಾಡಿ ತನಗೆ ಹೀಗೆ ಆಗಬೇಕೆಂದು ಬೇಡಿಕೊಳ್ಳುತ್ತಾರೆ. ನಾನಿನಗೆ ಇಂಥ ಪೂಜೆ ಕೊಡುವೆ,ನನ್ನ ಈ ಕೆಲಸ ನೆರವೇರಬೇಕೆಂದು ನಾವು ಕೇಳಿಕೊಂಡು, ಅದು ಈಡೇರಿ ಹೇಳಿದ ಮಾತು ತಪ್ಪಿದರೆ ಮತ್ತೆ ಶಿಕ್ಷೆಯೇ? ಹಾಗಾದರೆ ದೇವರು ನಮ್ಮಿಂದ ಎಕ್ಸ್ಪೆಕ್ಟ್ ಮಾಡ್ತಾರೆಯೇ? ದೇವನಿಗೆ ಧನಕನಕ ಬೇಕೇ?
  ಸಿರಿವಂತನಿಗೆ ಎದುರು ಕುಳ್ಳಿರಿಸಿ ಪೂಜೆಯೇ? ಬೇಸರವೆನಿಸುತ್ತದೆ!ದೇವರಿಗೂ ಮೇಲು-ಕೀಳಿದೆಯೇ? ದೇವರಿಗೆ ಶಕ್ತಿ ಕೊಡಲು ದೈವಗಳು ಬೇಕೆ? ಕೆಲವು ದೇವರು ಸಸ್ಯಾಹಾರಿಗಳಾದರೆ ಇನ್ನು ಕೆಲವರಿಗೆ ರಕ್ತಾಹಾರ ಬೇಕು!
ಒಟ್ಟಿನಲ್ಲಿ 1001 ದೇವರು,ದೈವಗಳು,ಹೆಸರುಗಳು .. ಕನ್ಫ್ಯೂಶನ್ನೋ ಕನ್ಫ್ಯೂಶನ್!
@ಪ್ರೇಮ್@

ಶುಕ್ರವಾರ, ಜನವರಿ 26, 2018

83. ಕ್ರಾಂತಿಗೀತೆ-ಬಂತು ನಮಗೆ ಸ್ವಾತಂತ್ರ್ಯ

1.ಸ್ವಾತಂತ್ರ್ಯ

ನಮ್ಮೆಲ್ಲ ನಾಯಕರು ಹಿರಿಯರು ಹೋರಾಡಿ
ಬಂತು ನಮಗೆ ಸ್ವಾತಂತ್ರ್ಯ
ಹಿರಿಯರು ಕಿರಿಯರು ಜತೆಗೂಡಿ
ಬಂತು ನಮಗೆ ಸ್ವಾತಂತ್ರ್ಯ//

ಹಾಳಾದ ಕಟ್ಟಡಗಳ ಕಟ್ಟಲು,
ಹಲವಾರು ವಿದ್ಯಾಲಯಗಳ ತೆರೆಯಲು,
ದಟ್ಟಡವಿಯ ಕಡಿಯಲು
ಬಂತು ನಮಗೆ ಸ್ವಾತಂತ್ರ್ಯ//

ಜಾತಿ ಮತಗಳ ನಡುವೆ ಹೋರಾಡಲು,
ರಾಜ್ಯ-ರಾಜ್ಯಗಳ ನಡುವೆ ಕಿತ್ತಾಡಲು,
ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡಲು
ಬಂತು ನಮಗೆ ಸ್ವಾತಂತ್ರ್ಯ//

ನಮ್ಮದೇ ಆದ ಸಂಘ ಕಟ್ಟಲು,
ಗಲ್ಲಿ ಗಲ್ಲಿಯಲಿ ಮತ ಕೇಳಲು,
ಮತ ಯಾಚಿಸಿ ಪೊಳ್ಳು ಭರವಸೆ ಕೊಡಲು
ಬಂತು ನಮಗೆ ಸ್ವಾತಂತ್ರ್ಯ//

ಹೊಸ ಹೊಸ ಪಕ್ಷ ಕಟ್ಟಲು,
ಮತ ಹಾಕಲು,ಹಾಕದೆ ಇರಲು,
ಅಲ್ಲಲ್ಲಿ ಬಂದ್ ಮಾಡಿ ಸಿಕ್ಕಿದ್ದ ಸುಡಲು
ಬಂತು ನಮಗೆ ಸ್ವಾತಂತ್ರ್ಯ//
@ಪ್ರೇಮ್@
*We have got the freedom.*

All our elders, leaders, seniors and juniors struggled a lot to get the freedom.

We have got the freedom, For reconstructing,
The inane buildings,
For opening uncountable institutions,
For demolishing the beautiful and densely forests.

We have got the freedom,
For struggling for speciation,
For war between the states,
For kidnapping the women.

We have got the freedom,
For creating our own groups,
For religionise the people,
For cutting the woods on the name of disjunctive conjunction of roads.

We have got the freedom,
For creating the caucus,
For voting, not voting,
For strike and burning something which is visible.

✍️translated by Hareesh sir




87. ಪ್ರೇಮ ಗೀತೆ

1. ನಾನು-ನೀನು

ನಾನು ನೀನು ಇಂದೂ ಎಂದೂ
ಒಂದೆ ಎಂಬಂತಾಗಿದೆ,
ನನ್ನ ಮನವು ನಿನ್ನ ಮನವು
ಒಲವ ಹಾಡ ಹಾಡಿದೆ//

ನೀನು ಇರದೆ ನಾನು ಇಲ್ಲ
ಎಂಬ ಭಾವ ಮೂಡಿದೆ,
ನಿನ್ನ ನಾನು ನನ್ನ ನೀನು
ಒಲಿದು ಒಂದಾಗಿ ಆಗಿದೆ//

ನನ್ನ ಎದೆಯ ಪೊಟರೆಯಲ್ಲಿ
ನೀನು ಗೂಡು ಕಟ್ಟಿದೆ,
ನನ್ನ ಬಾಳ ಪಯಣದಲ್ಲಿ
ನೀನು ಜೊತೆಗೆ ಸೇರಿದೆ//

ನನ್ನ ಹಾಡ ಪಲ್ಲವಿಗೆ
ನೀನು ದನಿಯ ನೀಡಿದೆ,
ನನ್ನ ಬದುಕ  ಹೆಜ್ಜೆ ಮೇಲೆ
ನಿನ್ನ ಬಾಳು ಇರಿಸಿದೆ//
@ಪ್ರೇಮ್@

ಬುಧವಾರ, ಜನವರಿ 24, 2018

88. ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ-12

ಧೀರ ಮಹಿಳೆಯಲ್ಲವೇ ಈಕೆ?

ಸಾಧಾರಣವಾಗಿ ಮಹಿಳೆಯರೆಲ್ಲ ತಮಗಿರುವ ಕಷ್ಟಗಳ ಬಗ್ಗೆ ಅಕ್ಕ-ಪಕ್ಕದವರಲ್ಲಿ, ತುಂಬಾ ಆತ್ಮೀಯರಾದವರಲ್ಲಿ,ಬಂಧುಗಳಲ್ಲಿ ಹಾಗೂ ಪರಿಹಾರ ಸಿಗಬಹುದೆಂಬ ಭರವಸೆಯಿರುವ ಸ್ವಾಮೀಜಿ,ಸಾಧು-ಸಂತರಲ್ಲಿ ಹೇಳಿಕೊಂಡು ಅಳುವುದನ್ನು ನಾವು ನೋಡಿದ್ದೇವೆ. ನಾನು ಅವಲೋಕನ ಮಾಡಿದಂತೆ, ಮದುವೆಯಾದ ಬಳಿಕ 'ನನಗೇನೂ ಕಷ್ಟಗಳೇ ಇಲ್ಲ, ನಾನು ತುಂಬಾ ಚೆನ್ನಾಗಿದ್ದೇನೆ' ಎನ್ನುವ ಮಹಿಳೆಯರು ಒಂದೆರಡು ಶೇಕಡಾ ಇರಬಹುದಷ್ಟೇ. ಇನ್ನುಳಿದ 98% ರಷ್ಟು ಮಹಿಳೆಯರು ಕಷ್ಟಗಳನ್ನು ಅನುಭವಿಸಿಕೊಂಡು, ಎದುರಿಸುತ್ತಾ, ಅವುಗಳೊಡನೆ ಹೊಂದಾಣಿಕೆ ಮಾಡಿಕೊಂಡು, ಸೆರಗಿನಲ್ಲಿ ಕಣ್ಣು ,ಮೂಗೊರೆಸಿಕೊಂಡು ಮಕ್ಕಳಿಗಾಗಿ ಬದುಕುತ್ತಾರೆ.

     ಒಂದೆರಡು ಶೇಕಡಾ ಮಹಿಳೆಯರಿದ್ದಾರೆ, ಅವರು ದಿಟ್ಟತನದಿಂದ ತಮಗಿರುವ ಕಷ್ಟಗಳನ್ನೆಲ್ಲಾ ಎದುರಿಸಿ,ತಾನೂ ಏನಾದರೂ ಸಾಧಿಸಬೇಕೆಂದು ಪಣತೊಟ್ಟು ಕೆಲಸ ಮಾಡುವವರು ಇವರು. ನಾನು ನೋಡಿದ ಅಂಥ ಮಹಿಳೆಯರಲ್ಲಿ ಸಾಮಾನ್ಯಾತಿಸಾಮಾನ್ಯ ಮಹಿಳೆ ಸಂಧ್ಯಾ ಒಬ್ಬರು. ಹೆಚ್ಚಿನ ಮಹಿಳೆಯರಂತೆ ಇವರೂ ಕೂಡಾ ಗೃಹಿಣಿ. ಮೂರು ತಿಂಗಳ ಕಾಲ ಆಸ್ಪತ್ರೆಯ ಬೆಡ್ ನ ಮೇಲೆ ಜೀವಚ್ಛವದಂತೆ ಬಿದ್ದುಕೊಂಡು, ಆ ಕೋಮಾ ಸ್ಥಿತಿಯಿಂದ ಈಗ ಎದ್ದು ಬಂದು ತನ್ನೆರಡು ಮಕ್ಕಳನ್ನು ನೋಡಿಕೊಂಡು ಮನೆ ನಿಭಾಯಿಸುತ್ತಿರುವ ದಿಟ್ಟ ಮಹಿಳೆ!

      ತನ್ನ ಅತ್ತಿಗೆ ನಾದಿನಿಯರು ಸೇರಿಕೊಂಡು ತಮ್ಮ ಅಮ್ಮ ತನ್ನ ಸೊಸೆಯನ್ನು ಚೆನ್ನಾಗಿ ನೋಡಿಕೊಂಡಿರುವುದನ್ನು ಸಹಿಸಲಾಗದೆ ಏನೇನೋ ಮಾಡಿ,ಕೊನೆಗೆ ಕ್ಷುಲ್ಲಕ ಕಾರಣಕ್ಕೆ ತನ್ನನ್ನು ಮನೆಯಿಂದ ಹೊರ ಹಾಕಿದರೂ ಲೆಕ್ಕಿಸದೆ ಬದುಕಿದ ಮಹಿಳೆ ಈಕೆ!

    ಅಕ್ಕ -ತಂಗಿಯರ ಮಾತು ಕೇಳಿದ ತನ್ನ ಗಂಡ ತನ್ನೆರಡು ಕೈಗಳನ್ನು ಕಟ್ಟಿ ಹಾಕಿ ಗರ್ಭಿಣಿಯಾದ ತನ್ನ ಹೊಟ್ಟೆಗೆ ಒದ್ದಾಗ ಹೊಟ್ಟೆಯೊಳಗಿದ್ದ ಮಗು (ಭ್ರೂಣ) ಹೆಣದ ರೂಪದಲ್ಲಿ ಹೊರಬಂತು.ಆ ನೋವನ್ನೂ ತುಟಿಕಚ್ಚಿ ಸಹಿಸಿಕೊಂಡ ಸಂಧ್ಯಾ ಹೆದರದೆ ಜೀವನ ನಡೆಸಲು ಮುಂದಾದಾಗ ನಾದಿನಿ ಹಾಕಿದ ಸವಾಲು 'ನೀನು ನನ್ನ ಅಣ್ಣನೊಡನೆ ಅದು ಹೇಗೆ ಬದುಕಿ, ಬಾಳಿ ಜೀವನ ಸಾಗಿಸುತ್ತೀಯಾ ಎಂದು ನೋಡಿಕೊಳ್ಳುತ್ತೇವೆ' ಎಂದು. ಅದನ್ನೂ ಸವಾಲಾಗಿ ಸ್ವೀಕರಿಸಿದಳು ಸಂಧ್ಯ.

     ಅತ್ತಿಗೆ ನಾದಿನಿಯರು ಸೇರಿ ತನ್ನ ಗಂಡನಿಗೆ  ಕುಡಿತ ಕಲಿಸಿದರು.ಕುಡಿದು ಬಂದು ದಿನಾಲೂ ಜಗಳವಾಡತೊಡಗಿದ ಸಂಧ್ಯಾಳ ಗಂಡ!  ಪ್ರತಿನಿತ್ಯ ಜಗಳ, ಹೊಡೆತ. ಹೊಡೆದ ಏಟಿನ ರಭಸಕ್ಕೆ ತಲೆ ಒಡೆದು ರಕ್ತ ಚಿಮ್ಮಿತ್ತು! ಇನ್ನೊಂದು ದಿನ ಕಣ್ಣಿನಿಂದ,ಮತ್ತೊಂದು ದಿನ ಮೂಗಿನಿಂದ,ಕಿವಿ,ಬಾಯಿಯಿಂದ ರಕ್ತ ಒತ್ತರಿಸಿ ಬರುತಿತ್ತು. ದೇಹವಿಡೀ ಬಾಸುಂಡೆಗಳಿಂದ ತುಂಬಿದ, ಏಟಿನ ಕಲೆಗಳಿಂದ ಛಿದ್ರವಾಯಿತು.ಇದಕ್ಕೆಲ್ಲ ಪುಟಾಣಿ ಮಕ್ಕಳು ಮೂಕ ಸಾಕ್ಷಿಗಳಾದರು.ದಿಟ್ಟ ಮಹಿಳೆ ಯಾರು ಯಾರದೋ ಸಹಾಯ ಪಡೆದು,ದೇವರಲ್ಲಿ ಬೇಡಿಕೊಂಡು,ಗಂಡನ ಅಕ್ಕ-ಭಾವನವರಲ್ಲೆ ಕುಟುಂಬದ ಪೂಜೆಯ ದಿನ ಹರಕೆ ಸಲ್ಲಿಸಿ,ಕುಡಿತ ಬಿಡಿಸುವಂತೆ ಬೇಡಿಕೊಳ್ಳುವಂತೆ ಎಲ್ಲರ ಎದುರಿನಲ್ಲೆ ಕೇಳಿಕೊಂಡಾಗ ಅತ್ತಿಗೆ ಮರು ಮಾತನಾಡದೆ ಒಪ್ಪಿಕೊಳ್ಳಲೇ ಬೇಕಾಯಿತು!
  ತನ್ನ ಗಂಡನಿಗೆ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇದೆ ಎಂದು ತಿಳಿದ ಸಂಧ್ಯಾ ಹೆದರಲಿಲ್ಲ,ಕೂಗಾಡಿ ಕಿರುಚಲಿಲ್ಲ! ಅತ್ತು ಕರೆದು ಯಾರಲ್ಲೂ ಹೇಳಿಕೊಳ್ಳಲೂ ಇಲ್ಲ! ಬದಲಾಗಿ ಅದರ ಬಗ್ಗೆ ಪತ್ತೆದಾರಿ ಪ್ರತಿಭಾನಂತೆ ಒಂದೊಂದೇ ಮಾಹಿತಿ ಕಲೆಹಾಕತೊಡಗಿದಳು.ಕೊನೆಗೊಂದು ದಿನ ಬೇರೊಬ್ಬಳ ಮನೆಯಲ್ಲಿದ್ದ ತನ್ನ ಗಂಡನ ಬಟ್ಟೆಗಳನ್ನೆಲ್ಲ ಕದ್ದು ಸಾಗಿಸಿ, ಅವರಿಬ್ಬರೂ ಒಟ್ಟಿಗಿರುವಾಗ ಮನೆಗೆ ನುಗ್ಗಲು ಪ್ರಯತ್ನಿಸಿದಳು. ವಿಷಯ ತಿಳಿದ ಅವರಿಬ್ಬರೂ ಅವಳನ್ನು ಹುಚ್ಚಿಯೆಂದು ಎಲ್ಲ ಕಡೆ ವಿಷಯ ಹಬ್ಬಿಸಿ ಬಿಟ್ಟರು! ಹೊಡೆಯಲು ಓಡಿಸಿಕೊಂಡು ಹೋದಾಗ ಯಾರದೋ ಮನೆಗೆ ನುಗ್ಗಿ,ಗುಡ್ಡ-ಬೆಟ್ಟ ಹತ್ತಿ,ಕಾಂಪೌಂಡ್ ಹಾರಿ,ಕಚ್ಚುವ ನಾಯಿಯಿಂದ ಅಕಸ್ಮಾತಾಗಿ ಪಾರಾಗಿ,ನಡೆದು,ಓಡಿ ಯಾವುದೋ ಊರು ತಲುಪಿ,ಕೈಯಲ್ಲಿ ಕಾಸಿಲ್ಲದ್ದು ನೆನಪಾಗಿ ಅಲ್ಲಿದ್ದ ಅಂಗಡಿಯವರಿಂದ ಒಂದೆರಡು ನಾಣ್ಯ ಪಡೆದು,ಹಿರಿಯರಿಗೆ ಫೋನ್ ಮಾಡಿ ವಿಷಯ ತಿಳಿಸಿ, ಆಟೋ ಮಾಡಿ ತನ್ನ ಮನೆ ಸೇರಿ ಜೀವ ಉಳಿಸಿಕೊಂಡ ದಿಟ್ಟ ಮಹಿಳೆ ಸಂಧ್ಯಾ!
    ಆದರೂ ಅವಳು ಡಿವೋರ್ಸ್ ಮೊರೆ ಹೋಗಲಿಲ್ಲ! ಕಾರಣ ಅತ್ತಿಗೆ-ನಾದಿನಿಯರ ಮಾತಿಗೆ ತಾನು ಬಗ್ಗಬಾರದೆಂಬ, ಸಾಧಿಸಿ ತೋರಿಸುವೆನೆಂಬ ಹಠ!
   ಎಲ್ಲಾ ಸರಿಯಾಗಿ ಒಂದು ಹಂತಕ್ಕೆ ಬರುವಾಗ ತನ್ನ ಆರೋಗ್ಯವನ್ನು ಕಳೆದುಕೊಂಡಿದ್ದಾಳೆ ಅವಳು! ದಂತದ ಗೊಂಬೆಯಂತಿದ್ದ ಸಂಧ್ಯಳಿಗೀಗ ರಕ್ತದ ಒತ್ತಡ ಕಡಿಮೆಯಾಗಿದೆ, ಅದರೊಂದಿಗೆ ರಕ್ತದಲ್ಲಿ ಸಕ್ಕರೆಯ ಅಂಶವೂ ಕಡಿಮೆ. ಆದರೂ ಯಾವುದೇ ದೈಹಿಕ ಅನಾರೋಗ್ಯಕ್ಕೆ ಜಗ್ಗದೆ,ಬಗ್ಗದೆ,ವೈದ್ಯರ ಸಲಹೆಯನ್ನು ಸರಿಯಾಗಿ ಪಡೆದು ಅದರಂತೆ ಪಾಲಿಸುತ್ತಿದ್ದಾಳೆ. ಪ್ರತಿನಿತ್ಯ ಯೋಗ, ಧ್ಯಾನ,ಪ್ರಾಣಾಯಾಮ ಮಾಡಿ ಮನಸ್ಸಿನ ಹಾಗೂ ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದ್ದಾಳೆ ಸಂಧ್ಯ.
  ಸಂಧ್ಯಾಳಿಂದ ನಮ್ಮ ಜೀವನದಲ್ಲಿ ನಾವು ಕಲಿಯೋದು ತುಂಬಾ ಇದೆ. ಗಂಡ ಕುಡಿತದಿಂದ ತನ್ನ ಕೆಲಸ ಕಳೆದುಕೊಂಡಾಗ ತನ್ನಲ್ಲಿದ್ದ ಚಿನ್ನವನ್ನು ಮಾರಿ ಸಂಸಾರ ಸಾಗಿಸಿದ್ದಾಳೆ ಸಂಧ್ಯ! ಅವಳ ಗಂಡನಿಗೀಗ ತನ್ನ ಜೀವನದಲ್ಲಿ ತನ್ನ ಹೆಂಡತಿಯ ಪಾತ್ರದ ಅರಿವಾಗಿದೆ! ತನ್ನ ಕುಟುಂಬಕ್ಕಾಗಿ ಹೊಸ ಮನೆಯೊಂದನ್ನು ಕಟ್ಟಿಸುತ್ತಿದ್ದಾನೆ! ಪತ್ನಿ ಸಹಾಯಕಳಾಗಿ ನಿಂತಿದ್ದಾಳೆ...
ತಾಳ್ಮೆ, ದಿಟ್ಟತನ,ಧೈರ್ಯ,ಸ್ಥೈರ್ಯಗಳಿದ್ದರೆ ಕುಟುಂಬ ಹಾಗೂ ಸಮಾಜದಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದೆಂಬ ನೀತಿಯನ್ನು ತೋರಿಸಿಕೊಟ್ಟ ಉದಾತ್ತ ಮಹಿಳೆ ಸಂಧ್ಯ! ಯಾವುದೇ ಪ್ರಶಸ್ತಿಗೆ ಅರ್ಹಳಲ್ಲವೇ ಇವಳು? ಇವಳ ಜೀವನದಿಂದ ನೂರಾರು ಮಹಿಳೆಯರು ಕಲಿಯಬೇಕಾದದ್ದು ತುಂಬಾ ಇದೆ ಅನ್ನಿಸುವುದಿಲ್ಲವೇ?ನೀವೇನಂತೀರಿ?
@ಪ್ರೇಮ್@

89. ಭಾವಗೀತೆ-ಬಾ ಜೊತೆಯಲಿ

ಬರಲಾರೆಯ ಜೊತೆಯಲಿ

ನನ್ನ ಬದುಕ ದಾರಿಯಲಿ
ನಿನ್ನಾಗಮನದ ನಿರೀಕ್ಷೆಯಲಿ
ಕೈ ಹಿಡಿದು ನಡೆಸುವಲಿ
ಬರಲಾರೆಯ ಜೊತೆಯಲಿ//೧//

ಹೃದಯ ಗೂಡು ಕಾದಿದೆ
ಮನದ ಮಾತು ಬೇಡಿದೆ
ಆಗಮನವ ಬಯಸಿದೆ
ಬಾರೆಂದು ನಮಿಸಿದೆ//೨//

ನಿನ್ನ ಪ್ರೀತಿ ನನಗೆ ಬೇಕು
ನಿನ್ನ ನಗೆಯೆ ನನಗೆ ಸಾಕು
ನಿನ್ನ ಎದೆಯ ಜಾಗ ಸಿಕ್ಕು
ನಾನು ಅಲ್ಲೆ ನಿಲ್ಲ ಬೇಕು//೩//

ನನ್ನ ಬದುಕು ನಿನಗೆ ಮುಡಿಪು
ನೀನೆ ಬಂದು ನನ್ನ ಹುಡುಕು
ತಡವು ಏಕೆ ನನ್ನ ಚೆಲುವೆ
ನನ್ನ ಮನದಿ ನೀನೆ ಇರುವೆ//೪//
@ಪ್ರೇಮ್@

93. ಭಾವಗೀತೆ-ಬಾ ಜೊತೆಯಲಿ

ಬರಲಾರೆಯ ಜೊತೆಯಲಿ

ನನ್ನ ಬದುಕ ದಾರಿಯಲಿ
ನಿನ್ನಾಗಮನದ ನಿರೀಕ್ಷೆಯಲಿ
ಕೈ ಹಿಡಿದು ನಡೆಸುವಲಿ
ಬರಲಾರೆಯ ಜೊತೆಯಲಿ//೧//

ಹೃದಯ ಗೂಡು ಕಾದಿದೆ
ಮನದ ಮಾತು ಬೇಡಿದೆ
ಆಗಮನವ ಬಯಸಿದೆ
ಬಾರೆಂದು ನಮಿಸಿದೆ//೨//

ನಿನ್ನ ಪ್ರೀತಿ ನನಗೆ ಬೇಕು
ನಿನ್ನ ನಗೆಯೆ ನನಗೆ ಸಾಕು
ನಿನ್ನ ಎದೆಯ ಜಾಗ ಸಿಕ್ಕು
ನಾನು ಅಲ್ಲೆ ನಿಲ್ಲ ಬೇಕು//೩//

ನನ್ನ ಬದುಕು ನಿನಗೆ ಮುಡಿಪು
ನೀನೆ ಬಂದು ನನ್ನ ಹುಡುಕು
ತಡವು ಏಕೆ ನನ್ನ ಚೆಲುವೆ
ನನ್ನ ಮನದಿ ನೀನೆ ಇರುವೆ//೪//
@ಪ್ರೇಮ್@

91. ಭಕ್ತಿಗೀತೆ-ಕಾಯೋ ತಂದೆ

ಭಕ್ತಿಗೀತೆ-1
ಕಾಯೋ ತಂದೆ

ಕಾಯೋ ತಂದೆ ಈಶನೆ
ನಮ್ಮ ಹರಸೊ ದೇವನೆ//

ನಿತ್ಯ ನಮ್ಮ ಸತ್ಯ ಸೇವೆ
ನಿನಗೆ ತಾನೆ ಅರ್ಪಣೆ..
ಕಾಯೋ ತಂದೆ ಈಶನೆ...//

ನಮ್ಮ ಕಷ್ಟ ಪರಿಹರಿಸೋ
ತಂದೆ ಮಹಾದೇವನೇ..
ಕಾಯೋ ತಂದೆ ಈಶನೇ...//

ನಿನ್ನ ನಾಮ ಸ್ಮರಣೆ ನಮಗೆ
ತೃಪ್ತಿ ಕೊಡುವ ಸಾಧನ...
ಕಾಯೋ ತಂದೆ ಈಶನೇ...//

ನಮ್ಮ ಸರ್ವ ಪಾಪ ಕಳೆದು
ಕ್ಷಮೆಯ ನೀಡೋ ದೇವನೇ...
ಕಾಯೋ ತಂದೆ ಈಶನೇ...//

ಜಗದ ಜನವ ಪೊರೆವ ತಂದೆ
ನನ್ನ ಬದುಕು ಎಂದೂ ನಿಂದೆ..
ಕಾಯೋ ತಂದೆ ಈಶನೇ..//

ಜನಸೇವೆಗೆ ನನ್ನ ದೂಡು
ಸರ್ವ ಜನಕೆ ಹಿತವ ಕೊಡು..
ಕಾಯೋ ತಂದೆ ಈಶನೇ...//
@ಪ್ರೇಮ್@

1. ಮಕ್ಕಳ ಕವನ

1.ಜಾಣಮರಿ

ಚಿನ್ನು ಮರಿ,ಚಿಂಟು ಮರಿ
ಬೇಡ ನಿನಗೆ ವರಿ//

ಜಾಣ ಮರಿ, ತುಂಟ ಮರಿ
ಆಟ ಆಡ್ತಾ ಎಲ್ಲ ಮರಿ//

ಬೊಂಬೆ ಬೇಕೆ, ಸ್ವೀಟು ಸಾಕೆ
ಒಲ್ಲೆ ಏಕೆ ಊಟಕೆ? //

ರಂಗಿನಾಟ ಸಾಕು ಮರಿ
ಓದು-ಬರಹ ಕಲಿತು ಬರಿ//

ನಿನ್ನ ಆಟ ಮನಕೆ ಚೆನ್ನ
ನಿನ್ನ ಮನವು ಅಂದ ಚಿನ್ನ//

ನಿನ್ನ ಹಾಗೆ ಇರಲುಬೇಕು
ನಿನ್ನ ನೋಡಿ ಕಲಿಯಬೇಕು//

@ಪ್ರೇಮ್@

ಮಂಗಳವಾರ, ಜನವರಿ 23, 2018

84. ದೇಶ ಭಕ್ತಿ ಗೀತೆ

ಜಯ ಭಾರತ

ಜಯ ಜಯ ಜಯ ಭಾರತ
ಕಾಯುವೆ ನಿನ್ನ ಸಂತತ//

ಭಾರತೀಯರ ಮಾತೆ ನೀನು
ಭಾರತ ಮಣ್ಣಿನ ತನುಜೆ ನಾನು
ಉತ್ತು,ಬಿತ್ತಿದ ಉಣಲು ಕೊಟ್ಟ
ಮುದ್ದು ಮುದ್ದು ಮಾತೆ ನೀನು//

ತಾಯೆ ಭಾರತಿ ನಿನಗೆ ಆರತಿ
ಬೆಳಗಲಿ ಎಲ್ಲೆಡೆ ನಿನ್ನಯ ಕೀರುತಿ
ಬಾಪು,ಕಲಾಮ್,ಭೋಸ್, ಪಟೇಲರ
ಹೆಮ್ಮೆಯ ತಾಯೆ ನೀನು ಬೆಳಗುತಿ//

ನಮ್ಮನು ಹೊತ್ತ ಮಹಾಮಾತೆ
ನೀ ನಮ್ಮಯ ಜನುಮದಾತೆ,
ನೀನೆ ನಮ್ಮಯ ಪೊರೆಯುವಾಕೆ
ನನ್ನ ಕವನ ನಿನಗೆ ಅರಿಕೆ//
@ಪ್ರೇಮ್@

79. ಕವನ-ನಮ್ಮೂರ (ಮಾಡ್ರನ್) ಜಾತ್ರೆ

ನಮ್ಮೂರ ಮಾಡರ್ನ್ ಜಾತ್ರೆ

ಜಾತ್ರೆ ಬಂತಪ್ಪ ನಮ್ಮೂರ ಜಾತ್ರೆ
ತೇರನು ಎಳೆಯುವ ಜೋರಿನ ಜಾತ್ರೆ//ಪ//

ದೇವರ ಹೊತ್ತು ನಲಿಯುವ ಜಾತ್ರೆ
ವಿಧವಿಧ ಪೂಜೆಯ ಮಾಡುವ ಜಾತ್ರೆ
ಊರಿಗೆ ಊಟವ ಹಂಚುವ ಜಾತ್ರೆ
ಮನುಜನ ಪಾಪವ ತೊಳೆಯುವ ಜಾತ್ರೆ//೧//

ಅಂಗಡಿ ಅಂಗಡಿ ಸುತ್ತುವ ಜಾತ್ರೆ
ಪೇಟೆ ಸವಾರಿಯ ನೋಡುವ ಜಾತ್ರೆ
ಸಂತೇಲಿ ಗೋಬಿ ತಿನ್ನುವ ಜಾತ್ರೆ
ಆಟದ ಸಾಮಾನು ಮಾರುವ ಜಾತ್ರೆ//೨//

ಜನಗಳ ಒಟ್ಟಿಗೆ ಸೇರಿಸೊ ಜಾತ್ರೆ
ಐಸ್ ಕ್ರೀಮ್ ತಿನ್ನುತ್ತ ಕಳೆಯುವ ಜಾತ್ರೆ
ಮರಣ ಬಾವಿ, ಜಿಯೆಂಟ್ ವೀಲಲಿ
ತಿರುಗುತ್ತ ತಿರುಗುತ್ತ ಮುಗಿಯುವ ಜಾತ್ರೆ//೩//
@ಪ್ರೇಮ್@

75. ದಿಯಾಗೆ-ಕವನ

ದಿಯಾ

ಬೆಳಗಿಹವು ಕಂದೀಲ ತುದಿ ತುಂಬಾ ಬೆಳಕು
ಹಿಡಿದು ಸಾಗಿತು ಲಲನೆಯರ ಬಳುಕು/
ಮಾತಿನರಮನೆಯಲ್ಲಿ ದಿಯಾ ಕರಗೋಯ್ತು
ಗೊತ್ತೇ ಆಗ್ಲಿಲ್ಲ ಎಣ್ಣೆ ಮುಗಿದೋಯ್ತು//೧//

ನಮ್ಮ ಮನೆಯ ದೀಪ
ನೀನೇ ನಮ್ಮಯ ರೂಪ
ಬಿಟ್ಟುಬಿಡ ಬೇಕಮ್ಮ ನಿನ್ನ ರಂಪ
ಕಡಿಮೆ ಮಾಡಮ್ಮ ನಿನ ಕೋಪ//೨//

ದೀಪದ ಸಾಲಲ್ಲಿ ಇರಬೇಕು ನೀನು
ತಂಪಾದ ಸ್ಥಳದಲ್ಲಿ ಬೆಳಿಬೇಕು ನೀನು,
ನೀನಿದ್ದೆಡೆ ಜನರಲ್ಲಿ ಹಾಲು-ಜೇನು
ಕಲಿಬೇಕು ನಿನ್ನಿಂದ ಎಲ್ಲರೂನು//೩//

ಒಳ್ಳೆ ಗುಣಗಳ ಕಲಿತು ಬಾಳು ಚಿನ್ನ,
ಕಳ್ಳತನದ ಬದುಕು ಬೇಡವು ರನ್ನ
ಮುದ್ದು ಮಲ್ಲಿಗೆಯ ಗುಣವ ಬೆಳೆಸಿಕೊ ನೀನು
ಎಲ್ಲರೊಡನೊಂದಾಗಿ ಬಾಳು ನೀನು//೪//

ನಮ್ಮನೆಯ ದೀಪ, ಅಂದದ ರೂಪ
ಬೇಡವು ನಿನಗೆ ಸುಳ್ಳಿನ ಕೂಪ
ಇರಲಿ ಎಂದಿಗೂ ದೇವರ ಅನುಗ್ರಹವು
ಎದುರಿಸು ಬರಲು ಕಷ್ಟದ ಪರೀಕ್ಷೆಯು//೫//

ಸುಖ-ಶಾಂತಿ ನೆಮ್ಮದಿಯು
ಇರಲೆಂದೂ ಬದುಕಲ್ಲಿ
ದೇವರ ದಯೆಯೂ ಹಾರೈಸಿ ಬರಲಿ,
ಬದುಕೆಂಬ ಸಾಗರವ ಸುಲಭದಿ ದಾಟಲಿ
ಮಾನವ ಜನುಮ ಸಾರ್ಥಕವಾಗಲಿ//೬//

@ಪ್ರೇಮ್@

74. ಪ್ರಾರ್ಥನೆ

ಪ್ರಾರ್ಥನೆ

ಗಣನಾಥ ನಿನ್ನ ಬೇಡುವೆ ಅನವರತ
ನೀಡೋ ಅಣ್ಣ ನೆಮ್ಮದಿ,ಆರೋಗ್ಯ ಸತತ//ಪ//

ಮೊದಲ ಪೂಜೆಯು ನಿನಗೆ ಸಮರ್ಪಣೆ
ನೀಡುವೆ ಭಕುತಗೆ ಭಕ್ತಿಯ ಕರುಣೆ
ಎಲ್ಲಿದೆ ನಿನ್ನಯ ಭಕ್ತಿಗೆ ಎಣೆ?
ಕಾಯೋ ದೇವಾ ನನ್ನ ಭಕ್ತಿಯ ಅರ್ಪಣೆ//೧//

ವೇದರಿಗಾಗಿ ಭಾರತ ಬರೆದೆ,
ತಾಯಿಯ ರಕ್ಷೆಗಾಗಿ ಮುಖವನೆ ತೊರೆದೆ,
ಹೊಟ್ಟೆಯ ರಕ್ಷೆಗಾಗಿ ಹಾವನ್ನೆ ಕರೆದೆ,
ಶನಿ ಕಾಟದಿಂದ ದೂರ ನೀ ಉಳಿದೆ//೨//

ಪಾರ್ವತಿ ಪ್ರೀತಿಯ ಮಗನಾಗಿ ಬೆಳೆದೆ,
ಸುಬ್ರಹ್ಮಣ್ಯ, ಅಯ್ಯಪ್ಪಗೆ ಅಣ್ಣನಾಗುಳಿದೆ,
ತಂದೆಗೆ ಗೌರವ ಕೊಡಲು ನೀ ತಿಳಿಸಿದೆ,
ಹರನ ಸುತನೆ ನಿನಗೆ ನಮಿಸಿ ನಾ ನಲಿದೆ//೩//

ಪಾರ್ವತಿ ನಂದನ ನಿನಗೆ ವಂದನೆ
ಶಿವಪುತ್ರನೆ ನಿನಗೆ ಮೊದಲ ಪೂಜೆನೆ
ದಯಪಾಲಿಸೆಮಗೆ ಒಳ್ಳೆ ಮನಸನ್ನೆ
ಗಣಪನೆ ನಿನ್ನಲ್ಲಿ ಇದುವೆ ಪ್ರಾರ್ಥನೆ//೪//

@ಪ್ರೇಮ್@