[3/2, 7:18 AM] Wr Shivaprasad Aradhya: ಪ್ರೇಮ ಕವಿಗಳು ಚೆನ್ನಾಗಿ ಬರೆದಿದ್ದಾರೆ ಆದರೆ ಚಿಕ್ಕ ಚಿಕ್ಕ ಸಾಲುಗಳ ಮಾಡಲು ಕವನವಾಗಿ ಕಾಣಿಸುತ್ತದೆ. ಅದರೆ ಉದ್ದುದ್ದವಾಗಿ ನವ್ಯದಲೂ ಬರದೆ ಗಪದ್ಯವಾಗಿ ಬರೆದರೂ ಉತ್ತಮ ಸಂದೆಶಗಳು ಅತ್ಯುತ್ತಮ ಭಾವಗಳ ಕವನ ಇದು. ಶುಭವಾಗಲಿ ಕವಿಗಳೇ ಶುಭವಾಗಲಿ
ಶಿವಪ್ರಸಾದ್ ಆರಾಧ್ಯ
[3/2, 9:43 AM] Wr Kumar Chalawadi: 🌿🌿🌿
@ಪ್ರೇಮ್@ ರವರ" ನನ್ನ ನೋಡಿ ಕಲಿ" ಶೀರ್ಷಿಕೆ ಓದಿಯೇ ಕವನ ಓದಬೇಕೆನಿಸುತ್ತದೆ! ಚಂದಿರನ ಸ್ವಗತ ಗೀತೆಯಾಗಿ ಮನಸೆಳೆಯುತ್ತದೆ! ಬೆಳಕನ್ನು ಪ್ರತಿಫಲಿಸುವ ಚಂದಿರನ ತ್ಯಾಗ ಮನೋಭಾವವನ್ನು ತಮ್ಮ ಕವನದ ಸಾಲಿನಲ್ಲಿ ಮೇಳೈಸಿದ ರೀತಿ ಚೆಂದ! ' ಪರರಿಗೆ ಸಹಾಯ ಮಾಡುವ ಮನಸಿರಬೇಕು'!
ಪಾಕ್ಷಿಕಕೊಮ್ಮೆ ಗೋಚರಿಸುವ ಚಂದಿರ
ಕರಗಿ ಹೋಗುವಂತೆ ' ಮೆರೆದರೂ ಕರಗಿ ಹೋಗುವ' ಸಾಲಿಗೆ ಹೋಲಿಸಿದ್ದು ಆಕರ್ಷಕ!
ಚಂದದ ಕವನ!
🌿🌿🌿
[3/3, 8:16 AM] Wr Shvetha Priya Prashant: *ಪ್ರೇಮ್ ಮೇಡಂ ಅವರ* ಬೇಸರವಾಗಿದೆ ನನಗೆ ಶೀರ್ಷಿಕೆಗೆ ತಕ್ಕಂಕೆ ಹಠ ಮಾರಿತನ ಎದ್ದು ಕಾಣ್ತ ಇದೆ ಕೋತಿ ಮರಿಯನ್ನು ಮನದಲ್ಲಿಟ್ಟುಕೊಂಡು ದೂರವಾದ ಯಾರನ್ನೋ ನೆನಪಿಸಿಕೊಂಡು ಮನದಲ್ಲೇ ಬೈಯ್ದುಕೊಳ್ಳುತ್ತಾ ನೀನಿಲ್ಲದೆ ನನಗೆ ಬೇಸರವಾಗಿದೆ ಯಾಕೋ ಈ ಸಿಟ್ಟು ಸಿಡುಕು ನಿನ್ನ ಸಲುಗೆ ನನಗೆ ಬೇಕೇ ಬೇಕು ಎಲ್ಲಿದ್ದರೂ ಬಾ ಎನ್ನುತ್ತಾ ಕವಿಯುವು ಹತಾಷೆಯನ್ನು ಹೊರಹಾಕಿದ್ದಾರೆ. ಚೆಂದವಿದೆ ಮೇಡಂ.
ಧನ್ಯವಾದಗಳು
*ಶ್ವೇತಪ್ರಿಯ*
[3/4, 7:26 AM] Wr Varalaxmi K N: ನಮಸ್ತೆ ಪ್ರೇಮ ಮೇಡಮ್.
ಮಹಿಳಾ ದಿನಾಚರಣೆ ಸಮೀಪವಿರುವಾಗ ಹೆಣ್ಣಿನ ಪ್ರಾಧ್ಯಾನತೆ ಬಗ್ಗೆಯೂ ನಿಮ್ಮ ಕವನ ಬೆಳಕು ಚೆಲ್ಲಿದೆ.
ತನ್ನ ಕಂದಮ್ಮಗಳಿಗೆ ಹೊಟ್ಟೆತುಂಬಾ ಆಹಾರ ಕೊಡಲು ತನ್ನ ಜೀವನವ ಮುಡಿಪಿಡುವ ಬಗೆಯ ಕವನದಲ್ಲಿ ಸೊಗಸಾಗಿ ವಿವರಿಸಿದ್ದೀರಿ.
ತಪ್ಪಿದ್ದರೆ ತಿದ್ದಿ
ಧನ್ಯವಾದಗಳು ಮೇಡಮ್ 🙏
ಕೆ ಎನ್ ವರಲಕ್ಷ್ಮಿ
[3/4, 2:12 PM] Wr Nagamma: ಪ್ರೇಮ್ ಜೀ
ನಿಮ್ಮ
ಉಣಿಸುವ ಕೈಗಳು...
ಬಹಳ ಸುಂದರವಾಗಿ ಮೂಡಿದೆ..
ಅಮ್ಮನ..ಹಿರಿಮೆ ಗರಿಮೆ..ಹಾಡಿದ ಪದ ಗಳು..ಅವಳ ದುಡಿಮೆಯ ಕರಗಳಿಗೆ..ವಂದಿಸಿದೆ..
ಧನ್ಯವಾದಗಳು...
ಎಸ್.ನಾಗಮ್ಮ🌹
[3/5, 7:39 AM] Wr Prashanth R Dyvajna: 🌹 ಪ್ರೇಮ ಮೇಡಂ ಜೀ💐🙏
🌹ಅರ್ಪಣೆ🌹
ಹೃದಯದ ಅಂತರಂಗದಿ ಭಕ್ತಿ ಭಾವದಿಂದ ಹಾಡಿದ ಕವನ, ಭರತಮಾತೆಯ ಮಡಿಲಲ್ಲಿ ಜನಿಸಿದ ಜನ್ಮ ಧನ್ಯ ಎಂದು ಹೇಳುತ ಜೀವನ ಬಾಂಧವ್ಯ ಸಾರುತ ಸೃಷ್ಟಿ ಸಂಕುಲವ ಸಾರಿದ ಬರಹ ಅಭಿನಂದನೆಗಳು 👌👌👌
ಸುಂದರ ಕವನ 👌👌👌
ಬಾಬಣ್ಣ.
(ಪ್ರಶಾಂತ ಆರ ದೈವಜ್ಞ)
ಕರೇಕ್ಯಾತನಹಳ್ಳಿ.
[3/12, 11:30 AM] Wr Nagamma: ಪ್ರೇಮ್ ಜೀ🙏🏼
ದಾರಿ ಯಾವುದಯ್ಯಾ
ಸ್ವಲ್ಪ ಗಳಿಗೆಯಾದ ಇಂಟರ್ನೆಟ್ ಇಲ್ಲದೆ....ನೈಜ ವಾಗಿ..ಎಲ್ಲರೊಡನೆ ಮುಕ್ತ ವಾಗಿಬೆರೆಯಲಿ..
..ಎಲ್ಲರೂ ಇಂಟರ್ನೆಟ್..ಲೋಕದಲ್ಲಿ...ಲೀನವಾಗಿ..ನಮ್ಮನ್ನೇ ನಾವು ಕಳೆದು ಕೊಂಡಿದ್ದೇವೆ ಎಂಬ..
ಸಮಾಜಿಕಕಳಕಳಿಯ ಕವನ..
ಕ್ಕಾಗಿ ಧನ್ಯವಾದಗಳು.
ಎಸ್.ನಾಗಮ್ಮ🌹
[3/12, 7:55 PM] Wr Venktesh Chagi: *ಪ್ರೇಮ್ ರವರು ಇಂಟರ್ನೆಟ್ ಬೇಡ ಎನ್ನುತ್ತಿದ್ದರೆ. ಆದರೆ ಇಂಟರ್ನೆಟ್ ಇಲ್ಲದೇ ಇಂದಿನ ಜಗತ್ತು ಜಗತ್ತು ಇಲ್ಲ. ವಾಸ್ತವವಾಗಿ ಇಂಟರ್ನೆಟ್ ಬೇಕು ಆದರೆ ಬಳಕೆಯ ಮಿತಿ ಮೀರಿದೆ. ಕವನದಲ್ಲಿ ಇಂಟರ್ನೆಟ್ ನ ಅಗತ್ಯತೆಯ ಬಗ್ಗೆ ಒಂದೆರಡು ಸಾಲುಗಳಿಗೆ ಅವಕಾಶ ಕೊಡಬಹುದಿತ್ತು. ಪ್ರಾಸಕ್ಕೆ ಕೊಟ್ಟ ಪ್ರಾಶಸ್ತ್ಯ ಕಡಿಮೆಯಾಗಬಹುದಿತ್ತು. ಕವನ ಚೆನ್ನಾಗಿದೆ.*
✍ *ವೆಂಕಟೇಶ ಚಾಗಿ*
[3/13, 9:11 AM] Wr Mallesh G Raj: ಪ್ರೇಮ್ ಗುರುಗಳ ಕವನ ಜಲಸಾಗರದಲ್ಲಿ ಏರೀಳಿಯುವ ಅಲೆಗಳ ತೆರನಲಿ ಪ್ರಶ್ನಾಮಾಲಿಕೆಯಂತೆ ಮೂಡಿದೆ.ಯಾರಿದು ಅವರನ್ನೇ ಪ್ರಾಮುಖ್ಯೀಕರಿಸಿದ್ದರೆ ಕವನದ ಸ್ತರ ಇನ್ನೂ ಚೆಂದಿರುತ್ತಿತ್ತೇ ಯೋಚಿಸಿ,ಬುವಿ ಪದ ಗಮನ ಸೆಳೆದದ್ದು ಒಟ್ಟಾರೆ ಉತ್ತಮ ಪ್ರಯತ್ನ ಶುಭೋದಯದ ಮೊದಲ ಕವನ 👍🏻 ಕವಿ ಭಾವ ಚ್ಯುತಿಯಾಗಿರಲು ಕ್ಷಮೆ ಇರಲಿ.
[3/14, 1:50 PM] Wr Varalaxmi K N: ನಮಸ್ತೆ ಪ್ರೇಮಾ ಮೇಡಮ್.
ಮಳೆರಾಯ ಪ್ರೇಮಾ ಮೇಡಮ್ ಎಷ್ಟು ಚೆಂದದಿ ಕರೆಯುತ್ತಾ ಇರುವರು .ದಯಮಾಡಿ ಬಂದುಬಿಡಿ ಮಳೆರಾಯ.
ಮಳೆರಾಯನಿಗಾಗಿ ಮನುಜ ಮತ್ತು ಪಶುಪಕ್ಷಿಗಳು ಪರಿತಪಿಸುವ ಕವನಕೆ ನಮನಗಳು ಮೇಡಮ್.
ತಪ್ಪಿದ್ದರೆ ತಿದ್ದಿ
ಧನ್ಯವಾದಗಳು ಮೇಡಮ್
ಕೆ ಎನ್ ವರಲಕ್ಷ್ಮಿ
[3/14, 3:22 PM] Wr Mallesh G Raj: ಪ್ರೇಮ್ ಮೇಡಂ ನಿಮ್ಮಲ್ಲಿ ಇನ್ನೂ ಮಳೆಯಾಗಿಲ್ಲವೇ? ನೀವು ಕವನ ಬರೆದ ಮೇಲೂ ಆಗಿಲ್ಲ ಅಂದರೆ, ಆಗಿರಲೇಬೇಕು.ಪ್ರಾರ್ಥನೆಯ ಮೊರೆ ವರುಣನಿಗಾಗಲೇ ಮುಟ್ಟಿರಬಹುದು 🙏
[3/16, 2:09 PM] +91 84313 19753: ಪ್ರೇಮ ಮೇಡಂ
ನಿಮ್ಮ ಕವನ ತುಂಬಾ ಚನ್ನಾಗಿ ಮೂಡಿ ಬಂದಿದೆ
ಉತ್ತಮ ಸಂದೇಶ ಹೊತ್ತು ತಂದಿದೆ
ಕವನದೊಳಗಿನ
ಕೊನೆಯ ಪ್ಯಾರಾ ತುಂಬಾ ಇಷ್ಟವಾಯ್ತು.
ಧನ್ಯವಾದಗಳು
[3/17, 1:30 PM] Wr Manjula B K: ಪ್ರೇಮ್ ಅವರ ಹಂಚಿ ತಿನ್ನೋಣ
ಮನುಷ್ಯನ ಬದುಕು ಮೂರು ದಿನದ ಸಂತೆ. ಅದರಲ್ಲಿ ಹಂಚಿ ತಿನ್ನುವುದುರಲ್ಲಿ ಇರುವುದು ಸುಖ ಎನ್ನುವ ಸಂದೇಶ ಉತ್ತಮ.
ಪಾಲಿಗೆ ಬಂದಿರುವುದು ಪಂಚಾಮೃತ ಎನ್ನುವ ಹಾಗೆ ನಮಗೆ ಸಿಕ್ಕ ಅನ್ನದ ಪಾಲಿನಲ್ಲಿ ನಾವು ಸುಖ ಕಾಣಬೇಕು.
ಮಂಜುಳ
[3/18, 8:04 AM] +91 84313 19753: ಪ್ರೇಮ ಮೇಡಂ
ಅವರ ಮುಸ್ಸಂಜೆ
ಚನ್ನಾಗಿ ಮೂಡಿ ಬಂದಿದೆ
ಯಾರಿಗೂ ಯಾರುಂಟು ಎರವಿನ ಸಂಸಾರಗೊಳಗೆ ಎಂಬಂತೆ ಮುಗ್ದ ಮನಸ್ಸುಗಳ ಒಳಲಾದದೊಳಗೆ ಅಡಗಿರುವ ನೋವು ನಲಿವಿನ ಕಥನವಾಗಿದೆ.
ಧನ್ಯವಾದಗಳು
ಬಸವರಾಜ ಲಿಂಗಸ್ಗೂರು.
(ಕವಿಭಾವಕ್ಕೆ ದಕ್ಕೆಯಾದಲ್ಲಿ ಕ್ಷಮೆ ಇರಲಿ)
[3/18, 10:30 AM] +91 99724 97039: 🙏🏻ಪ್ರೇಮ್ ಮೇಡಂ
ತಾವು ಬದುಕಿನ ಇಳಿ ವಯಸ್ಸನ್ನು ಮುಸ್ಸಂಜೆಗೆ ಹೋಲಿಸಿ, ಈ ಸಂದರ್ಭದಲ್ಲಿ ಸತಿಗೆ ಪತಿ ಪತಿಗೆ ಸತಿ ಆಸರೆ ಎಂಬುದನ್ನು ಚೆನ್ನಾಗಿ ಹೇಳಿದ್ದಾರೆ ಧನ್ಯವಾದಗಳು ಮೇಡಂ
[3/18, 3:04 PM] Wr Deepa Sadanand: ನಮಸ್ತೇ ಪ್ರೇಮ ಮೇಡಮ್...
ಬಾಳ ಸಂಜೆಯಲಿ , ನನಗೆ ನೀನು, ನಿನಗೆ ನಾನೆನುತ.. ನೆಮ್ಮದಿಯ ಬದುಕನ್ನು ಜೀವಿಸೋಣ,
ಮಕ್ಕಳ ಲಾಲನೆ ಪಾಲನೆ ಪೋಷಣೆಗಳೆಲ್ಲಾ ನಮ್ಮ ಕರ್ತವ್ಯ ಜವಾಬ್ದಾರಿಯೆಂದು ಮುಗಿಸಿಯಾಗಿದೆ..
ನಮ್ಮ ಈ ಜೀವನದಲ್ಲಿ
ಈ ಸಂಜೆಯನ್ನು ಯಾರಿಗೂ ಹೊರೆಯಾಗದೇ ಸುಂದರವಾಗಿ ಕಳೆಯೋಣ ಎಂದ ಕವನ ಸುಂದರವಾಗಿ ಮೂಡಿಬಂದಿದೆ..
ಧನ್ಯವಾದಗಳು
ದೀಪಾಸದಾನಂದ..
[3/19, 6:39 AM] Wr Vani Bhandari: ಪ್ರೇಮ್ ಜಿ
ನಿಮ್ಮ ಕವನ ಸುಂದರ ಅರ್ಥಪೂರ್ಣತೆಯಲ್ಲಿ ಕವನ ಒಡಮೂಡಿದೆ
ಚೂಪರ್ 🌹🌹ಮೇಡಂ.
☕☕
[3/19, 11:57 AM] Wr Manjula B K: ಪ್ರೇಮ್ ಅವರ ಅಲ್ಲೋಲ ಕಲ್ಲೋಲ
ಪ್ರಕೃತಿಯ ನಾಶದಿಂದ ಪ್ರಾಣಿಗಳ ಜೀವನ ನಿಜಕ್ಕೂ ಅಲ್ಲೋಲ ಕಲ್ಲೋಲವೇ ಸರಿ.
ನಾಡ ಮಾಡಲು ಹೊರಟಿಹನು ಮನುಜ ಪ್ರಾಣಿಗಳ ಜೀವನವನ್ನೇ ತನ್ನ ಅಳಿವಿಗೂ ಅದುವೇ ಕಾರಣ ಎಂಬುದೇ ಕಾರಣ ಎಂದು ಮರೆತ.
ಮಂಜುಳ. ಬಿ. ಕೆ
[3/20, 12:06 PM] Wr Veena Joshi Ankola: ಕವನ _೧
ಇಂದಿನ ಮೊದಲ ಕವನ ಪ್ರೇಮ್ ಅವರ ನೆಮ್ಮದಿ .
ಮೊದಲ ಮೂರು ಪ್ಯಾರಾಗಳು
ಜೀವಿಯೊಂದು ಪುಣ್ಯಫಲದಿಂದ ಭೂಮಿಯ ಮೇಲೆ ಜನಿಸಿದಾಗ ',
ಅದು ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆ ತುಂಬಾ ಭಾವಪೂರ್ಣವಾಗಿ ವಿವರಿದ್ದಾರೆ.ಪ್ರೀತಿ ಪ್ರೇಮದಿಂದ ಹಂಚಿಕೊಂಡು ಬದುಕುವುದರ ಮಹತ್ವವನ್ನು ಮನೋಜ್ಞವಾಗಿ ಬಿಂಬಿಸಿದ ಪರಿ ಚಂದ .
ಮುಂದೆ ಬರೆಯುತ್ತಾ ಕವಿಗೆ ಕೋ ವೈರಾಗ್ಯ ಭಾವ ಕಾಡಿದೆ ಇಲ್ಲಿ ತಂದುದೇನೂ ಇಲ್ಲ ತೆಗೆದುಕೊಂಡು ಹೋಗುವುದೇನೂ ಇಲ್ಲ ಆದರೂ ಈಮನುಷ್ಯ ಎಲ್ಲವೂ ತನ್ನದೇ, ತಾನೇ ,ಎಂದು ಮೆರೆಯುತ್ತಾನೆ .ಕೊನೆಗೆ ಉಳಿಯುವುದೇನು ಇಲ್ಲ ಕೇವಲ ಇಲ್ಲಿ ಹಂಚಿದ ಪ್ರೀತಿ ಮಾತ್ರ .....
ಇದು ಎಲ್ಲರೂ ಅರಿತ ಸತ್ಯವೇ ಆದರೂ ..ಚಿತ್ರ ಕವನಕ್ಕೆ ಇದನ್ನು ಹೊಂದಿಸಿ ಬರೆದ ಬಗ್ಗೆ ಮನಸ್ಸಿಗೆ ಹಿತ ನೀಡಿತು.
ಹೀಗೆ ಬರೆಯುತ್ತಿರಿ ಶುಭವಾಗಲಿ .
ವೀಣಾ 🌹🌹
[3/23, 3:01 PM] +91 94492 29189: ಪ್ರೇಮ್ ಅವರು ಬರೆದ ಛಾಯಾಗ್ರಾಹಕ ಕವನ "ಛಾಯಾಗ್ರಾಹಕ" ಚಂದ್ರನನ್ನು ಛಾಯಾಗ್ರಾಹಕನಿಗೆ ಹೋಲಿಸಿ ಪ್ರಕೃತಿಯನ್ನು ಅವನ ಕಣ್ಣುಗಳಿಂದ ನೋಡುವ ರೀತಿ ಮಜವಾಗಿದೆ ಕವಿಯ ಕಲ್ಪನೆ ಚೆನ್ನಾಗಿದೆ.ಮತ್ತು ಎಲ್ಲ ಜಾತಿಧರ್ಮದವರು ಚಂದ್ರನನ್ನು ಹೆಗೆ ಅವಲಂಬಿಸಿದ್ದಾರೆ ಎಂಬುದನ್ನು ಸೂಚ್ಯವಾಗಿ ವಿವರಿಸಿದ್ದೀರಿ...ದನ್ಯವಾದಗಳು
[3/24, 7:39 AM] Wr Indira P K: ಪ್ರೇಮ ಮೇಡಂ ರವರೆ ನಮಸ್ತೆ🙏🙏
ಕರುಣಾಜನಕ ಸ್ಥಿತಿ.
ಕುಡುಕ ಗಂಡನ ಜೊತೆಗಿರುವ ಸಂಸಾರದಲ್ಲಿನ ಹೆಣ್ಣಿನ ಭವಣೆಯ ಬದುಕನ್ನು ಕಟ್ಟಿಕೊಳ್ಳಲು ಹೆಣಗುತ್ತಿರುವ ಹಾಗೂ ಅಲ್ಲಿರುವ ನೂರೆಂಟು ಸಮಸ್ಯೆ ಗಳ ಚಿತ್ರಣವಿರುವ ಕವನ ಸುಂದರವಾಗಿದೆ .💐
[3/24, 10:14 AM] Wr Varalaxmi K N: ನಮಸ್ತೆ ಪ್ರೇಮಾ ಮೇಡಮ್.
ಜೀವನಕ್ಕೆ ಬೇಕಾದ ಊಟ ಬಟ್ಟೆ ವಸತಿ, ಪಡೆಯಲು ಬೇಕಾಗಿರುವುದುದುಡಿಮೆ .ಇಷ್ಟು ಇದ್ದರೆ ಜೀವನವ ನಿಶ್ಚಿಂತೆಯಿಂದ ಸಾಗಿಸಬಹುದು ಎಂಬ ಸಾರ ಹೊಂದಿಹ, ಜೀವನದ ಕಟುಸತ್ಯ ತಿಳಿಸಿಹ ಕವನಕೆ ನಮನಗಳುಮೇಡಮ್.
ತಪ್ಪಿದ್ದರೆ ತಿದ್ದಿ.
[3/26, 3:15 PM] Wr Vinuta Kicchikeri: ಪ್ರೇಮ್ ಜೀ 🙏
ಆರಾಮಾಗಿ ಓದಿಸಿಕೊಂಡು ಹೋಗುವ ಕವನ...ಯಾವತ್ತಿನಂತೆ ಇಂದು ಕೂಡ ಚಂದದ ಕವನ.ಯಾವ ಚಿತ್ರ ಕೊಟ್ಟರೂ,ಯಾವ ವಿಷಯ ಕೊಟ್ಟರು ಬರೆವ ನಿಮಗೊಂದು ಶರಣು..
ಇಂದಿನ ಚಿತ್ರಕ್ಕೆ ವಾಸ್ತವದ ಅರಿವನ್ನು ಮೂಡಿಸಿ ,ಅದನ್ನು ಕವನವಾಗಿಸಿ ಬಹಳ ಸುಂದರ ವಾಗಿ ಬರೆದಿರುವಿರಿ...
ಧನ್ಯವಾದಗಳು💐👏
ವಿನುತಾ ಕಿಚ್ಚಿಕೇರಿ
[3/26, 3:25 PM] Wr Shivaprasad Aradhya: ಪ್ರೇಮ್ ಜೀ ವಾವ್ವ ಅದೆಷ್ಟು ಚೆನ್ನಾಗಿ ಬರೆದಿದ್ದೀರಿ ಭಲೇ ಸಿರಿಚಂತರ ಫಾರಿನ್ ಕಾಯಿಲೆಯಿದು ಹರಡಿದವರು ಇಲ್ಲಿಂದ ಹೊರಗೆ ದುಡಿಯಲು ಹೋದವರು ಹಾಗೂ ಯಾತ್ರಾರ್ಥಿಗಳು ಈಗ ಅನುಭಿಸುವ ಕಷ್ಟ ಸಾಮಾನ್ಯರು ಕೂಲಿಯವರು ಹಾಗೂ ಅನಾಥರು ಹಾಗೂ ಬಿಕ್ಷುಕರಿಗೆ ಖೋಜಾಗಳಿಗೆ ಸ್ಲಂವಾಸಿಗಳಿಗೆ ಬಹಳವಾಗಿ ಕಷ್ಟ ತಂದಿದೆ.ಬಂದ ನಿಮ್ಮ ಕವನದ ಸರಳತೆ ಚೆಂದ.
ಶಿವಪ್ರಸಾದ್ ಆರಾಧ್ಯ
[3/27, 9:15 AM] Wr Ganesh Pai: ಪ್ರೇಮಾ ಗುರುಗಳೇ ನಮಸ್ತೆ,
ಜೀವನೋತ್ಸಾಹಕ್ಕೆ ಪ್ರಚೋದನೆ ತುಂಬುವ ತಮ್ಮ ಚಿತ್ರಕವನ *ಸಾಗು ನೀ ಮುಂದೆ* ಚೆನ್ನಾಗಿದೆ👌🏻👌🏻 ಹಾಡುವಂತಿದೆ.
ಧನ್ಯವಾದಗಳು🙏🏼🙏🏼
[3/27, 11:24 AM] Wr Vara Lakshmi Amma: ಪ್ರೇಮ ಅವರ ಕವನ
ದಟ್ಟ ವನದ ನಡುವೆ ಏಕಾಂಗಿಯಾಗಿ ನಡೆಯುತ್ತಾ, ನಮ್ಮ ಮನದಲ್ಲಿ ಧೈರ್ಯ, ದೃಢತೆ, ತುಂಬಿಕೊಳ್ಳಬೇಕು, ಇದುವೇ ನಮ್ಮ ನ್ನು ಜೀವನದಲ್ಲಿ ಮುಂದುವರಿಯಲು ಸಹಾಯಮಾಡುತ್ತದೆ ಎನ್ನುವ ಆಶಯ ಇರುವ ಕವನ.
ಸರಳ ಕವನವಾದರೂ ಆಶಯ ಚಂದ. 🙏