ಮಂಗಳವಾರ, ಮಾರ್ಚ್ 17, 2020

1333. ಶಾಯರಿಗಳು-2

ಶಾಯರಿ-1

ಮನೆಯಲ್ಲೇ ಇರಿ ಎಂದರು
ಧಾರಾವಾಹಿಯ ಪಾತ್ರಧಾರಿಗಳು!
ವಾಹಿನಿಗಳು ಅಡಿಗೆ ಕಾರ್ಯಕ್ರಮ ಬಿತ್ತರಿಸಿದವು!
ನನ್ನಾಕೆ ಒಳಗೇ ಕುಳಿತು
ಸಿದ್ಧಪಡಿಸುವ ಹೊಸ ರುಚಿಗೆ
ನಾನೇ ಮೊದಲ ಆಸ್ವಾದಕನು!

ಶಾಯರಿ-2

ಕರೋನಾ ಕರೋನಾ 
ಅಂತ ಹೇಳುತ್ತಲೇ
ಸುತ್ತುತ್ತಿದ್ದನವನು
ನನ್ನ ಹಿಂದೆ ಮುಂದೆ!
ನಾನು ಕಾಲ್ಕಿತ್ತು 
ದೂರ ಓಡುತಲಿದ್ದೆ!
ಕೊನೆಗೆ ತಿಳಿಯಿತು,
ಅವನು ಹೇಳಿದ್ದು
"ಪ್ಯಾರ್ ಕರೋನಾ"
@ಪ್ರೇಮ್@
17.03.2020

ವಿಮರ್ಷೆಗಳು-6

[6/2/2019, 10:17 AM] Wr Sham Prasad Bhat: ಒಂದೇ ಪದ ಉಪಯೋಗಿಸಿ ಬೇರೆ ,ಬೇರೆಯಾಗಿ ಬರೆದ ಐದು ವಾಕ್ಯಗಳು.. ಪಂಚಪದಿ ಎಂಬ ಹೊಸ ಪ್ರಕಾರ*


ಪದ-- ಮಳೆ

೧ . ಬಿಸಿಲು ತೆರೆಮರೆಗೆ ಸರಿದ ಬಳಿಕ ಮೊದಲಮಳೆಯಾಯ್ತು.

೨ . ಅಮ್ಮ ವಣಹಾಕಿದ ಬಟ್ಟೆ ತೆಗೆಯಲು ಮಳೆ ಕಾಯುತ್ತಿತ್ತು.

೩. ಮಳೆಯಾದಾಳೆಂದುಕ್ಕೊಂಡರೆ ಬಿರುಗಾಳಿಯಾದಳಲ್ಲ.

೪ .ಸ್ವಾತಿಮಳೆಗೆ ನನ್ನವಳ ತುಟಿಗಳಲ್ಲೂ ಮುತ್ತುಗಳು ಹುಟ್ಟುತ್ತಿವೆ.

೫ .ನೇಗಿಲಿಗೂ ಮಳೆಗೂ ನೆಂಟಸ್ತಿಕೆ ಕುದುರುತ್ತಿಲ್ಲ.

    🖋ಶ್ಯಾಮ್ ಪ್ರಸಾದ್.
[6/3/2019, 5:27 PM] +91 89719 21907: *ಪ್ರೇಮ್ ಪಂಚಪದಿ* ಗಳ ಕುರಿತು...ಪ್ರೇಮ್ ಜಿ ನೀವು ಪಂಚಪದಿಯನ್ನು ತಪ್ಪಾಗಿ ಅರ್ಥೈಸಿಕೊಂಡಂತಿದೆ.ನಿಮ್ಮ ಪ್ರಕಾರ ಪಂಚಪದಿ ಅಂದರೆ ಐದು ಪದಗಳ ಒಂದು ಸಾಲು ಅಂದುಕೊಂಡಂತಿದೆ.ಆದರೆ ನಿಯಮದ ಪ್ರಕಾರ ಒಂದು ಸಾಲಿನಲ್ಲಿ ಆರು ಪದಗಳಿದ್ದು ಐದು ಸಾಲುಗಳ ಬರಹಗಳು ಇರಬೇಕು ಅಂತ ಅರ್ಥ.ಇರಲಿ ನಿಮ್ಮಯ ಐದು ಪಂಚಪದಿಗಳು ಅಮೋಘ ಹಾಗೂ ಅರ್ಥಪೂರ್ಣ. ಮೊದಲ ಎರಡು ಪಂಚಪದಿಗಳಲ್ಲಿ ಅವಳು ವನಸಿರಿಯಾಗಿ ಹಸಿರಿನ ಸಿರಿಯನ್ನು ಬಿಂಬಿಸುವಲ್ಲಿ ಅವಳು ಕಂಗೊಳಿಸಿದ್ದಾಳೆ.ನನಗೆ ಮೆಚ್ಚುಗೆಯಾದ ಸಾಲೆಂದರೆ *ಅವಳೆಂದರೆ ತಾಳ್ಮೆಯ ಮೂರ್ತಿ ಸಹನೆಯ ಕಾಂತಿ*..ನಿಜ ಸಹನೆಯಲ್ಲಿ ಅವಳಿಗೂ ಅವನಿಗೂ ಯಾವಾಗಲೂ ಪೈಪೋಟಿ ಅದರಲ್ಲಿ ಸದಾ ಗೆಲುವನ್ನು ಪಡೆದವಳೆಂದರೆ ಅವಳೆ ಅವಳು..ನಿಜ ಜಗದಲ್ಲಿ ಅವಳಿಗಿರುವಷ್ಟು ತಾಳ್ಮೆ ಯಾರಿಗೂ ಇಲ್ಲ..ಜೀವವಿರುವ ಅವಳೆಲ್ಲಿ.ನಿರ್ಜೀವವಾದ ಅವನಿಯಲ್ಲಿ...ಅವಳು ಪಡುವಷ್ಟು ಕಷ್ಟ,ನೋವು, ಸಂಕಟ,ಆತಂಕ, ದುಗುಡ ಜಗದ ಯಾವ ಜೀವಿಯೂ ಅನುಭವಿಸಿರಲಾರದು..ಅದಕ್ಕೆಂದೆ ಅವಳು ತಾಳ್ಮೆ ಯಲ್ಲಿ ಒಂದು  ಅವನಿಗಿಂತಲೂ ಒಂದು ಕೈ ಮೇಲು.ಸಹನೆಯಲ್ಲಿ ಅವಳಿಗೆ ಅವಳೇ ಸಾಟಿ.ಇಲ್ಲದಿದ್ದರೆ. ‌ಈ ಜಗ ಇಷ್ಟೊಂದು ಸುಂದರವಾಗಿರುತ್ತಿರಲಿಲ್ಲ.......ನಗು ನಗುತ ಇರಲಿಲ್ಲ.. ಮನ ಮಿಡಿದ ಸಾಲುಗಳು. ‌..ತಪ್ಪಾಗಿದ್ದರೆ ಕ್ಷಮಿಸಿ.. ಶುಭಸಂಜೆ
[6/3/2019, 6:14 PM] Wr Sham Prasad Bhat: *ಪ್ರೇಮ್*

*ವನಸಿರಿಯಾದ ಅವಳ ಹಸಿರುಸೀರೆ ಮನುಜನಿಂದ ಹರಿದುಹೋಗಿದೆ*

ಪರಿಸರದಲ್ಲಿ ಮಾನವ ಹಸ್ತಕ್ಷೇಪ ಮಿತಿಮೀರಿದೆ ಅನ್ನೋದನ್ನು ಚಿಕ್ಕ ಚೊಕ್ಕ ವಾಕ್ಯದಲ್ಲಿ ತಿಳಿಸಿಕೊಡುವ ಶೈಲಿ ಮೆಚ್ಚುಗೆ ಆಯ್ತು..

ಕ್ರಮಸಂಖ್ಯೆ ಕೊಟ್ಟ ವಾಕ್ಯಗಳನ್ನು ಬರೆಯಲು ಸೂಚಿಸಲಾಗಿತ್ತು..

ಉತ್ತಮ ಗುಣಮಟ್ಟದ ವಾಕ್ಯಗಳನ್ನು ಓದಿಸಿರುವಿರಿ.

ಧನ್ಯವಾದಗಳು

*ಶ್ಯಾಮ್ ಪ್ರಸಾದ್*
[6/4/2019, 7:00 AM] Wr Shivaprasad Aradhya: ಪ್ರೇಮ ಕವಯತ್ರಿ ಈಗಾಗಲೇ ಚೆನ್ನಾಗಿ ನುರಿತ ಕವಿ.ಬಹಲ ಚೆನ್ನಾಗಿ ಬರೆಯುತ್ತಾರೆ.ಕವಿಗೋಷ್ಟಿಗೆ ಮಂತ್ರಾಲಯ ದಾರವಾಡವಾದರೂ ಸರಿ ಬೆಂಗಳೂರಾದರೂ ಸರಿ.ಸಧ್ಯ ಇವರ ಪತಿ ರಾಯ ಕವಿಯತ್ರಿಯ ಉಪಟಳ ಸಹಿಸಿ ಈ ಮಟ್ಟದಲ್ಲಿ ತಂದಿದ್ದಾರೆ ಧನ್ಯವಾದಗಳು ಅಭಿನಂದನೆಗಳು ಸಾರ್.ಹಕವಾರು ಪ್ರಶಸ್ತಿ ವಿಜೇತೆ ಇವರು.

ಹೃದಯ

ಹೃದಯದ ಗುಡಿಯಲಿ ಲಿಂಗದಂತೆ ನಿನ್ನನಿರಿಸಿ ಭಕ್ತಿ-ಪ್ರೀತಿರಸದಿ ಅಭಿಷೇಕಕಣಿಗೊಳಿಸಿರುವೆ!


   ಹೌದೇನರೀ ನಿಮ್ಮವರನಾ ಭಲೇ


ಪುಟ್ಟ ಹೃದಯದ ಅಟ್ಟದಲ್ಲಿರುವ ಭಾವನೆಗಳನರಸಿ ಕಟ್ಟಿ ಮಾಲೆಯಾಗಿಸಿರುವೆ! 

ಆಹಹಾ ಭಾವನೆಗಳನ್ನು ಪೋಣಿಸುವ ನಿಪುಣೆ ಕವೀರೀ.            ೨

ಹೃದಯವ ಅಗೆದು ಪ್ರೀತಿ ನೀರನು ಪಡೆಯೆ ಸುಸ್ತಾದೆ!

ಹೃದಯದಲ್ಲಿ ಬಾವಿ ತೋಡಬೇಡಿ ನಿವೇ ನದಿಯಾಗಿಬಿಡಿ   ೩

ಅವಳ ಪ್ರೀತಿಯ ನುಡಿಕೇಳಿ ಗುಂಡಿಗೆ ಬಿದ್ದೆಯಾ ಹೃದಯಾ?೪

ಯಾವಳವಳು ಓಹೋ ಕರಡಿ

ಮುತ್ತು-ರತ್ನ-ಹವಳ-ಬಂಗಾರದಲಿ ಸಿಂಗರಿಸಲಿಲ್ಲ ಹೃದಯವನು!   

ಮತ್ತೆ ಕಾವ್ಯ ಸಿರಿ ಬಳಸಿ ಸಿಂಗರಿಸಿ ಒಲವಲಿ ಸಿಂಗರಿಸಿ                 ೫

@ಪ್ರೇಮ್@
04.06.2019ಹೀಗೇ ಬರೆಯುತ್ತಿರಿ ಶುಭವಾಗಲಿ ಸೋದರಿ ಶುಭವಾಗಲಿ
 
ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ ನೆಲಮಂಗಲ
[6/4/2019, 3:48 PM] Wr Sreemati Joshi: ಪ್ರೇಮ ಜಿ.. ನಿಮ್ಮ ವಾಕ್ಯ ಸೂಪರ್. ಎರಡನೇ ವಾಕ್ಯ ಚೆಂದವಾಗಿ ಒಳಾರ್ಥ ದಿಂಡ ಕೂಡಿದೆ... ನಿಜ ಪ್ರೀತಿಯ ಮಾಲೆ ಎಲ್ಲೆ ಇರಲಿ ಅರಸಿ ಕತ್ತಲೆ ಬೇಕು....👌
[6/5/2019, 1:51 PM] Tr Ramesh: ಪ್ರೇಮ್ ಅವರ ಕತ್ತಲೆ ಕುರಿತ ಪಂಚಪದಿಗಳು ಅರ್ಥಗರ್ಭಿತವಾಗಿ ಮೂಡಿ ಬಂದಿವೆ. 
ಮನದ ಕತ್ತಲೆ ಕಳೆದರೆ ಮನೆದೀಪ ತಾನಾಗೇ ಉರಿವುದು! ಇಷ್ಟವಾಯಿತು.

ವಂದನೆಗಳು🙏
[6/7/2019, 10:24 AM] Wr Kumar Chalawadi: 🌿ಪ್ರೇಮ್ ರವರು ಜಿದ್ದಿಗೆ ಬಿದ್ದವರಂತೆ 
ಒಳ್ಳೊಳ್ಳೆಯ ಪಂಚ್ ಗಳ ಪಂಚಪದಿ ನೀಡಿದ್ದಾರೆ.ಎಲ್ಲವೂ ಚೆನ್ನು! " ನಿನ್ನ ಮೇಲಿನ ಪ್ರೀತಿಯೆಷ್ಟೆಂದರೆ ಸತ್ತಮೇಲೂ ಚಿತೆಯೊಟ್ಟಿಗಿರಲಿ" ಭಾವುಕ ಬರಹ!  ಕಾದಂಬರಿಗೆ ಬೇಕಾದ ವಿಷಯ ಅದು! 
ದೂಸರಾ ಮಾತೇ ಇಲ್ಲ! ಎಲ್ಲವೂ ಮನನೀಯ ನುಡಿಗಳು!👌💐
[6/7/2019, 10:25 AM] Nybr Pramila: ನಿನ್ನ ಮೇಲಿನ ಪ್ರೀತಿ ಎಷ್ಟೆಂದರೆ ಸತ್ತಮೇಲೆ ಚಿತೆಯೊಟ್ಟಿಗಿರಲಿ! 
ವಾವ್... ಪ್ರೀತಿಯ ಪರಾಕಾಷ್ಟೆಯ ಸಾಲುಗಳು. ಪ್ರೇಮ ಮೇಡಂ
ಇಷ್ಟವಾಯಿತು ಈ ಸಾಲು👌👌
[6/8/2019, 8:55 AM] Wr Sham Prasad Bhat: *ಪ್ರೇಮ್*

*ಮಕ್ಕಳು ಕೊಡದ ಶಾಂತಿ ಮರಗಳೇ ನೀಡಿ ಸಲಹಿದವು*

ಹರಹಗಾರರು ಸಾಲು ಮರದ ತಿಮ್ಮಕ್ಕನಿಗೆ ಪಂಚಪದಿಗಳ ಸಮರ್ಪಿಸಿದ್ದಾರೆ..ಇದುಕ್ಕೆ ಪಂಚಾಮೃತ ಸೇವೆ ಅನ್ನಬಹುದು..

ಸೂಕ್ಷ್ಮ ಅಂಶವನ್ನು ಮೇಲಿನ ಸಾಲಿನಲ್ಲಿ ಗಮನಿಸಿದೆ.
ನಿಜಕ್ಕಾದರೆ ತಿಮ್ಮಕ್ಕ ಗಿಡಗಳ ನೆಟ್ಟು ಅವುಗಳನ್ನು ಸಲಹಿದವಳು..ಅವೇ ಅವಳನ್ನು ಸಲಹಿದವು..ವಾವ್ಹ್... ಚೆನ್ನಾಗಿದೆ ಕಲ್ಪನೆ...ಅವಳಿಗೆ ನೆರಳಿತ್ತು,ಶುದ್ಧಗಾಳಿನೀಡಿ ಶಾಂತಿ ನೀಡಿದವು...ಎಲ್ಲರೂ ಸಾಲು ಮರದ ತಿಮ್ಮಕ್ಕ ಮರಗಳನ್ನು ಸಲಹಿದಳು ಅನ್ನುತ್ತಾರೆ..ಮರಗಳು ಅವಳನ್ನು ಸಲಹಿದ್ದು ಕೆಲವರಿಗಷ್ಟೇ ಗೊತ್ತಾಗಿದೆ.ಅದರಲ್ಲಿ ನೀವೊಬ್ಬರು..ಭಿನ್ನ ಚಿಂತನೆ ಇಷ್ಟ ಆಯ್ತು.

ಧನ್ಯವಾದಗಳು

*ಶ್ಯಾಮ್ ಪ್ರಸಾದ್*
[6/10/2019, 2:12 PM] Wr Sreemati Joshi: ಪ್ರೇಮಾ ಮೇಡಂ. ಹೆಣ್ಣಿನ ಮೇಲಿನ ಜಾನಪದ ಸೈಲಿಯ ಭಾವಾಗೀತೆ ಯ ಅರ್ಥ ಸೂಪರ್. ಹೆಣ್ಣಿನ ಕಣ್ಣೀರು ಕೂಡ ಮೌನದಲ್ಲೆಯೆ ಹುದುಗುವ ಭಾವ ಚೆಂದ ಇದೆ. 👌👌👍👍👏👏
[6/13/2019, 7:18 AM] Wr Vinuta Kicchikeri: ಪ್ರೇಮ್ ಜೀ ನಮಸ್ತೇ

ಆಸೆ ಬಿಡಲಾದೀತೇ?
  
ಶಿರೋನಾಮವೇ ಚೆನ್ನಾಗಿದೆ

ಆಸೆಯು ಮನದಲ್ಲಿ ಹುಟ್ಟಿತೆಂದರೆ ಮನುಷ್ಯನು ಚಪಲಕ್ಕಾಗಿ ಏನು ಮಾಡಲು
ಹಿಂದೆ ಮುಂದೆ ನೋಡನು

ಪಕ್ಷಿ ಪ್ರಾಣಿಗಳಿಗೆ ಏನು ಕೊಟ್ಟರು ತಿಂದುಂಡು ಸುಖವಾಗಿರುತ್ತವೆ
ಆದರೂ ಮಾನವನ ಆಸೆಗೆ ಮಿತಿ ಇಲ್ಲ
ಅವನು ತನ್ನ ಸಂತತಿಯವರೆಲ್ಲರಿಗೂ ಬೇಕೆಂದು ಕೂಡಿಡುವ ಸ್ವಾ
ರ್ಥಿ

ಗಾದೆಗಳನ್ನು ರೀತಿ ನಿಯಮಗಳನ್ನು ನಾವೇ ಮಾಡಿಕೊಂಡಿದ್ದರೂ ಯಾವದನ್ನೂ ಅನುಸರಿಸದೆ
ತಮಗೆ ಬೇಕಾದ ಹಾಗೆ ಕಾನೂನನ್ನೆ ತಿದ್ದಿಕೊಳ್ಳುವ 
ಮೂಢರು

ಯಾರು ಏನೇ ಆಗಲಿ ಅಂದರೆ ಸಾಯಲಿ ,ಹೊಡೆದ ದಾಡಲಿ,ರಕ್ತ ದ ಓಕುಳಿಯಾದರೂ ಕೂಡ  
ಓಟು ಮಾರಿಕೊಂಡು ಖುರ್ಚಿಯ ಆಸೆಗೆ ಕಾಲು ಹಿಡಿಯುವರು ದೇಶದ ಚಿಂತೆ ಬಿಟ್ಟು

ಈಗಿನ  ವರ್ತಮಾನಕ್ಕೆ ತಕ್ಕಂತೆ
ಮೂಡಿಬಂದಿದೆ ಭಾವಗೀತೆ ಸುಂದರ🙏🙏💐

ವಿನುತಾ ಕಿಚ್ಚಿಕೇರಿ
[6/14/2019, 11:09 AM] Wr Thaggihalli Ravi: ನಿನ್ನ ಸೆರಗಿನಲಿ....

 *ನಿನ್ನ ಸೆರಗಿನಲಿ ತಲೆತೂರಿಸಿ ಹುದುಗಿ ಅವಿತು*
 *ಕೂತು ಮನಬಿಚ್ಚಿದ ಮಾತನಾಡುತ ಸೆರಗಿಡಿದು  ಸುತ್ತುವಾಸೆ...*
*ನಂಬಿಕೆಯ ಅಂಗಣವದು ನಿನ್ನ ಮಡಿಲೊಲವು,*
*"ಮೊಸರ ಕಡೆಕಡೆದು ಬೆಣ್ಣೆ ಪಡೆವಂತೆ,*
*ನಿನ್ನೊಡಲ ಸೇರಿ ನಾ ಖುಷಿ ಪಡೆಯಬೇಕು!"*
*"ಬೆಚ್ಚನೆಯ ಅಮರ ಸ್ಪರ್ಶವದು ನನ್ನಲ್ಲಿ.."*
*"ನಿನ್ನ ತೆಕ್ಕೆಯ ಒಲವು ಜಗವ ಮರೆಸುವುದಂತೆ!"*
*"ನಿನ್ನಾಸರೆಯಲಿ ಜೀವ ಎಂದೂ ಬರಡಾಗದು"*

ಒಂದನ್ನೊಂದು ಮೀರಿಸುವ ಭಾವ ಜಾಲ *"ನಿನ್ನ ಸೆರಗಿನಲಿ."*

*"ಅಭಿನಂದನೆಗಳು ಪ್ರೇಮಾ ಮೇಡಂ"*

ತಗ್ಗೀಹಳ್ಳಿ ರವಿಕುಮಾರ
[6/14/2019, 6:00 PM] Wr Sham Prasad Bhat: *ಪ್ರೇಮ್ ಸಹೋದರಿ*

*ನಿನ್ನ ಸೆರಗಿನಲಿ*

ಪ್ರಕೃತಿ ಮಾತೆಯ ಸೀರೆಯ ಸೆರಗಡಿಯಲ್ಲಿ ಆಶ್ರಯ ಪಡೆದ ಭಾವನೆಗಳನ್ನು ಹೊತ್ತು ತಂದ ಭಾವಗೀತೆ ಚೆನ್ನಾಗಿದೆ.. ಕೆಲವು ಪದಗಳು ಆಕರ್ಷಕ ರೀತಿಯಲ್ಲಿ ಗೀತೆಗೆ ಮೆರಗಿತ್ತಿವೆ..ಗುಣಮಟ್ಟದ ಬರವಣಿಗೆ ಇಷ್ಟ ಆಯ್ತು

ಧನ್ಯವಾದಗಳು

ಶ್ಯಾಮ್ ಪ್ರಸಾದ್
[6/15/2019, 6:25 AM] Wr Shivaprasad Aradhya: ಪ್ರೇಮ ಕವಿಯತ್ರಿಯೇ ಬಹಳ ಚೆನ್ನಾಗಿ ಬರೆದಿದ್ದೀರಿ ಭಲೇ ವಾವ್ ಬಹಳ ಚಂದಸ ಜನಪದ ಶೈಲಿಯಲ್ಲಿ ಮನಸೂರೆಗೊಳ್ಳುತ್ತದೆ.
ಅಭಿನಂದನೆಗಳು ಪ್ರೇಮಾಜೀ

ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ ನೆಲಮಂಗಲ
[6/17/2019, 11:57 AM] Wr Manjula B K: ಪ್ರೇಮ್ ಅವರ ಶಾಯರಿ 

ನಿದ್ದೆಯಿಂದ ಮಡದಿ ಎಬ್ಬಿಸಿದ ಪರಿಯೇ ಸೊಗಸು. 

ಗೊರಕೆಯಿಂದ ಹೆಂಡತಿ ಇನ್ನು ಎಷ್ಟು ಬೇಸತ್ತು ಸಾಕಾಗಿ ಮೆಣಸಿನ ಮುದ್ದೆ ಮೂಗಿಗೆ ಹಾಕಿದ್ದಾಳೆ ಎಂದರೆ ಅವಳ ಕಷ್ಟ ಅರ್ಥ ಮಾಡಿಕೊಳ್ಳಬೇಕು 👌👌

ಮಂಜುಳ
[6/19/2019, 3:17 PM] Wr Ganesh Pai: * ಪ್ರೇಮ ಮೇಡಂ,
        
        ತಮ್ಮ ಸಾಲುಗಳಲ್ಲಿ ಸನ್ನಡತೆಯ ಬಗ್ಗೆ ಕಾಳಜಿ ತೋರಿಸಿದ್ದೀರಿ.ಏಟು ಬೀಗಿದಾದರೂ ಉತ್ತಮವಾಗಿ ಬಾಳಲು ಕಲಿಸಬೇಕಾಗಿದೆ.ಈಗ ಕಲಿಸುವಿಕೆಯ ಶೈಲಿ ಬದಲಾಗಿದೆ ಮಕ್ಕಳನ್ನು ಶಿಕ್ಷೆ ಕೊಡುವಂತಿಲ್ಲ ಇದು ಹಲವು ಮಕ್ಕಳು ದಾರಿ ತಪ್ಪುವಂತೆ ಆದುದು ಮಾತ್ರ  ವಿಪರ್ಯಾಸ ಅಲ್ಲವೇ...

         ಆಲಸ್ಯ ತೋರಿದೆ ತನ್ನ ಗುರಿಯೆಡೆಗೆ ಸಾಗಿದರೆ ಗೆಲುವು ನಿಂತರೆ ಸೋಲು ಎಂಬುದನ್ನು ತಾವು ಸೊಗಸಾಗಿ ಹೇಳಿದ್ದೀರಿ,👌🏻👌🏻 ಧನ್ಯವಾದಗಳು🙏🏼🙏🏼

              ಗಣೇಶ.ಪೈ
[6/21/2019, 3:30 PM] Wr Dinesh Sir: 🙏🙏

*ಪ್ರೇಮ್ ರವರ*

ಶಾಯರಿಗಳು ಬಲು ಚೆಂದ ಇವೆ.

ಲಟ್ಟಣಿಗೆಯ ಕುರಿತು ಬಲು ಅದ್ಭುತವಾಗಿ ಬರೆದಿರುವಿರಿ. ಇಲಿಯ ರುಚಿಯನ್ನು ಬೆಕ್ಕು ತಿಳಿದಂತೆ ಎಂದಿರುವಿರಿ.ನಿಜ, ಲಟ್ಟಣಿಗೆ ಎಂಬುದು ಒಂದು ದಿವ್ಯಾಸ್ತ್ರ ಎನ್ನಬಹುದು.ಅದು ಕೈಲಿದ್ದರೆ ಸ್ವಲ್ಪ ಹತೋಟಿಯಲ್ಲಿರುತ್ತದೆ.ಅದರಲ್ಲೂ ಆಗಾಗ ಪೆಟ್ಟು ತಿಂದು ನೋವ ಅನುಭವಿಸಿದ್ದರಂತೂ ಸನಿಹವೂ ಸುಳಿಯಲಾರರು..ಅದು ಲಟ್ಟಣಿಗೆಗೆ ಗೊತ್ತು. ಆ ನೋವನ್ನು ಎಲ್ಲರ ಬಳಿ ಹೇಳಿಕೊಳ್ಳುವುದಾದರೂ ಹೇಗೆ
.ಸುಮ್ಮನೆ ಸಹಿಸಿಕೊಳ್ಳಬೇಕಷ್ಟೆ. ಆದ ನೋವು ಮಾತ್ರ ಅಣಕಿಸುತ್ತಲೆ ಇರುತ್ತದೆ.ಇನ್ನೊಮ್ಮೆ ಲಟ್ಟಣಿಗೆ ಹಿಡಿದು ನಿಂತವರಿಂದ ಆದಷ್ಟು ದೂರವಿರಿ ಎಂಬ ಸಂದೇಶವ ಹತ್ತಿರದ ಮೆದುಳಿಗೆ ರವಾನಿಸುತ್ತಲೆ ಇರುತ್ತವೆ..ಬಹಳ ಚೆಂದ ಬರೆದಿರುವಿರಿ..

👍👍👌👌👌

ಎರಡನೆ ಶಾಯರಿಯೂ ಸಹ ಚೆಂದವಿದೆ

👍👌👌👌👌
[6/21/2019, 3:42 PM] Wr Ganesh Pai: ಪ್ರೇಮ ಮೇಡಂ,

ಯಾರಿಗೂ ಗೊತ್ತಿಲ್ಲದ ಲಟ್ಟಣಿಗೆ ಯು ಗುಟ್ಟು ಬಹಿರಂಗ ಪಡಿಸಿದ್ದೀರಿ😀 ಉತ್ತಮ ಶಾಯರಿ👌🏻👌🏻

ಧನ್ಯವಾದಗಳು🙏🏼🙏🏼
   ಗಣೇಶ.ಪೈ
[6/21/2019, 8:01 PM] Wr Shivaprasad Aradhya: ಬಹಳಷ್ಟು ಜನ ಕವಿಗಳು ನಿಯಮ ಪಾಲಿಸಿ ಬರೆದಿಲ್ಲ.ಶಾಯರಿ ಕಾಫಿಯಾ ಇಲ್ಲದೇ ಶಾಯರಿಯಾಗದು ಎಲ್ಲಾ ನಗೆ ಹನಿಗಳನ್ನೇ  ಹಾಕಿದ್ದಿರಿ ಬಹಳಷ್ಟು ಮಂದಿ. ಉರ್ದು ಹಾಗೂ ಅರೇಬಿಕ್ ನಿಂದ ಬಂದ ಶಾಯರಿ ಕನಿಷ್ಠ ಮೂರು ವಾಕ್ಯಗಳು ಗರಿಷ್ಠ ನಾಲ್ಕು. ಇಲ್ಲಿ ಮೂರನೇ ಸಾಲಲ್ಲಿ ರದೀಫ್ ಅಂದರೆ ಪ್ರಾಸ ತಪ್ಪಿದರೂ ನಡೆಯುತ್ತದೆ  ಅದಿರದೇ ಶಾಯರಿ ಯಾಗದು

ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ ನೆಲಮಂಗಲ
[6/22/2019, 10:53 AM] Wr Amaresh: 🙏🌹 *ಪ್ರೇಮ್ ಸರ್*🙏🌹

ಹಣ ಎಂದರೆ ಹೀಗೆ ಜೀವವನ್ನು ಉಳಿಸುತ್ತದೆ, ಜೀವವನ್ನು ಅಳಿಸುತ್ತದೆ, ಅಳಿದ ಜೀವವನ್ನು ಮರಳಿಸುತ್ತದೆ. ನಮ್ಮವರು ಪರರಾಗುತ್ತಾರೆ, ಪರರು ನಮ್ಮವರಾಗುತ್ತಾರೆ..ಅದುವೇ ಪವರ್ ಆಪ್ ಹಣ🤪

✍ *ಅಮರೇಶ ಎಂ ಕಂಬಳಿಹಾಳ*
[6/22/2019, 11:06 AM] Wr Vara Lakshmi Amma: ಪ್ರೇಮ ಅವರ ಶಾಯರಿಗಳು 
 ತಾಯಿ ಮಕ್ಕಳನ್ನೇ ಅಗಲಿಸುವ ಈ ಹಣ,  ಹಣವೂ ಬಾಯಿಬಿಡುವಂತೆ ಮಾಡುವ ಹಣ,   ಹಣವಿಲ್ಲದವರನ್ನು ಕಾಲ ಕಸಕ್ಕಿಂತ ಕಾಣುವವರು 
 ಹಣವೇ ನಿನ್ನಯ ಗುಣ ಏನೆಂದು ಹೇಳಲಿ? 
 ಹಣದ ಗುಣ ಎತ್ತಿ  ಹಿಡಿಯುವ ಶಾಯರಿಗಳು 🙏
[6/24/2019, 9:54 AM] Wr Sham Prasad Bhat: *ನಿಮಗಾಗಿ*

*ಪ್ರೇಮ್*

ಮಾನವ ಹಸ್ತಕ್ಷೇಪದಿಂದ ಪ್ರಕೃತಿಯ ಅಂದ ಹಾಳಾಗಿದೆ..ಸಹನಾಮಯಿ ಪ್ರಕೃತಿ ಮಾತೆ ಸಾಧ್ಯ ಆದಷ್ಟು ಸಹಿಸಿಕ್ಕೊಂಡಳು.ಅವಳ ಸಹನೆಗೂ ಮಿತಿಯಿದೆ.ತಾಳ್ಮೆ ಯ ಕಟ್ಟೆ ಒಡೆದಿದೆ.ಮಳೆ ಬೆಳೆಯ ಕೊರತೆಯ ರೂಪದಲ್ಲಿ ಇದೀಗ ನಮ್ಮ ಅನುಭವಕ್ಕೆ ಬರುತ್ತಿದೆ.ಇನ್ನೂ ಎಚ್ಚೆತ್ತುಕ್ಕೋಳ್ಳದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ..

ಕನಿಷ್ಠ ಒಂದೆರಡು ಗಿಡಗಳನ್ನು ನೆಟ್ಟು ಸಲಹಿದರೆ ಅದು ಪ್ರತಿರೂಪದಲ್ಲಿ ನಿನಗೆ ಸಾಕಷ್ಟು ಸವಲತ್ತುಗಳನ್ನು ನೀಡಲಿದೆ.ಶುದ್ಧ ಗಾಳಿ,ನೆರಳು ಇತ್ಯಾದಿ.

ಮಳೆ ಕೊರತೆ ಅನುಭವಿಸುತ್ತಿರುವ ಈ ದಿನಗಳಲ್ಲಿ ಸಮಯೋಚಿತ ರೂಪದಲ್ಲಿ ನಿಮ್ಮ ಬರಹ ಬಂದಿದೆ.ಮೆಚ್ಚುಗೆ ಆಯ್ತು.

ಧನ್ಯವಾದಗಳು

*ಶ್ಯಾಮ್ ಪ್ರಸಾದ್*
[6/24/2019, 9:55 AM] Wr Anitha: *ಪ್ರೇಮ್ ಮೇಡಮ್ ಅವರ*

       *ನಿಮಗಾಗಿ*

*ಸೃಷ್ಟಿಯಿಂದ ಎಲ್ಲವನ್ನೂ ಕಸಿದುಕೊಂಡಿರುವ ನಮಗೆ ಹಿಂತಿರುಗಿಸಿ ಕೊಡುವ ಬುದ್ದಿಯಿಲ್ಲ*.
*ನೀವು ಬದುಕಿ, ನನ್ನ ಜೀವ ಸಂಕುಲವನು ಉಳಿಸಿರೆನ್ನುತಾ ಪ್ರಕೃತಿಯ ತ್ಯಾಗ ಭಾವಕೆ ಬೆಲೆ ಕೊಡುತಾ ಮುಂದಿನ ಪೀಳಿಗೆಗೆ ಬೆಳಕಾಗಿರಿ ಎಂದು ಕವಿ ಆಶಯವಾಗಿದೆ*

*ಧನ್ಯವಾದಗಳು*
[6/25/2019, 6:17 AM] Wr Shivaprasad Aradhya: ಪ್ರೆಮ್ ಮಾತು‌ ಮರೆಯಾಗುತ್ತಿರುವ ಆನ್‌ಲೈನ್ ಚಾಟಿಂಗ್ ಜಂಗಮವಾಣಿಯ ಮಾತುಕತೆ ಯ ಜಂಭಗಳ  ಬಯಲು ಮಾಡುತಾ ತಾವೂ ಅದರಲ್ಲೊಬ್ಬರಾಗಿ ಜಂಭ ಬಿಟ್ಡು ಒಪ್ಪಿರುವ ಪ್ರೇಮರವರು ಕೊನೆಯಲಿ ಚೆನ್ನಾಗಿ ಛೀಮಾರಿ ಹಾಕಿದ್ದಾರೆ 
ಭಲೆ ಇದಪ್ಪಾ ಕವನ ಜಂಭ ಪಡಲೇ ಬೇಕು ನೀವೆಂತಹಾ ಕವಿಯೆಂದು ಪ್ರೇಮ ಬಹಳ ಚೆನ್ನಾಗಿ ಬರೆದಿದ್ದೀರಿ ಭಲೇ

ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ ನೆಲಮಂಗಲ
[6/25/2019, 6:20 AM] Wr Siraj Ahmed Soraba: ***ಪ್ರೇಂ ಸಹೋದರಿ***
"ಹೀಗಿದೆ ಈಗಿನ ಪ್ರಪಂಚ ಎಂಬ
ಕವನವು ವಾಸ್ತವಿಕತೆಗೆ ಕನ್ನಡಿ
ಹಿಡಿದಂತಿದೆ.ತಾವು ಈ ಮೋಬೈಲ್ ಜೀವನದ ಒಂದು
ಅವಿಮಾ ಅಂಗವಾಗಿದೆ.ಮೋಬೈಲ್ ನೋಡದೆ.ಊಟವೂ ಸೇರದ
ಪರಿಸ್ಥಿತಿಯಾಗಿದೆ. ಕೆಲವೊಮ್ಮೆ
ಮೋಬೈಲ್ ಇಲ್ಲದೆ ಜೀವನ
ನಡೆಸುವುದೇ ಕಷ್ಟವಾಗುತ್ತದೆ.
ಮೋಬೈಲ್ ನಿಂದ ಲಾಭವೂ ನಷ್ಟವೂ ಇದೆ ಸಾಧಕ ಬಾಧಕ
ಅಂಶಗಳೂ ಇವೆ ಎಂಬುದನ್ನು
ನಿಮ್ಮ ಕವನ ಹೇಳುತಿದೆ.
ಹೃತ್ಪೂರ್ವಕ ಅಭಿನಂದನೆಗಳು

"ಯು ಸಿರಾಜ್ ಅಹಮದ್ ಸೊರಬ"
[6/25/2019, 9:53 AM] Wr Vani Bhandari: *ನಮಸ್ತೇ*
🙏🏻🙏🏻🙏🏻
*ಪ್ರೇಮ ಅವರ ಹೀಗಿದೆ ಈಗಿನ ಪ್ರಪಂಚ*

      ಬಹುಶಃ ಮೇಡಂ ಹೇಳುವಂತೆ ಹೀಗೆ ಇದೆ ಅನಿಸುತ್ತದೆ ನಮ್ಮ ಪ್ರಪಂಚ.

    ಏಕೆ ಅಂದರೆ ನಮ್ಮ ನಿಜವಾದ ಪ್ರಪಂಚ ಯಾವುದು ಎಂಬ ಅರಿವು ನಮಿಗಿಲ್ಲ.
ಜಂಗಮವಾಣಿಯೊಂದಿಗೆ ಒಂದಿಷ್ಟು ಸಂಬಂಧಗಳು ಏರ್ಪಟ್ಟರೆ ಅದೇ ಮಹಾ ದೊಡ್ಡ ಸಾಮ್ರಾಜ್ಯ ಎಂದು ಬೀಗುವ ಅದೆಷ್ಟೋ ಮನಸ್ಸುಗಳು ನಮ್ಮ ನಿಮ್ಮ ನಡುವೆ ಇವೆ.

ಇದರಿಂದಾಗಿ ನಾವು ಬಾಳಿಬೆಳಗಬೇಕಾದ ಸಂಬಂಧಗಳು ಹಾಳಾಗಿ ಹೊಗುತ್ತಿವೆ ಎಂಬ ಸಣ್ಣ  ಅಂಶದ ತಿಳಿವು ಸಹ ಇಲ್ಲದೆ ಅದರೊಳಗೆ ಮುಳುಗಿ ಹೋಗುವ ಜನತೆ ಅದೆಷ್ಟೋ.
ಉಳಿದಂತೆ,,,,,,
👉ಸುಂದರವಾಗಿ ಮೂಡಿದೆ.
👉ಸ್ವಗತವಾದ ಸವಿನುಡಿ ಯಂತಿದೆ.
👉ಉತ್ತಮ ಸಂದೇಶ ಹೊಂದಿದೆ.
👉ಇನ್ನೂ ಸ್ವಲ್ಪ ಮುಂದುವರಿಸುವ ಅವಕಾಶವಿತ್ತು ಅನಿಸ್ತು ನಂಗೆ.
👉 ಒಟ್ಟಾರೆ ಸುಂದರವಾದ ಭಾವಲಹರಿ,
ಸುಂದರವಾಗಿ ಬರೆಯುವ ನಿಮಗೆ ಯಶಸ್ಸು ಸಿಗಲಿ ಮೇಡಂ ಜಿ.

*ಧನ್ಯವಾದಗಳೊಂದಿಗೆ*

ಪ್ರಯಾಣದಲ್ಲಿದ್ದು ಬರೆದಿರುವೆ ಅಕ್ಷರಗಳು ತಪ್ಪಾಗಿದ್ರೆ ಬೈಕೊಬೇಡಿ.😜
                            ✍ *ವಾಣಿ ಭಂಡಾರಿ*
[6/25/2019, 5:24 PM] Wr Dinesh Sir: 🙏🙏

*ಪ್ರೇಮ್ ರವರ*

ಹೀಗಿದೆ ಈಗಿನ ಪ್ರಪಂಚ.

ಬಹಳ ಸೊಗಸಾಗಿ ಬರೆದಿರುವಿರಿ.ವಾಸ್ತವಿಕ ಅಂಶಗಳನ್ನೊಳಗೊಂಡ ಕವಿತೆ ಓದುಗರ ಕಣ್ಣು ತೆರೆಸುವುದಂತೂ ನಿಜ.ಮೊಬೈಲ್ ಎಂಬ ಸಾಧನವನ್ನು ದುರುಪಯೋಗಪಡಿಸಿಕೊಂಡು ವಿವೇಚನೆ ಮರೆತು ಬಳಸುತ್ತಿರುವುದು ಅಪಾಯಕಾರಿ ಸನ್ನಿವೇಶವನ್ನು ಸೃಷ್ಟಿಸಿದೆ. ಹತ್ತಿರದವರು ಯಾರಿರಲಿ ಬಿಡಲಿ ನನಗೆ ಮೊಬೈಲ್ ಒಂದಿದ್ದರೆ ಸಾಕು ಎಂಬ ಜಂಭ ಬಂದಿದೆ..ಒಟ್ಟಾರೆ ಎಲ್ಲ ಸಂಗತಿಗಳನ್ನು ಬಹಳ ಚೆನ್ನಾಗಿ ಪಡಿಮೂಡಿಸಿ ಅರ್ಥಪೂರ್ಣವಾದ ಕಾವ್ಯ ಲಹರಿಯನ್ನು ಹರಿಸಿದ್ದೀರಿ..

ಕೊಟ್ಟ ಪದಕ್ಕೆ
         ಸುಂದರವಾದ
              ಸಾರ ಭರಿತ
                        ಬರಹ

👌👌👌👍👍👍💐💐
[6/26/2019, 7:12 AM] Wr Shivaprasad Aradhya: ಪ್ರೇಮ ಅದೆಷ್ಟು ಆಳವಾಗಿ ಅಗಾಧವಾದ ಚಿಂತನೆಯಲ್ಲಿ ಜೀವನಾನುಭವ ಚಿಂತನೆಯನ್ನು ಅತ್ಯಮೋಘ ವಾಗಿ ಅತ್ಯದ್ಭುತವಾಗಿ ಒಡಮೂಡಿಸಿರುವಿರಿ ತಮ್ಮ ಆ ಅರಿವಿ ಅನುಭವ ಅನುಭಾವದ ಮಹಾ ತಾಯ್ತನಕೆ ಇಗೋ ಶಿರಬಾಗಿ ಶರಣೆಂಬೆ ಅತ್ಯುತ್ತಮ ಕವಮ ಪ್ರೇಮ ಬಹಳ ಚೆನ್ನಾಗಿ ಬರೆದಿರುವಿರಿ ಅಭಿನಂದನೆಗಳು.

ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ
[6/26/2019, 7:30 AM] Wr 100 Ahmd: *ಪ್ರೇಮ್ ಗುರುಗಳಿಗೆ*🙏

ಮನಸ್ಸು .....ಕವಿತೆಯ ಸಾರವನ್ನು ತುಂಬಾ ಚನ್ನಾಗಿ ವಚನಗಳ ಭಾವೋಕ್ತಿಯನ್ನು ತುಂಬಿ ವಾಚಿಸುವ ಗುಣವನ್ನು ಮನಸ್ಸಿಗೆ ಮುದನೀಡುವ  ಮುಗದ್ದತೆ ಎದ್ದು ಕಾಣುತ್ತದೆ.....

ಜೊತೆ ಜೊತೆಗೆ ಗಾದೆಗಳ ಮಾತಿನಿಂದ ಭಾವಗೀತೆಯಲ್ಲಿ ರಚಿಸಿದ ನಿಮ್ಮ ಹೃದಯ ದೊಡ್ಡದು ....
ತಿಳಿಯುವ ತಿಳಿಸುವ ಪರರನು ಪ್ರೀತಿಸುವ ...ಮಾತಿನ ಹಿಡಿತ ಹಿರಿತನ ಕಿರಿತನ ಮಾತೇ ಆಯುಧ........ಬಂದ ಜಗದಲಿ ಪ್ರೇಮ ಒಂದೇ ಶಾಶ್ವತ ಎನ್ನುತಾ ಕವಿತೆಯನ್ನು ಕೋನೆಗಾಣಿಸುವ ಪರಿ ಸೊಗಸಾಗಿದೆ....
ವಚನೋಕ್ತಿಯನ್ನು ಮೊದಲು ಓದಿಸಿದಕ್ಕೆ..ತುಂಬು ಹೃದಯದ ಅಭಿನಂದನೆಗಳು...

*ನೂರ್*
[6/29/2019, 5:45 AM] Wr Vinuta Kicchikeri: ಪ್ರೇಮ್ ಮೇಡಮ್ ನಮಸ್ತೇ
 ಚಂದವಾಗಿ ಬರೆದಿದ್ದೀರಾ
ಬದುಕನ್ನು ನಾಟ್ಯಕ್ಕೆ ಹೋಲಿಸಿ.
[6/29/2019, 6:16 AM] Wr Shivaprasad Aradhya: ವಾವ್ ಬ್ರಾಹ್ಮಿ ಮಹೂರ್ತದಲ್ಲೇ ಎದ್ದು ಬರೆವ ಅಪಾರ ಸಾಹಿತ್ಯಾಸಕ್ತಿ ಜೊತೆಗೆ ಎಲ್ಲರಿಗಿಂತಲೂ ಮುಂಚೆಯೇ ಕೊಟ್ ವಿಷಯಕ್ಕೆ ಸಮರ್ಥವಾಗಿ ಬರೆಯಬಲ್ಲ ಚಾತಿ ಈ ಪ್ರೇಮ್ ದು.ಹೊಸಬರಿಗೆ ಯಾರಪ್ಪಾ ಇವರು ಗಂಡೋ ಹೆಣ್ಣೋ  ಎಂದು  ಹೆಸರಲ್ಲಿ ತಬ್ಬಿಬ್ಬಾಗಿಸಿ ತಮಾಷೆ ನೋಡುವರು.

ಹೌದು ನಟನೆ ಎಂಬ ಪದ ದಲ್ಲೇ ನಾಟ್ಯವಿದೆ.ನಾಟ್ಯವಾಡುತ್ತಲೇ ಅಭನಯಿಸುವವಯಕ್ಷಗಡನ ಕಲೆ ಎಷ್ಟು ಚಂದ.ಬಹುಶಃ ಇವರೂ ಅ ಕಡೆಯವರೇ ಅಗಿ ತಮ್ಮ ಕವನಗಳಲ್ಲಿ ಯಕ್ಷಗಾನ ವಾಡುತ್ತಾರೆ .ಈ ಕವನದಲ್ಲಿಯೂ ಇವರು ತಮ್ಮ ಪ್ರತಿಭೆ ತೋರಿ ಯಕ್ಷಗಾನವನ್ನೇ ಆಡಿದ್ದಾರೆ. ತಂಗಿ ಪ್ರೇಮ ನನತನ ಅಣ್ಣನನ್ನಾಗಿ ಮಾಡಿಕೊಂಡಿದ್ದಾರೆ .ಶಿವಣ್ಣ ಎಂದು ಪ್ರೀತಿಯಿಂದ ಕರೆಯುತ್ತಾರೆ.ಮಂತ್ರಾಲಯದವರೆಗೂ ಕವಿಗೋಷ್ಟಿಗೆ ಭಾಗವಹಿಸಿ ನಮ್ಮೋಡನೆ ಇದ್ದ ತಂಗಿ.ಅನುಬವ ಅನುಭಾವ ಎರಡೂ ಸಮ್ಮಿಳನ ಗೊಂಡ ನಿಮ್ಮ ಕವನಚಸೊಗಸಾಗಿ ಮಾರ್ಗದರ್ಶಿಯಾಗಿದೆ .ಚೆನ್ನಾಗಿ ನಾಟ್ಯವಾಡಿದ್ದೀರೀ ದೇವಿಯಾಗಿ.ಧನ್ಯವಾದಗಳು ಅಭಿನಂದನೆಗಳು ಪ್ರೇಮ

ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ ನೆಲಮಂಗಲ.

ಶಿ
[6/29/2019, 1:59 PM] Wr Veena Joshi Ankola: ಕವನ  ೧.....

ಪ್ರೇಮ  ಅವರೇ 🙏🏽
ನಿಮ್ಮ ಕವನ ಈ ದಿನದ ಮೊದಲ ಕವನ ಓದಿ ತುಂಬಾ ಖುಷಿಯಾಯ್ತು .
ದಿವ್ಯ ಚೇತನವಾದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರನ್ನು ನೆನಪಿಸಿದ ನಿಮ್ಮ ಕವನ ಈ ಬದುಕೊಂದು ದೊಡ್ಡ ರಂಗಭೂಮಿ ವೇಷ ತೊಟ್ಟು 
ಅಭಿನಯಿಸುತ್ತಿರುವ ನಾವೆಲ್ಲರೂ ಸಮಯ ಬಂದಾಗ ಎದ್ದು ಹೋಗಬೇಕು ಎಂಬುದನ್ನು  ಬಹಳ ಅರ್ಥಪೂರ್ಣವಾಗಿ ಸೂಕ್ಷ್ಮ ವಾಗಿ ಹೇಳಿತು..
ನಿಜಕ್ಕೂ ಕಲಾವಿದರು ತಾವು ಕಷ್ಟಪಟ್ಟು ಬೇರೆಯವರು ಸಂತೋಷದಿಂದ ಇರುವಂತೆ ಮಾಡುತ್ತಾರೆ .ಅಂಥ ಕಲಾವಿದರಿಗೆ  ನಿಮ್ಮ ಕವನ ಅರ್ಪಣೆ ಆಗಲಿ .
ನಮಸ್ಕಾರ 
.
ವೀಣಾ ಜೋಶಿ .🏵🏵
[7/5/2019, 5:08 PM] Wr Vani Bhandari: *ಪ್ರೇಮ ಮೇಡಂ ಜಿ ನಿಮ್ಮ ಗಜಲ್ ಬಹು ಸುಂದರವಾಗಿ ಮೂಡಿದೆ*

*ಸೊಗಸಾಗಿ ಬರೆಯುವಿರಾ ನೀವು*

 *ಶುಭವಾಗಲಿ ನಿಮಗೆ*

*ಧನ್ಯವಾದಗಳೊಂದಿಗೆ*

                   ✍   *ವಾಣಿ ಭಂಡಾರಿ*
[7/6/2019, 7:27 AM] Wr Shivaprasad Aradhya: ಪ್ರೇಮ ಕವಿಯತ್ರಿಯವರ ಗಜಲ್ ಉತ್ತಮವಾಗಿದೆ.ನಂಬಿಸಿ ಕೊರಳು ಕೊಯ್ಯುವ ಮತ್ತು  ಪ್ರೇಮದಲ್ಲಿ ಸ್ನೇಹದಲ್ಲಿ ಇದ್ದು ಬೆಳೆಯುವವರೆಗೂ ಅಸರೆ ಪಡೆದು ತಮ್ಮ ಹೊಲಸು ಮನ ತೋರುವ ಜನರ ಬಗೆಗೆ ವರ್ಣನೆಯಿದೆ.ಕಾವ್ಯದಲ್ಲೂ ಚೇತರಿಕೆಯಿದೆ ನಿಯ ಬದ್ದವಾದ ಗಜಲ್ ಬಹಳ ಚೆನ್ನಾಗಿ ಮೂಡಿ ಬಂದಿದೆ.

ಶಿವಪ್ರಸಾದ್ ಆರಾಧ್ಯ ನೆಲಮಂಗಲ
[7/6/2019, 8:59 AM] Wr Sham Prasad Bhat: *ಗಝಲ್*
ಪ್ರೇಮ್

ಹಿತಶತ್ರುಗಳಿಂದ ವಂಚನೆಗೊಳಗಾದ ಭಾವ..ಚೇತರಿಕೆ ಕಂಡ ಚಿತ್ರಣ ಒಳಗೊಂಡ ಗಝಲ್ ಸೊಗಸಾಗಿ ಮೂಡಿಬಂದಿದೆ.

ಧನ್ಯವಾದಗಳು 

ಶ್ಯಾಮ್ ಪ್ರಸಾದ್
[7/6/2019, 6:22 PM] Wr Siddesh: *ಪ್ರೇಮ್*  ಗಜಲ್ ನ ಸುತ್ತ ...

*ಮಾನಸಿಕ ಅಸೌಖ್ಯದಿಂದ ಸ್ವಲ್ಪ  ಚೇತರಿಕೆ ‌..‌ಮನವೆಂಬ ಮರ್ಕಟಕ್ಕೆ ಬುದ್ದಿ ಹೇಳುರಿರುವೆ ...*

ಪ್ರಸ್ತುತ ಸಮಾಜದಿ ....ಅಲ್ಲಾ ನಮ್ಮ ಮನಸು ಕೆಲವೊಮ್ಮೆ ನಮ್ಮ ಮಾತೇ ಕೇಳಲ್ಲ ...ಯಾರು ನಮ್ಮನ್ನಾ ಜಾಸ್ತಿ ಅವಾಯ್ಡ ಮಾಡುತ್ತಾರೊ ಅವರನ್ನ ತಿರುಗಿ ತಿರುಗಿ ಪುನಃ ಮಾತಾಡಿಸೊ ತರ ಮಾಡಿಸುತ್ತೆ ... ಮನಸಿಗೆ ಎಷ್ಟು ಏಟು ತಿಂದರು ಅದುಕೆ ಇನ್ನೂ ನೋಯುವ ಹಟ ....ಇನ್ನೂ ಕವಯತ್ರಿ ಮಾನಸಿಕವಾಗಿ ನೊಂದಿರೊ ತರ ಮೊದಲನೆ ಗಜಲ್ ಪೇಸ್ ಹೇಳುತ್ತಾ ಇದೆ ಹುಜೂರ್ ...

*ಸರಿ - ತಪ್ಪು ಗ್ರಹಿಸಲು ಬಾರದ ಮನಕ್ಕೆ ...ಸರಿ ಯಾವುದು ತಪ್ಪು ಯಾವುದು ಎಙದು ತಿಳಿಯದೆ ಗೊಂದಲ ಉಂಟಾಗಿದೆ* ‌....ಸರ್ವ ರನ್ನ ಕಣ್ಣು ಮುಚ್ಚಿ ಸತ್ಯ ವೆಂದು ನಂಬುವ ಮನ ನಿರಾಸೆಗೊಂಡಿದೆ ಹುಜೂರ್ 

*ಬೆಳ್ಳಗೆ ಇರುವುದು ಹಾಲು ಅಲ್ಲಾ*....ಎಂಬ ಸೂಕ್ತಿ ತಿಳಿಯದೆ ಮೋಸ ಹೋದ ಮನಸೇ ಹುಜೂರ್!!

ಕೆಸರ ಮೇಲಿನ ಕಮಲ ಅಷ್ಟೇ ಗಮನಾರ್ಹ ವಾಗುತ್ತೆ ಮ.ಬಟ್ ಅದು ಬಂದಿರುವ ಹಿಂದಿರುವ ವಾತಾವರಣ ಗಮನಕ್ಕೆ ಬಾರದು 

ಉದಾ : ಪರೀಕ್ಷೆ ಯ ಪಲಿತಾಂಶ ಸಿನಿಮಾ 
‌‌‌ 
ಸ್ನೇಹದಿ ಮೋಸ ವಂಚನೆಗೆ ಒಳಗಾದ ಮನಸಿನ ಮಾತುಗಳು + ಹಲವರು ನಂಬಿಕೆಗೆ ಅನರ್ಹ ರು ಎಂಬುದು ನಿಮ್ಮ ಗಮನಕ್ಕೆ ಬಂದಿರುವುದು ‌..ಗಮನಿಸಲೇಬೇಕಾದ ಅಂಶ## 

*ಮುಖ ನೋಡಿ ಮೊಳಹಾಕಬೇಡ ಗುಣ ನೋಡಿ ತಿಳಿ* ಅಂತಾ ಗಾದೆ ಇದೆ ‌....

ಅಂದವಾಗಿರೊ ಮುಖದಿ ಅಂದವಾಗಿರೊ ಮನಸು ಕೂಡಾ ಇದ್ದರೆ ಎಷ್ಟು ಸೊಗಸು ಅಲ್ವಾ ಬಟ್ ಅ ತರ  ಇರಲ್ಲ ...ಕಾರಣ ಗೊತ್ತಿಲ್ಲ ...ಹುಜೂರ್ ....

ಕೊನೆಯ ಸಾಲುಗಳ ‌‌‌ ಮೂಲಕ ಸಂದೇಶ ಸೂಪರ್ ‌‌‌

*ಪ್ರೀತಿ - ಪ್ರೇಮವೆಂಬುದು ಜಗದ ಬಹುದೊಡ್ಡ ಮಾಟಮಂತ್ರವಾಗಿದೆ*

*ಭಾವನೆಗಳ ಜೊತೆ ಮನುಷ್ಯನ ಆಟ ವಿಪರೀತ ಅಗಿದೆ* ...

ಒಂದು ಮನಸಿನ ನೋವು ಇನ್ನೊಂದು ಮನಸಿಗೆ ತಿಳಿಯುತ್ತಿಲ್ಲ ...ಯಾಕೆ ಮಾನವ ಮನುಷ್ಯತವ ಮರೆತು ಮೃಗ ಅಗತಾ ಇದಾರೆ ...

*ನಮ್ಮ ನೋವು ನಮಗೆ ಅರ್ಥ ಅದರೆ ಮನುಷ್ಯ ಅಂತಾ ಬೇರೆಯವರ ನೋವು ನಮಗೆ ಅರ್ಥ ಅದರೆ ಮನುಷ್ಯ ರಾಗಿದಿವಿ ಅಂತಾ ಅರ್ಥ ‌..*

ಪ್ರೇಮದಿಂದಲೇ ಜನ ಸ್ನೇಹದ ನಾಟಕವಾಡಿ ಕುತ್ತಿಗೆ ಕೊಯ್ಯುವುದು ...ಸಾಮನ್ಯವಾಗಿ ದೆ ಹುಜೂರ್ ‌‌‌....

ಒಟ್ಟಿನಲ್ಲಿ ‌‌...ಮಾನವನ ಬದುಕಿನಲ್ಲಿ ನಡೆಯುವ ಸಂಗತಿಗಳು ಅದರ ಸುತ್ತ ...ಮನುಷ್ಯ  ಹೇಗೆ ಎಚ್ಚರಿಕೆ ವಹಿಸುವುದು  ಸ್ನೇಹ ಪ್ರೀತಿ  ಜೀವನ ಜೀವನದ ಕಲೆ ...ಅವರ ಅನುಭವದ ಜೊತೆಗೆ ಸಂದೇಶ ಬರಿತ ಗಜಲ್ ಸೂಪರ್ 
*ಪ್ರೇಮ ಮೆಡಮ್*
  

ಗ್ರ ಹಿಕೆಯಲ್ಲಿ ತಪ್ಪು ಅದರೆ ಕ್ಷಮಿಸಿ ....

*ಸಿದ್ದೇಶ ಎಸ್ ವಿ*
[7/10/2019, 12:18 PM] Wr Vani Bhandari: *ನಮಸ್ತೇ*
🙏🏻🙏🏻🙏🏻
ಪ್ರೇಮ ಮೇಡಂ
           ನಿಮ್ಮ ಕವನದ ತಿರುಳು ನನಗಿಷ್ಟವಾಯ್ತು ಜಿ,

ಅರ್ಥಗರ್ಭಿತ ವಾದ ಸ್ಪುರಣೆಯುಳ್ಳದಾಗಿದೆ.

ಅ ಎರಡನೆ ಪ್ಯಾರದ ಆ ನುಡಿಗಳು ಮುತ್ತಿನ ಮಣಿಹಾರದಂತೆ ಕಂಡವು ಎನಗೆ.

    ತಿರುಳುಳ್ಳ ಅಂಶಹೊತ್ತ ಕವನ.

     ಬಹು ಸುಂದರವಾಗಿ ನನ್ನನ್ನು ನಿಮ್ಮ ಕವನದತ್ತ ಆಕರ್ಷಣೆ ಮಾಡಿಬಿಡ್ತು  ನೋಡಿ ಮೇಡಂ.

      ಒಟ್ಟಾರೆ ಪ್ರತಿಯೊಂದು ಪ್ರಕಾರದಲ್ಲಿ ಸಿದ್ದಹಸ್ತರಾದ‌ ನಿಮಗೆ ಶುಭವಾಗಲಿ ಮೇಡಂ ಜಿ.

     *ಧನ್ಯವಾದಗಳೊಂದಿಗೆ*


                       *✍ವಾಣಿ ಭಂಡಾರಿ*
[7/10/2019, 3:20 PM] Wr Suma Ulihalli: ಪ್ರೇಮ್ ರವರ *ಪರದೆ ಸರಿಸಿ*
 
ಕಾಡನ್ನು ಬೆಳೆಸಿ ನಾಡನ್ನು ಉಳಿಸಿ ಎಂಬ ಧ್ಯೇಯ ದಂತಿದೆ .
👉ಮನುಷ್ಯರಾದ ನಮಗೆ ಎಲ್ಲವು ಬೇಕು , ಆದರೆ ಪ್ರಕೃತಿ ದತ್ತವಾಗಿ ಬಂದ ಕಾಣ್ಕೆಯನ್ನು ಹಾಳು ಮಾಡುತ್ತಿದ್ದೆವೆ . ಕಾಡನ್ನು ಬೆಳೆಸಬೇಂಬುದಷ್ಟೆ ಅಲ್ಲಾ ಅದನ್ನು ಅನುಷೊಟಾನಕ್ಕೆ ತರಬೇಕು .
👉ಯಾವುದೆ  ಕಾರ್ಯಕ್ರಮ ಮಾಡಿದಾಗಲು ಅದರಿಂದಾಗುವ ಸಮಸ್ಯೆಗಳು ನೂರಾರು , ಆದರೆ ಅಲ್ಲಿಯ ಯಾವುದಾದರೊಂದು ತೊಂದರೆಗೆ ಕಟುವಾಗಿ ಮಾತನಾಡದೆ ಹರೆಸಬೇಕೆಂದಿದ್ದಾರೆ .
👉ವಿಷಯದ ಪರಿಜ್ಞಾನವಿಲ್ಲದೆ ಚಾಡಿ ಮಾಡುವವರ ಕುರಿತು ನಿಮ್ಮ ಸಂದೇಶ 👌🏻 , ನಿಜಾ ಸರ್ ಪ್ರತ್ಯಕ್ಷ ಕಂಡರು ಪ್ರಮಾಣಿಸಿ ನೋಡುವುದೊಳಿತು .
👉ಪ್ರಾಣಿಪಕ್ಷಿ ಚರಾಚರ ಪ್ರಾಣಿಗಳಲ್ಲಿರುವ ದಯೆ ಕರುಣೆ ಮನುಷ್ಯರಾದ ನಮ್ಮಲ್ಲಿಲ್ಲಾ .
ಸ್ವಾರ್ಥವೆಂಬ ಮಂಪರಿನಿಂದಾ ಹೊರಬರಬೇಕೆಂಬುದು ಕವಿಯ ಹಾರೈಕೆ .
ಕವನ 👌🏻👌🏻
*ಸುಮಾ .ಹುಲಿಹಳ್ಳಿ*
[7/11/2019, 1:03 PM] Wr Sreemati Joshi: ಪ್ರೇಮ ಮೇಡಂ ವ್ಹಾ. ಮೇಡಂ. ಹೋಲಿಕೆ ಸೂಪರ್. ನಿಜ ಒಂದು ಚಿಲಕ ಇಡೀ ಮನೆ ಕಾಯತ್ತೆ. ಎಷ್ಟು ಸಣ್ಣದು ಆದು.  ಹಾಗೆ ನಮ್ಮ ದೇಹದಲ್ಲಿಯ ಮನಸ್ಸು ಅನ್ನುವ ಚಿಕ್ಕ ಭಾವನೆ ಯನ್ನ   ಹಿಡಿದಿಟ್ಟು ಕೊಳ್ಳಲು ಆಗುವುದಿಲ್ಲವೇ. ನಮ್ಮ ಮನಸ್ಸನ್ನು ಎಳೆದು ಹಿಡಿಯಲು ತಿದ್ದುವವರು ಬೇಕು  ಎನ್ನುವ ಬಾವನೆ ಚೆಂದ ಇದೆ. 👏👏👍👍🙏
[7/13/2019, 5:45 PM] Wr Vara Lakshmi Amma: ಪ್ರೇಮ ಅವರ ಕರಾಳ ರಾತ್ರಿ 

ಸಂಭ್ರಮದ ದಿನವೊಂದು ಅನಿರೀಕ್ಷಿತವಾಗಿ  ಕರಾಳರಾತ್ರಿಯಾಗಿ ಕೊನೆಗೊಂಡದ್ದನ್ನು ಸ್ವಾರಸ್ಯವಾಗಿ ಕವನ ರೂಪದಲ್ಲಿ  ಹೊರಬಂದಿದೆ.  
ಭಯ ಎನ್ನುವುದು  ಮನುಷ್ಯನನ್ನು ಹೇಗೆ ಹಿಡಿತದಲ್ಲಿ   ವಶಪಡಿಸಿಕೊಂಡು   ಆಟವಾಡಿಸುತ್ತೆ ಎನ್ನುವ ಅಂಶ ಕವನದಲ್ಲಿ  ತಂದಿದ್ದಾರೆ🙏
[7/13/2019, 5:58 PM] Wr Pishe: *ಪ್ರೇಮ ಸರರವರ*
ಕವಿ ಸಂಭ್ರಮದ ದಾರಿಯಲ್ಲಿ  ಬರುವಾಗ ಕಾರುಕೆಟ್ಟು ಕಲ್ಪನೆಗೆ ಕವಿತೆಗಳು ನೆನೆದು  ಭಯಪಡಿಸುವ ಪ್ರಯತ್ನದ ನಿಗೂಢಕಲ್ಪನೆಯಲಿಕಟ್ಟಿದ ಹಾಸ್ಯಕರ ಸಂಗತಿ ನನಗು ತಂದಿತ್ತು ಚಂದ ಸರ್🙏🙏


ವಿಮರ್ಷೆಗಳು-5

[7/14/2019, 11:34 AM] Nybr Pramila: *ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ*

*ಪ್ರೇಮ ಮೇಡಂ ಜೀ ಯವರ ಬರವಣಿಗೆಯ ಕುರಿತು ಒಂದಿಷ್ಟು ಮಾತುಗಳು...*

*ಪಟಪಟನೆ ಸುರಿಯುವ ಮಳೆ ಮೈ ಮನಸನ್ನೆಲ್ಲ ತಣ್ಣಗೆ ಮಾಡುತ್ತದೆ ಅನಿಸಿದಾಗ ನಾ ಚಿಕ್ಕವರಿದ್ದಾಗ ಅಮ್ಮ ಒಲೆಯ ಮುಂದೆಯೇ ಕೂತು ಆ ಹಸಿಸೌದೆಯನ್ನೇ ಒಲೆಗೆ ತುರುಕಿಸಿ ಬೆಂಕಿಯ ಜೊತೆ ಕೊಂಚ ಹೊಗೆ ಕೂಡ ಬರ್ತಿದ್ದ ಆ ದಿನಗಳು ಕಣ್ಮುಂದೆ ಬಂತು. ಆದರೂ ಅಮ್ಮ ಮಾಡ್ತಿದ್ದ ಆ ನೀರು ದೋಸೆ, ಹೆಂಚು ಮೇಲೆ ತಟ್ಟಿದ ಅಕ್ಕಿ ರೊಟ್ಟಿಯ ರುಚಿಯ ಬೇರೆ. ನಿಮ್ಮ ಬರವಣಿಗೆ ನನ್ನ ಆ ಬಾಲ್ಯದ ದಿನಗಳನ್ನು ನೆನಪಿಸಿತು. ಹೌದು ಈಗ ಒಲೆಯಿಲ್ಲ, ಅದರಲ್ಲಿ ಕಣ್ಣೀರು ಸುರಿಸ್ತಾ ಅಡುಗೆ ಮಾಡೋ ತಾಳ್ಮೆಯಂತೂ ನನ್ನಂತ ತಾಯಿಯರಿಗೆ ಇಲ್ಲವೇ ಇಲ್ಲ, ಆದರೂ ನಿಂತೋ ಕುಂತೋ ಮಗನಿಗಾಗಿ ಗ್ಯಾಸ್ನಲ್ಲಿ ಅಡುಗೆ ಮಾಡಿ ಮಗನ ಜೊತೆ ಲಾಗ ಹೊಡೆಯೋ ಆ ಕ್ಷಣ ಇದ್ಯಲ್ಲ, ಅದರ ಮಜಾನೇ ಬೇರೆ*

*ನಿಜ, ಹೆತ್ತವರಿಗೆ ಹೆಗ್ಗಣವೂ ಮುದ್ದು. ಯಾವ ತರದ ಅಂಗವೈಕಲ್ಯವಿದ್ದರೂ ತಾಯಿಯಾದವಳಿಗೆ ಆ ಮಕ್ಕಳು ಸೂರ್ಯ ಚಂದ್ರರೆ. ಅಂತಹ ದೈಹಿಕ* *ನ್ಯೂನತೆಗಳಿರುವ ಅದೆಷ್ಟೋ ಜನ ಅಪ್ರತಿಮ ಸಾಧನೆಗೈದು ಇತಿಹಾಸದಲ್ಲಿ ಸೇರಿ ಹೋಗಿ ದೇಹವಳಿದರೂ ಮಾಸದ ನೆನಪಾಗಿ ಉಳಿಯುತ್ತಾರೆ. ಅಂಥಹ ವಿಶೇಷ ಚೇತನರ ಬಗ್ಗೆ ಬರೆದ ನಿಮ್ಮ ಬರವಣಿಗೆ ಸಾಧಕರಿಗೆ* *ಮಾರ್ಗದರ್ಶನವಾಗುತ್ತದೆ, ಪ್ರೇರಣೆಯಾಗುತ್ತದೆ.* 
*ದೇಹದ ಓರೆಕೋರೆಗಳಿಂದ ಮನುಷ್ಯನ ವ್ಯಕ್ತಿತ್ವವನ್ನು ಅಳೆಯಬಾರದು, ಆ ಓರೆಕೋರೆಗಳು ಸಾಧನೆಗೆಂದೂ ಅಡ್ಡಿಬರಲಾರವು.*

*ಸೂಪರ್ ಮೇಡಂ, ಅದ್ಭುತ ಪ್ರೇರಣದಾಯಕ ಬರವಣಿಗೆ.* 
*ಶುಭವಾಗಲಿ, ಸದಾ ಹೀಗೇ ಬರಿತಾ ಇರಿ, ಸಾಹಿತ್ಯಲೋಕದಲಿ ಸದಾ ನಿಮಗೆ ಯಶಸ್ಸು ಸಿಗಲಿ.* 

*ಶುಭಹಾರೈಕೆಗಳೊಂದಿಗೆ*

*ಪ್ರಮೀಳಾ ರಾಜ್*
[7/15/2019, 6:48 AM] Nybr Pramila: 🌹🌹🌹🌹🌹🌹🌹
*ಶುಭೋದಯ ಪ್ರೇಮ ಮೇಡಂ ಜೀ*
🙏🙏🙏🙏🙏🙏🙏🙏
*ಮುಂಜಾನೆ ಸಮಯದಿ ಕಡಲ ತಡಿಯ ಮಕ್ಕಳೆಲ್ಲ ಬಲೆಯ ಹಿಡಿದು ಮೀನು ಹಿಡಿಯುತ್ತಾ ಖುಷಿಪಡುವ ಸುಂದರ ದೃಶ್ಯ.*
*ಕಾಯಕವೇ ಕೈಲಾಸ, ಮುಂಜಾನೆಯಲೇ ಕಾಯಕದಲ್ಲಿ ತೊಡಗುವುದು ಆರೋಗ್ಯಕ್ಕೆ ಉತ್ತಮ ಎಂಬ ಸಂದೇಶದೊಂದಿಗೆ ನೀರು ಕಲುಷಿತಗೊಳಿಸದಿರೋಣ ಎಂಬ ಸುಂದರ ಸಂದೇಶ ಹೊತ್ತ ಕವನ ಚೆನ್ನಾಗಿದೆ*
👌👌👌👌👌👌👌👌
*ಶುಭವಾಗಲಿ, ಶುಭದಿನ*
💐💐💐💐💐💐💐
[7/15/2019, 12:45 PM] Wr Mahendr: *ಜಯಲಕ್ಷ್ಮಿ ಮೇಡಂ*
ತಮ್ಮ ಚೆಲುವೆಯ ವರ್ಣನೆಯ ಕವನವು ಚೆನ್ನಾಗಿದೆ ಇಲ್ಲಿ   ಸೂರ್ಯನ ಕಿರಣಗಳು ಇಬ್ಬನಿಯ ಮೇಲೆ ಬಿದ್ದಾಗ ನಿಜಕ್ಕೂ ಸೂರ್ಯನಿಗಿಂತಲೂ ವರ್ಣರಂಜಿತವಾಗಿ ಕಾಣುತ್ತದೆ ಅಂತಹ ಸೌಂದರ್ಯಕ್ಕೆ ರವಿ ನಾಚಲೇ ಬೇಕು ಇಲ್ಲಿ ಸಂಕೋಚ ಬಿಟ್ಟು
ಅಂತಹಾ ಅಪ್ಸರೆಯ ಸೆರೆಯಾಗಿಹ ಕವಿತೆ ಉತ್ತಮವಾಗಿದೆ.👍🏻💐💐

*@ಪ್ರೇಮ್@* ಮೇಡಂ ಅವರು ತಮ್ಮ ಹಾಡಿನ ಮೂಲಕ ಬೆಳಗಾಯಿತು ಏಳಿ ಕಾಯಕ ಮಾಡೋಣ ಬನ್ನಿ ಎನ್ನುತ್ತಾ ಮೀನುಗಾರಿಗೆ ಕರೆ ನೀಡಿದ್ದಾರೆ ಹಾಗೂ ಅವರಲ್ಲಿ ಪ್ರೋತ್ಸಾಹ ಉತ್ಸಾಹ ನೀಡುವ ಪ್ರಯತ್ನ ಶ್ಲಾಘನೀಯ ಮತ್ತು ಕಾಯಕ ತತ್ವವನ್ನು ಹೇಳಿದ್ದೀರಿ ಕಾಯಕವೇ ದೇವರು ಅದನ್ನು ಅಂದ್ರೆ ಆ ಸ್ಥಳವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎನ್ನುವ ಸಲಹೆ ನುಡಿಗಳು ಅರ್ಥ ಪೂರ್ಣವಾಗಿ ತಮ್ಮ ಕವನದಲ್ಲಿ ಮೂಡಿ ಬಂದಿದೆ ಉತ್ತಮ ಕವಿತೆ ಮೇಡಂ👍🏻👍🏻💐💐

*ಶಿವ ಪ್ರಸಾದ್ ಆರಾಧ್ಯ* ಅವರು ತಮ್ಮ ಕವಿತೆಗಳ ಸಾಲುಗಳನ್ನು ಜಗದಲ್ಲಿ ಇರುವ ಅನೇಕ ಸಾಮಾಜಿಕ ಮತ್ತು ವೈಯಕ್ತಿಕ ಸಮಸ್ಯೆಗಳನ್ನು ನಿವಾರಿಸಲು ರವಿಯನ್ನು ಕೂಗಿ ಕರೆದಿದ್ದು ಚೆನ್ನಾಗಿದೆ ರವಿಯ ಬೆಳಕಿನಿಂದ ಸಮಸ್ಯೆಯ ಕತ್ತಲು ನಿಜಕ್ಕೂ ಓಡಲಿ 
ತಮ್ಮ ಈ ಕಳಕಳಿಯ ಕಾವ್ಯಕ್ಕೆ ಅಭಿನಂದನೆಗಳು👍🏻👍🏻

    ✍🏻 ಮಹೇಂದ್ರ ಕುರ್ಡಿ
[7/16/2019, 7:25 AM] Wr Shivaprasad Aradhya: ಪ್ರೇಮರವರ ಭಾವಗೀತೆ ಭಾವನಾತ್ಮಕ.ಹಾಡುವ ಧಾಟಿಗೊಲಿವ ರಚನೆ. ನಿತ್ಯ ಮುಂಜಾನೆ ಬೇಗನೆ ಬರೆವ ಪ್ರೇಮ ಮತ್ತು ಜಯಲಕ್ಷ್ಮಿ ಇಬ್ಬರು ಕಾವ್ಯ ಮಾತೆಯರು ಇವರು.ಬಹಳ ಚೆನ್ನಾಗಿ ಬರೆಯುತ್ತಾರೆ

. ಶುಭವಾಗಲಿ ಶಿವಪ್ರಸಾದ್ ಆರಾಧ್ಯ
[7/16/2019, 7:36 AM] Wr Shivaprasad Aradhya: ಪ್ರೇಮರ ಭಾವಗೀತೆ

ಹಾಡಿನ ಹಂಬಲ

ಕಂಚಿನ ಕಂಠದ ಮಿಂಚಿನ ಮಾಲೆ 
ನಿನ್ನಯ ರಾಗವ ಕೇಳಿಸೆಯಾ?
ವಂಚಿತ ಮನದ ಹಿಂದೋಡುವ ಬಾಲರಿಗೆ
ನಿನ್ನಯ ಜ್ಞಾನವ ಕಲಿಸುವೆಯಾ?//

ಇಲ್ಲಿ ಬಾಲರ ತೆಗೆದರೆ ಗೇಯತೆವಲಭ್ಯ.ಹಿಂದೋಡುವವರಿಗೆ ಸಾಕಾಗುವುದು.ಮಕ್ಕಳ ಮನಸ್ಸು ಮಾತ್ರವಲ್ಲ ಎಲ್ಲರಿಗೂ ಸಹ ಇದು ಅನ್ವಯ.

ಕೋಲ್ಮಿಂಚಿನ ತುದಿಗೆ ರಾಗವ ಕಟ್ಟಿ
ನೂಪುರದಿ ಅದ ಎಳೆಯುವೆಯಾ?
ಮನದ ಸಾಗರದಿ ಏಳಲಿ ಅಲೆಗಳು
ದಡಕೆ ತಂದಪ್ಪಳಿಸಿ ಓಡಿಸೆಯಾ?//

ವಾವ್ ಇದಪ್ಪಾ ಭಾವಗೀತೆಯ ಸಾಲು ಅದೇನು ರಚನೆ ಭಾವ ಅಬ್ಬಬ್ಬಾ ಭಲೆ ಭಲೇ

ಪದರ ಪದರವಾದ ರಾಗ  ತರಂಗದಿ
ಮೈಮನವೆಲ್ಲ ನವಿರೇಳಿಸ ಬಾ,
ಹಾಡಿ ರಾಗ ಲಯ ತಾಳದ ನಡುವಲಿ
ಮುಳುಗಿ ಹೋಗುವಂತೆ ಹಾಡಲು ಬಾ..//

ಇಲ್ಲಿ ಮುಳುಗಿ ಹೋಗುವಂತೆ ಬೇಡ  ಮುಳುಗಲು ಸಾಕು

ಮೋಡ ರಾಶಿಗೆಲ್ಲ ಗುಡುಗಲು ಹೇಳಿ
ವರ್ಷ ಧಾರೆಯನು ಸುರಿಸುವೆಯಾ!
ಹಾಡ ಮೋಡದಲಿ ನೆಮ್ಮದಿ ಕಾಣುತ
ಮನಕೆ ಮಳೆಯ ತಂದು ಹರಸುವೆಯಾ!//

ಹಾಡ ಮೋಡದಲಿ ಬೇಡ ಮೋಡದ ಹಾಡಲಿ ಹಾಕಿ ಅಥವಾ ಹಾಡುವ ಮೋಡದಿ ಮಾಡಿ


@ಪ್ರೇಮ್@ ಮೇಡಂ ನವರು ಹೀಗೇ ಬರೆಯಲಿ ನಮಗೂ ಕಲಿಸಲಿ.ವಿಮರ್ಶೆ ಒಬತಬನ ಅನಿಸಿಕೆ.ಬೇಡದಿರೆ ತಳ್ಳಿ ಹಾಕಿ.ಅಗತ್ಯವೆನಿದರೆ ಸ್ವೀಕರಿಸಿ ಅಭಿನಂದನೆಗಳು
16.07.2019

ಶಿವಪ್ರಸಾದ್ ಆರಾಧ್ಯ ನೆಲಮಂಗಲ
[7/16/2019, 9:05 AM] Wr Siddesh: *ಪ್ರೇಮ್ ಮೆಡಮ್ ಅವರ ಹಾಡಿನ ಹಂಬಲ*

ಕಂಚಿನ ಕಂಠದ ಮಿಂಚಿನ ಮಾಲೆ ನಿನ್ನಯ ರಾಗವ ಕೇಳಿಸೆಯಾ !!! 

👌👌👌

ಸುಂದರ ಸಾಲುಗಳು ಮೆಡಮ್
[7/16/2019, 12:57 PM] Wr Kshama Raghuram: *ಪ್ರೇಮ್  ಮೇಡಂ  ಅವರ  ಹಾಡಿನ ಹಂಬಲ...*

ಆರಂಭ ದಿಂದ  ಅ಼ಂತ್ಯದವರೆಗೂ  ಕಂಚಿನ  ಕಂಠದ  ಮಿಂಚಿನ ಬಾಲೆ ಹಾಡಿದ್ದು   ಸುಂದರವಾಗಿ  ಮೂಡಿದೆ....
ಪ್ರತಿಯೊಂದು  ಚರಣಗಳು..,.ಪ್ರತಿಯೊಂದು  ಸಾಲುಗಳು  ಸೊಗಸಾಗಿದೆ....
ಉತ್ತಮ   ಭಾವಭಿವ್ಯಕ್ತಿಯ  ಉತ್ತಮ  ಭಾವಗೀತೆ.... 
ಕಂಚಿನ ಕಂಠದ  ಗಾಯಕರಿಗೆ
ಈ  ಗೀತೆಯನ್ನು ಹಾಡಲು ತಿಳಿಸಿದರೆ....ಗೀತೆ  ಪ್ರಸಿದ್ದಿಯಾಗುವುದರಲ್ಲಿ  ಸಂದೇಹವೇ  ಇಲ್ಲ....

ಅಭಿನ಼ಂದನೆಗಳು  ಮೇಡಂ...ನಮಸ್ಕಾರ .💐

ಕ್ಷಮಾ  ರಘುರಾಮ್
[7/16/2019, 7:25 PM] Wr Vani Bhandari: *ನಮಸ್ತೆ*
🙏🏻🙏🏻🙏🏻
*ಪ್ರೇಮ ಅವರ ಹಾಡುವ ಹಂಬಲ*

       ಮೇಡಂ ಸೂಪರ್ ಆಗಿದೆ ಹಾಡಿನ ಹಂಬಲ.

👉 ಹಾಡಿನ ಹಂಬಲವನ್ನೂ ಹೀಗೂ ಕವಿ ಹೇಳಬಹುದು ಎಂಬುದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.

👉ಕೋಲ್ಮಿಂಚಿನ ತುದಿಗೆ ರಾಗ ಕಟ್ಟಿ ನೂಪುರದಿ ಎಳೆವೆಯಾ?? ಆಹಾ!! ಕವಿ ಕಲ್ಪನೆ ಎಷ್ಟು ಸೊಗಸಾಗಿದೆ.
ನಿಜಕ್ಕೂ ಇಷ್ಡವಾಯ್ತು ಮೇಡಂ ಜಿ.

👉ಒಂದೊಂದು ಪದವು ಮಣಿಮುತ್ತುಗಳ ಎರಕ ಹೊಯ್ದಂತೆ ಬಹು ಸುಂದರವಾಗಿ ಕಾಣುವುದು.

👉ಸರಳ ಸುಂದರ ಪದಗಳ ನಡುವೆ ಸುಂದರ ಭಾವ ಹೊಂದಿದೆ, 

ಹೀಗೆ ಸದಾ ಬರೆಯುವ ನಿಮಗೆ ಯಶಸ್ಸು ಸಿಗಲಿ ಶುಭವಾಗಲಿ ಜಿ.

*ಧನ್ಯವಾದಗಳೊಂದಿಗೆ*,,


                    *✍ವಾಣಿ ಭಂಡಾರಿ*
[7/17/2019, 7:03 AM] Wr Shivaprasad Aradhya: ಪ್ರೇಮರವರ ಭಾವಗೀತೆ ರತ್ನನ ಪದಗಳ ಧಾಟಿಯಲ್ಲಿ ಹೊಸ ಛಾಪು ಮೂಡಿಸಿದೆ.ಸುಂದರ ಸರಸಮಯ ಸಾಲುಗಳ ಗ್ರಾಮ್ಯ ಸೊಗಡಿನ ಅನಾವರಣ ಸರಸ ಸಲ್ಲಾಪ .ಉತ್ತಮ ಭಾವಗಳಿಗೆ ಅಭಿನಂದನೆಗಳು ಪ್ರೇಮ.

ಶಿವಪ್ರಸಾದ್ ಆರಾಧ್ಯ
[7/17/2019, 9:49 AM] Wr Sham Prasad Bhat: *ಪ್ರೇಮ್*
*ಕೇಳೇ ನನ್ ಹಾಡ*

ನನ್ನ ಶಕ್ತಿಗನುಗುಣವಾಗಿ ನಿನ್ನ ಪ್ರೀತಿಸ್ತೀನಿ.ಇರುವುದರಲ್ಲಿ ತೃಪ್ತಿ ಪಡ್ತಿನಿ ಎಂಬ ಆಶಯ ..ಜೊತೆಗೆ ಸ್ವಲ್ಪ ಹಾಸ್ಯ ದ ಸ್ಪರ್ಶ...ಚೆನ್ನಾಗಿದೆ.

ಜನಪದ ಸೊಗಡು ತುಂಬಿ
ಭಾವಗೀತೆಯ ಸೊಗಡು ಸ್ವಲ್ಪ ಕ್ಷೀಣಿಸಿತು ಅನಿಸಿತು.

ಉತ್ತಮ ಪ್ರಯತ್ನ

ಧನ್ಯವಾದಗಳು

*ಶ್ಯಾಮ್ ಪ್ರಸಾದ್*
[7/17/2019, 10:45 AM] Wr Sham Prasad Bhat: ಸರಿ ಬಿಡಿ...ರತ್ನನ ಪದಗಳನ್ನು ಕೇಳಿರುವೆ.ನನ್ನ ಅನಿಸಿಕೆ ಅಷ್ಟೇ.. ದಯವಿಟ್ಟು ತಪ್ಪಾಗಿದ್ದರೆ ಕ್ಷಮಿಸಿಬಿಡಿ.

ಮುನಿಸಿ ತರವೇ ಮುಗುದೇ
ಓ ನನ್ನ ಚೇತನ
ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೇ
ಇವೆಲ್ಲಾ ಗೀತೆಗಳು ನನಗಿಷ್ಟ..ಹಾಗಾಗಿ ನನಗೆ ಹಾಗನಿಸಿರಬಹುದು..ದಯವಿಟ್ಟು ಮಗದೊಮ್ಮೆ ಕ್ಷಮಿಸಿಬಿಡಿ ಸಹೋದರಿ.
[7/18/2019, 7:18 AM] Wr Siddesh: *ಬಾನಿನಾಟ*
*ಪ್ರೇಮ್ ಮೆಡಮ್*   

🙏🙏🙏


ಇರುಳಲ್ಲಿ ಚಂದಿರ ಬರುವ ಸಮಯ ದಿ ಮೂಡುವ ದೃಶ್ಯ ದ ಕಾವ್ಯ ವೈಭವ ತನ್ನದೆ ಪದಗಳನ್ನು ಸೇರಿಸಿ ...‌ಸೂಪರ್ .....

ಸೂರ್ಯ ಚಂದ್ರ ...ಬದುಕಿಗೆ ಬಿಂಬಿಸಿ ಬರೆದಿರೊದು ...ಸೂಪರ್ ...

ಬಾಳ...ಹಾದಿಯಲಿ ಹಗಲು .ರಾತ್ರಿ 

*ಹಗಲುಂಟು ಸೂರ್ಯನಿಗೆ*
*ಇರುಳುಂಟು ಚಂದ್ರನಿಗೆ*

ಸೂಪರ್ ...!! 👌👌👌
[7/18/2019, 9:48 AM] Wr Anitha: *ಪ್ರೇಮ್ ಅವರ*

*ಬಾನಿನಾಟ*

*ಚಂದ್ರಲೋಕದಲ್ಲಿಯೂ  ಕಛೇರಿ nice imagination* 

*ಕನ್ನಡಿ ನೋಡುತ ಧರಣಿ ದೇವಿ ಬೆಳ್ಳಗಾದಳು*. *Waw super*
*ತಾರೆ ಗಳೊಡನೆ ಹುಣ್ಣಿಮೆ* *ಕೂಟ*
*ಸೋಮನ ಬಾನಿನಾಟ. Very nice*

*ಮಳೆ ಯ ಆಟಕೆ ಮರದೆಲೆ ಬಾಗಿತು*
*ನಿಜ ನಿಜ*

*ಹಗಲು ರಾತ್ರಿ ಯದು ಬಾಳ ಹಾದಿಯಲ್ಲಿ perfect trut*
👏👏👏👏👏👏👏👏
*ಧನ್ಯವಾದಗಳು*
[7/19/2019, 7:24 AM] Wr Amaresh: 🙏 *ಪ್ರೇಮ್ ಜೀ* 

೨) *ಯೋಧ*

ಸ್ಪೂರ್ತಿಯ ಕಣಜ ಯೋಧನರಿಗೊಂದು ನಮನ. ಸಾವನ್ನು ಬೆನ್ನಿಗೆ ಕಟ್ಟಿಕೊಂಡು ಮುನ್ನುಗ್ಗುವ ದೇಶಕಾಯುವ ಧೀರತನಕ್ಕೆ ನಮನ.

ತನ್ನ ಜೀವದ ಪರಿವೇ ಇರದೆ, ಗುಡುಗು ಸಿಡಿಲು ಮಳೆಯಲಿ ಎದೆಯೊಡ್ಡಿ ನಿಲ್ಲುವ, ಮರಣವನ್ನು ದೇಶ ಭಕ್ತಿ ಎನ್ನು ದೊರೆಗೆ ನಮನ.

ಯೋಧ ತನ್ನ ದೇಶ ಭಕ್ತಿ ಯ ಕಾರ್ಯದಿಂದ ಎಲ್ಲರಿಗೂ ಸ್ಪೂರ್ತಿಯಾಗಿದ್ದರೆ. ತನಗೆ ಮಾತ್ರ ತಾನೇ ಸ್ಪೂರ್ತಿ ಎಂಬ ನೈಜತೆಯನ್ನು ಸುಂದರವಾಗಿ ಚಿತ್ರಿಸಿರುವುದಕ್ಕೆ ನಿಮಗಿಂದು ನಮನ..!

✍ *ಅಮರೇಶ್ ಎಂಕೆ*
[7/19/2019, 9:30 AM] Wr Sham Prasad Bhat: *ಪ್ರೇಮ್*

*ಯೋಧ*

ಸೈನಿಕನ ಬಗ್ಗೆ ಬರೆದ ಭಾವಗೀತೆ ಮನೋಜ್ಞವಾಗಿ ಮೂಡಿ ಬಂದಿದೆ.
ಗುಂಡಿನ ದಾಳಿಗೆ ದೇಹದಿಂದ ನೆತ್ತರು ಜಿನುಗುತ್ತಿದ್ದರೂ ಹಿಂದಡಿ ಇಡದೆ ಮುನ್ನುಗ್ಗುವ ಎದೆಗಾರಿಕೆ ಯೋಧನಿಗಲ್ಲದೇ ಇನ್ನಾರಿಗಿದೆ...ವೈರಿ ಎಂಬ ಗುರಿಯನ್ನು ಗುರುತಿಸಿ ಅವನನ್ನು ಮಟ್ಟಹಾಕಿದ ಮೇಲೆಯೇ ವಿರಮಿಸಬೇಕು..ಅಲ್ಲಿಯವರೆಗೆ ಹೋರಾಡಲೇ ಬೇಕೆಂಬ ಆದಮ್ಯ ಉತ್ಸಾಹ...ಮೆಚ್ಚಿಕ್ಕೊಂಡೆ ಹೋದನ ಶ್ಲಾಘನೀಯ ಕಾರ್ಯವನ್ನು...

ಹಸಿವು,ಮನೆ,ಮಡದಿ,ಮಕ್ಕಳು ಇವೆಲ್ಲಾ ಅನಂತರ..ಮೊದಲು ದೇಶ...ದೇಶ ಸಂರಕ್ಷಣೆಯ ಗುರುತರ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಯೋಧನಿಗೆ ಸಲಾಂ....

ಜೀವದ ಹಂಗು ತೊರೆದು ರಣರಂಗದಲ್ಲಿ ಹೋರಾಡಿ ವಿಜಯೋತ್ಸವ ಆಚರಿಸುವ ಮಹತ್ವಾಕಾಂಕ್ಷೆಯ ಯೋಧನಿಗೆ ಸಮಾನರಾರು?

ವಾತಾವರಣ ಹೇಗೆ ಬೇಕಾದರೂ ಇರಲಿ, ಹಿಮ ಮಳೆಗರೆಯಲಿ,ಸುಳಿಗಾಳಿ ಬೀಸಲಿ..ಅವನ ಆತ್ಮವಿಶ್ವಾಸಕ್ಕೆ ಧಕ್ಕೆಯಾಗದು..

ಕವಯತ್ರಿ ಇಲ್ಲಿ ಯೋಧನಿಂದ ಸ್ಪೂರ್ತಿ ಪಡೆದು ಭಾವಗೀತೆ ರಚಿಸಿದ್ದಾರೆ.ಸ್ವಸ್ಥ ಸಮಾಜ ನಿರ್ಮಾಣದ ಕನಸನ್ನು ನನಸಾಗಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ..

ಉತ್ತಮ ಬರವಣಿಗೆ ಸಹೋದರಿ

ಧನ್ಯವಾದಗಳು

*ಶ್ಯಾಮ್ ಪ್ರಸಾದ್*
[7/22/2019, 11:53 AM] Wr Vara Lakshmi Amma: ಪ್ರೇಮ್  ಅವರ ನ್ಯಾನೋ ಕತೆ
 ಸುಂದರ ಸಂಸಾರದ ಚಿತ್ರಣ
 ಆದರೆ ಯಾಕೋ ಸ್ವಲ್ಪ ಅಪೂರ್ಣ  ಅನ್ನಿಸುತ್ತದೆ.  ನಿಮ್ಮ ಭಾವಕ್ಕೆ ಧಕ್ಕೆಯಾದರೆ ಕ್ಷಮೆ ಇರಲಿ 🙏
[7/22/2019, 12:15 PM] +91 70225 26694: ಪ್ರೇಮ್ ರವರೆ ನಮಸ್ತೆ

ಸಿರಿವಂತರ ಸ್ವಾಥ೯ ಪ್ರಪಂಚವನ್ನು ಚಿಕ್ಕ ಸಾಲುಗಳಲ್ಲಿ ಚುಚ್ಚಿ ಹೇಳುವಂತಿವೆ ಕಥೆಯ ಹರವು ತೀರಾ ಚಿಕ್ಕದು ಅನಿಸಿತು
ದಾನವಿಲ್ಲದ ಮನೆ ದೊಡ್ಡದಾದರೇನು
ಎಂಬ ಮಾತನ್ನು ಪುಷ್ಠಿಕರಿಸುವಂತಿದೆ

ಧನ್ಯವಾದಗಳು

ರಾಜೇಶ್ವರಿ ನಿಂ ಬಿಲಹಳ್ಳಿ
[7/22/2019, 12:41 PM] Wr Vani Bhandari: *ನಮಸ್ತೇ*
🙏🏻🙏🏻🙏🏻
*ಪ್ರೇಮ ಅವರ ನ್ಯಾನೊ ಕತೆ*

        *ಸುಂದರವಾದ ಆಶಯವನ್ನು ಹೊತ್ತು ಬಂದ ಕತೆ ಮೇಡಂ ಜಿ.*

      ಬಹುಶಃ ಹೊರಪ್ರಪಂಚಕ್ಕೆ ಬಂದರೆ ತಾನೆ ಜಗತ್ತಿನ ರೀತಿನೀತಿಗಳು ತಿಳಿವುದು.ಇಲ್ಲದಿದ್ದ ಪಕ್ಷಕ್ಕೆ ತಾವಿರುವೆ ಸ್ಥಳವೆ ಬೃಹದಾಕಾರದ ಪ್ರಪಂಚ ವಾಗುತ್ತದೆ.
👉ಉತ್ತಮ ಆಶಯ ಹೊತ್ತಿದೆ.
👉ಸುಂದರವಾಗಿದೆ.
👉 ಕೊಟ್ಟ ನಿಯಮಕ್ಕೆ ತಕ್ಕುದಾಗಿದೆ.

ಸಕಲ ಬರಹವನ್ನು ಸುಂದರವಾಗಿ ಬರೆವ ನಿಮಗೆ ಶುಭವಾಗಲಿ ಜಿ.

*ಧನ್ಯವಾದಗಳೊಂದಿಗೆ*

                             *✍ವಾಣಿ ಭಂಡಾರಿ*
[7/22/2019, 4:40 PM] Wr Sreemati Joshi: ಪ್ರೇಮ ರವರ ಕಥೆ ಸುಖ ಸಂಸಾರದ  ಚೌಕಟ್ಟಿನಲ್ಲಿ ಬಂಧಿತವಾದ ಸುಂದರ ಜೀವನ ದ ಸಾರ ಹೊತ್ತ ಕಥೆಯ ಭಾವ ಚೆನ್ನಾಗಿದೆ. ಕಥೆಗೊಂದು ತಲೆ ಬರಹ ಇದ್ದರೆ ಇನ್ನೂ ಶೋಭೆ ಬರುತ್ತಿತ್ತು.  ಅಂತ ಅನಿಸಿಕೆ 👌👌🙏🙏👏👏
[7/23/2019, 1:00 PM] Wr Uday Bhaskar Sullia: *ಪ್ರೇಮಾ ಮೇಡಂ*

*ತಪ್ಪಿಗೆ ಶಿಕ್ಷೆ*

ಬದುಕಿದ್ದಾಗ ಅಹಂಕಾರದಿಂದ ಮೆರೆದಾಡಿ ನಾನೇ ಸರ್ವಸ್ವ, ಸರ್ವಶ್ರೇಷ್ಠ ಅನ್ನುವಂತೆ ಮೆರೆದಾಡಿ ದೇಹವನ್ನು ತ್ಯಜಿಸಿದ ಬಳಿಕ ಕಳೆದು ಹೋದ ಬದುಕಿನಲ್ಲಿ ಮಾಡಿದ ಪಾಪಕರ್ಮಗಳ ಬಗ್ಗೆ ಪರಿತಪಿಸು ಪಶ್ಚಾತ್ತಾಪ ಪಡುವ ಆತ್ಮಗಳ ಮಾತುಕತೆಯನ್ನು ನ್ಯಾನೋ ಕಥೆಯ ಮೂಲಕ ತೆರೆದಿಟ್ಟಿದ್ದೀರಿ.  

*"ನಾನು ನನ್ನ ಹೆಂಡತಿಗೆ ಕುಡಿದು ಬಂದು ಹಾಗೆ ಹೊಡೆದಾಡಬಾರದಿತ್ತು ಕಣೋ"*

ಈ ವಾಕ್ಯದಲ್ಲಿ ನಾನು ಕಂಡ ಪುಟ್ಟ ವ್ಯಾಕರಣ ದೋಷ

ನಾನು ನನ್ನ *ಹೆಂಡತಿಗೆ* ಕುಡಿದು ಬಂದು ಹಾಗೆ *ಹೊಡೆದಾಡಬಾರದಿತ್ತು* ಕಣೋ" ಈ ವಾಕ್ಯದಲ್ಲಿ *ಹೆಂಡತಿಗೆ ಹೊಡೆದಾಡಬಾರದಿತ್ತು* ಅಷ್ಟೊಂದು ಸರಿ ಅನಿಸಲಿಲ್ಲ. *ಹೆಂಡತಿಗೆ ಹೊಡೆಯಬಾರದಿತ್ತು* ಅಥವಾ *ಹೆಂಡತಿಯ ಜೊತೆ ಹೊಡೆದಾಡಬಾರದಿತ್ತು* ಹೀಗೆ ಮಾಡಿದರೆ ಸರಿ ಆಗುತ್ತಿತ್ತೇನೋ..? 

(ಅದರಲ್ಲೂ *ಹೊಡೆಯುವುದು* ಮತ್ತು *ಹೊಡೆದಾಟ* ಈ ಎರಡೂ ಪದಗಳಿಗೆ ವ್ಯತ್ಯಾಸ ಇದೆ. *ಹೊಡೆದಾಟ* ಅನ್ನುವುದು *ಇಬ್ಬರೂ ಹೊಡೆದುಕೊಂಡಾಗ* ಸಂಭವಿಸುವಂತದ್ದು, ಆದರೆ ನಿಮ್ಮ ಕಥೆಯಲ್ಲಿ ಗಂಡ ಮಾತ್ರ *ಹೊಡೆದ* ಕಾರಣ *ಹೆಂಡತಿಗೆ ಹೊಡೆಯಬಾರದಿತ್ತು* ಅನ್ನುವುದೇ ಹೆಚ್ಚು ಸಮಂಜಸ)

*ತಿಳುವಳಿಕೆಯಲ್ಲೂ ವಿದ್ಯಾಭ್ಯಾಸದಲ್ಲೂ ನಿಮಗಿಂತ ತೀರಾ ಕಿರಿಯವ ನಾನು. ನನ್ನ ಅಲ್ಪಬುದ್ಧಿಯ ತಿಳುವಳಿಕೆಯ ಪ್ರಕಾರ ವ್ಯಾಕರಣ ವಿಮರ್ಶೆ ಮಾಡಿರುವೆ, ತಪ್ಪಾಗಿದ್ದಲ್ಲಿ  ನೋವಾಗಿದ್ದಲ್ಲಿ ಕ್ಷಮೆಯಿರಲಿ ಮೇಡಂ..*

*ಶುಭವಾಗಲಿ*

*- ಉದಯಭಾಸ್ಕರ್ ಸುಳ್ಯ*
[7/23/2019, 2:04 PM] Wr Anitha: *ತಪ್ಪಿಗೆ ಶಿಕ್ಷೆ*

*ಬದುಕೊಂದು ತಪ್ಪು, ಒಪ್ಪುಗಳ ಸಂತೆ*


*ಮಾಡಿದ್ದುಣ್ಣೋ ಮಾರಾಯ ಅದನ್ನು ಹೇಳಿದರೆಯಾಕ ಭಯ*
*ಬಿತ್ತಿದ್ದನ್ನ ಕೊಯ್ಯಲೇ ಬೇಕು* *ತಿಳಿಯೋ ನೀನು ಮಾರಾಯ*
*ಮಾಡಿದ್ದುಣ್ಣೋ ಮಾರಾಯ*

*ಮೇಲಕ್ಕೆ ಎಸೆದರ ಕಲ್ಲ ತಲಿ ಮ್ಯಾಲ ಬೀಳುತೈತಲ್ಲ*
*ಕೆಸರಾಗ ಎಸೆದರೆ ಕಲ್ಲ ನೀ* *ಹೊಲಸ ಆಗುತ್ತೀಯಲ್ಲ*
*ಬೇರೆಯವರಿಗೆ ತೋಡಿದ ಗುಂಡ್ಯಾಗ ನೀನು ಬಿದ್ದೀಯಲ್ಲ*

*ಎನ್ನುವ ಪದಗಳಂತೆ* 
*ಇಲ್ಲೆ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು, ಎಂದು ಅರ್ಥ ಮಾಡಿಕೊಂಡು ಬದುಕಿರುವಾಗಲೇ ತಪ್ಪು ತಿದ್ದುಕೊಂಡಿದ್ದರೆ, ಹೀಗೆ* *ಆತ್ಮವಾಗಿ ಮಾತನಾಡಿಕೊಳ್ಳುವ ಪ್ರಮೇಯ ತಪ್ಪುತ್ತಿತ್ತೇನೋ*.  
*ತಪ್ಪು ಮಾಡದವರ್ಯಾರೌರೆ* 
*ತಪ್ಪೇ ಇಲ್ಲದವರ್ಯಾರೌರೆ* 
*ಅಪ್ಪಿ ತಪ್ಪಿ ತಪ್ಪಾಗುತ್ತೆ* , 
*ಬೆಳ್ಳಿ ಕೂಡ ಕಪ್ಪಾಗುತ್ತೆ*,

*ತಪ್ಪು ಮಾಡೊದು ಸಹಜ ಕಣೋ, ತಿದ್ದಿ ನಡೆಯೋನು* *ಮನುಜಾ ಕಣೋ* 
*ಎಂಬಂತೆ ತಿದ್ದು ನಡೆವ ಬುದ್ದಿಬರಲಿ*

*ತಿದ್ದಿ, ಬುದ್ದಿ ತಿಳಿಸುವ ಪದಗಳಿಗೆ ವಂದನೆಗಳು*

*ಧನ್ಯವಾದ ಪ್ರೇಮ್ ಮೇಡಮ್,*
[7/25/2019, 6:40 AM] Wr Vinuta Kicchikeri: ಶುಭಮುಂಜಾನೆ  ಪ್ರೇಮ್ ಮೇಡಂ ಹೌದು ನಿಜ ನೀವು ಹೇಳೋದು.

ನಿಮ್ಮ ಕಥೆನೂ ಚಂದವಿದೆ.ನೋಡಿ ದೊಡ್ಡ ದೊಡ್ಡ ಭಾಷಣ ಮಾಡಿ ಆಮೇಲೆ ಮಾಡೋದೆಲ್ಲ ಮಣ್ಣು ತಿನ್ನೋ ಕೆಲಸ ಅಂತಾರಲ್ಲ ಹಾಗೆ.ಮತ್ತೆ ದುಡ್ಡಿದೆ ಏನು ಮಾಡಿದರೂ ನಡೆಯುತ್ತೆ ಅನ್ನೋ ಒಣ ಧೈರ್ಯ. ಈಗಿನ ಕಾನೂನು ವ್ಯವಸ್ಥೆ ಗಳು ಅಂತವರ ಪರವಾಗೆ ಇದೆ ಅಲ್ಲವೇ ಚಂದವಿದೆ. 

ವಿನುತಾ ಕಿಚ್ಚಿಕೇರಿ
[7/25/2019, 8:31 AM] Wr Manu Vaidya: *ಪ್ರೇಮಕ್ಕನವರ ನ್ಯಾನೋ ಕಥೆಯ ಕುರಿತಂತೆ*

 *"ಹೇಳುವುದು ಒಂದು"* ಎಂಬ ಶೀರ್ಷಿಕೆಯೇ ಕಥೆಯ ಸಾರವನ್ನು ಹೇಳುವಂತಿದೆ...

 *ಹೇಳುವುದು ಒಂದು, ಮಾಡುವುದು ಇನ್ನೊಂದು*  ಎಂಬ ಹಳೆಯ ಗಾದೆ ಇನ್ನೂ ಪ್ರಚಲಿತದಲ್ಲಿದೆ.. ಮತ್ತೊಂದು ಮಾತಿದೆ, *"ಹೇಳೋದು ಆಚಾರ ತಿನ್ನೋದು ಬದನೆಕಾಯಿ"* ಎಂದು.. ಈ ಮಾತುಗಳಿಗೆ ಉದಾಹರಣೆಯಂತಿದೆ ನಿಮ್ಮ ಕಥೆ.. ಉತ್ತಮ ನೀತಿಯನ್ನು ಸಾರುತ್ತದೆ.. ಹೊರಗೊಂದು, ಒಳಗೊಂದು, ಮಾಡುತ್ತಾ ಮುಖವಾಡದ ಜೀವನ ನಡೆಸುವವರಿಗೆ ನಿಮ್ಮ ಕಥೆ ಚಾಟಿ ಬೀಸಿದಂತಿದೆ..

ಇನ್ನು ನಿಮ್ಮ ಕಥೆಯಲ್ಲಿ...

👉🏻ನಿರೂಪಣೆ ಶೈಲಿ ಉತ್ತಮವಾಗಿದೆ
👉🏻ಪಾತ್ರವನ್ನು ಮಾತಾಡಿಸುವ ಮೂಲಕ ಕಥೆಗೆ ಒಂದು ಮೆರುಗು ಕೊಟ್ಟಿದ್ದೀರಾ..
👉🏻ಕಥೆಗೆ ಆಯ್ದುಕೊಂಡ ವಸ್ತುವಿಷಯ ಚೆನ್ನಾಗಿದ್ದರೂ, ಇದು ಸ್ವಲ್ಪ ಹಳೆಯದಾಯಿತು ಅಂತ ಅನಿಸಿತು ಅಕ್ಕಾ..
👉🏻ಯಾಕೆಂದರೆ, ಇದಕ್ಕೆ ಸಂಬಂಧಿಸಿದಂತೆ, ಸಾಕಷ್ಟು ಬಗೆ,ಬಗೆಯ ಕಥೆಗಳು ಬಂದುಬಿಟ್ಟಿವೆ.. ಅದರಲ್ಲೂ ಇದನ್ನು ಇನ್ನೂ ಸ್ವಲ್ಪ ವಿಭಿನ್ನವಾಗಿ ಹೇಳಿದ್ದರೆ ನಿಮ್ಮ ಕಥೆ ಇನ್ನಷ್ಟು ಸೊಗಸಾಗಿ ಕಾಣುತ್ತಿತ್ತು ಅಕ್ಕಾ..
👉🏻ಆದರೂ ಬರೆದ ಶೈಲಿ, ಕಥೆ ಉತ್ತಮವಾಗಿದೆ..

ನನಗೆ ಅನಿಸಿದಂತೆ ಹೇಳಿರುವೆ ಅಕ್ಕಾ.. ತಪ್ಪಿದ್ದರೆ ಮನ್ನಿಸಿ..

✍ *ಮನು ವೈದ್ಯ*
[7/25/2019, 4:44 PM] @PREM@: ಜೋಷಿ ಮೇಡಂ ನಿಮ್ಮ ಕತೆಯಲ್ಲಿ ನನ್ನನ್ನೇ ಕಂಡಂತಾಯಿತು. ಅಮ್ಮನ ಮನೆ ಬದಲಾಯಿಸುವಾಗ ತಮ್ಮ ನನ್ನ ಕಲೆಕ್ಷನ್ನಲ್ಲಿದ್ದ ಹಲವಾರು ನನ್ನ ಡೈರಿಗಳನ್ನಾಗಲೇ ಗುಜಿರಿಗೆ ಹಾಕಿದ್ದ. ಕೆಲ ಪುಸ್ತಕಗಳನ್ನು ಆಸೆ ತಾಳದೆ ಹತ್ತಿರದ ಪ್ರೌಢಶಾಲಾ ಹೆಡ್ ಮಾಸ್ಟರಿಗೆ ಫೋನ್ ಮಾಡಿ ಗ್ರಂಥಾಲಯಕ್ಕೆ ತರಲು ಹೇಳಿದೆ. ನನಗೋ ಹೋಗಿ ತರುವ ಶಕ್ತಿ ಇರಲಿಲ್ಲ ಕಾರಣ ನನ್ನ ಡೆಲಿವರಿ ಆಗಿ ಒಂದು ತಿಂಗಳೂ ಕಳೆದಿರಲಿಲ್ಲ, ನಾನು ನನ್ನ ರೂಂ ಬಿಟ್ಟು ಅಜ್ಜಿ ಮನೇಲಿ ಮಗು ಮತ್ತು ದೊಡ್ಡಮ್ಮನೊಂದಿಗಿದ್ದೆ!ಪುಸ್ತಕಗಳನ್ನು ಮಕ್ಕಳಂತೆ ಪ್ರೀತಿಸುವ ನನಗೆ ತುಂಬಾ ಬೇಸರವಾದರೂ ಅನಿವಾರ್ಯ ಪರಿಸ್ಥಿತಿ ಎದುರಿಸಲೇ ಬೇಕು. ಈಗಲೂ ನನ್ನ ರೂಮಲ್ಲಿ ಭಾರದ ದೊಡ್ಡ ಲಗೇಜೆಂದರೆ ಪುಸ್ತಕಗಳೇ. ನೀವು ಬರೆದ ಕತೆ ನನ್ನನ್ನೇ ನೋಡಿ ಬರೆದಂತೆ ಭಾಸವಾಯಿತು..🙏🙏
[7/26/2019, 8:15 AM] Wr Sham Prasad Bhat: *ಪ್ರೇಮ್*

*ಬದಲಾಯಿತು ಬದುಕು*

ರಕ್ತ ಕಂಡಾಗ ತಲೆ ಸುತ್ತು ಬರುವವರು ಹಲವರಿದ್ದಾರೆ.ಇದು ಕಾಯಿಲೆಯಲ್ಲ.ಮಾನಸಿಕ ಅಭದ್ರತೆ.ಫೋಬಿಯಾ..ಎತ್ತರದಿಂದ ಕೆಳಗಿಣುಕಿದಾಗ ಹೆದರಿ ತಲೆ ಸುತ್ತು ಬರುವುದು ಕೆಲವರಿಗೆ.ಇದನ್ನು ಹೈಟ್ ಫೋಬಿಯಾ ಅನ್ನುತ್ತೇವೆ.ಈ ಕತೆಯಲ್ಲಿ ಅವಳ ಫೋಬಿಯಾ ಅವಳಿಗೆ ಪ್ರತಿಕೂಲವಾಗಿ ಪರಿಣಮಿಸಿತು.ಇಲ್ಲವೆಂದಾದಲ್ಲಿ ಅವಳು ನರ್ಸಿಂಗ್ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದಳು.ತಾಂತ್ರಿಕತೆ ಯ ಉತ್ತುಂಗದ ದಿನಗಳಿವು.ಕಂಪ್ಯೂಟರ್ ಡಿಪ್ಲೊಮಾ ಮಾಡಿದ ಅವಳಿಗೆ ಯತ್ತಮ ನೌಕರಿ ದೊರೆಯಿತು.
ಫೋಬಿಯಾ ಅವಳಿಗೆ ಒಳ್ಳೆಯದನ್ನೇ ಮಾಡಿತು .ಸೂಕ್ಷ್ಮ ಸಂಗತಿಯೊಂದನ್ನು ಆಯ್ದು ರಚಿಸಿದ ನ್ಯಾನೋ ಚೆನ್ನಾಗಿದೆ.

ಧನ್ಯವಾದಗಳು

*ಶ್ಯಾಮ್ ಪ್ರಸಾದ್*
[7/29/2019, 1:09 PM] Wr Nagamani Mysore: ಪ್ರೇಮ್ ಅವರ ಹನಿಗಳು ನಗೆಯುಕ್ಕಿಸುವಲ್ಲಿ ಯಶಸ್ವಿ ಆಗಿದೆ.

ಮಗಳ ವಯಸ್ಸು ಅಂಥದ್ದು, ಕನ್ನಡಿಯೇ ಅವಳ ಪ್ರಪಂಚ.. ಹುಚ್ಚು ಖೋಡಿ ಮನಸು.... 

ಮಡದಿಗೆ ದೂರದರ್ಶನ ಹಿಡಿಸಿರುವ ಹುಚ್ಚು ಈ ಪರಿಯಾಗಿ ಗಂಡನನ್ನು ಕಾಡಿಸುತ್ತಿದೆ.. ಧಾರಾವಾಹಿ ಬಿಟ್ಟು ಏಳಲಾರದೇ ಆತ್ಮೀಯತೆಯಿಂದ ಕಳೆಯಬೇಕಾದ ಸಮಯವನ್ನು ಟಿ.ವಿ ಮುಂದೆ ಕಳೆಯುತ್ತಿದ್ದಾಳೆ.

ಇಬ್ಬರು ತನ್ನ ಜೊತೆಗಿಲ್ಲದೇ ಗಂಡ ತನ್ನ ಪಾಡಿಗೆ ತಾನು ಮೊಬೈಲ್ ಫೋನ್ ತನ್ನ ಜೀವವಾಗಿ ಮಾಡಿಕೊಂಡು ಕಾಲ ಕಳೆಯುತ್ತಿದ್ದಾನೆ. 
ಅವರಿಬ್ಬರೂ ಹೀಗೆ ಅಂತ ಇವ ಹೀಗೋ ಅಥವಾ ಇವ ಹೀಗೆ ಅಂತ ಅವರಿಬ್ಬರೂ ಹಾಗೋ ಗೊತ್ತಾಗಲಿಲ್ಲ..
ಬಹುತೇಕ ಮನೆಗಳ ಪರಿಸ್ಥಿತಿ ಇದು !!

ನಾಗಮಣಿ
[7/29/2019, 2:02 PM] Wr Sreemati Joshi: ಪ್ರೇಮ್ ಮೇಡಂ 🙏🙏ಈಗಿನ ಜನರೇಶನ್ ಗೆ ತಕ್ಕ ಹಾಗೆ ಹನಿ. ನಗು ತರಿಸುತ್ತದೆ. ನಿಜವಾದ ಮಾತು ಮೊಬೈಲ್.. ಟಿ ವಿ ಕನ್ನಡಿ 3 ಇದ್ದರೆ ಮನೆಯಲ್ಲಿ ಬಾಂಧವ್ಯ ಬೇಡ.  ಪ್ರೀತಿಯು ಬೇಡ..ನೆಂಟರು ಬಂಧುಗಳು ಮೊದಲೇ ಬೇಡ.  ಅಲ್ವಾ. 
ಇನ್ನೂ ಕಾಲೇಜ್ ಹೇ ಹೋಗುವಾಗ ಸರ್ವೇ ಸಾಮಾನ್ಯ ಈ ಲವ್.  ಅದೊಂದು ಆಕರ್ಷಣೆ. ಮತ್ತೆ ವಯೋ ಸಹಜ .ಅಭಿವ್ಯಕ್ತಿ...ಆದರೆ ಹೆಣ್ಣು ಜಾಗೃತ ವಹಿಸಿದರೆ ಒಳ್ಳೆಯದು. ಉತ್ತಮ ಆಶಯ 🙏🙏👌👌
[7/30/2019, 10:55 AM] Wr Sham Prasad Bhat: *ಪ್ರೇಮ್*
 
*ಹನಿ೧*

ಫಲಾಪೇಕ್ಷೆಯಿಲ್ಲದೇ ಗಿಡನೆಟ್ಟು ಸಲಹಿ ಮರವಾಗಿಸಿದಳು.ಆ ಮರಗಳು ಹಿಗ್ಗಿ ಬೆಳೆದು ಪರಿಸರಕ್ಕೆ ತಮ್ಮ ಕೊಡುಗೆಯನ್ನು ಸಲ್ಲಿಸುತ್ತಲೇ ಇವೆ.ಮರಗಳಡಿಯಲ್ಲಿ ಸಂಚರಿಸುವ ಆ ನೆರಳು ನೀಡುವ ಹಿತಾನುಭವವನ್ನು ಸವಿಯುವ ಪ್ರತೀಯೊಬ್ಬನೂ ಸಾಲು ಮರದ ತಿಮ್ಮಕ್ಕನಿಗೆ ಧನ್ಯವಾದ ಸಮರ್ಪಿಸಲೇ ಬೇಕು.ಇವತ್ತಿನ ದಿನಗಳಲ್ಲಿ ನಾವು ನೋಡುತ್ತಿಲ್ಲವೇ..ಯಾರೋ ಒಬ್ಬ ಒಂದು ಗಿಡ ನೆಟ್ಟು ಫೋಟೋ ಕ್ಲಿಕ್ಕಿಸಿ ಜಾಲತಾಣಗಳಲ್ಲಿ ಹರಿಯಬಿಟ್ಟು  ಸಾವಿರ ಲೈಕ್ ನಿರೀಕ್ಷೆ ಮಾಡುತ್ತಾನೆ..ಆದರೆ ಸಾವಿರಕ್ಕೂ ಹೆಚ್ಚು ಮರ ನೆಟ್ಟ ತಿಮ್ಮಕ್ಕನಿಗೆ ಒಂದೇ ಒಂದು ಲೈಕ್ ನಿರೀಕ್ಷೆ ಮಾಡಿದವಳಲ್ಲ..ಸಣ್ಣ ಹನಿ ನಮ್ಮನ್ನು ಈ ನಿಟ್ಟಿನಲ್ಲಿ ಆಲೋಚಿಸುವಂತೆ ಮಾಡಿದೆ.ಗೆದ್ದಿದೆ.ಅಂದು ಪಂಚಪದಿಗಳಲ್ಲೂ ತಿಮ್ಮಕ್ಕನನ್ನು ಸ್ಮರಿಸಿದ್ದು ನನಗಿನ್ನೂ ನೆನಪಿದೆ.ನಿಜಕ್ಕೂ ಇದು ಉತ್ತಮ ಪ್ರಯತ್ನ. ಪರಿಸರ ಕಾಳಜಿ ಲೇಖನಿಯ ಮೂಲಕ ಹೊರಹೊಮ್ಮುವ ಬೆಳವಣಿಗೆಗೆ ನನ್ನ ಸಂಪೂರ್ಣ ಬೆಂಬಲವಿದೆ.ಹನಿ ಚೆನ್ನಾಗಿದೆ

ಧನ್ಯವಾದಗಳು ಸಹೋದರಿ

*ಶ್ಯಾಮ್ ಪ್ರಸಾದ್*
[7/31/2019, 7:53 AM] +91 94807 90863: 🙏 *ಪ್ರೇಮ್ ಜಿ*
ಬಳೆಯ ತೊಟ್ಟವಳಿಗಾಗಿ ಬಲೆಯಲ್ಲಿ ಬದ್ದ ಚುಟುಕು ಚೆನ್ನಾಗಿದೆ 😊
    ಧನ್ಯವಾದಗಳು
*ಸುಜಾತಾ ಎನ್*
[7/31/2019, 9:03 AM] Wr Shivaprasad Aradhya: ಪ್ರೇಮ ನೀವೂ ಪ್ರಾ ಸಮಯ ಚಂದ ಬರೆದಿಹಿರಿ ಭಲೇ  ಸೋದರೀ

ಶಿವಪ್ರಸಾದ್
[8/3/2019, 7:08 PM] Wr Tr Parameshwari Prasad: ಪ್ರೇಮ್ ಮೇಡಂ,

ನಮಸ್ತೆ🙏,

ಎರಡು ಸತ್ಯಗಳು ಚೆನ್ನಾಗಿದೆ.


ಸತ್ತವನಿಗೆ ಅಮೃತಕೊಟ್ಟರೆ ಬರಲಾಗದು. ಅರ್ಥ ಪೂರ್ಣ.

ಎರಡನೇದು,

ನಿಜ ಅಮೃತ ಕುಡಿದವರಾರದೂ ಗುಣ ಒಳ್ಳೆದಿರಬೇಕೆಂದಿಲ್ಲ. ಚಂದ
👌👌👌

ಪರಮೇಶ್ವರಿ ಪ್ರಸಾದ್✍️

ವಿಮರ್ಷೆಗಳು-4

[8/5/2019, 9:57 AM] Nybr Pramila: *ಏರುತಿರು*
ಪ್ರೇಮ ಮೇಡಂ ಕವನ ಸುಂದರವಾಗಿ ಮೂಡಿಬಂದಿದೆ. 
ಅರ್ಥಬದ್ಧ ಸಾಹಿತ್ಯ. 
ಸರಳ, ಪ್ರಾಸಬಧ್ಧವಾಗಿದ್ದು ಉತ್ತಮ ಸಂದೇಶ ಸಾರುವ ಕವನ. 👌👌👌
[8/6/2019, 1:00 PM] Wr Vinuta Kicchikeri: ಪ್ರೇಮ್ ಜೀ🙏
ನಿಮ್ಮ ಕವನಗಳನ್ನು ಓದುವದೇ ಖುಷಿ. ಏನಾದರೂ ಹೊಸ ಬಗೆ ಇದ್ದೇ ಇರುತ್ತ.ಇವತ್ತಿನ ಕವನವೂ ಕೂಡಾ ಅದೇ ಮಾದರಿಯಲ್ಲಿದೆ ಗೀಗೀ ಪದ ಹೇಳುತ್ತೇವೆ. ದಾಟಿ ಹಾಕಿದರೆ ಹಾಡಲೂ ಬರುತ್ತೆ.ಬೆಳದಿಂಗಳೂ ನಮಗಾಗೆ ಹರಿಬಿಟ್ಹಾನ ಇದು ತುಂಬಾ ಇಷ್ಟ ವಾಯ್ತು. ಪರಿಸರ,ಜಾತಿ ಭೇಧ,ಹೀಗೆ ಪ್ರೀತಿಯ ಜೊತೆಗೆ ಸಮಾಜದ ಕಳಕಳಿಯೂ ನಿಮ್ಮ ಕವನಗಳಲ್ಲಿ ಅಡಗಿರುತ್ತೆ.ಇಷ್ಟ ವಾಯ್ತು ನಿಮ್ಮ  ಕವನ ಶುಭವಾಗಲಿ🙏💐

ವಿನುತಾ ಕಿಚ್ಚಿಕೇರಿ
[8/8/2019, 10:18 AM] Wr Sham Prasad Bhat: *ಪ್ರೇಮ್*

*ಕೇಸರಿ ಕಪ್ಪಿನ ನಡುವೆ*

ಬಣ್ಣ ಬಣ್ಣದ ಬದುಕ ಬಣ್ಣಿಸಿದ ರೀತಿ ಆಕರ್ಷಕ... ಬಣ್ಣದ ಬದುಕಿಗೆ ಬಣ್ಣವನ್ನು ಒದಗಿಸಿದವನು ಆ ಸೂರ್ಯ.. ಸೂರ್ಯನನ್ನು ಒಡವೆ ಎಂದಿರುದೇಕೆಂದರೆ  ಅಲಂಕಾರದಲ್ಲಿ ಬಹುಪಾಲು ಪಡೆದವನು ಅವನು...ಅಲಂಕಾರವೆಂದರೆ ಬದುಕು..ಬದುಕಿನ ಬೆಳವಣಿಗೆಗಳಿಲ್ಲಾ ಅವನಿಂದಲೇ...ಅವನಿಲ್ಲದಿರೆ ಜಗವಿಲ್ಲ...

ಜೀವನದಲ್ಲಿ ಏಳು ಬೀಳು ಸಹಜ...ಕೆಲವು ದೈವದತ್ತ ರೂಪದಲ್ಲಿ.. ಇನ್ನು ಕೆಲವು ಸ್ವಯಂಕೃತ..ಹಮ್ಮುಬಿಮ್ಮು,ದ್ವೇಷ, ಅಸೂಯೆ, ಸದಾ ಬೆಂಕಿಯುಗುಳುವ ಜಿಹ್ವೆ...ಕಷ್ಟಗಳನ್ನು ಕಟ್ಟಿಕ್ಕೊಂಡ ಸೆರಗು...ಬದುಕಲ್ಲಿನ ವೈವಿಧ್ಯತೆಗಳೆನ್ನೋಣವೇ?

ಪ್ರಕೃತಿ ಎರಡು ರೀತಿಯಲ್ಲಿ ವರ್ತಿಸುತ್ತದೆ..ಕೆರಳಲೂ ಗೊತ್ತು..ಶಾಂತ ರೀತಿಯಲ್ಲಿ ವರ್ತಿಸಲೂ ಗೊತ್ತು..
ದೇವರು ಆಡುವ ಆಟದಲ್ಲಿ ನಮಗೆ ನಿಲುಕುವ ಮತ್ತು ನಿಲುಕದ ವಿಚಾರಗಳು ಇರುತ್ತವೆ..

ನಮ್ಮ ಬೀಡು ಸ್ವರ್ಗಕ್ಕೆ ಸಮಾನ..ನಾವು ಅಸ್ತಮಿಸುವ ಸೂರ್ಯನನ್ನು ತಡೆದು ನಿಲ್ಲಿಸಿ ಯೋಗಕ್ಷೇಮ ವಿಚಾರಿಸಿ ಶುಭಹಾರೈಸಿ ಬೀಳ್ಳೊಡುವವರು..ಉನ್ನತ ಭಾವನೆಗಳ ಬೀಡಿದು...ಕೊಟ್ಟ ಚಿತ್ರದ ಸಂಪೂರ್ಣ ಅರ್ಥ ಕೊನೆಯ ನಾಲ್ಕು ಸಾಲುಗಳಲ್ಲಿ ಹರಡಿಕ್ಕೊಂಡಂತೆ ಭಾಸವಾಯ್ತು...ಚಿತ್ರಕ್ಕೆ ನ್ಯಾಯ ಸಲ್ಲಿಸಿ ಬರೆದ ಬರಹ ಸೊಗಸಾಗಿ ಮೂಡಿಬಂದಿದೆ.

ಧನ್ಯವಾದಗಳು

*ಶ್ಯಾಮ್ ಪ್ರಸಾದ್*
[8/8/2019, 12:52 PM] Wr Kshama Raghuram: *ಕೇಸರಿ ಕಪ್ಪಿನ ನಡುವೆ....*

*ಪ್ರೇಮ್  ಮೇಡಂ  ನಮಸ್ತೆ...*

ಬಾಳದು ನಮ್ಮದು ಬಣ್ಣದ ನಡುವೆ
ಹೇಳಲಿ ಏನು ಸೂರ್ಯನೆ ಒಡವೆ..
ಜಗವದು ಸುತ್ತಿ ದಿನ ರಾತ್ರಿ ಬರಲು
ಸಮುದ್ರಕೆ ಬಿದ್ದು ನಿದ್ದೆಯ ಮಾಡಲು!

👆🏼  *ಅರ್ಥ ಪೂರ್ಣ  ಸಾಲುಗಳು...ತುಂಬಾ  ಇಷ್ಟ  ಆಯ್ತು..,.*

ಕೇಸರಿ ಕಪ್ಪಿನ ಬಣ್ಣದ ಜೊತೆಗೆ
ಜೀವನ ಯಾತ್ರೆಯು ಸಾಗುತಿದೆ!
ಕೈಯಲಿ ಬಂಕಿಯ ಉಗುಳುವ ಬಾಳಿದೆ!
ಕೆಂಡವು ಮಡಿಲಿನ ಸೆರಗಲಿ ಕಟ್ಟಿದೆ!

*👆🏼ಕವಿತೆಗೆ  ಮೆರಗು*   *ಕೊಟ್ಟಂತಹ   ಸಾಲುಗಳು..*.

*ಜೀವನದ  ಮಹತ್ತರ  ಅಂಶಗಳನ್ನು  ಕವಿತೆಯಲ್ಲಿ*
*ಪೋಣಿಸಿ   ಚಿತ್ರಕ್ಕೆ  ಪೂರಕವಾಗಿ  ರಚಿಸಿದ*  *ಉತ್ತಮ  ಭಾವಭಿವ್ಯಕ್ತಿ ಯುಳ್ಳ*
*ಅತ್ತುತ್ತಮ  ಅರ್ಥ ಪೂರ್ಣ  ಕವಿತೆ,..,*

ಧನ್ಯವಾದಗಳು ಮೇಡಂ...
ಕ್ಷಮಾ ರಘುರಾಮ್ ..
[8/10/2019, 8:59 AM] Wr Shivaprasad Aradhya: ಪ್ರೇಮ ಮತ್ತು ಜೀವರಾಜರ ಕವನಗಳು ಬಹಳ ಚೆನ್ನಾಗಿ ವೆ.ಆರರಲ್ಲೂ ಜೀವರಾಜರ ದ್ವಿರುಕ್ತಿ ತರಹದ ಪದ ಪ್ರಾಸ ಚಮತ್ಕಾರ ದಿ ಬರೆದ ಉಪಮೆಗಳ ಪ್ರೌಢ ಕುಶಲತೆ ಬಹಳ ಚಂದ.ನುರಿತ ಕವಿ ಭಾವ.ದ ಜೀವರು ಸರಳ ಶೈಲಿಯ ಪ್ರೇಮ ಗಮನ ಸೆಳೆದರು.

ಶಿವಪ್ರಸಾದ್ ಆರಾಧ್ಯ
[8/10/2019, 2:43 PM] Wr Jeevaraja Chatrad-2: ಒಬ್ಬ ಉತ್ತಮ ಕವಿಯಿಂದ ಉತ್ತಮ ಕವಿಯೆಂದು ಹೇಳಿಸಿಕೊಳ್ಳುವುದರಲ್ಲಿಯ ಸುಖ ಅದ್ಯಾವ ಸುಖ ಸಂಪತ್ತಿನಿಂದಲೂ ದೊರೆಯುವುದಿಲ್ಲ ಧನ್ಯವಾದಗಳು ಪ್ರೇಮಾ ಮೇಡಂ
[8/13/2019, 5:33 PM] Wr Vara Lakshmi Amma: ಪ್ರೇಮ್ ಅವರ ಗಝಲ್ 
 ಸ್ವಾತಂತ್ರ್ಯದ ದುರುಪಯೋಗವನ್ನು ಬಹಳ ಪರಿಣಾಮಕಾರಿಯಾಗಿ  ನಿರೂಪಿಸಿದ್ದಾರೆ. 
 ಕೊನೆಯಲ್ಲಿ  ಪ್ರೇಮದ ಸಂದೇಶ ಕೊಟ್ಟಿರುವುದು ತುಂಬಾ ಸೊಗಸಾಗಿದೆ. 
 ಗಝಲ್  ನಿಯಮ ನನಗೆ ತಿಳಿಯದು,  ಆದರೆ ಅದರ ಚೌಕಟ್ಟಿನಲ್ಲಿ  ವಿಭಿನ್ನ ವಿಷಯ ‌ದ ಬಗ್ಗೆ  ಕವನ ರಚನೆ ನಿಜಕ್ಕೂ  ಮೆಚ್ಚಬೇಕು 🙏
[8/13/2019, 5:54 PM] Wr Dinesh Sir: 🍁🌼☘

🙏 *ನಮಸ್ಕಾರಗಳು*

*ಪ್ರೇಮ್ ರವರ*

*ಪ್ರಕಾರ*:- ಗಜ಼ಲ್


ಬಲು ಚೆಂದವಾಗಿ ಮೂಡಿಬಂದಿದೆ.ಸಾಲುಗಳೆಲ್ಲ ಅರ್ಥಪೂರ್ಣವಾಗಿದ್ದು,ಅಂದದುಂಬಿದೆ.ಗಜ಼ಲ್ ನಿಯಮ ಪ್ರಕಾರವಿದ್ದು ಮನುಜ ತನಗೆ ಸಿಕ್ಕ ಸ್ವಾತಂತ್ರ್ಯವನ್ನು ಯಾವ ಯಾವ ಥರದಲ್ಲಿ ಹೇಗೆ ಬಳಸಿಕೊಂಡಿದ್ದಾನೆ ಎಂಬುದರ ಸಮಗ್ರ ಚಿತ್ರಣ ನಿಮ್ಮ ಗಜ಼ಲ್ ನಲ್ಲಿ ಕಣ್ಣಿಗೆ ಕಟ್ಟುವಂತೆ ಮೂಡಿಬಂದಿದೆ. ಕೊನೆಯಲ್ಲಿ ಕಂಪು ಬೀರುತಲಿ ಸತ್ಕಾರ್ಯದ ಕಾಂತಿ ಚೆಲ್ಲುತಲಿ ಬದುಕೋಣ ಎಂಬ ಸದಾಶಯ ಗಮನಸೆಳೆಯಿತು.ಸೂಪರ್.


🍁• ಅರ್ಥಪೂರ್ಣವಾದ ಗಜ಼ಲ್

🌼• ನಿಯಮಬದ್ಧವಾಗಿದೆ

☘• ಪದಕ್ಕೆ ಪೂರಕವಾಗಿದೆ.


*ಧನ್ಯವಾದಗಳು ಮಿತ್ರರೆ*.🙏🙏
ನಿಮ್ಮ ಸಾಹಿತ್ಯಯಾನ ಸುಖಕರವಾಗಿರಲಿ
*ಸಾಹಿತ್ಯ ಕ್ಷೇತ್ರದಲ್ಲಿ ಯಶಸ್ಸು ಸದಾ ನಿಮಗೊಲಿಯಲಿ*..

👍👍💐💐
[8/15/2019, 4:36 PM] Wr Sirsi Ratnakar: 🌹🌹🌹🌹 *73ನೇ ಸ್ವಾತಂತ್ರ್ಯೋತ್ಸವ ಹಾಗೂ ರಕ್ಷಾಬಂಧನದ ಶುಭಾಷಯಗಳೊಂದಿಗೆ.......*🌹🌹🌹🌹

✒*ಪ್ರೇಮ* ಮೇಡಂ ರವರ
*ದೇಶಭಕ್ತಿಗೀತೆ* 

*ನಾನು ಪುಣ್ಯ ಪಡೆದವ*
ಜನನೀ ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು ಎಂಬಂತೆ ಈ ಭಾರತ ಭೂಮಿಯಲ್ಲಿ ಹುಟ್ಟಿಬಂದಿರುವುದೆ ನಮ ಭಾಗ್ಯ ಅಂತೆಯೆ ತಾಯಿ ಭಾರತಿಯನು ಪ್ರೀತಿಸುವ ಆರಾಧಿಸುವ ಅವಕಾಶವೆ  ಸೌಭಾಗ್ಯವೆನುತ ಈ ಮಣ್ಣು ಈ ನಾಡು ಈ ನುಡಿ ಕೊಟ್ಟಂತಹ ಪ್ರೀತಿ ಪ್ರೇಮ ಜಗತ್ತಿನ ಯಾವ ಮೂಲೆಯಲ್ಲೂ ಸಿಗಲು ಸಾಧ್ಯವಿಲ್ಲ.,ಎಂಬುದನ್ನ ಭಾವನಾತ್ಮಕವಾಗಿ ಬರೆದಿರುವಿರಿ 
ಹಲವು ವೇಷ ಹಲವು ಭಾಷೆ ಜಾತಿ ಧರ್ಮಗಳ ಸಮ್ಮಿಲನದ ಗೂಡಲ್ಲಿ ಸ್ವತಂತ್ರ ವಾಗಿ ಬದುಕುವ ಅವಕಾಶವೆ ಪೂರ್ವ ಜನ್ಮದ ಪುಣ್ಯದ ಫಲ ಇದನ್ನ ಅರಿತು ಬೆರೆತು ಸಾಗಬೇಕಾದುದು ನಮ್ಮ ಧರ್ಮ ಎನ್ನುವ ಆಶಯದೊಂದಿಗೆ ಗೀತೆ ಚೆನ್ನಾಗಿ ಮೂಡಿದೆ

*ಸ್ವಾತಂತ್ರ್ಯ ಪದಕೆ ನ್ಯಾಯ  ಒದಗಿಸಿದ್ದೀರಿ .*

🌹🌹 *ಧನ್ಯವಾದಗಳು... ಅಭಿನಂದನೆಗಳು ನಿಮ್ಮ ಸಾಹಿತ್ಯದ ಎಲ್ಲಪ್ರಕಾರಗಳಿಗೂ  ಶುಭಕೋರುವೆ* 🌹🌹
       
🙏🏻🙏🏻ಇಂತಿ ನಿಮ್ಮವ *ಶಿರ*🙏🏻🙏🏻
[8/16/2019, 6:53 AM] Nybr Pramila: *ಪ್ರೇಮ್ ಮೇಡಂ* ರವರ ಲಘುಬರಹ ಬಹಳ ಅರ್ಥವತ್ತಾಗಿ, ಸಮಯೋಚಿತವಾಗಿ ಮೂಡಿಬಂದಿದೆ. ಸಾಮಾನ್ಯ ಗ್ರಾಮೀಣ ಪ್ರದೇಶದ ಮಹಿಳೆಯ ಮೂಲಕ ಸ್ವಾತಂತ್ರ್ಯದ ಮಹತ್ವವನ್ನು ಹೇಳಿದ್ದೀರಿ. 
ಹೌದು,ಈಗೀಗ ಪಠ್ಯಪುಸ್ತಕಗಳಿಂದನೂ ಈ ಸ್ವಾತಂತ್ರ್ಯ ಹೋರಾಟಗಾರರನ್ನು ತೆಗೆದು ಮತ್ಯಾವುದೋ ಅಸಂಬದ್ಧ ವಿಚಾರವನ್ನು ಪಠ್ಯದೊಳಗೆ ತುರುಕಿಬಿಟ್ಟಿದ್ದಾರೆ. ಇದರಿಂದ ಆ ಮಹಾನ್ ವೀರರ ತ್ಯಾಗವನ್ನು, ಬಲಿದಾನವನ್ನು ಮಕ್ಕಳಿಗೆ ಹೇಳಲು ಸಿಗುವ ಸಮಯಾವಕಾಶ ತೀರಾ ಕಡಿಮೆ. ಸ್ವಾತಂತ್ರ್ಯದ ಕತೆ ಕೇಳಿದರೆ ನಮಗೆಲ್ಲ ಮೈಯ ಪ್ರತೀ ಕಣಕಣವೂ ರೋಮಾಂಚನವಾದರೆ, ಈಗಿನ ಮಕ್ಕಳಿಗೆ ಬಾವುಟ ಹಾರಿಸುವುದು ಮಾತ್ರ ಗೊತ್ತು. ಅದೇ ಸ್ವಾತಂತ್ರ್ಯ ಅಂತ ತಿಳಿದುಕೊಂಡಿರುವರು. 

 ನಿಮ್ಮ ಉತ್ತಮ ಬರವಣಿಗೆಗಾಗಿ ಅಭಿನಂದಿಸುತ್ತೇನೆ💐💐💐
ಶುಭವಾಗಲಿ.
[8/16/2019, 9:39 AM] Wr Uday Bhaskar Sullia: *ಪೇಮಾ ಮೇಡಂ*

ಲಘು ಬರಹ ತುಂಬಾ ಚೆನ್ನಾಗಿದೆ. ಒಂದೊಳ್ಳೆಯ ಸಂದೇಶ, ಜಾಗೃತಿ ತುಂಬಿದ ಬರಹ. ಸಹಸ್ರ ಸಹಸ್ರ ಸ್ವಾತಂತ್ರ್ಯ ಸೇನಾನಿಗಳ ಬಿಸಿರಕ್ತದೋಕುಳಿಯ ಸಮಾಧಿಯ ಮೇಲೆ‌ ಎದ್ದು ನಿಂತ ಸ್ವಾತಂತ್ರ್ಯ ಸೌಧದ ಪರಿಕಲ್ಪನೆಯೇ ಇಲ್ಲದೆ, ಬರೀ ಬಾವುಟ ಹಾರಿಸಿ ಸಿಹಿತಿಂಡಿ ಹಂಚಿ ಸಂಭ್ರಮಿಸುವುದಕ್ಕೆ ಸೀಮಿತವಾದ ಹಬ್ಬದ ಕುರಿತು ಬೇಸರ ವ್ಯಕ್ತಪಡಿಸಿದ್ದೀರಿ‌‌.  ಬಲಿದಾನಗೈದ ದಿವ್ಯಾತ್ಮಗಳ ಸ್ಮರಣೆಯೇ ಇಲ್ಲದ ಮೌಲ್ಯ ರಹಿತ ಆಚರಣೆ ನಡೆಸುವ ನಾವು ನಿಜಕ್ಕೂ ಕೃತಘ್ನರು‌. ಯುವಜನತೆಯಲ್ಲಿ ರಾಷ್ಟ್ರಪ್ರೇಮವನ್ನು ಬಡಿದೆಬ್ಬಿಸುವ ಕೆಲಸ ಆಗಲೇಬೇಕಿದೆ ಅದು ಅನಿವಾರ್ಯ. ನಮ್ಮೆಲ್ಲ ಹಬ್ಬಗಳು ಪಾಶ್ಚಾತ್ಯರ ಅಂಧಾನುಕರಣೆಯ ಜಾಡು ಹಿಡಿದು ಮೌಲ್ಯ ಕಳೆದುಕೊಳ್ಳುತ್ತಿರುವುದು ಭಾರತೀಯ ಸಂಸ್ಕೃತಿಗೆ ಎಸಗುವ ಅಪಚಾರ. ಒಳಿತು ಎಲ್ಲೇ ಇದ್ದರೂ ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸೋಣ. ಆದರೆ‌ ಮೈಕಾಣಿಸುವ ತುಂಡು ಬಟ್ಟೆ, ಹಾದಿಬೀದಿಯಲ್ಲೇ ಮುತ್ತಿಟ್ಟು ಮೈಮರೆಯುವ ಹೀನ ಸಂಪ್ರದಾಯ ನಮಗೆ ಬೇಡ. 

ನಿಜಕ್ಕೂ ಈ ದಿನದ ನಿಮ್ಮ ಬರಹ ತುಂಬಾ ತುಂಬಾ ಇಷ್ಟ ಆಯ್ತು‌.

ಶುಭವಾಗಲಿ...

*- ಉದಯಭಾಸ್ಕರ್ ಸುಳ್ಯ*
[8/19/2019, 6:18 PM] Wr Nagamani Mysore: ಪ್ರೇಮ್ ಅವರ ಧರೆಯ ಸಂಕಟ ಸುಂದರವಾಗಿ ಚಿತ್ರಿಸಲ್ಪಟ್ಟಿದೆ. 

ಎಲ್ಲವನ್ನೂ ಸಹಿಸಿ ಕ್ಷಮಿಸುವಳೆಂದೇ ಅವಳನ್ನು ಕ್ಷಮಯಾಧರಿತ್ರಿ ಎನ್ನುವುದು... 

ಒಳ್ಳೆಯ ಗೀತೆ ಓದಿಸಿದ್ದೀರಿ ಮೇಡಂ
[8/27/2019, 6:58 AM] Wr Vinuta Kicchikeri: ಪ್ರೇಮ್ ಮೇಡಮ್🙏
ನಾವು ಎಷ್ಟೇ ದೂರವಿದ್ದರೂ
ಮನಸ್ಸಿನ ಪ್ರೀತಿಯಿಂದ ಹತ್ತಿರವಿರಬೇಕು ಎನ್ನುವುದನ್ನೂ
ಚಂದದ ಹನಿಯಲ್ಲಿ ತೋರಿಸಿದ್ದೀರಿ

ವಿನುತಾ ಕಿಚ್ಚಿಕೇರಿ
[8/27/2019, 10:52 AM] Wr Nagamma: ಪ್ರೇಮ್ ಜೀ🙏🏼

ಮನದಲ್ಲಿ..ರಬೇಕು..ಭಾವಗಳು..ಪ್ರೀತಿ..ಅದೇ ಸದಾ ಸಮೀಪ.


ದೇಹ..ಕಾಯಕ..ನಿಮಿತ್ತ..ಏಲ್ಲೋ..ಹೋದರೂ...ಮನಸ್ಸು ಸದಾ ಸಮೀಪ ವೇ...

ಚೆನ್ನಾಗಿದೆ..
ಧನ್ಯವಾದಗಳು..
ಎಸ್.
[8/29/2019, 5:29 PM] Wr Sham Prasad Bhat: *ಪ್ರೇಮ್*
*ಬೇಕೆನಗೆ*

ಕಲ್ಮಶರಹಿತ ನಿರ್ಮಲ ನಗುವಿನ  ನಿರೀಕ್ಷೆ.. ಸಿಗಬಹುದೇ....ಎಲ್ಲೆಡೆ  ಮುಖವಾಡ ತೊಟ್ಟವರೇ ತಿರುಗುತ್ತಿರುವಾಗ ಸ್ವಚ್ಛ ನಗು ಗಗನಕುಸುಮವೇ ಸರಿ.ಒಬ್ಬನ ಏಳ್ಗೆಯನ್ನು ಇನ್ನೊಬ್ಬ ಸಹಿಸನು..ಮತ್ತೆಲ್ಲಿ ನಿರ್ಮಲ ನಗುವಿನ ವಿನಿಮಯ ಸಾದ್ಯ...

ನಿರ್ಮಲ ನಗು ಸಿಗಲಾರದೆನ್ನಲಾರೆ...ತೊಟ್ಟಿಲ ಕಂದನ ನಗು ...ಸ್ವಾರ್ಥವಿಲ್ಲದ ಪರಿಶುದ್ಧ ನಗು...ಮೆದುಳು ಬಲಿತಂತೆ ಅಲ್ಲಿ ಕಲ್ಮಶಗಳು ತುಂಬಿಕ್ಕೊಳ್ಳುತ್ತವೆ.ಅವೇ ನಗುವಿನೊಂದಿಗೆ ಹೊರಹೊಮ್ಮುತ್ತವೆ.
ನಿಮ್ಮ ನಿರೀಕ್ಷೆ ಚೆನ್ನಾಗಿದೆ. ಆದರೆ ಪ್ರಸ್ತುತ ಜಗದಲ್ಲಿ ಎಳೆ ಮಕ್ಕಳ ಮೊಗದಲ್ಲಿ ಮಾತ್ರ ನಾಟಕರಹಿತ  ನಿರಾಭರಣ ನಗುವನ್ನು ಕಾಣಲು ಸಾಧ್ಯ..ಚೆನ್ನಾಗಿದೆ ಹನಿಗವನ.

ಧನ್ಯವಾದಗಳು

*ಶ್ಯಾಮ್ ಪ್ರಸಾದ್ ಭಟ್*
[9/2/2019, 4:12 PM] Wr 100 Ahmd: *ನಮಸ್ತೆ*🙏

*ಪ್ರೇಮ್ ಜಿ*

*ಗಜವದನನ ಬೇಸರ*

*ಮನುಜನ ಬಯಲಾಟವನ್ನು ಬಯಲಿಗೆಳೆಯುವ ಬೇಸರದ ಕವನ ವಾಸ್ತವತೆಯನ್ನು ಮುಚ್ಚು ಮರೆಯಿಲ್ಲದೆ ಹೇಳಿರುವ ಕವಿಗೆ ಕಪಟನ ಕಾಣದು*

*ಇಲ್ಲಿ ಕವಿಯ ಮನಸು ಪ್ರಕೃತಿಯ ಜೊತೆಗೆ ನಿಕಟವಾದ ಸಂಬಂಧವನ್ನು ಹೊಂದುವಂತೆ ಕಾಣುತ್ತದೆ ಅದಕ್ಕೆ ಮನುಜನ ನಡತೆ ಸರಿ ಕಾಣಿಸುತ್ತಿಲ್ಲ ನಿಯಮಕ್ಕೆ ಮಾತ್ರ ಪೂಜೆ ಪುನಸ್ಕಾರಗಳು ಉಳಿದಂತೆ ಸ್ವಾರ್ಥವನ್ನು ಬೆಳೆಸಿದ್ದಾನೆ ಅದಕ್ಕೆ ಇಂದಿನ ಸರಕುಗಳನ್ನು ಪೂಣಿಸುವ ರೀತಿ ಆ ಗಣೇಶನಿಗೂ ಬೇಸರ ತಂದಿದೆ ಎನ್ನಿಸಿತ್ತಿದೆ*

*ಹಾಸ್ಯವಾಗಿ ಹೇಳುತ್ತಿದ್ದಾರೆಯೇ ಅಥವಾ ಸಂಕಟದಿಂದ ಮಾತನಾಡುತ್ತಿದ್ದಾರೆಯೇ ಗೊತ್ತಾಗುತ್ತಿಲ್ಲ ಒಟ್ಟಿನಲ್ಲಿ ಸಿಟ್ಟು ಮಾತ್ರ ಇದ್ದೆ ಇದೆ ಕಾರಣ ಆಕಾರವನ್ನು ಗೇಲಿ ಮಾಡುವ ಮನುಜರೆ ಇವತ್ತು ಪೂಜಿಸುತ್ತಿದ್ದಾರೆ ಅದಕ್ಕೆ ತಕ್ಕ ಶಿಕ್ಷೆಯಾಗಬೇಕು ಎನ್ನುವುದು ಕವಿಯ ವಾದ*

*ತನು ಮನದ ಪ್ರೀತಿ ಆದೇವನಲ್ಲಿ ಮೊರೆ ಇಟ್ಟರೆ ಭಕ್ತಿ ಭಾವವನ್ನು ಆತ್ಮಕ್ಕೆ ಸಂದಿಸಲಿ ಅದು ತೀರಿಕೆಯಾಗದಿರಲಿ ವಿಜೃಂಭಣೆಯಿಂದ ನಡೆಯದಿರಲಿ ಎನ್ನುವ ಕವಿ ಭಾವನೆಯನ್ನು ವ್ಯೆಕ್ತಪಡಿಸಿದ್ದಾರೆ*

*ಧನ್ಯವಾದಗಳು*

*ನೂರಅಹ್ಮದ ನಾಗನೂರ*
[9/3/2019, 10:48 AM] Wr Siraj Ahmed Soraba: ✒✒✒✒✒✒✒✒
 "ಪ್ರೇಮ್ ಅವರ ಗಝಲ್"
✒✒✒✒✒✒✒✒

ಮತ್ಲಾ
ಜೀವನವೆಂಬುದು ನೋವಿನ
ಗೆರೆಗಳ ಚೌಕಳಿಯು
ಚಿಂತಿಸದಿರು ಮನವೇ//
ಬದುಕದು ನೂಲಿನ ಮೇಲಿನ
ನಡಿಗೆಯ ಚಿಂತಿಸದಿರು ಮನವೇ//

ಸಹೋದರಿ ಪ್ರೇಂ ಅವರು ತಮ್ಮ
ಮೊದಲ ಶೇರ್ ನಲ್ಲಿ ಬದುಕಿನ
ಅಥ೯ವನ್ನು ಅಥ೯ವಾಗುವ
ರೀತಿಯಲ್ಲಿ ತೆರೆದಿಟ್ಟಿದ್ದಾರೆ.
ಜೀವನವನ್ನು ನೋವಿನ ಗೆರೆಗಳ
ಚೌಕಳಿಗೆ ಹೋಲಿಸಿದ್ದು ಗಜಲ್
ಉತ್ತಮವಾಗಿ ಮೂಡಲು
ಸಹಾಯವಾಗಿದೆ
ನೋವು ಸಂಕಷ್ಟಗಳ ಚೌಕಳಿಯನ್ನು ಯುಕ್ತಿಯಿಂದ
ಪಾರು ಮಾಡಿದಾಗಲೆ ಬದುಕು
ಮತ್ತು ಬದುಕಿನ ಉದ್ದೇಶ
ಸಾಥ೯ಕವಾಗುವುದೆಂಬ ಸಂದೇಶವಿದೆ
ಹಾಗೆಯೇ ಮುಂದುವರೆದು
ಬದುಕೆಂಬುದು ನೂಲಿನ ಮೇಲಿನ ನಡಿಗೆಯಿಂದ ತಿಳಿಸಿದ್ದಾರೆ ಬಹಳ ವಿಚಾರಪೂರ್ಣ ಸಂದೇಶ
ಹೌದು ಬದುಕು ಬಹಳ
ನಾಜೂಕಾದ ಪಯಣ
ಒಬ್ಬ ಸೃಜನಶೀಲ ವ್ಯಕ್ತಿಯು
ಬದುಕಿನ ಮಜಲುಗಳನ್ನು
ಬದುಕಿನ ಪ್ರತಿ ಹೆಜ್ಜೆಯನ್ನು
ಎಚ್ಚರಿಕೆಯಿಂದ ಇಡುತ್ತಾನೆ.
ಯೋಚನೆ ವಿವೇಚನೆ ಯುಕ್ತಿಯಿಂದ ಬದುಕಿನಲ್ಲಿ
ಶ್ರೇಯಸ್ಸು ಕಾಣುತ್ತಾನೆ.

ಹೀಗೆ ಇವರ ಶೇರ್ ಗಳನ್ನು
ಓದುತ್ತಿದ್ದರೆ ಸಾಥ೯ಕ ಬದುಕಿಗೆ
ಬೇಕಾದ ಹಲವು ಆಯಾಮಗಳನ್ನು ಗೋಚರವಾಗುತ್ತವೆ.
ಬದುಕದು ಬದಲಾಗಿ ಬದುಕಿದು
ಎಂದು ಬರೆದುಕೊಳ್ಳಿ ಇನ್ನೂ
ಸಮಂಜಸವಾಗುತ್ತದೆ.

ಹಾಗೆಯೇ ಐದನೆ ಶೇರ್ ‌ನ ಮೊದಲ ಚರಣ
ಬೇಸರವ ನೀಗಿಸುತ ಶಾಂತಿಯಿಂದಿರಿಸು ಮನವನೆಂದೂ

ಇದು ಪೂಣ೯ತೆ ಪಡೆದಂತೆ
ಕಾಣುವುದಿಲ್ಲ ಏಕೆಂದರೆ ಒಂದು
ಉತ್ತಮ ಗಝಲ್ ನೀಡಿದ್ದೀರಿ
ಆಗ ಒಂದೊಂದು ಅಂಶವನ್ನು
ಗಮನಿಸಬೇಕಾಗುತ್ತದೆ.

ಅದು ಹೀಗೆ ಬರೆಯಬಹುದು
ಬೇಸರವ ನೀಗಿಸುತ ಮನದಲಿ
ಎಂದಿಗೂ ಶಾಂತಿಯನ್ನಿರಿಸು.

ಉಳಿದ ವಿಷಯಗಳು ಮನೋಜ್ಞವಾಗಿ ಬರೆದಿದ್ದೀರಿ
ಹಾಗೆಯೇ ಮಕ್ತಾ ಅಥವಾ
ಮುಕ್ತಾಯ ಅಥ೯ಪೂಣ೯ವಾಗಿ ಬಂದಿದೆ

ಬರುವುದೆಲ್ಲವೂ ಬರಲಿ ಸದಾ
ದೇವನಿರುವನು ಜಗದಲಿ/
ಹೃದಯ ಪ್ರೇಮದಿಂದಲಿ ಹಿತ
ನೀಡಲಿ ದೈವಶಕ್ತಿಯು ಚಿಂತಿಸದಿರು ಮನವೇ//

ಹೀಗೆ ಒಂದು ಉತ್ತಮವಾದ
ಗಝಲ್ ಓದುಗರಿಗೆ ಕೊಟ್ಟ
ತಮಗೆ ಅನಂತಾನಂತ ವಂದನೆಗಳು ಅಭಿನಂದನೆಗಳು
ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಶುಭವಾಗಲಿ

"ಯು ಸಿರಾಜ್ ಅಹಮದ್ ಸೊರಬ"
✒✒✒✒✒✒✒✒✒✒✒✒✒✒✒✒
[9/5/2019, 2:37 PM] Wr Latha Acharya Banari: *ಕರುಣೆ*

ಕರುಣೆಯೆಂದರೆ ಏನೆಂದು ತಿಳಿದುಕೊಂಡ ಹುಡುಗನಿಗೆ ನಾಯಿಯನ್ನು ಹೊಡೆದಾಗ ತಂದೆಯ ಮೇಲೆ ಕೋಪ ಬಂದದ್ದು ಸಹಜ.  ಉತ್ತಮ ನ್ಯಾನೋ
[9/7/2019, 9:00 AM] Wr Siddesh: *ಪ್ರೇಮ್ ಮೆಡಮ್ ಅವರ ಲೇಖನ*

ಮಾನವ ಹುಟ್ಟಿನಿಂದಲೇ ಆಸೆಬುರುಕ ಹೊಟ್ಟೆಯೊಳಗೆ ಇರುವಾಗಲೆ ಹುಳಿ ತಿನ್ನುವ ಆಸೆ ....ಅದು ಭೂಮಿಗೆ ಬಂದು ಅವನು ಬೆಳಿತಾ ಬೆಳಿತಾ ಅವನ ಆಸೆಗಳ ಲಿಸ್ಟ ಕೂಡಾ ಬೆಳಿತಾ ಹೋಗುತ್ತೆ .‌ ‌.. ಅದು ಹೇಗೆ ಆಗಿದೆ ಆಸೆ ಪಡಲಿಲ್ಲ ಅಂದರೆ ಬದುಕು ಯಾಂತ್ರಿಕವಾಗಿ ಬಿಡುತ್ತದೆ ....ಆಸೆಪಟ್ಟಾಗ ಅದನ್ನ ಪಡೆಯುವ ಪ್ರಯತ್ನ ದಲ್ಲಿ ಒಂದಷ್ಟು ಕೆಲಸ ಮಾಡಿ ಬದುಕು ಚಲನಶೀಲವಾಗಿರುತ್ತದೆ ...

ಆಸೆಗಳು ಕನಸುಗಳು ....ಬದುಕಿನ ಭಾಗಗಳೇ ಅಗಿಬಿಟ್ಟಿದೆ ...

ಕೆಲವರು ಹೇಳುತ್ತಾರೆ ಆಸೆಯೆ ದುಃಖದ ಮೂಲ ಹೌದು ಅದರು ...ಕೂಡಾ ಮಿತವಾದ ಆಸೆಗಳು ಬದುಕಿನಲ್ಲಿ ಇರಲು ಬದುಕು ಸಂತಸವಾಗುವುದರಲ್ಲಿ ಅಚ್ಚರಿ ಇಲ್ಲ

ಚೆಂದ 
ಬೋದನೆಗಳು ಇರೊದು ... ಅನುಸರಿಸಲು ಅವೇ ಬದುಕು ಅಗಬಾರದು ಅಲ್ವಾ ಆಸೆಯೇ ದುಃಖದ ಮೂಲ ಅಂತಾ ಆಸೆ ಪಡೊದೆ ಬಿಡೊಕೆ ಅಗುತ್ತಾ ...

ಪ್ರೀತಿ ನೋವಿನ ಮೂಲ ಹೌದು ಅದರು ಪ್ರೀತಿ ನಿತ್ಯ ನೂತನ ಪ್ರತಿ ನಿತ್ಯ ಕಾಯಿಸಿ ನೋಯಿಸಿ ಗೆಲ್ಲುವುದು ಇದೇ *ಪ್ರೀತಿ*

ಚೆಂದ ದ ಕನ್ಸೆಪ್ಟ ಒರಿಯೆಂಟಡ್ 
*ಮನಸೇ ರಿಲ್ಯಾಕ್ಸ ಪ್ಲೀಸ್*

ಪ್ರೇಮ ಮೆಡಮ್ 

ಧನ್ಯವಾದಗಳು 

*ಸಿದ್ದು*
[9/7/2019, 5:59 PM] Wr Tr Parameshwari Prasad: *ಪ್ರೆಮ್ ಅವರ ಒಂದಿಷ್ಟು ರಿಲಾಕ್ಸ ತಗೊಳಿ ಎಂಬ ಲೇಖನ ಆಸೆಯನ್ನ ವಿಭಿನ್ನ ಸನ್ನಿವೇಶಗಳಲ್ಲಿ ಜನ ಬಳಸಿಕೊಂಡಿರುವುದನ್ನು ತಿಳಿಸಿದ್ದೀರಿ. ಆಸೆ ಎಲ್ಲಾ ಮಾನವನಲ್ಲಿ ಒಂದಲ್ಲಾ ಹಲವು ಇರುತ್ತದೆ.ಆದರೆ ಅದು ದುರಾಸೆಯಾಗದ ಹಾಗೆ ಬುದ್ಧಿಜೀವಿ ಮಾನವ ನಿಯಂತ್ರಣದಲ್ಲಿಡಬೇಕಾದುದು ಆತನ ಕರ್ತವ್ಯ ಕೂಡ ಹೌದು* *ಈ ವಿಚಾರದಲ್ಲಿ ತಮ್ಮ ಲೇಖನ ವಿಭಿನ್ನ ಜನರ ವಿಧ ವಿಧ ಆಸೆಗಳನ್ನು ಉದಾಹರಣೆ ಸಹಿತ ಉಲ್ಲೇಖಿಸಿದ್ದೀರಿ. ಕೊನೆಗೆ ಆಸೆ ಏನಿದ್ದರೂ ಮಿತವಾಗಿ ನೀನು ಬೆಳೆ ಇತರರ ಬೆಳೆಸು ಎಂಬ ಮಾತಿನ ಅರ್ಥದೊಂದಿಗೆ ಕೊನೆಯಾಗಿದೆ*👌🏻👌🏻.🙏🏻🙏🏻
[9/15/2019, 7:04 AM] Wr Uday Bhaskar Sullia: *ಪ್ರೇಮಾ ಮೇಡಂ*

ಯಾವುದೋ ಸಂದರ್ಭದಲ್ಲಿ ಯಾವುದೋ ಘಟನೆಯಲ್ಲಿ ತಮ್ಮ ಹೆಣ್ಣು ಮನಸ್ಸಿಗೆ ಆದ ನೋವು, ಹೆಣ್ತನಕ್ಕೆ ಆದ ಅವಮಾನ, ಪವಿತ್ರವಾದ ಸೋದರ ಪ್ರೀತಿಗೆ ಯಾರೋ ಕೆಟ್ಟ ಹಣೆಪಟ್ಟಿ ಕಟ್ಟಿ ನಿಂದಿಸಿದ್ದು, ಇವೆಲ್ಲವುಗಳ ಪರಿಣಾಮ ನಿಮ್ಮ ಹೆಣ್ಣು ಹೃದಯಕ್ಕೆ ಆದಂತಹ ಅತೀವ ಆಘಾತದ ಕಾರಣದಿಂದ ಉಂಟಾದ ಆಕ್ರೋಶ ನಿಮ್ಮ ಬರಹಗಳಲ್ಲಿ ವ್ಯಕ್ತ ಆಗುತ್ತಿರುವುದನ್ನು ಗಮನಿಸಿದೆ ಮೇಡಂ. ನಿಜಕ್ಕೂ ಈ ಸಮಾಜದಲ್ಲಿ ಸಭ್ಯ ಸಂಬಂಧಕ್ಕೂ ಕೆಟ್ಟ ಹಣೆಪಟ್ಟಿ ಕಟ್ಟಿ ಕಳಂಕಿತರ ದೃಷ್ಟಿಯಿಂದ ನೋಡುವ ಜಾಯಾಮಾನ ಇಂದು ನಿನ್ನೆಯದಲ್ಲ ಬಿಡಿ. ಆದರೆ ನಿಮ್ಮ ಸಂಬಂಧ ಪವಿತ್ರವಾದದ್ದೇ ಆಗಿರುವಾಗ ಇಂತಹ ಟೀಕೆಗಳಿಗೆಲ್ಲಾ  ತಲೆಕೆಡಿಸಿಕೊಳ್ಳದೆ ಧೈರ್ಯದಿಂದ ಮುನ್ನುಗ್ಗಬೇಕು ಮೇಡಂ. ಯಾಕೆಂದರೆ ಕಾಲ ಒಂದಲ್ಲ ಒಂದು ದಿನ ಅವರ ವಿಕೃತ ಮನಸ್ಥಿತಿಗೆ ತಕ್ಕ ಉತ್ತರ ಕೊಟ್ಟೇ ಕೊಡುತ್ತದೆ. ಕಾಲಚಕ್ರದ ಸುಳಿಯಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. 'ಮಾಡಿದ್ದುಣ್ಣೋ ಮಹರಾಯ' ಅನ್ನುವ ಸೂತ್ರದ ಆಧಾರದಲ್ಲೇ ಈ ಪ್ರಪಂಚ ಮುಂದುವರಿಯುತ್ತಿದೆ. ಆದ ಕಾರಣ ನಾವು ಏನನ್ನು ಸಮಾಜಕ್ಕೆ ಕೊಡುತ್ತೇವೋ ಅದೇ ನಮಗೆ ಹತ್ತುಪಟ್ಟಾಗಿ ಹಿಂದಿರುಗಿ‌ ನಮ್ಮನ್ನೇ ಸೇರುತ್ತದೆ ಅನ್ನೋದು ನಮ್ಮ ದಾರ್ಶನಿಕರ ಮಾತು. *ಬೀದಿನಾಯಿಯೊಂದಕ್ಕೆ ರೊಟ್ಟಿಯನ್ನು ಎಸೆದವನು ಮತ್ತು ಕಲ್ಲನ್ನು ಎಸೆದವನು ಒಂದೇ ತರಹದ ಪ್ರತಿಕ್ರಿಯೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲವಲ್ಲಾ..?!*  ಅದೇ ರೀತಿ ನಾವು ಸಮಾಜಕ್ಕೆ ಯಾವುದನ್ನು ಕೊಡುತ್ತೇವೋ ಅದೇ ರೀತಿಯ ಪ್ರತಿಕ್ರಿಯೆಯನ್ನೇ ನಾವು ನಿರೀಕ್ಷೆ ಮಾಡಬೇಕಾಗುತ್ತದೆ. ಇದು ಸೃಷ್ಟಿಯ ಸೂತ್ರ. ಧಾರ್ಮಿಕ ನಂಬಿಕೆಯಂತೆ ಪರಿಗಣಿಸಲ್ಪಡುವ ಪಾಪಪುಣ್ಯಗಳ ಲೆಕ್ಕಾಚಾರವೂ ಇದೇ ಆಧಾರದಲ್ಲಿ ನಡೆಯುಂತದ್ದು. ಹಾಗಾಗಿ ನಿಮ್ಮ ಮನಸ್ಸಿಗೆ ನೋವು ಕೊಟ್ಟಾತ ಅದರ ಹತ್ತು‌ ಪಟ್ಟನ್ನು ಆತನೇ ಅನುಭವಿಸುವ ಕಾಲ ಕೂಡಿ ಬರುತ್ತದೆ. ‌

ಇನ್ನು ನಿಮ್ಮ ಬರಹದ ಇನ್ನೊಂದು ಮಗ್ಗುಲಿಗೆ ಹೊರಳಿ ವಿಮರ್ಶೆ ಮಾಡುವುದಿದ್ದರೆ, ನಿಮ್ಮ ಬರಹವನ್ನು ಓದುತ್ತಾ ಓದುತ್ತಾ ಒಂದು ಕ್ಷಣ 'ಛೇ.. ಪ್ರೇಮಾ ಮೇಡಂ ಅವರಿಂದಲೂ ಇಂತಹ ಬರಹವೇ..?' ಅನ್ನುತ್ತಾ ಹುಬ್ಬೇರಿಸುವಂತಾಯಿತು. ಯಾಕೆಂದರೆ ನೀವು ಟೀಕಿಸಲು ಬಳಸಿದ ಪದಗಳು ತುಂಬಾ ಕೀಳುಮಟ್ಟದ ಭಾಷಾಪ್ರಯೋಗ ಅನಿಸಿತು. ಅದು ತಮ್ಮಿಂದ ಬರಬಾರದಿತ್ತು ಅನಿಸಿತು. ಯಾಕೆಂದರೆ ತಾವು ಗೌರವಾನ್ವಿತ ವೃತ್ತಿಯಲ್ಲಿ ಇರುವವರು, ಸಾವಿರಾರು ವಿದ್ಯಾರ್ಥಿಗಳಿಗೆ ಸಂಸ್ಕಾರವನ್ನು ಬೋಧಿಸಬೇಕಾದವರು. ಹಾಗಾಗಿ ತಮ್ಮ ಆಕ್ರೋಶವನ್ನು ಹೊರಹಾಕಲು ಇಷ್ಟು ಕಳಪೆ ಪದಗಳನ್ನು ಸಾಮಾಜಿಕವಾಗಿ ಬಳಸಬಾರದಿತ್ತು. ಯಾಕೆಂದರೆ ನಾವು ಬಳಸುವ ಪದಪುಂಜಗಳು ನಮ್ಮ ಸಂಸ್ಕಾರವನ್ನು, ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ‌. ಟೀಕಿಸಬೇಕಾದ ಸಂದರ್ಭದಲ್ಲಿ,, ಆಕ್ರೋಶ ಹೊರಹಾಕಬೇಕಾದ ಸಂದರ್ಭದಲ್ಲಿ  ಅತ್ಯಂತ ಗೌವವಯುತವಾದ ಪದಗಳನ್ನು ಬಳಸಿಯೇ ಎದುರಾಳಿಗೆ ತಕ್ಕ ಉತ್ತರ ಕೊಡಬಹುದು. ವೈಚಾರಿಕವಾಗಿಯೇ ಆತನನ್ನು ಮಣಿಸಬೇಕು‌. *ಬೈಗುಳವೂ ಒಂದು ಕಲೆ, ಆರೋಗ್ಯಕರ ರೀತಿಯಲ್ಲಿ ಬೈಯುವುದೂ ಒಂದು ರೀತಿಯ ಸಂಸ್ಕಾರ..!!* ನಿಮ್ಮ ನೋವು ಅವಮಾನದ ಆಳ ಬಹಳಷ್ಟಿರಬಹುದು ಕೇವಲ ನಿಮ್ಮ ಬರಹದ ವಿಮರ್ಶೆಯನ್ನಷ್ಟೇ ಮಾಡುವ ನನಗೆ ಆ ನೋವಿನ ಆಳದ ಅರಿವಿರಲಾರದು. ಆದರೆ ಆ ನಿಮ್ಮ ನೋವಿಗೆ, ಅವಮಾನಕ್ಕೆ ಪ್ರತಿಕ್ರಿಯೆ ಕೊಡುವ ಸಂದರ್ಭದಲ್ಲೂ ನೀವು ನಿಮ್ಮ ವ್ಯಕ್ತಿ ಘನತೆ ಮತ್ತು ವೃತ್ತಿ ಘನತೆಯನ್ನು ಕಾಪಾಡಬೇಕಾದದ್ದು ಅಷ್ಟೇ ಮುಖ್ಯ. ಯಾಕೆಂದರೆ ನಮ್ಮ ಎದುರಾಳಿಯಷ್ಟೇ ಕೀಳುಮಟ್ಟಕ್ಕೆ ನಾವು ಕೂಡ ಇಳಿಯುವುದಾದರೆ ನಮಗೂ ಅವರಿಗೂ ವ್ಯತ್ಯಾಸ ಏನಿದೆ ಅಲ್ಲವೇ..? 

ಹಿಂದೊಮ್ಮೆ ವೃತ್ತಿಯ ಕುರಿತಾಗಿ ಮಂಡಿಸಿದ ವೈಚಾರಿಕ ಚಿಂತನೆಯೂ ನಿಮ್ಮ ವೃತ್ತಿಯ ಘನತೆಗೆ ಧಕ್ಕೆ ತಂದಿರುವಾಗ, ಇಂತಹ ಬರಹಗಳು ನಿಮ್ಮ ವೃತ್ತಿಯ ಘನತೆಗೆ ಧಕ್ಕೆ ತರಲಾರದೇ ಮೇಡಂ.?!

ಇರಲಿ ಮೇಡಂ, ನಿಮಗೆ ನೋವು ಕೊಟ್ಟಾತನಿಗೆ ಕಾಲವೇ ತಕ್ಕದಾದ ಉತ್ತರ ಕೊಡಲಿ ಅನ್ನುವ ಸದಾಶಯ ನನ್ನದು. ಹೆಣ್ಣಿನ ನಡತೆಗೆ, ಶೀಲಕ್ಕೆ ಮತ್ತು ಸಭ್ಯ ಸಂಸ್ಕಾರಕ್ಕೆ ಯಾರೇ ಅವಮಾನ ಮಾಡಿದರೂ ಅದನ್ನು ನಾವು ಸಮರ್ಥಿಸಿಕೊಳ್ಳಲು ಖಂಡಿತಾ ಸಾಧ್ಯವಿಲ್ಲ. ಖಂಡಿತಾ ನಿಮ್ಮ ಬಗ್ಗೆ ಕೀಳುಧೋರಣೆ ತಳೆದು ನಿಂದಿಸಿದ ಆತನದ್ದು ನಿಜಕ್ಕೂ ವಿಕೃತ ಮನಸ್ಸು. ಚಿಂತಿಸದಿರಿ, ಕಾಲದ ಉತ್ತರದ ನಿರೀಕ್ಷೆಯಲ್ಲಿ ಕಹಿ ಘಟನೆ ಮರೆತುಬಿಡಿ‌. 

*ಕವಿಭಾವಕ್ಕೆ ಧಕ್ಕೆ ಆಗಿದ್ದಲ್ಲಿ ಕ್ಷಮಿಸಿಬಿಡಿ..*

*- ಉದಯಭಾಸ್ಕರ್ ಸುಳ್ಯ*
[9/16/2019, 4:22 PM] Wr Vara Lakshmi Amma: ಪ್ರೇಮ ಅವರ ಬಿದ್ದೆ
 ಬಿಂದಿ.. ಬಿಂದಿಗೆ
 ಇರುವುದು  ಒಂದಕ್ಷರ ವ್ಯತ್ಯಾಸ ಆದರೆ ಪರಿಣಾಮ ಅಗಾಧ
 ಅಂದು ಬಿಂದಿಯ ಬಣ್ಣಕ್ಕೆ ಬೆರಗಾಗಿ,  ಇಂದು ಬಣ್ಣವಿಲ್ಲದ ನೀರಿನ ಬಿಂದಿಗೆ ಹೊರಬೇಕಾಯಿತು😄
[9/16/2019, 5:52 PM] Wr Uday Bhaskar Sullia: *ಪ್ರೇಮಾ ಮೇಡಂ*

'ಬಿಂದಿ' ಗೆ.. 'ಬಿಂದಿಗೆ' ದ್ವಂದ್ವಾರ್ಥ ಬಳಸಿಕೊಂಡ ಸೃಜನಶೀಲ ಹಾಸ್ಯ ಹನಿ ಚೆನ್ನಾಗಿದೆ😁👌🙏
[9/17/2019, 4:11 PM] Wr Madhu Karagi: ಜೀವನ

ಪ್ರೇಮ್ ಮೇಡಂ ಸೂಪರ್ ಹನಿ  
ಸುಗಮ ಬಾಳಿನ ಸೂತ್ರವನ್ನು ಚೆಂದ ಬರೆದಿದ್ದೀರಿ  ಹೌದು ಮತ್ತೆ ಬೇಲಿಯೇ ಎದ್ದು ಹೊಲ ಮೆಯ್ದರೆ ಹೇಗೆ ಯಾರಿಂದ ರಕ್ಷಣೆ ಯಾರಿಂದ ಪೋಷಣೆ ಆ ಬಾಳನ್ನು ದುರ್ಗಮಕ್ಕೆ ಹೋಲಿಸಿದ್ದು ಒಪ್ಪುವಂತಹುದೇ ಮೇಡಂ ಚೆಂದದ ಬರಹ 
ಶುಭವಾಗಲಿ 
ಮಧು ಕಾರಗಿ
[9/19/2019, 1:24 PM] Tr Ramesh: ಪ್ರೇಮ ಮೇಡಮ್ ಅವರ *ಬದಲಾವಣೆ* 👌

ಒಂಟಿಯಾಗಿದ್ದಾಗ ಕಾರುತ್ತಿದ್ದ ಬೆಂಕಿ, ಜಂಟಿಯಾದ ಮೇಲೆ ತಣ್ಣಗಾದ ಪರಿ ಸೊಗಸಾಗಿದೆ. ಉದಯವೆಂಬ ಉದಕದಿ ಪ್ರೇಮವರಳಿದ ಬಗೆ ಸೂಪರ್

🙏🙏🙏🙏
[9/19/2019, 2:32 PM] Wr Kshama Raghuram: *ಬದಲಾವಣೆ...*

ಪ್ರೇಮ್  ಮೇಡಂ  ನಮಸ್ಕಾರ ....
ಶಿರ್ಷಿಕೆ ಗೆ  ತಕ್ಕಂತೆ 
ಅರ್ಥಪೂರ್ಣ  ಹನಿ...

ಏನ್  ಮಾಡೋದು..  ಹೇಳಿ  ಮೇಡ಼ಂ....
ಮದುವೆ  ಆದ ಮೇಲೆ
ಬದಲಾವಣೆ  ಬದುಕಿನಲ್ಲಿ 
ಅನಿವಾರ್ಯ....
ಚೆಂದದ ಹನಿ...

ಧನ್ಯವಾದಗಳು   ಮೇಡಂ

ಕ್ಷಮಾ  ರಘುರಾಮ್
[9/27/2019, 11:31 AM] Wr Vara Lakshmi Amma: ಪ್ರೇಮ್  ಅವರ ಭಾವಗೀತೆ  *ಬಾಳನಾಕ*
   ನಿಜ ನಾಕ ನರಕ  ನಮ್ಮ ಭಾವಗಳಲ್ಲಿದೆ,  
 ನಮ್ಮ ನಡೆ ನುಡಿ ಪರರ ಮನವ ನೋಯದಂತೆ ನಡೆದುಕೊಂಡರೆ  ಅಲ್ಲಿ  ಸಿಗುವ ಸಮಾಧಾನ, ಸಂತೋಷದಲ್ಲಿದೆ ನಾಕ. 
ಪರಸ್ಪರ ಸೌಹಾರ್ದತೆಯಲ್ಲಿದೆ ನಾಕ
 ದೀಪದ ಬುಡದಲ್ಲಿದೆ ಕತ್ತಲು
 ಆದರೆ ತುದಿಯ ಬತ್ತಿ ಕೊಡುವುದು ಬೆಳಕು,  ಎರಡೂ ಒಂದರಲ್ಲಿ ಅಡಗಿದೆ. 
 ನಮಗಿರುವುದು ಒಂದೇ ಮನಸ್ಸು,  ಕೆಟ್ಟದ್ದು,  ಒಳ್ಳೆಯದು ಅಲ್ಲಿಯೇ ಉಧ್ಬವ, 
  ಅಂದಮೇಲೆ ನಮ್ಮಲ್ಲಿಯೆ ಇರುವ ನಿಯಂತ್ರಣ ಶಕ್ತಿ,  ಒಳ್ಳೆಯದಕ್ಕೆ ಉಪಯೋಗಿಸೋಣ. 
   ಪ್ರತಿ ಚರಣದಲ್ಲು ವಾಸ್ತವಿಕತೆ ಇದೆ. ಬಹಳ ದಿನಗಳ  ನಂತರ ನಿಮ್ಮ  ನೈಜ ಕವಿತ್ವ ಹೊರ ಬಂದಿದೆ  .🙏
[10/1/2019, 8:21 AM] Nybr Pramila: ಪ್ರೇಮ್ ಜೀ
ಒಳ್ಳೆತನ, ದಾನ ಧರ್ಮಗಳು ಈ ಕಾಲಕ್ಕೆ ಹೊಂದಿಕೆಯಾಗಲ್ಲ ಅಂತೀರಾ? 
ನಿಮ್ಮ ಕತೆ ಓದಿದಾಗ ನನಗನಿಸಿದ್ದು, ಸ್ವಲ್ಪ ಮಟ್ಟಿಗೆ ಹೌದು ಅಂತಾನೂ ಅನಿಸ್ತು. 
ವಾಸ್ತವ ಬೇಸರವೆನಿಸಿತು. ಉತ್ತಮ ನ್ಯಾನೋ, ಶುಭವಾಗಲಿ💐💐
[10/1/2019, 4:01 PM] Wr Nagamani Mysore: ಪ್ರೇಮ್ ಅವರ ಪಾವನ ಹೃದಯಸ್ಪರ್ಶಿ ಕಥೆಯಾಗಿದೆ. 
ಪರೋಪಕಾರಿ ಯಾಗಿ ಬದುಕಿದವನ ಅಂತ್ಯ ದುರ್ಭರ !
[10/2/2019, 11:57 AM] Wr Shiv Karnandi: ಪ್ರತಿಮೆ, ರೂಪಕಗಳನ್ನು ಬಳಸಿ ಕವಿತೆ ಕಟ್ಟುತ್ತಿದ್ದ ಚಂಪೂ ಅವರ ಬಹಳಷ್ಟು ಕವಿತೆಗಳನ್ನು ಅರ್ಥೈಸಿಕೊಳ್ಳಲು ಕಷ್ಟವಾಗಿ ಕನ್ನಡ ಡಿಕ್ಷನರಿ ನೋಡಿ ಅಥವಾ ಅವರನ್ನೇ ಆ ಪದಗಳ ಅರ್ಥ ತಿಳಿದುಕೊಂಡು ಅವರ ಕವಿತೆಗಳನ್ನು ಓದುತ್ತಿದ್ದೆ, ಅಷ್ಟೊಂದು ಕಠಿಣ ಪದಗಳ ಮೂಲಕ ಕವಿತೆ ರಚಿಸುತ್ತಾರೆ ಚಂಪೂ ರವರು. *ಶ್ರೀ ಚಂದ್ರಶೇಖರ ಯಲ್ಲಪ್ಪ ಪೂಜಾರ* ಅವರು *ಚಂಪೂ* ಎಂಬ ಕಾವ್ಯನಾಮ ದಿಂದ ಸ್ನೇಹಿತರ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ ಶ್ರೀಯುತರು.

ಕಳೆದ ವರ್ಷವಷ್ಟೆ ಇವರು *"ನಿಮ್ಮ ಪ್ರೀತಿಯ ಕೋತಿಮರಿ"* ವಿಮರ್ಶಾ  ಪುಸ್ತಕ ನಾಡಿಗೆ ನೀಡಿ ವಿಮರ್ಶಕರಾಗಿ ಬಡ್ತಿ ಪಡೆದುಕೊಂಡಿದ್ದರು. ಈಗ ನೋಡಿದರೆ ಗಜಲ್ ಸಂಕಲನದತ್ತ ತಮ್ಮ ನೋಟ ಹರಿಸಿದ್ದಾರೆ. ಕನ್ನಡದಲ್ಲಿ ಹಲವಾರು ಕವಿಗಳು ಗಜಲ್ ಕೃಷಿ ಮಾಡುತ್ತಿದ್ದಾರೆ ಅಂತವರ ಸಾಲಿನಲ್ಲಿ ಹೊಸ ಸೇರ್ಪಡೆ ಚಂಪೂ ಅವರದು. ಈ ಮೊದಲೇ ೪ ಪುಸ್ತಕಗಳನ್ನು ಹೊರತಂದಿರುವ ಇವರು ತಮ್ಮ ೫ ನೇ ಪುಸ್ತಕ *ಚೆಂಬೆಳಕ ದಾರಿಯಲ್ಲಿ*....ಎಂಬ ಗಜಲ್ ಸಂಕಲನ ದಿಂದ ಕನ್ನಡ ಸಾರಸ್ವತ ಲೋಕಕ್ಕೆ ಅತ್ಯದ್ಭುತ ಕೊಡುಗೆ ನೀಡಲು ಕಾತರರಾಗಿದ್ದಾರೆ.

ಚಂಪೂ ರವರ ಗಜಲ್ ಗಳು ಹೇಗಿವೆಯೆಂದರೆ ಎಂತವರಾದರೂ ಓದಿದರೆ ವಾವ್ ಎಂಬ ಉದ್ಘಾರ ಮಾಡುತ್ತಾರೆ , ಅಷ್ಟು ಅದ್ಬುತವಾಗಿ ಗಜಲ್ ಬರೆಯುತ್ತಾರೆ ಶ್ರೀಯುತರು. ಇವರ ರಚಿಸಿರುವ ಗಜಲ್ ಗಳು ನಿಯಮಗಳನ್ನು ಅಳವಡಿಸಿಕೊಂಡು ಓದುಗರ ಮನದೊಳಗೆ ನೇರವಾಗಿ ನಾಟುತ್ತವೆ ಇವರ ಗಜಲ್ ಗಳು...ಇವರ ಗಜಲ್ ಗಳನ್ನು ಓದುತ್ತಾ ಬಂದಿದ್ದರಿಂದ ಈ ಮಾತು ಹೇಳಬೇಕಾಯಿತು.

*ಚೆಂಬೆಳಕ ದಾರಿಯಲ್ಲಿ* ನೀವೊಮ್ಮೆ ನಡೆದು ನೋಡಿ ಅದರ ಸವಿ ಸವಿಯಬೇಕು..ಶ್ರೀಯುತ ಚಂಪೂ ಅವರ ಗಜಲ್ ಸಂಕಲನ ನಾಡಿನಾದ್ಯಂತ ಮನೆಮಾತಾಗಲಿ, ಹೆಸರು ಕೀರ್ತಿ ತರಲೆಂದು ಹಾರೈಸುವೆ. 

ನಾಳೆ ಅಂದರೆ ೦೩-೧೦-೨೦೧೯ ರಂದು ಬೈಲಹೊಂಗಲ ದಲ್ಲಿ ಚಂಪೂ ರವರ #ಚೆಂಬೆಳಕ_ದಾರಿಯಲ್ಲಿ ಎಂಬ ಗಜಲ್ ಸಂಕಲನ ಬಿಡುಗಡೆಗೊಳ್ಳಲಿದೆ.....ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ.....

ನೀವು ಬನ್ನಿ....

ಧನ್ಯವಾದಗಳು

*ಶಿವಕುಮಾರ ಕರನಂದಿ*
[10/10/2019, 2:33 PM] Wr Sham Prasad Bhat: *ನವರಾತ್ರಿ*

*ಪ್ರೇಮ್*

*ನವರಾತ್ರಿ ಎಂದಾಗ ನಮ್ಮ ದಿನಚರಿಯಲ್ಲಿ ಬದಲಾವಣೆಗಳಾಗುತ್ತವೆ.ಕೆಲವರು ಮುಂಜಾನೆ ಮಿಂದು ದೇವಾಲಯಕ್ಕೆ ತೆರಳಿ ದೇವಿ ದರ್ಶನ ಮಾಡುತ್ತಾರೆ.ಭಜನೆ,ಪೂಜೆಗಳಲ್ಲಿ ತಮ್ಮನ್ನು ತೊಡಗಿಸಿಕ್ಕೊಳ್ಳುತ್ತಾರೆ*

*ಇನ್ನು ಸಂಭ್ರಮ, ಸಡಗರದ ವಿಚಾರಕ್ಕೆ ಬಂದಾಗ ಪುರವನ್ನು ತಳಿರು ತೋರಣಾದಿಗಳಿಂದ ಶೃಂಗಾರ ಮಾಡಲಾಗುತ್ತದೆ.ವಿದ್ಯುತ್ ದೀಪಾಲಂಕಾರದಿಂದ ಕ್ಷೇತ್ರದ ಸೌಂದರ್ಯ ಇಮ್ಮಡಿಯಾಗುತ್ತದೆ*

*ಕಲೆಯ ವಿಚಾರಕ್ಕೆ ಬಂದಾಗ ನವರಾತ್ರಿಯಲ್ಲಿ ಭಕ್ತಿ ಸಂಗೀತ,ಪೌರಾಣಿಕ ನಾಟಕಗಳು,ಯಕ್ಷಗಾನ ಇತ್ಯಾದಿಗಳು ಹೆಚ್ಚಿನ ಮನೋರಂಜನೆ ನೀಡುತ್ತವೆ.ದೇವಿಯ ಗುಣಗಾನಕ್ಕೆ ಆದ್ಯತೆ ನೀಡಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.*

*ದಸರಾ ನಾಡಹಬ್ಬವಾದ್ದರಿಂದ ಶಾಲಾ ಕಾಲೇಜುಗಳಿಗೆ ರಜೆ ಇರುತ್ತದೆ.ಕುಟುಂಬದವರೆಲ್ಲಾ ಒಟ್ಟಾಗಿ ಧಾರ್ಮಿಕ ಕ್ಷೇತ್ರಗಳಿಗೆ ತೆರಳುತ್ತಾರೆ.ಸಡಗರ ಸಂಭ್ರಮದಲ್ಲಿ ರಜೆ ಮುಗಿದದ್ದೇ ತಿಳಿಯುವುದಿಲ್ಲ*

*ಲೋಕಕಲ್ಯಾಣಕ್ಕೆ ಪ್ರಾರ್ಥನೆ ಮಾಡುತ್ತಾ ಕವನಕ್ಕೆ ಮಂಗಳ ಹಾಡಲಾಗಿದೆ*

*ಸಾದ್ಯ ಆದಷ್ಟು ವಿಚಾರಗಳನ್ನು ಕವನದಲ್ಲಿ ತುಂಬಿರುವಿರಿ.ನವರಾತ್ರಿಯ ಸಮಗ್ರ ಮಾಹಿತಿಯನ್ನು ಒಳಗೊಂಡ ಕವನ ಭಕ್ತಿ, ಭಾವಸಹಿತ ಚೆನ್ನಾಗಿ ಮೂಡಿಬಂದಿದೆ.*

*ವಿಮರ್ಶೆಯಲ್ಲ.ಕವನ ಓದಿದಾಗ ಉಂಟಾದ ಅನಿಸಿಕೆಗಳನ್ನು ಇಲ್ಲಿ ಹೇಳುವ ಪ್ರಯತ್ನ ಅಷ್ಟೇ*

*ಧನ್ಯವಾದಗಳು*

*ಶ್ಯಾಮ್ ಪ್ರಸಾದ್ ಭಟ್*
[10/10/2019, 2:49 PM] Wr Suma Ulihalli: *ನವರಾತ್ರಿ*
 
ಪ್ರೇಮ್ ರವರ ಕವನದಲ್ಲೂ ನಾಡಿನ ಹಬ್ಬ ದಸರಾದ ಸಂಭ್ರಮವು  ಕಂಡು ಬರುತ್ತದೆ. ಜನಸಾಮಾನ್ಯರೆಲ್ಲರು  ಆಚರಿಸುವ ಹಬ್ಬ ಇದಾಗಿದ್ದು ,ಜಂಜಾಟದ ಬದುಕಿನ ಕೆಲವೊಂದಿಷ್ಟು ಇತಿ ಶ್ರೀ ಹಾಡಿ ರಜೆಯಲ್ಲಿ ಮೊಜಿನಿಂದ ಸಂಭ್ರಮಿಸುವುದು. 
       ಹಳ್ಳಿಗಳಲ್ಲಿ ದೇವಿಯ ಆರಾಧನೆ ಮತ್ತು ಪುರಾಣ ಪುಣ್ಯ ಕಥೆಗಳ ಮೂಲಕ ಜನರಿಗೆ ಒಂಬತ್ತು ದಿನಗಳಲ್ಲೂ ಕೀರ್ತನೆ ಮಾಡುತ್ತಾರೆ ,ಆ ಸಂದರ್ಭದಲ್ಲಿ ಜನರೆಲ್ಲ ದೇವಸ್ಥಾನಗಳಿಗೆ ತೆರಳುವುದು ಸಂಗೀತ ನೃತ್ಯ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂತಸ ಪಡುವ ರೀತಿಯನ್ನು ಬಿತ್ತರಿಸುವ ನಿಮ್ಮ ಕವನ👌🏻👌🏻👌🏻
ಧನ್ಯವಾದಗಳು ಸರ್🙏🙏

*ಸುಮಾ.ಹುಲಿಹಳ್ಳಿ*

ವಿಮರ್ಷೆಗಳು-3

[10/12/2019, 12:45 PM] Wr Manjula B K: ಪ್ರೇಮ್ ಅವರನ್ನು ಗರಿಗೆದರಲಿ 

ಜೀವನದಲ್ಲಿ ಬಯಕೆ ಮತ್ತು ಗುರಿಗಳು ಮುಖ್ಯವಾದ ಸಂಗತಿ. ಅದಕ್ಕೆ ತನ್ನದೇ ಆದ ಒಂದು ವಸ್ತು ಸ್ಥಿತಿ ಇರಬೇಕು. 

ಆ ಗುರಿಗಳು ಮತ್ತು ಬಯಕೆಗಳು ಮತ್ತೆ ಗರಿಗೆದರಲಿ ಬದುಕಲ್ಲಿ ಎನ್ನುವ ಸಂದೇಶದ ಜೊತೆಗೆ ರೂಪಿತವಾದ ಕವಿತೆ ಸೊಗಸು. 

ಮಂಜುಳಾ
[10/15/2019, 4:55 PM] Wr Vara Lakshmi Amma: ಪ್ರೇಮ್  ಅವರ ಪಯಣ

 ಪ್ರಾಸಬಧ್ಧವಾದ  ಕವನ,  ನಾಲ್ಕು  ದಿನದ ಬಾಳು,  ಅಶಾಶ್ವತವಿದು,  ಇರುವಾಗ ಹಕ್ಕಿಯಂತೆ  ಹಾರಿ, ವಿಶಾಲ ಗಗನ,  ಅಂಕೆ ಶಂಕೆ ಇಲ್ಲ,   ಕಾಲನ ಕರೆ ಬಂದಾಗ  ಮುಗಿಯುವ ಪಯಣದಲ್ಲಿ ವಿರಸದಿ ಮನ ಮುದುಡಿದ,  ಸರಸ ಸಂತೋಷದಿಂದ ಬದುಕಬೇಕು ಎನ್ನುತ್ತಾರೆ ಕವಯತ್ರಿ.  ಸರಳ ಶಬ್ದಗಳಲ್ಲಿ ಜೀವನದ ಪಯಣವನ್ನು ವರ್ಣಿಸಿದ್ದಾರೆ🙏
[10/22/2019, 5:52 PM] Wr Dinesh Sir: ☘ *ನಮಸ್ಕಾರಗಳು*🙏

*ಕವಿ*   :- ಮಹೇಶ್ ಕುಮಾರ್ ಸರ್

*ಕವಿತೆ* :- ನೀನು ನೀನಾಗಿರು.

ಕವಿತೆ ರಚಿಸಲು ನೀಡಿದ ಪದ "ನಿರಾಳ" ನಿಮ್ಮ ಕವಿತೆಯಲ್ಲಿ ಬಳಕೆಯಾಗಿದೆ.

ಕವಿತೆಯ ಕುರಿತು,
 
           :- ತುಂಬಾ ಸೊಗಸಾದ ಕವಿತೆ. ತನ್ನೊಡಲ ತುಂಬ ಸದಾಶಯಗಳನ್ನೆ ಹೊತ್ತು ಹಣತೆ ಕತ್ತಲನ್ನು ತಳ್ಳಿ ಬೆಳಗುವಂತೆ  ಸನ್ಮಾರ್ಗದೆಡೆ ಸಾಗಲು ದಿಕ್ಕು ತೋರುತ್ತಿದೆ. ಪ್ರತೀ ಸಾಲುಗಳೂ ಅರ್ಥಪೂರ್ಣವಾಗಿದ್ದು " ಅಕ್ಷರವೆಂಬ ಆಯುಧವು, ಲೇಖನಿ ಎಂಬ ಖಡ್ಗವು ಇರುವಾಗ ನೆತ್ತರನ್ನೇಕೆ ಹರಿಸುವೆ." ಎಂಬುದು ತುಂಬ ಚೆಂದ. ಉತ್ತಮರ ಸಂಗದಿ ನೀನೂ ಉತ್ತಮನಾಗಿ ಸಾಗು ಎನ್ನುತ್ತ ಕವಿತೆ ಮಿಂಚಿದೆ..

🌿 *ಕವಿತೆ ಸೊಗಸಾಗಿದೆ*

🌿 *ಅರ್ಥಪೂರ್ಣವಾಗಿದೆ*

🌿 *ಅದ್ಭುತವಾಗಿದೆ*

ಸದಾ ಹೀಗೆಯೆ ಬರೆಯುತ್ತಿರಿ ನಿಮ್ಮ ಸಾಹಿತ್ಯ ಸೇವೆಗೆ, ನಾಡು ನುಡಿ ರಕ್ಷಣೆಯ ಕಾರ್ಯಕ್ಕೆ ಸದಾ ಯಶಸ್ಸು ಸಿಗಲಿ.ಕೀರ್ತಿ ನಿಮಗೊಲಿಯಲಿ.

*ಹೃತ್ಪೂರ್ವಕ ಧನ್ಯವಾದಗಳು* ಚೆಂದದ ಕವಿತೆಯೊಂದ ಓದಿಸಿದ್ದಕ್ಕೆ.

☘ *ಶುಭವಾಗಲಿ*☘
                      ದಿನಾ..


.
[10/23/2019, 10:07 AM] Wr Nagamma: ಪ್ರೇಮ್ ಜೀ..🙏🏼💐

ನಾನು..

ನನನನನ...ಪದ ಸರಮಾಲೆ..ಬದುಕ ಮಜಲಿನ...ಸಹಜ ನೋಟದ....

ಸರಳ ಸುಂದರ ಕವನಕ್ಕೆ..

ಧನ್ಯವಾದಗಳು.
ಎಸ್.ನಾಗಮ್ಮ🙏🏼🌹
[10/23/2019, 12:05 PM] Wr Vara Lakshmi Amma: ಪ್ರೇಮ್ ಅವರ  ನಾನು
 ನಮ್ಮಲ್ಲಿರುವ ಅನೇಕ ಗುಣಗಳು, ನಮಗಲ್ಲದೇ ಬೇರೆಯವರು ತಿಳಿಯಲು. 
 ಇಂಥ ಒಂದು ಆತ್ಮಾವಲೋಕನ ಕವನ ರಚಿಸಿದ್ದಾರೆ ಪ್ರೇಮ ಅವರು.
  ನಮ್ಮ ಬಾಳಿನ ನಾಳೆಗೆ ನಾವೇ ನಾವಿಕರು, ನಡೆಸುವ ಸ್ಥೈರ್ಯವಿರಬೇಕು.   ಪ್ರಾಸಬಧ್ಧವಾದ ಕವನ🙏
[11/4/2019, 10:19 AM] Wr Champu: ಪ್ರೇಮ ಅವರ ಗಜ಼ಲ್ 

ಸಾಮಾಜದ ಜನರ ಮುಖವಾಡ ಕಳಚಿಡುವ ಗಜ಼ಲ್..

ಬಹಳ ಅಮೋಘವಾಗಿ ಒಡಮೂಡಿದೆ...

ಇಲ್ಲಿ ಗಮಿಸಬಹುದು
ಸಾಕಿ ಇಲ್ಲಿ ದೋಸ್ತನಾಗುವ ಪರಿ 

ಇವತ್ತು ವಿಹದ ವೇದನೆಯ ವಿಷಯ ಇರುವುದು ತಾವೂ ಗಮನಿಸಿಲ್ಲಂತ ಅನಿಸುತ್ತೆ


ಚಂದದ ಗಜ಼ಲ್ ಓದಿಸಿದ ತಮಗೆ ಧನ್ಯವಾದಗಳು ಸರ್👏👏👏👏
[11/4/2019, 6:56 PM] Wr Champu: ಇಂತ ಗಜ಼ಲ್ ಇವತ್ತ ಬೇಕಿತ್ತರಿ..‌ಶರಣು ಶರಣಾರ್ಥಿ ಅಡ್ಡ ಬಿದ್ದೆ ಬುದ್ಧಿ...👏👏👏👏👏👏
[11/4/2019, 6:59 PM] Wr Shiv Karnandi: ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಒಂದು ಕವಿತೆಯ ಸಾಲು *ಮರೆಯೋ ಮಾತು ಮರೆತುಬಿಡು* ಈ ಗಜಲ್ ಓದಿದಾಗ ನೆನಪಾಯಿತು....ಭಾವತೀರ್ವತೆಯಿಂದ ಮೂಡಿಬಂದ ಗಜಲ್ ಅದ್ಬುತವಾಗಿದೆ👏🏻👏🏻👏🏻👏🏻👏🏻👏🏻👏🏻👏🏻👏🏻👏🏻
[11/5/2019, 5:05 PM] Wr Vani Bhandari: *ನಮಸ್ತೇ*
🙏🏻🙏🏻🙏🏻

*ಪ್ರೇಮ್ ಅವರ ಗಜಲ್*

*ಅರಿವಿನ ಹೃದಯವ ಅರಿಯದೆ ಇದ್ದಾಗ ಉಂಟಾಗುವ ಭಾವಗಳ ತಳಮಳದ ಚಿಂತನೆ*

          ಹೆಣ್ಣಿನ ನೋವಿನ ಆರ್ತನಾದವು ಮಡಗಟ್ಟಿ ನಿಂತಂತೆ ಇದೆ, ಬಹುಶಃ ಇ ಜಗದಲಿ ಕೆಲವೊಂದು ಹೇಳಲಾಗದ ನೋವುಗಳಿವೆ ಎಂದರೆ ಅದು ಹೆಣ್ಣಿನ ಒಳಮನದ ತಾಕಲಾಟವು ಕಾಣುವುದು.

ಇನ್ನುಳಿದಂತೆ,,,,

👉 *ಸುಂದರವಾದ ಗಜಲ್*
👉 *ಗಜಲ್ ನಿಯಮ ಪಾಲನೆ ಆಗಿದೆ*
👉 *ಭಾವನೆಗಳ ಏರಿಳಿತಗಳನ್ನು ಸಮಾನಾಗಿ ಮೂಡಿಸಿ*
👉 *ಶೇರ್ಗಳನ್ನು ಸಮಾಂತರವಾಗಿ‌ ಮೂಡಿಸಿದಾಗ ಗಜಲ್ ನೋಡಲು ಸುಂದರ*
👉 *ಸುಂದರವಾದ ಸೊಗಸಾದ ಗಜಲ್*

*ಹೀಗೆ ಸದಾ ಬರೆಯುತ್ತಾ ಇರಿ, ಯಶಸ್ಸು ನಿಮ್ಮದಾಗಲಿ*

*ಧನ್ಯವಾದಗಳೊಂದಿಗೆ*

                         *✍ವಾಣಿ ಭಂಡಾರಿ*
[11/6/2019, 8 AM] Wr Yathish Kamaje: *ಪ್ರೇಮ್ ರವರ ಗಜಲ್*

ಭಗ್ನ ಪ್ರೇಮಿಯ ಮನದಾಳದ ನೋವು
ಗಜಲ್ ನಿಯಮದಂತಿದೆ.

ಮಳೆಬಿಲ,ನದಿ ನೀರು, ಬೀಸುಗಾಳಿ ನಮ್ಮ ಪ್ರೀತಿಗೆ ಸಾಕ್ಷಿಯಲ್ಲವೇ?
ಮಳೆಗಾಲದಿ ಒಬ್ಬಳೇ ಕುಳಿತು ಬೇಸರಿಸದಿರಲಿ ಹೇಗೆ ಜಾನು?
👆ಇಲ್ಲಿ ಮಳೆಗಾಲದಲ್ಲಿ ಮಾತ್ರ ನೆನಪಾಗುವುದೇ..!?
ಎಲ್ಲಾ ದಿನದಲ್ಲೂ ಕಾಲದಲ್ಲೂ ಅವನದೇ ನೆನಪು ಅನ್ನುವಂತಿರಬೇಕು.
ಆ ಸೂರ್ಯ,ಬಾನು,ಚಂದ್ರ,ಮೋಡ,ನಕ್ಷತ್ರ,ಗಾಳಿ,ನೀರು ನಮ್ಮ ಪ್ರೀತಿಗೆ ಸಾಕ್ಷಿಯಲ್ಲವೇ.
ಎಂದು ಹೇಳಬಹುದಿತ್ತು ಎನಿಸಿತು.

'ಹರವ ಹರಿಸಲಿ' ಇದು ಅರ್ಥವಾಗಲಿಲ್ಲ.

ತಪ್ಪಿದ್ದರೆ ಮನ್ನಿಸಿ
[11/7/2019, 8:29 AM] Wr Champu: ಪ್ರೇಮ ಅವರ ಜಾನು ಆರಾಧ್ಯ ಗುರುಗಳ...ಸಖಿ..

ಒಂದೇ ದಾರಿಯಲ್ಲಿ ನಡೆಯುವ ಗಜ಼ಲ್'ಗಳು..

ಜಾನುವಿನ ನೋವು ಇಲ್ಲಿ ಸಖಿಯ ನೋವಾಗಿದೆ ದೂರವಾದ ಮನಸ್ಸನ್ನು ಇರ್ವ ಮನಸ್ಸುಗಳು..ಹಂಬಲಿಸುತ್ತಿವೆ

ಅಲ್ಲದೆ ಪ್ರತಿಮೆಗಳು ಸರಳ ಸುಂದರವಾಗಿ ಮೂಡಿಬಂದಿವೆ..ಇರ್ವರಿಗೂ ಬಳಗದ ಪರವಾಗಿ ಅಭಿನಂದನೆಗಳು..

👏👏👏👏👏
[11/12/2019, 3:22 PM] Wr Shakunthala Dalera: ೫. *ಪ್ರೇಮ್ ಸಹೋದರಿಗೆ ವಂದನೆಗಳು.*🙏
ತಮ್ಮ ಗಜಲ್ನಲ್ಲಿ ಪ್ರಾಣಿಗೂ ಮತ್ತು ಮನುಷ್ಯರಿಗಿರುವ ಅವಿನಾಭಾವದ  ಸಹಸಂಬಂಧ ಚೆನ್ನಾಗಿ ಮೂಡಿಬಂದಿದೆ. ಕವಿಭಾವ ಸೂಪರ್.ಕುಕೂರ್ ಶಬ್ದ ಮನಸೆಳೆಯಿತು. ಆತ್ಮೀಯ ಅನಂತ ವಂದನೆಗಳು.👏👏👏👏💐💐💐💐
[11/18/2019, 7:15 AM] Wr Chandayya: @ ಪ್ರೇಮ್ 
ಬದುಕು ಬೆಳಗುವ ಸ್ಪೂರ್ತಿಯಾದ ಪ್ರಿಯಕರನ ಸೇರುವ ಕ್ಷಣ ಚಂದ... 
ರೂಪಕಗಳ ಸೃಷ್ಟಿಯೇ  ಗಝಲ್ ನ ಮುಖ್ಯ ಅಂಶ ಎಂಬುದು ನನ್ನ ವಯಕ್ತಿಕ ಅನಿಸಿಕೆ...  ಎಲ್ಲರೂ ವಾವ್ ವಾವ್ ಎನ್ನುವಂತ ರೂಪಕಗಳ ಬಳಕೆಯತ್ತ ಕಣ್ಣಾಯಿಸಿರೆ  ಮಸ್ತ್ ಇರುತ್ತೆ...  


ಧನ್ಯವಾದಗಳು 

 *ಚಂದ್ರಯ್ಯ ಚಪ್ಪರದಳ್ಳಿಮಠ*
[11/26/2019, 11:04 AM] Wr Mangala Kambi: (6)ಪ್ರೇಮ್ ಅವರ ಗಜಲ್ ಕುರಿತು....

ಬೇರ್ಪಟ್ಟ ಸಂಗಾತಿಯನ್ನು ಗಗನ ಕುಸುಮವೆಂದು ಭಾವಿಸುವ ಹಾಗೂ ಸಮಾಧಾನ ಮಾಡಿಕೊಂಡು ಪ್ರೀತಿಗಾಗಿ ಪರಿತಪಿಸುವ ಪರಿ ಚೆನ್ನಾಗಿದೆ.
ಧನ್ಯವಾದಗಳು...

ಮಂಗಳಾ ಕೆಂಡದಮಠ
[11/27/2019, 5:21 PM] Wr Dinesh Sir: 🙏🙏

*ಪ್ರಕಾರ ಗಜ಼ಲ್* 
~~~~~~~~~~

ರಚನೆಕಾರರು :-  *ಪ್ರೇಮ್ ರವರು*

ಗಜ಼ಲ್ ನಿಯಮಾನುಸಾರ ಇದ್ದು  ಚೆಂದವಿದೆ.

🍀 ಸೊಗಸಾದ ಗಜ಼ಲ್. ಒಲವ ಸವಿ ಭಾವವಿದೆ. ಚೆಂದದ ಶೇರ್ ಗಳು ಗಜ಼ಲ್ ಗೆ ಸುಂದರ ಮೆರುಗನ್ನಿತ್ತಿವೆ.

"ಬಾನೆತ್ತರ ಹಾರಲು ಮನ ಗರಿಗೆದರುತ ತವಕಿಸುತಲಿದೆ ಅಂತರಂಗದ ದಿನನನ"👌


*ಉತ್ತಮ ಗಜ಼ಲ್ ಒಂದ ಓದಿಸಿದ ತಮಗೆ ಧನ್ಯವಾದಗಳು*🙏🙏

🍀
ಶುಭವಾಗಲಿ. ಸದಾ ಯಶಸ್ಸು ನಿಮಗೆ  ಸಿಗಲಿ💐💐👍👍

.
[12/4/2019, 11:03 AM] Wr Manjula B K: ಪ್ರೇಮ ಅವರ ಕಲಿಯಬೇಕಿದೆ 

ನಾವು ಕಲಿತಿರುವುದು ಬಹಳಷ್ಟು. ಕಲಿಯಬೇಕಾದದು ಸಾವಿರ ಪಟ್ಟು. 

ಎಲ್ಲ ಕಲಿತಿರುವೆ ಎನ್ನುವ ಮದಕಿಂತ ಏನು ಒಳ್ಳೆಯದನ್ನು ಕಲಿಯಬೇಕಿದೆ ಎನ್ನುವುದು ಮುಖ್ಯ ಎಂಬುವುದು ಉತ್ತಮ ಸಂದೇಶ. 

ಮಂಜುಳಾ. ಬಿ. ಕೆ
[12/4/2019, 5:53 PM] Wr Kumar Chalawadi: " ಪ್ರೇಮ್" ರವರ 'ಕಲಿಯಬೇಕಿದೆ' ಕವನ ಮನನೀಯವಾಗಿದೆ! ಎಲ್ಲ ಅನಿಷ್ಟ , ಅಪಸವ್ಯಗಳ ಆಗರವಾದ ಮನುಜನ, ಮನದ ಒಳಕೋಟಿಯನ್ನು ಚೆನ್ನಾಗಿ ಅಭಿವ್ಯಕ್ತಿಸಿರುವಿರಿ! " ಮತ್ತೆ ನಾನು ಕಲಿಯಬೇಕಿದೆ, ಹೄದಯಗಳ ಜೋಡಿಸುವದನು" ತುಂಬಾ ಕಳ- ಕಳಿಯ ಭಾವನೆ ತೋರಿಸಿರುವಿರಿ. ಈ ಭಾವನೆಯನ್ನು ಎಲ್ಲರೂ ಅನುಸರಿಸಬೇಕಿದೆ! ಸುಂದರ ರಚನೆ👌
[12/9/2019, 4:16 PM] +91 97408 87580: ಪ್ರೇಮ್ ಸರ್ 
ನಮಸ್ಥೆ

ಭ್ರಾಂತಿ ಎನ್ನುವ ಪರಧಿಯೊಳಗೆ ಎಳೆಯ 
ಮಕ್ಕಳನ್ನ ಅರ್ಥ ಮಾಡಿಕೊಳ್ಳದೇ
ಬರಿ ದಂಡನೆಯ ಕಡೆಗೆ
ಶಿಕ್ಷಣ ಕೊಡಬೇಡಿ ಎಂದು ಹೇಳುವ ಮೂಲಕ ಮಕ್ಕಳ ಬಗೆಗಿನ ಅವರ ಕಾಳಜಿ ಬಿಂಬಿತವಾಗುತ್ತದೆ.
ಮಕ್ಕಳೆಂದರೆ ತೋಟದಿ ಅರಳುವ ಬಣ್ಣ ಬಣ್ಣದ ಹೂಗಳು
ಹೊಸುಕದೆ ಹೊಸ ಬದುಕು ನೀಡಿ ಎನ್ನುವ ಆಶಯ ತಮ್ಮ ಕವಿತೆಯಲ್ಲಿ ಎದ್ದು ಕಾಣುತ್ತದೆ
ಸೊಗಸಾಗಿದೆ
🙏🙏🙏🙏🙏
[12/11/2019, 2:51 PM] Wr Sreemati Joshi: ಸೋಲದಿರು
ಸಾಲುತಿಲ್ಲ ನೀನು ನೀಡಿದ ಪ್ರೀತಿಯ ಸಾಲ
ಸಾಲದಾಗಿದೆಯೆನಗೆ ನಿನ್ನ ಹೃದಯದ ಜಾಗ
ಸಾಲು ಸಾಲು ಇರಲು ಬೇಕು ಗಮನದ ಕಾಲ
ಸಾಲಿನೊಳಗೆ ಹುದುಗಬೇಕು ನಿನ್ನಯ ಪಾಲು..
*ಪ್ರೀತಿಯನ್ನೇ ಸಾಲ ವಾಗಿಸಿ ಬಿಟ್ಟಿದ್ದೀರಿ ಹೃದಯದಲ್ಲಿ ಜಾಗವೂ ಜಾಗ*🤣🤣
ಸಾಲುಗಳಲಿ ಬರೆಯಲಾರೆ ಪ್ರೀತಿಯ ಪದರ
ಸಾಲಿನಲ್ಲಿ ನಿಲ್ಲಲಾರೆ, ನೀನಿರದಿರೆ ಬರ!
*ಅವಳ ಪ್ರೀತಿಯ ಪವರ್ ಅಂದ್ರೆ ಹಾಗೆ*
ಸೋತ ಮನಕೆ ಸಾಲು ಖುಷಿಯ ತಂದಿಹೆ ನೀನು
ಗೆದ್ದ ಹಿಗ್ಗು ದೈತ್ಯವಾಗೆ ತಣಿಸಿದೆ ನೀನು.
*ಸೋತ ಮನಕೆ ಖುಷಿಯ ತರುವುದೇ ಪ್ರೀತಿ ಅನುರಾಗ. ಆಗ ಗೆಲುವು ಖಚಿತ ಸೂಪರ್ ಸಾಲು*
6ನಾನೆ ನೀನು ನೀನೆ ನಾನು ಒಂದೆ ಸಾಲಲಿ
ನೀನು ಇರದೆ ಕ್ಷಣಕ್ಷಣವು ನೋವು ಬಾಳಲಿ..
*ಪ್ರೀತಿ ಬೆರೆತ ಬಾಳಿನಲ್ಲಿ  ದೇಹ 2 ಜೀವ ಒಂದು ಎನ್ನುಬಿಎಂಸಿಎ ಭಾವ ನೈಸ್*
ಸೋಲು ಗೆಲುವು ಎರಡು ಇಹುದು ಪ್ರತಿ ಹೆಜ್ಜೇಲಿ
ಸೋತ ಮನವು ಗೆಲ್ಲಬಹುದು ಮುಂದೆ ದಾರೀಲಿ..
*ಸಮರಸವೇ ಜೀವನದ ಭಾಗ* 
ಪ್ರೇಮವೆಂದರೇನು ಎಂದು ಅರಿತೆ ಬದುಕಲಿ
ನೀನು ಬಂದು ಮನದ ಕುಣಿತ ದಿನವು ನಲಿವಲಿ..
*ಪ್ರೇಮವು ಅವಳು ಬಂದ ಮೇಲೆ ಅರಿವಿಗೆ ಬಂತು ಅನ್ನುವ ಆಶಯ ಅವಳ ಮೇಲೆ ಇಟ್ಟ ನಂಬಿಕೆ*
ಸೋತು ಗೆಲುವ ಸಾಹಸವು ಇಹುದು ಜಗದಲಿ
ಸೋಲಲಾರೆನೆನುವ ಮಾತು ಬೇಕು ಜನರಲಿ..

ಸೋಲ ಸಾಲು ಬರಲು ಸನಿಹ ಕುಗ್ಗ ಬಾರದು
ಸೋಲು ಇಂದು ಕಡೆಯದಲ್ಲ, ಗೆಲುವಿಗೂ ಹಿಗ್ಗಬಾರದು..ಸುಖ *ಸುಖ ಸಮನಾಗಿ ಸ್ವೀಕರಿಸುವ ಆಶಯ*
ಸೋತು ಸೋಲು ಸೋಲ ಸಾಲು ಓಡಲಿ
ಗೆಲುವ ಸಾಲು ಸೋತ ಬಳಿಕ ಬಂದು ಸೇರಲಿ..

ಸೋಲಿಗಾಗಿ ಅಂಜಬೇಡ ಸೋಲು ಸೋಲಲಿ
ಗೆಲುವಿನಿಂದ ಬೀಗಬೇಡ ಮುಂದೆ ಬಾಳಲಿ..
*ಒಟ್ಟಾರೆ ಕವಿ ಭಾವ ಸೂಪರ್ಬ್. ಆದರೂ ಸ್ವಲ್ಪ ಗಡಿ ಬಿಡಿ ಯಲ್ಲಿ ಬರೆದ ಹಾಗಿದೆ. ನಿಮ್ಮ ಹಿಂದಿನ ಕವನಗಳಿಗೆ ಹೋಲಿಕೆ ಮಾಡಿದಾಗ*
@ಪ್ರೇಮ್@
11.12.2019
[12/31/2019, 7:21 PM] Wr Vani Bhandari: *ನಮಸ್ತೇ*
🙏🏻🙏🏻🙏🏻

         *ಪ್ರೇಮ ಅವರ ಭಾವಗೀತೆ*

        *ಮುರುಳಿಯ ಗಾನಕ್ಕೆ ಮನಸೋಲದವರುಂಟೆ* *ಮಾದವನ ಇಲವ ಗಾನಕ್ಕೆ ಮನಸೋತು ಕಾಯುವ ರಾಧೆಯ ಭಾವ*

             ಮಾದವನ ಕೊಳಲು ಗಾನದಿಂದ ಮನದ ತುಮುಲಗಳನ್ನು ಬೇರೆ ಮಾಡಿಕೊಳ್ಳಬೇಕಾದ ಕವಿಭಾವ ಚಿತ್ರಣ ಚೂಪರ್.

       ನಮ್ಮ ನಂಬಿಕೆಯೆಂಬ ಪ್ರೀತಿ ಅಚಲವಾಗಿರುವ ಮಾದವನೇಗೆ ಮೋಸ ಮಾಡಲು ಸಾಧ್ಯ.

ಅತಿಯಾದ ತುಡಿತ ಮಿಡಿತಗಳ ನಾದಲೋಲವು ಮೈಮನಗಳಲ್ಲಿ ತೇಲಿ,, ಮುಕುಂದನ ಗಾನದ ಗಾಳಿ ಸದಾ ಸುಳಿಯಲಿ ಎಂಬ ಮನದ ಭಾವ ಸೊಗಸಾಗಿದೆ.

ಜಗದಲಿ ಮನುಷ್ಯ ಪ್ರೀತಿಗಿಂತ ಅಲೌಕಿಕವಾದ ಪ್ರೇಮವೇ ಶಾಶ್ವತವಾದ ಪ್ರೇಮವಾಗಿದೆ .ಮಾನವ ಅಂತಹ ಪ್ರೀತಿಯ ಜೊತೆ ಸೇರಲು ಬಯಸಿದರೆ ಸದಾ ತನ್ಮಯ ಭಾವದೊಳಗೆ ಶಾಂತತೆಯಿಂದ ಸಂತೃಪ್ತರಾಗಬಹುದು.

*ಇನ್ನುಳಿದಂತೆ,,,,,*

👉ಚಂದದ ಭಾವದ ಹೂರಣ 

👉ಸರಳ ಪದಗಳ ನರ್ತನ.

👉ಗೇಯತೆಯೊಳಗೆ ಮೀಡಿದ ಭಾವತೀವ್ರತೆ.

👉ಕೊನೆಯ ಸಾಲು ಗಮನಿಸಿ *ಬರುವಿಗಾಗಿ* ಹೀಗೆ ಮಾಡಿ ಪಾ.
👉ಉಳಿದಂತೆ ಚಂದದ ಗೀತೆ, ಸರಳ ಸುಂದರ.


*ನಿತ್ಯ ಬರೆಯಿರಿ ಜಿ,,, ಸಾಹಿತ್ಯ ಯಾನಕ್ಕೆ ಶುಭವಾಗಲಿ ತಮಗೆ ಯಶಸ್ಸು ಸಿಗಲಿ*

*ಧನ್ಯವಾದಗಳೊಂದಿಗೆ*

                     *✍ವಾಣಿ ಭಂಡಾರಿ*
[1/2, 4:02 PM] Nybr Pramila: *ಇಂದು ನಾಳೆಗಳೊಡನೆ*

ಪ್ರೇಮ್ ಜಿ ಯವರ ಭಾವ ಗೀತೆ.... 

ಗೀತೆಯ ಆರಂಭವೆ ವಾವ್ ಎನ್ನುವ ಹಾಗಿದೆ. 

ನಾಳೆಗಳ ನಾಳೆಯಲಿ 
ಇಂದೇಕೆ ಬದುಕುವಿರಿ
ಇಂದಿನೈಸಿರಿ ಸೊಬಗ
ಇಂದೇ ಅನುಭವಿಸಿ....

ವಾವ್... ಎಂಥಹ  ಸೊಗಸಾದ ಸಾಲುಗಳು.

ನಾಳೆಗೆ  ನಾಳೆಗೆ  ಎಂದು ಎಲ್ಲವನ್ನು ಮಂಡೆ ಬಿಸಿ ಮಾಡಿಕೊಂಡು ದಿನ ಹಾಳು ಮಾಡಿ ಕೊಳ್ಳುವುದಕ್ಕಿಂತ 
ಇಂದು ಚಂದದಿಂದ ಬದುಕಿ ಬಿಡಬೇಕು.

ಇಂದು ಇಂದಿಗೆ ನಾಳೆ ನಾಳೆಗೆ 
ಇಂದು ನಮ್ಮದೇ ಚಿಂತೆ ಯಾತಕೆ..ಅಲ್ವ??? 

ತುಂಬಾ ಚಂದ ಬರೆದಿರುವಿರಿ ಜಿ 
ಶುಭವಾಗಲಿ, 

ನಿಮ್ಮ  ಸಾಹಿತ್ಯ ಯಾನ ಹೀಗೆ ಮುಂದುವರಿಯಲಿ🌹🌹🌹🌹
[1/8, 9:11 AM] Wr Siraj Ahmed Soraba: ಚಿತ್ರಕ್ಕೆ ಹೊಂದುವಂತೆ ಬರೆದಿರುವ ಸೊಗಸಾದ ಬರುಹ ತಮಗೆ ಅನಂತಾನಂತ ಅಭಿನಂದನೆಗಳು
[1/8, 9:26 AM] Wr Kumar Chalawadi: @ಪ್ರೇಮ್@ ರವರ ಹನಿ ಚೆನ್ನಾಗಿದೆ! ಸಮಯದ ಜೊತೆ ನಾವೆಲ್ಲ ನಾಗಾಲೋಟದಲ್ಲಿ ಓಡುತ್ತಲೇ ಇದ್ದೇವೆ! 
ತಾಳ್ಮೆ ಇಲ್ಲವೇ ಇಲ್ಲ! ಸರಿಯಾಗಿ ಸಾಗಿದರೆ ಬಾಳು ಸುಂದರ! ಸಂಯಮ ಮೀರಿದರೆ ಬದುಕೆಲ್ಲ ಬರೀ ಗೋಳು! ಚೆಂದದ ಹನಿ👌
[1/8, 10:18 AM] Wr Vinuta Kicchikeri: ಬೇಕು

ಓಡುತಿರುವ ಯುಗದಲಿ
ಸಮಯದೊಡನೆ ಓಡುವೆ
ಬೇಕಾಗಿದೆ ಸಂಯಮ ಸಹನೆ
ಎಲ್ಲಿಹುದು ಜನಕೆ ಕರುಣೆ?
@ಪ್ರೇಮ್@
08.01.2020


ಪ್ರೇಮ್ ಜೀ🙏

ನಿಜ ಜೀ ನಾವು ಎಲ್ಲರೂ ಓಡುತ್ತಿದ್ದಾರೆ ನಾವು ಓಡುತ್ತಿದ್ದೇವೆ.ಕೇಳಿದರೆ.
ಕುಳಿತು ಮಾತಾಡಲೂ ಸಮಯವಿಲ್ಲ ನಮ್ಮ ಕೈಯಲ್ಲಿ..
ಅದಕ್ಕಿಂತ ಹೆಚ್ಚಾಗಿ ತಾಳ್ಮೆಯಿಲ್ಲ ಮನದಲ್ಲಿ..ಯಾರೋ ಅಪಘಾತವಾಗಿ ಬಿದ್ದರೆ ಅವರನ್ನು ಉಪಚರಿಸುವದರ ಬದಲು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಆತುರ...
ಕರುಣೆಗೆ ಅರ್ಥವನ್ನೇ ಮರೆಯುತ್ತಿದ್ದೇವೆ...
ಅರ್ಥಪೂರ್ಣ ಹನಿ

ಧನ್ಯವಾದಗಳು💐
ವಿನುತಾ ಕಿಚ್ಚಿಕೇರಿ

ವಿಮರ್ಷೆಗಳು-2

[1/15, 11:56 AM] +91 70267 76576: ಪ್ರೇಮಾ ಜೀ ಅವರ
  ನಯನ
ಯತ್ರ ನಾರ್ಯಂತು ಪುಜ್ಯಂತೆ ರಮಂತೆ ತತ್ರ ತತ್ರ ದೇವತಾಃ ಎಂದು ಹೇಳುತ್ತೇವೆ ಆದರೆ ಬದುಕು ಬಲು ಬಿರುಸು ಹೆತ್ತ ಕರುಳೆ ಕಿತ್ತು ತಿನ್ನುವ ಹದ್ದಾಗುತ್ತದೆ.ಆಶ್ರಯದ ನೆಪದಲ್ಲೇ ಆಕ್ರಂದನ ಕೇಳುತ್ತದೆ.ಮುಗಿಯದ ಶೋಷಣೆಯಲ್ಲಿ ಅರಳುವ ಹೂ ಗಳೇಷ್ಟೋ, ಕಮರಿದ ಮೊಗ್ಗುಗಳೇಷ್ಟೋ. ಆ ನಯನಳ ಕಣ್ಣೀರಿಗೆ  ಕೊಣೆಯಲ್ಲಿ....
ಮಾರ್ಮಿಕ ಕಥೆ ಜೀ

ಕವಿ ಭಾವ ತಿಳಿಯುವಲ್ಲಿ ತಪ್ಪಾಗಿದ್ದರೆ ಒಂದು ಕ್ಷಮೆ ಇರಲಿ ಜೀ...

ಜಯಶ್ರೀ...
[1/16, 8:39 PM] Wr Sudha Telkar Mam: ಸೊಗಸಾದ ವಿಮರ್ಶೆಗೆ ಮನಃಪೂರ್ವಕ ಧನ್ಯವಾದಗಳು ಪ್ರೇಮ್. ‌ಬಹಳ ಜನ ರಿಟೈರ್ ಆದ ಮೇಲೂ ದುಡಿಯುವುದು ನಿಜ. ನಿನ್ನ ಅನಿಸಿಕೆಗೆ ನನ್ನ ಸಹಮತವಿದೆ. 
ಕೆಲವು ಸಲ ಮನೆಯಲ್ಲಿ ಪ್ರೋತ್ಸಾಹ ಇರದೆಯೋ , ಅನಾರೋಗ್ಯದಿಂದಲೋ ಎಲ್ಲರೂ ದುಡಿಯಲಾಗುವುದಿಲ್ಲ. ವಯಸ್ಸು ಹೆಚ್ಚಾಗಿದ್ದರೂ ಕೈಲಾಗುವುದಿಲ್ಲ. 
ಆದರೂ ತುಂಬಾ ಅವಸರದಲ್ಲಿ ಬರೆದೆ. ನನಗೇ ತೃಪ್ತಿಯೆನಿಸಲಿಲ್ಲ. 
ಇಂದಿನ ಅಡ್ಮಿನಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿರುವೆ. ಸಲಹೆ ,ಸೂಚನೆಗಳಿಗೆ ಸದಾ ಸ್ವಾಗತವಿದೆ ಪ್ರೇಮ್. ಅಭಿನಂದನೆಗಳು.🙏🙏💐💐😊
[1/18, 2:44 PM] Wr Veena Joshi Ankola: ಪ್ರೇಮ  ಅವರ  ಪ್ರಾಣ 

*   ಪ್ರಾಣ  ಅಮೂಲ್ಯ .
*  ಅದನ್ನು  ಚೆನ್ನಾಗಿ  ಪದಗಳ ಜೋಕಾಲಿಯಲಿ ಇಟ್ಟು  ಚೆನ್ನಾಗಿ 
ತೂಗಿದ್ದೀರಿ
*   ವಾಸ್ತವವಾಗಿ ಮನುಷ್ಯ ಪ್ರಾಣಿ
ಇತರ ಜೀವಿಗಳ  ಜೀವಕ್ಕೆ ಕವಡೆ
ಕಾಸಿನ ಕಿಮ್ಮತ್ತು ನೀಡಿದೆ ಮೆರೆಯುತ್ತಿದ್ದಾನೆ.

ಪ್ರಪಂಚ  ಸಮತೋಲನ  ಇಲ್ಲದಿರೆ ಉರುಳುವುದು ಸತ್ಯ

ಎಂಬುದನ್ನು  ಅರಿತರೆ ಒಳಿತು .

ಉತ್ತಮ  ಕಥೆ  ಓದಿಸಿದಿರಿ ಧನ್ಯವಾದಗಳು .
[1/20, 1:49 PM] +91 98866 11494: ನಮಸ್ತೆ ಪ್ರೇಮ ಮೇಡಂ🙏

ನಿಮ್ಮ ಕಾಮಿಡಿ ಕವನಗಳು ಸೂಪರ್ ಮೇಡಂ.....

ನಾಯಿಯ ಬಗ್ಗೆ ಅದ್ಭುತವಾಗಿ ಬರೆದಿದ್ದೀರಿ...... ನಾಯಿಯ ನಿಯತ್ತು, ಮನೆಯ ಕಾಯುವ ಪರಿ ಮತ್ತು ಅನುಮತಿ ಇಲ್ಲದೆ ಮನೆಗೆ ಬಂದರೆ ಅದು ಕೊಡುವ ಶಿಕ್ಷೆಯ ಬಗ್ಗೆ ಉತ್ತಮವಾಗಿ ಕವನದ ಮೂಲಕ ಬರೆದಿದ್ದೀರಿ ಮೇಡಂ.......ಶುಭವಾಗಲಿ.... ಧನ್ಯವಾದಗಳು ಮೇಡಂ.

ಕೆ ಎಸ್ ಗೀತಾವಿಜಯ ಕುಮಾರ್
[1/28, 6:51 AM] Wr Shivaprasad Aradhya: ಪ್ರೇಮರವರ ಕವನ ನೀತಿ ಭೋದಕವಾಗಿದ್ದು ವಿಜ್ಞಾನ ಎಷ್ಟೇ ಬೆಳೆದರೂ ಅಹಂಕಾರ ವೂ ಅಷ್ಟೇ ಬೆಳೆಯಿತು. ಪ್ರಕೃತಿಯ ಮುಂದೆ ಅವನಾಟವೇನೂ ನಡೆಯದು.ಎಂಬುದು ಈ ಕವನದಿ ವ್ಯಕ್ತವಾಗಿದೆ.
ಬೆಳ್ಳಂಬೆಳಗ್ಗಿನ ಕವನ  ಬೇಗನೆ ಬರೆದು ಹಾಕುವ ಉಸಾಬರಿಯಲ್ಲಿ ಬರೆದಂತೆ ಕಂಡರೂ ನೀತಿ ಭೋದಕವಾಗಿದೆ. ಪ್ರಾಸ ಬರಲ್ಲಿಲ್ಲವಾ ಚಿಂತಿಸಬೇಡಿ ಮುಕ್ತವಾಗಿ ಗಪದ್ಯ ಬರೆಯಿರಿ.ಪ್ರಾಸಮಯವಾಗಿ ಬರೆಯುವ ಯತ್ನ ನಡೆಯಿತು ತಮ್ಮದು ಇರಲಿ ಹೀಗೇ ಬರೆಯುತ್ತಿರಿ ಶುಭವಾಗಲಿ 


ಶಿವಪ್ರಸಾದ್ ಆರಾಧ್ಯ
[1/28, 10:00 AM] Wr Nagamma: ಪ್ರೇಮ್ ..ಜೀ ನಮಸ್ತೆ🙏🏼.

ನೀತಿ ಕಲಿ...

ವಾಸ್ತವದ..ಅತಿಯಾಸೆಗಾಗಿ ಆಡಂಬರದ... ಬದುಕಿಗಾಗಿ..ಮಾನವ ಮಾಡುವ, ಯೋಚಿಸುವ , ಯೋಜಿಸು..ವ..ಆಯಾಮಗಳನ್ನು ...ಬಹಳ ಪ್ರಬುದ್ಧ..ಪದಗಳಲ್ಲಿ...ಕವನದೊಳಗೆ ಹಿಡಿದಿಟ್ಟ..ಪರಿಯದು..ಸೊಗಸಾಗಿದೆ...

ಧನ್ಯವಾದಗಳು.

ಎಸ್.ನಾಗಮ್ಮ🌹
[1/29, 7:21 PM] Wr Shivaprasad Aradhya: ಧರೆಯ ಮೊರೆ ನನಗೂ ಕೇಳಿತು ಪ್ರೇಮ್ ಸದಾ ಸಮಾಜಮುಖಿಯಾಗೇ ಬಡಿದೆಬ್ಬುಸುವ ಅರಿವಿನ ಕವನಗಳ ಮಾತೆ ತಾವು ಚೆನ್ನಾಗಿ ಬರೆದಿದ್ದೀರಿ ಅಭಿನಂದನೆಗಳು

ಶಿವಪ್ರಸಾದ್ ಆರಾಧ್ಯ
[1/30, 2:29 PM] Wr Shakunthala Dalera: *ಪ್ರೇಮ್ ರವರ  " ಅಮವಾಸೆ ಬೇಡ" ಕವನದಲ್ಲಿ...*
  
ಅಮವಾಸೆ ಕಳೆದ ನಂತರವೇ ಹುಣ್ಣಿಮೆ... ಕಾಯಬೇಕು ಅಷ್ಟೇ. ವಿರಹ ವೇದನೆಯನ್ನು ಅಮವಾಸೆಗೆ ಹೋಲಿಸಿ ಅರ್ಪಿಸಿದ ಭಾವನಾತ್ಮಕ ಪರಿಗೆ ಶರಣು ಮೇಡಂ...ಒಳ್ಳೆಯ ಕವನ ಓದಿಸಿದ್ದಕ್ಕೆ ಧನ್ಯವಾದಗಳು 👌👌👌👌🙏🙏🙏🙏
[2/11, 7:31 AM] Wr Shivaprasad Aradhya: ಈ ದಿನದ ಮೊದಲಕವನ ಆಳವಾಗಿದೆ. ಅದು ಭೂಮಿಯೊಳಗೇ ಹೋಗಿದೆ.ಒಂದು ಮೊದಲ ಕವನವೇ ಅತ್ಯುತ್ತಮವಾಗಿ ಹೊರಹೊಮ್ಮುತಿರುವ ಬಳಗದ ಹಾಗೂ ಕವಿಯ ಹೆಗ್ಗಳಿಕೆ ಇದಾಗಿದೆ.

ತೆರೆಮರೆಯ ಸಾಧನೆ ನಿಜಕ್ಕೂ ಮನೆಯ ತಾಯಿಯದು.ಆಕೆ ಒಳಗೆ ನನಗಾಗಿ ನಮ್ಮ ಕುಟುಂಬಕ್ಕೆ ಚಾಕರಿ ಮಾಡುತಾ ನನ್ನನ್ನು ಚಿಂತಕರ ಚಾವಡಿಗೆ ಬಿಟ್ಟಿದ್ದಾಳೆ.ಆದರೆ ನಿಜವಾದ ಚಿಂತಕಿ ನನ್ನವಳು.ನಾನು ಬರಿಯ ಸೊನ್ನೆ

ತಾಯಿ ಬೇರಂತೆ ಕುಟುಂಬದ ಜೀವಾಳ ಒಲವ ಜಲ ಅವಳು.ಹುಡುಕುಡುಕಿ ಒಲವುಗಳ ಸಾಗಿ ನೆಲೆಯ ಭದ್ರ ಪಡಿಸುವಾಕಿ.ಸಂಸಾರದ ಗಿಡ ಮರವಾಗಿ ನೆಲೆಯಾಗಲು ತಾಯಿ ತಾಯಿ ಬೇರಾಗಿ ಹೊರಜಗದ ಮರೆಯಲೇ ದುಡಿಯುವವಳು.

ಅಪ್ಪ ಆಕಾಶ ಅಮ್ಮ ಭೂಮಿ.ಅಪ್ಪನ ತಲೆಯೆತ್ತಿ ಓಡಾಡುವ ಘನತೆಯ ಹಿಂದೆ ಅಮ್ಮನ ಆಳವಾದ ತಪವಿದೆ.ಮನೋಜ್ಞವಾಗಿ ಬರೆದಿರುವ ತಾಯಿಗೆ ಶರಣು ಶುಭೋದಯ ಶುಭವಾಗಲಿ

 ಶಿವಪ್ರಸಾದ್ ಆರಾಧ್ಯ
[2/13, 1:46 PM] Wr Vinuta Kicchikeri: ಪ್ರೇಮ್ ಮೇಡಮ್ ಜೀ ನಮಸ್ತೇ

👉🏻 ರಾಗ ಬಧ್ಧವಾಗಿ ಬರೆದ ಕವನ ಚಂದ

👉🏻 ಇಂದಿನ ಪದ ಬಳಕೆ ಮಾಡಿ ಮೂಡಿಬಂದಿದೆ

👉🏻 ಸರ್ಕಾರಿ ಶಾಲೆಯಲ್ಲಿ ಏನು ಕಲಿಸುತ್ತಾರೆ ಎಂಬುದಕ್ಕೆ ಉತ್ತರವಿದೆ

👉🏻 ಪಾಲಕರು ಎಷ್ಟು ಕಷ್ಟ ಪಟ್ಟು ನಮ್ಮನ್ನು ಓದಲಿ ಎಂಬ ಉದ್ದೇಶ, ಶಿಕ್ಷಕರು ನಮಗೆ ಒಳ್ಳೆಯ ಪಾಠ,ಕಲಿಕೆ,ನೀತಿ ಕಥೆಗಳು, ನಾವು ನಮ್ಮ ಸ್ನೇಹಿತರ ಜೊತೆ ಹೇಗಿರಬೇಕೆಂಬುದನ್ನು ಶಾಲೆ ಕಲಿಸಿಕೊಡುತ್ತದೆ..ಪದವಿ ಪಡೆದರು ಸಾಲದು ಅಮ್ಮನ ಜೀವನ ಪಾಠವೂ ಮುಖ್ಯ. ರುಚಿ,ಶುಚಿಯ ಬಗ್ಗೆ ಒಂದಷ್ಟು ತಿಳುವಳಿಕೆ ನೀಡುವದು ಅಮ್ಮ ಎಂಬುದನ್ನು ನಿಮ್ಮ ಕವನದಲ್ಲಿ ತಿಳಿಸಿದ್ದೀರಿ

👉🏻ಕೊನೆಯ ಚರಣ ಹಿಡಿಸಿತು

ಧನ್ಯವಾದಗಳು💐
ವಿನುತಾ ಕಿಚ್ಚಿಕೇರಿ
[2/15, 2:27 PM] Wr Vara Lakshmi Amma: ಪ್ರೇಮ ಅವರ ಶಿವಸ್ತುತಿ

 ಸಾಮಾನ್ಯವಾಗಿ   ನಾವು  ಪ್ರಾರ್ಥನೆ ಮಾಡುವಾಗ  ಅದು ಕೊಡು,  ಇದು ಕೊಡು,  ಎಂದು ಬೇಡಿಕೆಗಳ ಪಟ್ಟಿ ಇಡುತ್ತಾ ಹೋಗುತ್ತೇವೆ,  ಆದರೆ ಕವಯತ್ರಿ  ಪ್ರೇಮ ಅವರು ನಮ್ಮಲ್ಲಿರುವ ಮಾತ್ಸರ್ಯ,  ದ್ವೇಷ ಅವುಗಳನ್ನು  ನೀಗಿಸಿ ಎಲ್ಲರಲ್ಲಿ  ಪ್ರೇಮಭಾವವನ್ನು ತುಂಬಿ,  ಭಕ್ತಿಮಾರ್ಗದಲ್ಲಿ ನಡೆಯುವ ಶಕ್ತಿ ಕೊಡು ಎಂದು ಶಿವನನ್ನು  ಸ್ತುತಿಸಿದ್ದಾರೆ.   ಭಕ್ತಿಯ ಮಾರ್ಗದಲ್ಲಿ  ನಡೆಯುತ್ತಾ  ಜೀವನದ ಉತ್ತುಂಗಕ್ಕೇರುವ ಬಯಕೆ ವ್ಯಕ್ತಪಡಿಸಿದ್ದಾರೆ.  ಸದುದ್ದೇಶದ  ಕವನ 🙏
[2/15, 6:02 PM] Wr Nagamma: ಪ್ರೇಮ್ ‌ಜೀ🙏🏼

ನಿಮ್ಮ 
ಶಿವಸ್ತುತಿಗೆ..

ತಲೆ‌ದೂಗಿದೆ..

ನನ್ನ ‌ಗುಣಗಳ ‌ಉತ್ತುಂಗಕ್ಕೇರಿಸು..ವಾವ್ ಸೂಪರ್..

ಚೆಂದದ ‌ದೈವ ಸ್ಮರಣೆ
.
.ಭಕ್ತಿ ಸ್ಪುರಣ..!!

ತಮ್ಮ..ಸುಂದರ ವಾದ‌ಶಿವಸ್ತುತಿಗಾಗಿ..

ಧನ್ಯವಾದಗಳು.

ಎಸ್. ನಾಗಮ್ಮ🌹
[2/17, 11:47 AM] +91 99641 78536: 💐🙏 ಪ್ರೇಮ್ ಸರ 🌹

ಬದುಕು ಬಂಗಾರ🌹

🌹ಸುಂದರವಾದ ಕವನ ರಚನಿ ಭಾವನೆಗಳಿಂದ ತುಂಬಿದ, ಮನಸಿನ ಭಾವ ಬಂಧನ ವಿಶೇಷ ಸ್ನೇಹ ಮಿಲನಗಳ ಹೇಳುವ ಕವನ 👌👌👌


ಅಂದದ ಕವನ 👌👌👌

ಬಾಬಣ್ಣ. 
(ಪ್ರಶಾಂತ ಆರ ದೈವಜ್ಞ)
ಕರೇಕ್ಯಾತನಹಳ್ಳಿ.
[2/18, 8:11 AM] Wr Vinuta Kicchikeri: ಪ್ರೇಮ್ ಮೇಡಮ್ ಜೀ🙏

👉🏻ಕವನದ ಆಶಯ ಸೂಪರ್

👉🏻 ಬದುಕಲ್ಲಿ ಏನೇನು ನೋಡಬಹುದು...ಒಂದು ಮುಂಜಾನೆಯಿಂದ ಸಂಜೆಯವರೆಗೆ ಎಂಬುದನ್ನು ಬಹಳ ಚೆನ್ನಾಗಿ ಬರೆದಿರುವಿರಿ.

👉🏻ಕೊನೆಯ ಚರಣ ಮನಸ್ಸಿಗೆ ಹಿಡಿಸಿತು

👉🏻 ಆದರೆ ಕಣ್ಣೀರು ಪದ ನನಗೆ ಕಾಣಲಿಲ್ಲ(ಕ್ಷಮಿಸಿ)
ಕೊನೆಯ ಸಾಲಿನಲ್ಲಿ ಇತರರಿಗೆ ಆಗಬೇಕಿತ್ತೇನೋ..‌ಲಗುಬಗೆಯಿಂದ ಬರೆದಿರುವಿರಿ ಅನಿಸಿತು


ಧನ್ಯವಾದಗಳು👏💐
ವಿನುತಾ ಕಿಚ್ಚಿಕೇರಿ
[2/18, 10:33 AM] +91 89701 82067: ಪ್ರೇಮ್ರವರೆ ಯೋಚನಾಲಹರಿಯನ್ನು ತುಂಬಾ ಆಳಕ್ಕಿಳಿಸುವ ಕವನ."ಸಂತನಾದರೂ ಮನದಿ ದುಃಖವಿರುವ ಹಾಗೆ" ಎಷ್ಟು ಆಳವಾದ ಯೋಚನೆ!!ವಾಹ್...ಕೆಲವರಿಗೆ ಹಾಗೆ ಕಷ್ಟಗಳು ಬಂದರೆ ಬರುತ್ತಲೇ ಇರುತ್ತವೆ.ಆದರೆ ಕರಿಮೋಡವೂ ಕಳೆದು ಮಳೆಯಾಗುತ್ತದೆ ಕಾಯಬೇಕಷ್ಟೇ.ಮೂರನೆಯ ಚಾರಣ ಓದುತ್ತಾ ಜಯಂತ್ ಕಾಯ್ಕಿಣಿಯವರ "ಬೊಗಸೆಯಲ್ಲಿ ಮಳೆ" ಕೃತಿ ನೆನಪಾಯಿತು.ಗಡಿ ಅಂದರೆ ಏನಪ್ಪಾ ಎಂದು ಪ್ರಶ್ನಿಸುವ ಸೈನಿಕರಿಗೆಲ್ಲ ಆಟಿಕೆಯ ಪಿಸ್ತೂಲ್ ನೀಡುವ ಮೂಲಕ ಎಲ್ಲರನ್ನೂ ನಗಿಸಬಾರದೇಕೆ ಎಂದು ಮುಗ್ಧವಾಗಿ ಪ್ರಶ್ನಿಸುವ ಮಗು ದೇಶದೇಶಗಳ ನಡುವಿನ ವೈಮನಸ್ಯದ ವಿಷಯ ಬಂದಾಗ ಪ್ರತೀ ಬಾರಿಗೂ ನೆನಪಾಗುತ್ತದೆ ನನಗೆ.ತಾ ಬದುಕಿ ಇತರರಿಗೂ ಅವಕಾಶ ಕೊಡಬೇಕು ಎನ್ನುವ ಕವಿ ಭಾವ ಇಷ್ಟವಾಗುತ್ತದೆ.🙏🏻

ನಿಶ್ಮಿತಾ ಪಳ್ಳಿ
[2/18, 5:13 PM] Tr Ramesh: ಪ್ರೇಮ್ ಅವರ ಕವನ *ಜೀ-ವನ ಕ-ವನ* ಚೆನ್ನಾಗಿದೆ.  ಮೂರು ದಿನದ ಬಾಳು.. ಪ್ರೀತಿಯಿಂದ ಬಾಳುವುದೊಂದನ್ನು ಬಿಟ್ಟು ಮತ್ತೆಲ್ಲ ಮಾಡುತ್ತಿದ್ದೇವೆ.. ದಿನವೂ ಸಂತಸವಾಗಿ ಬಾಳುವ ಎಂಬುದನ್ನು ಬಹಳ ಅರ್ಥವತ್ತಾಗಿ ತಿಳಿಸಿದ ಕವನ..

ಧನ್ಯವಾದಗಳು ತಮಗೆ 🙏
[2/19, 7:08 AM] Wr Shivaprasad Aradhya: ಪ್ರೇಮ ಕವಿಯತ್ರಿಯ ಬರಹ
ಚ್ಚ ಚ್ಚ ಆದಿಪ್ರಾಸದಲಿ ಹುಚ್ಚ ಎಬ್ಬಿಸಿ ಕುಣಿಸಿವತಣಿಸಿದ ಕವಿಗೆ ಶರಣು ಆದರೆ ತುಚ್ಛಗೆ ದಾನ ಮಾಡಬಾರದು.ಅರ್ಹರಿಗೆ ನೀಡಬೇಕು ಪ್ರಾಸ ದ ಬರದಲಿ ತಪ್ಪಾಗಿದೆ.ಒಟ್ಟಾರೆ ಪ್ರಾಸದ ಬರದಲಿ ಹೀಗೂ ಹುಚ್ಚೆದ್ದು ಬರೆಯಬಹುದೆಂದು ತೋರಿಸಿದ್ದೀರಿ ಅಬ್ಬಬ್ಬಾ ಭಲೇ ಕವಿಯೇ ನೀವೇನು ಸುಮ್ಮನೇನಾ ಎಚ್ಚರವಾಗಿರಬೇಕು ವಿಮರ್ಶೆಗೂ ಮುನ್ನ

ಶಿವಪ್ರಸಾದ್ ಆರಾಧ್ಯ

ವಿಮರ್ಷೆಗಳು

[2/25, 8:51 AM] Wr Anuradha Shivaprak: ಪ್ರೇಮ್ ಅವರ ಭಾರತೀಯರ ಬುದ್ಧಿ

ಇಂದಿನ ದಿನಗಳಲ್ಲಿ ಭಾರತೀಯರಾದ ನಾವು ಭಾರತದ ಮೂಲ ಸಂಸ್ಕೃತಿ ಮರೆತು ವಿದೇಶಿಯರ ಅನುಕರಣೆ ಮಾಡುತ್ತಿರುವುದು ನಿಜಕ್ಕೂ ಖೇದಕರ. ವಿಕೃತ ಮನಸ್ಸಿನ ಸ್ಥಿತಿಯೂ ಹೌದು. ಭಿಕ್ಷುಕರಂತೆ ಹರಿದ ಬಟ್ಟೆ ಹಾಕಿಕೊಳ್ಳುವುದು ಮಿನಿ ಮಿಡಿಗಳಲ್ಲಿ ಅಂಗ ಪ್ರದರ್ಶನ ಮಾಡುವುದು ನಿಜಕ್ಕೂ ಸಂಸ್ಕೃತಿಯ ಅಧಃಪತನಕ್ಕೆ ಹಿಡಿದ ಕೈಗನ್ನಡಿ. 

ಒಳ್ಳೆಯತನವ ಅರಿತುಕೊಂಡು ಅದರಂತೆ ಬದುಕೋಣ ಹಾಯ್ ಬಾಯ್ ಬಿಟ್ಟು ಗೌರವಪೂರ್ವಕ ನಮಸ್ಕಾರ ಸಲ್ಲಿಸೋಣ ಎಂಬ ಆಶಯ ಹೊಂದಿದ ಕವನ ನಿಜಕ್ಕೂ ಉತ್ತಮವಾಗಿದೆ
[2/28, 11:43 AM] +91 70267 76576: ಪ್ರೇಮಾ ಜೀ ಅವರ💐 ಅರ್ಪಿತ  ಹಾರ💐
      ಹನಿ ಬಳಗವ ಹೆಣೆದು ಸಾಹಿತ್ಯ ಸೇವೆ ಮಾಡುತ್ತಿರುವ ಕವಿಮನಗಳಿಗೆ ಅರ್ಪಿಸಿದ ನಿಮ್ಮ ಕವನ ಸುಂದರ ಜಿ... ಬಿಡುವಿಲ್ಲದ ಸಮಯದಲ್ಲಿ ತಿದ್ದಿ ತಿಡಿ ಕಲಿಸುವ ಬಳಗದ ಕಾರ್ಯ ಶ್ಲಾಘನೀಯ.... ಪ್ರೀತಿ, ಸ್ನೇಹ ಮಮಕಾರದಿ ಬೆಳೆಸುವ ಬಳಗ.ಉಳಿ ಪೆಟ್ಟು ಬಿದ್ದಾಗಲೇ ಕಲ್ಲೊಂದು ಮೂರ್ತಿ ಆಗುವದು ಹಾಗೆ ಹೀರಿಯರು ನಮ್ಮ ತಪ್ಪುಗಳನ್ನ ನೇರವಾಗಿ ಹೇಳಿದಾಗ ಬೇಸರಿಸದೆ ತಿಳಿದುಕೊಂಡು ಕಲಿತರೆ ಖುಷಿ ಇಂದ ಕಲಿಯಬಹುದು. ಪ್ರತಿಯೊಂದು ಅಕ್ಷರದ ಸಾಲುಗಳು ವಜ್ರದ ಹಾರಗಳಾಗಿ ಕನ್ನಡಾಂಬೆಯ ಶೃಂಗರಿಸುವ ಭಾವ ವಾವ್ ಅದ್ಭುತ ಜಿ..  ನಿಮ್ಮ ಬಳಗದ ಪ್ರೀತಿಗೆ ಶರಣು ಹೇಳುತ್ತ ಅನಿಸಿಕೆಗಳು ತಪ್ಪಾದಲ್ಲಿ ಕ್ಷಮೆ ಇರಲಿ ಜೀ 
ಧನ್ಯವಾದಗಳು ...

ಜಯಶ್ರೀ..
[2/28, 1:18 PM] Wr Manjula B K: ಪ್ರೇಮ್ ಅವರ ಪದಗಳ ಹಾರ 

ಒಂದು ವಿಭಿನ್ನ ವಿಷಯವನ್ನು ಕವಿತೆಯಲ್ಲಿ ಕವಿತೆಯ ಬಗ್ಗೆಯೇ ಕವನ ರಚಿಸಿದ ಬಗೆ ಸೊಗಸು. 

ಒಂದು ಕವಿತೆಯನ್ನು ರೂಪಿಸುವಾಗ ಯಾವ ಹಂತಗಳನ್ನು ಅನಿಸರಿಸಿದರೆ ಉತ್ತಮ ಕವಿತೆ ರೂಪಿತವಾಗುತ್ತದೆ ಎನ್ನುವ ಸಾಲುಗಳು ಉತ್ತಮ. 

ಮಂಜುಳಾ. ಬಿ. ಕೆ
[2/28, 3:08 PM] Wr Vara Lakshmi Amma: ಪ್ರೇಮ ಅವರ **ಅರ್ಪಿತ ಹಾರ*

 ಸುಂದರವಾದ ಹೂಮಾಲೆಯೊಂದನ್ನು  ಅಂದವಾದ  ಪದ ಸಮೂಹದಿಂದ ಪೋಣಿಸಿ ಅರ್ಪಿಸಿದ್ದಾರೆ.  ಹಿಂದಿನಿಂದ ನಾರು ಸ್ವರ್ಗಕ್ಕೆ ಸೇರುವಂತೆ  ಈ ಹನಿ ಹನಿಬಳಗಕ್ಕೆ ಬಂದ ಕವಿಗಳು ಬರೆಯುತ್ತಾ ತಿದ್ದುತ್ತಾ ಉತ್ತಮ ಗುಣಮಟ್ಟದ  ಸಾಹಿತ್ಯ ನೀಡುತ್ತಾರೆ.  ಇಂಥ ಬಳಗಕ್ಕೆ ಇವರ ಹಾರದ ಅರ್ಪಣೆ ನಿಜಕ್ಕೂ ವಂದನೀಯ.  ಉತ್ತಮ ಬರಹಗಾರರ ಪ್ರೇಮ ಅವರ ಸಾಹಿತ್ಯ  ಸೇವೆಯಲ್ಲಿ  ಹೀಗೆ ಮುಂದುವರಿಯಲಿ ಎಂದು ಹಾರೈಸುವ🙏
[3/2, 7:18 AM] Wr Shivaprasad Aradhya: ಪ್ರೇಮ ಕವಿಗಳು ಚೆನ್ನಾಗಿ ಬರೆದಿದ್ದಾರೆ ಆದರೆ ಚಿಕ್ಕ ಚಿಕ್ಕ ಸಾಲುಗಳ ಮಾಡಲು ಕವನವಾಗಿ ಕಾಣಿಸುತ್ತದೆ. ಅದರೆ ಉದ್ದುದ್ದವಾಗಿ ನವ್ಯದಲೂ ಬರದೆ ಗಪದ್ಯವಾಗಿ ಬರೆದರೂ ಉತ್ತಮ ಸಂದೆಶಗಳು ಅತ್ಯುತ್ತಮ ಭಾವಗಳ ಕವನ ಇದು. ಶುಭವಾಗಲಿ ಕವಿಗಳೇ ಶುಭವಾಗಲಿ

ಶಿವಪ್ರಸಾದ್ ಆರಾಧ್ಯ
[3/2, 9:43 AM] Wr Kumar Chalawadi: 🌿🌿🌿
@ಪ್ರೇಮ್@ ರವರ" ನನ್ನ ನೋಡಿ ಕಲಿ" ಶೀರ್ಷಿಕೆ ಓದಿಯೇ ಕವನ ಓದಬೇಕೆನಿಸುತ್ತದೆ! ಚಂದಿರನ ಸ್ವಗತ ಗೀತೆಯಾಗಿ ಮನಸೆಳೆಯುತ್ತದೆ! ಬೆಳಕನ್ನು ಪ್ರತಿಫಲಿಸುವ ಚಂದಿರನ ತ್ಯಾಗ ಮನೋಭಾವವನ್ನು ತಮ್ಮ ಕವನದ ಸಾಲಿನಲ್ಲಿ ಮೇಳೈಸಿದ ರೀತಿ ಚೆಂದ! ' ಪರರಿಗೆ ಸಹಾಯ ಮಾಡುವ ಮನಸಿರಬೇಕು'! 
ಪಾಕ್ಷಿಕಕೊಮ್ಮೆ ಗೋಚರಿಸುವ ಚಂದಿರ 
ಕರಗಿ ಹೋಗುವಂತೆ ' ಮೆರೆದರೂ ಕರಗಿ ಹೋಗುವ' ಸಾಲಿಗೆ ಹೋಲಿಸಿದ್ದು ಆಕರ್ಷಕ!
ಚಂದದ ಕವನ!
🌿🌿🌿
[3/4, 7:26 AM] Wr Varalaxmi K N: ನಮಸ್ತೆ ಪ್ರೇಮ ಮೇಡಮ್. 

ಮಹಿಳಾ ದಿನಾಚರಣೆ ಸಮೀಪವಿರುವಾಗ ಹೆಣ್ಣಿನ ಪ್ರಾಧ್ಯಾನತೆ ಬಗ್ಗೆಯೂ ನಿಮ್ಮ ಕವನ ಬೆಳಕು ಚೆಲ್ಲಿದೆ. 
ತನ್ನ ಕಂದಮ್ಮಗಳಿಗೆ ಹೊಟ್ಟೆತುಂಬಾ ಆಹಾರ ಕೊಡಲು ತನ್ನ ಜೀವನವ ಮುಡಿಪಿಡುವ ಬಗೆಯ ಕವನದಲ್ಲಿ ಸೊಗಸಾಗಿ ವಿವರಿಸಿದ್ದೀರಿ. 
ತಪ್ಪಿದ್ದರೆ ತಿದ್ದಿ 
 ಧನ್ಯವಾದಗಳು ಮೇಡಮ್ 🙏

ಕೆ ಎನ್ ವರಲಕ್ಷ್ಮಿ
[3/4, 2:12 PM] Wr Nagamma: ಪ್ರೇಮ್ ಜೀ

ನಿಮ್ಮ
ಉಣಿಸುವ ಕೈಗಳು...

ಬಹಳ ಸುಂದರವಾಗಿ ಮೂಡಿದೆ..

ಅಮ್ಮನ..ಹಿರಿಮೆ ಗರಿಮೆ..ಹಾಡಿದ ಪದ ಗಳು..ಅವಳ ದುಡಿಮೆಯ ಕರಗಳಿಗೆ..ವಂದಿಸಿದೆ..

ಧನ್ಯವಾದಗಳು...

ಎಸ್.ನಾಗಮ್ಮ🌹
[3/5, 7:39 AM] +91 99641 78536: 🌹 ಪ್ರೇಮ ಮೇಡಂ ಜೀ💐🙏

🌹ಅರ್ಪಣೆ🌹

       ಹೃದಯದ ಅಂತರಂಗದಿ ಭಕ್ತಿ ಭಾವದಿಂದ ಹಾಡಿದ ಕವನ, ಭರತಮಾತೆಯ ಮಡಿಲಲ್ಲಿ ಜನಿಸಿದ ಜನ್ಮ ಧನ್ಯ ಎಂದು ಹೇಳುತ ಜೀವನ ಬಾಂಧವ್ಯ ಸಾರುತ ಸೃಷ್ಟಿ ಸಂಕುಲವ ಸಾರಿದ ಬರಹ ಅಭಿನಂದನೆಗಳು 👌👌👌


ಸುಂದರ ಕವನ 👌👌👌

ಬಾಬಣ್ಣ. 
(ಪ್ರಶಾಂತ ಆರ ದೈವಜ್ಞ)
ಕರೇಕ್ಯಾತನಹಳ್ಳಿ.
[3/12, 11:30 AM] Wr Nagamma: ಪ್ರೇಮ್ ಜೀ🙏🏼

ದಾರಿ ಯಾವುದಯ್ಯಾ

ಸ್ವಲ್ಪ ಗಳಿಗೆಯಾದ ಇಂಟರ್ನೆಟ್ ಇಲ್ಲದೆ....ನೈಜ ವಾಗಿ..ಎಲ್ಲರೊಡನೆ ಮುಕ್ತ ವಾಗಿ‌ಬೆರೆಯಲಿ..
..ಎಲ್ಲರೂ ಇಂಟರ್ನೆಟ್..ಲೋಕದಲ್ಲಿ...ಲೀನವಾಗಿ..ನಮ್ಮನ್ನೇ ನಾವು ಕಳೆದು ಕೊಂಡಿದ್ದೇವೆ ಎಂಬ..

ಸಮಾಜಿಕ‌ಕಳಕಳಿಯ ಕವನ..
ಕ್ಕಾಗಿ ಧನ್ಯವಾದಗಳು.

ಎಸ್.ನಾಗಮ್ಮ🌹
[3/12, 7:55 PM] Wr Venktesh Chagi: *ಪ್ರೇಮ್ ರವರು ಇಂಟರ್ನೆಟ್ ಬೇಡ ಎನ್ನುತ್ತಿದ್ದರೆ. ಆದರೆ ಇಂಟರ್ನೆಟ್ ಇಲ್ಲದೇ ಇಂದಿನ  ಜಗತ್ತು ಜಗತ್ತು ಇಲ್ಲ. ವಾಸ್ತವವಾಗಿ ಇಂಟರ್ನೆಟ್ ಬೇಕು ಆದರೆ ಬಳಕೆಯ ಮಿತಿ ಮೀರಿದೆ. ಕವನದಲ್ಲಿ ಇಂಟರ್ನೆಟ್ ನ ಅಗತ್ಯತೆಯ ಬಗ್ಗೆ ಒಂದೆರಡು ಸಾಲುಗಳಿಗೆ ಅವಕಾಶ ಕೊಡಬಹುದಿತ್ತು. ಪ್ರಾಸಕ್ಕೆ ಕೊಟ್ಟ ಪ್ರಾಶಸ್ತ್ಯ ಕಡಿಮೆಯಾಗಬಹುದಿತ್ತು. ಕವನ   ಚೆನ್ನಾಗಿದೆ.*

✍ *ವೆಂಕಟೇಶ ಚಾಗಿ*
[3/13, 9:11 AM] Wr Mallesh G Raj: ಪ್ರೇಮ್ ಗುರುಗಳ ಕವನ ಜಲಸಾಗರದಲ್ಲಿ ಏರೀಳಿಯುವ ಅಲೆಗಳ ತೆರನಲಿ ಪ್ರಶ್ನಾಮಾಲಿಕೆಯಂತೆ ಮೂಡಿದೆ.ಯಾರಿದು ಅವರನ್ನೇ ಪ್ರಾಮುಖ್ಯೀಕರಿಸಿದ್ದರೆ ಕವನದ ಸ್ತರ ಇನ್ನೂ ಚೆಂದಿರುತ್ತಿತ್ತೇ ಯೋಚಿಸಿ,ಬುವಿ ಪದ ಗಮನ ಸೆಳೆದದ್ದು  ಒಟ್ಟಾರೆ ಉತ್ತಮ ಪ್ರಯತ್ನ ಶುಭೋದಯದ ಮೊದಲ ಕವನ 👍🏻 ಕವಿ ಭಾವ ಚ್ಯುತಿಯಾಗಿರಲು ಕ್ಷಮೆ ಇರಲಿ.
[3/14, 1:50 PM] Wr Varalaxmi K N: ನಮಸ್ತೆ ಪ್ರೇಮಾ ಮೇಡಮ್. 
  ಮಳೆರಾಯ ಪ್ರೇಮಾ ಮೇಡಮ್    ಎಷ್ಟು ಚೆಂದದಿ ಕರೆಯುತ್ತಾ ಇರುವರು .ದಯಮಾಡಿ ಬಂದುಬಿಡಿ ಮಳೆರಾಯ.
ಮಳೆರಾಯನಿಗಾಗಿ  ಮನುಜ ಮತ್ತು ಪಶುಪಕ್ಷಿಗಳು ಪರಿತಪಿಸುವ ಕವನಕೆ ನಮನಗಳು ಮೇಡಮ್. 
ತಪ್ಪಿದ್ದರೆ ತಿದ್ದಿ 
ಧನ್ಯವಾದಗಳು ಮೇಡಮ್ 
ಕೆ ಎನ್ ವರಲಕ್ಷ್ಮಿ
[3/14, 3:22 PM] Wr Mallesh G Raj: ಪ್ರೇಮ್ ಮೇಡಂ ನಿಮ್ಮಲ್ಲಿ ಇನ್ನೂ ಮಳೆಯಾಗಿಲ್ಲವೇ?  ನೀವು ಕವನ ಬರೆದ ಮೇಲೂ ಆಗಿಲ್ಲ ಅಂದರೆ,  ಆಗಿರಲೇಬೇಕು.ಪ್ರಾರ್ಥನೆಯ ಮೊರೆ  ವರುಣನಿಗಾಗಲೇ ಮುಟ್ಟಿರಬಹುದು 🙏
[3/16, 2:09 PM] +91 84313 19753: ಪ್ರೇಮ ಮೇಡಂ 

ನಿಮ್ಮ ಕವನ ತುಂಬಾ ಚನ್ನಾಗಿ ಮೂಡಿ ಬಂದಿದೆ 

ಉತ್ತಮ ಸಂದೇಶ ಹೊತ್ತು ತಂದಿದೆ 

ಕವನದೊಳಗಿನ 
ಕೊನೆಯ ಪ್ಯಾರಾ ತುಂಬಾ ಇಷ್ಟವಾಯ್ತು. 

ಧನ್ಯವಾದಗಳು
[3/17, 1:30 PM] Wr Manjula B K: ಪ್ರೇಮ್ ಅವರ ಹಂಚಿ ತಿನ್ನೋಣ 

ಮನುಷ್ಯನ ಬದುಕು ಮೂರು ದಿನದ ಸಂತೆ. ಅದರಲ್ಲಿ ಹಂಚಿ ತಿನ್ನುವುದುರಲ್ಲಿ ಇರುವುದು ಸುಖ ಎನ್ನುವ ಸಂದೇಶ ಉತ್ತಮ. 

ಪಾಲಿಗೆ ಬಂದಿರುವುದು ಪಂಚಾಮೃತ ಎನ್ನುವ ಹಾಗೆ ನಮಗೆ ಸಿಕ್ಕ ಅನ್ನದ ಪಾಲಿನಲ್ಲಿ ನಾವು ಸುಖ ಕಾಣಬೇಕು. 

ಮಂಜುಳ

1332. ಷಟ್ಪದಿ-2 ಗೆಲುವು

ಗೆಲುವು

ಗೆಳೆಯನ ಕಾಣಲು
ಗರಡಿಗೆ ಹೋದೆನು
ಗುಡಿಯಲಿ ದೇವರ
ಮುಖವದ ಕಂಡೆನು ಹಿತವೆನಿಸಿ
ಗರುಡನು ವಾಹನ
ಗಮನವು ಜನರೆಡೆ
ಕೈಯದು ಎದುರಲಿ ನಿಂತಿಹಗೆ..

ಗೋಲಿಯ ಆಡುವ
ಮಕ್ಕಳ, ಮುದುಕರ
ಕಾಯುವ ಹರಿಹರ ವರನೀಡಿ..
ಬೇಡಿದ ವರಗಳ
ಮಳೆಯನು ಸುರಿಸುತ
ಕಾಡುವ ಜನರನು ಕಾಯುತಲಿ.

ವಿಷ್ಣುವು ಕಾವಲು
ಕಾಯುತ ಸಲಹುವ
ನಿತ್ಯದಿ ಬಕುತರ ಪೊರೆಯುತಲಿ
ಗೆಲುವದು ಬಾರದೆ
ಇರದದು ಎಂದಿಗು
ನಂಬಿದ ಮನುಜಗೆ ಕೊನೆವರೆಗೆ..
@ಪ್ರೇಮ್@
17.03.2020

1331. ಶರ ಷಟ್ಪದಿ

ಗುರುತರ ಕಾರ್ಯವ
ಗುರುವದು ಮಾಡುವ
ಗಮನವು ಆ ಕಡೆ ಇರಬೇಕು
ಗುಡಿಯಲಿ ಕುಳಿತೇ
ಗುಮಾನಿ ಇಲ್ಲದೆ
ಗಜಮುಖ ನೀಡುವ ವರಗಳನು

ಗುರಿಯದು ಬೇಕಿದೆ
ಗುಡುಗುವ ಜನರಿಗೆ
ಗಾಡಿಯ ವೇಗದಲೋಡುತಿಹ
ಗುಡ್ಡದ  ಭೂತಕೆ
ಗುಡುಗದು ತಾಗದು
ಗುರಿಯೇ ಬಾಳಿನ ಗುರುತಂತೆ

ಗುಡಿಮಡಿ ತೊರೆದವ
ಗಡಿಯಲಿ ಕಾಯುತ
ಗಹನದಿ ಪೊರೆವನು ದೇಶವನು
ಗೋಲಿಯ ಆಟದಿ
ಗೋರುತ ನಡೆವವ
ಮಾನವ ಕೊಡುತಲಿ ಕಾಟವನು

ಗುರುಗಳು ಕರವನು
ಗಮನದಿ ಹಿಡಿದರೆ
ಬದುಕದು ಸುಂದರ ಶಿಲೆಯಂತೆ
ಗಣಪನು ವಿಘ್ನವ
ಗದರಿಸಿ ಕಳಿಸಲು
ಬಾಳದು ನಲಿವುದು ನಿಜವಣ್ಣ..
@ಪ್ರೇಮ್@
16.03.2020


happiness

*I'm happy*

I'm very happy that
I have reached my goal! 
I have ever given you
The complete satisfaction 
Today I could have been
Seen in your vision! 
Four years ago your eyes
were searching for a love! 
They were eager like a hungry Lions! 
They were ready to hunt! 
They were ready to jump! 
They were unsatisfied too.. 

But today's flash news.. 
History repeats.. As the kings ..
You with your love enjoyed a life
I wil try to bring moisture in your mouth ever.. 
Bring the happiness to your lips ever..

ಸೋಮವಾರ, ಮಾರ್ಚ್ 16, 2020

1330. ಶಾಯರಿಗಳು

ಶಾಯರಿ-1

ಮನೆಯಲ್ಲೇ ಇರಿ ಎಂದರು
ಧಾರಾವಾಹಿಯ ಪಾತ್ರಧಾರಿಗಳು!
ವಾಹಿನಿಗಳು ಅಡಿಗೆ ಕಾರ್ಯಕ್ರಮ ಬಿತ್ತರಿಸಿದವು!
ನನ್ನಾಕೆ ಒಳಗೇ ಕುಳಿತು
ಸಿದ್ಧಪಡಿಸುವ ಹೊಸ ರುಚಿಗೆ
ನಾನೇ ಮೊದಲ ಆಸ್ವಾದಕನು!

ಶಾಯರಿ-2

ಕರೋನಾ ಕರೋನಾ 
ಅಂತ ಹೇಳುತ್ತಲೇ
ಸುತ್ತುತ್ತಿದ್ದನವನು
ನನ್ನ ಹಿಂದೆ ಮುಂದೆ!
ನಾನು ಕಾಲ್ಕಿತ್ತು 
ದೂರ ಓಡುತಲಿದ್ದೆ!
ಕೊನೆಗೆ ತಿಳಿಯಿತು,
ಅವನು ಹೇಳಿದ್ದು
"ಪ್ಯಾರ್ ಕರೋನಾ"
@ಪ್ರೇಮ್@
17.03.2020

papu

*ಪಾಟೀಲ ಪುಟ್ಟಪ್ಪನವರ ಇತಿಹಾಸ*
ಜನನ: 14-1-1921 ರಂದು ಹಾವೇರಿ ಜಿಲ್ಲೆಯ ಕುರಬಗೊಂಡ ಗ್ರಾಮ.
ತಂದೆ: ಶ್ರೀ ಸಿದ್ಧಲಿಂಗಪ್ಪ
ತಾಯಿ: ಶ್ರೀಮತಿ ಮಲ್ಲಮ್ಮ.
ವಿದ್ಯಾಭ್ಯಾಸ: ಪ್ರಾಥಮಿಕ ಶಿಕ್ಷಣ, ಹಲಗೇರಿ.
ಇಂಗ್ಲೀಷ ವಿದ್ಯಾಭ್ಯಾಸ : ಬ್ಯಾಡಗಿ, ಹಾವೇರಿ ಹಾಗೂ ಧಾರವಾಡ.
ರಾಷ್ಟ್ರೀಯ ಪ್ರಭಾವ: 1930 ರಲ್ಲಿ `ನಹಿ ರಖನಾ ನಹಿ ರಖನಾ ಅಂಗ್ರೇಜ ಸರಕಾರ’ ಎಂದು ಹೇಳುತ್ತಾ ಮದ್ಯದ ಅಂಗಡಿಗಳ ಮುಂದೆ ಪಿಕೆಟಿಂಗ್ ಮಾಡಿದ್ದು, ಜವಾಹರಲಾಲ್ ನೆಹರೂ ಹುಬ್ಬಳ್ಳಿಗೆ ಬಂದಾಗ ಅವರನ್ನು ನೋಡಿ ಪ್ರಭಾವಿತರಾದದ್ದು. 1930 ರಿಂದ ಸಂಪೂರ್ಣ ಖಾದಿ ಧಾರಣೆ. 1934 ರಲ್ಲಿ ಮಹಾತ್ಮಾ ಗಾಂಧೀಜಿ ಹರಿಜನ ಪ್ರವಾಸ ಕೈಕೊಂಡು ಬ್ಯಾಡಗಿಗೆ ಬಂದಾಗ ಸ್ವಯಂ ಸೇವಕನಾಗಿದ್ದಾಗ ಅವರಿಂದ ಬೆನ್ನು ತಟ್ಟಿಸಿಕೊಂಡ ಅನುಭವ. 1937 ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ. 
ಕಾಲೇಜು: ಕಾಲೇಜು ಶಿಕ್ಷಣ ಧಾರವಾಡದಲ್ಲಿ 1939. ಅದೇ ವರ್ಷ ಉಡುಪಿಯ `ಅಂತರಂಗ’ ಪತ್ರಿಕೆಯಲ್ಲಿ ಶ್ರೀರಂಗ, ಕುವೆಂಪು, ಬೇಂದ್ರೆಯವರ ಮೇಲೆ ಲೇಖನ. 1941 ರಲ್ಲಿ `ನಾನು ಮಾಸ್ತಿಯವರನ್ನು ಕಂಡೆ’ ಎಂಬ ಲೇಖನ, ಮಾಸ್ತಿಯವರಿಂದ ಮೆಚ್ಚುಗೆ ಪಡೆಯಿತು. ಸಿ. ಕೆ. ವೆಂಕಟರಾಮಯ್ಯನವರ `ಅಬ್ರಾಹಂ ಲಿಂಕನ್’ ಕುರಿತು `ಜೀವನ’ ಪತ್ರಿಕೆಯಲ್ಲಿ ಬರೆದ ಲೇಖನಕ್ಕೆ ಪ್ರತಿಯಾಗಿ ವಿ. ಕೃ. ಗೋಕಾಕರು ಪ್ರತಿ ವಿಮರ್ಶೆ ಬರೆದರು. ಬೇಂದ್ರೆಯವರ ನಿಸರ್ಗ ಕವಿತೆಗಳು -ಜೀವನದಲ್ಲಿ ಸುದಿರ್ಘ ಲೇಖನ. ಕರ್ನಾಟಕ ಕಾಲೇಜಿನ ಕರ್ನಾಟಕ ಸಂಘದ ಕಾರ್ಯದರ್ಶಿ 1942.
ಚಲೇಜಾವ್ ಚಳುವಳಿ: 1942 ರಲ್ಲಿ ರಾಷ್ಟ್ರೀಯ ಹೋರಾಟದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಸಂಘಟನೆ ಮಾಡಿದ `ಆಪಾದನೆಗಾಗಿ’ ಅವರನ್ನು ಕರ್ನಾಟಕ ಕಾಲೇಜಿನಿಂದ ಹೊರಹಾಕಿದರು. ಒಂದು ವರ್ಷ ಕಾಲ ಭೂಗತ ಕಾರ್ಯಕರ್ತರಾಗಿ ಕೆಲಸ. 
ಕಾನೂನು ಕಾಲೇಜು: 1943 ರಲ್ಲಿ ಬೆಳಗಾವಿ ಕಾನೂನು ಕಾಲೇಜಿಗೆ ಸೇರ್ಪಡೆ. 1945 ರಲ್ಲಿ ಕಾನೂನು ಪದವೀಧರ. 
ಮದುವೆ: 1945 ರಲ್ಲಿ ನವೆಂಬರ್ 11 ರಂದು ವಿಜಾಪುರದ ಡಾ. ಬಿ. ಎಂ. ಪಾಟೀಲರ ಮಗಳು ಇಂದುಮತಿಯವರೊಡನೆ.
ಮಕ್ಕಳು: ಮುಂಜುಳಾ, ಶೈಲಜಾ, ಅಶೋಕ.
ಮುಂಬಯಿ ವಾಸ್ತವ್ಯ: 1945 ರಲ್ಲಿ ಆರಂಭಕ್ಕೆ ಹೈಕೋರ್ಟಿನಲ್ಲಿ ವಕಾಲತ್ತು ಮಾಡುವ ಉದ್ದೇಶದಿಂದ ಮುಂಬಯಿಗೆ ಪ್ರಯಾಣ. ಅಲ್ಲಿ ನಿವೃತ್ತ ಜಸ್ಟೀಸ್ ಜಹಗೀರದಾರರ ಛೇಂಬರಿನಲ್ಲಿ, ಡಾ. ತೆಂಡೂಲಕರರು ಸರದಾರ ಪಟೇಲರ ಭೇಟ್ಟಿ ಮಾಡಿಸಿದರು. ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವುದನ್ನು ತಿಳಿಸಿದರು. ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಸರದಾರ ಪಟೇಲರು ಹೇಳಿದರು. ಫ್ರೀಪ್ರೆಸ್ ಜರ್ನಲ್. ಬಾಂಬೈ ಕ್ರಾನಿಕಲ್ ಪತ್ರಿಕೆಗಳಿಗೆ ಕರ್ನಾಟಕ ಏಕೀಕರಣ ಕುರಿತು ಲೇಖನ. ಕೆ. ಸದಾನಂದರು `ಫ್ರೀ ಪ್ರೆಸ್’ ಸೇರುವಂತೆ ಒತ್ತಾಯಪಡಿಸಿದರು. ಕೆ. ಎಫ್. ಪಾಟೀಲ ಮೊದಲಾದ ಸ್ನೇಹಿತರು ಹುಬ್ಬಳ್ಳಿಯಲ್ಲಿ ತಾವು ಆರಂಭಿಸಬೇಕೆಂದ ಪತ್ರಿಕೆಗೆ ಸಂಪಾದಕನಾಗಬೇಕೆಂದು ಹೇಳಿದರು.
ಕನ್ನಡಿಗರ ಮಹಾಧಿವೇಶನ: ದಾವಣಗೆರೆಯಲ್ಲಿ ಕನ್ನಡಿಗರ ಪ್ರಥಮ ಮಹಾಧಿವೇಶನ ಕೂಡಿಸುವ ಕಾರ್ಯ. ಕಾರ್ಯದರ್ಶಿಯಾಗಿ ಮಹಾಧಿವೇಶನ ಕೆಲಸ ಮಾಡಿದ್ದುದು, 1946 ಅಗಸ್ಟ್ ಮುಂಬಯಿ ಮಂತ್ರಿ ಎಂ. ಪಿ. ಪಾಟೀಲರು ಅಧ್ಯಕ್ಷರಾಗಿದ್ದರು. ಮದ್ರಾಸ್ ಮಂತ್ರಿ ಕೆ. ಆರ್. ಕಾರಂತರು ಉದ್ಘಾಟಕರಾಗಿದ್ದರು. 
ಪತ್ರಿಕೋದ್ಯಮ: ಹಾವೇರಿಯಲ್ಲಿ ಓದುತ್ತಿರುವಾಗ `ನಮ್ಮ ನಾಡು’ ಕೈ ಬರಹದ ಪತ್ರಿಕೆಯ ಪ್ರಕಟಣೆ 1936. ವಾರ ಪತ್ರಿಕೆ `ವಿಶಾಲ ಕರ್ನಾಟಕ’ದ ಸಂಪಾದಕತ್ವ ಅನಂತರ ಅದು ಅಗಸ್ಟ್ 9, 1947 ರಂದು ದಿನಪತ್ರಿಕೆಯಾಯಿತು. 
ಏಕೀಕರಣ: 1949 ರ ಆರಂಭದಲ್ಲಿ ಕಲ್ಬುರ್ಗಿಯಲ್ಲಿ ಕರ್ನಾಟಕ ಏಕೀಕರಣ ಪರಿಷತ್ತು ಮೈಸೂರು ಸಹಿತಿ ಕರ್ನಾಟಕವಾಗಬೇಕೆನ್ನುವ ಪಾಟೀಲ ಪುಟ್ಟಪ್ಪ ಮಂಡಿಸಿದ ಗೊತ್ತುವಳಿ ಕೋ. ಚೆನ್ನಬಸಪ್ಪನವರ ಅನುಮೋದನೆ ಪಡೆದು ಸ್ವೀಕೃತವಾಯಿತು. 
ಸರದಾರ ಪಟೇಲ ಪುಟ್ಟಪ್ಪ: ಬಿ. ಎನ್. ದಾತಾರ ನೇತೃತ್ವದಲ್ಲಿ ಮಂಗಳವೀಡು ಶ್ರೀನಿವಾಸರಾವ್, ಕೃಷ್ಣಕುಮಾರ ಕಲ್ಲೂರ, ವೆಂಕಟೇಶ ಮಾಗಡಿ, ವಿನೀತ ರಾಮಚಂದ್ರರಾವ್, ಪಾಟೀಲ ಪುಟ್ಟಪ್ಪ, ಕರ್ನಾಟಕ ಏಕೀಕರಣಕ್ಕೋಸುಗ ಒತ್ತಾಯಿಸಲು ಮೈಸೂರಲ್ಲಿ ಸರದಾರ ಪಟೇಲರನ್ನು ಭೇಟ್ಟಿ ಮಾಡಿದರು.
ಅಮೇರಿಕೆಗೆ ಪ್ರಯಾಣ: 1949 ರ ಕೊನೆಯಲ್ಲಿ ಪತ್ರಿಕೋದ್ಯಮ ಅಭ್ಯಾಸಕ್ಕಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಪ್ರಯಾಣ. ಅಮೇರಿಕೆಯಲ್ಲಿ ವಿಲ್ ಡುರ್ಯಾಂಟ್, ರಾಬರ್ಟ ಹಚಿನ್ಸ್, ಜಸ್ಟೀಸ್ ಫ್ರ್ಯಾಂಕ ಫರ್ಟರ್, ಐನ್‍ಸ್ಟಾಯಿನ್ ಮೊದಲಾದವರ ಭೇಟ್ಟಿ. ಬರುವಾಗ ಹಡಗಿನಲ್ಲಿ ಸರ್ ಎಂಥನೀ ಈಡನ್‍ರ ಸಂದರ್ಶನ. 
ನವಯುಗ ಪತ್ರಿಕೆ ಸಂಪಾದಕತ್ವ: 1953 ರಲ್ಲಿ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ `ನವಯುಗ’ ದಿನಪತ್ರಿಕೆಯ ಸಂಪಾದಕತ್ವ. ಸಂಪಾದಕತ್ವ. ಏಕೀಕರಣ ವಿಚಾರಕ್ಕೆ ಬಹುದೊಡ್ಡ ಚಾಲನೆ ಒದಗಿಸಿದರು. ಅದರಗುಂಚಿ ಶಂಕರಗೌಡರ ಉಪವಾಸ, ಹುಬ್ಬಳ್ಳಿಯಲ್ಲಿ ಗೋಲಿಬಾರ ಸುದ್ದಿ ಅಮೇರಿಕೆಯ ನ್ಯೂಯಾರ್ಕ್ ಟೈಮ್ಸ್‍ದಲ್ಲಿ ಬಂದಿತು. 
ಪ್ರಪಂಚ’ದ ಆರಂಭ: 1954 ಮಾರ್ಚ 10 ರಂದು ಬಂಡವಾಳ ಯಾವುದೂ ಇಲ್ಲದೆ ಕೇವಲ ಲೆಕ್ಕಣಿಕೆಯಿಂದ `ಪ್ರಪಂಚ’ ವಾರ ಪತ್ರಿಕೆಯ ಆರಂಭ. ಡಿವಿಜಿ. ಆಗ ಕಳಿಸಿದ ಸಂದೇಶದಲ್ಲಿ ಹೇಳಿದರು `ನೀವು ಜೀವಂತ ತಂತಿ ಯಾವುದನ್ನಾದರೂ ಆಕರ್ಷಕವಾಗಿ ಬರೆಯಬಲ್ಲಿರಿ’ 
ಪ್ರಥಮ ಕನ್ನಡ ಡೈಜಿಸ್ಟ್: 1956 ಅಗಸ್ಟ್ ನೂತನ ಪ್ರಥಮ ಡೈಜಿಸ್ಟ್ `ಸಂಗಮ’ ಪ್ರಕಟಿಸಿದರು. ಜನರಲ್ ಕಾರಿಯಪ್ಪ ಡೈಜಿಸ್ಟ್ ಅವರಿಂದ ಬಿಡುಗಡೆ ಕರ್ನಾಟಕ 
ಮೆಡಿಕಲ್: ಹುಬ್ಬಳ್ಳಿ ಸರಕಾರಿ ವೈದ್ಯಕೀಯ ಕಾಲೇಜಿಗೆ `ಕರ್ನಾಟಕ ಮೆಡಿಕಲ್ ಕಾಲೇಜು’ ಎಂದು ಕಾಲೇಜು ಹೆಸರು ಕೊಡಿಸಿದುದು 1958. ವಿಶ್ವವಾಣಿ ದಿನಪತ್ರಿಕೆ : `ವಿಶ್ವವಾಣಿ’ ಪತ್ರಿಕೆಯನ್ನು ಅಗಸ್ಟ್ 31, 1959 ರಲ್ಲಿ ಆರಂಭಿಸಿದರು. 
ಕ.ವಿ.ವಿ. ಸಿಂಡಿಕೇಟ್ ಸದಸ್ಯರು: 1961 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಿನೇಟ್ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆ.
ರಾಜ್ಯಸಭೆಯ ಸದಸ್ಯತ್ವ: 1962 ಮಾರ್ಚನಲ್ಲಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾದರು. ಸದಸ್ಯತ್ವ 1974ರವರೆಗೆ ಇತ್ತು.
ಕ.ವಿ.ವ.ಸಂಘದ ಅಧ್ಯಕ್ಷ: ಕರ್ನಾಟಕದ ಪ್ರಥಮ ಹಾಗೂ ಪ್ರಮುಖ ಸಾಂಸ್ಕೃತಿಕ ಸಂಸ್ಥೆ ಧಾರವಾಡದ ಕರ್ನಾಟಕ ಅಧ್ಯಕ್ಷತೆ. ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ 1967 ರಲ್ಲಿ ಆಯ್ಕೆಯಾದರು. ಅಲ್ಲಿಂದ ಇಲ್ಲಿಯವರೆಗೆ ಸತತವಾಗಿ ಅಧ್ಯಕ್ಷರಾಗಿದ್ದಾರೆ. 
ವಿದೇಶ ಯಾತ್ರೆ: ಪಶ್ಚಿಮ ಜರ್ಮನಿ, ಬ್ರಿಟಿಶ್ ಸರಕಾರಗಳ ಆಮಂತ್ರಣದ ಮೇರೆಗೆ 1965 ರಲ್ಲಿ ಆ ದೇಶಗಳಿಗೆ ಸಂದರ್ಶನ. 1988 ರಲ್ಲಿ ಸೋವಿಯತ್ ಸರಕಾರದ ಆಮಂತ್ರಣದ ಮೇರೆಗೆ ರಶ್ಯಾಕ್ಕೆ ಭೇಟಿ. 
ಗೋಕಾಕ ವರದಿ: 1982 ರಲ್ಲಿ ಗೋಕಾಕ ವರದಿಯ ಬಗೆಗೆ ನಡೆದ ಹೋರಾಟದಲ್ಲಿ ನಾಯಕತ್ವ ವಹಿಸಿ ರಾಜ್ಯವ್ಯಾಪಿ ಹೋರಾಟ. ಆಂದೋಲನ, ಸಂಘಟನೆ, ಸರಕಾರ ಗೋಕಾಕ ವರದಿಯನ್ನು ಒಪ್ಪುವಂತೆ ಮಾಡಿದರು. 
ಕನ್ನಡ ಕಾವಲು: 1985 ರಲ್ಲಿ ಕರ್ನಾಟಕ ಸರಕಾರವು ಕನ್ನಡ ಕಾವಲು ಹಾಗೂ ಗಡಿ ಸಲಹಾ ಸಮಿತಿಯನ್ನು ಸಮಿತಿ. ರಚಿಸಿ, ಅಧ್ಯಕ್ಷರನ್ನಾಗಿ ಮಾಡಿದರು. ಕಛೇರಿಗಳಲ್ಲಿ ಕನ್ನಡ ತರುವ ಪ್ರಯತ್ನಕ್ಕೆ ಭಾರೀ ಯಶಸ್ಸು. 
ಬರೆದ ಪುಸ್ತಕಗಳು ಪುಸ್ತಕಗಳು: `ನನ್ನದು ಈ ಕನ್ನಡ ನಾಡು’ `ನಮ್ಮದು ಈ ಭರತ ಭೂಮಿ’ `ಕರ್ನಾಟಕದ ಕಥೆ’ `ಸೋವಿಯತ್ ದೇಶ ಕಂಡೆ’ `ಸಾವಿನ ಮೇಜವಾನಿ’ ` ಗವಾಕ್ಷ ತೆರೆಯಿತು’ ` ಶಿಲಾಬಾಲಿಕೆ ನುಡಿದಳು’ `ಕಲಾ ಸಂಗಮ’ `ಬೆಳೆದ ಬದುಕು’ ` ಭಾರತದ ಬೆಳಕು’ `ನೆಲದ ನಕ್ಷತ್ರಗಳು’ `ಸರ್ ಸಾಹೇಬರು’ `ಹೊಸಮನಿ ಸಿದ್ದಪ್ಪ’ `ಪ್ರಪಂಚ ಪಟುಗಳು’ `ನಮ್ಮ ಜನ ನಮ್ಮ ದೇಶ’ `ಈಗ ಹೊಸದನ್ನು ಕಟ್ಟೋಣ’ `ಪಾಪು ಪ್ರಪಂಚ’ `ಬದುಕುವ ಮಾತು’ `ಅಮೃತವಾಹಿನಿ’ `ವ್ಯಕ್ತಿ ಪ್ರಪಂಚ’ `ಸುವರ್ಣ ಕರ್ನಾಟಕ’ ಮುಂತಾದ 50 ಕ್ಕಿಂತ ಹೆಚ್ಚು ಕೃತಿಗಳು.
ಸಂದ ಪ್ರಶಸ್ತಿಗಳು: ರಾಜ್ಯೋತ್ಸವ ಪ್ರಶಸ್ತಿ 1976, ಟಿ.ಎಸ್.ಆರ್. ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಡಿ.ಲಿಟ್ ಗೌರವ, ಹಂಪಿ ವಿಶ್ವವಿದ್ಯಾಲಯದ `ನಾಡೋಜ’ ಪ್ರಶಸ್ತಿ, ಟಿಳಕ ಮೊಹರೆ ಪ್ರಶಸ್ತಿ, ಮಾಳವಾಡ ಪ್ರಶಸ್ತಿ, ವಜ್ರಕುಮಾರ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಆದಿಚುಂಚನಗಿರಿ ಪ್ರಶಸ್ತಿ, ಭಾಲ್ಕಿ ಚೆನ್ನಬಸವೇಶ್ವರ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕರ್ನಾಟಕ ಚೂಡಾಮಣಿ ಪ್ರಶಸ್ತಿ ಹಾಗೂ ನೃಪತುಂಗ ಪ್ರಶಸ್ತಿ ಪುರಸ್ಕೃತರು.
===========================================
ಸ್ಲಗ್: ಹಿರಿಯ ಪತ್ರಕರ್ತ/ ಸಾಹಿತಿ ಪಾಟೀಲ್ ಪುಟ್ಟಪ್ಪ ಅವರ ಇತಿಹಾಸ
ಫಾರ್ಮೆಟ: ಆಬಿಚರಿ
ಆಂಕರ್…
=============================================
ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ಗಣ್ಯರಾದ ಪಾಟೀಲ ಪುಟ್ಟಪ್ಪನವರು `ಪಾಪು’ ಎಂದೇ ಪ್ರಸಿದ್ಧರಾಗಿದ್ದಾರೆ. ಇವರು ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮದಲ್ಲಿ ಸಿದ್ಧಲಿಂಗಪ್ಪ-ಮಲ್ಲಮ್ಮ ದಂಪತಿಗಳಿಗೆ ೧೪-೧-೧೯೨೨ರಲ್ಲಿ ಜನಿಸಿದರು. ಶಾಲಾ ಶಿಕ್ಷಣವನ್ನು ಹಲಗೇರಿ, ಬ್ಯಾಡಗಿ, ಚಿತ್ರದುರ್ಗ, ಹಾವೇರಿಗಳಲ್ಲಿ ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಪೂರೈಸಿ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಎಂ.ಎಂ.ಬಿ. ವ್ಯಾಸಂಗ ಮಾಡಿದರು. ೧೯೪೯ರಲ್ಲಿ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎಫ್.ಪಿ ಪದವಿ ಗಳಿಸಿದರು.
ವಿಶಾಲ ಕರ್ನಾಟಕ ಪತ್ರಿಕೆ ಸಂಪಾದಕರಾಗಿ ಕೆಲಸಮಾಡಿದ ಪುಟ್ಟಪ್ಪನವರು ಕ್ಯಾಲಿಫೋರ್ನಿಯಾಗೆ ಹೋಗಿ ಬಂದ ಮೇಲೆ ನವಯುಗ ಮಾಸಪತ್ರಿಕೆ ಸಂಪಾದಕರಾದರು. ಆಮೇಲೆ ೧೯೫೪ರಲ್ಲಿ ಪ್ರಪಂಚ ವಾರಪತ್ರಿಕೆಯನ್ನು ತಾವೇ ಹುಟ್ಟು ಹಾಕಿದರು. ೧೯೫೭ರಲ್ಲಿ ಸಂಗಮ ಎಂಬ ಕನ್ನಡ ಡೈಜಸ್ಟನ್ನು ಪ್ರಾರಂಭಿಸಿದರು. ೧೯೫೯ರಲ್ಲಿ ವಿಶ್ವವಾಣಿ ದಿನಪತ್ರಿಕೆಯನ್ನೂ ಮನೋರಮಾ ಎಂಬ ಚಲನಚಿತ್ರ ಮಾಸಿಕವನ್ನೂ ಆರಂಭಿಸಿದರು. ಹೀಗೆ ಪತ್ರಿಕೆಗಳನ್ನು ಹುಟ್ಟು ಹಾಕುತ್ತಲೂ ನಡೆಸುತ್ತಲೂ ಪತ್ರಿಕೋದ್ಯಮದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದರು. ಇದರ ಜೊತೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ, ಅನಂತರ ಕನ್ನಡಪ್ರಭ ಪತ್ರಿಕೆಯಲ್ಲಿ ಅಂಕಣಕಾರರಾಗಿ ಮಿಂಚಿದರು. ಹೀಗೆ ಪತ್ರಿಕಾ ಸಂಪಾದಕರಾಗಿ ನಾಡಿನ ಮನೆಮಾತಾದರು. ಇದಲ್ಲದೆ ಇತರ ಸಂಸ್ಥೆಗಳಲ್ಲಿ ಸಾರ್ವಜನಿಕ ರಂಗಗಳಲ್ಲಿ ದುಡಿದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದರು. ರಾಜ್ಯ ಸಭೆಯ ಸದಸ್ಯರಾಗಿ (೧೯೬೨-೭೧) ಧಾರವಾಡ ಮತ್ತು ಕರ್ನಾಟಕದ ಸಮಸ್ಯೆಗಳಿಗೆ ಧ್ವನಿಯಾದರು. ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ೧೯೬೭ ರಿಂದ ಅಧ್ಯಕ್ಷರಾಗಿದ್ದಾರೆ. ಗೋಕಾಕ ವರದಿ ಜಾರಿಗೆ ಬರಲು ನಡೆದ ಚಳುವಳಿಯ ನೇತೃತ್ವ ವಹಿಸಿದ್ದರು. ಕರ್ನಾಟಕ ಸರಕಾರ ಕನ್ನಡ ಕಾವಲು ಮತ್ತು ಗಡಿಸಲಹಾ ಸಮಿತಿ ರಚಿಸಿ ಇವರನ್ನು ಅದಕ್ಕೆ ಅಧ್ಯಕ್ಷರನ್ನಾಗಿ ಮಾಡಿದಾಗ ಕನ್ನಡ ಅನುಷ್ಠಾನಕ್ಕೆ ಇವರು ಶ್ರಮಿಸಿದರು. ೧೯೯೨ರಲ್ಲಿ ಅಖಿಲ ಕರ್ನಾಟಕ ಹೋರಾಟ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿದ್ದರು. ಹೀಗೆ ನಾನಾ ರಂಗಗಳಲ್ಲಿ ಸೇವೆ ಸಲ್ಲಿಸಿರುವ ಇವರಿಗೆ ಹಲವಾರು ಪ್ರಶಸ್ತಿ ಗೌರವಗಳು  ಸಂದಿವೆ.
ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ೧೯೯೪ರಲ್ಲಿ ಡಿ’ಲಿಟ್’ ಪದವಿ ಕೊಟ್ಟಿದೆ. ಕರ್ನಾಟಕ ಸರಕಾರ ನೀಡುವ ಟಿ.ಎಸ್.ಆರ್.ಪ್ರಶಸ್ತಿ ಇವರಿಗೆ ೧೯೯೪ರಲ್ಲಿ ಲಭಿಸಿದೆ. ೧೯೭೬ರಲ್ಲಿ ರಾಜ್ಯ ಪ್ರಶಸ್ತಿ, ೧೯೯0 ವಿಶ್ವೇಶ್ವರಯ್ಯ ಭಾರತ ಜ್ಯೋತಿ ಪ್ರಶಸ್ತಿ, ೧೯೯೯ರಲ್ಲಿ ಹುಬ್ಬಳ್ಳಿಯ ತಿಲಕ್ ಮೊಹರೆ ಪ್ರಶಸ್ತಿ, ೧೯೯೬ರಲ್ಲಿ ಹಂಪಿ ವಿಶ್ವವಿದ್ಯಾಲದ ನಾಡೋಜ ಗೌರವ, ೨00೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ೨00೨ರಲ್ಲಿ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ, ‘ಕನ್ನಡ  ಸಾಹಿತ್ಯ ಪರಿಷತ್ತಿನ  ‘ನೃಪತುಂಗ’ ಪ್ರಶಸ್ತಿ ಇತ್ಯಾದಿ ಲಭಿಸಿವೆ. ಬೆಳಗಾವಿಯಲ್ಲಿ ನಡೆದ ೭0ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ ೨00೩ರಲ್ಲಿ ದೊರೆಕಿತು.
ಪಾಟೀಲ ಪುಟ್ಟಪ್ಪನವರು ಕೇವಲ ಪತ್ರಕರ್ತರಲ್ಲ ಗ್ರಂಥಕರ್ತರೂ ಹೌದು. ಅವರು ಬರೆದ ಗ್ರಂಥಗಳಲ್ಲಿ ಕೆಲವು ಹೀಗಿವೆ:
ನನ್ನದು ಈ ಕನ್ನಡ ನಾಡು(೧೯೭೫), ನಮ್ಮದು ಈ ಭರತಭೂಮಿ(೧೯೭೭), ಕರ್ನಾಟಕ ಕಥೆ(೧೯೯೧), ಸೋವಿಯತ್ ದೇಶ ಕಂಡೆ(೧೯೪೪), ಗವಾಕ್ಷಿ ತೆರೆಯಿತು(೧೯೭೪), ಶಿಲಾಬಾಲಿಕೆ ನುಡಿದಳು(೧೯೭೪), ನಮ್ಮ ದೇಶ ನಮ್ಮ ಜನ(೧೯೭೩), ಈಗ ಹೊಸದನ್ನು ಕಟ್ಟೋಣ(೧೯೭೫), ಪಾಪು ಪ್ರಪಂಚ(೨000).*ಪಾಟೀಲ ಪುಟ್ಟಪ್ಪನವರ ಇತಿಹಾಸ*
ಜನನ: 14-1-1921 ರಂದು ಹಾವೇರಿ ಜಿಲ್ಲೆಯ ಕುರಬಗೊಂಡ ಗ್ರಾಮ.
ತಂದೆ: ಶ್ರೀ ಸಿದ್ಧಲಿಂಗಪ್ಪ
ತಾಯಿ: ಶ್ರೀಮತಿ ಮಲ್ಲಮ್ಮ.
ವಿದ್ಯಾಭ್ಯಾಸ: ಪ್ರಾಥಮಿಕ ಶಿಕ್ಷಣ, ಹಲಗೇರಿ.
ಇಂಗ್ಲೀಷ ವಿದ್ಯಾಭ್ಯಾಸ : ಬ್ಯಾಡಗಿ, ಹಾವೇರಿ ಹಾಗೂ ಧಾರವಾಡ.
ರಾಷ್ಟ್ರೀಯ ಪ್ರಭಾವ: 1930 ರಲ್ಲಿ `ನಹಿ ರಖನಾ ನಹಿ ರಖನಾ ಅಂಗ್ರೇಜ ಸರಕಾರ’ ಎಂದು ಹೇಳುತ್ತಾ ಮದ್ಯದ ಅಂಗಡಿಗಳ ಮುಂದೆ ಪಿಕೆಟಿಂಗ್ ಮಾಡಿದ್ದು, ಜವಾಹರಲಾಲ್ ನೆಹರೂ ಹುಬ್ಬಳ್ಳಿಗೆ ಬಂದಾಗ ಅವರನ್ನು ನೋಡಿ ಪ್ರಭಾವಿತರಾದದ್ದು. 1930 ರಿಂದ ಸಂಪೂರ್ಣ ಖಾದಿ ಧಾರಣೆ. 1934 ರಲ್ಲಿ ಮಹಾತ್ಮಾ ಗಾಂಧೀಜಿ ಹರಿಜನ ಪ್ರವಾಸ ಕೈಕೊಂಡು ಬ್ಯಾಡಗಿಗೆ ಬಂದಾಗ ಸ್ವಯಂ ಸೇವಕನಾಗಿದ್ದಾಗ ಅವರಿಂದ ಬೆನ್ನು ತಟ್ಟಿಸಿಕೊಂಡ ಅನುಭವ. 1937 ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ. 
ಕಾಲೇಜು: ಕಾಲೇಜು ಶಿಕ್ಷಣ ಧಾರವಾಡದಲ್ಲಿ 1939. ಅದೇ ವರ್ಷ ಉಡುಪಿಯ `ಅಂತರಂಗ’ ಪತ್ರಿಕೆಯಲ್ಲಿ ಶ್ರೀರಂಗ, ಕುವೆಂಪು, ಬೇಂದ್ರೆಯವರ ಮೇಲೆ ಲೇಖನ. 1941 ರಲ್ಲಿ `ನಾನು ಮಾಸ್ತಿಯವರನ್ನು ಕಂಡೆ’ ಎಂಬ ಲೇಖನ, ಮಾಸ್ತಿಯವರಿಂದ ಮೆಚ್ಚುಗೆ ಪಡೆಯಿತು. ಸಿ. ಕೆ. ವೆಂಕಟರಾಮಯ್ಯನವರ `ಅಬ್ರಾಹಂ ಲಿಂಕನ್’ ಕುರಿತು `ಜೀವನ’ ಪತ್ರಿಕೆಯಲ್ಲಿ ಬರೆದ ಲೇಖನಕ್ಕೆ ಪ್ರತಿಯಾಗಿ ವಿ. ಕೃ. ಗೋಕಾಕರು ಪ್ರತಿ ವಿಮರ್ಶೆ ಬರೆದರು. ಬೇಂದ್ರೆಯವರ ನಿಸರ್ಗ ಕವಿತೆಗಳು -ಜೀವನದಲ್ಲಿ ಸುದಿರ್ಘ ಲೇಖನ. ಕರ್ನಾಟಕ ಕಾಲೇಜಿನ ಕರ್ನಾಟಕ ಸಂಘದ ಕಾರ್ಯದರ್ಶಿ 1942.
ಚಲೇಜಾವ್ ಚಳುವಳಿ: 1942 ರಲ್ಲಿ ರಾಷ್ಟ್ರೀಯ ಹೋರಾಟದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಸಂಘಟನೆ ಮಾಡಿದ `ಆಪಾದನೆಗಾಗಿ’ ಅವರನ್ನು ಕರ್ನಾಟಕ ಕಾಲೇಜಿನಿಂದ ಹೊರಹಾಕಿದರು. ಒಂದು ವರ್ಷ ಕಾಲ ಭೂಗತ ಕಾರ್ಯಕರ್ತರಾಗಿ ಕೆಲಸ. 
ಕಾನೂನು ಕಾಲೇಜು: 1943 ರಲ್ಲಿ ಬೆಳಗಾವಿ ಕಾನೂನು ಕಾಲೇಜಿಗೆ ಸೇರ್ಪಡೆ. 1945 ರಲ್ಲಿ ಕಾನೂನು ಪದವೀಧರ. 
ಮದುವೆ: 1945 ರಲ್ಲಿ ನವೆಂಬರ್ 11 ರಂದು ವಿಜಾಪುರದ ಡಾ. ಬಿ. ಎಂ. ಪಾಟೀಲರ ಮಗಳು ಇಂದುಮತಿಯವರೊಡನೆ.
ಮಕ್ಕಳು: ಮುಂಜುಳಾ, ಶೈಲಜಾ, ಅಶೋಕ.
ಮುಂಬಯಿ ವಾಸ್ತವ್ಯ: 1945 ರಲ್ಲಿ ಆರಂಭಕ್ಕೆ ಹೈಕೋರ್ಟಿನಲ್ಲಿ ವಕಾಲತ್ತು ಮಾಡುವ ಉದ್ದೇಶದಿಂದ ಮುಂಬಯಿಗೆ ಪ್ರಯಾಣ. ಅಲ್ಲಿ ನಿವೃತ್ತ ಜಸ್ಟೀಸ್ ಜಹಗೀರದಾರರ ಛೇಂಬರಿನಲ್ಲಿ, ಡಾ. ತೆಂಡೂಲಕರರು ಸರದಾರ ಪಟೇಲರ ಭೇಟ್ಟಿ ಮಾಡಿಸಿದರು. ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವುದನ್ನು ತಿಳಿಸಿದರು. ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಸರದಾರ ಪಟೇಲರು ಹೇಳಿದರು. ಫ್ರೀಪ್ರೆಸ್ ಜರ್ನಲ್. ಬಾಂಬೈ ಕ್ರಾನಿಕಲ್ ಪತ್ರಿಕೆಗಳಿಗೆ ಕರ್ನಾಟಕ ಏಕೀಕರಣ ಕುರಿತು ಲೇಖನ. ಕೆ. ಸದಾನಂದರು `ಫ್ರೀ ಪ್ರೆಸ್’ ಸೇರುವಂತೆ ಒತ್ತಾಯಪಡಿಸಿದರು. ಕೆ. ಎಫ್. ಪಾಟೀಲ ಮೊದಲಾದ ಸ್ನೇಹಿತರು ಹುಬ್ಬಳ್ಳಿಯಲ್ಲಿ ತಾವು ಆರಂಭಿಸಬೇಕೆಂದ ಪತ್ರಿಕೆಗೆ ಸಂಪಾದಕನಾಗಬೇಕೆಂದು ಹೇಳಿದರು.
ಕನ್ನಡಿಗರ ಮಹಾಧಿವೇಶನ: ದಾವಣಗೆರೆಯಲ್ಲಿ ಕನ್ನಡಿಗರ ಪ್ರಥಮ ಮಹಾಧಿವೇಶನ ಕೂಡಿಸುವ ಕಾರ್ಯ. ಕಾರ್ಯದರ್ಶಿಯಾಗಿ ಮಹಾಧಿವೇಶನ ಕೆಲಸ ಮಾಡಿದ್ದುದು, 1946 ಅಗಸ್ಟ್ ಮುಂಬಯಿ ಮಂತ್ರಿ ಎಂ. ಪಿ. ಪಾಟೀಲರು ಅಧ್ಯಕ್ಷರಾಗಿದ್ದರು. ಮದ್ರಾಸ್ ಮಂತ್ರಿ ಕೆ. ಆರ್. ಕಾರಂತರು ಉದ್ಘಾಟಕರಾಗಿದ್ದರು. 
ಪತ್ರಿಕೋದ್ಯಮ: ಹಾವೇರಿಯಲ್ಲಿ ಓದುತ್ತಿರುವಾಗ `ನಮ್ಮ ನಾಡು’ ಕೈ ಬರಹದ ಪತ್ರಿಕೆಯ ಪ್ರಕಟಣೆ 1936. ವಾರ ಪತ್ರಿಕೆ `ವಿಶಾಲ ಕರ್ನಾಟಕ’ದ ಸಂಪಾದಕತ್ವ ಅನಂತರ ಅದು ಅಗಸ್ಟ್ 9, 1947 ರಂದು ದಿನಪತ್ರಿಕೆಯಾಯಿತು. 
ಏಕೀಕರಣ: 1949 ರ ಆರಂಭದಲ್ಲಿ ಕಲ್ಬುರ್ಗಿಯಲ್ಲಿ ಕರ್ನಾಟಕ ಏಕೀಕರಣ ಪರಿಷತ್ತು ಮೈಸೂರು ಸಹಿತಿ ಕರ್ನಾಟಕವಾಗಬೇಕೆನ್ನುವ ಪಾಟೀಲ ಪುಟ್ಟಪ್ಪ ಮಂಡಿಸಿದ ಗೊತ್ತುವಳಿ ಕೋ. ಚೆನ್ನಬಸಪ್ಪನವರ ಅನುಮೋದನೆ ಪಡೆದು ಸ್ವೀಕೃತವಾಯಿತು. 
ಸರದಾರ ಪಟೇಲ ಪುಟ್ಟಪ್ಪ: ಬಿ. ಎನ್. ದಾತಾರ ನೇತೃತ್ವದಲ್ಲಿ ಮಂಗಳವೀಡು ಶ್ರೀನಿವಾಸರಾವ್, ಕೃಷ್ಣಕುಮಾರ ಕಲ್ಲೂರ, ವೆಂಕಟೇಶ ಮಾಗಡಿ, ವಿನೀತ ರಾಮಚಂದ್ರರಾವ್, ಪಾಟೀಲ ಪುಟ್ಟಪ್ಪ, ಕರ್ನಾಟಕ ಏಕೀಕರಣಕ್ಕೋಸುಗ ಒತ್ತಾಯಿಸಲು ಮೈಸೂರಲ್ಲಿ ಸರದಾರ ಪಟೇಲರನ್ನು ಭೇಟ್ಟಿ ಮಾಡಿದರು.
ಅಮೇರಿಕೆಗೆ ಪ್ರಯಾಣ: 1949 ರ ಕೊನೆಯಲ್ಲಿ ಪತ್ರಿಕೋದ್ಯಮ ಅಭ್ಯಾಸಕ್ಕಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಪ್ರಯಾಣ. ಅಮೇರಿಕೆಯಲ್ಲಿ ವಿಲ್ ಡುರ್ಯಾಂಟ್, ರಾಬರ್ಟ ಹಚಿನ್ಸ್, ಜಸ್ಟೀಸ್ ಫ್ರ್ಯಾಂಕ ಫರ್ಟರ್, ಐನ್‍ಸ್ಟಾಯಿನ್ ಮೊದಲಾದವರ ಭೇಟ್ಟಿ. ಬರುವಾಗ ಹಡಗಿನಲ್ಲಿ ಸರ್ ಎಂಥನೀ ಈಡನ್‍ರ ಸಂದರ್ಶನ. 
ನವಯುಗ ಪತ್ರಿಕೆ ಸಂಪಾದಕತ್ವ: 1953 ರಲ್ಲಿ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ `ನವಯುಗ’ ದಿನಪತ್ರಿಕೆಯ ಸಂಪಾದಕತ್ವ. ಸಂಪಾದಕತ್ವ. ಏಕೀಕರಣ ವಿಚಾರಕ್ಕೆ ಬಹುದೊಡ್ಡ ಚಾಲನೆ ಒದಗಿಸಿದರು. ಅದರಗುಂಚಿ ಶಂಕರಗೌಡರ ಉಪವಾಸ, ಹುಬ್ಬಳ್ಳಿಯಲ್ಲಿ ಗೋಲಿಬಾರ ಸುದ್ದಿ ಅಮೇರಿಕೆಯ ನ್ಯೂಯಾರ್ಕ್ ಟೈಮ್ಸ್‍ದಲ್ಲಿ ಬಂದಿತು. 
ಪ್ರಪಂಚ’ದ ಆರಂಭ: 1954 ಮಾರ್ಚ 10 ರಂದು ಬಂಡವಾಳ ಯಾವುದೂ ಇಲ್ಲದೆ ಕೇವಲ ಲೆಕ್ಕಣಿಕೆಯಿಂದ `ಪ್ರಪಂಚ’ ವಾರ ಪತ್ರಿಕೆಯ ಆರಂಭ. ಡಿವಿಜಿ. ಆಗ ಕಳಿಸಿದ ಸಂದೇಶದಲ್ಲಿ ಹೇಳಿದರು `ನೀವು ಜೀವಂತ ತಂತಿ ಯಾವುದನ್ನಾದರೂ ಆಕರ್ಷಕವಾಗಿ ಬರೆಯಬಲ್ಲಿರಿ’ 
ಪ್ರಥಮ ಕನ್ನಡ ಡೈಜಿಸ್ಟ್: 1956 ಅಗಸ್ಟ್ ನೂತನ ಪ್ರಥಮ ಡೈಜಿಸ್ಟ್ `ಸಂಗಮ’ ಪ್ರಕಟಿಸಿದರು. ಜನರಲ್ ಕಾರಿಯಪ್ಪ ಡೈಜಿಸ್ಟ್ ಅವರಿಂದ ಬಿಡುಗಡೆ ಕರ್ನಾಟಕ 
ಮೆಡಿಕಲ್: ಹುಬ್ಬಳ್ಳಿ ಸರಕಾರಿ ವೈದ್ಯಕೀಯ ಕಾಲೇಜಿಗೆ `ಕರ್ನಾಟಕ ಮೆಡಿಕಲ್ ಕಾಲೇಜು’ ಎಂದು ಕಾಲೇಜು ಹೆಸರು ಕೊಡಿಸಿದುದು 1958. ವಿಶ್ವವಾಣಿ ದಿನಪತ್ರಿಕೆ : `ವಿಶ್ವವಾಣಿ’ ಪತ್ರಿಕೆಯನ್ನು ಅಗಸ್ಟ್ 31, 1959 ರಲ್ಲಿ ಆರಂಭಿಸಿದರು. 
ಕ.ವಿ.ವಿ. ಸಿಂಡಿಕೇಟ್ ಸದಸ್ಯರು: 1961 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಿನೇಟ್ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆ.
ರಾಜ್ಯಸಭೆಯ ಸದಸ್ಯತ್ವ: 1962 ಮಾರ್ಚನಲ್ಲಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾದರು. ಸದಸ್ಯತ್ವ 1974ರವರೆಗೆ ಇತ್ತು.
ಕ.ವಿ.ವ.ಸಂಘದ ಅಧ್ಯಕ್ಷ: ಕರ್ನಾಟಕದ ಪ್ರಥಮ ಹಾಗೂ ಪ್ರಮುಖ ಸಾಂಸ್ಕೃತಿಕ ಸಂಸ್ಥೆ ಧಾರವಾಡದ ಕರ್ನಾಟಕ ಅಧ್ಯಕ್ಷತೆ. ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ 1967 ರಲ್ಲಿ ಆಯ್ಕೆಯಾದರು. ಅಲ್ಲಿಂದ ಇಲ್ಲಿಯವರೆಗೆ ಸತತವಾಗಿ ಅಧ್ಯಕ್ಷರಾಗಿದ್ದಾರೆ. 
ವಿದೇಶ ಯಾತ್ರೆ: ಪಶ್ಚಿಮ ಜರ್ಮನಿ, ಬ್ರಿಟಿಶ್ ಸರಕಾರಗಳ ಆಮಂತ್ರಣದ ಮೇರೆಗೆ 1965 ರಲ್ಲಿ ಆ ದೇಶಗಳಿಗೆ ಸಂದರ್ಶನ. 1988 ರಲ್ಲಿ ಸೋವಿಯತ್ ಸರಕಾರದ ಆಮಂತ್ರಣದ ಮೇರೆಗೆ ರಶ್ಯಾಕ್ಕೆ ಭೇಟಿ. 
ಗೋಕಾಕ ವರದಿ: 1982 ರಲ್ಲಿ ಗೋಕಾಕ ವರದಿಯ ಬಗೆಗೆ ನಡೆದ ಹೋರಾಟದಲ್ಲಿ ನಾಯಕತ್ವ ವಹಿಸಿ ರಾಜ್ಯವ್ಯಾಪಿ ಹೋರಾಟ. ಆಂದೋಲನ, ಸಂಘಟನೆ, ಸರಕಾರ ಗೋಕಾಕ ವರದಿಯನ್ನು ಒಪ್ಪುವಂತೆ ಮಾಡಿದರು. 
ಕನ್ನಡ ಕಾವಲು: 1985 ರಲ್ಲಿ ಕರ್ನಾಟಕ ಸರಕಾರವು ಕನ್ನಡ ಕಾವಲು ಹಾಗೂ ಗಡಿ ಸಲಹಾ ಸಮಿತಿಯನ್ನು ಸಮಿತಿ. ರಚಿಸಿ, ಅಧ್ಯಕ್ಷರನ್ನಾಗಿ ಮಾಡಿದರು. ಕಛೇರಿಗಳಲ್ಲಿ ಕನ್ನಡ ತರುವ ಪ್ರಯತ್ನಕ್ಕೆ ಭಾರೀ ಯಶಸ್ಸು. 
ಬರೆದ ಪುಸ್ತಕಗಳು ಪುಸ್ತಕಗಳು: `ನನ್ನದು ಈ ಕನ್ನಡ ನಾಡು’ `ನಮ್ಮದು ಈ ಭರತ ಭೂಮಿ’ `ಕರ್ನಾಟಕದ ಕಥೆ’ `ಸೋವಿಯತ್ ದೇಶ ಕಂಡೆ’ `ಸಾವಿನ ಮೇಜವಾನಿ’ ` ಗವಾಕ್ಷ ತೆರೆಯಿತು’ ` ಶಿಲಾಬಾಲಿಕೆ ನುಡಿದಳು’ `ಕಲಾ ಸಂಗಮ’ `ಬೆಳೆದ ಬದುಕು’ ` ಭಾರತದ ಬೆಳಕು’ `ನೆಲದ ನಕ್ಷತ್ರಗಳು’ `ಸರ್ ಸಾಹೇಬರು’ `ಹೊಸಮನಿ ಸಿದ್ದಪ್ಪ’ `ಪ್ರಪಂಚ ಪಟುಗಳು’ `ನಮ್ಮ ಜನ ನಮ್ಮ ದೇಶ’ `ಈಗ ಹೊಸದನ್ನು ಕಟ್ಟೋಣ’ `ಪಾಪು ಪ್ರಪಂಚ’ `ಬದುಕುವ ಮಾತು’ `ಅಮೃತವಾಹಿನಿ’ `ವ್ಯಕ್ತಿ ಪ್ರಪಂಚ’ `ಸುವರ್ಣ ಕರ್ನಾಟಕ’ ಮುಂತಾದ 50 ಕ್ಕಿಂತ ಹೆಚ್ಚು ಕೃತಿಗಳು.
ಸಂದ ಪ್ರಶಸ್ತಿಗಳು: ರಾಜ್ಯೋತ್ಸವ ಪ್ರಶಸ್ತಿ 1976, ಟಿ.ಎಸ್.ಆರ್. ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಡಿ.ಲಿಟ್ ಗೌರವ, ಹಂಪಿ ವಿಶ್ವವಿದ್ಯಾಲಯದ `ನಾಡೋಜ’ ಪ್ರಶಸ್ತಿ, ಟಿಳಕ ಮೊಹರೆ ಪ್ರಶಸ್ತಿ, ಮಾಳವಾಡ ಪ್ರಶಸ್ತಿ, ವಜ್ರಕುಮಾರ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಆದಿಚುಂಚನಗಿರಿ ಪ್ರಶಸ್ತಿ, ಭಾಲ್ಕಿ ಚೆನ್ನಬಸವೇಶ್ವರ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕರ್ನಾಟಕ ಚೂಡಾಮಣಿ ಪ್ರಶಸ್ತಿ ಹಾಗೂ ನೃಪತುಂಗ ಪ್ರಶಸ್ತಿ ಪುರಸ್ಕೃತರು.
===========================================
ಸ್ಲಗ್: ಹಿರಿಯ ಪತ್ರಕರ್ತ/ ಸಾಹಿತಿ ಪಾಟೀಲ್ ಪುಟ್ಟಪ್ಪ ಅವರ ಇತಿಹಾಸ
ಫಾರ್ಮೆಟ: ಆಬಿಚರಿ
ಆಂಕರ್…
=============================================
ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ಗಣ್ಯರಾದ ಪಾಟೀಲ ಪುಟ್ಟಪ್ಪನವರು `ಪಾಪು’ ಎಂದೇ ಪ್ರಸಿದ್ಧರಾಗಿದ್ದಾರೆ. ಇವರು ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮದಲ್ಲಿ ಸಿದ್ಧಲಿಂಗಪ್ಪ-ಮಲ್ಲಮ್ಮ ದಂಪತಿಗಳಿಗೆ ೧೪-೧-೧೯೨೨ರಲ್ಲಿ ಜನಿಸಿದರು. ಶಾಲಾ ಶಿಕ್ಷಣವನ್ನು ಹಲಗೇರಿ, ಬ್ಯಾಡಗಿ, ಚಿತ್ರದುರ್ಗ, ಹಾವೇರಿಗಳಲ್ಲಿ ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಪೂರೈಸಿ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಎಂ.ಎಂ.ಬಿ. ವ್ಯಾಸಂಗ ಮಾಡಿದರು. ೧೯೪೯ರಲ್ಲಿ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎಫ್.ಪಿ ಪದವಿ ಗಳಿಸಿದರು.
ವಿಶಾಲ ಕರ್ನಾಟಕ ಪತ್ರಿಕೆ ಸಂಪಾದಕರಾಗಿ ಕೆಲಸಮಾಡಿದ ಪುಟ್ಟಪ್ಪನವರು ಕ್ಯಾಲಿಫೋರ್ನಿಯಾಗೆ ಹೋಗಿ ಬಂದ ಮೇಲೆ ನವಯುಗ ಮಾಸಪತ್ರಿಕೆ ಸಂಪಾದಕರಾದರು. ಆಮೇಲೆ ೧೯೫೪ರಲ್ಲಿ ಪ್ರಪಂಚ ವಾರಪತ್ರಿಕೆಯನ್ನು ತಾವೇ ಹುಟ್ಟು ಹಾಕಿದರು. ೧೯೫೭ರಲ್ಲಿ ಸಂಗಮ ಎಂಬ ಕನ್ನಡ ಡೈಜಸ್ಟನ್ನು ಪ್ರಾರಂಭಿಸಿದರು. ೧೯೫೯ರಲ್ಲಿ ವಿಶ್ವವಾಣಿ ದಿನಪತ್ರಿಕೆಯನ್ನೂ ಮನೋರಮಾ ಎಂಬ ಚಲನಚಿತ್ರ ಮಾಸಿಕವನ್ನೂ ಆರಂಭಿಸಿದರು. ಹೀಗೆ ಪತ್ರಿಕೆಗಳನ್ನು ಹುಟ್ಟು ಹಾಕುತ್ತಲೂ ನಡೆಸುತ್ತಲೂ ಪತ್ರಿಕೋದ್ಯಮದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದರು. ಇದರ ಜೊತೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ, ಅನಂತರ ಕನ್ನಡಪ್ರಭ ಪತ್ರಿಕೆಯಲ್ಲಿ ಅಂಕಣಕಾರರಾಗಿ ಮಿಂಚಿದರು. ಹೀಗೆ ಪತ್ರಿಕಾ ಸಂಪಾದಕರಾಗಿ ನಾಡಿನ ಮನೆಮಾತಾದರು. ಇದಲ್ಲದೆ ಇತರ ಸಂಸ್ಥೆಗಳಲ್ಲಿ ಸಾರ್ವಜನಿಕ ರಂಗಗಳಲ್ಲಿ ದುಡಿದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದರು. ರಾಜ್ಯ ಸಭೆಯ ಸದಸ್ಯರಾಗಿ (೧೯೬೨-೭೧) ಧಾರವಾಡ ಮತ್ತು ಕರ್ನಾಟಕದ ಸಮಸ್ಯೆಗಳಿಗೆ ಧ್ವನಿಯಾದರು. ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ೧೯೬೭ ರಿಂದ ಅಧ್ಯಕ್ಷರಾಗಿದ್ದಾರೆ. ಗೋಕಾಕ ವರದಿ ಜಾರಿಗೆ ಬರಲು ನಡೆದ ಚಳುವಳಿಯ ನೇತೃತ್ವ ವಹಿಸಿದ್ದರು. ಕರ್ನಾಟಕ ಸರಕಾರ ಕನ್ನಡ ಕಾವಲು ಮತ್ತು ಗಡಿಸಲಹಾ ಸಮಿತಿ ರಚಿಸಿ ಇವರನ್ನು ಅದಕ್ಕೆ ಅಧ್ಯಕ್ಷರನ್ನಾಗಿ ಮಾಡಿದಾಗ ಕನ್ನಡ ಅನುಷ್ಠಾನಕ್ಕೆ ಇವರು ಶ್ರಮಿಸಿದರು. ೧೯೯೨ರಲ್ಲಿ ಅಖಿಲ ಕರ್ನಾಟಕ ಹೋರಾಟ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿದ್ದರು. ಹೀಗೆ ನಾನಾ ರಂಗಗಳಲ್ಲಿ ಸೇವೆ ಸಲ್ಲಿಸಿರುವ ಇವರಿಗೆ ಹಲವಾರು ಪ್ರಶಸ್ತಿ ಗೌರವಗಳು  ಸಂದಿವೆ.
ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ೧೯೯೪ರಲ್ಲಿ ಡಿ’ಲಿಟ್’ ಪದವಿ ಕೊಟ್ಟಿದೆ. ಕರ್ನಾಟಕ ಸರಕಾರ ನೀಡುವ ಟಿ.ಎಸ್.ಆರ್.ಪ್ರಶಸ್ತಿ ಇವರಿಗೆ ೧೯೯೪ರಲ್ಲಿ ಲಭಿಸಿದೆ. ೧೯೭೬ರಲ್ಲಿ ರಾಜ್ಯ ಪ್ರಶಸ್ತಿ, ೧೯೯0 ವಿಶ್ವೇಶ್ವರಯ್ಯ ಭಾರತ ಜ್ಯೋತಿ ಪ್ರಶಸ್ತಿ, ೧೯೯೯ರಲ್ಲಿ ಹುಬ್ಬಳ್ಳಿಯ ತಿಲಕ್ ಮೊಹರೆ ಪ್ರಶಸ್ತಿ, ೧೯೯೬ರಲ್ಲಿ ಹಂಪಿ ವಿಶ್ವವಿದ್ಯಾಲದ ನಾಡೋಜ ಗೌರವ, ೨00೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ೨00೨ರಲ್ಲಿ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ, ‘ಕನ್ನಡ  ಸಾಹಿತ್ಯ ಪರಿಷತ್ತಿನ  ‘ನೃಪತುಂಗ’ ಪ್ರಶಸ್ತಿ ಇತ್ಯಾದಿ ಲಭಿಸಿವೆ. ಬೆಳಗಾವಿಯಲ್ಲಿ ನಡೆದ ೭0ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ ೨00೩ರಲ್ಲಿ ದೊರೆಕಿತು.
ಪಾಟೀಲ ಪುಟ್ಟಪ್ಪನವರು ಕೇವಲ ಪತ್ರಕರ್ತರಲ್ಲ ಗ್ರಂಥಕರ್ತರೂ ಹೌದು. ಅವರು ಬರೆದ ಗ್ರಂಥಗಳಲ್ಲಿ ಕೆಲವು ಹೀಗಿವೆ:
ನನ್ನದು ಈ ಕನ್ನಡ ನಾಡು(೧೯೭೫), ನಮ್ಮದು ಈ ಭರತಭೂಮಿ(೧೯೭೭), ಕರ್ನಾಟಕ ಕಥೆ(೧೯೯೧), ಸೋವಿಯತ್ ದೇಶ ಕಂಡೆ(೧೯೪೪), ಗವಾಕ್ಷಿ ತೆರೆಯಿತು(೧೯೭೪), ಶಿಲಾಬಾಲಿಕೆ ನುಡಿದಳು(೧೯೭೪), ನಮ್ಮ ದೇಶ ನಮ್ಮ ಜನ(೧೯೭೩), ಈಗ ಹೊಸದನ್ನು ಕಟ್ಟೋಣ(೧೯೭೫), ಪಾಪು ಪ್ರಪಂಚ(೨000).