ಗುರುವಾರ, ಆಗಸ್ಟ್ 29, 2024
ಪ್ರೀತಿಯ ಉಡುಗೊರೆ
ಮಂಗಳವಾರ, ಆಗಸ್ಟ್ 27, 2024
ವಲಸೆ
ವಲಸೆ
ನಾ ನಿನ್ನ ನೆನೆಸಿಕೊಂಡು ನಿನ್ನನ್ನೇ ನನ್ನ ಮನದಲ್ಲಿ ಅಪ್ಪಿ ಆಲಂಗಿಸಿಕೊಂಡು
ನನ್ನ ಕವನದ ಸಿಹಿಯಾದ ಸಾಲುಗಳನ್ನು ಮತ್ತೆ ಮತ್ತೆ ನೆನೆಸಿಕೊಂಡು
ಒಂದೆರಡು ಪದಗಳ ಮತ್ತೆ ಮತ್ತೆ ಹುಡುಕಿ ಕಿವಿದು ಕೆದಕಿ
ಗೀಚುವ ಹೊತ್ತಲ್ಲಿ ವಲಸೆ ಬಂದಿವೆ ಹಲವು ಪದಗಳು..
ಹೊಸತಾದ ಪದವೇನು ಹೊಸದಾದ ಜೀವವೇನು
ನಯವಾದ ನುಡಿಗಳೇನು ಹೊಸತನದ ಅಮಲೇನು
ನೀ ನನ್ನ ನಾ ನಿನ್ನ ನೋಡುತ್ತಾ ಕುಳಿತಿರಲು
ಮತ್ತದೆ ಪದಗಳು ಮತ್ತೆ ಮತ್ತೆ ಬಂದು ರಾಡಿ ಎಬ್ಬಿಸಿಬಿಟ್ಟಿವೆ..
ಹನಿ ಬಿಂದು
27.08.2024
ಬುಧವಾರ, ಆಗಸ್ಟ್ 21, 2024
ಮೆಲುಕು
ಸೋಮವಾರ, ಆಗಸ್ಟ್ 19, 2024
ಕಟ್ಟಿರುವೆ
ಕಟ್ಟಿದ್ದೆ ರಕ್ಷೆಯನು ಬಿಡಬೇಡ ಎಂದು
ಬಂಧನವು ಅನುದಿನವು ಬಿಡಬಾರದೆಂದು
ಅದೇಕೆ ಹಾಗಾಯ್ತೋ ನೋವು ನೂರಾಯ್ತು
ಕಾಳಜಿ ಕಡಿಮೆಯಾಗಿ ಮನವು ಚೂರಾಯ್ತು
ಮನವು ಮರ್ಕಟವಿಲ್ಲಿ ಇಂದಿನಂತೆ ನಾಳಿಲ್ಲ
ತನುವ ಬಯಸಲು ಜನರಿಗೇನು ಕಮ್ಮಿಯಿಲ್ಲ
ಅಕ್ಕ ತಂಗಿಯ ತೆರದಿ ಕಾಣುವವರಿಲ್ಲ
ಬೇಕೇ ಬೇಕು ತಮಗೆ ಸಿಕ್ಕಿದ್ದ ಅನುಭವಿಸಲಿಕ್ಕೆಲ್ಲ
ಬಾಳು ಚೂರಾಗಿ ಮಾತು ನೀರಾಗಿ ಹೋಗಿತ್ತು
ಕಾಳು ನುಂಗಿದ ಹಕ್ಕಿ ಪರರ ಪಾಲಾಗಿತ್ತು
ಹಾಲು ಮನವದು ಹೋಳು ಹೋಳಾಗಿತ್ತು
ಬಾಳುವೆಯು ಆಸೆ ಮುಗಿಸಿ ಹೊರಡಲನುವಾಗಿತ್ತು
ತಾನು ತನ್ನದು ಎಂದು ಏನಿಹುದು ಜಗದೊಳಗೆ
ಬಂದಾಗ ಬೇರೆಯೇ ಮನೆಯಿಂದ ಹೊರಗೆ
ದೈವ ದೇವರಿಗೆ ಮೊರೆ ಇಡಬೇಕು ಅರೆ ಘಳಿಗೆ
ಇಲ್ಲವಾದರೆ ತುಂಬದು ನಮ್ಮೀ ಮನದ ಜೋಳಿಗೆ
@ಹನಿಬಿಂದು@
19.08.2024
ಚುಟುಕು
ಮಂಗಳವಾರ, ಆಗಸ್ಟ್ 13, 2024
ಕಂದ
ಕಂದನ ಕೈಲಿ ಕಂದನಿದೆ
ಕಂದಗೆ ಕಂದನ ಆಸರೆಯು
ಕಂದನು ಜವಾಬ್ದಾರಿ ಹೊರಲು ಇದೆ
ಕಂದನು ಬೆಳೆದ ಹಿಗ್ಗು ಇದೆ
ಅಜ್ಜಿಯ ಪಟ್ಟವ ಹೊರಲು ಇದೆ
ಅಜ್ಜನ ಹಾಗೆ ಆಡಲಿದೆ
ಮಗುವನು ಕುಣಿಸೋ ತವಕವಿದೆ
ಹಿರಿಯರು ಎನಿಸಿದ ನೋವು ಇದೆ
ಮಗುವಿನ ಮನದ ಮಗಳಾಸೆ
ವಯಸ್ಸು ಆದುದೇ ತಿಳಿಯದ ಕ್ಷಣದಲಿ
ಮದುವೆಯೂ ಮಗುವು ಖುಷಿ ಇರಲಿ
ಬಾಳಿನ ಹಾದಿಯು ಸೊಗವಿರಲಿ
@ಹನಿಬಿಂದು@
14.08.2024