ಶುಕ್ರವಾರ, ಫೆಬ್ರವರಿ 23, 2024

ಇಷ್ಟೇ

ಇಷ್ಟೇ

ನಾನು ಬದುಕಿನಲ್ಲಿ ತುಂಬಾ ನೊಂದಿರುವ ಹೆಣ್ಣು
ಕಂಡಿದ್ದು ಬರೀ ನೋವೇ
ಕಷ್ಟ ಕಷ್ಟದ ಮುಳ್ಳಿನ ಹಾದಿ

ನನಗೆ ಬೇಕಾದದ್ದು ಸ್ವಲ್ಪ ಸಂತೋಷ
ಒಂದಿಷ್ಟು ಹಿಡಿ ಪ್ರೀತಿ
ಅದನ್ನು ನಾನು ಎಲ್ಲರಿಂದ ಬಯಸಲು ಸಾಧ್ಯ ಇಲ್ಲ

ಆರೋಗ್ಯ ಸಮಸ್ಯೆ ಜವಾಬ್ದಾರಿಗಳ ಸವಾರಿ
ಒತ್ತಡ ನಿರ್ವಹಣೆಗೆ ಬೇಕಾದ ಮದ್ದು
ಇದೆಲ್ಲಕ್ಕೂ ಬದುಕಲ್ಲಿ ಯಾರು ಜೊತೆ ಆಗುತ್ತಾರೋ
ಅವರನ್ನು ದೇವರ ಪ್ರಸಾದ ಎಂದು ಸ್ವೀಕರಿಸಿದ ಹೆಣ್ಣು ನಾನು

ಪ್ರಸಾದ ಒಮ್ಮೆ ಮಾತ್ರ ಸ್ವೀಕರಿಸಲು ಸಾಧ್ಯ ಅಲ್ಲವೇ..
ಹಾಗಾಗಿ ನನ್ನ ಹೃದಯದಲ್ಲಿ ನೋವಿದೆ ಆದರೆ
ಮೋಸ ವಂಚನೆ ತಿರಸ್ಕಾರ ಎಂದಿಗೂ ಇಲ್ಲ

ನನ್ನ ಬದುಕು ದೇವರ ಜೊತೆಗೆ
ನಾನು ಕಷ್ಟ ಸುಖ ಹಂಚಿಕೊಳ್ಳುವುದು ಕೂಡ ಆ ದೇವರ ಜೊತೆಗೆ
ಏನಾದರೂ ಬೇಡುವುದು ಸಹ

ಬದುಕಿನಲ್ಲಿ ದೇವರು ಒಳ್ಳೆಯವರನ್ನೆ  ಕೊಡುತ್ತಾರೆ ಅಂದುಕೊಂಡು ಸ್ವೀಕರಿಸಿ ಮೋಸ ಹೋದವಳು ನಾನು
ಒಮ್ಮೆ ಪಡೆದ ನೋವಿಗೆ ಔಷಧಿಗಳ ಮಾಡುವುದೇ ಕೆಲಸ
ಹಾಗಾಗಿ ಮತ್ತೆ ಕೋಮಕ್ಕೆ ಹೋಗಲಾರೆ
ಹೋದರೂ ಬದುಕುವ ಶಕ್ತಿ ನನಗಿಲ್ಲ

ತುಂಬಾ ನಾಜೂಕಿನ ಬದುಕು ಇದು
ಒಮ್ಮೆ ಒಬ್ಬರಿಗೆ ಮಾತು ಕೊಟ್ಟ ಮೇಲೆ ನಿಭಾಯಿಸುವುದು ಧರ್ಮ
ಆದರೆ ಕುಡುಕರ ಜೊತೆ ಮತ್ತು ಸಂಶಯ ಪಿಶಾಚಿಗಳ ಜೊತೆ ಬಾಳು ಸಾಧ್ಯ ಇಲ್ಲ ಎಂದು ಹತ್ತು ವರ್ಷಗಳ ಕಷ್ಟ ನೋವು ಹಾಗೂ ಕಣ್ಣೀರಿನಲ್ಲಿ ಅರಿತೆ

ಮತ್ತೆ ನನಗೆ ಬೇಕಾದದ್ದು ಇಷ್ಟೇ
ಒಂದಷ್ಟು ಖುಷಿ
ಒಂದು ಹಿಡಿ ಪ್ರೀತಿ
@HoneyBindu@

ಬುಧವಾರ, ಫೆಬ್ರವರಿ 21, 2024

ಕ್ಷಣ

ಕ್ಷಣ

ಮೊಗೆ ಮೊಗೆದು ಇರಿಸಿರುವೆ
ಎದೆಯ ಬಟ್ಟಲಿನೊಳಗೆ
ತುಂಬಿ ತುಳುಕುತಿರುವ ಪ್ರೇಮೋದಕ
ನಗೆ ನಗೆಯಲೆ ಬಂದು
ಸೊಗವ ಬಯಸುತಲಿ
ಬಾಳಿನೊಲವಾಗಿ ಗೆಲುವೀವ ಪಾಕ

ಸಗ್ಗಕಿಂತಲು ಮಿಗಿಲು
ನುಗ್ಗಿ ಬಂದಿಹ ಮುದ್ದು
ಉಕ್ಕುಕ್ಕಿ ಧುಮುಕಿದ ಜಲಪಾತ
ಬಗ್ಗು ಬಡಿದಿಹುದಿಂದು
ದ್ವೇಷ ಅಸೂಯೆಯನು
ಸೊಕ್ಕಿ ಬಂದಿಹ ಶುದ್ಧ ಮೋಹಪಾತ

ಝರಿಯಾಗಿ ಹರಿದು
ಮನವೆಲ್ಲ ತಂಪು
ಸುರಪಾನ ಸವಿದಂತೆ ಮತ್ತು
ಮರಿಯ ಮುಖ ನೋಡಿ
ನೋವ ಮರೆವಂತೆ ತಾಯಿ
ಸಗ್ಗದರಮನೆಯ ಹೂ ಮುತ್ತು..
@ಹನಿಬಿಂದು@
22.02.2024

ಗುರುವಾರ, ಫೆಬ್ರವರಿ 15, 2024

ಹರ ಲೀಲೆ

                  ಹರಲೀಲೆ

ಹರಶಿವ ಎನ್ನಲು ವರವನ್ನು ನೀಡುವ
ಪರಶಿವ ಎಂದೂ ಸಂತಸದಿ
ಪರರನ್ನು ಗೌರವ ಸ್ನೇಹದಿ ನೋಡುವ
ನರರನು ಕಾಯುವ ಸುಖ ನೀಡಿ

ಮಕ್ಕಳ ಪೊರೆವ ಈಶನ ಮನದಲ್ಲಿ 
ಕಕ್ಕುಲ ಇರದು ಅನವರತ
ಪಕ್ಕೆಲು ಬಲ್ಲು ಶಕ್ತಿಯ ಕೊಡುತ್ತಲಿ
 ಸಂಕುಲ ಬೆಳೆಸುವ ಅವ  ಸತತ

ನಕ್ಕರೆ ಅವನು ಚಂದಿರನಂತೆ 
ಸಕ್ಕರೆ ಯಂತಹ ಸಿಹಿಯವನು
ಸಿಕ್ಕರೆ ತಪ್ಪು ಬಿಡಲಾರೆನು ಅಂತೆ 
ಮೂರ್ಖರೆ ಕಲಿಯಿರಿ ಪಾಠವನು

ಪ್ರಾಣಿ ಪಕ್ಷಿಗಳ ಕೂಗು ಇಂಪಿನಲು
  ಶಿವನರಾಗವಿದೆ ನೋಡಿದಗೆ 
ಸುಖವನ್ನು ಹಂಚುತನಡೆವ ಜನರೊಳು 
ಸೌಖ್ಯದ ಹಾಡಿದೆ ಹಾಡಿದಗೆ//
@ಹನಿಬಿಂದು@
16.02.2024

ಗುರುವಾರ, ಫೆಬ್ರವರಿ 1, 2024

Leader

It's our leader


The tree which gives shade to all
The word which provokes the nation
It's our leader whom everybody wish to follow
The power which takes India ahead

The light which brightens Bharath
The candle which burns for the nation
The smile which wish to be on every Indians face

The motivation for every soldier
The shining of every workers eyes
The fortune of Indian future

The leader of all the country people
The user of modern technology
The role model of world people
The dream of future India
@HoneyBindu@
31.01.2024