ಶುಕ್ರವಾರ, ನವೆಂಬರ್ 30, 2018

625. ನುಡಿದಂತೆ ನಡೆ

ನುಡಿದಂತೆ ನಡೆ

ಮಾತೆ ಮಿತ್ರ, ಮಾತೆ ಮೃತ್ಯು
ಮಾತೆ ಮಿಥ್ಯ, ಮಾತೆ ಸತ್ಯ...
ಮಾತೆ ಮುತ್ತು, ಮಾತೆ ಮಾಣಿಕ್ಯ!
ಮಾತಿನಿಂದ ಮುತ್ತಾಗು ಮಾತನಾಡುತ...

ವಚನವೀಯುವಾಗ ಪಚನವಾಗುವಂತೆ ಇರಲಿ
ಪರಚಿಕೊಳ್ಳುವಂಥ ವಚನ ಬಾರದಿರಲಿ..
ನಾಚದೆಯೇ ಬದುಕುವಂಥ ಪದಗಳಿರಲಿ
ವಾಚನಕೆ ಯೋಗ್ಯವಾದ ಬರಹವಿರಲಿ..

ಮನದ ಮಾತು ಹರಿಯುತಿರಲಿ
ಒಳಗೆ ಹೊರಗೆ ಒಂದೇ ಇರಲಿ
ತಿವಿಯುವಂತೆ ಹೊರ ಬರದಿರಲಿ
ಶಾಂತಿ ಸಹನೆ ಉಕ್ಕುತಿರಲಿ..

ಬೇಸರಕ್ಕೆ ಸಾಂತ್ವನ ಬೇಕಾಗಿದೆ
ನೇಸರನಿಗೆ ಅಗಾಧ ಶಕ್ತಿ ಇದೆ
ಏನೆ ಇರಲಿ ಏನೆ ಇರಲಿ ಇರಬೇಕಿದೆ
ಹಿಡಿತ ನಮ್ಮ ನಾಲಗೆಯ ವೇಗಕ್ಕೆ ...
@ಪ್ರೇಮ್@

624. ಮಕ್ಕಳ ಕವನ-3

ಬಾರೋ ಕೃಷ್ಣ

ಬಾರೋ ಕೃಷ್ಣ ಗುಡ್ಡದಾಚೆ
ಹೋಗಿ ಆಟವಾಡುವ..
ತಾರೋ ನಮಗೆ ಲೋಟ ತುಂಬ
ಹಣ್ಣಿನ ರಸವಾ...

ಕೇಳ ಬೇಕು ಅಂದವಾದ
ನಿನ್ನ ಕೊಳಲ ಗಾನವಾ..
ನೋಡಬೇಕು ಬಗೆಬಗೆಯ
ಪ್ರಾಣಿ ಪಕ್ಷಿಯಾ..

ಸಾಗಬೇಕು ದೂರದೂರ
ನಿನ್ನ ಹಿಡಿಯಲೂ
ಹೋಗಬೇಕು ನಿತ್ಯ ನಾವು
ಗೋವು ಕಾಯಲೂ...

ಚಿಂತೆಯಿಲ್ಲ ಕಂತೆಯಿಲ್ಲ
ಬೆಣ್ಣೆ ಕದಿಯಲೂ
ನಾನು ನೀನು ಎಲ್ಲರೊಂದೆ
ಮುಂದೆ ಸಾಗಲೂ..

ಆಟದಲ್ಲಿ ಬೇಧವಿಲ್ಲ
ಎಂದೂ ನಮ್ಮಲಿ..
ಜಾತಿ ಮತದ ಹಂಗೇ ಇಲ್ಲ
ಮಕ್ಕಳಾಟದಲೀ...
@ಪ್ರೇಮ್@

623. ನಾನು ಪುಸ್ತಕ

ನಾನು ಪುಸ್ತಕ

ನನ್ನಯ ಓದಿರಿ
ಜ್ಞಾನವ ಗಳಿಸಿರಿ
ಪ್ರಪಂಚ ತಿಳಿಯಿರಿ
ಮಾಹಿತಿ ಹೊಂದಿರಿ..

ಗುರುಗಳ ಸಹಾಯಕ
ನಿಮ್ಮಯ ಪಾಲಕ
ನಿಮ್ಮ ಓದಿಗೆ ಪೂರಕ
ಆನಂದ ದಾಯಕ..

ಹರಿಯದಿರಿ ಎನ್ನ
ಪೂಜಿಸಿ ನನ್ನ
ಬೆಳಗಿರಿ ಜ್ಞಾನ
ಪಡೆಯಿರಿ ಸನ್ಮಾನ..

ಬರೆಯಿರಿ ನನ್ನಲಿ
ಗೀಚಿರಿ ನನ್ನೊಡಲಲಿ
ಬರೆಯುತ ಕಲಿಯಿರಿ
ಓದುತ ನಲಿಯಿರಿ..
@ಪ್ರೇಮ್@
30.11.2018

ಗುರುವಾರ, ನವೆಂಬರ್ 29, 2018

621. ಗಾಳಿಪಟ

ಕಲಿಯಿರಿ

ನಾನಿರುವೆನು ಚಿಕ್ಕ
ನನ್ನ ದಾರವು ಉದ್ದಕ್ಕ
ಪುಟಾಣಿ ಪೋರ
ಕೇಳೆನ್ನ ಜೀವನ ಸಾರ..

ಚಿಕ್ಕವನಾದರೂ ನಾನು
ಎತ್ತರಕೇರುವೆ ತಾನು..
ದಾರವು ನನ್ನಯ ಗೆಳೆಯ
ಇರುವನು ನನ್ನಯ ಸನಿಹ

ಗಾಳಿಪಟವೆನ್ನುವರು ನನಗೆ
ಬದುಕಿಗೆ ನಾನೇ ಹೋಲಿಕೆ
ತಂದೆ ತಾಯಿಯ ನಂಬು
ಕೊಡುವರು ನಿನಗೆ ಇಂಬು..

ನೆಲದಲಿ ಬಿದ್ದ ಕಾಗದ
ಆಕಾಶಕೇರುವೆ ನೋಡದ!!
ಕಷ್ಟವ ಪಟ್ಟರೆ ನೀನೂ
ಏರಿ ಬಿಡಬಲ್ಲೆ ಬಾನು!!
@ಪ್ರೇಮ್@

622.ಗಝಲ್-49

ಗಝಲ್

ಎದ್ದ ಕೂಡಲೇ ಓಡಿ ಬರುವೆನಲ್ಲ ನಿನ್ನ ಬಳಿಗೆ
ನನ್ನೆಲ್ಲಾ ಕಿರಣಗಳ ಮಳೆ ಸುರಿಸುವೆನಲ್ಲ ನಿನ್ನ ಬಳಿಗೆ..

ಗ್ರಹಗಳಿಹವು ಹಲವಾರು ಸುತ್ತುತ್ತಾ ನನ್ನ ಸುತ್ತ
ಎಲ್ಲ ಜೀವಿಗಳ ಬಿಟ್ಟಿರುವೆನಲ್ಲ ನಿನ್ನ ಬಳಿಗೆ..

ನಾ ಕಾಯುತ್ತಾ ಕೆಂಡವಾಗುವೆ ಪ್ರತಿದಿನ
ಪ್ರತಿಕ್ಷಣ ಬಂದು ಕಾಯುತಿಹೆನಲ್ಲ ನಿನ್ನ ಬಳಿಗೆ..

ಮೂರನೆಯವಳಾಗಿ ಸುತ್ತುತಿರುವೆ ನೀ ನನ್ನ
ಮೊದಲನೆಯವಳಂತೆ ಬಂದು ಕಾಣುತಿರುವೆನಲ್ಲ ನಿನ್ನ ಬಳಿಗೆ..

ನನ್ನ ಪ್ರೀತಿಯನೆಲ್ಲ ನಿನಗೆರೆದಿರುವೆ
ಪ್ರೇಮದಿ ಪ್ರತಿ ಬೆಳಗ್ಗೆ ಬರುತಿರುವೆನಲ್ಲ ನಿನ್ನ ಬಳಿಗೆ..?
@ಪ್ರೇಮ್@

ಬುಧವಾರ, ನವೆಂಬರ್ 28, 2018

617.ಗಝಲ್-48

ಗಝಲ್

ನಿನ್ನ ಮುಖ ನನ್ನ ಬಳಿ ಬಂದಾಗ ಖುಷಿಪಟ್ಟೆ
ನಿನ್ನ ಕೈ ಬೆರಳುಗಳು  ನನ್ನ ಸ್ಪರ್ಶಿಸಿದಾಗ ಖುಷಿಪಟ್ಟೆ.

ಕಣ್ಣುಗಳೆರಡು ಮಾತನಾಡುತಲಿದ್ದವು
ಸುರಿವ ಮಳೆ ನಿನ್ನ ನೆನಪ ತಂದಾಗ ಖುಷಿಪಟ್ಟೆ..

ಕಾಮನ ಬಿಲ್ಲಿನ ಬಣ್ಣದಲಿ ನಿನ್ನ ಕಂಡೆ
ಜಾರುವ ಮೋಡದಲಿ ನೀ ಕಂಡಾಗ ಖುಷಿಪಟ್ಟೆ..

ಮುಂಜಾನೆದ್ದು ನಿನ್ನ ಕಿರಣ ನನ್ನೆಡೆ ಬಂತು
ನಿನ್ನ ಬಿಸಿಯಪ್ಪುಗೆ ಸಿಕ್ಕಾಗ ಖುಷಿಪಟ್ಟೆ..

ರಾತ್ರಿ ನೀನಿಲ್ಲವೆಂದು ಬೇಸರವಿತ್ತು
ಚಂದಿರ ನಿನ್ನ ಬೆಳಕ ಪ್ರತಿಬಿಂಬಿಸಿದಾಗ ಖುಷಿಪಟ್ಟೆ..

ಭೂಮಿಗೆ ಸೂರ್ಯನದೇ ಆಸರೆಯೆಂದರು ಜನ,
ನೀ ನಿತ್ಯ ನನ್ನ ನೋಡಲು ಬರುವಾಗ ಖುಷಿಪಟ್ಟೆ.

ರವಿಯೊಲವು ಇಳೆಗಲ್ಲದೆ ಇನ್ನಾರಿಗೆ ಹೇಳು
ನಿನ್ನ ಪ್ರೇಮವ ಕಂಡು ನನ್ನೊಡಲಲಿ ಖುಷಿಪಟ್ಟೆ.
@ಪ್ರೇಮ್@

618. ಗಝಲ್-50

ಸತ್ತವರು ಸಾಯಲಿ ಬದುಕಬೇಕು ನಾವು, ಮರೆತುಬಿಡು ಜಗವ
ಕುದಿವವರು ಕುದಿಯಲಿ ಬಾಳಬೇಕು   ಗೆದ್ದು ಸಾವು, ಮರೆತುಬಿಡು ಜಗವ..

ಅಬಲೆಯೆನಬೇಡ ನಿನ್ನ, ನೀನೂ ಸಬಲೆ
ಬಲಶಾಲಿಗಳ ಜೊತೆ ಹೋರಾಡಿ ಬದುಕಬೇಕು ಇಡುತ ಕಾವು, ಮರೆತುಬಿಡು ಜಗವ...

ಮನದ ನೋವುಗಳೆಲ್ಲ ಮನದೊಳಗೇ ಇರಲಿ..
ಮರೆತು ಬದುಕಬೇಕು ತನ್ನೊಳಗಿನ ನೋವು, ಮರೆತುಬಿಡು ಜಗವ..

ಭೂಮಿಗೆ ಸೂರ್ಯನಿರುವಂತೆ ಹಣೆಗೆ ಸಿಂಧೂರವು
ಹೆಣ್ಣಿರುವುದು ತಿನ್ನಲಿಕ್ಕಲ್ಲ ಮಾವು, ಮರೆತುಬಿಡು ಜಗವ..

ತೋರಿಸು ಶಕ್ತಿಯ, ನಡೆ ನೀತಿ ಮಾರ್ಗದಿ,
ಸಾಧಿಸು ಛಲದಿ, ಮಾಡಿದಂತೆ ಪಲಾವು, ಮರೆತುಬಿಡು ಜಗವ...

ಆಡುವವರು ಏನಾದರೂ ಆಡಿಕೊಳ್ಳಲಿ,
ನಾಲಿಗೆಗಿಲ್ಲ ಮೂಳೆ, ಬೆಳೆ ಪ್ರತಿ ಮುಂಜಾವು, ಮರೆತುಬಿಡು ಜಗವ...

ಸಾಧಿಸಲೆಂದೇ ಧರೆಗೆ ಬಂದಿಹೆವು ನಾವು
ಪೂರೈಸಬೇಕು ಪ್ರೇಮದಿ ನಮ್ಮ ಕಾರ್ಯವು, ಮರೆತುಬಿಡು ಜಗವ...
@ಪ್ರೇಮ್@

620. ದೇವರೂ ಕಲೆಗಾರ

ದೇವರೂ ಕಲೆಗಾರ

ದೇವರೂ ಕುಂಚ ಹಿಡಿದ ಚಿತ್ರಗಾರ
ಗೆರೆಗಳಲಿ ಕಲೆ ಅರಳಿಸುತಲಿ
ಬಣ್ಣ ತುಂಬೋ ಕಲೆಗಾರ..
ತನ್ನ ಗೆರೆಗಳ ನಡುವಿನಲಿ
ತುಂಬಿಹನು ಬಣ್ಣಗಳನು
ಗಂಡು ನವಿಲಿನ ಗರಿಗಳಲಿ,
ಮರದ ತುದಿಯ ಎಲೆಗಳಲಿ..
ಸೂರ್ಯ ಉದಯಿಸೊ ಹೊತ್ತಿನಲಿ..
ಮಾತು ಮರೆಸೋ ಮೌನದಲಿ..
ಗಿಡದ ಹೂವಿನ ದಳಗಳಲಿ..
ಮರದ ಎಲೆಗಳ ನೆರಳಿನಲಿ..
ಹರಿವ ನೀರಿನ ರಭಸದಲಿ
ನಲಿವ ಕಡಲ ತೆರೆಗಳಲಿ..
ಹಾರಿ ಕುಣಿವ ಮೊಲಗಳಲಿ..
ನೆಗೆಯುತಿರುವ ಜಿಂಕೆಯಲಿ..
ತಳುಕಿ ಬಳುಕುವ ಹೆಣ್ಣಿನಲಿ..
ನೋಟ ನೋಡುವ ಕಣ್ಣಿನಲಿ..
ವನದ ಮೂಲೆಯ ಪೊದರಿನಲಿ..
ಹಸಿರು ಗಿರಿಯ ಶಿಖರದಲಿ..
@ಪ್ರೇಮ್@

619. ನಾ ಹೊರಟಿರುವೆ

ನಾ ಹೊರಟಿರುವೆ

ನೀ ಬರುವೆಯೆಂದರಿತು ನಾ
ಹೊರಡುತಲಿರುವೆ
ನಿನ್ನೊಡನೆ ಕನಸ ಕಟ್ಟಲು..
ಕನಸ ನನಸಾಗಿಸಲು...

ಅದೇನು ಭಾರವೋ?
ಬರವೋ, ಭಯವೋ
ನಿನ್ನ ತಲೆಯಲದು..
ಅರಿಯದೆನಗೆ ಕೋಪಕೆ ಕಾರಣ..

ತಾಯಿ ಮನೆಯದು ಸ್ವರ್ಗ
ಇಲ್ಲಿ ಶಿಸ್ತಿನ ರೌರವ ನರಕ,
ಹೇಳಿ- ಕೇಳಿ ಹೋಗುವ ಅಳುಕು
ಸ್ವಾತಂತ್ರ್ರ್ಯವೆಲ್ಲಿದೆ ನಿನ್ನಲಿ?

ಮನೆಯೊಳಗಿನ ಕಪ್ಪೆಯಾಗಿರಲಾರೆ
ಮನದೊಳಗೆ ಬೆಳೆಯುವ ಹೆಮ್ಮೆ
ನನ್ನ ದಾರಿಯ ನಾ ಹುಡುಕಲು
ಹೊರಟಿರುವೆ ನಾನೀಗಲೆ..
@ಪ್ರೇಮ್@

ಮಂಗಳವಾರ, ನವೆಂಬರ್ 27, 2018

616.ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-23

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-23

ಏನೂ ಇಲ್ಲ ಈ ಜೀವನದಲ್ಲಿ, ದುಡಿದದ್ದು ಸಾಲಲ್ಲ ಖರ್ಚಿಗೆ.. ಅದು ಹೇಗೆ ಕೆಲವರು ಮಾತ್ರವೆ ಶ್ರೀಮಂತರು ಜಗತ್ತಿನಲ್ಲಿ!? ನಾವೇಕೆ ಯಾವಾಗಲು ಬಡವರು? ದೇವರೇಕೆ ನಮಗೆ ಮೋಸ ಮಾಡಿದ? ನಾವೇ ಯಾಕೆ ಒದ್ದಾಡಬೇಕು? ಪ್ರತಿಯೊಂದು ಆಸೆಗೂ ಪರದಾಡ ಬೇಕು? ನಮಗನಿಸಿದ್ದನ್ನು ಪಡೆಯಲು ಸಾಧ್ಯವೇ ಆಗುತ್ತಿಲ್ಲ ಏಕೆ? ಇದೆಲ್ಲ ನಮ್ಮನ್ನು ಕಾಡುವ ಸಾಧಾರಣ ಪ್ರಶ್ನೆ!
    ಈ ಪ್ರಶ್ನೆ ಪ್ರಪಂಚದಲ್ಲಿ ಬದುಕುವ ಪ್ರತಿಯೊಬ್ಬರಿಗೂ ಇದೆ. 'ದೊಡ್ಡ ಮನೆಗೆ ದೊಡ್ಡ ಬಾಗಿಲು' ಎಂಬಂತೆ ಹಣವಿದ್ದೊಡೆ ಆಸೆಗಳ ಮಹಲುಗಳೂ ಹೆಚ್ಚುತ್ತವೆ. ಸಾಧಾರಣ ಮನುಷ್ಯ ಮಾರುತಿ ಕಾರು ಬೇಕೆಂದು ಆಸೆ ಪಟ್ಟರೆ ಸಿರಿವಂತ ಮರ್ಸಡೆಸ್ ಬೆಂಝ್ ಗೆ ಆಸೆಪಟ್ಟು ಅದಕ್ಕಾಗಿ ಶ್ರಮಿಸುತ್ತಿರುತ್ತಾನೆ! ಸಾಧಾರಣ ಮನುಷ್ಯ ವಾಸಿಸಲು ಯೋಗ್ಯವಾದ ತಕ್ಕ ಮಟ್ಟಿನ ಮನೆಯೊಂದು ಸಾಕೆಂದುಕೊಂಡರೆ ಶ್ರೀಮಂತನಾದವ ಹಲವಾರು ಮಹಡಿಗಳ ಮಹಲಿನ ಕನಸು ಕಾಣುತ್ತಿರುತ್ತಾನೆ. ಅದು ಆದೊಡನೆ ಬಾಡಿಗೆ ಕೊಡಲು ಮತ್ತೊಂದು ಮನೆ ಕಟ್ಟಿಸುವ ಐಡಿಯಾದಲ್ಲಿ ಇರುತ್ತಾನೆ.  ಒಟ್ಟಿನಲ್ಲಿ ಯಾರೂ ನೆಮ್ಮದಿಯಿಂದ ಬದುಕುತ್ತಿಲ್ಲ!
   ಮೋದಿ ನೋಟುಗಳನ್ನು ಬ್ಯಾನ್ ಮಾಡಿ ಡಿಜಿಟಲ್ ಟ್ರಾನ್ಸಾಕ್ಷನ್ ಜಾಸ್ತಿ ಮಾಡಿದ್ದೇನೋ ಸರಿ. ಕೋಟಾ ನೋಟುಗಳು ಬ್ಯಾಂಕ್ ಗೆ ನುಗ್ಗಿ ಬ್ಯಾಂಕುಗಳೆಲ್ಲಾ ಲಾಸ್ ಆಗಿ ಹಲವಾರು ಬ್ಯಾಂಕ್ ಗಳು ಮರ್ಜ್ ಆಗಿದ್ದೂ ಆಯ್ತು. ಬ್ಯಾಂಕುಗಳಲ್ಲಿ ಸರ್ವಿಸ್ ಚಾರ್ಜ್ ಕಟ್ ಮಾಡಿಕೊಳ್ಳುತ್ತಿರುವುದೂ ಆಗುತ್ತಿದೆ ತಾನೇ? ಕಪ್ಪು ಹಣ,
ವಿಪರೀತ ಹಣ ಇರುವವರಿಗೆ ಕ್ರಿಪ್ಟೋ ಕರೆನ್ಸಿ ಬಂದಿದೆ ಈಗ. ಅದರಲ್ಲಿ ಬಗ್ಸ್ ಕಾಯಿನ್ ಕೂಡಾ ಒಂದು. ಯಾವುದೇ ನೋಟಿನ ಚಲಾವಣೆ ಇಲ್ಲದೆ ಆನ್ ಲೈನಿನಲ್ಲೇ ದುಡ್ಡನ್ನು ಸಂಗ್ರಹಿಸಿ ಇಡುವುದು. ಅದರಲ್ಲೇ ದುಡ್ಡು ಟ್ರಾನ್ಸ್ಫರ್ ಮಾಡಿ ಪ್ರಪಂಚದ ಯಾವುದೇ ಮೂಲೆಯಿಂದ ಏನು ಬೇಕಾದರೂ ತರಿಸಿಕೊಳ್ಳಬಹುದು. ತಿಂಗಳಲ್ಲೇ ಕೋಟಿಗಟ್ಟಲೆ ಕಾಯಿನ್ಸ್ ಸಂಪಾದಿಸ ಬಹುದು. ಅದನ್ನು ಎಷ್ಟು ವರ್ಷಗಳ ಕಾಲವಾದರೂ ಮೋಸವಾಗದ ಹಾಗೆ ಬ್ಯಾಂಕಿನಲ್ಲಿ ಇಟ್ಟಂತೆ ಸೇಫಾಗಿ ಇಡಬಹುದು. ವನ್ ಕಾಯಿನ್ ಕೂಡಾ ಇದೆ. ಅದರ ಬೆಲೆಗಳು ಒಂದು ಕಾಯಿನ್ ಗೆ ಐವತ್ತು ಸಾವಿರದಿಂದ ಹಿಡಿದು ಮೂರೂವರೆ ಲಕ್ಷದವರೆಗೂ ಇದೆ. ಈಗ ಅದು 5ಜಿಯಲ್ಲಿ ಬರಲು ಪ್ರಾರಂಭಿಸಿದೆ. ಬಿಟ್ಗಳಲ್ಲೇ ಅದನ್ನು ಖರ್ಚು ಮಾಡುವುದು. ಮುಂದೆ ಭಾರತದಲ್ಲೂ ಲಕ್ಷ್ಮಿ ಕಾಯಿನ್, ಜಿಯೋ ಕಾಯಿನ್ ಗಳು ಆನ್ ಲೈನಿನಲ್ಲಿ ಬಂದು ಜನರು ಅದನ್ನು ತೆಗೆಯಲು ಮುಗಿ ಬಿದ್ದು, ಐದಾರು ವರುಷಗಳಲ್ಲೇ ತಮ್ಮಲ್ಲಿರುವ ಹಣವನ್ನು ನೂರುಪಟ್ಟು ಹೆಚ್ಚಿಸಿಕೊಳ್ಳುವ ಸಾಧ್ಯತೆಗಳು ತುಂಬಾ ಇವೆ. ಆನ್ ಲೈನ್ ಉಪಯೋಗ ಹೆಚ್ಚಿದಂತೆ ದುಡ್ಡಿರುವವರಿಗೆ ದುಡ್ಡು ಮಾಡಲು ಇನ್ನೇನೆಲ್ಲ ಬರುವುದೋ ಕಾದು ನೋಡಬೇಕು. ನೀವೇನಂತೀರಿ?
@ ಪ್ರೇಮ್@
ನಿಮ್ಮ ಅಭಿಪ್ರಾಯ ತಿಳಿಸಿ. premauday184@gmail.com

616.ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-23

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-23

ಏನೂ ಇಲ್ಲ ಈ ಜೀವನದಲ್ಲಿ, ದುಡಿದದ್ದು ಸಾಲಲ್ಲ ಖರ್ಚಿಗೆ.. ಅದು ಹೇಗೆ ಕೆಲವರು ಮಾತ್ರವೆ ಶ್ರೀಮಂತರು ಜಗತ್ತಿನಲ್ಲಿ!? ನಾವೇಕೆ ಯಾವಾಗಲು ಬಡವರು? ದೇವರೇಕೆ ನಮಗೆ ಮೋಸ ಮಾಡಿದ? ನಾವೇ ಯಾಕೆ ಒದ್ದಾಡಬೇಕು? ಪ್ರತಿಯೊಂದು ಆಸೆಗೂ ಪರದಾಡ ಬೇಕು? ನಮಗನಿಸಿದ್ದನ್ನು ಪಡೆಯಲು ಸಾಧ್ಯವೇ ಆಗುತ್ತಿಲ್ಲ ಏಕೆ? ಇದೆಲ್ಲ ನಮ್ಮನ್ನು ಕಾಡುವ ಸಾಧಾರಣ ಪ್ರಶ್ನೆ!
    ಈ ಪ್ರಶ್ನೆ ಪ್ರಪಂಚದಲ್ಲಿ ಬದುಕುವ ಪ್ರತಿಯೊಬ್ಬರಿಗೂ ಇದೆ. 'ದೊಡ್ಡ ಮನೆಗೆ ದೊಡ್ಡ ಬಾಗಿಲು' ಎಂಬಂತೆ ಹಣವಿದ್ದೊಡೆ ಆಸೆಗಳ ಮಹಲುಗಳೂ ಹೆಚ್ಚುತ್ತವೆ. ಸಾಧಾರಣ ಮನುಷ್ಯ ಮಾರುತಿ ಕಾರು ಬೇಕೆಂದು ಆಸೆ ಪಟ್ಟರೆ ಸಿರಿವಂತ ಮರ್ಸಡೆಸ್ ಬೆಂಝ್ ಗೆ ಆಸೆಪಟ್ಟು ಅದಕ್ಕಾಗಿ ಶ್ರಮಿಸುತ್ತಿರುತ್ತಾನೆ! ಸಾಧಾರಣ ಮನುಷ್ಯ ವಾಸಿಸಲು ಯೋಗ್ಯವಾದ ತಕ್ಕ ಮಟ್ಟಿನ ಮನೆಯೊಂದು ಸಾಕೆಂದುಕೊಂಡರೆ ಶ್ರೀಮಂತನಾದವ ಹಲವಾರು ಮಹಡಿಗಳ ಮಹಲಿನ ಕನಸು ಕಾಣುತ್ತಿರುತ್ತಾನೆ. ಅದು ಆದೊಡನೆ ಬಾಡಿಗೆ ಕೊಡಲು ಮತ್ತೊಂದು ಮನೆ ಕಟ್ಟಿಸುವ ಐಡಿಯಾದಲ್ಲಿ ಇರುತ್ತಾನೆ.  ಒಟ್ಟಿನಲ್ಲಿ ಯಾರೂ ನೆಮ್ಮದಿಯಿಂದ ಬದುಕುತ್ತಿಲ್ಲ!
   ಮೋದಿ ನೋಟುಗಳನ್ನು ಬ್ಯಾನ್ ಮಾಡಿ ಡಿಜಿಟಲ್ ಟ್ರಾನ್ಸಾಕ್ಷನ್ ಜಾಸ್ತಿ ಮಾಡಿದ್ದೇನೋ ಸರಿ. ಕೋಟಾ ನೋಟುಗಳು ಬ್ಯಾಂಕ್ ಗೆ ನುಗ್ಗಿ ಬ್ಯಾಂಕುಗಳೆಲ್ಲಾ ಲಾಸ್ ಆಗಿ ಹಲವಾರು ಬ್ಯಾಂಕ್ ಗಳು ಮರ್ಜ್ ಆಗಿದ್ದೂ ಆಯ್ತು. ಬ್ಯಾಂಕುಗಳಲ್ಲಿ ಸರ್ವಿಸ್ ಚಾರ್ಜ್ ಕಟ್ ಮಾಡಿಕೊಳ್ಳುತ್ತಿರುವುದೂ ಆಗುತ್ತಿದೆ ತಾನೇ? ಕಪ್ಪು ಹಣ,
ವಿಪರೀತ ಹಣ ಇರುವವರಿಗೆ ಕ್ರಿಪ್ಟೋ ಕರೆನ್ಸಿ ಬಂದಿದೆ ಈಗ. ಅದರಲ್ಲಿ ಬಗ್ಸ್ ಕಾಯಿನ್ ಕೂಡಾ ಒಂದು. ಯಾವುದೇ ನೋಟಿನ ಚಲಾವಣೆ ಇಲ್ಲದೆ ಆನ್ ಲೈನಿನಲ್ಲೇ ದುಡ್ಡನ್ನು ಸಂಗ್ರಹಿಸಿ ಇಡುವುದು. ಅದರಲ್ಲೇ ದುಡ್ಡು ಟ್ರಾನ್ಸ್ಫರ್ ಮಾಡಿ ಪ್ರಪಂಚದ ಯಾವುದೇ ಮೂಲೆಯಿಂದ ಏನು ಬೇಕಾದರೂ ತರಿಸಿಕೊಳ್ಳಬಹುದು. ತಿಂಗಳಲ್ಲೇ ಕೋಟಿಗಟ್ಟಲೆ ಕಾಯಿನ್ಸ್ ಸಂಪಾದಿಸ ಬಹುದು. ಅದನ್ನು ಎಷ್ಟು ವರ್ಷಗಳ ಕಾಲವಾದರೂ ಮೋಸವಾಗದ ಹಾಗೆ ಬ್ಯಾಂಕಿನಲ್ಲಿ ಇಟ್ಟಂತೆ ಸೇಫಾಗಿ ಇಡಬಹುದು. ವನ್ ಕಾಯಿನ್ ಕೂಡಾ ಇದೆ. ಅದರ ಬೆಲೆಗಳು ಒಂದು ಕಾಯಿನ್ ಗೆ ಐವತ್ತು ಸಾವಿರದಿಂದ ಹಿಡಿದು ಮೂರೂವರೆ ಲಕ್ಷದವರೆಗೂ ಇದೆ. ಈಗ ಅದು 5ಜಿಯಲ್ಲಿ ಬರಲು ಪ್ರಾರಂಭಿಸಿದೆ. ಬಿಟ್ಗಳಲ್ಲೇ ಅದನ್ನು ಖರ್ಚು ಮಾಡುವುದು. ಮುಂದೆ ಭಾರತದಲ್ಲೂ ಲಕ್ಷ್ಮಿ ಕಾಯಿನ್, ಜಿಯೋ ಕಾಯಿನ್ ಗಳು ಆನ್ ಲೈನಿನಲ್ಲಿ ಬಂದು ಜನರು ಅದನ್ನು ತೆಗೆಯಲು ಮುಗಿ ಬಿದ್ದು, ಐದಾರು ವರುಷಗಳಲ್ಲೇ ತಮ್ಮಲ್ಲಿರುವ ಹಣವನ್ನು ನೂರುಪಟ್ಟು ಹೆಚ್ಚಿಸಿಕೊಳ್ಳುವ ಸಾಧ್ಯತೆಗಳು ತುಂಬಾ ಇವೆ. ಆನ್ ಲೈನ್ ಉಪಯೋಗ ಹೆಚ್ಚಿದಂತೆ ದುಡ್ಡಿರುವವರಿಗೆ ದುಡ್ಡು ಮಾಡಲು ಇನ್ನೇನೆಲ್ಲ ಬರುವುದೋ ಕಾದು ನೋಡಬೇಕು. ನೀವೇನಂತೀರಿ?
@ ಪ್ರೇಮ್@
ನಿಮ್ಮ ಅಭಿಪ್ರಾಯ ತಿಳಿಸಿ. premauday184@gmail.com

615. ಉಡಲ ಕವಿತೆ

ಉಡಲ್ ದ ಕವಿತೆ

ಕವಿತೆ ಬರಡ್ ಉಡಲ್ ದ ಉಲಯಿಡ್ದ್
ಬೇನೆ-ಬೇಸರ ಮರಪರೆ
ಪಾಪಿ ಯಾನ್ ಉಡಲ್ ಈ ಎನ್ನ
ಬೇನೆ ಕೊರ್ಪೆ ಉದಿಪರೆ..

ದಾನೆ ಪನಡ್ ಎನ್ನ ಕತೆತ
ಜೀವ ಪೂರ ಪೋತುಂಡು
ಗಾನೊಗಾದ್ ಭಾವ ಬರಂದ್
ಉಡಲ ಬೇನೆ ಬಸರ್ ಡ್..

ಕವಿತೆ ಈ ಎನ್ನ ಬದ್ ಕ್ ದ
ಖುಷಿನ್ ಹೆಚ್ಚ ಮಲ್ತಿನಾಲ್..
ಎನ್ನ ಮನದ ಬಾಕಿಲ್ ಗೆತ್ತ್
ಗೊತ್ತಾವಂದೆ ಪೊಗ್ಗಿನಾಲ್..

ಉಡಲ್ದುಲಾಯಿ ಗೂಡು ಕಟ್ ದ್
ತೆತ್ತಿ ದೀದ್ ದಿನಲ ಪಾರ ಕುಲ್ದು
ಎನ್ನ ಉಡಲ್ ಡೆ ಪುಟ್ಟಿನಂಚಿ
ಸಾರ ಎಲ್ಯ ಕವಿತೆಲು ಪಿದಾಯಿ ಬರೊಡು..

ಜನ ಮಾನಿಲು ಓದುನಗ
ಅವೆನ್ ಸಂತಸ ಎಂಕ್
ಎನ್ನ ಉಡಲ ಕವಿತೆ ಅವು
ಬೇತೆ ಉಡಲ್ ನ್ ಸೇರುನ ಪೊರ್ತು..
@ಪ್ರೇಮ್@

615. ಉಡಲ ಕವಿತೆ

ಉಡಲ್ ದ ಕವಿತೆ

ಕವಿತೆ ಬರಡ್ ಉಡಲ್ ದ ಉಲಯಿಡ್ದ್
ಬೇನೆ-ಬೇಸರ ಮರಪರೆ
ಪಾಪಿ ಯಾನ್ ಉಡಲ್ ಈ ಎನ್ನ
ಬೇನೆ ಕೊರ್ಪೆ ಉದಿಪರೆ..

ದಾನೆ ಪನಡ್ ಎನ್ನ ಕತೆತ
ಜೀವ ಪೂರ ಪೋತುಂಡು
ಗಾನೊಗಾದ್ ಭಾವ ಬರಂದ್
ಉಡಲ ಬೇನೆ ಬಸರ್ ಡ್..

ಕವಿತೆ ಈ ಎನ್ನ ಬದ್ ಕ್ ದ
ಖುಷಿನ್ ಹೆಚ್ಚ ಮಲ್ತಿನಾಲ್..
ಎನ್ನ ಮನದ ಬಾಕಿಲ್ ಗೆತ್ತ್
ಗೊತ್ತಾವಂದೆ ಪೊಗ್ಗಿನಾಲ್..

ಉಡಲ್ದುಲಾಯಿ ಗೂಡು ಕಟ್ ದ್
ತೆತ್ತಿ ದೀದ್ ದಿನಲ ಪಾರ ಕುಲ್ದು
ಎನ್ನ ಉಡಲ್ ಡೆ ಪುಟ್ಟಿನಂಚಿ
ಸಾರ ಎಲ್ಯ ಕವಿತೆಲು ಪಿದಾಯಿ ಬರೊಡು..

ಜನ ಮಾನಿಲು ಓದುನಗ
ಅವೆನ್ ಸಂತಸ ಎಂಕ್
ಎನ್ನ ಉಡಲ ಕವಿತೆ ಅವು
ಬೇತೆ ಉಡಲ್ ನ್ ಸೇರುನ ಪೊರ್ತು..
@ಪ್ರೇಮ್@

ಸೋಮವಾರ, ನವೆಂಬರ್ 26, 2018

614. ಮಕ್ಕಳ ಕವನ-2

ಬಣ್ಣದೋಕುಳಿ

ಕುಂಚವು ಬಹಳವೆ ಚಿಕ್ಕದು
ಆಕಾಶ ಬಹಳವೆ ದೊಡ್ಡದು
ಕುಂಚವ ಹಿಡಿದು ಆಗಸಕೆ
ಬಣ್ಣವ ಹಚ್ಚಿದ ಪರಿ ಹೇಗೆ?

ಮುಂಜಾನೆ ಕಾಣುವ ಬಿಳಿಯು
ಮಧ್ಯಾಹ್ನ ಕಾಣುವ ನೀಲಿಯು
ಸಂಜೆಯದುವೇ ಕೆಂಪು-ಕೇಸರಿಯು
ಬಣ್ಣ ಬದಲಿಸುವುದು ಗಗನವು..

ಸೂರ್ಯನು ಹುಟ್ಟುತ ಅಚ್ಚ ಕೆಂಪು
ನಡುವಿಗೆ ಬರುತಲಿ ಕತ್ತಲ ಜೊಂಪು
ಸಂಜೆಯದು ಗಾಢ ಕೇಸರಿಯ ಇಂಪು
ರಾತ್ರಿಗೆ ಬರಿ ಕತ್ತಲು-ಕಾಣದ ಒನಪು..

ರವಿಯ ಕಣ್ಣಲಿ ಬಿರುಸಿನ ಟಾರ್ಚು
ಚಂದಮಾಮನು ಹೊಳೆಯುವ ದೋಸೆ
ಸೂರ್ಯ ತಿನ್ನುವ ಚಂದ್ರನ ಸ್ವಲ್ಪವೆ
ಅಮವಾಸ್ಯೆಗೆ ಮಾಮ ಪೂರ್ತಿ ಖಾಲಿಯೆ..

ಸೂರ್ಯ-ಚಂದ್ರರದೆ ಓಕುಳಿಯಾಟ
ಬಣ್ಣವ ಬಾನಲಿ ಚೆಲ್ಲುವ ಆಟ
ನಾನೂ ಸೇರುವೆ ಕುಂಚವ ಹಿಡಿದು
ಹಾಕುವೆ ಎಲ್ಲಾ ಬಣ್ಣವ ಬಳಿದು...
@ಪ್ರೇಮ್@

613. ಮಾನವ

ಇವನೇ ಮಾನವ

ಹಾಸ್ಯ ಲಾಸ್ಯಗಳ ಭಾಷ್ಯ ಬರೆದವನೆ
ಕಾರ್ಯ ಶೌರ್ಯವ ಹೊಂದಿ ಮೆರೆದವನೆ...
ಭೂತ ಭವಿಷ್ಯವ ಓದಿ ತಿಳಿದವನೆ
ನಾಟ್ಯ ನೃತ್ಯಗಳ ಕಲಿತು ಮಾಡುವನೆ..

ವೈದ್ಯಕೀಯ ತಂತ್ರಜ್ಞಾನವ ಮುಂದುವರೆಸುತಿಹ
ಆಟ ಪಾಠವ ಜೊತೆಗೆ ಆಡಿ ಕಲಿಯುತಿಹ
ಮಾಟ ಮಂತ್ರದಲು ಹಿಂದೆ ಬೀಳದಿಹ
ತಾತ ಮುತ್ತಾತರಿಂದ ಬದುಕು ಕಲಿಯುತಿಹ

ವೈಶ್ಯ ಬ್ರಾಹ್ಮಣ ಕ್ಷತ್ರಿಯ ಶೂದ್ರನೆನುವ
ಜಾತಿ ಧರ್ಮವೆಂದು  ಹೊಡೆದಾಡುತಿಹ
ತಮ್ಮ ತಮೊಳಗೆ ಕಿತ್ತಾಡುತಿಹ
ಹೆಣ್ಣು-ಹೊನ್ನು-ಮಣ್ಣಿಗೆ ಬಡಿದಾಡುತಿಹ

ನಾಡಿ ಹೃದಯ ಬಡಿತದಿ ಬದುಕುವ
ಮೋಡಿ ಮಾಡಿ ಜನರನು ಗೆಲ್ಲುವ
ಬಲಿಷ್ಠ ಪ್ರಾಣಿಯನೂ ಪಳಗಿಸುವ
ಮೆದುಳ ಶಕ್ತಿಯಲಿ ಕಾರ್ಯವೆಸಗುವ

ಮರೆತು ಮರೆಯನು ತನ್ನ ಕಾರ್ಯವ
ಒಳ್ಳೆ ಕೆಟ್ಟ ಗುಣಗಳ ಹೊಂದಿರುವವ
ಬಂಧು ಬಳಗ ಸ್ನೇಹಿತರ ಬಿಡದವ
ಅವನೇ ಜಗದ ಬುದ್ಧಿವಂತ ಮಾನವ.
@ಪ್ರೇಮ್@

ಶನಿವಾರ, ನವೆಂಬರ್ 24, 2018

612. ಅಂಬರಕ್ಕೇರಿದ ಅಂಬರೀಶ

ಅಂಬರಕ್ಕೇರಿದ ಅಂಬರೀಶ

ಸಿನಿಜಗತ್ತಿನ ಮಹಾ ಸಾಹುಕಾರ
ರಾಜಕೀಯದಲೂ ನಮಸ್ಕಾರ
ಬೇಡಿ ಬಂದವಗೆ ಸದಾ ಸಹಕಾರ
ಅಂಬರಕ್ಕೇರಿದ ಅಂಬರೀಶ ವೀರ..

ಮಾತೆಂದರೆ ಕಡ್ಡಿ ಮುರಿದಂತೆ
ನ್ಯಾಯಕೆಂದೂ ತಾನು ಮುಂದೆ
ಅಭಿಷೇಕನ ಭೂಮಿಗೆ 'ತಂದೆ'
ಕನ್ನಡಕಾಗೆ ಹೋರಾಡಿ ನಿಂದೆ..

ಮಂಡ್ಯದ ಗಂಡೆಂಬ ಖ್ಯಾತಿ ನಿನಗೆ
ಕಣ್ವರ್ ಲಾಲನೆ ಸ್ಪೂರ್ತಿ ನಮಗೆ
ಹುಟ್ಟಿ ಬಂದು, ಬದುಕಿದೆ ಕನ್ನಡದೆಡೆಗೆ
ಬಿಟ್ಟು ಹೋದೆ ಹಲ ಸಿನಿಮಾಗಳ ನಾಡ ಜನತೆಗೆ.

ನಾವೆಲ್ಲ ಒಂದೆಂಬ ಸಂದೇಶ ಸಾರಿದೆ
ಕಲಾಕಾರರ ವಂಶಧ ಕೀರ್ತಿಯ ಉಳಿಸಿದೆ
ಸಾಧನೆಯ ಮೆಟ್ಟಿಲನು ಏರುತ ಬಂದೆ
ಕಲೆ, ಸಹಾಯಕೆ ಮುಡಿಪಿಟ್ಟ ಜೀವನ ನಿನ್ನದಾಗಿದೆ.

ಮರೆತರೂ ಮರೆಯಲಾರರು ಜನ ನಿನ್ನ
ಅಗಲಿರುವೆ ಹಲವಾರು ಕಲಾ ರತ್ನಗಳನ್ನ
ಕೊಟ್ಟಿರುವೆ ಕೆಲವಾರು ಪಾತ್ರಗಳನ್ನ
ನೆನಪಿಡುವರು ಕನ್ನಡಿಗರು ಸದಾ ನಿನ್ನ...
@ಪ್ರೇಮ್@
25.11.18

ಶುಕ್ರವಾರ, ನವೆಂಬರ್ 23, 2018

611. ಚಕಾರದ ಚಲನೆ

ಚಕಾರದ ಚಲನೆ

ಚರಣ ಚರಿತ್ರೆಯ ಪಾಡಿ ಪೊಗಳಲಾರೆ
ಚಪಲ ಚಂದಿರ ಬೀಸುವ ಚಾಮರ
ಚಲಿಸಿ ಬೆಳಕನು ಕಳಿಸಿ ಬಿಡುವನು
ಚಳಿಯಲು ಸೆಕೆಯಲು ಚಲನ ಚರಿತೆಯು

ಚಟ್ಟದ ವರೆಗಿನ ಚಾರಣ ನಮ್ಮದು
ಚಾಚೂ ತಪ್ಪದೆ ಮುಗಿಸಲೆ ಬೇಕು..
ಚೆಲ್ಲಿ ಕಂಪನು ಬದುಕುವ ನಾವು
ಚರಕದಂತೆ ತಿರುಗುತಲಿದ್ದು ಪರರಿಗಾದರೆ ಹಿತವು..

ಚಟಚಟ ಮಳೆಯನು ನಂಬಿಹ ಜನರು
ಚಳಿ ಗಾಳಿಯೆನ್ನದೆ ದುಡಿಯುತಲಿಹರು .
ಚಕ್ಕುಲಿ ತಿನ್ನುವ ಹಾಗಿನ ಬಾಳುವೆ
ಚಕ್ಕನೆ ಮುಗಿಯದು ಗೋಳಿನ ಗೊಡವೆ..

ಚಾದರ ಹೊದ್ದು ಮಲಗಿದರಾಗದು
ಚೋರರ ಕಾಟದಿ ತಪ್ಪಿಸ ಬೇಕು
ಚೈತನ್ಯದ ಚಿಲುಮೆಯು ನಾವಾಗಬೇಕು
ಚಂದಿರನಂದದಿ ತಂಪಿದ್ದರೆ ಸಾಕು..

ಚೌಕಟ್ಟಿನಲ್ಲಿ ಪ್ರತಿಕ್ಷಣ ತೆವಳು
ಚೌಕವ ಸುತ್ತುತ ಪ್ರತಿದಿನ ಕವಲು..
ಚಿಟ್ಟೆಯ ಅಂದದಿ ನಗುತಿದ್ದರೆ ಅಂದ
ಚಪಲತೆ ತೊರೆದ ಬದುಕದು ಅಂದ..

ಚಕ್ಕನೆ ಬಂದು ಚಕ್ಕನೆ ಹೋಗುವ
ಚಿತ್ತ ಚಾಂಚಲ್ಯದ ಬಾಳ್ವೆಗೆ ಶರಣು
ಚಕ್ರದ ಹಾಗೆ ನಿತ್ಯ ತಿರುಗುತಲಿಹೆವು
ಚಲನಶೀಲವೂ ಚರಾಚರಗಳೆಲ್ಲವು..
@ಪ್ರೇಮ್@

610. ಬಾಳು ಬೆಳಗಲಿ

ಬಾಳು ಬೆಳಗಲಿ

ಬಾನಿನ ನಿಶೆಗೆ ಚಂದಿರ ಕಿರೀಟ
ಬಾಳಿನ ಬೆಳಕಿಗೆ ಗುಣವು ಮುಕುಟ..

ವೇಷದ ಬದುಕಿಗೆ ಕ್ಷಣ ಕ್ಷಣ ಇಹುದು
ವ್ಯರ್ಥವ ಮಾಡದೆ ಕಳೆವವ ಜಾಣ,
ವ್ಯತ್ಯಯವಾಗದೆ ಇರದು ಎಂದಾದರೂ
ಬಾಳನು ಹಸನು ಮಾಡಲು ಪಣತೊಡು...

ಮಂದಿಗೆ ಸರಿಯಾಗಿ ಬಾಳಲು ಆಗದು
ಮುಂದಿನ ದಾರಿಯು ಸವೆಸಲು ಸಾಗು
ಕಂದೀಲಿನ ಬೆಳಕೆಲ್ಲಾ ಕಡೆ ಸಿಗದು
ಕುಂದದೆ ಬಾಳಿನ ಬೆಳಕನು ಪಡೆವುದು..

ಭಯದಲಿ ಬಾಳುವೆ ಸಾರ್ಥಕವಲ್ಲವು
ಸಾಧನೆ ಇಲ್ಲದೆ ಬದುಕೇ ವ್ಯರ್ಥವು..
ವಿದ್ಯೆ ವಿನಯ ವಿನೂತನ ಜೊತೆಯಲಿ
ವಿಧವಿಧ ತಂತ್ರದಿ ದಿನಗಳು ಸಾಗಲಿ..

ಯೋಚನೆ ಉತ್ತಮ ದಿಕ್ಕಲಿ ಬರಲಿ
ಮಾತಿನ ಹಿಡಿತವು ನಾಲಗೆಗಿರಲಿ..
ಜ್ಯೋತಿಯ ಕಿರಣವು ಬೆಳಗಿ ಬರಲಿ
ಪ್ರೀತಿಯ ವದನವು ಬೆಳಕನು ಚೆಲ್ಲಲಿ...

@ಪ್ರೇಮ್@

609. ಬೇಕು

ಬೇಕು

ನಿತ್ಯ ನಿನ್ನ ನವಿರು ಸ್ಪರ್ಶ
ಸತ್ಯ ಸಹಿತ ಸರಸ ಸಲ್ಲಾಪ
ಪಥ್ಯದಂಥ ಪದದ ಪಾಕ
ಎತ್ತಲೆತ್ತ ಏರಿ ಬರಲಿ..

ನೀನೆ ನೆನಪು ನೀಗಿ ನೀಡಿ
ವಿರಹ ವಿಧಿತ ವಿಧಿಯು ಬಾಗಿ
ವಚನ ಪಚನ ಸಿಂಚನವಾಗಿ
ಕರದ ವರದ ಮರೆವ ಕಾಡಿ..

ಕಣ್ಣ ಮುಂದೆ ನೀನು ಬೇಕು
ತಣ್ಣಗಿಹ ಪ್ರೀತಿ ಸಾಕು
ಬಣ್ಣ ಬಣ್ಣದ ಕನಸು ಹಾಕು
ಸುಣ್ಣದಂಥ ಬಯಕೆ ಬಿಸಾಕು..

ನನ್ನ ನಲ್ಲ ನಿನ್ನ ಬರುವು
ಬಂದ ಹಾಗೆ ಬಾನ ಬಯಲು
ತಂದು ನಿಂತು ಬೇಕು ಎನಲು
ನೀ ಬರುವೆಯ ನನ್ನ ಇದಿರು..
@ಪ್ರೇಮ್@

608. ವಿಮರ್ಶೆ

ಒಲವ ಹುಡುಕಿ...

ಮನದ ಮಹಲಿನ ಒಳಗೆ
ನೆನಪಿನದೇ ಮೆರವಣಿಗೆ...
ಹೊಳೆವ ನಯನದ  ತುಂಬಾ
ನಿನ್ನದೇ ಪುರವಣಿಗೆ...

ಕಾಡುವ ಕನಸಿಗೂ
ಕೋರಿಕೆ ಕಳುಹಿಸಿರುವೆ
ನನ್ನ ಕನಸರಾಶಿ ನನಸಾಗಿ
ನೆನಪಲಿ ಮೈ ಮರೆಸು ಎಂದು ...

ನೊರೆ ಹಾಲಿನಂತಹ ಪ್ರೀತಿ
ವಿಷವಾಗಿ ಒಡೆಯಿತು
ಕಾರಣ ಅರಸಿ‌ ಹೊರಟಿರುವೆ
ಸೋತು ಶರಣಾಗಿರುವೆ ...

ಮದನಾರಿ ನಿನ್ನ ಮೋಹದ
ಬಲೆಯೊಳಗೆ ಮೈಮರೆತು
ಮನಸ್ಸು ಮರುಳಾಯಿತು 
ಕನಸ ಕೊಲೆಯಾಯಿತು

ಆ ಕೆಂಪು ಸೂರ್ಯನಂತೆ
ಸುಡುತ್ತಿದೆ ನನ್ನ ಹೃದಯ
ಉಸಿರು ಉಳಿಯಬೇಕಿದೆ
ಸುರಿಸು ಬಾ ಒಲವ ಮಳೆಯಾ

❤ತುರುವೇಕೆರೆ❤ ತುಂಟ
      🌹ರಮೇಶ್ 🌹

ಒಲವ ಹುಡುಕಿ...

ಮನದ ಮಹಲಿನ ಒಳಗೆ
ನೆನಪಿನದೇ ಮೆರವಣಿಗೆ...

🍑ವಾವ್ ! ಎಂತಹ ಅರ್ಥಗರ್ಭಿತ ಸಾಲು... ಮನದ ಮಹಲೆಂಬ ರೂಪಕ ಬೇರೆ ...ನೆನಪಿನ ಮೆರವಣಿಗೆಯೆಂಬ ಪರ್ಸಾನಿಫಿಕೇಶನ್... ಸಕತ್ತಾಗಿದೆ... ಚಿತ್ರಕವಿತ್ವವೂ ಮೂಡಿ ಬಂದಿದೆ....ಇದೇ ಸಾಲಿನಲ್ಲಿ ಕವಿ ಅದೆಷ್ಟು ಕಸರತ್ತು ಮಾಡಿರುವರು...ಆಹಾ...ಓದುಗರೇ ಧನ್ಯರು....🍑

ಹೊಳೆವ ನಯನದ  ತುಂಬಾ
ನಿನ್ನದೇ ಪುರವಣಿಗೆ...

🍊ಹೊಳೆವ ನಯನವೆಂಬ ನಾಮ ವಿಶೇಷಣದೊಂದಿಗೆ ಪ್ರೀತಿ ಪಾತ್ರರ ಪುರವಣಿ.. ಅಂತ್ಯ ಪ್ರಾಸವೂ ಇದೆ...🍊

ಕಾಡುವ ಕನಸಿಗೂ
ಕೋರಿಕೆ ಕಳುಹಿಸಿರುವೆ

🍒ಕವಿಗಳಿಗೆ ಕನಸುಗಳಲ್ಲೂ ಕವಿತೆಗಳು ಕಾಡುವವು ಮತ್ತು ಆ ಕಾಡುವ ಕನಸಿಗೂ ಕೋರಿಕೆ ಕಳುಹಿಸುವರು...ವಾವ್ ಬ್ಯೂಟಿಫುಲ್...🍒

ನನ್ನ ಕನಸರಾಶಿ ನನಸಾಗಿ
ನೆನಪಲಿ ಮೈ ಮರೆಸು ಎಂದು ...

🍈ಕನಸು ರಾಶಿಯಾಗಿ ಬಿದ್ದಿದೆ ಕವಿಗೆ.. ಆಹಾ ಕಲ್ಪನೆಗೆ ಗರಿ ಮೂಡಿದೆ..ಆ ಕನಸಲಿ ಅವಳ ನೆನಪಲಿ ಮೈಮರೆಯಬೇಕಿದೆ, ಅದಕ್ಕಾಗಿ ಅವಳೇ ಕನಸಲ್ಲಿ ಬರಬೇಕಾಗಿದೆ..🍈

ನೊರೆ ಹಾಲಿನಂತಹ ಪ್ರೀತಿ
ವಿಷವಾಗಿ ಒಡೆಯಿತು

🍍ತೃತೀಯ ಚರಣದಲಿ ಕವಿಯು ಬೇಸರಗೊಳ್ಳುವರು. ಹಾಲು ವಿಷವಾಗಿ ಒಡೆದಿದೆ.. ಬೇಸರ ಮೂಡಿದೆ...ಜೀವನ ಮಂಕಾಗಿದೆ.ಪ್ರೀತಿ ಕುಂದಿದೆ...🍍

ಕಾರಣ ಅರಸಿ‌ ಹೊರಟಿರುವೆ
ಸೋತು ಶರಣಾಗಿರುವೆ ...

🥒ಬೇಸರಕೆ ಕಾರಣ ತಿಳಿದಿಲ್ಲ ಪ್ರಿಯತಮಗೆ, ಕಾರಣವನರಸಿ ಹೊರಟಿಹನು...ಕಾರಣ ತಿಳಿಯದೆ ಸೋತು ಹೋಗಿಹನು. ಜೀವನದಿ ಖುಷಿಯಿಲ್ಲ ಈಗ...🥒

ಮದನಾರಿ ನಿನ್ನ ಮೋಹದ
ಬಲೆಯೊಳಗೆ ಮೈಮರೆತು

🍓 ಮೋಹದ ಬಲೆಯೊಳಗೆ ಬಿದ್ದು ನಲುಗಿ ಹೋಗಿಹನು ಕವಿ. ಬೇಸರದಿ ಗೀಚುತಿಹನು..ಮೋಹದ ಬಲೆಯೆಂಬ ರೂಪಕ ಮತ್ತೆ..ಕವನಕ್ಕೆ ಮುದಬಂದಿದೆ.🍓

ಮನಸ್ಸು ಮರುಳಾಯಿತು 
ಕನಸ ಕೊಲೆಯಾಯಿತು

🥦ನಲ್ಲೆಗೆ ಮನಸು ಕೊಟ್ಟು ,ಕೆಟ್ಟು ಈಗ ಕಳೆದುಕೊಂಡ ಮನಸಿಗಾಗಿ ಪರಿತಪಿಸಿ ರಾಶಿ ಕನಸುಗಳ ಕೊಂದುಕೊಂಡಿಹನು ಕವಿ..ಬಾಳು ಬರಡಾಗಿ ಹೋಗಿಹುದು. ಕೊನೆಯಲ್ಲಿ ಪೂರ್ಣ ವಿರಾಮ ಇದ್ದಿದ್ದರೆ ಚೆನ್ನಾಗಿತ್ತು.🥦

ಆ ಕೆಂಪು ಸೂರ್ಯನಂತೆ
ಸುಡುತ್ತಿದೆ ನನ್ನ ಹೃದಯ

🌶ಕೆಂಪು ಸೂರ್ಯನಂತೆ ಎಂಬಲ್ಲಿ ಉಪಮೆಯ ಬಳಕೆ. ಅಲಂಕಾರಗಳನ್ನು ಅರೆದು ಕುಡಿದ ಗೀತೆಯಿದು.. ಭಾವನೆಗಳ ಮಹಾಪೂರ!  ಸುಡುತಲಿದೆ ಕವಿಮನಸು.. ಆದರೆ
ಜಗದೋದ್ಧಾರಕ್ಕಾಗಿ ಅದು!🌶

ಉಸಿರು ಉಳಿಯಬೇಕಿದೆ..
ಸುರಿಸು ಬಾ ಒಲವ ಮಳೆಯಾ

🍅ಆದರೂ ನೊಂದರೂ, ಬೆಂದರೂ ಕವಿ ಅವಳಾಸೆ ಬಿಟ್ಟಿಲ್ಲ, ಇಂದಲ್ಲ ನಾಳೆ ಅವಳ ಬರುವಿಗೆ ತವಕದಿ ಕಾದಿಹನು. ಒಡೆದು ವಿಷವಾದ ಹಾಲನ್ನೂ ಸರಿಪಡಿಸುವ ಶಕ್ತಿ ಪ್ರೀತಿಗೆ ಮಾತ್ರ ಇದೆಯೇನೋ.. ಅದಕೆ ಕವಿಗೆ ಬದುಕಿನ ಆಸೆಯಿದೆ. ಅದಕೆ ಆಕೆ ಬಂದು ಒಲವ ಮಳೆ ಸುರಿಸಬೇಕಿದೆ..ಕವಿಭಾವ ಸೂಪರ್. ಇಲ್ಲೂ ಕೊನೆಗೆ ಭಾಷಾ ಚಿಹ್ನೆ ಬೇಕಿತ್ತೇನೋ...

ಅಂದದ ಭಾವನೆಹೊತ್ತ ಭಾವಗೀತೆ. ಫೆಂಟಾಸ್ಟಿಕ್.

      🌹ರಮೇಶ್ 🌹

@ಪ್ರೇಮ್@

ಗುರುವಾರ, ನವೆಂಬರ್ 22, 2018

607. ಬುದ್ಧಿಮಾತು

ಬುದ್ಧಿ ಮಾತು..

ಪುತ್ರನೆಂದು ಕ್ಷಮಿಸಿ ರಕ್ಷಿಸಿ ಸಲಹುತಿಹುವೆ
ನೀ ಎನ್ನ ಎದೆ ಮೇಲೆ ನಲಿಯುತಿರುವೆ...
ಹಡೆದ ತಾಯಿಗೆ ಮಗನಾಗಿ ಏನ ಕೊಟ್ಟಿರುವೆ,
ಕಸ, ಪ್ಲಾಸ್ಟಿಕಿನ ರಾಶಿ, ಕರಗಲಾರದ ರಾಸಾಯನಿಕಗಳಿವೆ...

ಮಾನವ ನಿನ್ನೂಟಕೆ ರಾಶಿ ಹೊನ್ನು ಸಾಲದಾಗಿದೆ,
ನಿನ್ನ ಧನದಾಹಕೆ ನನ್ನೊಡಲು ಪೂರ್ತಿ ಬರಿದಾಗಿದೆ..
ತಾಯಿಯಾದರೂ ನಾ ನಿನ್ನನೇ ಬೇಡುವ ಕಾಲ ಬಂದಿದೆ..
ದಯೆತೋರು ನನ್ನ ಮೇಲೆ ಮುಂದಿನ ಜನಾಂಗಕ್ಕೆ ನಾ ಉಳಿಯಬೇಕಿದೆ...

ಮೆತ್ತನೆಯ ಹಾಸಿಗೆಯಂಥ ಎಲೆ ಉದುರಿಸಿ ಬೆಳೆವ
ಮರಗಳು ಕಡಿಕಡಿದು ತುಂಡರಿಸಿ, ತಿಂದು ತೇಗಿ ನಾಶವಾಗಿವೆ..
ಎಳೆ ಬಿಸಿಲ ಹೀರಿ ಬೆಳಕಲಿ ಒಳ್ಳೆ ಗಾಳಿ ಕೊಡುವ
ಕಲ್ಪ ವೃಕ್ಷಗಳು ನಿನ್ನ ಹೀನ ಕಾರ್ಯಕೆ ಬಲಿಯಾಗಿವೆ...

ಬಿಸಿಲ ಝಲವೇರಿ, ಅಕಾಲಿಕ ಮಳೆಯು ಸುರಿಸುರಿದು,
ಕೀಟನಾಶಕಗಳ ಸಿಂಪಡಿಸಿ ಭೂಮಿ ಸತ್ವ ಕಳೆದುಕೊಂಡಿದೆ!
ಮಣ್ಣಿನೊಳಗೆ ಟೈರ ರಾಶಿ, ಫೈಬರ್ ಎಂಬ ಪಿಶಾಚಿ,
ಅಬಲೆ ನಾನು, ಹೇಗೆ ತಾನೆ  ಸಹಿಸಿ ಬಾಳ ಬೇಕಿದೆ ?

ನಿನ್ನ ಕಾರ್ಯ ಹೆಚ್ಚುತಲಿ ಗಾಳಿ ಕಳೆದುಕೊಳ್ಳುವೆ..
ನೀರು ಸಿಗದೆ ಆಹಾರವಿರದೆ ನೊಂದು ಬೆಂದು ಹೋಗುವೆ
ತಾಯಿ ನಾನು ನನ್ನ ಕ್ಷಮೆಗೂ ಎಲ್ಲೆ ಇಹುದು ತಿಳಿದುಕೋ.
ಮಿಥ್ಯ ಮರೆತು ಸತ್ಯದಿಂದ ಬದುಕುವುದ ಕಲಿತುಕೋ...
@ಪ್ರೇಮ್@

606.ಗಝಲ್

ಗಝಲ್...

ಅಂಧಕಾರದೊಳಗೆ ಕುಳಿತು ಅರಚಬೇಡಿ ಸುಮ್ಮನೆ..
ತನ್ನತನದ ಬೇಡಿಬಿಚ್ಚಿ ಕಿರುಚಬೇಡಿ ಸುಮ್ಮನೆ...

ಮನದ ಮೂಲೆಯಲ್ಲಿ ಇಹುದು ನೋವು
ಕಷ್ಟ ತಿಳಿದು ಕುಹಕವಾಡಿ ಗುಡುಗಬೇಡಿ ಸುಮ್ಮನೆ..

ಬಾಳ ಬಂಡಿ ಕ್ಷಣ ಕ್ಷಣಕೂ ನೂಕಲಿಹುದು,
ಮನದಿ ಕಾದು ಕುದಿದು ಕರಗಬೇಡಿ ಸುಮ್ಮನೆ..

ಲಾಲಿ ಹಾಡು ಬಾಲ್ಯದಲ್ಲಿ ಮಾತ್ರವೆಂದು ತಿಳಿದಿರಲಿ
ಜಾಲಿ ಮರದ ಹಾಗೆ ನೀವು ಬದುಕಬೇಡಿ ಸುಮ್ಮನೆ..

ತಂಪನೀವ ಚಂದಿರನ  ಕರೆಯದಿರಿ ಮನೆಯೊಳಗೆ
ಕೆಂಪು ಕಿರಣ ನೀಡೊ ಸೂರ್ಯನ ತಡೆಯಬೇಡಿ ಸುಮ್ಮನೆ..

ವಂದನೆಯು ಮಾತೆಗದುವೆ ಬದುಕ ಕಲಿಸಿದವಳಿಗೆ
ಬುದ್ಧಿ ಕಲಿಸಿದ ಗುರುಗಳನ್ನು ಮರೆಯಬೇಡಿ ಸುಮ್ಮನೆ..

ನಾಟ್ಯದಂತೆ ಪ್ರೇಮದಿ ಪಾಠ ಕಲಿಸಿ ಮೆರೆದ ಜಗದ ಗುರುಗಳಿಹರು
ಪಠ್ಯ ಕಲಿತ ಬಳಿಕ ಮನದಿ ಶಪಿಸಬೇಡಿ ಸುಮ್ಮನೆ..

@ಪ್ರೇಮ್@

605. ನಡೆಯಲಿ ಹೀಗೇ

ನಡೆಯಲಿ ಹೀಗೆ...

ತಂಪು ಮನದ ಕೆಂಪು ರಕುತ
ಕುದಿಯದಿರಲಿ ಮನಗಳೆ
ಕಂಪು ಬೀರೊ ಸೊಂಪು ಹರಡೋ
ಬದುಕು ಸವೆಸಿ ನರಗಳೆ..

ನಾಳೆ ಹೇಗೆ ಏನೊ ಎಂತೋ
ಅರಿಯಲುಂಟು ದಿನಗಳು..
ಇಂದು ಈಗ ನಮ್ಮದಾಗಿ
ಸಲಹಲುಂಟು ಕ್ಷಣಗಳು...

ನವ್ಯ ರಾಗ ನಮ್ಮ ಬಾಳು
ಕಾವ್ಯ -ಗೀತೆ ಹಾಡಲು,
ಸವ್ಯಸಾಚಿ ವದನದೊಳು
ಮಂದಹಾಸ ಮೂಡಲು..

ನಲಿವು ನೋವು ಸವಿಯಲುಂಟು
ಬಾಳ ನೌಕೆ ಸಾಗಲು..
ಕಷ್ಟ ಸುಖವ ಪಡೆಯಲುಂಟು
ಅನುಭವವು ಹೆಚ್ಚಲು..

ಕೆಂಪು ಸೂರ್ಯ ಬರುತಲಿರಲು
ತಂಪು ಚಂದ್ರ ಮರೆಯಲಿ
ರಾತ್ರಿಯಂಧಕಾರ ಬರಲು
ದೀಪ ಬೇಕು ಬಳಿಯಲಿ..

@ಪ್ರೇಮ್@

ಬುಧವಾರ, ನವೆಂಬರ್ 21, 2018

604. ಸಂಕ್ರಾಂತಿ

ಸಂಭ್ರಮದ ಸಂಕ್ರಾಂತಿ

ಸಾಗುತ್ತಲಿ ಬಂದಿದೆ ಇಂದು
ಸಂಭ್ರಮದ ಸಂಕ್ರಾಂತಿ ಸಿಂಧು...
ಸಡಗರದ ಸವಿಯನ್ನು ಉಂಡು
ಎಳ್ಳಿನ ಜೊತೆಗೆ ಬೆಲ್ಲದ ತುಂಡು...

ಸಮರಸದಿ ಇರಿ, ಸುಶಾಂತಿಯ ತಾಳಿ
ಸದ್ಗತಿಯ ಕೋರಿ, ಸರಸದಿ ಬಾಳಿ..
ಸಂಪ್ರೀತಿ ಇರಲಿ, ಸಂತಸವ ತರಲಿ
ಆರೋಗ್ಯ ಚೆನ್ನಾಗಿರಲಿ, ಜಗವೆಲ್ಲ ಹಾಯಾಗಿರಲಿ..

ಸಿಹಿಯನ್ನು ಉಣ್ಣುತ್ತಾ ಕಹಿಯನ್ನು ಮರೆತು,
ಬುವಿಯೊಳಗೆ ಬದುಕುತ್ತಾ, ಮೇಲು ಕೀಳನು ತೊರೆದು..
ಮನದ ದುಗುಡವ ಬಿಸುಟು, ಸ್ವಚ್ಛತೆಯ ಕಾಪಾಡಿ..
ಕಸದ ಕೊಳೆಯನು ಗುಡಿಸಿ, ಸಂಸ್ಕೃತಿಯ ಬಿಡಬೇಡಿ...

ಹಬ್ಬಗಳ ಸಾಲಿನಲಿ ಹೊಸ ಬೆಳೆಗೆ ಸುಗ್ಗಿ,
ಸುಗ್ಗಿಯ ಕುಣಿತಕ್ಕೆ ಹಿರಿ-ಕಿರಿಯರು ತಗ್ಗಿ..
ತೆನೆ ಹೊತ್ತು ಮನೆ ಬೆಳಗಿ ಹೊಸದಾದ ಬಾಳು,
ಕಷ್ಟ ಪಡದಿರುವವನ ಬದುಕೆಲ್ಲಾ ಗೋಳು...

ಸಂಕ್ರಾಂತಿ ಬಂತು, ಸಡಗರವ ತಂತು
ಸಂದೇಶ ಹೊತ್ತು, ಸಂತೋಷ ಮಿಳಿತು
ಸಂದೀಪ ಬೆಳಗಿ, ಸಂತಾಪ ಕರಗಿ
ಸಂಬಂಧ ಒಂದಾಗಿ, ಸಂಗೀತ ಮಿರುಗಿ...

@ಪ್ರೇಮ್@