ಶುಕ್ರವಾರ, ಜನವರಿ 1, 2021

ಕನ್ನಡದ ಚುಟುಕುಗಳು

ಚುಟುಕುಗಳು

*ಕನ್ನಡ*
1.

ಕರಮುಗಿಯುವೆ ಕರುಣೆಯ ಕನ್ನಡ ತಾಯಿಯೇ
ಕಸುವಿಗೆ ನೀಡೆನಗೆ ಶಕ್ತಿಯ ಮಾಯೇ
ಕೊಸರದೆ ಬಾಳಲು ಅನುವನು ನೀಡು
ಕಂಕಣ ತೊಟ್ಟು ನಿನಗಾಗಿ ಬದುಕುವಂತೆ ಮಾಡು..


2. 

ಕನಕಾಂಬರ ಮಡಿದಿಹ ಭುವನೇಶ್ವರಿ ದೇವಿಯೆ
ಕರವನು ಮುಗಿವೆನು ಕಾಪಾಡು ತಾಯೇ
ಕೊರಳನು ಬಾಗುತ ವರವನು ಬೇಡುವೆವು
ಕೊನೆಯಾಗದು ಬಳಕೆಯು ಮುದ್ದಿನ ಕನ್ನಡವು..

3.

ಮರೆಯದ ಕೊನೆಯಾಗದ ನಲ್ಮೆಯ ಕನ್ನಡ
ಕರಗದ ಕೊರಗದ ಬಳಗದ ಕನ್ನಡ
ಮರುಗದೆ ಮರೆಯದೆ ಉಳಿಸಲು ಕನ್ನಡ
ಹೆದರದೆ ಬೆದರದೆ ಬಳಸಲು ಕನ್ನಡ.

4. 

ಕನ್ನಡದ್ ಸರ್ವ ಪದ್ಗಳ್ ಕೇಳೋಕಂದಾನೆ 
ಕನ್ನಡ ಕಂದ್ರು ಎಲ್ರೂನು ನೋಡೋಕಂದಾನೇ
ಕನ್ನಡದ್ ಮನಸ್ಗಳ್ ಬಾಳೋದ್ ಅಂದಾನೇ
ಕನ್ನಡಕಾಗಿ ದಿನಾ ದುಡ್ಯೋದ್ ಅಂದಾನೇ..

5. 

ಹಾಗಲ್ಕಾಯಿ ರುಚಿ ನೋಡ್ದೋವ್ರು ಬಿಡೋಲ್ಲ
ಮಾವಿನ್ಕಾಯಿ ಹುಳಿ ಸಿಹಿ ಅಂದಾನೇ ಅಲ್ವಾ?
ನುಗ್ಗೇಕಾಯಿ ಸಾಂಬಾರ್ ತಿನ್ದೇ ಇರೋರಿಲ್ಲ
ಕನ್ನಡ ಭಾಷೇನ್ ಇಷ್ಟ ಪಡ್ದಿರೋರಿಲ್ಲ..
@ಪ್ರೇಮ್@
07.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ