ಗಝಲ್
ಬಡ ಅಮಾಯಕ ಮತದಾರರೆನ್ನ ಕೋಟೆ!
ಬಡತನ ರೇಖೆಗಿಂತ ಕೆಳಗಿರುವವರೆನ್ನ ಬೇಟೆ!!
ಹಲವಾರು ಸುಳ್ಳುಗಳ ಸೇರಿಸಿ ಭಾಷಣವ ಬಿಗಿವೆನು,
ಮುಗ್ಧರು ನನ್ನ ನಂಬಿ ಮತದಿ ತುಂಬುವರೆನ್ನ ಮೂಟೆ!
ಒಂದಷ್ಟು ಅವರದೇ ಹಣವ ಕೊಟ್ಟುಬಿಡುವೆ,
ಧನದಲೆ ತೀರಿಸಿಕೊಂಡು ಬಿಡುವೆ ನನ್ನ ತೀಟೆ!
ಲಕ್ಷ್ಮಿ ಸಹಕರಿಸುವಳು ಸದಾ ಓಡಾಟಕೆ!
ಸಿಗಲು ವ್ಯಯಿಸುವೆನು ಬಹಳ, ಎನ್ನ ಸೀಟೆ!
ತುರುಕುತ್ತ ಕೈಯೊಳಗೆ ಬೇಡುವುದು ಅಮಾಯಕನ
ಮೊದಲೆ ಎಣಿಸೆಣಿಸಿ ಕೊಟ್ಟು ಬಿಡುವುದೆನ್ನ ನೋಟೆ!
ಪಕ್ಷ ಹೆಸರಿಗೆ ಮಾತ್ರ , ಜನರು ಕೂಡಲು ಬೇಕು!
ಧನದಿಂದ ತಿರುಗುತಲಿರಬೇಕು ಕೈಲೆನ್ನ ರಾಟೆ!
ಮನಮಂಚದಲಿ ಪ್ರೇಮವದು ಕಾಣದೆಂದೂ!
ಮದುರಸವ ಹೀರುತಲಿ ಮರೆವೆನೆನ್ನ ಭರಾಟೆ!
@ಪ್ರೇಮ್@
05.09
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ