ಭಾವಗೀತೆ
ಪಾಡು
ಭಾವದಲೆಗಳಲಿ ತೇಲಿ ಹೋಗಲಿ
ನೋವು ಎಂಬ ಛಾಯೆ
ಸಾವಿಗಂಟುತಲಿ ಬೆಳೆದ ಜೀವಿಗಳ
ಮೋಹವಿಲ್ಲಿ ಮಾಯೆ..
ಇಂದು ಇಲ್ಲಿ ನಾಳೆ ಇನ್ನೆಲ್ಲೋ
ಬದುಕ ಹೆಜ್ಜೆ ಸಾಲೆ
ಕಂದು ಬರುವರೆಗೆ ಕೋಪ ಮತ್ಸರವು
ಸಿಡುಕು ಏಕೆ ಬಾಳೆ..
ಭೋಗ ಭಾಗ್ಯದೊಳು ಭೀತಿ ಕುಂದಿಹುದು
ಪ್ರೀತಿಗೆಲ್ಲಿ ಜಾಗ?
ಮೋಸ ವಂಚನೆಯ ಬೀಜ ಬಿತ್ತಲು
ನೀತಿಗೆಲ್ಲಿ ರಾಗ?
ನಾನು ನಂದೆ ಮೆರೆವ ಎದೆಯೊಳಗೆ
ಹಂಚಿಕೊಳುವ ಹಾಡೆ?
ನಾಯಿ ನರಿಯಂತೆ ಕಿತ್ತು ತಿನುತಿರಲು
ಮುಂಚಿನಂತೆ ಪಾಡೆ?
@ಹನಿಬಿಂದು@
21.07.2023
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ