ಸೋಮವಾರ, ಆಗಸ್ಟ್ 19, 2024

ಕಟ್ಟಿರುವೆ

ಕಟ್ಟಿದ್ದೆ ರಕ್ಷೆಯನು ಬಿಡಬೇಡ ಎಂದು
ಬಂಧನವು ಅನುದಿನವು ಬಿಡಬಾರದೆಂದು
ಅದೇಕೆ ಹಾಗಾಯ್ತೋ ನೋವು ನೂರಾಯ್ತು
ಕಾಳಜಿ ಕಡಿಮೆಯಾಗಿ ಮನವು ಚೂರಾಯ್ತು

ಮನವು ಮರ್ಕಟವಿಲ್ಲಿ ಇಂದಿನಂತೆ ನಾಳಿಲ್ಲ
ತನುವ ಬಯಸಲು ಜನರಿಗೇನು ಕಮ್ಮಿಯಿಲ್ಲ
ಅಕ್ಕ ತಂಗಿಯ ತೆರದಿ ಕಾಣುವವರಿಲ್ಲ
ಬೇಕೇ ಬೇಕು ತಮಗೆ ಸಿಕ್ಕಿದ್ದ ಅನುಭವಿಸಲಿಕ್ಕೆಲ್ಲ

ಬಾಳು ಚೂರಾಗಿ ಮಾತು ನೀರಾಗಿ ಹೋಗಿತ್ತು
ಕಾಳು ನುಂಗಿದ ಹಕ್ಕಿ ಪರರ ಪಾಲಾಗಿತ್ತು
ಹಾಲು ಮನವದು ಹೋಳು ಹೋಳಾಗಿತ್ತು
ಬಾಳುವೆಯು ಆಸೆ ಮುಗಿಸಿ ಹೊರಡಲನುವಾಗಿತ್ತು

ತಾನು ತನ್ನದು ಎಂದು ಏನಿಹುದು ಜಗದೊಳಗೆ
ಬಂದಾಗ ಬೇರೆಯೇ ಮನೆಯಿಂದ ಹೊರಗೆ
ದೈವ ದೇವರಿಗೆ ಮೊರೆ ಇಡಬೇಕು ಅರೆ ಘಳಿಗೆ
ಇಲ್ಲವಾದರೆ ತುಂಬದು ನಮ್ಮೀ ಮನದ ಜೋಳಿಗೆ
@ಹನಿಬಿಂದು@
19.08.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ