ಹನಿ ಮಿಡಿದಿದೆ
ಕಣ್ಣ ರೆಪ್ಪೆಯ ಸಣ್ಣ ಕೂದಲಿನ ತುದಿಯಷ್ಟು
ಮಣ್ಣ ಅತಿ ಸಣ್ಣ ಕಾಣದ ಬಿಂದುವಿನಷ್ಟು
ಸುಣ್ಣ ಹಾಕಿ ಉಳಿದ ಸೂಜಿಯ ಮೊನೆಯಷ್ಟು
ತಣ್ಣನೆಯ ಮಂಜಿನ ಒಂದು ಹನಿಯಷ್ಟು
ಗಮನ ಸಮಯ ಪ್ರೀತಿಯ ಗೆಳೆತನ ಬೇಕಾಗಿದೆ..
ಇಂದಿಲ್ಲಿ ಈಗ ನಾಳೆ ಮರುಕ್ಷಣ ಮರುದಿನ ಅದೆಲ್ಲೋ
ಮುಂದೆ ಕಣ್ಣೀರು ಜಾರಿ ಹೋದರೆ ಪಾತಾಳದಲ್ಲೋ
ನಾನೆಂಬ ಪದ ಹೋಗಿ ಇನ್ಯಾರ ದೇಹದಲ್ಲೋ
ಕಂದನಾಗಿ ಮತ್ತೆ ಹುಟ್ಟಿ ಅದ್ಯಾವ ಮಡಿಲಿನಲ್ಲೊ
ಇಂದಿಲ್ಲಿ ಜೊತೆಯಾಗಿ ಇರುವಾಗ ಬಳ್ಳಿ ಮರದ ಆಸರೆಗೆ ಕಾದಿದೆ
ಕಾಡಿ ಕಾಡಿ ನೀಡೆಂಬುದ ಮತ್ತೆ ಮತ್ತೆ ಬೇಡಿದಂತೆ
ಕೂಡಿ ಬಾಳುವ ಸುಖವ ಕೊಡುವ ಭರವಸೆಯ ಬೆಳಕಂತೆ
ಹಾಡಿ ಹೊಗಳಿ ಕಲೆತು ಬಾಳುವ ಒಂದೇ ಉಸಿರಂತೆ
ಮೋಡಿ ಮಾಡಿ ಬೆಳೆಸುವ ಮಹಾನ್ ಕನಸುಗಾರನಂತೆ
ಜೋಡಿ ಬಳಸಿ ಬಂದಿಹುದು ನಯನವೆರಡು ಒಂದಾದಂತೆ
ಬೇಕು ಬೇಕೆಂಬ ತುಡಿತದ ಸವಾಲಿನ ಬದುಕು
ಬೇಕೆಂಬುದು ಸಿಗದೆ ಬೇಡವೆಂಬುದ ನೀಡುವ ವಿಧಿಯೆಡೆಗಿನ ಅಳುಕು
ಸಾಕೆಂಬ ಒಂದು ಕ್ಷಣದ ಹೊಟ್ಟೆಯ ಹಸಿವಿನ ತುಣುಕು
ಏಕೆಂಬುದೇ ತಿಳಿಯದೆ ಹಲವು ಕ್ಷಣ ಭಾವರಹಿತ ಸಿಡುಕು
ಮತ್ತದೇ ಗೆಳೆತನಕೆ ಆಶಿಸುವ ವಿಧ ವಿಧ ಪರಿಯ ಮಿಡಿತದ ಇಣುಕು
@ಹನಿಬಿಂದು@
22.09.2025
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ