ಗುರುವಾರ, ನವೆಂಬರ್ 30, 2017

72. ಗಝಲ್ -2

1.ಗಝಲ್
ನನ್ನ ಜೀವನದಿ ನೀ ಬಂದು
ಸೇರಿ ನಾವು ಒಂದಾಗಿದ್ದು ನಾದ11

ನಾವಿಬ್ಬರು ಒಂದಾಗಿ ಜೀವನದಿ
ಸುಖ ಜೀವನ ಹಾಡಿದ್ದು ನಾದ11

ನಿನ್ನೊಲವು ನನ್ನದಾಗಿ ನನ್ನ
ಉಸಿರು ನಿನ್ನದಾಗಿ ಬೆರೆತದ್ದು ನಾದ11

ನಾ ನೀನಾಗಿ ನೀ ನಾನಾಗಿ
ನಮ್ಮಿಬ್ಬರ ಅನುರಾಗ ನಾದ11

ನಿನ್ನಿಂದ ಪಡೆದ ಅನುಭವ
ನೀ ನೀಡಿದ ಭಾವ ನನ್ನ ನಾದ11

ನೀ ಮೀಟಿದ ದನಿಯು
ನನ್ನೆದೆಯಲಿ ಅನುರಣಿಸಿದ್ದು ನಾದ11

@ಪ್ರೇಮ್@

2.ಗಝಲ್
ಮೋಡಕ್ಕೆ ತಂಗಾಳಿ ಸೋಕಿ,ತಂಪಾಗಿ ನೀರಾಗಿ ಸುರಿದಾಗ ಅಲ್ಲಿ ಸಂತಸ...
ಹೇಳಲೇನೋ ಹರುಷ,ನೋಡಲೇನೋ ಪುಳಕ..

ಮಳೆ ಸುರಿವ ನಾದ ನಿನಾದದ ವೈಭವ,
ಅದ ಪದಗಳಲಿ ಕಟ್ಟಿ ಕೊಡಲಾರದ ಪುಳಕ...

ಖುಷಿಯಿಂದ ಉಬ್ಬಿಹೋದ ದುಂಬಿಯ ಹಾರಾಟ
ಮನದಣಿಯೆ ನೋಡಿ ಆದ ಆನಂದದಲ್ಲೇನೋ ಪುಳಕ...

ಆ ಕೆಂಪು ಮಣ್ಣಿನ ಕಣಕಣದಿಂದ ಹೊರಬಂದ
ಆ ಸುಗಂಧದಲ್ಲೇನೋ ನವ ಪುಳಕ...

ಪ್ರಾಣಿ-ಪಕ್ಷಿಗಳು ತಮ್ಮ ಬಳಗವ ಕೂಗಿ ಕರೆದು
ಗೂಡಿನೊಳು ಕೂಡಿ ಹಾಕಿ ಮುತ್ತಿಡುವ ಕ್ಷಣ ಮೈ-ಮನ ಪುಳಕ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ