ಗುರುವಾರ, ನವೆಂಬರ್ 30, 2017

33. 3 ಕವನಗಳು

1.ಬಾಲ್ಯವೇ ಎಲ್ಲಿ ಹೋದೆ?

ನನ್ನ ಎದೆಯ ಕದವ ತಟ್ಟಿ,
ಪ್ರೀತಿಯನ್ನು ಎಳೆದು ಕಟ್ಟಿ,
ಅಮ್ಮನೊಲವ ಪಟ್ಟಿ ಕಟ್ಟಿ,
ತಮ್ಮ-ತಂಗಿಯೊಡನೆ ಕಟ್ಟಿ-ಮೀಟಿ..

ಗೆಳೆಯರೊಡನೆ ಮದುವೆಯಾಟ,
ಚಿಟ್ಟೆಯೊಡನೆ ಕೋಳಿಯಾಟ,
ಪಕ್ಕದ ಮನೆಗೆ ಇಣುಕು ನೋಟ,
ಆಟದಂಗಳಕ್ಕೆ ತಪ್ಪದ ಓಟ..

ಕ್ಲಾಸಿನಲ್ಲಿ ಓದು-ಬರಹಕ್ಕೆ ಫೈಟು,
ತಂಗಿ-ತಮ್ಮನ ಅಂಗಿ ಟೈಟು,
ಚಾಕಲೇಟು ಬೈಟು-ಬೈಟು,
ಮನೆಯಲೆಲ್ಲ ಕೋಲಿನೇಟು..

ಮುದ್ದು ಬಾಲ್ಯ ಎಲ್ಲಿ ಹೋದೆ?
ಗುದ್ದಿ ಗುದ್ದಿ ಓಡಿ ಹೋದೆ..
ಪೆದ್ದುತನವ ನೀಡಿ ಹೋದೆ..
ನೀನೇಕೆ ಬಲು ದೂರವಾದೆ?
@ಪ್ರೇಮ್@

2.ತಂಗಾಳಿ

ತಾಗಿ ತಣ್ಣಗೆ ತಂಪಾದ ತಂಗಾಳಿ,
ತಣಿಸಿದೆ ತನ್ಮನ ತಂಪಿನಿರುಳಲಿ.....

ತಡರುತ್ತ, ತೊಡರುತ್ತ,ತಡವರಿಸುತ್ತ ಬಂತು,
ತಣ್ಣನೆಯ ತಂಗಾಳಿ ತಳಮಳವ ತಂತು....

ತೋರಣದಿ ತಾತನು ತರಿಸಲಿಲ್ಲ ಅದನು,
ತಾಯತದಿ ತಮ್ಮ ತರಲಾಗಲಿಲ್ಲ ತರುವನು...

ತೋರದು ತನು-ಮನ ತಂಪು ತಂಗಾಳಿ,
ತಡೆಯದು ತವಕವ ತಬ್ಬುವ ತವಕದಲಿ...

ತವರಿಗೆ ಬರುವ ತವರ ಕುಡಿಯಂತೆ,
ತಾಗುತ ತಂದಿತು ತನ್ಮಯತೆ...

ತಂಗಾಳಿ ತಂದಿತು ತಂಪಿನ ಅನುಭವ,
ತಣಿಸಿತು,ಕುಣಿಸಿತು ನನ್ನೀ ಮನವ....
@ಪ್ರೇಮ್@

3.ಕ್ಷಣ

ನಿನ್ನೊಡನೆ ಕಳೆವ ಪ್ರತಿಕ್ಷಣ
ಅದೇನು ಚಂದ!
ಅದೆಂಥ ಅಪರಿಮಿತ ಉತ್ಸಾಹ!
ಸರಸ-ಸಲ್ಲಾಪದ
ಅತಿ ಮಧುರ ಕ್ಷಣಗಳು
ಸ್ವರ್ಗವೇ ಧರೆಗಿಳಿದು ಬಂದಂತೆ...
2. ಕಿರಣ
ನೀ ನನ್ನ ಪ್ರೀತಿ ಕಿರಣ
ಬಿಡಬೇಡ ಪ್ರೇಮದ ಬಾಣ
ಜತೆಗೇ ಸಾಗಲಿ ನಮ್ಮೀ ಬಾಳ ಪಯಣ
ನಿನ್ನೆದೆಯೇ ನನ್ನಿರುವಿನ ತಾಣ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ