ಶುಕ್ರವಾರ, ಜುಲೈ 26, 2019

1131. ಹಾರೈಕೆ-ಶರ ಷಟ್ಪದಿ

ಬಳಗವ ನಡೆಸುತ
ಸರ್ವರ ಹರಸುತ
ನಡೆಯುವ ಹಿರಿಯಗೆ ಶುಭಾಶಯ...

ಎಲ್ಲರ ತಿದ್ದುತ
ಗುರುವಿನ ಕಾರ್ಯವ
ಮಾಡುತ ನಲಿವಗೆ ಹಾರೈಕೆಗಳು...
@ಪ್ರೇಮ್@

1130. ಯುದ್ಧ ಗೆದ್ದ ಯೋಧ

ಜೈ ಕಿಸಾನನೆ , ಜೈ ಕಾವನೆ , ಜೈ ದೇಶದ ವೀರನೇ..
ಜೈ ಅಮರನೆ, ಜೈ ಯೋಧನೆ, ಜೈಜೈ ಮಹಾ ಶೂರನೇ..
ಜೈ ರಕ್ಷಕ, ಜೈ ಮುಕುಟ, ಜೈ ಭಾರತಿ ಪುತ್ರನೇ,
ಜೈ ಕಾಯಕ, ಜೈ  ಕೃಷಿಕ, ಜೈಜೈ  ನರದೇವನೇ..//1//

ದೇಶದ ಗಡಿಯಲ್ಲಿ ಬಹಳವೆ ಕೊರೆವ
ಹಿಮದ ಹಾಸಿನ ಚಳಿಯ ಮಡಿಲಲಿ
ತನ್ನ ಕೈ ಕಾಲು ಚಳಿಗೆ ಕರಗಿ ಹೋದರೂ ದೇಹದಿ,
ತಡೆಯಲಾರದ ತಣ್ಣಗಿನ ವಾತಾವರಣದಿ ನಿಂತು
ನೆತ್ತರೆಲ್ಲ ಹೆಪ್ಪುಗಟ್ಟಿದರೂ ದೇಶಕಾಗಿ ಹೋರಾಡುತ...//೨//

1129. ಭಕ್ತಿಗೀತೆ-ಲಕ್ಷ್ಮಿ ಸ್ತುತಿ

ಲಕ್ಷ್ಮಿ ಸ್ತುತಿ

ಬಾಗು ಮನವೇ ಬಾಗು
ಲಕ್ಷ್ಮಿ ದೇವಿಗೆ ಬಾಗು
ಸಿರಿ ಪಾದಕೇ ನಮಿಸು
ತಪ್ಪಿತಸ್ಥರ ಕ್ಷಮಿಸು...

ಅಮರವಾಗಲಿ ಈ ಬದುಕು
ಬೇಡ ಸುಳ್ಳಿನ ತಳುಕು!
ನಾ ಮೇಲು ನೀ ಮೇಲೆನುವ
ದೂರಾಗಲಿ ಮಲಿನ ಭಾವ .....

ಧನಕನಕ ಬಾಳಿಗೆ ನೀಡಿ
ಸಲಹು ಬಾರೇ ತಾಯಿ!
ಆರೋಗ್ಯ ಶಾಂತಿಯನು
ಮೊದಲು ಸುರಿಸುತ ಕಾಯೇ..

ಮನಕೆ ಗುಣದೈಶ್ವರ್ಯವ
ಒದಗಿಸುತ ನೀ ಮಾಯೆ...
ಸರ್ವರಾ ಹಿತ ಬಯಸೋ
ನೈಜ ಹೃದಯವ ಕಾಯೇ.. 

@ಪ್ರೇಮ್@
27.07.2019

1126. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-51

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-51

ಹಾಯ್ ಫ್ರೆಂಡ್ಸ್, ಬರ್ತಾ ಇರುವ ಮಳೆಗೆ ಬೆಚ್ಚಗೆ ಒಲೆ ಬುಡದಲ್ಲಿ ಕೂತು ಬಿಸಿ ಕಾಯಿಸ್ತಾ ಅಮ್ಮ ಮಾಡಿಕೊಡುವ ಬಿಸಿ ಬಿಸಿ ರೊಟ್ಟಿಯೋ, ನೀರ್ ದೋಸೆಯೋ ಒಂದೊಂದೆ ಖಾಲಿ ಮಾಡೋ ಆ ಕ್ಷಣ ಈಗ ಇರಬೇಕಿತ್ತು ಅನ್ನಿಸಲ್ವಾ? ಈಗ ಒಲೆಯೂ ಇಲ್ಲ, ಅಷ್ಟು ಫ್ರೀ ಆಗಿರೋ, ಪೇಶೆನ್ಸ್ ಇರೋ ಅಮ್ಮಂದಿರೂ ಕಡಿಮೆ! ಆದರೂ ಮಿಕ್ಸೀಲಿ ರುಬ್ಬಿ, ಗಂಟೆ ಗಟ್ಟಲೆ ನಿಂತು, ಸ್ಟೌ ನಲ್ಲಿ ದೋಸೆ ಮಾಡಿ ರಮಿಸಿ, ಬೈದು, ಮುದ್ದಾಡಿ, ಮೊಬೈಲ್ ತೋರಿಸಿ ಮೆಲ್ಲನೆ ತಿನ್ನಿಸೋ ಅಮ್ಮನ ಪ್ರೀತಿ ಮಾತ್ರ ಎಳ್ಳಷ್ಟೂ ಕಡಿಮೆ ಆಗಿಲ್ಲ ಅಲ್ವಾ? ಹೌದು, "ಹೆತ್ತವರಿಗೆ ಹೆಗ್ಗಣ ಮುದ್ದು " ಅಂತ ಗಾದೇನೇ ಇಲ್ವ? ಹೆತ್ತ ತಾಯಿಗೆ ತನ್ನ ಮಗು ಅದೇನೇ ಆಗಿರಲಿ ಅದು ಪ್ರೀತಿಯ ಖನಿ!
    ಹೌದು, ಪ್ರಪಂಚದಲ್ಲಿ ಯಾರ ದೇಹದ ಆಕಾರವೂ ಒಂದೇ ಸಮನಾಗಿಲ್ಲ, ಮನುಷ್ಯ ರೂಪಿ ಮಾನವರ ಅಂಗಾಂಗ, ದೇಹ ತೂಕ, ಎತ್ತರ, ಮೈಕಟ್ಟು, ಕಣ್ಣು, ಮೂಗು, ಮುಖ, ಸ್ವರ, ತುಟಿ, ಹಣೆ,ಕೂದಲು, ಕೈ ಬೆರಳಿನ ಗೆರೆಯಲ್ಲೂ ವ್ಯತ್ಯಾಸ! ಅಬ್ಬಾ! ದೇವನದು ಅದೆಂತಹ ಸೃಷ್ಟಿ! ಆದರೂ ಪ್ರಪಂಚದಲ್ಲಿ ಒಂದೇ ತರಹ ಇರುವ ಏಳು ಜನರಿರುತ್ತಾರಂತೆ! ಆಶ್ಚರ್ಯ ಅನ್ನಿಸಲ್ವಾ?
    ಕೆಲವರ ಕಾಲು ಉದ್ದ, ಉದ್ದ ಕೈ, ಕಪ್ಪು ಮೈ ಬಣ್ಣ, ಹಾಗೇನೇ ಬೆಳ್ಳಗೆ ಹಾಲಲ್ಲೇ ತೊಳೆದಿಟ್ಟಂಥ ಮೈ ವರ್ಣ, ಕಪ್ಪಿದ್ದರೂ ಲಕ್ಷಣವಾದ ಮತ್ತೆ ಮತ್ತೆ ನೋಡುವ ಎಂದೆಣಿಸುವ ಮುಖ, ಅಟ್ರಾಕ್ಟಿವ್ ಕಣ್ಣುಗಳು, ಮತ್ತೆ ಕೆಲವರು ತುಂಬಾ ಎತ್ತರವಾದರೆ, ಹಲವರು ತೀರಾ ಗಿಡ್ಡ, ಕೆಲವರು ತೀರಾ ಕಡ್ಡಿಯಾದರೆ, ಹಲವರು ತೀರಾ ದಪ್ಪ, ಇನ್ನು ಕೆಲವರದು ಎಲ್ಲದರಲ್ಲೂ ಸಾಧಾರಣ ಎನ್ನುವ ಸ್ಟೀಲ್ ಬಾಡಿ! ಯಾವುದು ಅಂದ, ಯಾವುದು ಚಂದ, ಯಾವುದು ಸರಿ..ಡಿಸೈಡ್ ಮಾಡುವುದು ಜೊತೆಗಿರುವವರ, ಅಂತರಂಗ ಅರಿತವರ ಕಣ್ಣುಗಳು!
  ಸಪೂರ, ಕಡ್ಡಿ ಸ್ಲಿಮ್ ಅಂತಾರಲ್ಲಾ ಹಾಗಿರುವವರು ಮಾತ್ರ ಒಳ್ಳೆಯವರು, ದಪ್ಪಗಿರುವವರು ಕೆಟ್ಟವರು ಎಂದು ನಾವ್ಯಾವತ್ತೂ ಡಿಸೈಡ್ ಮಾಡುವ ಹಾಗಿಲ್ಲ ಅಲ್ಲವೇ? ಏಕೆಂದರೆ ನಮ್ಮ ಗುಣಗಳನ್ನು ನಿರ್ಧರಿಸುವುದು ನಮ್ಮ ದೇಹವಲ್ಲ, ಮನಸ್ಸು! ಡಾ. ಎ.ಪಿ.ಜೆ ಅಬ್ದುಲ್ ಕಲಾಮ್ ರವರು ಕುಳ್ಳರಾಗಿದ್ದರು, ಅಮಿತಾಬ್ ಬಚ್ಚನ್ ತುಂಬಾ ಎತ್ತರವಾಗಿದ್ದಾರೆ, ಕಿರಣ್ ಬೇಡಿ ಮೀಡಿಯಂ ಫಿಟ್ಟೆಸ್ಟ್, ಕ್ರಿಕೆಟ್ ಮಾಂತ್ರಿಕ ಸಚಿನ್ ಕೂಡಾ ಹೆಚ್ಚು ಎತ್ತರವಾಗಿಲ್ಲ ! ಅಟಲ್ ಬಿಹಾರಿ  ವಾಜಪೇಯಿಯವರಿಗೆ ತಾನು ದಪ್ಪ ಅನಿಸಲಿಲ್ಲ! ರೆಮೋರವರ ಕಂಠಕ್ಕೆ ಅವರ ದೇಹದ ಗಾತ್ರ ಅಡ್ಡಿ ಬರಲಿಲ್ಲ, ಪಿ.ಟಿ. ಉಷಾ, ಕರ್ಣಮ್ ಮಲ್ಲೇಶ್ವರಿಯವರ ಸಾಧನೆಗೆ ದೇಹದ ಬಣ್ಣ ಅಡ್ಡಿಯಾಗಲಿಲ್ಲ!
   ಇದು ಅಂಗಾಂಗ ಸರಿ ಇದ್ದು ಸಾಧಿಸಿದವರ ಮಾತಾಯಿತು! ದೇವರು ಹಲವರನ್ನು ದೈಹಿಕವಾಗಿ ಚಾಲೆಂಜ್ಡ್ ಆಗಿ ಸೃಷ್ಠಿಸಿರುವರು!ಅವರೂ ಯಾರೂ ಕಡಿಮೆಯಿಲ್ಲ ಸಾಧನೆಯಲ್ಲಿ! ಕಣ್ಣು ಕಾಣದ ಅಪ್ರತಿಮ ಗಾಯಕರು, ಕಾಲೇ ಇಲ್ಲದ ನೃತ್ಯಗಾರರು, ಕೈಗೆಳೇ ಇಲ್ಲದೆ ತನ್ನೆಲ್ಲಾ ಕೆಲಸಗಳ ಕಾಲಲ್ಲೇ ಪೂರೈಸುವ ಮಹಾನ್ ದೃಢಚಿತ್ತರು! ವಾವ್!ಮನಸ್ಸಿನಲ್ಲಿ ದೃಢ ಸಂಕಲ್ಪವಿದ್ದರೆ ದೈಹಿಕವಾಗಿ ಹೇಗಿದ್ದರೂ ಸಾಧಕನಾಗುವನು! ವೀಕ್ ಮೈಂಡ್ ಹೊಂದಿದ ಸೋಮಾರಿ ಚೆನ್ನಾಗಿ ತಿಂದು ದಷ್ಟಪುಷ್ಟನಾದರೂ ನಾಲಾಯಕ್ಕು!
       ಮಾನವನಿಗೆ ಅತಿ ಮುಖ್ಯವಾದದ್ದು ಅವನ ಮನಸ್ಸು ಮತ್ತು ಆಲೋಚನೆಗಳು! "ನೀವಂದುಕೊಂಡಂತೆ ನೀವು ಬದುಕುವಿರಿ, ಯಾರಿಗೆ ಯಾವುದೂ ಅಸಾಧ್ಯವಲ್ಲ" ಎಂದು ನೆಪೋಲಿಯನ್ ಹೇಳಿದಂತೆ ಯಾವ ವೈಕಲ್ಯವಿದ್ದರೂ ಸರಿ, ಮನಸ್ಸಿನ ವೈಕಲ್ಯವಿರಬಾರದು ಅಷ್ಟೆ!
    ಕಣ್ಣು ಕಾಣದವರೂ ಪ್ರಪಂಚದ ಅತಿ ಎತ್ತರ ಶಿಖರವಾದ ಹಿಮಾಲಯ ಏರಿಲ್ಲವೇ? ಕಾಲುಗಳಿಲ್ಲದವರೂ ಪ್ಯಾರಾ ಓಲಿಂಪಿಕ್ ನಲ್ಲಿ ಓಡಿ ಪದಕ ಗಳಿಸಲಿಲ್ಲವೇ? ಬೆನ್ನು ಮೂಳೆ ತುಂಡಾಗಿ, ವರ್ಷಗಟ್ಟಲೆ ಹಾಸಿಗೆಯಲ್ಲೆ ಕಳೆದು ತದನಂತರ ವೀಲ್ ಚೇರ್ ನಲ್ಲೆ ಮೋಟಿವೇಟರ್ ಆಗಿ ಕೆಲಸ ಮಾಡುತ್ತಿರುವ ಅದೆಷ್ಟು ಜನರನ್ನು ನಾವು ನಿತ್ಯ ಸಾಮಾಜಿಕ ಜಾಲ ತಾಣಗಳಲ್ಲಿ ನೋಡಿಲ್ಲ? ಕೈಗಳಿಲ್ಲದೆಯೇ ಕಾರ್ ಚಲಾಯಿಸುವ, ಅಷ್ಟೇಕೆ ವಿಮಾನವನ್ನೂ ಹಾರಿಸುವ ಜೆಸ್ಸಿಕಾ ಕಾಕ್ಸ್ ಬಗ್ಗೆ ನೀವು ಕೇಳಿಲ್ಲ, ನೋಡಿಲ್ಲವಾದರೆ ಇಂದೇ ಗೂಗಲ್ ನಲ್ಲಿ ಹುಡುಕಿ! ಇವರೆಲ್ಲರ ಮುಂದೆ ಎಲ್ಲಾ ಸರಿಯಿರುವ ನಾವುಗಳು ನಾನು ದಪ್ಪವೆಂದು ಊಟ ಬಿಟ್ಟರೆ, ನಾನು ಸಪೂರವೆಂದು ದಿನಕ್ಕೆ ಹತ್ತಾರು ಬಾರಿ ತಿಂದರೆ ಸರಿಯಾಗುವೆವೇ? ದೇವರು ತಾನೇ ನಿರ್ಧರಿಸಿ ಅಪ್ಪ ಅಮ್ಮನ ಸಹಾಯದಿಂದ ನಮಗೊಂದು ರೂಪುಕೊಟ್ಟು ಸೃಷ್ಟಿ ಮಾಡಿ ಏನನ್ನೋ ಸಾಧಿಸಲು ಭೂಮಿಗೆ ಕಳಿಸಿರುವನು. ತನ್ನ ವರವಾಗಿರುವ ದೇಹವನ್ನು ಪ್ರೀತಿಸಿ ಅದನ್ನು ದಂಡಿಸಿ ತನ್ನ ಗುರಿ ಸಾಧಿಸುವ ಬದಲು, ದೇಹದ ಆಕಾರವನ್ನು ಬದಲಾಯಿಸುವುದರಲ್ಲೆ ಸಮಯ ಕಳೆದರೆ ಹೇಗೆ? ಬಾಡಿ ಬಿಲ್ಡರ್ಸ್, ಸಿನೆಮಾ ನಟ ನಟಿಯರಿಗೆ ಅದು ಉಪಯೋಗವಾಗಬಹುದೇ ಹೊರತು ಇತರರಿಗೆ ಅವರವರ ಕೆಲಸ, ಸಾಧನೆಯ ಅವಶ್ಯಕತೆಯಿದೆಯೇ ಹೊರತು, ದೇಹವನ್ನು ಗಾತ್ರ, ಆಕಾರ ಮಾತ್ರ ನೋಡಿ ಪ್ರೀತಿಸುವವರು ಮೂರ್ಖರು! ನಾವು ಬದುಕಬೇಕಾಗಿರುವುದು ಒಳ್ಳೆಯ ಮನಸ್ಸುಗಳ ಜೊತೆಗೆ. ಒಳ್ಳೆಯ ಹೃದಯಗಳ ಜೊತೆಗೇ ಹೊರತು ವಕ್ರ ನಡಿಗೆ, ಮಣ ಭಾರದ ದೇಹ, ಮೆಳ್ಳಗಣ್ಣು ಇವುಗಳೆಲ್ಲ ನಾವ್ಯಾರೂ ನಾವೇ ಮಾಡಿಕೊಂಡದ್ದೂ ಅಲ್ಲ, ನಮ್ಮ ಸಾಧನೆಗದು ಅಡ್ಡಿ ಬರುವುದೂ ಇಲ್ಲ!
   ವಿಶಾಲ ಹೃದಯವಿರಲಿ, ನಮ್ಮ ಗುರಿಯ ಕಡೆಗೆ ದೃಷ್ಟಿಯಿರಲಿ, ದೈವಭಕ್ತಿಯಿರಲಿ, ಸಾಧನೆಯ ಛಲವಿರಲಿ ಬಾಳಿನಲಿ! ದೇಹದ ಆಕಾರದ ಬಗೆಗಿನ ತಾತ್ಸಾರವಲ್ಲ, ಒಂದಲ್ಲ ಒಂದು ದಿನ ಮಣ್ಣಾಗುವ ದೇಹ ನಮ್ಮದು, ಮನಸ್ಸಿಗೆ ಆಕಾರವಿಲ್ಲ, ಗುಣ ಮಾತ್ರ! ಸಾಧನೆಗೆ ದೇಹವೆಂದೂ ಅಡ್ಡಿಯಾಗದು! ನೀವೇನಂತೀರಿ?
@ಪ್ರೇಮ್@

1125. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-52

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-52

ಮಳೆಗಾಲ ಒಂದು ಕಾಲದಲ್ಲಿ ಹೀಗಿತ್ತು! ಸುಮಾರು ಇಪ್ಪತ್ತು ವರ್ಷಗಳಷ್ಟು, ಎರಡು ದಶಕ ಅಂದರೂ ಸರಿಯೇ, ಹಿಂದೆ ಹೋಗಿ ಸಿಂಹಾವಲೋಕನ ಮಾಡಿದಾಗ, ಶಾಲಾ ಮಕ್ಕಳಿದೂ ಮಳೆಗೂ ಅವಿನಾಭಾವ ನಂಟು! ಬೆಳಗ್ಗೆ ಶಾಲೆಗೆ ಮಕ್ಕಳು ಬರುವಾಗ ಜೋರಾಗಿ ಮಳೆಯೂ ಬರುತ್ತದೆ! ಸಂಜೆ ಶಾಲೆ ಬಿಡುವಾಗಲೂ ಜೋರು ಮಳೆ! ಮಕ್ಕಳು ನೆನೆದುಕೊಂಡೇ ಮನೆ ಸೇರಬೇಕು! ಆಗ ಬರದಿದ್ದರೆ ಮಳೆಗೂ ಸಮಾಧಾನವಿಲ್ಲ! ಮಕ್ಕಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದಕ್ಕೇ ನಾನು ದೇವರಿಗೆ ಸದಾ ಋಣಿಯಾಗಿದ್ದೇನೆ. ಸದಾ ದೇವರಂಥ ಮನಸ್ಸಿನ  ಮಕ್ಕಳೊಡನೆ ಇರುವ, ಬೆರೆವ, ಕೆಲಸ ಮಾಡುವ ಭಾಗ್ಯ ಶಿಕ್ಷಕರಿಗಲ್ಲದೆ ಮತ್ಯಾರಿಗೆ ಸಿಗಲು ಸಾಧ್ಯ ಹೇಳಿ! ಅಂಥ ಗ್ರೇಟ್ ಕೆಲಸವನ್ನು ದಯಪಾಲಿಸಿದ ದೇವರಿಗೆ ಶರಣು!
  ವಿಷಯಾಂತರವಾಯಿತು, ಕ್ಷಮಿಸಿ, ಮಳೆಗಾಲದ ಬಗ್ಗೆ ಹೇಳಬೇಕು ನಾನು!ಹಲಸಿನ ಬೀಜ, ಗೆಣಸು, ಉಪ್ಪು ಹಾಕಿ ಬೇಯಿಸಿ ಇಡುತ್ತಿದ್ದ ಅಜ್ಜಿಯರು, ಹಲಸಿನ ಹಪ್ಪಳ, ಮಾವಿನ ಹಣ್ಣಿನ ಸೀಕರಣೆ, ಹಲಸಿನ ಉಪ್ಪಿನ ಸೊಳೆ ಪಲ್ಯ, ಸಾರಿಗೆ,, ದಪ್ಪದ ಉಪ್ಪಿನ ಮಾವಿನಕಾಯಿ ಚಟ್ನಿಗೆ, ಭರಣಿಗಳಲ್ಲಿ ರೆಡಿಯಾಗಿ ಕುಳಿತಿರುತ್ತಿತ್ತು! ಅಟ್ಟದಲ್ಲಿ ಅಕ್ಕಿ ಮುಡಿಗಳಲ್ಲಿ ಬೆಚ್ಚಗೆ ಕುಳಿತ ಅಕ್ಕಿ, ಮಾಡಿನ ಕೆಳಗೆ ಬಾಳೆ ದಿಂಡಿನ ಹಗ್ಗದಲ್ಲಿ ಜೋತಾಡುತ್ತಿರುವ ಮನೆಯ ಗದ್ದೆಯಲ್ಲೇ ಬೆಳೆದ ಸೌತೆಕಾಯಿ, ಬೂದು ಕುಂಬಳ, ಸಿಹಿಗುಂಬಳಗಳ ಸಾಲು! ಆಹಾ.. ಪ್ರತಿ ಮಳೆಗಾಲವೂ ಆನಂದಮಯ!
   ಅಷ್ಟೇ ನೆನಪುಗಳಲ್ಲ, ಶಾಲೆಗೆ ನಡೆದುಕೊಂಡು ಹೋಗುವಾಗ ಮಣ್ಣಿನ ರಸ್ತೆಯಲ್ಲಿ ಸಿಗುವ ಸಣ್ಣ ಗುಂಡಿಗಳಲ್ಲಿ ನಿಂತ ನೀರನ್ನು ನೋಡಿ ಅದಕ್ಕೆ ಒಮ್ಮೆಲೇ ಹಾರಿ ತನ್ನ ಹಾಗೂ ತನ್ನೊಡನಿರುವವರ ಬಟ್ಟೆ ಒದ್ದೆ ಮಾಡಿ ಪಡೆಯುತ್ತಿದ್ದ ಎಂಜಾಯ್ ಮೆಂಟ್ ಈಗಿನ ಮಜಾ ಟಾಕೀಸ್, ಮಜಾಭಾರತ, ಕಪಿಲ್ ಶರ್ಮಾ ಶೋಗಳಲ್ಲಿ ಸಿಗುವುದೇ! ಮಳೆಗಾಲದಲ್ಲಿ ಸಿಗುವ ಮಾವಿನಹಣ್ಣು, ಹಲಸಿನ ಹಣ್ಣು, ಕುಂಟಾಲ ಹಣ್ಣು, ನೇರಳೆಹಣ್ಣು, ಬಾಯಿ ನೇರಳೆ ಮಾಡುವ ನೆಕ್ಕರೆ ಹಣ್ಣುಗಳನ್ನು ತಿಂದರೆ ಜ್ವರ ಬರುವುದು, ತಿನ್ನಲೇ ಬಾರದೆಂಬ ಕಟ್ಟಾಜ್ಞೆ ಮನೆಯವರದಾದರೂ ತಿನ್ನುವ ನಮ್ಮ ಜಾಯಮಾನವನ್ನು ನಾವು ಬಿಡುವೆವೇ? ಉಪ್ಪು ಹಾಕಿಯಾದರೂ ಸಿಕ್ಕಿದ ಅನನಾಸು, ಗೇರುಹಣ್ಣುಗಳ ರಸ ಹೀರುತ್ತಿದ್ದ ಕಾಲದ ಮಹಿಮೆ ಬಲ್ಲವನಿಗೇ ಗೊತ್ತು!
   ಕೆಸರು ನೀರಿನಾಟದ ಸವಿ ಈಗಿನ ನೀಟಾದ ಯೂನಿಫಾರ್ಮ್, ಶೂಸ್ ಹಾಕಿ ಟಿಪ್ ಟಾಪಾಗಿ ಶಾಲೆಗೆ ಹೋಗುವ, ಶಿಸ್ತಿನ ಸಿಪಾಯಿಗಳಂತೆ ನಾಲ್ಕು ಕೋಣೆಯೊಳಗೆ ಬೆಳೆವ ಮಕ್ಕಳಿಗೆ ಹೇಗೆ ಅನುಭವವಾಗಬೇಕು? ಮಣ್ಣು ಮುಟ್ಟಿದರೆ ಅಲರ್ಜಿ, ಕೆಸರು ತುಳಿದರೆ ಸ್ಕಿನ್ ಡಿಸೀಝ್ ಬರುವ ಮಕ್ಕಳು ರೈತರು ಹೇಗಾದಾರು! ಬಲ್ಲವನೇ ಬಲ್ಲ ಬೆಲ್ಲದ ಸವಿಯ! ಮಳೆಗಾಲದಲ್ಲಿ ಮರ ಹತ್ತಿ ಜಾರಿದ ಅನುಭವ, ಜಾರಿ ಬಿದ್ದು ಇದ್ದ ಒಂದೇ ಒಂದು ಯೂನಿಫಾರ್ಮ್ ಒದ್ದೆಯಾಗಿ ಮನೆಗೆ ಬಂದು ರಜೆ ಹಾಕಿದ ದಿನ, ಊರಿಗೂರೇ ದೇವಸ್ಥಾನದಲ್ಲಿ ಹಬ್ಬ ಮಾಡಿ ಸಿಹಿ ಹಂಚಿದ ಕ್ಷಣ, ಅಮ್ಮ ಬಯ್ಯುವರೆಂದು ಕದ್ದು ಕಿರುಪರೀಕ್ಷೆಯ ಅಂಕಗಳ ಅಂಕಪಟ್ಟಿಗೆ ತಾನೇ ಪೋಷಕರ ಸಹಿ ಹಾಕಿ ಸಿಕ್ಕಿ ಹಾಕಿಕೊಂಡು ಪೆಟ್ಟು ತಿಂದ ದಿನ, ಅಮ್ಮ ಇಲ್ಲದಾಗ ಅಡಿಗೆ ರೂಮಿಗೆ ನುಗ್ಗಿ ತುಪ್ಪ,ಬೆಲ್ಲ,ತೆಂಗಿನಕಾಯಿ ಕದ್ದು ತಿಂದ ಸಿಹಿ ಕ್ಷಣಗಳು ಈಗ ಮಳೆಗಾಲದ ಭೋರ್ಗರೆಯುವ ಮಳೆನೀರು ಕೊಚ್ಚಿ ಹೋದಂತೆ ಹೋದರೂ ನೆನಪುಗಳು ಬಂಡೆಗಲ್ಲಿನಂತೆ ಗಟ್ಟಿಯಾಗಿ ತಳವೂರಿ ನಿಂತಿವೆ. ಮಳೆಯೊಡನೆ ಶುದ್ಧವಾದ ನೀರೂ ಕಡಿಮೆಯಾಗಿದೆ, ಬರಗಾಲ, ಜನಸಂಖ್ಯೆ, ಮಾನವೀಯ ಮೌಲ್ಯಗಳೂ ಕಡಿಮೆಯಾಗಿವೆ. ಉತ್ತಮ ಎಂದರೆ ಉದಾತ್ತ ಆಲೋಚನೆಗಳು ಮಾತ್ರ! ಮಳೆ ಬರಲಿ, ಇಳೆ ಒಣಗದಿರಲಿ,ಅದಕ್ಕೆ ನಮ್ಮ ಕೊಡುಗೆಯೂ ಇರಲಿ! ನೀವೇನಂತೀರಿ?
@ಪ್ರೇಮ್@

1127. ಭಕ್ತಿಗೀತೆ-ಕಾಯೋ ಹರಿಯೇ

ಕಾಯೋ ಹರಿಯೇ

ದಾಸಾನುದಾಸ ನಾನು ಶ್ರೀನಿವಾಸ ನಿನ್ನ ದಯೆಗೆ,
ಕಾಸನ್ನು ಕೇಳಲಾರೆ ,ಬಂದಿಹೆನು ಸಾಧಿಸೆ ಧರೆಗೆ!

ಮುಕುತಿಗಾಗಿ ಬೇಡಲಾರೆ, ಶಕುತಿ ನೀಡೋ ತಂದೆ,
ಪೊರೆವವನೂ ನೀನೆ ಎಂದು ನಿನ್ನ ನಂಬಿ ಬಂದೆ!

ಮೌನದಲ್ಲು ಬೇಡುತಿರುವೆ, ಅಭಯ ನೀಡೆಂದು,
ಮನಕೆ ಶಾಂತಿ ಆರೋಗ್ಯ ಕೊಟ್ಟು ಕಾಪಾಡೆಂದು..

ಕೋಟಿ ಹೊನ್ನು,ಬಂಗ್ಲೆ ಕಾರು ಕೇಳಲಾರೆ ಹರಿಯೇ,
ನೆಮ್ಮದಿಯ ಬದುಕ ನೀಡು, ಅದುವೆ ನನಗೆ ಸಿರಿಯೇ..

ಮನದಿ ನಿತ್ಯ ಭಜಿಸುತಿರುವೆ, ಕಾಪಾಡು ರಂಗಾ,
ಕಂಬವೊಡೆದು ಬಂದು ನಿಂತ ಬಕುತರ ಸಲಹುವ ನರಸಿಂಗಾ..

ಆಶಾ ಪಾಶಗಳಿಗೆ ನಾನು ದಾಸನಾಗದಂತೆ ಮಾಡು,
ಮೋಸವಾಗದೆ ಬದುಕು ಕಟ್ಟೋ ವರವ ನೀನು ನೀಡೋ...
@ಪ್ರೇಮ್@
27.07.2019

ಗುರುವಾರ, ಜುಲೈ 18, 2019

1128.ಭಾವಗೀತೆ-ಮಳೆವರ್ಷ

ಮಳೆ ವರ್ಷ

ಬಿರಿದು ಸುರಿದ ಅಮಲು
ನಿಜದ ಕಡಲ ಘಮಲು..
ನಗುತ ಬೀಳುವ ರಭಸ
ಗಿಡಮರದೆದೆ ಸಂತಸ//

ಹೊನ್ನಿನ ಹನಿಯ ನಾಟ್ಯವು
ಜೇನಿನ ದುಂಬಿಯ ಕುಣಿತ..
ಹಸಿರ ಸುಖದ ಕ್ಷಣವು
ಮೈಮನ ಪುಳಕ ಸಹಿತ..//

ನೆಲದ ತಣಿವು ನೀಗಲು
ಇಳೆಯ ಆಸೆಯು ತೀರಲು..
ಕೆರೆಯ ಹಸಿವು ಇಂಗಲು
ಬೇರಿನ ಊಟವು ಸಾಗಲು...//

ಸದ್ದಿನ ಗಾಳಿಯ ಜೊತೆಗೆ
ಗುಡುಗ ನರ್ತನ ಭಯಕೆ..
ಮಿಂಚಿನ ಮೋಡಿಯ ಬಳ್ಳಿಗೆ
ಮೋಡದ ಆಟದ ಶಾಲೆಯು...//
@ಪ್ರೇಮ್@
19.07.2019

ಮಂಗಳವಾರ, ಜುಲೈ 16, 2019

1124. ಯುದ್ಧ ಗೆದ್ದ ಯೋಧ

ಜೈ ಕಿಸಾನನೆ , ಜೈ ಕಾವನೆ , ಜೈ ದೇಶದ ವೀರನೇ..
ಜೈ ಅಮರನೆ, ಜೈ ಯೋಧನೆ, ಜೈಜೈ ಮಹಾ ಶೂರನೇ..
ಜೈ ರಕ್ಷಕ, ಜೈ ಮುಕುಟ, ಜೈ ಭಾರತಿ ಪುತ್ರನೇ,
ಜೈ ಕಾಯಕ, ಜೈ  ಕೃಷಿಕ, ಜೈಜೈ  ನರದೇವನೇ..//1//

ದೇಶದ ಗಡಿಯಲ್ಲಿ ಬಹಳವೆ ಕೊರೆವ
ಹಿಮದ ಹಾಸಿನ ಚಳಿಯ ಮಡಿಲಲಿ
ತನ್ನ ಕೈ ಕಾಲು ಚಳಿಗೆ ಕರಗಿ ಹೋದರೂ ದೇಹದಿ,
ತಡೆಯಲಾರದ ತಣ್ಣಗಿನ ವಾತಾವರಣದಿ ನಿಂತು
ನೆತ್ತರೆಲ್ಲ ಹೆಪ್ಪುಗಟ್ಟಿದರೂ ದೇಶಕಾಗಿ ಹೋರಾಡುತ...//೨//

1123. ಭಾವಗೀತೆ-ನನ್ನೊಲವೆ ಬಾ

ಭಾವಗೀತೆ-
ನನ್ನೊಲವೆ ಬಾ..

ನನ್ನೆದೆಯ ಭಾವವೇ ನೀನೇಕೆ ದೂರಾದೆ?
ಮೆದುಳಿನಲಿ ಸುಳಿದಾಡೋ ಪ್ರೀತಿಯೇ ನೀನೇಕೆ ಸಿಗದಾದೆ?

ಜತೆಗೆ ಸಮಯವ ಕಳೆವ ಆಸೆಯದು ನನಗೆ,
ಮರಳಿನಂತೆ ಕಣಕಣವ ಆವರಿಸಿಹುದು ನಿನ್ನ..
ಬಾಚಿ ತಬ್ಬುತಲಿ ಹೂ ಮುತ್ತನೀಡ ಬಾ..
ಕಾಣೊ ಕಣ್ಣಿಗೆ ಬೆಳಕಾಗಿ ನೀ ಬಾ..

ದೂರವಿರಲಾರೆ ನಿನ್ನಿಂದ ಮನದ ಮಲ್ಲಿಗೆಯಂತೆ,
ಬಾರೋ ಸನಿಹಕೆ ನೀನು ಸಾಗರ ದಲೆ ದಡಕ್ಕಪ್ಪಳಿಸುವಂತೆ!

ಬಂದು ಹೋಗದಿರು ನೀ ದೂರ ದೂರ,
ಮನೆಮನಕೆ ಶಾಂತಿಯ ನೀಡುತಲಿ ಪೂರ!
ನಿನ್ನಿರವು ತರುವುದು ಶಾಂತಿ ಸಹನೆಯ ಭರಪೂರ,
ದೂರವುಳಿಯೆನು ನಾನು, ನೀನಿರೆ ಮನೋಹರ!

ಬಾರೋ ಚಂದಿರ ಬಾರೋ
ಬಾಳ ರಾಮನೆ ಜತೆಗಿರೆ ಬಾರೋ
ನಲಿವು ನೋವುಗಳ ಹಂಚೆ ಜೊತೆಯಲಿರ ಬಾರೋ..
ಮನವ ಒಂಟಿಯಾಗಿ ಬಿಡದೆ ನಿನ್ನಿರವ ತೋರೋ..
@ಪ್ರೇಮ್@
15.07.2019

1119. ಅರಗಿಣಿ

ಅರಗಿಣಿ
ಹಸಿರಾಗಿಹ ನೀ ಪರಿಸರವ ಸಂಕೇಚಿಸುವೆ
ಕೆಂಪು ಕೊಕ್ಕಲಿ ವೀರ ಯೋಧರ ಸ್ಮರಿಸುವೆ!
ಹಣ್ಣನು ಕುಕ್ಕುತ ತಿಂದು ಬೀಜ ಪ್ರಸಾರಕೆ ನೆರವಾಗುವೆ,
ಪರಿಸರವ ಕಾಯ್ವವ ನೀನು ಎಲೆಯ ಮರೆಯಲಿರುವೆ//

ಚರಪರ ರಾಗವು ನಿನ್ನದು ಅದರಲೆ ಹಾಡುವೆ,
ದೇವರು ಕೊಟ್ಟಿಹ ರೂಪವ ಪ್ರೀತಿಯಿಂದ ಸ್ವೀಕರಿಸಿರುವೆ,
ಮರದಲೆ ಗೂಡನು ಕಟ್ಟುತ ಸಂಸಾರ ಸಾಗಿಸುವೆ,
ಊರಿಂದೂರಿಗೆ ಚಲಿಸುತ ದಿನಗಳ ಕಳೆಯುತಿಹೆ//

ಮಾನವನ ಮಾತನು ಅನುಕರಿಸಿ ಪ್ರಿಯನಾಗಿರುವೆ,
ಮಾತಾಡುವ ಪಕ್ಷಿಯೆಂಬ ಹೆಗ್ಗಳಿಕೆ ಪಡೆದಿರುವೆ,
ಪ್ರೀತಿಯ ಸಾಕುವ ಪಕ್ಷಿಯೂ ನೀನಾಗಿ ಮೆರೆದಿರುವೆ
ಗಿಣಿರಾಮನೆಂಬ ಹೆಸರನು ಪಡೆದು ನಕ್ಕು ನಗಿಸಿರುವೆ//

ಮಾನವ ನಿನ್ನಯ ಮನೆಯನು ಬಿಡಿಸಿ ಗೂಡಲಿ ಹಾಕುವನು,
ನಿನ್ನಯ ಸ್ವಾತಂತ್ರ್ಯವ ಕಿತ್ತು ಪಂಜರದಿ ಕೂಡುವನು,
ಯಾರಿಗೂ ತಂಟೆಯ ಮಾಡದ ನಿನ್ನ ಒಂಟಿಯಾಗಿಡುವನು,
ತನ್ನಯ ಆನಂದಕೆ ನಿನ್ನ ಜೀವನ ಕೊಲ್ಲುವನು//
@ಪ್ರೇಮ್@
14.07.2019

ಸೋಮವಾರ, ಜುಲೈ 15, 2019

1121. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-51

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-51

ಹಾಯ್ ಫ್ರೆಂಡ್ಸ್, ಬರ್ತಾ ಇರುವ ಮಳೆಗೆ ಬೆಚ್ಚಗೆ ಒಲೆ ಬುಡದಲ್ಲಿ ಕೂತು ಬಿಸಿ ಕಾಯಿಸ್ತಾ ಅಮ್ಮ ಮಾಡಿಕೊಡುವ ಬಿಸಿ ಬಿಸಿ ರೊಟ್ಟಿಯೋ, ನೀರ್ ದೋಸೆಯೋ ಒಂದೊಂದೆ ಖಾಲಿ ಮಾಡೋ ಆ ಕ್ಷಣ ಈಗ ಇರಬೇಕಿತ್ತು ಅನ್ನಿಸಲ್ವಾ? ಈಗ ಒಲೆಯೂ ಇಲ್ಲ, ಅಷ್ಟು ಫ್ರೀ ಆಗಿರೋ, ಪೇಶೆನ್ಸ್ ಇರೋ ಅಮ್ಮಂದಿರೂ ಕಡಿಮೆ! ಆದರೂ ಮಿಕ್ಸೀಲಿ ರುಬ್ಬಿ, ಗಂಟೆ ಗಟ್ಟಲೆ ನಿಂತು, ಸ್ಟೌ ನಲ್ಲಿ ದೋಸೆ ಮಾಡಿ ರಮಿಸಿ, ಬೈದು, ಮುದ್ದಾಡಿ, ಮೊಬೈಲ್ ತೋರಿಸಿ ಮೆಲ್ಲನೆ ತಿನ್ನಿಸೋ ಅಮ್ಮನ ಪ್ರೀತಿ ಮಾತ್ರ ಎಳ್ಳಷ್ಟೂ ಕಡಿಮೆ ಆಗಿಲ್ಲ ಅಲ್ವಾ? ಹೌದು, "ಹೆತ್ತವರಿಗೆ ಹೆಗ್ಗಣ ಮುದ್ದು " ಅಂತ ಗಾದೇನೇ ಇಲ್ವ? ಹೆತ್ತ ತಾಯಿಗೆ ತನ್ನ ಮಗು ಅದೇನೇ ಆಗಿರಲಿ ಅದು ಪ್ರೀತಿಯ ಖನಿ!
    ಹೌದು, ಪ್ರಪಂಚದಲ್ಲಿ ಯಾರ ದೇಹದ ಆಕಾರವೂ ಒಂದೇ ಸಮನಾಗಿಲ್ಲ, ಮನುಷ್ಯ ರೂಪಿ ಮಾನವರ ಅಂಗಾಂಗ, ದೇಹ ತೂಕ, ಎತ್ತರ, ಮೈಕಟ್ಟು, ಕಣ್ಣು, ಮೂಗು, ಮುಖ, ಸ್ವರ, ತುಟಿ, ಹಣೆ,ಕೂದಲು, ಕೈ ಬೆರಳಿನ ಗೆರೆಯಲ್ಲೂ ವ್ಯತ್ಯಾಸ! ಅಬ್ಬಾ! ದೇವನದು ಅದೆಂತಹ ಸೃಷ್ಟಿ! ಆದರೂ ಪ್ರಪಂಚದಲ್ಲಿ ಒಂದೇ ತರಹ ಇರುವ ಏಳು ಜನರಿರುತ್ತಾರಂತೆ! ಆಶ್ಚರ್ಯ ಅನ್ನಿಸಲ್ವಾ?
    ಕೆಲವರ ಕಾಲು ಉದ್ದ, ಉದ್ದ ಕೈ, ಕಪ್ಪು ಮೈ ಬಣ್ಣ, ಹಾಗೇನೇ ಬೆಳ್ಳಗೆ ಹಾಲಲ್ಲೇ ತೊಳೆದಿಟ್ಟಂಥ ಮೈ ವರ್ಣ, ಕಪ್ಪಿದ್ದರೂ ಲಕ್ಷಣವಾದ ಮತ್ತೆ ಮತ್ತೆ ನೋಡುವ ಎಂದೆಣಿಸುವ ಮುಖ, ಅಟ್ರಾಕ್ಟಿವ್ ಕಣ್ಣುಗಳು, ಮತ್ತೆ ಕೆಲವರು ತುಂಬಾ ಎತ್ತರವಾದರೆ, ಹಲವರು ತೀರಾ ಗಿಡ್ಡ, ಕೆಲವರು ತೀರಾ ಕಡ್ಡಿಯಾದರೆ, ಹಲವರು ತೀರಾ ದಪ್ಪ, ಇನ್ನು ಕೆಲವರದು ಎಲ್ಲದರಲ್ಲೂ ಸಾಧಾರಣ ಎನ್ನುವ ಸ್ಟೀಲ್ ಬಾಡಿ! ಯಾವುದು ಅಂದ, ಯಾವುದು ಚಂದ, ಯಾವುದು ಸರಿ..ಡಿಸೈಡ್ ಮಾಡುವುದು ಜೊತೆಗಿರುವವರ, ಅಂತರಂಗ ಅರಿತವರ ಕಣ್ಣುಗಳು!
  ಸಪೂರ, ಕಡ್ಡಿ ಸ್ಲಿಮ್ ಅಂತಾರಲ್ಲಾ ಹಾಗಿರುವವರು ಮಾತ್ರ ಒಳ್ಳೆಯವರು, ದಪ್ಪಗಿರುವವರು ಕೆಟ್ಟವರು ಎಂದು ನಾವ್ಯಾವತ್ತೂ ಡಿಸೈಡ್ ಮಾಡುವ ಹಾಗಿಲ್ಲ ಅಲ್ಲವೇ? ಏಕೆಂದರೆ ನಮ್ಮ ಗುಣಗಳನ್ನು ನಿರ್ಧರಿಸುವುದು ನಮ್ಮ ದೇಹವಲ್ಲ, ಮನಸ್ಸು! ಡಾ. ಎ.ಪಿ.ಜೆ ಅಬ್ದುಲ್ ಕಲಾಮ್ ರವರು ಕುಳ್ಳರಾಗಿದ್ದರು, ಅಮಿತಾಬ್ ಬಚ್ಚನ್ ತುಂಬಾ ಎತ್ತರವಾಗಿದ್ದಾರೆ, ಕಿರಣ್ ಬೇಡಿ ಮೀಡಿಯಂ ಫಿಟ್ಟೆಸ್ಟ್, ಕ್ರಿಕೆಟ್ ಮಾಂತ್ರಿಕ ಸಚಿನ್ ಕೂಡಾ ಹೆಚ್ಚು ಎತ್ತರವಾಗಿಲ್ಲ ! ಅಟಲ್ ಬಿಹಾರಿ  ವಾಜಪೇಯಿಯವರಿಗೆ ತಾನು ದಪ್ಪ ಅನಿಸಲಿಲ್ಲ! ರೆಮೋರವರ ಕಂಠಕ್ಕೆ ಅವರ ದೇಹದ ಗಾತ್ರ ಅಡ್ಡಿ ಬರಲಿಲ್ಲ, ಪಿ.ಟಿ. ಉಷಾ, ಕರ್ಣಮ್ ಮಲ್ಲೇಶ್ವರಿಯವರ ಸಾಧನೆಗೆ ದೇಹದ ಬಣ್ಣ ಅಡ್ಡಿಯಾಗಲಿಲ್ಲ!
   ಇದು ಅಂಗಾಂಗ ಸರಿ ಇದ್ದು ಸಾಧಿಸಿದವರ ಮಾತಾಯಿತು! ದೇವರು ಹಲವರನ್ನು ದೈಹಿಕವಾಗಿ ಚಾಲೆಂಜ್ಡ್ ಆಗಿ ಸೃಷ್ಠಿಸಿರುವರು!ಅವರೂ ಯಾರೂ ಕಡಿಮೆಯಿಲ್ಲ ಸಾಧನೆಯಲ್ಲಿ! ಕಣ್ಣು ಕಾಣದ ಅಪ್ರತಿಮ ಗಾಯಕರು, ಕಾಲೇ ಇಲ್ಲದ ನೃತ್ಯಗಾರರು, ಕೈಗೆಳೇ ಇಲ್ಲದೆ ತನ್ನೆಲ್ಲಾ ಕೆಲಸಗಳ ಕಾಲಲ್ಲೇ ಪೂರೈಸುವ ಮಹಾನ್ ದೃಢಚಿತ್ತರು! ವಾವ್!ಮನಸ್ಸಿನಲ್ಲಿ ದೃಢ ಸಂಕಲ್ಪವಿದ್ದರೆ ದೈಹಿಕವಾಗಿ ಹೇಗಿದ್ದರೂ ಸಾಧಕನಾಗುವನು! ವೀಕ್ ಮೈಂಡ್ ಹೊಂದಿದ ಸೋಮಾರಿ ಚೆನ್ನಾಗಿ ತಿಂದು ದಷ್ಟಪುಷ್ಟನಾದರೂ ನಾಲಾಯಕ್ಕು!
       ಮಾನವನಿಗೆ ಅತಿ ಮುಖ್ಯವಾದದ್ದು ಅವನ ಮನಸ್ಸು ಮತ್ತು ಆಲೋಚನೆಗಳು! "ನೀವಂದುಕೊಂಡಂತೆ ನೀವು ಬದುಕುವಿರಿ, ಯಾರಿಗೆ ಯಾವುದೂ ಅಸಾಧ್ಯವಲ್ಲ" ಎಂದು ನೆಪೋಲಿಯನ್ ಹೇಳಿದಂತೆ ಯಾವ ವೈಕಲ್ಯವಿದ್ದರೂ ಸರಿ, ಮನಸ್ಸಿನ ವೈಕಲ್ಯವಿರಬಾರದು ಅಷ್ಟೆ!
    ಕಣ್ಣು ಕಾಣದವರೂ ಪ್ರಪಂಚದ ಅತಿ ಎತ್ತರ ಶಿಖರವಾದ ಹಿಮಾಲಯ ಏರಿಲ್ಲವೇ? ಕಾಲುಗಳಿಲ್ಲದವರೂ ಪ್ಯಾರಾ ಓಲಿಂಪಿಕ್ ನಲ್ಲಿ ಓಡಿ ಪದಕ ಗಳಿಸಲಿಲ್ಲವೇ? ಬೆನ್ನು ಮೂಳೆ ತುಂಡಾಗಿ, ವರ್ಷಗಟ್ಟಲೆ ಹಾಸಿಗೆಯಲ್ಲೆ ಕಳೆದು ತದನಂತರ ವೀಲ್ ಚೇರ್ ನಲ್ಲೆ ಮೋಟಿವೇಟರ್ ಆಗಿ ಕೆಲಸ ಮಾಡುತ್ತಿರುವ ಅದೆಷ್ಟು ಜನರನ್ನು ನಾವು ನಿತ್ಯ ಸಾಮಾಜಿಕ ಜಾಲ ತಾಣಗಳಲ್ಲಿ ನೋಡಿಲ್ಲ? ಕೈಗಳಿಲ್ಲದೆಯೇ ಕಾರ್ ಚಲಾಯಿಸುವ, ಅಷ್ಟೇಕೆ ವಿಮಾನವನ್ನೂ ಹಾರಿಸುವ ಜೆಸ್ಸಿಕಾ ಕಾಕ್ಸ್ ಬಗ್ಗೆ ನೀವು ಕೇಳಿಲ್ಲ, ನೋಡಿಲ್ಲವಾದರೆ ಇಂದೇ ಗೂಗಲ್ ನಲ್ಲಿ ಹುಡುಕಿ! ಇವರೆಲ್ಲರ ಮುಂದೆ ಎಲ್ಲಾ ಸರಿಯಿರುವ ನಾವುಗಳು ನಾನು ದಪ್ಪವೆಂದು ಊಟ ಬಿಟ್ಟರೆ, ನಾನು ಸಪೂರವೆಂದು ದಿನಕ್ಕೆ ಹತ್ತಾರು ಬಾರಿ ತಿಂದರೆ ಸರಿಯಾಗುವೆವೇ? ದೇವರು ತಾನೇ ನಿರ್ಧರಿಸಿ ಅಪ್ಪ ಅಮ್ಮನ ಸಹಾಯದಿಂದ ನಮಗೊಂದು ರೂಪುಕೊಟ್ಟು ಸೃಷ್ಟಿ ಮಾಡಿ ಏನನ್ನೋ ಸಾಧಿಸಲು ಭೂಮಿಗೆ ಕಳಿಸಿರುವನು. ತನ್ನ ವರವಾಗಿರುವ ದೇಹವನ್ನು ಪ್ರೀತಿಸಿ ಅದನ್ನು ದಂಡಿಸಿ ತನ್ನ ಗುರಿ ಸಾಧಿಸುವ ಬದಲು, ದೇಹದ ಆಕಾರವನ್ನು ಬದಲಾಯಿಸುವುದರಲ್ಲೆ ಸಮಯ ಕಳೆದರೆ ಹೇಗೆ? ಬಾಡಿ ಬಿಲ್ಡರ್ಸ್, ಸಿನೆಮಾ ನಟ ನಟಿಯರಿಗೆ ಅದು ಉಪಯೋಗವಾಗಬಹುದೇ ಹೊರತು ಇತರರಿಗೆ ಅವರವರ ಕೆಲಸ, ಸಾಧನೆಯ ಅವಶ್ಯಕತೆಯಿದೆಯೇ ಹೊರತು, ದೇಹವನ್ನು ಗಾತ್ರ, ಆಕಾರ ಮಾತ್ರ ನೋಡಿ ಪ್ರೀತಿಸುವವರು ಮೂರ್ಖರು! ನಾವು ಬದುಕಬೇಕಾಗಿರುವುದು ಒಳ್ಳೆಯ ಮನಸ್ಸುಗಳ ಜೊತೆಗೆ. ಒಳ್ಳೆಯ ಹೃದಯಗಳ ಜೊತೆಗೇ ಹೊರತು ವಕ್ರ ನಡಿಗೆ, ಮಣ ಭಾರದ ದೇಹ, ಮೆಳ್ಳಗಣ್ಣು ಇವುಗಳೆಲ್ಲ ನಾವ್ಯಾರೂ ನಾವೇ ಮಾಡಿಕೊಂಡದ್ದೂ ಅಲ್ಲ, ನಮ್ಮ ಸಾಧನೆಗದು ಅಡ್ಡಿ ಬರುವುದೂ ಇಲ್ಲ!
   ವಿಶಾಲ ಹೃದಯವಿರಲಿ, ನಮ್ಮ ಗುರಿಯ ಕಡೆಗೆ ದೃಷ್ಟಿಯಿರಲಿ, ದೈವಭಕ್ತಿಯಿರಲಿ, ಸಾಧನೆಯ ಛಲವಿರಲಿ ಬಾಳಿನಲಿ! ದೇಹದ ಆಕಾರದ ಬಗೆಗಿನ ತಾತ್ಸಾರವಲ್ಲ, ಒಂದಲ್ಲ ಒಂದು ದಿನ ಮಣ್ಣಾಗುವ ದೇಹ ನಮ್ಮದು, ಮನಸ್ಸಿಗೆ ಆಕಾರವಿಲ್ಲ, ಗುಣ ಮಾತ್ರ! ಸಾಧನೆಗೆ ದೇಹವೆಂದೂ ಅಡ್ಡಿಯಾಗದು! ನೀವೇನಂತೀರಿ?
@ಪ್ರೇಮ್@

ಭಾನುವಾರ, ಜುಲೈ 14, 2019

1123. ಭಾವಗೀತೆ-ನನ್ನೊಲವೆ ಬಾ

ಭಾವಗೀತೆ-
ನನ್ನೊಲವೆ ಬಾ..

ನನ್ನೆದೆಯ ಭಾವವೇ ನೀನೇಕೆ ದೂರಾದೆ?
ಮೆದುಳಿನಲಿ ಸುಳಿದಾಡೋ ಪ್ರೀತಿಯೇ ನೀನೇಕೆ ಸಿಗದಾದೆ?

ಜತೆಗೆ ಸಮಯವ ಕಳೆವ ಆಸೆಯದು ನನಗೆ,
ಮರಳಿನಂತೆ ಕಣಕಣವ ಆವರಿಸಿಹುದು ನಿನ್ನ..
ಬಾಚಿ ತಬ್ಬುತಲಿ ಹೂ ಮುತ್ತನೀಡ ಬಾ..
ಕಾಣೊ ಕಣ್ಣಿಗೆ ಬೆಳಕಾಗಿ ನೀ ಬಾ..

ದೂರವಿರಲಾರೆ ನಿನ್ನಿಂದ ಮನದ ಮಲ್ಲಿಗೆಯಂತೆ,
ಬಾರೋ ಸನಿಹಕೆ ನೀನು ಸಾಗರ ದಲೆ ದಡಕ್ಕಪ್ಪಳಿಸುವಂತೆ!

ಬಂದು ಹೋಗದಿರು ನೀ ದೂರ ದೂರ,
ಮನೆಮನಕೆ ಶಾಂತಿಯ ನೀಡುತಲಿ ಪೂರ!
ನಿನ್ನಿರವು ತರುವುದು ಶಾಂತಿ ಸಹನೆಯ ಭರಪೂರ,
ದೂರವುಳಿಯೆನು ನಾನು, ನೀನಿರೆ ಮನೋಹರ!

ಬಾರೋ ಚಂದಿರ ಬಾರೋ
ಬಾಳ ರಾಮನೆ ಜತೆಗಿರೆ ಬಾರೋ
ನಲಿವು ನೋವುಗಳ ಹಂಚೆ ಜೊತೆಯಲಿರ ಬಾರೋ..
ಮನವ ಒಂಟಿಯಾಗಿ ಬಿಡದೆ ನಿನ್ನಿರವ ತೋರೋ..
@ಪ್ರೇಮ್@
15.07.2019

1122. ಭಾವಗೀತೆ-ಪ್ರೀತಿಗೆ

ಪ್ರೀತಿಗೆ

ನನ್ನೊಲವ ಲೇಖನಿಯೇ ನೀನೇಕೆ ನಿಂತೆ?
ನನ್ನ ಹೃದಯದ ಪದವ ಗೀಚಲೇಕೆ ಮರೆತೆ?//

ನೀನಿಲ್ಲದೆ ನಾನಿಲ್ಲ, ಕರೆವೆ ನೆನೆದಾಗೆಲ್ಲ,
ಹೃದಯದ ಮಾತನ್ನು ಕೈಯಿಂದ ಮೂಡಿಸಿಲ್ಲ?
ಏಕೀ ತರದ ಕೋಪ ನನ್ನಯ ಮೇಲೆ?
ನನ್ನ ಮಿಡಿತವು ನೀನೇ, ನನ್ನ ತುಡಿತವು ನೀನೇ..//

ಬಾಯಾರಿದಾಗೆಲ್ಲ ಶಾಯಿ ಕುಡಿಸುವೆನಲ್ಲ?
ಆಗಾಗ ಮೈ ತೊಳೆದು ಒರೆಸಿಯೇ ಇಡುವೆನಲ್ಲ?
ನೀನೆನ್ನ ತಾಯಂತೆ,ಪ್ರೀತಿಯಿಂದ ಬರೆವೆಯಲ್ಲ!
ಇಂದೇಕೆ ಹೀಗಾದೆ? ನಿನ್ನ ನೋವ ಸಹಿಸೆನಲ್ಲ!//

ಮೌನದರಗಿಣಿಯೇ ಇಂದು ನನ್ನಲ್ಲಿ ಕೋಪವೇಕೆ?
ನನ್ನ ಸಂಗಾತಿಯೇ ಇಂದು ಒಲವಿಗೇ ಬರವೇಕೆ?
ನೀನಿಲ್ಲದಿರಲಾರೆ ಕವಿಯಾಗಿ ನಾನಿನ್ನು,
ಹೊಸ ಗೆಳತಿಯಾ ತರಲೇ ನಿನ್ನ ಬದಲಿಗೆ ಇನ್ನು?

ನಿನ್ನೊಡನೆ ಬೆಸೆದಿಹುದು ಅನುಬಂಧದಾ ಬೇರು,
ನನ್ನ ಕಾಯಕಕೆಲ್ಲಾ ನೀನೇ ನನ್ನ ತೇರು,
ನೀನು ಹೋದರೆ ಮುಂದೆ ನನ್ನ ಕವನದ ಸಾಲು,
ನೀನಿರದಿರೆ ಬಳಿಯು ಒಂಟಿ ನನ್ನೀ ಬಾಳು!//
@ಪ್ರೇಮ್@
15.07.2019

1121. ಭಾವಗೀತೆ-ಬೆಸ್ತರ ಹಾಡು

ಬಾರಣ್ಣಾ ಕಾರ್ಯಕೆ..

ಮೂಡಣ ಕಡಲು ರಂಗೇರಿತೋ ನೋಡಾ
ಸಮುದ್ರದಿ ಎದ್ದ ರವಿಯಂದವ ನೋಡಾ...//
ಲೇಲೇಲೇಲೇಸೋ ಲೇಲೇಲೇಗಾ ಹೈೂ..

ಬಣ್ಣದ ವಿಧವಿಧ  ಬಲೆಯಾ ತಾರಣ್ಣಾ..
ಮುಂಜಾವು ನಮಗಾಗಿ ಕಾದಿದೆ ನೋಡಣ್ಣಾ..
ಒಟ್ಟಾಗಿ ಸಾಗೋಣ ಒಗ್ಗಟ್ಟೇ ಬಲವಣ್ಣಾ..
ನನಗೂ ನಿನಗೂ ಸಾಗರ ಮಾತೆಯೇ ತಾಯಣ್ಣಾ..
ಲೇಲೇಲೇಲೇಸೋ ಲೇಲೇಲೇಗಾ ಹೈೂ..

ಮೋಡವು ಕರಗಿದೆ, ಮಳೆಹನಿ ಇಲ್ಲಣ್ಣಾ..
ಮಂಜದು ಬರದು, ರವಿ ನಮ್ಮೊಡನಿಹನಣ್ಣಾ..
ಬೇಗನೆ ಎದ್ದು ಕೆಲಸವ ಮಾಡಲು ಆರೋಗ್ಯಕೆ ಒಳಿತಣ್ಣಾ..
ಕಡಲೊಳಗಿಂದ ತಿನ್ನುವ ಮುತ್ತನು ಪಡೆಯಲು ಬಾರಣ್ಣಾ..
ಲೇಲೇಲೇಲೇಸೋ ಲೇಲೇಲೇಗಾ ಹೈೂ..

ಸಮುದ್ರವು ನಮ್ಮಯ ದೇವರು ಅಣ್ಣಾ..
ಬನ್ನಿ ಅವಳನು ಭಕ್ತಿಯಿಂದ ಪೂಜಿಸೋಣಾ..
ಮೀನ ಸಂಪತ್ತು ಕೊಡೆಂದು ಬೇಡೋಣಾ..
ಶರಧಿಯ ಕಲುಷಿತಗೊಳಿಸದೆ ಇರೋಣ..
ಲೇಲೇಲೇಲೇಸೋ ಲೇಲೇಲೇಗಾ ಹೈೂ..
@ಪ್ರೇಮ್@
15.07.2019

ಶುಕ್ರವಾರ, ಜುಲೈ 12, 2019

1118. ಬಾಬಣ್ಣೆ

ಬಾಬಣ್ಣೆ

ಬಾರೀ ಬಂಗ ಪಂಡೆರ್
ಬಾಬಣ್ಣೆ, ಬೇಲೆ ದಾಂತೆ!
ಪಾಪ ಬದ್ ಕಡ್ ಪಂದ್
ಒಂತೆ ಕಾಸ್ ಕೊರಿಯೆ!
ಅರಿ ಸಾಮಾನ್ ಪೂರ
ಇಲ್ಲಗ್ ಪತೊ ಪೋಯೆರೆಲಾ ಪಂಡೆ!

ಬಾಬಣ್ಣೆ ಮಂಡೆ ಆಡಯೆರ್!
ತೂದು ಎನಡ್ದ್ ಎಡ್ಡೆ ಆವು ಎನ್ಯೆ!
ಬಾಬಣ್ಣನ ಎಲ್ಯ ಬಾಲೆ ಶೋಕು!
ಬಾಬಣ್ಣನ ಬೊಡೆದಿಲಾ
ಬಾರಿ ಶೋಕುಂದೆ ಪನ್ಕಾ!

ಕಾಸ್ ಗೆತೊನ್ಯ ಬಾಬಣ್ಣೆ
ಸೀದಾ ಭಾಸ್ಕರಣ್ಣನ ಜೋಡುದ
ಅಂಗಡಿದ ಎದುರುಡೆ ಪೋದು,
ಶೆಟ್ರೆನ ಅಂಗಡಿಡ್ದ್ ಅರಿ ಗೆತೊನೆರ್ ಪನ್ನಗ..

ಆರ್ ಕಂತ ಜತ್ತ್ ದ್
ಬೇಗನೆ ಬಲಿತೊಂದು
ಮಾಯಾನಗ ಗೊತ್ತಾಂಡ್,
ಆರ್ ಪೊಗ್ಗುದಿನಿ ಗಡಂಗ್ ಗ್!
ಕಾಸ್ ಇಪ್ಪಂದೆ ಬಂಗಾತಿನಿ
ಬಾಬಣ್ಣನ ನಾಲಯಿಗ್!!
@ಪ್ರೇಮ್@
12.07.2019

1117. ಕಲಿಯಬೇಕು

ಕಲಿಯಬೇಕು

ರೆಕ್ಕೆ ಪುಕ್ಕವಿರುವ ಹಕ್ಕಿ
ಓಡಿಬಂದು ಪಕ್ಕ ನಿಂತು,
ಕಾಳುಗಳನು ಹೆಕ್ಕಿ ಹೆಕ್ಕಿ
ತಿನ್ನುತಿತ್ತು ಕುಕ್ಕಿ ಕುಕ್ಕಿ..

ಹಕ್ಕಿಯಂದ ಕಂಡು ಬೆಚ್ಚಿ
ನನ್ನ ನಾನೆ ಮರೆತುಕೊಂಡು,
ಪಕ್ಕದಲ್ಲೆ ನಿಂತುಕೊಂಡು
ಕಲಿತೆ ಬುದ್ಧಿ ನೋಡುತ!

ನಿನ್ನೆ ಇಂದು ನಾಳೆಯೆನುವ
ಯೋಚನೆಯೇ ಇಲ್ಲದೆಯೇ
ಪುಟ್ಟ ಹಕ್ಕಿ ಬಂದು ತಿಂದು
ಹಾರಿ ಓಡಿ ಹೋಯಿತು,
ತನ್ನ ಗೂಡು ಸೇರಿತು..

ಮನುಜ ನಾನು ನಾಳೆ ಎನುವ
ಕೊರಗಿನಲ್ಲಿ ತಾ ಬದುಕುವ,
ಪಕ್ಷಿಯನ್ನು ತಾನು ನೋಡಿ
ಬಾಳ ಹಾದಿ ಕಲಿಯಬೇಕು..
@ಪ್ರೇಮ್@
12.07.2019

1115. Poem-Rain

Rain

Dripping near and Drizzling far..
Sounding here and flowing there..
Morning evening rush of people,
It is the time for you to drizzle..

You want to wet us completely once
You will be happy if we get wet..
As humans you are also spoiled
Not following your regular time.

Coming late and flooding somewhere
Disturbance of you to people everywhere
Some farmers are waiting, you are absent there!
Some need hot, You rush to them!

What is your plan in future?
Destroy humans or the earth..
Imbalance of water because of you..
Don't blame people,  number is more!

You come regularly in your time!
Don't rush on us in the form of flood,
Teach the people to grow the green!
Otherwise difficult  you to see man..
@Prem@

1116. ನಾನು ಏನಲ್ಲ

ನಾನು ಏನಲ್ಲ..

ಭೂಮಿಯೊಡಲ ಆಳದಲಿ
ಹುಟ್ಟಿ ಬಂದ ಜೀವಿಗಳಲಿ
ನಾನೇನೂ ಏನೂ ಅಲ್ಲ,
ನಾನಿರದಿದ್ದರೂ ಏನೂ ಆಗಲ್ಲ!

ಬಂದಿಹೆ ಧರೆಗೆ ಹೆಣ್ಣಾಗಿ,
ಕೈಲಾದ ಸಹಾಯ ಮಾಡುವಳಾಗಿ
ಬಾಳಲಾರೆ ಇತರರಿಗೆ ಹೊರೆಯಾಗಿ,
ಬದುಕುವೆ ಶಾಂತಿಯ ಕುರುಹಾಗಿ!

ಅನುಬಂಧಗಳ ಬೆಸೆವೆ ಒಂದಾಗಿ,
ಅನುರಾಗವು ಪತಿಯ ಜೊತೆಯಾಗಿ,
ಮೂರುದಿನದ ಬಾಳಿನ ನೆಮ್ಮದಿಗಾಗಿ,
ಬದುಕು ಸುಖ ದು:ಖಗಳ ಜೊತೆಯಾಗಿ..

ಮನೆ ಮನ ಇರಲಿ ಒಂದಾಗಿ
ಸ್ವಚ್ಛತೆ ಇರಲಿ ಜೊತೆಯಾಗಿ
ಬಾಳುವ ಬುವಿಯಲಿ ಹಾಯಾಗಿ
ಶಾಂತಿಯ ಸಾರುವ ಒಂದಾಗಿ..
@ಪ್ರೇಮ್@
12.07.2019

ಬುಧವಾರ, ಜುಲೈ 10, 2019

1114. ಗಝಲ್-85

ಅರ್ಥ ಆಗ್ಲಿಲ್ಲ..
ಗಝಲ್-85

ಸುಳಿಗಾಳಿಗೆ ಸುಳಿ ಸುಳಿಯುತ ಸುಳಿದಾಡುವೆ ನೀ ಮನವೇ..
ಕುಳಿರ್ಗಾಳಿಗಿಂತಲೂ ವೇಗದಿ ಓಡಾಡುವೆ ನೀ ಮನವೇ..

ಹಳಿತಪ್ಪಿದ ರೈಲಂದದಿ ಕೆಳಗುರುಳಿ ಬೀಳದಿರು ನೀನು..
ಕಳಕಳಿಯಿಂದ ಬೇಡುತಿಹೆ ವೇಗದಿ ನುಗ್ಗುತಿರುವೆ ನೀ ಮನವೇ..

ಪುಷ್ಯ ವರ್ಷವು ಧರೆಗುರುಳುವ ತೆರದಿ ಉರುಳುತಲಿರುವೆ,
ಹಾಸ್ಯ ಪ್ರವೃತಿ ಬೆಳೆಸುತ ನಡೆಯಬೇಕಲ್ಲವೆ ನೀ ಮನವೇ?

ಮಾತೃ ಹೃದಯದ ಪ್ರೀತಿಯರಿತು ನಡೆಯಬೇಕಲ್ಲವೇ..
ಭ್ರಾತೃತ್ವವ ತೊರೆಯದೆ ಬದುಕಬೇಕಲ್ಲವೆ ನೀ ಮನವೇ..

ಪ್ರೀತಿಯ ಹಂಚುತ ತೃಪ್ತಿಯ ಕಾಣುತ ನಲಿಯುತಿರು,
ಪ್ರೇಮದ ಮುತ್ತನು ಎಲ್ಲೆಡೆ ಚೆಲ್ಲುತ ಬಾಳಬೇಕಲ್ಲವೆ ನೀ ಮನವೇ..

ತ್ಯಾಗಬುದ್ಧಿಯ ಕಲಿತು ಯೋಗಿಯಾಗಬೇಕು ನನ್ನ ಪ್ರಿಯನೇ,
ಯೋಗ್ಯನಾಗಲು ಧ್ಯಾನದಿ ಕಾರ್ಯವ ಮಾಡಬೇಕಲ್ಲವೆ ನೀ ಮನವೇ?

ತಕರಾರು ಮಾತ ಬಿಡು, ತವರ ಮನೆಯನು ನೆನೆ,
ತರವಲ್ಲ ಇತರರ ತರಹೇವಾರಿ ಚರ್ಚೆ ಅಲ್ಲವೆ ನೀ ಮನವೇ?
@ಪ್ರೇಮ್@
10.07.2019