ಯಾರಮ್ಮಾ..
ಮೇಲಗೆ ದುಂಡಗೆ, ನಗುತಲಿ ಬೆಳ್ಳಗೆ
ನನ್ನನೆ ನೋಡುವ, ನನ್ನಂತೆ ಸಾಗುವ
ದೋಸೆಯ ಹಾಗಿಹ, ತಿಂಗಳ ಬೆಳಕೀವ
ಈತನೆ ಚಂದಮಾಮನೇನಮ್ಮಾ..
ಸಣ್ಣಗೆ ಆಗುವ, ಅರ್ಧವೆ ಆಗವ
ಅಮವಾಸ್ಯೆಯಲಿ ಕಾಣದೆ ಹೋಗುವ
ದುಂಡಗೆ ಇರುವ, ಸಂತಸ ತರುವ
ಈತನೆ ಚಂದದ ಚಂದಿರನೇನಮ್ಮಾ..
ಕೈ ಕಾಲು ಇಲ್ಲವು, ಮೊಗವದು ಮಾತ್ರವೇ
ಮೊಲವದು ಕುಣಿವುದು, ನಗುತಲಿ ಹೀಗೆಯೇ
ಕೆಳಗದು ಬೀಳನು, ತುಂಡು ತುಂಡಾಗುವ
ಈತನೆ ಚಂದಕ್ಕಿ ಮಾಮನೇನಮ್ಮಾ..
ಮೋಡದ ನಡುವಲಿ ಅಡಗುತ ಸಾಗುವ
ಬೆಳ್ಳಿಯ ಬಟ್ಟಲ ಹಾಗೆಯೆ ಚಲಿಸುವ
ಸೂರ್ಯನು ಮುಳುಗಲು ಬೆಳಕನು ತರುವ
ಈತನೆ ಚಂದ್ರನು ಅಲ್ಲವೇನಮ್ಮಾ...
@ಪ್ರೇಮ್@
28.09.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ