ಚಾಮುಂಡಿ ಸ್ತುತಿ
ನಮೋನಮೋ ಬನಶಂಕರಿ, ನಮೋ ನಮೋ ಚಾಮುಂಡೇಶ್ವರಿ
ನಾಡ ದೇವತೆಯೇ ರಾಜರಾಜೇಶ್ವರಿಯೇ
ರಕ್ಕಸರ ಮಣ್ಣು ಮುಕ್ಕಿಸಿ,ರಕ್ತವ ಕಕ್ಕಿಸಿಸಿಹೇ
ಕರುನಾಡ ಪೊರೆವ ನಮ್ಮಯ ಭೂತಾಯೇ//
ಮನದಲಿ ನೆಲೆಸಿಹೆ ವರಗಳ ಸುರಿಸಿಹೆ
ಭಕ್ತಿಯ ಮೋಡಿಗೆ ಬದುಕಲಿ ಒಲಿದಿಹೆ
ನಿಜ ಭಕುತಿಯಲಿ ಭಜಿಸಿಹ ಬಕುತಗೆ
ವರವನು ನೀಡುತ ಸಲಹುತ ಬದುಕಿಗೆ//
ಮಾತೆಯ ಮಹಿಮೆಯ ಹಾಡಲು ನಾಲಗೆ
ಪಡೆವುದು ಜ್ಞಾನದ ಅರಮನೆ ಪಾಲಿಗೆ
ವಿದ್ಯೆಯು ಬುದ್ಧಿಯು ಬೆಳೆವುದು ಮನುಜಗೆ
ಸತ್ಯದ ದಾರಿಯು ದೊರೆವುದು ಬಾಳಿಗೆ...
@ಪ್ರೇಮ್@
02.10.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ