ಬುಧವಾರ, ಅಕ್ಟೋಬರ್ 16, 2019

1266.ನಿನ್ನಂತಾಗಬಲ್ಲೆನೇ ನಾ

ನಿನ್ನಂತಾಗಬಲ್ಲೆನೇ ನಾನು

ನಿನ್ನಂತಾಗಬಲ್ಲೆನೇ ನಾನು
ಬೋಧಿಸತ್ವದ ಕೆಳಗಿನ ಬುದ್ಧನೇ...
ಸುಖ-ದುಃಖಗಳ ಸಮನಾಗಿ ಸ್ವೀಕರಿಸುತಲಿ
ಕಷ್ಟ-ಸಂತಸಗಳಲಿ ಮುಗುಳ್ನಗೆಯ ಬೀರುತಲಿ..

ನಿನ್ನೊಲುಮೆಯ ನನಗೆ ಹರಿಸು
ನಿನ್ನಾಶೀರ್ವಾದವ ನನ್ನೆಡೆ ಪಸರಿಸು
ನಿನ್ನಂತೆ ನಾನಾಗಲು ಸದಾ ಆಶೀರ್ವದಿಸು..
ಜಾತಿ-ಮತಗಳ ಹೊಡೆದೋಡಿಸೆ ಸಹಕರಿಸು..

ಮನದೊಳಗಿನ ದ್ವೇಷ ಕಸಗಳ ಗುಡಿಸೆ,
ಹೃದಯಗಳೊಳಗೆ ಪ್ರೀತಿ ಜ್ಯೋತಿಯ ಬೆಳಗಿಸೆ,
ಕರುಣೆ ಕಡಲಲಿ ಇತರರಿಗೆ ಸಹಕರಿಸೆ,
ಮನದಾಳದಿ ಪರರ ಒಳಿತಿಗೆ ಶ್ರಮಿಸೆ ...

ಪರಿಸರವ ಹಾಳುಮಾಡದೆ ಉಳಿಸಲು
ನೀರು-ನೆಲಕೆ ವಿಷವ ಸುರಿಯದಿರಲು,
ಪ್ಲಾಸ್ಟಿಕ್ ರಬ್ಬರ್ ಗಳ ಸುಡದಿರಲು
ರಾಸಾಯನಿಕಯುಕ್ತ ಆಹಾರ ತಿನ್ನದಿರಲು..

ಬುದ್ಧನೇ ನೀನೆನಗೆ ಶಕ್ತಿ ಕೊಡು,
ಮಹಾನುಭಾವನೇ ಯುಕ್ತಿ, ಭಕ್ತಿ  ನೀಡು,
ಮುಂದಿನ ಭವಿಷ್ಯಕೆ ಭದ್ರ ಬುನಾದಿ ಕಟ್ಟಿ,
ನಿನ್ನಂತೆ ಅತ್ಯಾಸೆಯ ತೊರೆಸಿ ಕಾಪಾಡು..

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ