ದಸರಾ ಕವಿಗೋಷ್ಟಿ-2019
ವಿಷಯ-ಅತಿವೃಷ್ಟಿ
ಕವಯತ್ರಿ-ಪ್ರೇಮಾ ಉದಯ್ ಕುಮಾರ್
@ಪ್ರೇಮ್@
ಶೀರ್ಷಿಕೆ- ಪ್ರಕೃತಿಯ ಮುನಿಸು
ಹೊಡೆದಾಡುವಿರೆ ಮಾನವರೇ ನೀವು
ಜಾತಿ, ಸುಜಾತಿ, ವಿಜಾತಿ, ಕುಜಾತಿಯೆನುತಲಿ!
ನಾನೆಲ್ಲರ ತಾಯಿ ಪ್ರಕೃತಿ ಮಾತೆ!
ಸಲಹುವ ಗುಣವೆನ್ನ ಜಾತಿ ಸರ್ವರನೊಂದಾಗಿ!
ತಾಯಿಗೆ ಮಕ್ಕಳೆಂದರೆ ಅಪರಿಮಿತ ಪ್ರೀತಿಯೇ!
ಆದರೆ ಕೆಟ್ಟಾಗ ಬುದ್ಧಿ ಕಲಿಸುವುದೂ ನೀತಿಯೇ!
ತಾರತಮ್ಯವ ತೋರಲಿಲ್ಲ ನಾನು
ಯಾವ ಜಾತಿ, ಧರ್ಮದ ಮೇಲೂ!
ಸರಿಯಾಗಿ ಪೊರೆದೆ, ಸಮಯ ಬಂದಾಗ ಶಿಕ್ಷಿಸಿದೆ!
ನೋವಿನುರಿಯಲಿ ಮರೆಯಲಿಲ್ಲವೇ ನೀವು ಜಾತಿ ಧರ್ಮವನು?
ಸಾಧಿಸಿ ತೋರಿಸಲಿಲ್ಲವೇ ನಿಮ್ಮೊಳಗಿರುವ ಮಾನವತೆಯನು?
ಪ್ರಕೃತಿಯ ಪಂಚಭೂತಗಳಿಂದಲೇ ಬದುಕುತಲಿ,
ದೂಷಿಸುವಿರಾ ನಮ್ಮ ಕಾರ್ಯವನು?
ಪರೀಕ್ಷಿಸುತಿರುವಿರಿ ನಮ್ಮ ತಾಳ್ಮೆಯನು!
ನಾವು ಸಿಡಿದೆದ್ದರೇನಾಗಬಹುದೆಂಬ ಸಣ್ಣ ಕುರುಹನು ನೋಡಿದಿರಲ್ಲವೇ?
ಇನ್ನಾದರು ಬರಲಿ ಮಾನವರೇ ನಿಮಗೆ ಬುದ್ಧಿ!
ಇಲ್ಲದಿರೆ ಇರದಂತೆ ಮಾಡುವೆವು ನಿಮ್ಮ ಸುದ್ದಿ!
ಅಹಂಕಾರ ಬಿಡಿ, ಪ್ರಕೃತಿ ಮಾತೆಗೆ ಶರಣಾಗಿ!
ಅತಿವೃಷ್ಟಿ ಬರದಿರಲು ವರುಣನಲಿ ಮೊರೆಯಿಡಿ!
ಗಿಡ ಮರಗಳ ಕಡಿತ ಸಾಕುಮಾಡಿ!
ಮಣ್ಣಿನಗೆತವ ನಿಲ್ಲಿಸಿಬಿಡಿ, ಕಡಿಮೆಮಾಡಿ!
ಗಿಡಮರಗಳ ಬೆಳೆಸಿ, ಪ್ರವಾಹ ತಪ್ಪಿಸಿ,
ನೈಸರ್ಗಿಕ ಸರಪಣಿಯ ಸರಿಪಡಿಸಿ,
ಬದುಕಿ,ಬದುಕಲು ಬಿಡಿ ಸರ್ವರ ಪರಿಗಣಿಸಿ,
ಜೀವಿ-ಮನುಕುಲದ ಜತೆ ಸಹಬಾಳ್ವೆ ನಡೆಸಿ!
@ಪ್ರೇಮ್@
08.10.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ