ಮಂಗಳವಾರ, ಅಕ್ಟೋಬರ್ 8, 2019

1255. ಕವಿಯೆಂದರೆ...

ಕವಿಯೆಂದರೆ...

ಸಿಹಿಯುಗಿದು ಒಣಗಿ ಜರ್ಝರಿತವಾದ ಕಬ್ಬಿನಂತೆ,
ರಕ್ತಹೀರಲ್ಪಟ್ಟು ಕಿತ್ತೊಗೆದು ನೆಲಕ್ಕಂಟಿದ ಶಾಕ್ ನಿಂದ ಸತ್ತ ಪಕ್ಷಿಯಂತೆ,
ಜೀವನದ ಜಂಜಾಟದಿ ಬಳಲಿ ಬೇಸತ್ತು ಮೆದುಳಿನೊಳಗಿನ ಶಕ್ತಿ ಕುಂದಿದಂತೆ,
ಪರಹಿತವ ಬಯಸಿ ತಾ ಸೋತು ಸುಣ್ಣವಾಗಿ ಹೋದಂತೆ...

ಕವಿಭಾವ ಸಮಾಜದ ಕಸವ ಗುಡಿಸಿ ನೀರು ಹಾಕಿ ಒರೆಸಿಟ್ಟಂತೆ!
ಮಲಗಿದ ಮಗುವಿನ ಉಸಿರಿನ ತೆರೆ ತೆರೆದ ತೆರೆಗಳಂತೆ!
ಮಹಲ ಕಟ್ಟಿಸಿದ ಬಡವನ ವಾಸದ ಖುಷಿಯ ನಿಟ್ಟುಸಿರಿನಂತೆ,
ಸಮಾಜಕ್ಕಂಟಿದ ಶಾಪವನು ಹರಿದು ಹಾಕಿ ವರವ ಕೊಟ್ಟಂತೆ...

ನಗುನಗುತ ಮನದೊಳಗಿನ ನೋವ ಮರೆತಂತೆ,
ಜತನದೊಳು ಪರರ ಕಷ್ಟಗಳ ಹೋಗಲಾಡಿಸೆ ಪಣವ ತೊಟ್ಟಂತೆ,
ತನ್ನ ಕಷ್ಟವ ಮರೆತು ಹಲವರ ಬೆಳೆಸಿ ತಾ ಉಗಿಸಿಕೊಂಡಂತೆ!
ಬದುಕ ಬವಣೆಯ ಹೇರಿ ಹೃದಯದೊಳಗಿನ ಕುದಿಯ ಹೊರಗಿಟ್ಟಂತೆ..
@ಪ್ರೇಮ್@
08.10.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ