ಗಝಲ್
ಮಕ್ಮಲ್ ಟೋಪಿ ಹಾಕಿಬಿಟ್ಟೆ ನೀ ನನ್ನ ಹೃದಯಕ್ಕೆ
ಸರ್ಕಲ್ ನೊಳಗೆ ಬಂಧಿಸಿ ಮೂಕವಾಗಿಸಿದೆಯೆನ್ನ ಮನಕೆ!
ಬಂಗಾರದಂತೆ ತೀಡುತಲಿ ತನುವ ಹೊಳಪಾಗಿಸಿದೆ!
ಧನುವ ಬಿಡುತಲಿ ನೋವನಲಿವನುಣಿಸಿದೆಯೆನ್ನ ಅಂತರಂಗಕೆ!
ಕತ್ತರಿಯ ಹಾಕಿಬಿಟ್ಟೆ ಮಂದಿರದ ಗುಡಿಯೊಳಗೆ,
ಬತ್ತಲಾರದ ಸಿಹಿ ಪ್ರೀತಿ ರಸವ ತುಂಬಿದೆಯೆನ್ನ ಜೀವಕೆ!
ಪ್ರಸವ ವೇದನೆಯೆನ್ನ ಭಾವಗಳಿಗೆ ಬಂದಿಹುದು!
ನವ ಕಾವ್ಯವ ಬೆಳೆಸಿ ಹುಟ್ಟಿಸಿದೆಯೆನ್ನ ಮೆದುಳಗರ್ಭಕೆ!
ತರತರದ ಮಣಿ ಮುಕುಟ ಶೋಭಿತ ಅಲಂಕಾರ!
ನವನವೀನ ಕನಸ ಮೂಟೆಯ ತುಂಬಿರುವೆಯೆನ್ನ ಜೀವನಕೆ!
ಮಧು ಬಟ್ಟಲ ಕೈಲಿ ಹಿಡಿದು ಕರೆದೆ ಎದೆಪೊಟರೆಯೊಳಗೆ,
ಅಂದದ ಗೂಡು ಕಟ್ಟಿ ಮೊಟ್ಟೆಯಿಟ್ಟಿರುವೆಯೆನ್ನ ಬದುಕಾಗಸಕೆ!
ಪ್ರತಿ ಜೀವಕೋಶಕೂ ಸ್ನೇಹದಲೆಗಳ ತುಂಬಿರುವೆ,
ಪ್ರೇಮದ ಹೊಳೆ ಹರಿಸಿರುವೆಯೆನ್ನ ನಾಡಿನರಕೆ!!
@ಪ್ರೇಮ್@
27.09.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ