ನಲ್ಲೆಗೆ...
ಭಯವೇಕೆ ಓ ನಲ್ಲೆ ಇಂದು ನಿನಗೆ
ಬೇಗ ಬೇಗ ಸಾಗಿ ಬಾರೇ ನನ್ನ ಬಳಿಗೆ//
ನನ್ನ ಹೃದಯ ರಾಜ್ಯವಿದು ಎಂದೂ ನಿನಗೆ
ನನ್ನ ಜೀವ ಭಾವ ನಿಂದು ಕೊನೆಯವರೆಗೆ//
ಬಾರೆ ಬಾರೆ ಚೆಂದುಳ್ಳಿ ಚೆಲುವೆ ಬಾರೆ,
ತಾರೆ ತಾರೆ ನಿನ್ನ ಒಲವ ನನಗೆ ತಾರೆ//
ಅಂಜುವೆ ಏಕೆ ನನ್ನ ನಲ್ಲೆ ಒಲಿದು ಬಾರೆ,
ಬಿಂಕದ ಹೆಣ್ಣೆ,ಒಲವಿನ ಬೆಣ್ಣೆ ಮೊಗವ ತೋರೆ//
ಸೀರೆಯ ನೀರೆ, ಒಲವಿನ ಧಾರೆ ಬಾರೇ ಬೇಗ,
ಬಂದರೆ ನೀನು ಖುಷಿಯಲಿ ನಾನು ಹಾಕುವೆ ಲಾಗ//
ನನ್ನಯ ಜೀವ ಎಂದಿಗೂ ನೀನೆ,
ನನ್ನಯ ಜೀವನ ನಿನಗೇ ಜಾಣೆ//
@ಪ್ರೇಮ್@
[1/13/2018, 9:56 AM] @PREM@: ಪಯಣದೆಡೆಯಲಿ....
ಕಹಿಯ ಮರೆತು,ಸಿಹಿಯ ಮೆಲುಕು ಹಾಕುತ್ತಾ ಜೀವನ ಪಯಣದಲಿ
ನಾ ಸಾಗುತ್ತಿರುವೆ ಮುಂದಕ್ಕೆ//
ಬೇವು-ಬೆಲ್ಲಗಳ ಜೊತೆಯಲಿ ಸವಿಯುತ
ಹೂ -ಹಣ್ಣುಗಳ ಅದರಲಿ ಬೆರೆಸುತ
ನಾ ಸಾಗುತಿರುವೆ ಮುಂದಕ್ಕೆ//
ಅಲ್ಲಲ್ಲಿ ಕಸದ ರಾಶಿ, ಬೇಡವಾದುದ ಹಾಕಿಹರು ಏರಿಸಿ,
ಬೇಸರಿಸುವೆ, ಮಾಲಿನ್ಯ ತಡೆಯಲಾರೆನೆನಿಸಿ,
ನಾ ಸುಮ್ಮನೆ ಸಾಗುತಿರುವೆ ಮುಂದಕ್ಕೆ//
ಮರಗಳ ಕಡಿದು ಮಾರ್ಗವ ಜೋಡಿಸಿ,
ಗಿಡಗಳ ನೆಟ್ಟು,ಧೂಳನು ಹಬ್ಬಿಸಿ,ಅಸಹಾಯಕಿ ಎನಿಸಿ,
ನಾ ಸಾಗುತಿರುವೆ ಮುಂದಕ್ಕೆ//
ಪ್ಲಾಸ್ಟಿಕ್ ಸಾಮಾನು ಎಲ್ಲೆಡೆ ಎಸೆದು,
ಮೈಕಿನ ಮುಂದೆ ಸ್ವಚ್ಛತೆ ಭಾಷಣ ಬಿಗಿದು,
ಆ ಜನರ ನೋಡುತ್ತಾ ನಾ ಸಾಗುತಿರುವೆ ಮುಂದೆ....
@ಪ್ರೇಮ್@
[1/13/2018, 6:53 PM] @PREM@: ನೀನಿಲ್ಲದ ಕ್ಷಣ
ನೀನಿಲ್ಲದ ಕ್ಷಣವದು ಬೇಸರವೇ ಬರುವುದು
ಮನದ ಮೂಲೆಯಿಂದ ಎಲ್ಲ ನರಗಳಳುವುದು...
ಬೆಟ್ಟದಿಂದ ಬಾಗಿ ಬಿದ್ದ ಮರದ ಹಾಗೆ ಮನವಿದೆ,
ಪುಟ್ಟ ಕಂದ ತಾಯ ಕಳೆದು ಅಳುವಂತೆ ಅನಿಸಿದೆ...
ಸಂಜೆ ಸೂರ್ಯ ಮುಳುಗಿದಾಗ ಭುವಿಯಂತೆ ಮನ ಕತ್ತಲಾಗಿದೆ,
ಮಂಜು ಬಿದ್ದ ಗಿಡದ ಎಲೆಯು
ಕಾಣದಂತೆ ತನು ಮುಸುಕಿದೆ...
ನನ್ನ ಮನದ ದೀಪವಾರಿ ಬೆಳಕು ಮಾಯವಾಗಿದೆ
ತನ್ನತನವೆ ಮರೆತು ಹೋಗಿ ನಿನ್ನ ನೆನಪೆ ಕಾಡಿದೆ...
@ಪ್ರೇಮ್@
[1/23/2018, 11:46 PM] @PREM@: ನನ್ನ ಬದುಕ ದಾರಿಯಲಿ
ನಿನ್ನಾಗಮನದ ನಿರೀಕ್ಷೆಯಲಿ
ಕೈ ಹಿಡಿದು ನಡೆಸುವಲಿ
ಬರಲಾರೆಯ ಜೊತೆಯಲಿ//೧//
ಹೃದಯ ಗೂಡು ಕಾದಿದೆ
ಮನದ ಮಾತು ಬೇಡಿದೆ
ಆಗಮನವ ಬಯಸಿದೆ
ಬಾರೆಂದು ನಮಿಸಿದೆ//೨//
ನಿನ್ನ ಪ್ರೀತಿ ನನಗೆ ಬೇಕು
ನಿನ್ನ ನಗೆಯೆ ನನಗೆ ಸಾಕು
ನಿನ್ನ ಎದೆಯ ಜಾಗ ಸಿಕ್ಕು
ನಾನು ಅಲ್ಲೆ ನಿಲ್ಲ ಬೇಕು//೩//
ನನ್ನ ಬದುಕು ನಿನಗೆ ಮುಡಿಪು
ನೀನೆ ಬಂದು ನನ್ನ ಹುಡುಕು
ತಡವು ಏಕೆ ನನ್ನ ಚೆಲುವೆ
ನನ್ನ ಮನದಿ ನೀನೆ ಇರುವೆ//೪//
@ಪ್ರೇಮ್@
[2/5/2018, 10:05 PM] @PREM@: ಒಲವಿಗೆ ಕರೆ
ಮನಕೆ ಸಂತಸವ ನೀಡು ನನ್ನೊಲವೆ
ಬಳಿಯಲಿ ಬಂದೊದಗಿ
ಬತ್ತಿದ ದೀಪಕೆ ಹಾಕು ನೀ ಎಣ್ಣೆಯ
ಪ್ರೇಮದ ಮಳೆ ಸುರಿಸಿ...//ಪ//
ಮನದಲಿ ಇರುವ ಸುಡು ಬಿಸಿಲ
ದೂರ ನೀ ಮಾಡು
ಎದೆಯಲಿ ಪ್ರೀತಿಯ ಉತ್ಸಾಹ ತುಂಬುತ
ಹರುಷವ ನೀ ನೀಡು..//೧//
ಪ್ರೀತಿಯ ದೀಪವ ಮನದಲಿ ಬೆಳಗಿಸು
ನೀ ಇಂದೆ ಬಂದು ಬೇಗ..
ನಮ್ಮ ಎದೆಕದವ ತೆರೆಯುತ ಬೆಳೆಯುತ
ಸಾಗುವ ನಾವು ಈಗ...//೨//
ಸಂಗೀತ ನೃತ್ಯದಿ, ನರ್ತನ ರಾಗದಿ
ಬೆಳೆಸೋಣ ಪ್ರೀತಿಯನು
ನನ್ನ ಕಣ್ಣಿಗೆ ನೀನೆ ಕಾಡಿಗೆಯು
ಪ್ರೀತಿಯ ಹಂಚು ಬೇಗ...//೩//
ರಾತ್ರಿ- ರಾಣಿಯು ನೀನೆ ಆಗಿಹೆ,
ಹೆಣ್ಣೆಂಬ ಬೇಧವಿಲ್ಲ
ನೀನೆ ನಾನಾಗಿ, ನಾನೆ ನೀನಾಗಿ ಹಾಡು ಬಾ
@ಪ್ರೇಮ್@
[2/8/2018, 4:36 PM] @PREM@: 1. ಪ್ರಶ್ನೆ
ನನ್ನ ಕಣ್ಣ ಬಿಂಬದಲ್ಲಿ
ಮೂಡಿದವರು ಯಾರು?
ನನ್ನ ಮನದ ಪೊಟರೆಯಲ್ಲಿ
ನೆಲೆಸಿದವರು ಯಾರು!//
ಕನ್ನಡಿಯಲಿ ಇಣುಕುವಾಗ
ನನ್ನೊಳಗೆ ಕಂಡವರು ಯಾರು?
ನನ್ನೆದೆ ತೊಟ್ಟಿಲಲ್ಲಿ
ನಗೆ ಮೀಟಿದವರು ಯಾರು?//
ಇಷ್ಟ ಪಟ್ಟ ದೃಷ್ಠಿ ಬೊಟ್ಟ
ಕೊಡಿಸಿದವರು ಯಾರು?
ದಿಟ್ಟತನವ ಕಲಿಸಿಕೊಟ್ಟು
ಬೆಳೆಸಿದವರು ಯಾರು?//
ಕೆನ್ನೆ ತುಂಬ ಮುತ್ತು ಕೊಟ್ಟು
ತುತ್ತುಣಿಸಿದವರು ಯಾರು?
ಲಲ್ಲೆಗರೆದು, ಒಲ್ಲೆನೆನಲು
ಬಲವಿತ್ತು ಬಲಪಡಿಸಿದವರು ಯಾರು?//
ಅತ್ತು -ಕರೆದು ರಂಪವಾಡೆ
ಎತ್ತಿ ಕೊಂಡೋರ್ಯಾರು?
ಹೆತ್ತು-ಹೊತ್ತು ಸಾಕಿ-ಸಲಹಿ
ದೇವರಾದೋರ್ಯಾರು?
@ಪ್ರೇಮ್@
[8/20/2018, 6:29 PM] @PREM@: ಕವನ
ನಿಧಿಯಂತಿರುವ ಸಾಲುಗಳೇ
ಈ ಕವನದ ಪದ ಪುಂಜಗಳೇ
ಜೋಡಿಯಾಗಿ ಕುಳಿತ ಅಕ್ಷರಗಳೆ
ಗುಂಪಾಗಿ ನೆರೆದ ಸಾಲುಗಳೆ..
ಹೃದಯದಿ ಜನಿಸಿ ಬೆಳೆಯುತಲಿದ್ದು
ಮನದಲಿ ಗೂಡನು ಕಟ್ಟುತ ಬಂದು
ಬಾಯಿಗೆ ರಾಗದಿ ಹಾಡಲಿ ತಂದು
ಕಿವಿಗೆ ತಣ್ಣನೆ ತಂಪ ನೀಡಿತಿಂದು..
ಎದೆಯಾಳದ ಖುಷಿಯು ಹೊರಬಂತು
ಮನಮಲ್ಲಿಗೆಯ ಕಂಪನು ಹರಡಿತು
ಗಾಯಕನಿಂದ ಸೊಂಪಾಗಿ ಬೆಳೆಯಿತು
ಜನಮನರಲ್ಲಿ ಮೆಚ್ಚುಗೆ ಗಳಿಸಿತು..
ಮನಕಾನಂದವ ನೀಡಿದ ಗೀತೆ
ಜನಮನ ತಣಿಸಿದ ಸಂಪ್ರೀತೆ
ಮೆದುಳಲಿ ನಲಿದ ತನುಜಾತೆ
ಕೈಯನು ಹಿಡಿದು ನಡೆಸಿದ ಮಾತೆ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ