ಗಝಲ್
ಮೋಡದಂತೆ ಚಲಿಸೊ ನಗುವು ಮನಕೆಂದೂ ಮೋಹಕ
ಕಾಡದಂತೆ ಬದುಕೊ ತರವು ಬಾಳಿಗೆಂದೂ ಮೋಹಕ..
ಪರರಿಗುಪಕಾರವಾಗುತ, ಇದ್ದುದರಲಿ ಹಂಚಿ ತಿನ್ನುತಲಿರಬೇಕು.
ಇಷ್ಟವಾದವರ ಮೆಚ್ಚಿದ ಗುಣಗಳ ಹೊಗಳುವುದು ಘನತೆಗೆಂದೂ ಮೋಹಕ!
ತನ್ನಷ್ಟಕೆ ತಾನು ಇರುವುದು ಜಗದಿ ಕಲಿಯಬೇಕಾದ ಗುಣ.
ಪರರ ವಿಚಾರಗಳಿಗೆ ತಲೆ ಹಾಕದಿರುವುದು ಸರ್ವರಿಗೆಂದೂ ಮೋಹಕ!
ಬಾಂದಳದಂತೆ ವಿಶಾಲವಾಗಿರಬೇಕು ಆಲೋಚನೆಗಳ ಸಾಗರ.
ಭಾವನೆಗಳ ಕುಗ್ಗಿಸದೆ ಮುನ್ನಡೆವುದು ಕ್ಷಣ ಕ್ಷಣಕೆಂದೂ ಮೋಹಕ!
ಮತಿಹೀನನಾದೊಡೆ ಹೊಕ್ಕಿ ಬರುವುದು ಋಣಾತ್ಮಕ ಯೋಚನೆ.
ಆಲೋಚನೆಗಳ ದೇವರತ್ತ ಹರಿಸಿ ಬಿಡುವುದು ದೇಹಕೆಂದೂ ಮೋಹಕ!
ತನ್ನವರೆನುತ ಅವರಿವರ ಬಗ್ಗೆ ಒಲವು ತೋರುವುದು ಸಹಜ!
ಬೇಲಿಯೇ ಎದ್ದು ಹೊಲ ಮೇಯುವುದರ ಅರಿವು ತನುವಿಗೆಂದೂ ಮೋಹಕ!
ತನ್ನ ಹೃದಯವನು ತಾನೇ ಪ್ರೀತಿಸಲು,ಗೌರವಿಸಲು ತೊಡಗಬೇಕು.
ಪ್ರೇಮದಿ ಸವೆಸುವ ಪ್ರತಿ ಘಳಿಗೆಯು ಆರೋಗ್ಯಕೆಂದೂ ಮೋಹಕ!
@ಪ್ರೇಮ್@
04.10.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ