ಮಂಗಳವಾರ, ಅಕ್ಟೋಬರ್ 8, 2019

1254. ಕಸಿವಿಸಿಯಾಗದೆ ಕವಿಮಾನವನೇ

ಕಸಿವಿಸಿಯಾಗದೆ ಕಪಿಮಾನವನೇ...

ಕಾಣಿಸದೆ ಕಡಿದು ಕಸವಾಗಿಸುತಿರುವ ಕಾನನದ ಕಣಗಳು?
ಕರುಣಿಸಬಾರದೆ ಕಡುಹಸಿರಿಗೆ ನವಜೀವನ ಕಥನವ?

ಕರುನಾಡಲಿ ಬರಿದಾಗಿದೆ ಕಾಡಿನ ಸಂಪತ್ತು!
ಕ್ರೂರತೆಯನು ಕೊನೆಗೊಳಿಸದಿರೆ ಬರಲಿದೆ ಆಪತ್ತು!

ಕೊಲ್ಲುವುದಕೂ ಕಾಲವಿಹುದು, ಕಡಿಯುವುದಕೂ ಮಿತಿಯು!
ಕತ್ತರಿಸುತ ಮರಗಿಡವನು ಕೊಂದವರಿಗೆ ಕಹಿಯು!

ಕುಪ್ಪಳಿಸುವ ಕಪ್ಪೆಗಳಿಗೂ ಕಾಲವು ಇಲ್ಲಿಲ್ಲ!
ಕಣ್ಮನ ತಣಿಸುವ ಹಕ್ಕಿಗಳು ಬರಿದಾಯ್ತಲ್ಲ!
ಕೂಗುವ ಕೋಗಿಲಗಳ ಮಾರ್ದನಿ ಎಲ್ಲಿಹುದು?
ಕೊಂಡಾಡುವ ಕಾಡಾದ ಭವನವೇರುತಲಿಹುದು!!

ಕೋರ್ಟು ಕಛೇರಿಗಳು ಹಣಕಾಗಿ ಮಾತ್ರ!
ಕಾಯುವಿಕೆಗೆ ಹಿರಿದಾದುದು ಕಾನನದ ಪಾತ್ರ!
ಕಾಫಿಗೂ, ಕಾಯಿಪಲ್ಯಕೂ, ಕೋಲಕು ಬೇಕು ಕಾಡು!
ಕಾಟವು ಕಾಮುಕರಿಗೆ ಕಡಿದಾದ ಹಸಿರು!

ನಗರದ ಜನಕದು ಕಾಡೆಂದರೆ ಪಾಡು
ಕೃಷಿಕನ ಹೃದಯವದು ಹಸಿರಾಗಿಹ ಮೇಡು!
ಕಷ್ಟದಲೆ ಕಡಿದಿರಿಸಿದ ಕೃಷಿ ಸಾಲದು ಕ್ರಯಕೆ!
ಕರಕಮಲದಿ ಕತ್ತರಿಸುತಿಹೆ ಕಾನನವ ಮಾಡುತ ಕೊಳಕು!
@ಪ್ರೇಮ್@
08.10.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ