ಬುಧವಾರ, ಅಕ್ಟೋಬರ್ 16, 2019

1267. ಗಝಲ್-12

ಗಝಲ್

ಬಿಟ್ಟಿರಲಾರೆ ಮಧುಕನ್ನಿಕೆಯಂತೆ ನೆನೆವೆ ಹಗಲಿರುಳು
ಕಾಡುವೆ ಮದಿರೆಯೆ ಬೇಕೆನಿಸುವೆ ಹಗಲಿರುಳು..

ಸುರಸುಂದರ ದೇಹದ ಬಾಟಲಿ ನಿನಗಿಹುದು
ಪರಪುರದಲು ಬರಸೆಳೆದು ನೆಲೆಸಿರುವೆ ಹಗಲಿರುಳು.

ಹೀರ ಕುಳಿತೊಡೆ ಹಾಯಾಗಿ ಸಮಯವೆಂಬುದಿಲ್ಲ
ಬಾಯ ಬಳಿಯೆ ಘಮಘಮಿಸುವೆ ಹಗಲಿರುಳು..

ಪ್ರಪಂಚವನೇ ಮರೆಯುವ ಶಕ್ತಿ ನೀಡುತಲಿರುವೆ
ಸಂಸಾರ,ಮಡದಿಮಕ್ಕಳ ಹೊರದೂಡುವೆ ಹಗಲಿರುಳು

ಮಲಗಲೇನು ಹಾಸಿಗೆ ದಿಂಬೇ ಬೇಕೆನಲಾರೆ
ಚರಂಡಿಯಲೂ ತಣ್ಣಗೆ ನಿದ್ದೆಕೊಡುವೆ ಹಗಲಿರುಳು.

ನಗರವಾಗಲಿ ಹಳ್ಳಿಯಾಗಲಿ ಸರ್ವೆಡೆ ಸಮಾನವಲ್ಲವೇ?
ಕುಡುಕ ಸ್ನೇಹಿತರ ಒಂದುಗೂಡಿಸುವೆ ಹಗಲಿರುಳು.

ಅಮಲು ನಿನ್ನೊಳಿಹುದು ಕಮಲವನು ಹಿಡಿದಂತೆ
ರಕ್ಷಿಸಲು ಭಗ್ನ-ಪ್ರೇಮಿಗಳ ನೀನಿರುವೆ ಹಗಲಿರುಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ