ನವಿಲು ನಾನು
ನರ್ತನವೀಯುವೆ
ನಲಿಯುತ ಕುಣಿಯುತ
ನವಿಲೇ ನನ್ನ ಹೆಸರು..
ನಿಮ್ಮಯ ದೇಶದ
ರಾಷ್ಟ್ರ ಪಕ್ಷಿಯು ನಾನು..
ನವಿಲೇ ನನ್ನ ಹೆಸರು..
ಮಯೂರನೃತ್ಯವೆನ್ನಯ ಶೈಲಿಯು
ನವೀನ ಬಣ್ಣವು ಮೈಯಲ್ಲಿಯೂ
ನವಿಲೇ ನನ್ನಯ ಹೆಸರು..
ಸುಬ್ರಹ್ಮಣ್ಯನಿಗೆ ವಾಹನವಾದೆನು
ಅವನ ಹೊತ್ತು ಪ್ರಪಂಚ ಸುತ್ತಿದೆನು..
ನವಿಲು ನನ್ನ ಹೆಸರು..
ಗರಿಯನು ಕಿತ್ತು ಕೃಷ್ಣಗೆ ಕೊಟ್ಟೆನು
ತಲೆಯಲಿ ಮುಡಿಯಲು ಸಂತಸಪಟ್ಟೆನು
ನವಿಲು ನನ್ನ ಹೆಸರು..
ಸ್ವಾಮೀಜಿಯ ಕೈಯಲಿ ಬೇಸಣಿಕೆಯಾಗಲು
ಮಕ್ಕಳ ಪುಸ್ತಕದಿ ಕಲಿಕೆಗೆ ಸಹಕರಿಸಲು
ಪುಕ್ಕವ ಕೊಟ್ಟ ನವಿಲು ನನ್ನ ಹೆಸರು...
@ಪ್ರೇಮ್@
30.09.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ