ಎಳೆಎಳೆಯಾಗಿ..
ಎಳೆ ಬಿಸಿಲ ಕಾಂತಿ ಮೈಮರೆತು ತೂರಿ
ಧರೆಗಿಳಿದು ಬಂತು ಜಾರಿ!
ಎಳೆ ಎಲೆಯ ಮೇಲೆ ಪುಟ್ಟ ನೀರ ಹನಿ
ಒಣಗೋಯ್ತು ಮೊಗವ ತೋರಿ!
ಮಳೆ ಬರಲು ಕಿರಣ ಜತೆ ಸೇರಿ ಹೋಯ್ತು
ಕಾಮನ ಬಿಲ್ಲೆ ಅಯ್ತು!
ಗುಡ್ಡದಿಂದ ಸೇತುವೆಗೆ ಹನುಮನಂತೆ ಹಾರುತಲಿ
ನೋಡಿದವರ ಮನವು ತಣಿದೋಯ್ತು!
ಮನಮನವ ಜೋಡಿಸುತ ಇರುವುದೇ ಬದುಕು
ತನುಮನವು ಇರಲಿ ಕೂಡಿ,
ಜೋಡೆತ್ತು ಜೊತೆಯಾಗಿ ಸಾಗಿದರೆ ಮಾತ್ರವೇ
ಎಳೆಯಬಹುದು ಬಾಳ ಗಾಡಿ..
ಒಂಟೊಂಟಿಯಾಗಿ ಇರಲೇನು ಚೆನ್ನ,
ಗುಂಪಿನಲಿ ಇರು ನೀ ಅಣ್ಣಾ..
ಒಗ್ಗಟ್ಟಿನಲ್ಲಿ ಇಹುದೆಮ್ಮ ಬಲವು
ಕಿರಣಗಳ ನೋಡಿ ಕಲಿಯೋಣಾ...
@ಪ್ರೇಮ್@
೦2.10.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ