ಬುಧವಾರ, ಅಕ್ಟೋಬರ್ 16, 2019

1268. ವಿನಂತಿ

ವಿನಂತಿ

ನನ್ನದೆನುವ ನಾನಂಬಿದ ದೇವರೇ
ನನ್ನ ಬೇಡಿಕೆಗಳ ನಿನ್ನ ಮುಂದಿರಿಸಿರುವೆ..
ತಥಾಸ್ತು ಅಂದುಬಿಡು ಸಾಕು
ನನ್ನ ಜೀವನವಿದೋ ಸಾರ್ಥಕ್ಯ...

ನನಗೇನೂ ದಯಪಾಲಿಸದಿರು ನೀನು
ಶಾಂತಿ, ಆರೋಗ್ಯ, ನೆಮ್ಮದಿಯ ಬದಲಾಗಿ!

ರಾಜಕಾರಿಣಿಗಳಿಗೆ ಕೊಡು ದುಡ್ಡು ತುಂಬಿದ ಮೂಟೆಗಳ
ಹಾಗಾದರೂ ಸಮಾಜಸೇವೆ ಮಾಡಲಿ..

ಕಣ್ಣಿಲ್ಲ, ಕೈಯಿಲ್ಲ, ಕಾಲಿಲ್ಲ, ಕಿವಿಯಲಿ ಶಕ್ತಿಯಿಲ್ಲದವರಿಹರು ಬಹಳ
ಕೊಡು ನೀನು ಜಗದಲಿ ದೇವನೇ ಅವರಿಗೆ ಸಹಾಯ ಮಾಡೊ ಮನಗಳ..

ಓದು ಬರಹ ತಿಳಿದ ಅಜ್ಞಾನಿಗಳಿಹರು ಜಗದಿ ಬಹಳ
ಬುದ್ಧಿ ನೀಡು ಸಲಹು ಅವರಿಗೆ ನಿತ್ಯ ಜೀವನದ ನಗೆಮೊಗದ ಕಾರ್ಯಗಳ..

ಮಗುವಿಗೂ ಹಿಂಸಿಸುತ, ಮಾನ ಕಳೆಯುವ ಗುಂಪಿಹುದು
ಕ್ಷಮಿಸದೆ ಸಾಯಿಸಿಬಿಡು ಅಂಥ ದುಷ್ಕರ್ಮಿಗಳನು..

ಮನೆ ಮಠ ಬಂಗಾರ ವಜ್ರ ವೈಡೂರ್ಯ ಬೇಕು
ತಲೆಮಾರಿಗೂ ಸಂಗ್ರಹಿಸಿಡುತ ಇತರರ ನೋವಿಗೆ ಕಾರಣವಾದವನ ವಧಿಸು..

ಸರ್ವರ ವದನದಲಿ ನಗುತರಿಸು,
ಸರ್ವರ ಸಂಕಷ್ಟ ಪರಿಹರಿಸು,
ದ್ವೇಷ ಮತ್ಸರವ ಓಡಿಸಿಬಿಡು
ಪ್ರೀತಿ, ಸಹಬಾಳ್ವೆಯ ಬೆಳೆಸಿಬಿಡು..
@ಪ್ರೇಮ್@
15.10.20೧9

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ