ಬುಧವಾರ, ಅಕ್ಟೋಬರ್ 2, 2019

1233. ಗಝಲ್-17

ಗಝಲ್

ವೀಣೆಯಂಥ ಮನವೆ , ಹಾಲಿನಂಥ ಹೃದಯವೆ ಕೇಳು
ನವಿಲಿನಂಥ ನಾಟ್ಯವೆ, ನನ್ನೊಡಲ ಕಾವ್ಯವೆ ಕೇಳು..

ನಿನ್ನ ಸೆಳೆತವದು ಬಾನ ಗಡಿಯ ದೂರವ ದಾಟಿಹುದು !
ಹೃದಯದಾಳದಿ ಮಿಡಿಯುತಲಿ ಮೀನಿನಂತೆ ಈಜುತಿರುವೆ ಕೇಳು!

ಗಗನದಂಚಿನಲಿ ಮುತ್ತುಗಳದೆ ವರ್ಷಧಾರೆ ಸುರಿದಿಹುದು!
ಮೆದುಳಿನೊಳು ವಾಹಿನಿಯಾಗಿ ಹರಿದಾಡುತಲಿರುವೆ ಕೇಳು!

ಎದೆಕದದ ಬೀಗ ಮುರಿದು ಜೀವ ಮನೆಯ ಹೊಕ್ಕಿರುವೆ!
ಮನದಂಗಳದಲಿ ಕುಣಿಯುತ ಆಟವಾಡುತಲಿರುವೆ ಕೇಳು!

ಸವಿನೆನಪ ಮೂಟೆಯ ಹೊತ್ತು ಕಾಯುತಲಿರವೆ ನಿನಗಾಗಿ,
ಕುದುರೆಯಂತೆ ವೇಗವಾಗಿ ಬಾಳ ಸೇರಲಿರುವೆ ಕೇಳು!

ಚರಾಚರದಲಿ ಬದುಕು ಕಟ್ಟಿ ನೆರೆದಿಹ ಪರಿ ಆಹಾ!
ಪರಿಚಯದಿ ಮಂದಿರದೊಳು ಪೂಜಿಸಲ್ಪಡುವೆ ಕೇಳು!

ಜಲದೊಳಗೆ ಹುಳ-ಜೀವಿಗಳ ಬದುಕದು ಅಮೋಘ!
ಪ್ರೇಮದ ತಿಳಿಗೊಳವ ಕಲಕುತಲಿ ನೀನಿರುವೆ ಕೇಳು!
@ಪ್ರೇಮ್@
27.09.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ