ಗಝಲ್
ಪರಸ್ಥಳದಲೂ ನೆನಪಾಗಿ ಖುಷಿ ಹೆಚ್ಚಿಸುವುದು ನಮ್ಮ ಕನ್ನಡ.
ಬಾಯಿ ತೆರೆದಾಗ ಹೊರಬರುವುದು ನಮ್ಮ ಕನ್ನಡ.
ಅಮ್ಮಾ ಎನಲು ತನ್ನಿಂತಾನೇ ಮೈಮರೆವೆ ಜಗದೊಳು.
ಸುಲಭದಲಿ ಇತರ ಕಲಿಕೆಗೆ ಸಹಾಯವದು ನಮ್ಮ ಕನ್ನಡ.
ತಾಯ್ನೆಲ, ತಾಯ್ನುಡಿ ಮಹಿಮೆಯದು ಅಪಾರ.
ತನ್ನದೇ ಆದ ಹಿರಿಮೆ, ಘನತೆವೆತ್ತಿಹುದು ನಮ್ಮ ಕನ್ನಡ.
ನೆಲ ಜಲವ ಬಳಸುತ್ತ ಮೆರೆಯುತಿಹೆವು ರಾಜರಂತೆ.
ಕೈತುತ್ತ ನೀಡಿ ಬೆಳೆಸುತಿಹುದು ನಮ್ಮ ಕನ್ನಡ.
ಮಾತನಾಡಲು ಹೆಮ್ಮೆಯಿಹುದು ದ್ರಾವಿಡದ ಈ ಭಾಷೆಯನು.
ಪಂಪ ರನ್ನ ಪೊನ್ನರನು ನೆನಪಿಸುವುದು ನಮ್ಮ ಕನ್ನಡ!
ವಿಜಯಪುರದಿ ಚಾಮರಾಜನಗರದವರೆಗೂ ವಿಶಾಲವಾಗಿ ಹಬ್ಬಿಹುದು.
ಕಲಿಯಿರೆಲ್ಲವನು, ಬಳಸಿ ನನ್ನನು ಎನುತಲಿಹುದು ನಮ್ಮ ಕನ್ನಡ.
ಹೆತ್ತ ಮಾತೆ, ಹೊತ್ತ ಭೂಮಿ, ಆಡೊ ನುಡಿಯವಲಿ ಪ್ರೀತಿಯಿರಲಿ,
ಪ್ರೇಮದಿ ಮಾತನಾಡಿ ಇತರರಿಗೂ ಕಲಿಸಬಹುದು ನಮ್ಮ ಕನ್ನಡ.
@ಪ್ರೇಮ್@
04.10.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ