ಅಹಂಕಾರ ತೊಲಗಲಿ..
ಅಂಬಾರಿಯ ಕೆಳಗೆ
ಅಂಗಳದ ಮೇಲೆ
ಅಂತರದಲ್ಲಿ ವಾಸ
ಅಂಜದ ಬದುಕು...
ಅಂದಿನ ಜನರ
ಅಂಜಿಕೆ ಬೇರೆ
ಅಂಬರ ಮುಟ್ಟುವ
ಅಂಗಾರಕೆ ನೆಗೆಯುವ
ಅಂಕದಿ ಬದುಕುವ
ಅಂಗವ ಮರೆಯುವ
ಅಂದದ ಮರುಳು
ಅಂತಿಮ ಯಾತ್ರೆಯವರೆಗೂ
ಅಂಬಿಕೆ ಕಾಯಲಿ
ಅಂಶದಿ ತೃಪ್ತಿ ಸಿಗಲಿ..
ಅಂದವಿರಲಿ ಹೃದಯ
ಅಂಧತ್ವ ಹೋಗಲಿ
ಅಂಕಿತ ಬರೆಯಲಿ
ಅಂದದ ಬದುಕಲಿ..
@ಪ್ರೇಮ್@
01.10.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ