ಬುಧವಾರ, ಅಕ್ಟೋಬರ್ 2, 2019

1237. ಏತಕೆ ಮರುಳೆ

ಏತಕೆ ಮರುಳೆ

ವದನದಿ ತುಂಬಲಿ ನಲ್ಮೆಯ ನಗೆಯು
ನಾಚಿಕೆ ಏತಕೆ ಮನದಲಿ ಮರುಳೇ..
ಮಲ್ಲಿಗೆ ಹೃದಯದಿ ಉಕ್ಕಲಿ ಪ್ರೀತಿಯು
ಬದುಕಲಿ ಕಾಣದೆ ಇರಲದು ಇರುಳೇ..

ಬೆಳಕಿನ ರವಿಗದು ರಜೆಯೇ ಇಲ್ಲವು
ತಂಪು ಚಂದಿರನು ಉರಿಯುವುದಿಲ್ಲ
ಬೇಸರ ನೀಗಿಸು ಸಂತಸ ಅರಳಿಸು
ಸುಖ ದುಃಖಗಳ ಒಂದಾಗಿ ಸ್ವೀಕರಿಸು!

ಏತಕೆ ಕೊರಗುವ ಬಡವ ಬಲ್ಲಿದಗೆ
ಕಷ್ಟದ ದಿನವದು ಸರ್ವೇ ಸಾಮಾನ್ಯವು,
ಹಗಲಿರುಳೆಂಬುದು ಬಾಳಲಿ ಬರುವುದೆ
ನಿದ್ದೆಗೆ ಕೆಲಸಕೆ ಬೇಡವೆ ಸಮಯವು..

ದೇವನ ಕಾರ್ಯದಿ ಬದುಕನು ನೀಡು
ಕಾವನ ಕೈಗದು ಕಷ್ಟವ ದೂಡು
ಜಗದಲಿ ಜನಿಸಿಹ ಜೀವಿಯ ನೋಡು,
ನಾನೇ ಉತ್ತಮನು ಎನುತಲಿ ಹಾಡು...
@ಪ್ರೇಮ್@
28.09.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ