ಗಝಲ್
ನೀ ಬೇಕೇ ಬೇಕೆಂದು ಬೊಬ್ಬಿಡುವರು ಹಸಿರೇ!
ನಿನ್ನ ಕಡಿದು ಧನಗಳಿಸುತಿಹರು ಹಸಿರೇ..
ಸ್ವಚ್ಛ ಸುಂದರ ಮೈಮಾಟ ನಿನಗಿಹುದು,
ಜನರು ತಮ್ಮ ದುರಾಸೆಗಾಗಿ ಬಳಸುತಿಹರು ಹಸಿರೇ..
ಸಕಲರಿಗೆ ಕಲ್ಪವೃಕ್ಷದಂತೆ ಸಹಕಾರ ನೀಡುವೆ,
ಸರ್ವರೂ ಬೆಳೆಸಲಾಸಕ್ತಿ ತೋರಲಾರರು ಹಸಿರೇ..
ಮನವ ಮುದಗೊಳಿಸಲು ಬಳಿಗೆ ಬರುವರು,
ಮಂಗಳವ ಹಾಡಿ ಬಿಡಲು ತಯಾರಿಹರು ಹಸಿರೇ..
ಗಿಡ ಮರ ಬಳ್ಳಿಗಳ ತಿಂದು ತೇಗಿ ಬದುಕುತಿಹುದು ದೇಹ,
ಬಾಳಲಿಕ್ಕಾದರೂ ನೆಡುವೆವೆಂಬ ಮನಸ್ಸು ಮಾಡರು ಹಸಿರೇ..
ಬೆಳೆವಾಗಲೂ ಮುಂದೆ ಬರಲಿರುವ ಹಣದ ಲೆಕ್ಕಾಚಾರವಿಹುದು,
ಧನದಾಹಕಾಗಿಯೇ ಕೃಷಿ ಮಾಡುವರು ಹಸಿರೇ..
ವಿಷವ ಸುರಿಯುತಲಿಹರು ದಿನದಿನ ಬುಡಕೆ,
ಬಳಸಿದ ವಿಷ ತಮ್ಮ ಹೊಟ್ಟೆ ಸೇರುವುದ ಮರೆತಿಹರು ಹಸಿರೇ..
ಪ್ರೇಮದಿ ನಿನ್ನ ಬೆಳೆಸೆ ನೀನೂ ಸಲಹುವೆ ಮನುಜರನು,
ಅರಿತು ಬೆರೆತು ಒಂದಾಗಿ ಎಂದು ಬಾಳುವರು ಹಸಿರೇ...
@ಪ್ರೇಮ್@
11.10.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ