ಬೇಡ ಬಯಲು
ತಂಡಾಸನ್ನು ಕಟ್ಟಿರಣ್ಣ
ಬೇಡ ಬಯಲ ಸಹವಾಸ..
ಮಲವು ಮೂತ್ರ ಬಯಲಲಿ
ರೋಗಾಣುಗಳಿಗಿಲ್ಲ ಉಪವಾಸ...
ಬಯಲಲಿರೆ ಸ್ವಚ್ಛತೆ
ಊರ ಜನಕೆ ನೆಮ್ಮದಿ
ಬಯಲು ಅಶುದ್ಧವಾದೆಡೆ
ಬಾಳಬಹುದೆ ಸೌಖ್ಯದಿ...
ಶೌಚಾಲಯ ಕಟ್ಟಿರಿ
ಬಯಲು ಮಲ ತಡೆಯಿರಿ
ಆರೋಗ್ಯವ ವೃದ್ಧಿಸುತ
ನೆಮ್ಮದಿಯಲಿ ಬದುಕಿರಿ..
ಮನೆಯೆ ದೇವಾಲಯ
ಬಯಲು ಅದರ ಆಲಯ
ದೇವರು ಸುಳಿದಾಡುವ ಸ್ಥಳವ
ಮಾಡದಿರಿ ಸ್ವಚ್ಛ 'ಲಯ'!!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ