ಕರ್ನಾಟಕ ಸಾಂಗ್
ಸಿಎಮ್ಮು ಬಂದ್ರಪ್ಪ ಸಿ ಎಮ್ಮು
ಜೆಡಿಎಸ್ ನ ಸಿ ಎಮ್ಮು
ಹೈ ಎಸ್ಟು ಓಟನ್ನು ಒತ್ತಿದ್ದು ಬಿಜೆಪ್ಗೆ
ಉಳಿದವ್ರು ಒತ್ತಿದ್ದು ಕಾಂಗ್ರೆಸ್ಗೆ..
ಓಟೆಲ್ಲಾ ಕಳ್ದು ರಿಸಲ್ಟ್ ಬಂದಾಗ
ಓಳಾದ ಮತದಾರ ಬಾಯ್ಬಿಟ್ಟ ಕೊನೆಗೆ!!
ಉಗೀತಿದ್ರು ಪಕ್ಕಗಳು ಪಕ್ಷಕ್ಕೆ ಎದುರೇ
ಹಣವನ್ನೂ ಹರಿಸಿದ್ರು ಓಟಿಗೆ ಅವರೇ
ಏನಾರೂ ಮಾಡ್ಕಳ್ಳಿ ಅಂತಂದ್ರು ಓಟರ್ಸ್
ತಗೊ ಅಂತ ಕೊಟ್ ಬಿಟ್ರು ಸೀಟೇ ಸೀಟು..
ಅಲ್ಲರ್ಧ ಇಲ್ಲರ್ಧ ಮತ್ತೆಲ್ಲೊ ಒಂದ್ ಕಾಲು..
ಜಾತಿ -ಮತ ಹೆಂಡ ಎಲ್ಲಕ್ಕು ಸೋಲು..
ಕ್ಯಾಂಟೀನ್ಗೂ ಓಟಿಲ್ಲ, ಭಾಗ್ಯಕ್ಕೂ ಬಗ್ಲಿಲ್ಲ
ನಂಬಿದ ಜನರೇ ಕೈಕೊಟ್ಟು ಬಿಟ್ರಲ್ಲ,
ಕಾಂಗ್ರೆಸ್ಗೂ ಅರ್ಧರ್ಧ, ಜೆಡಿಎಸ್ಗರ್ಧರ್ಧ
ಮಂತ್ರಿ ಸೀಟಲ್ಲು ಉಂಟಂತೆ ಪಾಲು
ಒಟ್ಟಾರೆ ಕನ್ನಡದ ಗೋಳೇ ಗೋಳು...
ಸಿಎಮ್ಮು ಯಾರಾಗ್ಲಿ ದುಡಿಬೇಕು ನೀವೇ
ನಮ್ಮಯ ಊಟವ ಪಡಿಬೇಕು ನಾವೇ...
ಪಕ್ಷಗಳೊಲವು ಕಡಿಮೆಯಾಗಲಿ ನಮ್ಮಲ್ಲಿ
ಚಿಂತೆ ತೊಲಗಿಸೊ ರಾಜಕಾರಿಣಿ ಇರ್ಲಿ
ಕನ್ನಡ ಜನತೆ ನೆಮ್ಮದಿ ಕಾಣಲಿ.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ