ಸೋಮವಾರ, ಮೇ 21, 2018

306. ನಾನು-ಕವನ

ನಾನು

ನನ್ನ ಮನವು
ಹಿತವಾಗಿ ನಗಲು
ನನ್ನ ಹೃದಯ
ಸ್ವಚ್ಛವಿರಲು
ನನ್ನ ಕನಸು
ನನಸಾಗುವುದು..

ನನ್ನ ದೇಹ
ಶುದ್ಧವಿರಲು
ನನ್ನ ಭಜನೆ
ನಿಜದೊಳಿರಲು
ನಮ್ಮ ಮನೆಯು
ಬೆಳಗುವುದು..

ನನ್ನ ಮಾತು
ಸಿಹಿಯಾಗಿರಲು
ನನ್ನ ಕಾರ್ಯ
ಸರಿಯಾಗಿರಲು
ನನಗೆ ದೇವ
ಒಲಿದು ಬರುವನು..

ನನ್ನ ರಕ್ತ
ಹಂಚುತಿರಲು
ನನ್ನ ಸಹಾಯ
ಸಿಗುತಲಿರಲು
ಪರರ ಪ್ರಾರ್ಥನೆ
ನಮ್ಮ ಕಾವುದು..

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ