ಸೋಮವಾರ, ಮೇ 28, 2018

317. ಕವನ- ಮೋಡದ ಗುರಿ

ಸ್ಪರ್ಧೆಗೆ ಕವನ

ಪುಳಕಿತ ಮನ

ಸುಯ್ಯನೆ ಸುರಿದ ಸೋನೆ ಮಳೆಗೆ
ಸಂಗೀತದ ಸಲ್ಲಾಪದ ಸಂಭ್ರಮ
ಸುಲಲಿತ ಜಲಧಾರೆಯ ಸಿಹಿ ಸಂಚಲನಕೆ
ಸಾಗುತಿದೆ ಸವಿಯ ಸುರಿಸುತ ಸರಸರ..

ಸೋನೆಯ ಸವಿಯೊಳು ಸುರಿದಿದೆ ಸಾಗರ
ಸರಿಸಿದೆ ಮೋಡದ ಗುಂಪಿನ ತಂಪನು.
ಸಂಪಿಗೆ ಸವಿಯ ತರಿಸಿದೆ ಸರ್ವರಲಿ
ವರ್ಷ ಧಾರೆಯ ಸರಸಕೆ ಸೋತಿದೆ

ಇಳೆಯನು ತಲುಪಲು ಮಳೆಹನಿಗಾತುರ
ಹನಿಯನು ಕಳುಹಿಸಿ ಮೋಡಕೆ ಕಾತರ
ತಲುಪಿದ ಬಿಂದು ಸಾಗರ ಸೇರಲು
ಮೋಡಕೆ ತನ್ನ ಗುರಿ ತಲುಪಿದ ಸಂತಸ..

ಗುಡುಗಿನ ಕೆಲಸವು ಸರಳದಿ ಮುಗಿಯಲು
ಮಿಂಚಿನ ರಭಸಕೆ ಮರಿಗಳು ಜಿಗಿಯಲು
ಪಟಪಟ ಹನಿಗಳು ನೆಲವನು ತಾಕಲು
ಜುಳುಜುಳು ನೀರು ರಭಸದಿ ಹರಿಯಲು..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ