ಸೋಮವಾರ, ಮೇ 28, 2018

318.ಕವನ-ಗೆಳೆತನ

ಗೆಳೆತನ

ನಮ್ಮ ಗೆಳೆತನಕೀಗ ಹದಿಹರೆಯ
ಬರದು ಒಂದೂ ಚುಕ್ಕಿ ಕಲೆಯೂ
ಇರುವುದು ಗೆಳೆತನಕೆ ಬೆಲೆಯು
ಬಿಡದೀ ಸ್ನೇಹದ ಮಾಯೆಯು..

ನಾನೆಲ್ಲೋ ನೀನೆಲ್ಲೋ ಬೇರೆ
ಬಾಳ ನೌಕೆಯಲಿ ಸಾಗುವುದು ಬೇರೆ
ಬೆಲೆ ನೀಡಿದ ಗೆಳೆತನಕೆ ಅಮೃತಧಾರೆ
ಮರೆಯಲಾರದು ಪ್ರೀತಿಯ ಕರೆ..

ಇಲ್ಲವು ಮೋಹ ಮತ್ಸರದ ಅಹಂಕಾರ
ತಿಳಿದು ಬಾಳಲು ಬದುಕು ಬಂಗಾರ
ಬೆಟ್ಟದಲಿ ಹುಟ್ಟಿ ಕಡಲ ಸೇರಿದ
ಹಿನ್ನೀರ ಓಟದ ನದಿಯಂತೆ..

ಬದುಕ ಬಂಡಿಯಲಿ ನಾವು ಪಯಣಿಗರು
ಸಾಗುತಿಹೆವು ಗುರಿಯಿಲ್ಲದೆಡೆಗೆ
ಉಳಿಸಿ ಹೋಗಬೇಕು ಸುಸ್ನೇಹವ
ಸಾರಬೇಕು ಗೆಳೆತನದ ಭಾವವ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ